ತೆಲುಗು ಮೂಲ: ಡಾ ಎನ್ ಗೊಪಿ ರವರ ವೃದ್ಧೋ ಪನಿಷತ್
ಕನ್ನಡ ಅನುವಾದ: ಡಾ ರಾಜೇಶ್ವರಿ ದಿವಾಕರ್ಲ
1. ವೃದ್ಧನು
ವೃದ್ಧನೆಂದರೆ
ಮುದುಕ ನೆಂದಲ್ಲ
ವೃದ್ಧಿಹೊಂದಿದವನೆಂದರ್ಥ
ಅಂತಹ ವೃದ್ಧಿ
ಕಾಲದ ಪುರೋಗಮನದಲಿ ಮಾತ್ರವೆ ಅಲ್ಲ,
ಅನುಭವದ ಪರಿಣತಿ ಯಲ್ಲಿಯೂ ಸಹ
ವಯಸು ಕಳೆದಿರುವುದರಲಿ ಮಾತ್ರ ವಲ್ಲ
ಮನಸು ಬೆಳೆದಿರುವುದುರಲ್ಲಿಯೂ ಸಹ,
ಶಿಥಿಲವಾಗಿತ್ತಿರುವುದು ಶರೀರವೇ !
ಆದರೆಅದು ಸಾಧಿಸಿದ್ದು
ಕಡಿಮೆಯೇನೂ ಅಲ್ಲ,
ಗಿಡ ಹೊಂದಿದ
ಸಾಫಲ್ಯ ವಂತಹುದೇ ಇದೂ ಸಹ.
ಇದೊಂದು ಜ್ಞಾನದ ಕುಂಡ.
ಜೀವನ ಬಿಗಿಹಿಡಿದ ತತ್ವ
ವೃದ್ಧಾಪ್ಯ ವೆಂದರೆ
ಪೊದೆತುಂಬಿದ
ಅರಣ್ಯ ಯಾನದಲ್ಲಿ
ಹಸಿರು ಹಾದಿಗಳನ್ನು
ಕೆತ್ತಿದ ಕಂಕಣ ಬದ್ದರು
ಸಂಸಾರ ಮಹಾ ಸಾಗರದಲ್ಲಿ
ನೆಂದ ಮಮತೆಯ ಮುದ್ದೆಗಳು.
ಜೀವನದ ವೇದಿಕೆಯಲ್ಲಿ
ತಂದೆ ತಾಯಿ
ತಾತ, ಗುರುಗಳ ಪಾತ್ರಗಳನ್ನೂ
ನಿರ್ವಹಿಸಿದ ಸಿದ್ಧರು
ಈದಿನ ಸ್ವಲ್ಪಹೊತ್ತು
ಮುದುಕರನ್ನು ನೆನೆಸಿ ಕೊಂಡು
ಮಂಜಾಗಿದ ನಮ್ಮ ಬೆಳಕಿ ನಲ್ಲಿ
ಹೊಸ ಪ್ರಕಾಶ ಗಳು
ಮೊಳಕೆ ಹೊಡಿಯುತ್ತವೇನೋ ನೋಡೋಣ.
2. ಕೃತಜ್ಞತೆ
ವೃದ್ಧನು
ಹಿಂದಿನ ದಿನಪತ್ರಿಕೆ ಯಲ್ಲ
ಓದಿದೊಡನೆ ಪಕ್ಕಕ್ಕೆ ಇಡಲು,
ಆತ ನೊಂದು ಹಳೆಯ ಕವಿತೆಯ ಹಾಗೆ,
ಸುದೀರ್ಘ ಜೀವನ ಯಾತ್ರೆಯಲಿ
ಕಡಿಮೆ ಯಾಗದ ಸುಗಂಧದ ಗಂಧ ದಂಥವನು.
ಕಡಿಮೆ ಆಗಿರಬಹುದು ಶಕ್ತಿ,
ಕಾಲಕ್ಕೆ ತಲೆಬಾಗದ
ಸೂಕ್ತಿ ಮುಕ್ತಾವಳಿಯೇ ಆತ
ಮುದುಕನು ನಮ್ಮ ಮನೆಗೆ
ಒಂದು ವರ
ಅನುಭವಗಳ ದಾರದಿಂದ
ತ್ರಿಕಾಲಗಳಿಗೆ ಗಂಟು ಹಾಕುವನು,
ಪ್ರೀತಿ శాಶ್ವತವಾಗದಿರಬಹುದು.
