6. ವಯಸ್ಸು ಮರಳಿದ ಹಾಡು
ದಿಗಂತ ರೇಖೆ
ಸ್ವಲ್ಪ ಮಂಜಾಗುತ್ತದೆ.
ವರ್ಷಗಳು
ಎಲೆಗಳಂತೆ ಉದುರೋಗುತ್ತಲಿವೆ.
ಸ್ನೇಹಿತರು ಸಾಯುತ್ತಾ
ಸ್ಮೃತಿ ನಕ್ಷತ್ರಗಳಾಗುತ್ತಾರೆ
ದೃಶ್ಯ ಗಳಿಗೆ
ಫ್ರೆಮುಗಳು ಅಮರುತ್ತವೆ
ಲೋಕ
ಮಾರ್ಪಾಡಾಗುತ್ತಲಿದೆ
ಎಂದು ಆರ್ಥವಾಗಿದೆ.
ನಮ್ಮ ಮಾತುಗಳಿಗೆ
ಬೇಕಾಗಿರುವ ಉತ್ತರಗಳು ಬರಲ್ಲ.
ನಮ್ಮ ಮಾತುಗಳಲ್ಲಿ ಕೆಲವು
ಚಲಾವಣೆ ಯಾಗದ ನಾಣ್ಯ ಗಳಾಗುತ್ತವೆ.
ವಯಸ್ಸು ಮರಳಿದೆ ಶರೀರ ಗಳಿಗೆ
ಪ್ರಾಧಾನ್ಯತೆಗಳು ಅದಲು ಬದಲಾಗುತ್ತವೆ.
ಜೀವನ ಮರಣಗಳ ನಡುವೆ ಸ್ಪಷ್ಟವಾದ
ರೇಖೆ ಗಳು ಚೆದರಿಹೋಗುತ್ತವೆ.
ದೇಶಗಳ ಗಡಿ ಗಳು
ಬದಲಾಗುತ್ತವೆ
ಕ್ರಾಂತಿ ಗೆ
ಹೊಸ ಆವಶ್ಯಕತೆ ಗಳುಂಟಾಗುತ್ತವೆ.
ಕೆಲವುಸಲ ಸೂರ್ಯನು
ಸುಸ್ತಾಗಿ ಉದಯಿಸುವುದೇ ಗೊತ್ತಾಗುವುದಿಲ್ಲ
ಆಗ ಬದಲಾವಣೆ ಎಂದರೆ
ಪುರೋಗಮನದ ಪ್ರತೀಕ್ಷೆ.
ಈಗ ಬದಲಾವಣೆ ಎಂದರೆ
ಭಯವಾಗುತ್ತದೆ.
ಯಾರನ್ನೊ
ಕರೆಯುತ್ತೀವಿ
ವಾಸ್ತವವಾಗಿ ಯಾರನ್ನು
ಕರಿಯುವುದೋ ತಿಳಿಯದು.
ವಯಸ್ಸು ಮೇಲೆ ಬೀಳುತ್ತಲಿದೆ
ಆಕಾಶದಲ್ಲಿ ಮೋಡಗಳು ಹಮ್ಮುಕೊಳ್ಳುತ್ತಲಿವೆ.
7. ಒಂಟಿತನ
ಒಂಟಿ ತನವೆಂದರೆ
ಸುತ್ತಲೂ ಯಾರೂ ಇಲ್ಲ ಅಂತಲ್ಲ
ಇದ್ದರೂ ಇಲ್ಲಎಂದನಿಸುವುದು.
ಒಂಟಿತನವೆಂದರೆ
ಜ್ಞಾಪಕಗಳು
ಮರೆವಿನ ಪದರಗಳಲ್ಲಿ ಸಿಲುಕಿ,
ಬೆಚ್ಚು ಬೀಳುವುದು
ಗಿಡದಿಂದ ಬೀಳುತ್ತಿರುವ
ಎಲೆಗಳನ್ನು ಲೆಕ್ಕಿಸುತ್ತಾ
ಲೆಕ್ಕ ತಪ್ಪುವುದು
ಕಾಲದ ಮೂಲಗಳಿಂದ
ತೆವಳುತ್ತಾ ಬರುವ ಇರುವೆ
ಛಟ್ಟನೆ ಮಾಯವಾಗುವುದು,
ನದಿಯಮೇಲೆ ಸೇತುವೆ
ಥಟ್ಟನೆ ಕುಸಿದು
ಅಗಾಥ ಬಾಯನ್ನು ತೆಗೆಯುವುದು,
ಈವತ್ತಿನವೆಲ್ಲಾ
ನಿನ್ನೆಯಲಿ ಕಾಣದಿರುವುದು.
ಒಂಟಿತನವೆಂದರೆ
ತನ್ನ ದೇಹವೇ
ತನ್ನೊಂದಿಗೆ ಹೊಸದಾಗಿ ಮಾತುನಾಡುವುದು
ಮಕ್ಕಳು
ಜಾರುಬಂಡೆಯಮೇಲಿಂದ ಜಾರುವರೀತಿ
ಮನಸ್ಸು ಬಾರಿ ಬಾರಿ
ಗತಕಾಲದಲ್ಲಿ ಜಾರಿ ಬೀಳುವುದು
ಬಣ್ಣಗಳೆಲ್ಲಾ. ಮರೆಯಾಗಿ
ಬಿಳಿಯಾದ ಶೂನ್ಯ ಒಂದೇ ಹೊಮ್ಮಿರುವುದು
ಒಂಟಿತನವೆಂದರೆ
ತಾನು ಕೂತಿರುವ ಕುರ್ಚಿ
ಒಂದು ಶಿಲೆಯಂತೆ ಯಾಗುವುದು
ಎದುರಿನಲ್ಲಿರುವರು, ಮಾತನಾಡುವ
ಪ್ರತಿವೊಂದು ಮಾತು
ಟೊಳ್ಳಾಗಿ
ಹೃದಯಕ್ಕೆ ಚುಚ್ಚುಕೊಳ್ಳುವುದು
ಕೆರೆ ಗಳಾಗಿ, ನದಿಗಳಾಗಿ,
ಸಮುದ್ರವಾಗಿಹೊಮ್ಮಿ ಉಕ್ಕುವುದು
ಸತ್ತುಹೋದ ಸಹಚರಿ
ಫೋಟೋದಿಂದ ದೀನವಾಗಿ
ಮಾತನಾಡುವುದು.
ಅಹೋ ಈ ಒಂಟಿತನ ಆತರ ಈತರದಲ್ಲ,
ಎಲ್ಲರಿಗು ಅರ್ಥವಾಗುವಂತದಲ್ಲ,
ಇದು ವೃದ್ಧಾಪ್ಯಕ್ಕೆ ಅರಳಿದ ಹುಚ್ಚು ಹೂವು.
8. ನೀರು
ಎಲೆ ಮಾಗಾ ಚೆ౦ಬಿನಲ್ಲಿ ನೀರು ಮುಗಿದೋಗಿದೆ!
ಸ್ವಲ್ಪ ತುಂಬಿಸಿ ಕೊಡು,
ಸುಪುತ್ರನು ಷಾಪಿಂಗ್ ಹೋಗುವ ತವಕದಲ್ಲಿದ್ದಾನೆ.
ಆತಗೆ ಕೇಳಸಿಲ್ಲ.
ಮಗಳೇ,
ಒಂದು ಲೋಟ ನೀರು ತಂದುಕೊಡಮ್ಮಾ
ಸೊಸೆಗೆ ಕೇಳಿಸಿದೆ, ಆದರೆ ಕೇಳಿಸಿಲ್ಲದಂತಿದೆ
ಚಿನ್ನದ ಕುಡಿ
ಸ್ವಲ್ಪ ನೀರು ಹಾಕಿ ಕೊಡೋ,
ಮೊಮ್ಮಗ ಟಿ. ವಿ. ನಲ್ಲಿ ಕಂಠ ಪೂರ್ತಿ ಮುಳುಗಿ ಹೋಗಿದ್ದಾನೆ.
ಒಂದು ಅಡಿ ಕದಲಿಲ್ಲ.
ಕೆಲಸದವನಿಕೊಸ್ಕರ
ಕೂಗಿದ್ದಾನೆ
ಆದರೆ ಅವನೋ ತರಕಾರಿ ತರಲು
ಓಡಿದ್ದಾನೆ.
ಸ್ವಲ್ಪ ಹೊತ್ತು ನಿಶಬ್ಧ ರಾಜ್ಯವಾಳಿದೆ
ಯಾರು ತುಂಬಿದರೋ ಗೊತ್ತಿಲ್ಲ
ಆತನ ಕಣ್ಣುತುಂಬಾ ನೀರು.
9. ಅಮ್ಮ ಒಬ್ಬ
ಮನುಷ್ಯಳು
ಸ್ವಲ್ಪ ತಾಳ್ಮೆ ಯಿಂದಲಿರಬೇಕು
ಈ ಮುದುಕಿ
ನಿನ್ನ ಪಾಲಿಗೆ ಬಿದ್ದವಳಂತೆ ಭಾವಿಸಲಾರದು
ವಯಸು ಮರಳಿದ ಜೀವನದಲ್ಲಿ
ಸೊಗಸಿಗೆ ಜಾಗ ಇರೋಲ್ಲ.
