16,
ಅವಳೂ ಸಹ
ವಯಸು ಮೇಲೆ ಬಿದ್ದರೂ
ಎಲ್ಲ ಕೆಲಸಕ್ಕೂ ಈಗಲೂ ಆಕೆಯೇ
ಸೂರ್ಯನು ಉದಯಿಸುವುದು ತಡವಾಗಿದ್ದರೆ
ಮೋಡಗಳ ಹೊದಿಕೆ ತೆಗೆದು ಹಾಕುತ್ತಾಳೆ
ನಡಿಗೆ ಸ್ವಲ್ಪ ಮಂದವಾಗಿದೆ.
ಆದರೂ ಮನೆಕೆಲಸಕೊನೆಗಾಣಿಸುತ್ತಾಳೆ,
ನನ್ನ ಮೇಲೆ ಆಕೆಗಿರುವ ಪ್ರೀತಿಯನ್ನು
ರೆಕ್ಕೆಗಳ ಕಷ್ಟಕ್ಕೆ ಒಪ್ಪಿಸುವ
ಕತ್ತೆ ಕೆಲಸ ಗಾರ್ತಿ ಆಕೆ,
ನಾನು ಇತ್ತೀಚಿಗೆ
ಸ್ವಲ್ಪ ನಾಚುವುದನ್ನು ಕಲೆತೆ
ಆಕೆಗೆ ಸಹಾಯ ಮಾಡಬೇಕೆಂದು
ನಿರ್ಧಾರಿಸಿದ್ದೇನೆ
ಸಹಾಯವೆಂದರೆ ಬೇರೇನೂ ಅಲ್ಲ
ನನ್ನ ಕೆಲಸಗಳನ್ನು ನಾನೇ ಮಾಡುಕೊಳ್ಳುತ್ತಿದ್ದೇನೆ
ನನಗೆ ಸಮಸ್ಯೆಗಳಾಗಿ ಕಾಣುವೆವು
ಅವಳಿಗೆ
ಪೊರಕೆ ಕಡ್ಡಿ ಸಮಾನ
ಬೇಗನೆ
ಎರಡನೆಯ ಪೀಳಿಗೆ ಬಂದೇಬಿಟ್ಟೆದೆ.
ಮಮತೆ ಯ ಮಹಾ ಸಮುದ್ರದಲ್ಲಿ
ಅವಲೀಲೆಯಾಗಿ ದೂಕಿಬಿಟ್ಟಳು ಆಕೆ.
ಇಂತಹ ಈಜುಗೆ ನಾನು ಕಲಿಸಿದ್ದಲ್ಲ.
ಈಜು ಬರುವುದೆಂದು ನನಗೆ ಗೊತ್ತಿಲ್ಲ.
ಆಗಾಗ ಬೆಲ್ಜಿಯಂ ಕನ್ನಡಿ ಮುಂದೆ ಕೂತು
ಮುಖಗಳನ್ನು ಸಮೀಕ್ಷೆ ಮಾಡಿಕೊಳ್ಳುತ್ತಿದ್ದೆ
ಸಂಗೀತ ದೊಡ್ಡ ಅನುಭವದ ದೇವತೆ.
ಹಿಂದೆ ಅರ್ಥವಾಗದ ಹಾಡುಗಳೆಲ್ಲಾ
ಈಗಜೀವನ ಪೆಟ್ಟಿಗೆ ಗಳಾಗಿ ತೆರೆದಿವೆ
ಮನೆ ಕಟ್ಟುವಾಗ
ಹಾಲು ಬೀಸ್ ಬೈ ಬೀಸ್
ಇರಬೇಕೆನ್ನುವ ಆರಾಟ
ಈಗ ಆಕೆ ನಡಿಗೆಯಲ್ಲಿ
ಪಾಶ್ಚಾತ್ತಾಪದ ಉಳುಕು ಕಾಣುತ್ತದೆ
ಆಕೆಯನ್ನೀದಿನ ನೋಡುತ್ತಿದ್ದರೆ
ಅಂದಿನ ಸುಂದರಿ
ಅಪುರೂಪ ಅನುರಾಗ ರಾಗಿಣಿ
ಮುದಿಕಿಯಾದಳೆಂದು ಬೆರಗಾಗುತ್ತದೆ
- ಓಲ್ಡ್ ಏಜ್ ಪೆನ್ಶನ್
ಹಳ್ಳಿಗಳಲ್ಲಿಯೂ ಸಹ
ಬೇಂಕು ಗಳಿರುತ್ತವೆ
ಆ ಬ್ಯಾಂಕಿನ ಮೇಲೆ
ಕಾಗೆಗಳು ಕೂಗುತ್ತಿರುವಾಗಲೇ
ಅನಾಹುತ ಯಾವುದೊ
ಆಗುತ್ತಲಿದೆ ಎಂದని ಸುತ್ತదె.
