ಆಟಿಸಂ ಅನ್ನೋ ಸಂಕೀರ್ಣ ಮನೋ ಅವಸ್ಥೆ: ಪ್ರಶಸ್ತಿ

ದೈಹಿಕ ಅಂಗವೈಕಲ್ಯ ಅನ್ನೋದು ಮೇಲುನೋಟಕ್ಕೆ ಕಂಡುಬರುತ್ತೆ. ಆದ್ರೆ ಮಾನಸಿಕ ಅಂಗವೈಕಲ್ಯ ? ಕಣ್ಣೆದ್ರೇ ಇದ್ರೂ ಗೊತ್ತಾಗಲ್ಲ.  ಏ ಅವನ್ಯಾಕೆ ಅಷ್ಟು ದೊಡ್ಡದಾಗಿ , ಎಳೆದೆಳೆದು ಮಾತಾಡ್ತಾನೆ, ದೇಹ ನೋಡಿದ್ರೆ ಅಷ್ಟು ವಯಸ್ಸಾದಂತಿದೆ ಆದ್ರೆ ಬುದ್ದಿ ಮಾತ್ರ ಇನ್ನೂ ಬೆಳೆದಿಲ್ಲವಾ ಅನ್ನುವಂತಹಾ ಸಿಲ್ಲಿ ಪ್ರಶ್ನೆಗಳನ್ನು ಕೇಳುತ್ತಾನೆ.  ಇದ್ದಕ್ಕಿದ್ದಂಗೆ ಜಗಳಕ್ಕೆ ಬಂದು ಬಿಡ್ತಾನೆ ಮಾರಾಯ ಅವ. ಸ್ವಲ್ಪ ಹುಷಾರಾಗಿರು ಅಂತಿದ್ದ ಹೊಸದಾಗಿ ಪೀಜಿಗೆ ಬಂದವನ ಬಗ್ಗೆ ಗೆಳೆಯ. ಹೂಂ. ಅವನು ಆಟಿಸಂ ಇಂದ ಒದ್ದಾಡ್ತಾ ಇದಾನೆ . ನಿನ್ನೆ ಸಿಕ್ಕಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನಸ್ಸಿದೆ! ಕನಸಿದೆ! ಅನುಕಂಪ ಬೇಡ, ಅವಕಾಶ ಕೊಡಿ: ಪಾ.ಮು. ಸುಬ್ರಮಣ್ಯ, ಬ.ಹಳ್ಳಿ.

   ನಾವು ಯಾರಿಗೇನೂ ಕಮ್ಮಿ ಇಲ್ಲ.  ಯಾರ ಹಂಗೂ ನಮಗಿಲ್ಲ.  ನಮಗೂ ಒಂದು ಮನಸ್ಸಿದೆ. ಕನಸಿದೆ. ಬದುಕಿದೆ. ಅಸಹಾಯಕತೆಯ ಅನುಕಂಪದಲೆಯಲ್ಲಿ ಮುಳುಗಿಸಿ, ಕಾರುಣ್ಯಧಾರೆಯಲ್ಲಿ ತೇಲಿಸುವ ಅಗತ್ಯವಿಲ್ಲ.  ನಮಗೆ ಅವಕಾಶ ಕೊಡಿ.  ’ಆಗುವುದಿಲ್ಲ’ ಎಂಬುದನ್ನೆಲ್ಲಾ ’ಆಗಿಸಿ’ ಬಿಡುತ್ತೇವೆ.  ಪ್ರತಿಯೊಬ್ಬ ವಿಕಲಚೇತನರಲ್ಲಿ ಕಂಡು ಕೇಳಿ ಬರುವ ದೃಢ ವಿಶ್ವಾಸದ ನುಡಿಗಳಿವು.   ವಿಕಲಚೇತನರೆಂದರೆ ಸಮಾಜದಲ್ಲಿ ಅವಗಣನೆಗೆ ಒಳಗಾಗಿ ಅವರಿಗೆ ತಮ್ಮದೇ ಆದ ಸ್ವಂತಿಕೆ ಇಲ್ಲದಂತಹ ಸ್ಥಿತಿಗೆ ತಂದು ಬಿಟ್ಟಿದ್ದೇವೆ.   ಯಾರೀ ವಿಕಲಚೇತನರು?  ’ಅಂಗವಿಕಲ’ ಎಂಬ ಪದಕ್ಕೆ ಪರ್ಯಾಯವಾಗಿ ಇಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಶೇಷ ಮಕ್ಕಳ ಪೋಷಣೆಯೂ ಘಾಸಿಗೊಳಿಸುವ ಮತಾಂಧತೆಯೂ: ಅಮರ್ ದೀಪ್ ಪಿ.ಎಸ್.