ನಡಿಗೆ ಮಂದವಾಗಿದೆ
ಅದು ನಿನ್ನ ಓಟಕ್ಕೆ
ಸ್ವಲ್ಪ ಮಟ್ಟಿగాదరూ,
ಲಗಾಮು
ಹಾಕಿರಬಹುದು.
ಸ್ವಲ್ಪ ಯೋಚಿಸಬೇಕು
ಅಮ್ಮನು ಕಂದಾ ಎಂದು
ಸೆಂಟಿಮೆಂಟನ್ನು ಹಚ್ಚುವುದಿಲ್ಲ,
ಇದೊಂದು ಋಣ ಕಂದಾ
ಎಂದು
ನಿನಗೆ ಅರ್ಥವಾಗದ ಅನುಬಂಧವನ್ನು
ಅನಾವರಣೆ ಮಾಡುವುದಿಲ್ಲ.
ನಿನ್ನ ಹೆರುವುದೊಂದು ಆಕ್ಸಿಡೆಂಟ್
ಆಗಿರಬಹುದು,
ತಾರ್ಕಿಕವಾಗಿ ನಿನ್ನ ಪ್ರಮೇಯವೇನೂ ಇಲ್ಲದಿರಬಹುದು,
ಅವಳು ನಿನಗೆ ಕೊಟ್ಟ ಜನ್ಮವನ್ನೂ
ಮಧುರವಾದ ಬಾಲ್ಯವನ್ನು ಜ್ಞಾಪಿಸುವುದಿಲ್ಲ
ತಕ್ಕಡಿ ಯಲ್ಲಿ ಅದರ ತೂಕಕ್ಕೆ ತಕ್ಕ ಇಂದಿನ ಬಟ್ಟಲುಗಳನ್ನು
ಹಾಕುವುದಿಲ್ಲ.
ಮಾತೃ ದೇವೋಭವ ಎನ್ನುವ
ಪ್ರವಚನಗಳನ್ನು
ಹೇಳುವುದಿಲ್ಲ.
ಆದರೆ ಒಬ್ಬ ಮನುಷ್ಯಳು,
ಪರಿಚಯವಿರುವಳು
ಒಂದು ನಿಸ್ಸಹಾಯ ಮಹಿಳೆ
ಅದಕ್ಕಾದರೂ ನೀನು ತಾಳ್ಮೆ ವಹಿಸಬೇಕು.
ಯಾವ ಜೀವಕ್ಷಣ ಗಳಲಿ
ನಿನ್ನ ಹೊಟ್ಟೆ ತುಂಬಿಸಿ ಕೊಂಡಳೋ
ಈಗ ಅನುಭವಿಸುತ್ತಿದ್ದಾಳೆ.
ಆದರೆ
ನಾಳೆಯ ಅಪರಾಧ ಭಾವವು
ನಿನ್ನ ಹಿಂಡಿ ಹಾಕುತ್ತಿದ್ದರೆ ಮಾತ್ರ
ನಿನಗೆ
ಸಮಾಧಾನ ಮಾಡಲು
ಆಕೆ ಇರುವುದಿಲ್ಲ.
10. ಮರಣ ಸಂದರ್ಭ
ಮಳೆಯೇ !
ಒಂದೇ ಸಮ ಸುರಿಯಲು ಬೇಡ
ಇದು ನಮ್ಮಮ್ಮನ ಕೊನೆಯ ಯಾತ್ರೆ
ತೆಳುವಾದ
ಮೋಡಗಳೇ,
ಮತ್ತೆ ಕವಿಯಲು ಬೇಡ
ಇದು ಉರಿಯುತ್ತಿರುವ
ನಮ್ಮ ಅಮ್ಮನ ಕಾಷ್ಠ
ಗಾಳಿಯೇ
ಜೋರು ಬೀಸಲು ಬೇಡ.
ಇದು ನಮ್ಮ ಅಮ್ಮನ ಚಿತಾಭಸ್ಮ.
ನದಿ ಪ್ರವಾಹವೇ
ಉಕ್ಕಿ ಹರಿಯಲು ಬೇಡ
ಇವು ನಮ್ಮ ಅಮ್ಮನ ಅಸ್ಥಿಗಳು
ಗಟ್ಟಿಯಾಗಿ ಹಿಡಿದಿರು ಹೃದಯವೇ
ಇದು ನಮ್ಮ ಅಮ್ಮನ ಕಂಬನಿಯ ಕವನ.
-ಡಾ ರಾಜೇಶ್ವರಿ ದಿವಾಕರ್ಲ