ವೃದ್ಧೋಪನಿಷತ್ (11-15): ಡಾ ರಾಜೇಶ್ವರಿ ದಿವಾಕರ್ಲ

  1. ನಾನು ಸಹ

ಅಂದು
ನಿಮ್ಮ ಹಾಗೆ ಓಡು ತ್ತಿದ್ದೆ.
ಬೆಟ್ಟ,ಗಿಡ,ಆಕಾಶ
ಆತ್ಮ ವಿಶ್ವಾಸ
ಕದಲಿದರೆ ಬೆನ್ನಟ್ಟುವ ಕವನ.
ನನ್ನ ಜೊತೆ ಇದ್ದವು.
ಅಂದಿನ ದಿನಗಳಲ್ಲಿ
ನನ್ನ ಉಸಿರೇ ಒಂದು ತೂಫಾನ್.
ನನ್ನ ಹುಮ್ಮಸು ಒಂದು “ಪಟ್ಟಣದ ಉದ್ಯಾನ”

ಒಮ್ಮೆ ನನ್ನದೂ ಸಹ ನಿಮ್ಮ ಹಾಗೆಯೆ
ನನ್ನದು ಸಹ ಹದ ವಿಲ್ಲದ ಹಾಡು,
ಒಂದು ಗಾಳಿಯ ಕಾರಂಜಿ.
ಪ್ರೀತಿ ಇಲ್ಲವೆಂದಲ್ಲ
ಮುಖ್ಯವಾಗಿ ಸ್ನೇಹ,
ಎಂದಿಗೂ ತಣಿಯದ ದಾಹ
ಸ್ವೇಚ್ಛ ವಾಗಿ ಗಿರಿಕೀ ಹೊಡಯುವ ವಿಹಂಗ
ನನ್ನ ಅಂತರಂಗ,
ಹಿಂದೆಗೆ ಹೋಗುವಹಾದಿಯ ಹಾಗೆ,
ಯೌವನ ಜೀವದಿಂದ ಜಾರಿಹೋಗಿದೆ
ಬೆಳಗಿನಜಾವ ತಂತಿಯಮೇಲೆ
ನೀರಿನ ಬಿಂದುಗಳು
ಮುತ್ತುಗಳಹಾಗೆ ಹೊಳೆಯುತ್ತಿತ್ತು
ಈಗ ಅವುಗಳನ್ನು
ಕಣ್ಣೇರೆಂದು ಹೋಲಿಸಬೇಕೇನೋ
ಆದರೆ ಜ್ಞಾಪಕಗಳೀಗ
ತೋಟದ ಹೂಗಳಾದವು
ಮೂಳೆಗಳು ಸೋತಿದ್ದರೂ
ಬೆರಳಿನ ತುಂಬಾ
ತೃಪ್ತಿಯ ನಾದಗಳು
ಕೇಳಲಿಸುತ್ತವೆ
ಇಷ್ಷ್ಟು ದಿನ ಹುಮ್ಮಸು ನಿಂದ
ಹರೆದ ನದಿ ನಾನು,
ಮೈದಾನದಲ್ಲಿ ಪ್ರವೇಶಿಸಿದ್ದೇನೆ.
ಈಗ ನನ್ನ ಜೊತೆ
ಸೂರ್ಯನು
ಚಂದ್ರನು
ಮುಖ್ಯವಾಗಿ ಮಾನವನು.

  1. ನಡಿಗೆ ವಾರಸತ್ವ

ನಮ್ಮ ತಾತ ನ ನಾನು
ಕಂಡಿಲ್ಲ, ಆದರೆ
ನಮ್ಮ ತಂದೆ ಯ ಜ್ಞಾಪಗಳಲ್ಲಿ
ಆತನ ಆಕೃತಿ
ಎಂದಿಗೂ ಒಂದು ಪ್ರಾಚೀನ ಕೃತಿ.