ಮಕ್ಕಳು ದೇವರ ಸಮಾನ ಅಂತಾರೆ.   ಅಂಥ ಮಕ್ಕಳು ಹುಟ್ಟಿದ ಸಮಯದಿಂದ ಹಿಡಿದು ಬೆಳೆದು ನಾಲ್ಕು ಹೆಜ್ಜೆ ಇಟ್ಟು ನಾಲ್ಕು ತೊದಲು ಮಾತಾಡುವಂತಾಗುವಷ್ಟರಲ್ಲಿ ತಂದೆ ತಾಯಿಯರು ಅದೆಷ್ಟೇ ಮೊಂಡರು, ಸಿಡುಕರು, ದುಡುಕರು, ಗತ್ತು ಗೈರತ್ತಿನವರಿದ್ದರೂ ಮಕ್ಕಳ ಮುಂದೆ ಮೊಳಕಾಲೂರಿ “ಬಾಲೇ ಕಂದಾ, ಬಾರೇ ಬಂಗಾರಿ, ಹೌದಾ ಚಿನ್ನು, ನನ್ ಸೋನು, ಮೈ ಸ್ವೀಟಿ ಅಂತೆಲ್ಲಾ ಕರೆದು ಮುದ್ದು ಮಾಡದೇ ಬೇರೆ ಕಾರಣವೇ ಇಲ್ಲದಂತೆ ರಿಲೇಟ್ ಆಗಿಬಿಡುತ್ತಾರೆ.  ಅದು ದೊಡ್ಡವರನ್ನು ಬೆಂಡ್ ಮಾಡಲು ಮಕ್ಕಳಿಗಿರುವ ಶಕ್ತಿಯೂ ಹೌದು ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಸಾಧ್ಯವೆಂಬುದು ಇಲ್ಲ: ಮಾಲಾ

ಮನುಜ ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ನಿದರ್ಶನ ಶಿಲ್ಪಿ ಬಡೆಕ್ಕಿಲ ಶಾಮಸುಂದರ ಭಟ್. ಬಡೆಕ್ಕಿಲ ಕೃಷ್ಣ ಭಟ್ ಹಾಗೂ ಸರಸ್ವತೀ ದಂಪತಿಗಳ ಮೂರನೇ ಮಗನಾಗಿ ಜನಿಸಿದ ಶಾಮಸುಂದರ ಎರಡು ವರ್ಷ ಆಗಿದ್ದಾಗಲೇ ಪೋಲಿಯೋ ರೋಗಕ್ಕೆ ತುತ್ತಾದ. ಒಂದು ಕಾಲು ದುರ್ಬಲವಾಗಿ ಕೃಶವಾಯಿತು. ಇದರಿಂದ ವಿದ್ಯಾಭ್ಯಾಸವೂ ಕುಂಠಿತವಾಯಿತು. ಮನೆಯಲ್ಲೇ ಅಕ್ಷರಾಭ್ಯಾಸದಲ್ಲಿ ತೊಡಗಿದ. ತಂದೆ ವೈದ್ಯರು. ಮೊದಲಿಗೆ ದ.ಕ. ಜಿಲ್ಲೆಯ ವಿಟ್ಲದಲ್ಲಿ, ತದನಂತರ ಪುತ್ತೂರಿನಲ್ಲಿ ವಾಸ. ಅಲ್ಲಿ ಶಾಮಸುಂದರ (೧೯೬೯-೭೫) ಮಣ್ಣಿನಲ್ಲಿ ಮೂರ್ತಿಗಳನ್ನು ಮಾಡಲು ತೊಡಗಿದ. ಯಾರಿಂದಲೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕ ಪ್ರೀತಿಗೆ…ಅದರ ರೀತಿಗೆ…: ಭಾಗ್ಯ ಭಟ್

