ಪಂಜು ಅಂತರ್ಜಾಲ ಪತ್ರಿಕೆ ಏರ್ಪಡಿಸಿದ್ದ 2025ನೇ ಸಾಲಿನ ಕಥಾ ಸ್ಪರ್ಧೆಯಲ್ಲಿ ಒಟ್ಟು 152 ಕತೆಗಾರರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರು ಕನ್ನಡಿಗರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಪಂಜು ಕಥಾ ಸ್ಪರ್ಧೆಯಲ್ಲಿ ವಿಜೇತರಾದವರು:
೧. ಪ್ರಥಮ ಬಹುಮಾನ: ಮೂಕಸಾಕ್ಷಿ (ಗಿರೀಶ್ ತಾಳಿಕಟ್ಟೆ)

೨. ದ್ವಿತೀಯ ಬಹುಮಾನ: ವ್ಯಾನ್ ಹುಸೇನ್ (ವೀರೇಂದ್ರ ರಾವಿಹಾಳ್)
೩. ತೃತೀಯ ಬಹುಮಾನ: ಜನುಮಕ್ಕೆ ಜೋಡಿಯಾದವರು (ಗೌರಿ ಚಂದ್ರಕೇಸರಿ)

ಸಮಾಧಾನಕರ ಬಹುಮಾನ ವಿಜೇತರು:
೧. ಪಂಚಾಯತಿ ಕಟ್ಟೆ: ಎಂ.ಡಿ.ಚಿತ್ತರಗಿ

೨. ಗರ್ಭ-ಗುಡಿ: ಸಂಜಯ್.ಹೆಚ್.ಪಾಟೀಲ್

೩. ಬಾಳ್ಬೆಳಕು ಬತ್ತಿಹೋಗಿ: ರಾಘವೇಂದ್ರ ಈ ಹೊರಬೈಲು

೪. ದೋಣಿಯಮ್ಮನ ಸೇತುವೆ: ನರೇಂದ್ರ ಗಂಗೊಳ್ಳಿ

೫. ಕೊನೆಯ ಮಗಳು: ಅಕ್ಬರ್ ಅಲಿ

೬. ಪರಿಧಿ: ಗಾಯತ್ರಿ ರಾಜ್

೭. ಮಾರ್ಚರಿ: ರಮೇಶ್ ನೆಲ್ಲಿಸರ.

ಬಹುಮಾನದ ವಿವರ
ಮೊದಲ ಬಹುಮಾನ: 7000 ರೂಪಾಯಿ
ಎರಡನೇ ಬಹುಮಾನ: 5000 ರೂಪಾಯಿ
ಮೂರನೇ ಬಹುಮಾನ: 3000 ರೂಪಾಯಿ
ಹಾಗು ತೀರ್ಪುಗಾರರ ಮೆಚ್ಚುಗೆ ಪಡೆದಿರುವ ಕತೆಗಾರರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
ತೀರ್ಪುಗಾರರು:
೧. ಅಶ್ಫಾಕ್ ಪೀರಜಾದೆ