ಯಾದಗಿರಿ ಬೆಟ್ಟದ ಹತ್ತಿರ
ಆತನ ಊರು ರಾಜಾಪೇಟೆ
ಕಾಲನಡಿಗೆ ಯಿಂದ ಹೋದೆ
ಅಂದಿನ ನಮ್ಮ ಮನೆಯ ತೋರಿದರು

ಒಂದು ದೊಡ್ಡ ಆಲದ ಮರ.
ಶಾಖೆ ಗಳನ್ನು. ಹರಡಿ ಕೊಂಡು,
ಹಸುರಾಗಿಯೇ ಇದೆ.
ಆತ ತನ್ನ ಕೈಗಳನ್ನು ಚಾಚಿ
ಎಲ್ಲರನ್ನು ಅಪ್ಪಿಕೊಳ್ಳುತ್ತಿರುವ ಹಾಗೆ.
ಆಮೂಲೆಯಲ್ಲಿ ನ ಗಿಡದ ಕೊಂಬೆಗಳು
ನರಸಿಂಹ ಸ್ವಾಮಿ ನಾಮಗಳಾಗಿ
ಅಮರಿದ್ದವು
ಆ ಗಿಡದ ಕಟ್ಟಿಗೆಗಳು
ಎಷ್ಟೊಂದು ಜನರಿಗೂ
ದಹನ ಸಂಸ್ಕಾರವನ್ನು ಮಾಡಿದವು
ಆತನಿಗೂ ಸಹ
ಅಲ್ಲಿ ಒಂದು ಹಳೆಯ ಬಾವಿ
ಗೊತ್ತು ಹಿಡಿದು ಕರಿದಿದೆ
ಆ ನೀರಿನಲ್ಲಿ ನಮ್ಮ ತಾತನ ಮುಖ
ಕಾಣುತ್ತದೇನೋ ಎಂದು ನೋಡಿದನು.

ಆತ ನಡೆದನೆಂದು ಊಹಿಸಿದರೆ,
ಆಬೆಟ್ಟದ ಮೆಟ್ಟಿಲಿನಮೇಲೆ
ಕೂರಬೇಕನ್ನುಸುತ್ತದೆ
ಮುಖ್ಯವಾಗಿ ಮೂಡಲ ಕಡೆ
ಪಾದಗಳ ಹತ್ತಿರ.
ಆ ದಿನಗಳಲ್ಲಿ ಕಷ್ಟದಿಂದ ಸಿಕ್ಕ
ಪುಳಿಯೋಗರೆಯ ಪೊಟ್ಟಣದ ಹಿಂಗಿನ ವಾಸನೆ
ತಲಾಂತರಗಳು ದಾಟಿ
ಪರಿಮಳಿಸುತ್ತಿರುವ ಹಾಗಿದೆ.

ನಮ್ಮ ತಾತ,ಮತ್ತು,ನಮ್ಮ ತಂದೆ
ಎಷ್ಟೊಂದು ಸಾವಿರ ಮೈಲಿಗಳನ್ನು ನಡಿದರೊ
ಅದಕ್ಕಾಗಿಯೇ ಇರಬಹದು,
ನಡಿಗೆ ಎಂದರೆ ನನಗೆ ಇಷ್ಟ.

  1. ಪಾಪ ! ಶರೀರ

ಶರೀರದಿಂದ ಹೊರಗೆ ಬಂದು
ಅದನ್ನೇ ಗಮನಿಸುತ್ತಾಇದ್ದಿನಿ
ಗಮ್ಮತ್ತಾಗಿ ಕಾಣಿಸುತ್ತಾಯಿದೆ.

ಪಾಪ ಶರೀರ
ಎಷ್ಟೊಂದು ಮಾರ್ಪಾಡಾಗಿದೆ,
ಎಷ್ಟೋ ಕಷ್ಟಗಳನ್ನನುಭವಿಸಿದ ದೇಹ.
ಸೋತೋಗಿದೆ ಈಗ,

ಈ ಕೈಗಳು
ಬಹಳಷ್ಟು ನಗರ ನಿರ್ಮಾಣಗಳಲ್ಲಿ
ಇತಿಹಾಸವನ್ನು ಸೃಷ್ಟಿಸಿದವು.
ಈ ಕಾಲ್ಗಳು
ಲೆಕ್ಕವಿಲ್ಲದ ಮೈಲಿಗಳನ್ನು ನಡೆದು
ಕಾಲವನ್ನು,ದೂರವನ್ನು ಒಂದಾಗಿ ಮಾಡಿದವು.

ಆ ಮುಖ ಅಂದವಾದ
ಕನಸುಗಳ ರಾಶಿಯಾಗಿತ್ತು.
ಹೆಂಗಸರು ನೋಡುತ್ತಲೇ ಇದ್ದರು.

ಬಿಳಿಯ ಕೂದಲಿನ ನಡುವೆ
ಒಂದು ಕಪ್ಪು ಮಿಣಕಾದರೋಮಿಕ್ಕಿಲ್ಲ.
ದಂತ ರಾಹಿತ್ಯದಲ್ಲಿ ಬಾಯೊಂದು ಗುಹೆ ಆಗಿದೆ.