  ಅದೊಂದು ಸಂಜೆ ಮನೆಯೆದುರು ಶಟಲ್ ಆಡ್ತಾ ಇದ್ದೆ.ಅಲ್ಲೊಂದು ಜೋಡಿ ಕಂಗಳು ಒಂದು ವಾರದಿಂದ ನಾವು ಆಟ ಆಡೋದನ್ನ ನೋಡ್ತಾ ನಗುತಿತ್ತು.ನಾನೋ ಎಲ್ಲರನ್ನೂ ಮಾತಾಡಿಸಬೇಕನ್ನೋ, ಅಕ್ಕ ಪಕ್ಕದವರನ್ನೆಲ್ಲಾ ಫ್ರೆಂಡ್ಸ್ ಮಾಡ್ಕೋಬೇಕು ಅಂತನ್ನೋ catagory ಅವ್ಳು.  ಆ ಮುಗ್ಧ ಕಂಗಳ ಜೊತೆ ಮಾತಿಗೆ ಕೂರಲೇ ಬೇಕಂತ ನಿರ್ಧರಿಸಿ ಸುಮ್ಮನೆ ಎದುರು ಮನೆಯ ಗೇಟ್ ದಾಟಿ ಒಳಗಡೆ ಹೋದೆ  ಬರ್ತೀಯಾ ಪುಟ್ಟಾ ಆಟ ಆಡೋಣ ಅಂತ ಕೇಳಿಕೊಂಡು .ಅವ ಸುಮ್ಮನೆ ನಕ್ಕು ನೀವು ಆಟ ಆಡೋದನ್ನ ನೋಡೋದೆ ಖುಷಿ ನಂಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಐರನ್ ಬಾಕ್ಸ್: ಪ್ರಜ್ವಲ್ ಕುಮಾರ್

(ಕಾಲ್ಪನಿಕ) ರಾತ್ರಿ ಒಂದು ಘಂಟೆ. ಶನಿವಾರವಾದ್ದರಿಂದ ಲ್ಯಾಪ್-ಟಾಪ್ ನಲ್ಲಿ ಯಾವುದೋ ಫಿಲಂ ನೋಡಿಕೊಂಡು ಮಲಗಿ ಒಂದರ್ಧ ಘಂಟೆ ಆಗಿ ನಿದ್ರೆ ಕಣ್ಣಿಗೆ ಹತ್ತುತ್ತಿತ್ತಷ್ಟೆ. ಪಕ್ಕದ ಕೋಣೆಯಿಂದ 'ಢಬ್' ಅಂತ ಏನೋ ಬಿದ್ದ ಸದ್ದು. ನಾವಿದ್ದ ಮನೆ 1ಬಿ.ಹೆಚ್.ಕೆ. ಅಂದ್ರೆ ಒಂದು ಕೋಣೆ, ಇನ್ನೊಂದು ಹಾಲ್, ಅದಕ್ಕೆ ಅಂಟಿಕೊಂಡಿರುವ ಅಡುಗೆಮನೆ ಮತ್ತು ಬಾತ್ರೂಮ್. ಆ ಮನೇಲಿ ನಾನು, ಮತ್ತೆ ನನ್ನ ಫ್ರೆಂಡು ಮುರಳಿ ಅಂತ ಇಬ್ರೂ ಒಟ್ಟಿಗೆ ಇರ್ತಾ ಒಂದು ವರ್ಷದ ಮೇಲಾಗಿತ್ತು. ರಾತ್ರಿ ನಾನು ಹಾಲ್ ನಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಾರಲಾರದ ಹಾಡುವ ಹಕ್ಕಿ: ಗುಂಡೇನಟ್ಟಿ ಮಧುಕರ