ಆಗಾಗ ಸರ್ಕಾರ್ ಸಹ
ಒಳ್ಳೆ ಕೆಲಸಗಳನ್ನು ಮಾಡುತ್ತದೆ.
ವೃದ್ದಾಪ್ಯದ ಪೆನ್ಶನ್ ಕೊಸ್ಕರ
ಮುದುಕಮ್ಮಗಳು ಕ್ಯೂ ಕಟ್ಟಿ ನಿಂತಿದ್ದಾರೆ
ಬ್ಯಾಂಕಿನ ಮುಂಗಡೆ ಗುಂಪಿನಲ್ಲಿ ಏನೋ ಗಲಾಟಿ.
ಮೊದಲು ಬಾರಿ ಮಗ
ಹದ್ದಿನಂತೆ
ಬೇಡವೋ !ನನ್ನ ಔಷಧಿಗೆ ಬೇಕೋ
ಎಲೆ ಅಡಿಕೆ ತಕ್ಕೊಳ್ತೀನಿ ಕಂದಾ ಎಂದು
ರಾಗವನ್ನೆತ್ತಿದ್ದಾಳೆ ಮುದಿಕಿ
ಯಾವನು ಕೇಳುತ್ತಾನೆ!
ಯಮರಾಜನು ಜೀವನ
ಎಳೆದುಕೊಂಡು ಹೋಗುವ ರೀತಿ,
ದುಡ್ಡನ್ನು ಕಿತ್ಕೊಂಡ
ಕಣ್ಣಿನಗುಡ್ಡೆಗಳ ತೇಲಿಸಿ ನಿಂತಳು ತಾಯಿ
ಈಗ ಅದೇ
ರೊಕ್ಕದಿಂದ ಅಂತ್ಯಕ್ರಿಯೆಯನ್ನು
ಮಾಡುವನೋ ಏನೋ,
- ಅಜ್ಜಿ
ಹಳ್ಳಿ ಯಾವದಾದರೂ ಆಗಲಿ
ಆ ಊರಿನಲ್ಲಿಒಂದು ವರಾಂಡ
ಆಮೂಲೆಯಲ್ಲಿ ಒಬ್ಬಳು ಅಜ್ಜಿ.
ಆಕೆ ಯ ಪಕ್ಕದಲಿ
ಹಳೆದಾದ ಪರಕೆ
ಗೂಡುಸುವುದಕ್ಕೆ,
ಮಗುವೇನಾದರೂ ಕಾಯಲೆಬಿದ್ದರೆ
ದಿಷ್ಟಿ ತೆಗೆದುಬಿಡೋಕ್ಕೆ
ಸಮಯಕ್ಕೆ ಹೇಗೋ
ಊಟದ ತಟ್ಟೆ ಬರಬಹದು,
ಆದರೆ ಅದರಲ್ಲಿ ಸೊಸೆಯ
ನಗುವಿರುವುದಿಲ್ಲ.
ಈವಾಗಲೂ ಜ್ಞಾಪಕಗಳೇ.
ಹೇಳಲು ಕೇಳುವವರಿವುದಿಲ್ಲ.
ಗೋಡೆಗೆ ಸೇರಿಸಿದ ಕೈಗೊಲಾದರೂ
ಎಷ್ಟುಮಟ್ಟಗೆ ಕೇಳುತ್ತದೆ
ಮನೆ ಮುಂಗಡೆ ಎರಡು ಕಾಗೆಗಳು
ಆಕೆಯನ್ನೇ ನೋಡುತ್ತವೆ.
ಅವು ನಾಳೆ ನನ್ನ ಪಿಂಡವನ್ನು
ಮುಟ್ಟುತ್ತವೋ ಇಲ್ಲವೋ ಎಂದು
ಯೋಚಿಸುತ್ತಿರುತ್ತಾಳೆ.
