ನಾಗೇಂದ್ರ ಪಿ ಅವರ ಎರಡು ಕವಿತೆಗಳು

ಪ್ರೇಮಿಗಳ ದಿನದ ಕವಿತೆ 1

ಇಂದು ಪ್ರೇಮಿಗಳ ದಿನದ ನೆಪದಲ್ಲಿ
ಒಂದು ಮಾತು ಹೇಳ್ತೀನಿ ಸರಳವಾಗಿ
ನಿನ್ನ ಜೊತೆ ಕಳೆದ ಕ್ಷಣಗಳೆಲ್ಲ
ನಿನ್ನ ಹೃದಯದಲ್ಲಿ ಉಳಿದಿವೆ ಮೌನವಾಗಿ

ನಿನ್ನ ಹೆಸರು ಕೇಳಿದರೆ
ಹೃದಯ ತಡುಕುತ್ತದೆ ನಿಧಾನವಾಗಿ
ನೀ ಹತ್ತಿರ ಇದ್ದರೆ ಬದುಕೆ
ಅರಳುತ್ತದೆ ಸುಂದರವಾಗಿ

ನಿನ್ನ ನಗು ತುಂಬಿದ ಆ ಕ್ಷಣಗಳು
ಇನ್ನೂ ನೆನಪಾಗುತ್ತಿವೆ ಸಿಹಿಯಾಗಿ
ನಿನ್ನ ಮಾತು ತಾಕಿದ ಪ್ರತಿಸಾರಿ
ಮನಸ್ಸು ಬದಲಾಗುತ್ತದೆ ಪ್ರೀತಿಯಾಗಿ

ಸಣ್ಣ ಸಣ್ಣ ಜಗಳಗಳೂ ಕೂಡ
ಇಂದಿಗೆ ಕಾಣುತ್ತದೆ ಮಧುರವಾಗಿ
ಯಾಕಂದರೆ ನೀ ಇದ್ದರೆ ಸಾಕು
ಬದುಕು ಕಾಣುತ್ತದೆ ಸುಂದರವಾಗಿ

ಈ ದಿನದ ನೆಪದಲ್ಲಿ ಮತ್ತೊಮ್ಮೆ ಹೇಳ್ತೀನಿ
ನೀ ಇರುವುದೇ ನನಗೆ ಭಾಗ್ಯವಾಗಿ
ಸಮಯ ಬದಲಾಗಬಹುದು ನಿಧಾನವಾಗಿ
ಆದ್ರೆ ನಮ್ಮ ಮನಸುಗಳು ಬೇರ್ಪಡದಿರಲಿ ಸದಾಕಾಲವಾಗಿ


  • ಪ್ರೇಮಿಗಳ ದಿನದ ಕವಿತೆ 2

ಚೆಲುವೆಯೇ ನಿನ್ನ ನೆನಪೇ
ನನ್ನ ದಿನದ ಮೊದಲ ಯೋಚನೆ
ಅದರಿಂದ ಬರಹಕ್ಕೆ
ತಾನಾಗೇ ಬಂತು ಪ್ರೀತಿಯ ಭಾವನೆ

ನಿನ್ನ ನಗು ಕಂಡ ಕ್ಷಣವೇ
ಮನಸ್ಸಿನ ಭಾರ ಕರಗುತ್ತದೆ
ನಿನ್ನ ಧ್ವನಿ ಕಿವಿಗೆ ತಾಗಿದಾಗ
ಹೃದಯಕ್ಕೆ ನೆಮ್ಮದಿ ಹರಡುತ್ತದೆ

ನಿನ್ನ ಮೌನದಲ್ಲೂ ಅರ್ಥ ಇದೆ
ನಿನ್ನ ಕಣ್ಣಲ್ಲೂ ಮಾತಿದೆ
ನೀ ಜೊತೆಯಿದ್ದರೆ ಸಾಕು
ಜಗತ್ತೇ ಹತ್ತಿರದಲ್ಲಿದೆ
ಅನ್ನೋ ಭಾವನೆ ನನ್ನಲಿದೆ

ಈ ದಿನದ ನೆನಪಲ್ಲಿ
ಒಂದೇ ಒಂದು ಮಾತು ಹೇಳ್ತೀನಿ
ನಿನ್ನ ಜೊತೆ ಇರುವ ಪ್ರತಿದಿನವೂ
ಪ್ರೇಮಿಗಳ ದಿನವಾಗಲಿ

ಈ ಸಾಲುಗಳು ಇಲ್ಲಿ ನಿಂತರೂ
ಭಾವನೆಗಳು ನಿಲ್ಲಲ್ಲ
ನಿನ್ನ ಮೇಲೆ ಇರುವ ಪ್ರೀತಿ
ಎಂದಿಗೂ ಕಡಿಮೆಯಾಗಲ್ಲ

ನಾಗೇಂದ್ರ. ಪಿ ಕೋಡಿಉಗನೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Madhu
Madhu
19 days ago

ಡಾ. ನಾಗೇಂದ್ರ ಪಿ, ಕೋಡಿಉಗನೆ.

ಡಾ.ಅಭಿಲಾಷ ಹೆಚ್ ಕೆ
ಡಾ.ಅಭಿಲಾಷ ಹೆಚ್ ಕೆ
18 days ago

ಸರಳ ಹಾಗೂ ನಿಷ್ಕಲ್ಮಷ ಅಭಿವ್ಯಕ್ತಿ. ಒಳಿತಾಗಲಿ ನಾಗೇಂದ್ರ.

2
0
Would love your thoughts, please comment.x
()
x