ನಮಗಾಗಿ ಯಾದರೂ
ಅವರಲ್ಲಿ ದಯೆ ತೋರಿಸಬೇಕು,
ನಾಳೆಯ ನಮ್ಮ ಮಜಲು ಸಹ ಅದೇ !
ವೃದ್ಧನು ರದ್ದಾಗದ ದಾಖಲೆ ಅಲ್ಲ
ನಮ್ಮಲ್ಲಿನ ಕೃತಜ್ಞತೆಗೊಂದು ಪ್ರಮಾಣ.
3. ಸೀನಿಯರ್ ಸಿಟಿಜನ್ಸ್
ವೃದ್ಧರಿಲ್ಲ ಎನ್ನುವುದೆಲ್ಲಿ ?
ಬ್ಯಾಕಿನ ಕೌಂಟರ್ ಹತ್ತಿರ,
ಪಾಸಬುಕ್ ಎಂಟ್ರಿ ಕೊಸ್ಕರ
ಕ್ಯೂ ನಲಿ ನಿಂತ ವಯೋಧಿಕರು.
ಅಂಕೆಗಳೇಕೆ
ಕಳೆದು ಹೋಗುತ್ತಿವೆಯೋ ನೆನಪಿರಲ್ಲ.
ನಡುಗುವ ಕೈಗಳಿಂದ
ನಾಲ್ಕು ನೋಟುಗಳಿ ಗಾಗಿ,
ಬಿಡುವಿಲ್ಲದ ಕಾಯುವಿಕೆ.
ಮತ್ತೆ ಮತ್ತೆ ಎಣುಸುವಿಕೆ.
ತಪ್ಪಿಹೋಗುವ ಲೆಕ್ಕಾಚಾರ,
ಇದೆಲ್ಲ ಸಾಧಾರಣವೆ,
ಪೋಸ್ಟ್ ಆಫೀಸ್ ಹತ್ತಿರೆಯು ಅದೇ ದೃಶ್ಯ,
ಎಫ್ ಡಿ ಗಾಗಿ
ಕಿಟಿಕಿ ಗೆ ನೋಟಗಳನ್ನೊಪ್ಪಿಸಿ
ಬೀಳದೆ నింతిరువరు.
ಹಿರಿಯನೊಬ್ಬ ದೊಡ್ಡ ಅಧಿ ಕಾರಿಯಾಗಿದ್ದವನು,
ಒಬ್ಬರಾದರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು
ಕಿರುಚುತ್ತಲಿರುವನು
ಕೇಳಿಸಿಕೊಂಡ ಮಹಿಳೆ
ಮಗಳಾಗಿ ಕಾಣುವಳು,
ಇನ್ನು ಹಾಸ್ಪಿಟಲ್ ಅಂತೀರಾ,
ಅದೊಂದು ನಿಸ್ಸಹಾಯ ಪಾತಾಳ ಕುಹುರವು,
ಬಾಧೆಗಳನ್ನು ಕೇಳರು,
ಹೇಳಿದರೂ
ಸಹ ಕಿವಿ ಕೊಡರು.
ಮುದುಕತನವೆಂದರೆ,
ಒಂದು ರೋಗವೆಂಬಹಾಗೆ,
ಅದು ತಮಗೆ ತಿಳಿದಿದ್ದೆ ಎಂಬ ಹಾಗೆ,
ಇಲ್ಲಿ,
ಡಾಕ್ಟರುಗಳ ಯಾಂತ್ರಿಕತೆ
ಕಳೆದು ಹೋಗುತ್ತಿರುವ ಮಾನವತೆ.
ಮೆಟ್ಟಿಲುಗಳ ಹತ್ತಿರ,
ವರಾಂಡದಲ್ಲಿ,
ಈ ಗತಕಾಲದ ಮಾನವರು,
ಒಣ ಎಲೆಗಳಂತೆ ವಿಚಲಿತರು.