ಬಣಬೆಯಮೇಲೆ ಹುಲ್ಲಿನ ಹೊರೆಯನ್ನು ಹಾಕುತ್ತಿದ್ದ
ಜೀತಗಾರ
ಹೆಣ ಹೊತ್ತಲು
ಮುಂಬರುವನೋ ಇಲ್ಲವೋ
ಬೆಳಗ್ಗೆದಿಂದ
ತಲೆಯಲ್ಲಿ ಒಂದೇಸಮ ಕೆರೆತ
ಹೇನನ್ನು ಓಡಿಸಲು ಬಾಚಣಿಗೆ ಸಿಗದು
ಅದು
ಮಾಯವಾಗಿ ಎಷ್ಟುದಿನಗಳಾಯಿತೋ
ಮಮ್ಮಗಳಿಗೆ ಅಜ್ಜಿ ಯಂದರೆ ಇಷ್ಟಾನೇ,
ಆದರೆ -ತಲೆನೋವು.
ಒಳ್ಳೆ ಕತೆಗಳನ್ನು ಹೇಳುತ್ತಾಳೆ.
ಅಹುಡಿಗಿ ಅವನ್ನು ಕಾಮಿಕ್ಸ್ ಗೆ ಹೋಲಿಸಿಕೊಳ್ಳುತ್ತಾಳೆ
ಹೇಳುತ್ತಾ ಹೇಳುತ್ತಾ ಆಕತೆಗಳು
ಹಾಠಾತ್ತಾಗಿ ಅವಳಕತೆಗಳಾಗಿ ಮಾರ್ಪಾಡಾಗಿ ಹೋಗುತ್ತವೆ.
ಅವುಗಲ್ಲಿ ಆಕೆಯೇ ಮಹಾರಾಣಿ
ಕೆಲವೊಂದು ಘಟನೆಗಳು
ಆಕೆಯ ಮುಖದ ಸುಕ್ಕುಗಳಿಂದ ಕಂಬನಿಗಳಾಗಿಕ್ ಜಾರಿ ಹೋಗುತ್ತವೆ.
ನಿಜ ಏನಂದರೆ
ಆಕೆಯ ಕತೆಗಳಿಗೆ
ಶ್ರೋತ ಮಮ್ಮಗಳಾ
ಅಥವಾ ತಾನೇನಾ ಎಂಬುವುದು
ಆಕೆಗೆ ತೋಚುವುದಿಲ್ಲ
- ಮುದಿ ಮದಿ
ಆಕೆಯ ಹೆಸರನ್ನು ಸಹ ಮರಿಯುತ್ತಿದ್ದೇನೆ.
ಸಹಸ್ರಾರು ಸಲ ಕೂಗಿದ್ದ ಹೆಸರು.
ಚಿಕ್ಕ ವನಾಗಿರುವಾಗ ಹಲಿಗೆ ಮೇಲೆ
ತಿದ್ದಿದ ಓಂ ಶ್ರೀ ಹಾಗೆ
ಎದೆಮೇಲೆ ದಟ್ಟವಾಗಿ
ಅಚ್ಚೊತ್ತಿದ ಅಕ್ಷರಗಳು.
ನಿದಾನವಾಗಿ ಮರೆ ಹೋಗುತ್ತಲಿವೆ.
ಆಗಾಗ ಬಲ್ಬುಹಚ್ಚಿಕೊಂಡಿರುವ ಹಾಗೆ
ಮುಖ ಜ್ಞಾಪಕ ಬರುತ್ತದೆ.
ಅದರ ಸುತ್ತಲೂ
ಮಸುಕಾದ ಕತ್ತಲು
ಈ ಲೋಟ
ಎಂದಿನಿಂದಲೋ ಇದೆ.
ಅಜ್ಜಿಯ ಕಾಲದ್ದು.
ಅದರಮೇಲೆ ಕೆತ್ತಿದ
ಹೂವಿನ ಡಿಜೇನಿನ ಮೇಲೆ
ಕವಿತೆಯನ್ನು ಸಹ ಬರೆದಿದ್ದೀನಿ.
ಈಗ ಅದರ ಅರ್ಥ ಮಾರ್ಪಾಡಾಗಿದೆ.
ಚಿತ್ತ ವೈಕಲ್ಯದಿಂದ ಶರೀರ
ಮೂಳೆಯ ಸಂಚಿಹಾಗೆ ತೊಗುತ್ತಲಿದೆ
ಎಲ್ಲರು ಅಪರಿಚಿತರಾಗುತ್ತಲಿದ್ದಾರೆ.
ಕಾವಲು ಗಾರರು ನನ್ನ ಜ್ಞಾಪಕಗಳನ್ನ
ಕಾವಲು ಮಾಡಿದರೆ ಚೆಂದವಾಗಿರುತ್ತಿತ್ತು.