ಮನುಷ್ಯನಿಗೆ  ಯಾವುದಾದರೊಂದು ಅವಯವಗಳಿಲ್ಲದಿದ್ದರೂ ನಡೆಯುವುದಿಲ್ಲ. ಕಣ್ಣು, ಕಿವಿ, ಮೂಗು, ಕಾಲು, ಕೈ ಹೀಗೆ ಎಲ್ಲ ಅವಯವಗಳೂ ಬೇಕೇ ಬೇಕು ಆದರೆ ಯಾವುದೋ ಒಂದು ಕಾರಣದಿಂದ ಇವುಗಳಲ್ಲಿಯವುಗಳಿಂದ ವಂಚಿತನಾದ ವ್ಯಕ್ತಿ ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುತ್ತಾನೆ. ಸಮಾಜದಲ್ಲಿ ಕೀಳರಿಮೆ ಮನೋಭಾವವನ್ನು ಬೆಳೆಸಿಕೊಳ್ಳುವವರೇ ಹೆಚ್ಚು. ಆದರೆ ಎರಡೂ ಕಾಲಿಲ್ಲದೆಯೇ ಸುಮಾರು ನಾಲ್ಕು ದಶಕಗಳನ್ನು ಕಳೆದಿರುವ ವಿನಾಯಕ ಮುತಾಲಿಕ ದೇಸಾಯಿಯವರು ಇಂಥವರಿಗೆ ಹೇಳುವ ಕಿವಿಮಾತೇನೆಂದರೆ. ಜೀವನದಲ್ಲಿ ಉತ್ಸಾಹವೆನ್ನುವುದು ಅತಿ ಮಹತ್ವದ ವಸ್ತು. ಜೀವನೋತ್ಸಾಹವನ್ನು  ಕಳೆದುಕೊಂಡಿರುವವ  ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹುಟ್ಟಿದ ತಪ್ಪಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಫ್ರೀಡಾ ಕಾಹ್ಲೋ: ಬದುಕು, ಬವಣೆ ಮತ್ತು ಬಣ್ಣಗಳು: ಪ್ರಸಾದ್ ಕೆ.

"ಇಲ್ಲಿಂದ ಹೊರಬಿದ್ದವಳೇ ಮೂರು ಕೆಲಸಗಳನ್ನು ಮಾಡಬೇಕಿದೆ ನನಗೆ. ಪೈಂಟಿಂಗ್, ಪೈಂಟಿಂಗ್ ಮತ್ತು ಪೈಂಟಿಂಗ್"  ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು, ನೋವನ್ನೆಲ್ಲಾ ದೇಹದ ಮೂಲೆಮೂಲೆಯಲ್ಲೂ ಆವರಿಸಿಕೊಂಡು ಮೆಕ್ಸಿಕೋದ ಆಸ್ಪತ್ರೆಯ ವಾರ್ಡೊಂದರಲ್ಲಿ ಮಲಗಿದ್ದ ಹೆಣ್ಣೊಬ್ಬಳು ಹೇಳಿದ ಮಾತಿದು. ಈ ಚಿತ್ರಕಲಾವಿದೆಯ ಹೆಸರು ಫ್ರೀಡಾ ಕಾಹ್ಲೋ. ಪಿಕಾಸೋ ಮತ್ತಿತರ ದಿಗ್ಗಜರ ಸಮಕಾಲೀನಳಾದಳೂ ಕೂಡ ತನ್ನ ಜನ್ಮಭೂಮಿ ಮೆಕ್ಸಿಕೋದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನದೇ ಆದ ಛಾಪನ್ನು ಕಲಾಲೋಕದಲ್ಲಿ ಮೂಡಿಸಿದವರು ಫ್ರೀಡಾ. ತನ್ನ ದೇಹವನ್ನು ಮತ್ತು ಮನಸ್ಸಿನಲ್ಲಾ ಮಡುಗಟ್ಟಿ ಆವರಿಸಿದ್ದ ನೋವುಗಳೊಂದಿಗೆ ಜೀವನದುದ್ದಕ್ಕೂ ಹಟಬಿಡದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೃದಯ ಗೆದ್ದವರು: ಸಂದೇಶ್ ಎಲ್. ಎಮ್.