ಸವೆದು ಹೋಗುತ್ತಿರುವ ಮಧ್ಯಾಹ್ನಗಳು,
ಆಕಡೆ ತೀರವು ಸಿಕ್ಕದ ಸಂಜೆ ಸಮಯಗಳು
ಕಣ್ಣುಗಳಲ್ಲಿ ತುಂಬಿದ ಇರುಳಿನ ಸ್ವಗತಗಳು
ಅಯ್ಯೋ,
ಮನಸ್ಸೆಂಬ ಬಾವಿ ಇಂದ ಸೇದಿದ
ಗತಾಗತಗಳು.
4. ಮೂರು ಪ್ರಪಂಚ ಗಳು
ಬಾಲ್ಯ ಚಿನ್ನದ ಬಣ್ಣ
ಯೌವನ
ಕನಸು ಗಳಲ್ಲಿನ ಕನ್ಯೆ
ವದ್ದಾಪ್ಯ
ತಣ್ಣಗಾದ ಹಾಲಿನ ಪಾತ್ರೆ.
ಬಾಲ್ಯ ಒಂದಾನೊಂದು ಕಾಲದ,
ರಾಜನ ಕತೆ.
ಯೌವನ
ರಾಜ ಕುಮಾರಿಯ ವಿರಹ ವ್ಯಥೆ.
ವೃದ್ಧಾಪ್ಯ
ಹಿಂಗಲಾರದ ಆತ್ಮ ಕಥೆ.
ಬಾಲ್ಯ ಎಳೆ ಎಳೆ ಯಾದ ಉಷಸ್ಸು,
ಯೌವನ
ಏಳು ರಂಗಿನ ಕಾಮನ ಬಿಲ್ಲು,
ವೃದ್ಧಾಪ್ಯ
ಅನುಭವಗಳ ತೇಜ.
5. ವೃದ್ಧಾಪ್ಯದ ಪ್ರವೇಶ
ಶರೀರ ನಡಗುತ್ತಲಿರುತ್ತೆ
ಶೀತ ಕ್ಕಾಗಿ ಅಲ್ಲ.
ನಡಿಗೆ ಕುಸಿಯುತ್ತೆ
ನೆಲ ಏರು ಪೇರಾಗಿದೆ ಎಂದಲ್ಲ.
ನೊಟ ಮಂಜಾಗುತ್ತದೆ
ಕತ್ತೆಲೆಯ ಕಾರಣದಿಂದಲ್ಲ.
ಅಂದ ವಕ್ರವಾಗುತ್ತೆ
ವೀಕ್ಷಕರ ಲೊಪ ವಲ್ಲ.
ಉಚ್ಚಾಚಾರಣೆ ಠಣ್ ಧ್ವನಿಸುವುದಿಲ್ಲ,
ಮಾತು ಮೆತ್ತಗಾಗಿದೆ ಎಂದಲ್ಲ.
ಓದುವುದೂ ಕಡಮೆ ಯಾಗುತ್ತೆ
ಗ್ರಂಥಗಳಿಲ್ಲ ಎಂದಲ್ಲ.
ಜ್ಞಾಪಕಗಳಿಲ್ಲವೆಂದಲ್ಲ
ಆದರೆ ಅವು ದೂರ ಮೇಘಗಳು,
ಒಂಟಿತನ ಬಾಧಿಸುತ್ತಿರುತ್ತೆ
ಮನುಷ್ಯರಿಲ್ಲಎಂದಲ್ಲ,
ಕಣ್ಣೀರು ತುಂಬಿಹೋಗುತ್ತೆ
ಮಳೆಸುರಿದಿದೆ ಎಂದಲ್ಲ,
ಪ್ರೀತಿ ಹೊಮ್ಮುತಿರುತ್ತೆ
ಸ್ವಾರ್ಥ ಕ್ಕಾಗಿ ಎಂದಲ್ಲ.
ಹೊರಗೆ ಯಾರೂಇಲ್ಲ
ಒಳಗಡೆ ಇಂದ,
ಕಳ್ಳನಂತೆ ನುಗ್ಗಿದೆ ವೃದ್ಧಾಪ್ಯ
ಇದರೊಂದಿಗೆ ಜಗಳಕ್ಕಿಳಿಯలు ಬೇಡ,
ಸ್ನೇಹದಿಂದ ಆಹ್ವಾನಿಸೋಣ.
-ಡಾ ರಾಜೇಶ್ವರಿ ದಿವಾಕರ್ಲ