ನನಗೀಗ ಅನುಸುತ್ತಾ ಇದೆ
ಕಾಲ ಒಂದು ಮೊಸಳಿ
ಅದರ ಬಾಯಿ ಯಾವಾಗಲೂ ತೆರದಿರುತ್ತದೆ
ಮರಣ ದಿಂದಲೇ
ಅದು ಮುಚ್ಚುಕೊಳ್ಳುವುದೇನೋ
ಈಗ ಹೇಳಿ
ನಾನು ಯಾರು?
- ಘೋಸ್ಟ್ ರೈಟರ್
ಒಮ್ಮೆ ನೀನು ಪ್ರಮುಖ ವ್ಯಕ್ತಿಯೇ
ನಿನ್ನನ್ನು ಕೇಳಬೇಕೆನ್ನುವ
ಜಿಜ್ಞಾಸೆ ಇರುತ್ತಿತ್ತು.
ಈಗ ನಿನ್ನನ್ನು ಮೀರಿ ಹೋಗುವ
ಜಿಗೀಷೆ ಉಂಟಾಗಿದೆ.
ನೀನು ಬರೆದ ಕಥೆಗಳೆಲ್ಲ
ಆಗ
ಕುತೂಹಲಕರ
ರಸರಮ್ಯ ವೇದಿಗಳು
ನಿನ್ನ ಜ್ಞಾನಾನುಭವಗಳು
ಸ್ವಚ್ಛ ಹರಿತ ವಾಟಿ galuq
ನಿನ್ನ ವ್ಯಾಖ್ಯಾನಗಳು ಮೈ ಮರೆಸುವ ಗೀತೆ ಗಳು,
ಮತ್ತೆ ಮತ್ತೆ ಮಾತನಾಡಲು
ಬೇಡುತ್ತಿದ್ದರು
ಮತ್ತೆ ಮತ್ತೆ ಕೇಳುತ್ತಿದ್ದರು.
ನಿನ್ನ ಪರಿಶೋಧಕ ನಿಧಿ ಗಳನ್ನ
ಅಪಹರಿಸುವ ಕಳ್ಳರಂತೆ
ನಿನ್ನ ಸುತ್ತಲೂ.
ಮೂಗುವರು
ಅವರಿಗೀವಾಗ, ಹೊಸ ಪ್ರವಾಚಕನು ಸಿಕ್ಕಿದ್ದಾನೆ.
ಗೂಗಲ್ನಲ್ಲಿನ ಸಂಪತ್ತಿಗೆ ಸೃಷ್ಟಿ ಕರ್ರ್ತ ನೀನೆ.
ಅದರ ಮೇಲೆ ನಿನ್ನ ಹೆಸರಿರೋಲ್ಲ.
ಜ್ಞಾನ ವಾರ್ತೆಗಳಾಗಿ
ತೆಳುವಾಗುವುದು, ಬಾಧಿಸುತ್ತದೆ.
ನಿನ್ನ ಕತೆಗಳು ರಾಜಕಾರಣಿ ಸಂಚಿನಲ್ಲಿ
ಬಿಗಿದು ಕೊಂಡಿರುತ್ತವೆ.
ಹೊಸದಾದ ಪದ್ಧತಿಗಳಲ್ಲಿ
ಅವು ಮನಸಿಗೆ ಹತ್ತೋಲ್ಲ
ಹೊಸ ಸಂಕಲನಗಳು ಹೊರಬರುತ್ತವೆ.
ಅವುಗಳಲ್ಲಿ ನಿನ್ನ ಹೆಸರು ಕಾಣೋಲ್ಲ
ಕಾಲವನ್ನು ಅರ್ಥ ಮಾಡುಕೊಳ್ಳುವುದೆಯೇ
ಈಗ ನಿನಗೆ ದಕ್ಕಿದೆ.
ಏನು ಪರವಾಗಿಲ್ಲ. ನಿನ್ನ ಜೀವನ ಸಾಫಲ್ಯ
ಈತಲಾಂತರಗೆಅಮೂಲ್ಯವೇ
ಆದರೆ ಇವರೆಲ್ಲರಿಗೆ ನೀನು ಘೋಸ್ಟ್ ರೈಟರ್ ಆಗಿ
ಉಳುದಿರುವುದು ಮಾತ್ರ ನಿಜ.
–ಡಾ ರಾಜೇಶ್ವರಿ ದಿವಾಕರ್ಲ