    ನನ್ನದು ಹೇಳಿ ಕೇಳಿ ಬಹುರಾಷ್ಟ್ರೀಯ ಕಂಪನಿ. ಏನೇನೋ ಸವಲತ್ತುಗಳು, ಎಲ್ಲ ಕಂಪನಿಗಳು ಸಾರ್ವಜನಿಕ ರಜೆಗಳು, ಹಬ್ಬ-ಹರಿದಿನಗಳಿಗೆ ರಜೆಮೀಸಲಿಟ್ಟರೆ  ನಮ್ಮ ಕಂಪನಿ ಪ್ರತಿಯೊಬ್ಬ ಉದ್ಯೋಗಿಗಳಿಗೂ ಒಂದು ದಿನದ ರಜೆಯನ್ನು "Valentine day" ಗೆ ಮೀಸಲಿಡುತ್ತದೆ, ಆ ರಜೆಯನ್ನು ವರ್ಷದಲ್ಲಿ ಉದ್ಯೋಗಿಯು ಯಾವಾಗ ಬೇಕಾದರೂ ಉಪಯೋಗಿಸಿಕೊಳ್ಳಬಹುದು!!!!  ನಂಬ್ತೀರಾ..?? ನಂಬಲೇಬೇಕು ಆದ್ರೆ ಸ್ವಲ್ಪ ಸ್ಪೆಲ್ಲಿಂಗ್ ಮಿಸ್ಟೇಕ್ ಅಷ್ಟೆ ಅದು "Valentine day"  ಅಲ್ಲ "Volunteer day".    My day is dedicated to "Diya" ಅನ್ನೋ ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಲ್ಕು ಕವಿತೆಗಳು: ನಾಗೇಶ ಮೈಸೂರು, ವಿನಾಯಕ ಭಟ್, ರಶ್ಮಿ ಸುಧೀರ್, ಪವಿತ್ರ ಆಚಾರ್ಯ

ವಿಕಲ ಚೇತನ ಸಕಲ.. ಯಾರು ವಿಕಲ ಚೇತನರು, ಸ್ವಾಮಿ ? ಸಕಲವಿದ್ದೂ ಇಲ್ಲದ ನಾವೊ, ಅವರೊ? ಯಾರ ತಪ್ಪೊ, ಪಾಪವೊ ಸುಂಕ ಕಟ್ಟುತ ತೆರದಲೆ ಜೀವನ ಪೂರ ಹೋರಾಟದ ಬದುಕಲಿ ಛಲ ಬಂಡವಾಳ… ಆತ್ಮಾಭಿಮಾನ ಸ್ವಾಭಿಮಾನ ಹಂಬಲ ಸಕಲಾಂಗರೆ ಕೈಬಿಟ್ಟಾ ಗಳಿಗೆ ವೈಕಲ್ಯವೆ ದೂರಿ, ಕಾಡಿ ಸಂಬಳ ನೋವಲ್ಲೆ ಕೀಳರಿಮೆ ಅನುಕಂಪದ ಎದೆಯಲೆ ಬೀಜ ಬಿತ್ತು ಬೆಳೆದು – ಗೊಂಚಲೊ, ಕುರುಚಲೊ..! ಊನವಿದ್ದರೇನು ದೈಹಿಕ, ಮಾನಸಿಕ ? ವಿಕಲಾಂಗ ನೋಡುವ ದೃಷ್ಟಿ ಸಹಿತ ಸಹಿ ಹಾಕಿಬಿಡುವ ಅಂಕಿತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಗವಿಕಲರ ಸಮಸ್ಯೆಗಳಿಗೆ ದ್ವನಿಯಾಗಿರುವ ಫಕ್ಕೀರೇಶ: ದಿಗಂಬರ ಎಂ.ಪೂಜಾರ