ಆಕಣ್ಣಿನ ಕೆಳೆಗೆ
ಒಂದು ಆಳವಾದ ದಿಗಿಲು
ಮರಣವನ್ನು ದರ್ಶಿಸುತ್ತ ಇರಬಹುದು.
ನಾನು ಆಚೆಗೆ ಬರುವುದು
ಒಳ್ಳೇದಲ್ಲ ಮತ್ತೆ ಪ್ರವೇಶಿಸಿ
ಆತನಿಗೆ ಧೈರ್ಯವನ್ನು ಕೊಡುತ್ತೀನಿ
ಶರೀರ ಕೇವಲ
ಮೂಳೆಗಳ ಸಂಚಿ ಅಲ್ಲವೆಂದು
ಸಂಚಿತ ಚರಿತ್ರೆಯ ಪ್ರಕಾಶವೆಂದು
ಗಮನಕ್ಕೆ ತರುತ್ತೀನಿ
ಮರಣ ಭೂತ ಅಲ್ಲವೆಂದು
ಬರಿ
ಗಾಳಿಯ ಸರಕೆಂದು ವಿವರಿಸುತ್ತೀನಿ

  1. ಆರಾಮ್ ಕುರ್ಚಿ

ಆರಾಮ್ ಇರುತ್ತದೋ ಇಲ್ಲವೋ !
ಎಂದಿನಿಂದಲೂ ಅದು
ಆ ಮನೆಯಲ್ಲಿದೆ.

ಹೆಚ್ಚಿನ ಸಮಯ
ಕುರ್ಚಿ ನಲ್ಲೆ ಮಕಾಮು
ಇಷ್ಟುದಿನ ಗಮನಕ್ಕೆ ಬಂದಿಲ್ಲ.
ಅದಕ್ಕೆ ಮರಗೆಲಸದವನು ಕೆತ್ತ
ಲತ ಗಳು, ಪುಷ್ಪಗಳು,
ಕಾಲದ ಪರಿಮಳವನ್ನು ಬಿಸುಸುತ್ತಿವೆ.
ಅವನ್ನು ಮುಟ್ಟೆ
ಯಾವದು ಎಂತಹ ಹೂವೋ ಹೇಳಬಲ್ಲೆ.
ಸ್ಪರ್ಶ ಮೋಸ ಮಾಡುವುದಿಲ್ಲ.

ಕೂತಿರುವಾಗ
ಸೊಂಟ ಬಿಲ್ಲಿನಂತೆ ಬಾಗುತ್ತದೆ
ಬಾಣಗಳು ಮಾತ್ರ ಕೈಯಲಿಲ್ಲ.
ಮಾಕ್ಸಿಮ್ ಗೋರ್ಕಿ ಅಮ್ಮ ಕಾದಂಬರಿ
ಮತ್ತೆ ಓದಿದನು.
ಎರಡನೆಯ ಬಾರಿ ಓದಿತ್ತಿರುವಹಾಗಿಲ್ಲ.
ಭಗವದ್ಗೀತೆಯ ಓದ ಬೇಕೆನಿಸುತ್ತದೆ.

ಒಂದು ದಿನ ಅದರ ಸ್ಕ್ರೂ ಕಿತ್ತು
ಕೆಳೆಗೆ ಬಿದ್ದನು.
ಕೈಯ್ಯ ಮೇಲೆ ವಾಲಿದೆ ದೇಹ.
ಮೂಳೆ ಬಿರುಕು ಬಿಟ್ಟಿದೆ.
ಗಾಯಕ್ಕಿಂತ
ಆತನ ಮನವೇ ಹೆಚ್ಚಾಗಿ ಗಾಯಗೊಂಡಿದೆ

ದಿನಾ ಕುರ್ಚಿಯನ್ನು ಒರುಸುವ
ಮಮ್ಮಗನಿಗೆ
ಕುರ್ಚಿಯ ಕೈಗೆ ನಿನ್ನೆ ಇಲ್ಲದ ಒದ್ದೆ
ಇವತ್ತು ಯಾಕೆಬಂತೋ
ಅರ್ಥ ವಾಗಿಲ್ಲ.