೨. ಪ್ರಶಾಂತ ಸಾಗರ
೩. ಸಂತೋಷ ಗುಡ್ಡಿಯಂಗಡಿ
೪. ಅಶ್ವಿನಿ ದಾಸರೆ

೫. ಸೌಮ್ಯ ಡಿ
ತೀರ್ಪುಗಾರರ ಟಿಪ್ಪಣಿ:
ನಮ್ಮ ಸುತ್ತಲೂ ನಡೆಯುವ ವಿದ್ಯಮಾನಗಳು, ನಾವು ಬೆಳೆದ ವಾತಾವರಣ, ಹಾಗೂ ವಿಕಸನಗೊಂಡ ನಮ್ಮ ಗ್ರಹಿಕೆ ಎಲ್ಲದೂ ಸೇರಿ, ಒಬ್ಬ ಕತೆಗಾರ ಹುಟ್ಟಿಕೊಳ್ಳುತ್ತಾನೆ, ಅದೇ ಸಮಯಕ್ಕೆ ಒಬ್ಬ ಪ್ರಬುಧ್ದ ಓದುಗ ಕೂಡ ಕಾಂಪ್ಲಿಮೆಂಟರಿಯಾಗಿ ಬೆಳಯುತ್ತಾನೆ. ಹೀಗೆ ನಮ್ಮ ಸುತ್ತಲು ನಡೆಯುವ ಇನ್ನು ನಡೆಯುತ್ತಲೆ ಇರುವ ಅನೇಕ ವಿಷಯಗಳನ್ನಿಟ್ಟುಕೊಂಡು ಪಂಜುವಿನ ಕತೆಗಳು ವೈವಿಧ್ಯತೆಯ ಆಯಾಮಗಳನ್ನೊಳಗೊಂಡು ಓದಿಸಿಕೊಂಡು ಹೋಗುವಲ್ಲಿ ಮತ್ತೆ ಕೆಲವೊಂದು ಕಡೆ ಓದಿಮುಗಿಸಿದ ಮೇಲೆ ಚಿಂತನೆಗೆ ಹಚ್ಚಿವೆ, ಇನ್ನು ಕೆಲವು ಖಾಲಿತನ ಮೂಡಿಸಿವೆ, ಮತ್ತಿನ್ನು ವಾಹ್ ಹಿಂಗಲ್ವೆ ಬದುಕಬೇಕು ಅನ್ನೋ ಉದ್ಘಾರಗಳನ್ನು ಕೊಟ್ಟಿವೆ! ಒಟ್ಟಿನಲ್ಲಿ ಭರ್ತಿ ಭಿನ್ನರುಚಿಗಳ ಸಮಾಗಮ..
ಅಸಮನಾತೆ, ಕೀಳರಿಮೆ, ಮುಗ್ಧತೆ, ಆವಿಷ್ಕಾರಗಳ ದ್ವಂದ್ವ, ಸರಿಹೋಗದಿರುವ ನಮ್ಮ ವ್ಯವಸ್ಸ್ಥೆಗಳು, ಮಹಿಳಾ ಸಬಲಿಕರಣ, ಶಿಕ್ಷಣ, ಬಡತನ, ದ್ವೇಷ, ಕಿಚ್ಚು, ಹಾಗೂ ಎಲ್ಲವನ್ನೂ ತ್ಯಜಿಸಿಬಿಡುವ ಹಂಬಲ ಹೀಗೆ ಎಲ್ಲ ಆಯಾಮಗಳನ್ನೊಳಗೊಂಡ ಕತೆಗಳು ಓದಲಿಕ್ಕೆ,ಖುಷಿಕೊಟ್ಟವು . ಕತೆಗಾರರು ತಾವು ಹೇಳಬಯಸಿದ ವಿಷಯವನ್ನು ಓದುಗನಿಗೆ ಸಲೀಸಾಗಿ ತಲುಪಿಸಿದ್ದಾರೆ ಅಲ್ಲಿಗೆ ಕತೆಯ ಭಾವ ರೂಪಗೊಂಡು ಓದುಗರ ಮನಸ್ಸಲ್ಲಿ ಉಳಿಯುತ್ತದೆ ಎಂದರ್ಥ.
-ಅಶ್ವಿನಿ ದಾಸರೆ
ಒಂದೊಳ್ಳೆ ಕತೆ ನೀವು ಜಗತ್ತನ್ನು ನೋಡುವ ರೀತಿಯನ್ನು ಬದಲಾಯಿಸಬೇಕು ಎನ್ನುವ ಅಮೇರಿಕನ್ ಕಾದಂಬರಿಕಾರ ಚಕ್ ಪಲಾಹ್ನಿಯುಕ್ ನ ಮಾತು ಪಂಜು ಕಥಾ ಸ್ಪರ್ಧೆಗೆ ಬಂದ ಅಷ್ಟೂ ಕಥೆಗಳು ಓದಿದಾಗ ಸತ್ಯ ಅನಿಸಿದ್ದು ಸುಳ್ಳಲ್ಲ. ಪಂಜು ಪತ್ರಿಕೆಯ ಸಂಪಾದಕರು ಆತ್ಮೀಯರು ಆದ ನಟರಾಜು ಎಸ್ ಎಂ ಅವರು ನನಗೆ ಈ ಕಥಾ ಸ್ಪರ್ಧೆಗೆ ತೀರ್ಪುರಾಗುವಂತೆ ಕೇಳಿಕೊಂಡಾಗ ನಾನು ಅಷ್ಟು ದೊಡ್ಡ ಪಂಡಿತ ಅಥವಾ ಸಾಹಿತಿಯಲ್ಲ ಎನ್ನುವ ಮುಜುಗುರ ಭಾವನೆಯೊಂದಿ ಇತ್ತಿಚೀನ ಹಿರಿಯ ಕಿರಿಯ ಲೇಖಕರ ಕಥೆಗಳನ್ನು ಓದುವ ಸದಾವಕಾಶ ಒದುಗಿ ಬಂದದ್ದು ನನ್ನ ಅದೃಷ್ಟ ಅಂತಾ ಭಾವುಸುತ್ತಲೇ ಒಪ್ಪಿಕೊಂಡು ಕಥೆಗಳು ಓದಲಾರಂಭಿಸಿದೆ. ಪಂಜು ಸ್ಪರ್ಧೆಗೆ ಬಂದ ಕಥಾ ಕಣಜ ಅದ್ಭುತವಾದದ್ದು ಮತ್ತು ಇಲ್ಲಿನ ಕಥೆಗಳು ಒಂದಕ್ಕಿಂತಲೂ ಒಂದು ಮಿಗಿಲು ಎಂದು ಹೇಳಲು ಕನ್ನಡಿಗನಾಗಿ ನನಗೆ ಹೆಮ್ಮೆ ಅನಿಸುತ್ತದೆ. ನಗರ ಮತ್ತು ಗ್ರಾಮ್ಯ ಪರಿಸರದ ಭಾಷಾ ಸೊಗಡಿನೊಂದಿಗೆ ಅನಾವರಣಗೊಳ್ಳುವ ಇಲ್ಲಿನ ಹೊಸತನ ಇರುವ ವೈವಿಧ್ಯಮಯ ಕತೆಗಳು ಸಮಕಾಲಿನ ಸಾಮಾಜಿಕ, ರಾಜಕೀಯ ಸಮಸ್ಯೆಗಳು ಜೊತೆಗೆ ಅತಿ ಸೂಕ್ಷ್ಮವಾದ ದುರಿತ ಕಾಲದ ಪ್ರೇಮ ಕಾಮ ಕೌಟಂಬಿಕ ಸಂಬಂಧಗಳ ಸಂಕೀರ್ಣತೆಗಳನ್ನ ಸಶಕ್ತವಾಗಿ ಕಟ್ಟಿಕೊಡುವಲ್ಲಿ ಸಫಲವಾಗಿವೆ ಎಂದು ಹೇಳಬಹುದು.
ಒಟ್ಟಿನಲ್ಲಿ ಸ್ಪರ್ಧೆಯ ಎಲ್ಲ ಕತೆಗಳು ವಿವಿಧ ಆಯಾಮಗಳಲ್ಲಿ ಮಾನದಂಡಗಳಲ್ಲಿ ಒಂದಿಲ್ಲ ಒಂದು ಕಾರಣಕ್ಕಾಗಿ ಗೆದ್ದಿವೆ. ಸೋತರೂ ಕೂದಳೆಯ ಅಂತರದಲ್ಲಿ ಸೋತಿರಬಹುದಷ್ಟೆ. ಆದರೆ ಅದು ಸೋಲಲ್ಲ, ಗೆಲುವಿನ ದಾರಿಗೆ ಸೋಪಾನ. ಸ್ಪರ್ದೆಯಲ್ಲಿ ಭಾಗವಹಿಸಿದ ಕತೆಗಾರು ಯಾರೆಂದು ತೀರ್ಪುಗಾರರಿಗೆ ಗೊತ್ತಿರುವುದಿಲ್ಲ. ಕೇವಲ ಕತೆಗಳಿಗೆ ಕೊಟ್ಟ ಕೋಡ್ ಮುಖಾಂತರ ಕತೆಗಳನ್ನು ಓದಿ ನಿಗದಿ ಪಡಿಸಲಾದ ಮಾನದಂಡಗಳ ಪ್ರಕಾರ ಅಂಕಗಳು ಹಾಕಬೇಕು. ಯಾವುದೇ ರೀತಿಯ ಪ್ರಭಾವ ಒತ್ತಡ ಅಥವಾ ಪೂರ್ವಾಗ್ರಹಗಳು ಕೂಡ ಇಲ್ಲದೆ ಐದು ಜನ ತೀರ್ಪುಗಾರರು ಹಾಕಿದ ಅಂಕಗಳು ಒಟ್ಟುಗೂಡಿಸಿ ಬಹುಮಾನಿತ ಕತೆಗಳನ್ನು ಆಯ್ಕೆ ಮಾಡುವ ನಿಷ್ಪಕ್ಷಪಾತ ಕಾರ್ಯ ಪಂಜು ಬಳಗ ಮಾಡಿದೆ. ಇಂಥ ಸ್ಪರ್ಧೆಗಳು ಕನ್ನಡ ಸಾಹಿತ್ಯಕ್ಕೆ ಹೆಚ್ಚುಹೆಚ್ಚು ಬೇಕು. ಅಂದಾಗ ಮಾತ್ರ ಹೊಸ ಹೊಸ ಪ್ರತಿಭೆಗಳು ಪ್ರಾಮಾಣಿಕವಾಗಿ ಬೆಳಕಿಗೆ ಬರಲು ಕಾರಣವಾಗುತ್ತದೆ ಎಂದು ಹೇಳುತ್ತ ಈ ಕತೆಗಳನ್ನು ಓದಲು ಅನುವು ಮಾಡಿಕೊಟ್ಡ ಪಂಜು ಪತ್ರಿಕೆಯ ಸಂಪಾದಕರಾದ ನಟರಾಜು ಎಸ್ ಎಂ ಮತ್ತು ತಮ್ಮ ಅಮೂಲ್ಯ ಕತೆಗಳನ್ನು ಒದಗಿಸಿ ಪಂಜು ಕಥಾ ಸ್ಪರ್ಧೆಯನ್ನು ಗೆಲ್ಲಿಸಿದ ಕತೆಗಾರರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.
-ಅಶ್ಫಾಕ್ ಪೀರಜಾದೆ





ಪಂಜು ಕಥಾ ಸ್ಫರ್ದೆಯಲ್ಲಿ ಭಾಗವಹಿಸಿದ ಎಲ್ಲಾ ಕಥೆಗಾರರಿಗೂ ಹಾಗೂ ಬಹುಮಾನ ಪಡೆದ ಕಥೆಗಾರರಿಗೂ ಅಭಿನಂದನೆಗಳು. 💕