ಸಮಾಜದಲ್ಲಿ ಎಲ್ಲರೂ ಗುರುತಿಸುವದು ಒಂದು ಒಳ್ಳೆಯ ಕೆಲಸಗಳಿಗೆ ಅಥವಾ ಅವರು ಮಾಡುವ ಕೆಟ್ಟ ಕೆಲಸಗಳಿಂದ ತಮ್ಮ ಹೆಸರನ್ನು ಮಾಡಿಕೊಂಡಿರುತ್ತಾರೆ. ಸಮಾಜದಲ್ಲಿರುವ ಕೆಲವರು ಸಮಾಜಕ್ಕೆ ಏನಾದರೂ ಮಾಡಬೇಕೆನ್ನುವ ಇಚ್ಚೆ ಹೊಂದಿರುತ್ತಾರೆ.  ಆದರೆ ಕೆಲವು ತಾವಾಯಿತು ತಮ್ಮ ಪಾಡಾಯಿತು ಎನ್ನುವ ಮನೋಭಾವದವರೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ವಿಕಲಾಂಗನಾದರೂ ತನ್ನ ವಿಕಲತೆಯನ್ನು ನುಂಗಿಕೊಂಡು ಶಿರಹಟ್ಟಿ ತಾಲೂಕಿನಲ್ಲಿನ ಅಂಗವಿಕಲರ ಸಮಸ್ಯೆಗಳಿಗೆ ದ್ವನಿಯಾಗಿ ಸ್ಪಂದಿಸುವ ಮೂಲಕ ಮಾನವೀಯತೆ ಮೌಲ್ಯಗಳನ್ನು ಬೆಳೆಸುತ್ತಿರುವ ಬಾಳೇಹೊಸೂರು ಗ್ರಾಮದ ಫಕ್ಕೀರೇಶ ಮ್ಯಾಟಣ್ಣವರ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯಾಗಿದ್ದಾರೆ. ಫಕ್ಕೀರೇಶ ಮ್ಯಾಟಣ್ಣವರ ಶಿರಹಟ್ಟಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನಿಶ್ಚಿತತೆಯ ಬಿರುಗಾಳಿಗೆ ಸಿಕ್ಕು ಬೆಳಗಲು ಸೆಣಸಾಡುತ್ತಿರುವ ದೀಪಗಳು: ಕಮಲ ಬೆಲಗೂರ್