  1. ಎಪ್ಪತ್ತಿನ ವಯಸ್ಸು

ಎಪ್ಪತ್ತು ವರ್ಷಗಳು
ಪಾಪ !ನನ್ನ ಜೊತೆ
ಬೇಜಾರಿಲ್ಲದೆ ಪಯಣಿಸಿದ
ಅದ್ಭುತ ಸಮಯ ಚಿತ್ರ ಗಳು.

ಇಷ್ಟೇನಾ ಜೀವನ,
ಎಂದೆನಿಸುವುದಿಲ್ಲ
ಜ್ಞಾಪಕಗಳ ನಿಧಿಯಿಂದ
ನಾನೀಗ ಕೋಟೀಶ್ವರನು.

ರಟ್ಟು ಪೆಟ್ಟಿಗೆಯಲ್ಲಿ ಕಿಕ್ಕಿರಿಸಿದ
ಹಳೆಯ ಫೋಟೋ ಗಳು
ಎಂದಿಗೂ ಹಳೆಯಾಗದ
ಶೋಭಿತ ಕುಟೀರಗಳು
ಅವುಗಳಲ್ಲಿನ ಮುಗುಳ್ನಗುವನ್ನು
ಕಾಲ ನಿಲ್ಲಿಸಿದೆ
ನಮ್ಮ ತಂದೆ
ಐವತ್ತಿನ ವಯಸ್ಸಿನಲ್ಲಿ ಸತ್ತುಹೋದನು
ಫೋಟೋನಲ್ಲಿ
ನನ್ನ ಚಿಕ್ಕ ತಮ್ಮನಾಗಿಕಾಣುತ್ತಿದ್ದನು.

ನನ್ನ ಅಂಗೈನಲ್ಲಿನ
ಗೀರುಗಳ ಅಧ್ಯಯನ,
ಈಗ ಅದು ಅನಾವಶ್ಯಕ
ನನ್ನ ಬೆರಳಿನ ಸಂದಿಗಳಿಂದ ಬೀಳುವ
ಕಾಲ ದ ರೇಣುಗಳು,
ಜೀವನ ಮುರಳಿಗಳನ್ನು ಸಿಂಪಡಿಸುವ
ಪರಾಗ ರಾಗಗಳು
ನಮ್ಮ ಮನೆಯಲ್ಲಿ
ಯಾವ ಡಬ್ಬಿ ಮುಚ್ಚಳವನ್ನು ತೆಗೆದರು
ಘಮ್ಮನ್ನುವ ಅನುಭವಗಳ ಕ್ಷಣ ಗಳು.

ಬಾಲ್ಯದಲ್ಲಿನ ಬಡತನ
ಬಡತನವೇ ಅಲ್ಲ
ಕೌಮಾರ
ಆತಂಕಗಳ ಕೊಳೆ
ಯೌವನ
ಪ್ರಣಯ ಸುಧಾ ರಸ ಸಾರ
ನಡಿ ವಯಸುವೊಂದು ಚೌರಾಸ್ತಾ
ನೋಟದ ಅಂಚಿ ನಲಿ
ಎದುರಾಗಿ ಬರುವ ಗೂಲ್ ದಸ್ತಾ

ಎಪ್ಪತ್ತು ವರ್ಷಗಳು
ನನ್ನ ಯಾತ್ರೆಯನೊಂದು
ಕಗ್ಗ ಮಾಡಿದ
ಜೀವನ ಪತ್ರಗಳು

ಇವತ್ತು ನಾನೊಂದು
ವಾಗ್ದಾನ ಮಾಡುತ್ತಿದ್ದೀನಿ.
ಸ್ವಲ್ಪ ಬೇಸರ ಕಾಣುತ್ತಿದ್ದರು
ಜೀವನ ನನಗೆ ಪ್ರಸಾದಿಸಿದ
ತೇಜಸ್ಸು ಕಡಿಮೆ ಯಾಗದೆ
ನಾಳಿನ
ಉಷೋ ದಯಗಳನ್ನು ಬೆಳಗಿಸುತ್ತೀನಿ.
ಹೊಸ ಸೇತುಗಳನ್ನು ಕಟ್ಟುತ್ತಾ
ಮನುಷ್ಯರನ್ನು ಜೋಡಿಸುತ್ತೀನಿ

ಅಹೋ
ಎಪ್ಪತ್ತು ವರ್ಷಗಳು
ಸುಂದರ ಉದ್ಯಾನಗಳು.
ತುಂಬಿ ಅರಳಿದ
ಕಾಲ ಪುಷ್ಪಗಳು

ಡಾ ರಾಜೇಶ್ವರಿ ದಿವಾಕರ್ಲ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x