ಬಾಲ್ಯಾವಸ್ತೆ ಮಾನವ ಬದುಕಿನ ಅತ್ಯಮೂಲ್ಯಕ್ಷಣಗಳು ಆದರೆ ಅದೇ ಕ್ಷಣವೇ ಅಂಗವಿಕಲ ಮಗುವಿಗೆ ತ್ರಾಸದಾಯಕವಾಗಿರುತ್ತದೆ. ತನ್ನ ಹೆತ್ತವರ ನೋಟದಲ್ಲಿ ಪ್ರೀತಿಯ ಬದಲು ಕನಿಕರ ನೋವು ವ್ಯಥೆ ಕಂಡಾಗ ಆ ಮುಗ್ಧ ಮನಸ್ಸು ಕುಗ್ಗುತ್ತದೆ. 'ನಾನು ಅಂಗ ವಿಕಲನಾಗಿ ಬದುಕುವುದಕ್ಕಿಂತ ಸಾವನ್ನು ಬಯಸುತ್ತೇನೆ '. ಇಂತಹ ಪ್ರತಿಕ್ರಿಯೆ ವಿಚಿತ್ರವೆನ್ನಿಸಿದರೂ ಸತ್ಯ. ಪ್ರತಿನಿತ್ಯ ಇಂಚಿಂಚು ನೋವನ್ನುಂಡು ಸೋಲೆದುರಿಸುತ್ತಾ ಪರಾವಲಂಬಿಗಳಾಗಿ ಅಸಹನೀಯ ಬದುಕನ್ನು ಬದುಕುವವರ ಬಗ್ಗೆ ಸಾಮಾನ್ಯರಿಗೆ ಸಹಾನುಭೂತಿಯಾಗುವುದು. ಆದರೆ ವಾಸ್ತವದಲ್ಲಿ ಸಾಮಾನ್ಯ ಜನರು ಜೀವನ ನಡೆಸುವ ರೀತಿಗಿಂತ ಭಿನ್ನವಾಗಿ ಹೆಚ್ಚು ದಕ್ಷತೆಯಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೃದುಲ: ಪಾರ್ಥಸಾರಥಿ ಎನ್.

 ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !. ಎಂತಹುದೋ ಮಾಯಕದ ನೆನಪಿನಲ್ಲಿ ನಕ್ಕಳು ಮೃದುಲ. ಕಾಲೇಜಿಗೆ ಹೋಗುವ ಬಸ್ಸು ಎಂಟಕ್ಕೆ  ಮುಖ್ಯರಸ್ತೆಗೆ ಬಂದುಬಿಡುತ್ತದೆ ಅಷ್ಟರೊಳಗೆ ಸಿದ್ದವಾಗಿ ಹೋಗದಿದ್ದರೆ ಬಸ್ಸು ತಪ್ಪಿಸಿಕೊಂಡಂತೆ ಮತ್ತೆ ಸಿಟಿ ಬಸ್ ಹಿಡಿದು ಹೋಗುವದೆಂದರೆ ರೇಜಿಗೆ ಎನ್ನುವ ಭಾವ ತುಂಬಿದಂತೆ ಪೂರ್ಣ ಎಚ್ಚರಗೊಂಡು ಎದ್ದು ಕುಳಿತಳು.  ಅಮ್ಮ ಗೀಸರ್ ಆನ್ ಮಾಡಿರುವಳೋ ಇಲ್ಲವೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜುವಿಗೆ ಅಭಿನಂದನೆಗಳು: ಮಂಜು ಹಿಚ್ಕಡ

ಅದು ೨೦೧೩ನೇ ಇಸವಿ, ಆಗಷ್ಟ್- ಸೆಪ್ಟೆಂಬರ್ ತಿಂಗಳು. ಗೂಗಲನಲ್ಲಿ ಏನನ್ನೋ ಹುಡುಕುತಿದ್ದಾಗ ಪಂಜು ಎನ್ನುವ ಆನ್ ಲೈನ್ ಪತ್ರಿಕೆ ಕಣ್ಣಿಗೆ ಬಿತ್ತು. ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕು ಎನ್ನುವಂತಹ ಲೇಖನಗಳು, ಕತೆಗಳು, ಕವಿತೆಗಳು ಆ ಪತ್ರಿಕೆಯ ತುಂಬೆಲ್ಲಾ ತುಂಬಿದ್ದವು. ನನಗೆ ಪತ್ರಿಕೆಯನ್ನು ಓದುತ್ತಾ ಹೋದ ಹಾಗೆ ಆ ಪತ್ರಿಕೆಯಲ್ಲಿ ಆಸಕ್ತಿ ಬೆಳೆಯತೊಡಗಿತು. ನಾನು ಹೆಸರಿಗೆ ಕವಿ-ಲೇಖಕ-ಕತೆಗಾರ ಎಂದು ನನ್ನಷ್ಟಕ್ಕೆ ಹೇಳಿಕೊಂಡರೂ ಅದುವರೆಗೆ ನನ್ನ ಯಾವುದೇ ಲೇಖನಗಳಾಗಲಿ ಕತೆಗಳಾಗಲಿ, ಕವನಗಳಾಗಲಿ ನನ್ನ ಬ್ಲಾಗನ್ನು ಬಿಟ್ಟರೆ ಬೇರೆಲ್ಲು ಪ್ರಕಟವಾಗಿರಲಿಲ್ಲ. ಹಾಗಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಡೆತಡೆಗಳನ್ನು ದಾಟಿ ಸವಾಲುಗಳನ್ನು ಮೆಟ್ಟಿ ನಿಂತಲ್ಲಿ: ಪ್ರಭಾಕರ ತಾಮ್ರಗೌರಿ

  ಇಂದು ದೇಶದಲ್ಲಿ ಎಷ್ಟೊಂದು ವಿಕಲಾಂಗ ಚೇತನರಿದ್ದಾರೆ. ಕಣ್ಣಿಲ್ಲ, ಮೂಗಿಲ್ಲ, ಮಾತನಾಡಬೇಕೆಂದರೆ ಬಾಯಿಇಲ್ಲ.ಎದ್ದು ನಡೆದಾಡಬೇಕೆಂದರೆ ಕಾಲು ಇಲ್ಲ. ಏನಾದರೂ ಕೆಲಸ ಮಾಡಬೇಕೆಂದರೆ ಕೈ ಇಲ್ಲ. ಇಂಥವರನ್ನ ನೋಡಿದರೆ ಪಾಪ ಅಯ್ಯೋ ಅನ್ನಿಸುತ್ತೆ. ಇವರನ್ನ ನೋಡಿದರೆ ಅಂತಃಕರಣ ಜುಂ ಎನ್ನುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಂಗ ವೈಫಲ್ಯದಿಂದ ಬಳಲುತ್ತಿರುವ ಈ ಮಕ್ಕಳು ಆದಾರೋಪಕ್ಕೆ ಬಲಿಯಾದವೋ ಗೊತ್ತಿಲ್ಲ…? ಎಲ್ಲ ಮಕ್ಕಳಂತೆ  ಇವರು ಬಾಲ್ಯದ ಸುಮಧುರ ಜೀವನ ಕಳೆಯಬೇಕಾಗಿದ್ದ ಈ ಮಕ್ಕಳು ಎಲ್ಲವುಗಳಿಂದ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ: ಅಖಿಲೇಶ್ ಚಿಪ್ಪಳಿ

ಇತ್ತೀಚಿನ ದಿನಗಳಲ್ಲಿ ಪತ್ರಿಕೋಧ್ಯಮದಲ್ಲಿ ಹೊಸ ತಲೆಮಾರು ಸೃಷ್ಟಿಯಾಗುತ್ತಿದೆ. ಆದರೆ ಸಾರವುಳ್ಳ ಮಾಹಿತಿಗಳು ಲಭ್ಯವಾಗುತ್ತಿಲ್ಲ. ನವಂಬರ್ ಮತ್ತು ಡಿಸೆಂಬರ್ ೨೦೧೪ರ ತಿಂಗಳಲ್ಲಿ ಸಾಗರಕ್ಕೆ ಪತ್ರಿಕೋಧ್ಯಮದ ಹಿರಿಯ ದಿಗ್ಗಜರಿಬ್ಬರು ಆಗಮಿಸಿದ್ದರು. ನವಂಬರ್ ೩೦ರಂದು ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸಿದ ಶ್ರೀ ದಿನೇಶ್ ಅಮಿನ್‌ಮಟ್ಟು ಹಾಗೂ ಡಿಸೆಂಬರ್ ೧೧ರಂದು ಶ್ರೀ ನಾಗೇಶ ಹೆಗಡೆ. ಪ್ರಸ್ತುತ ಪತ್ರಿಕೋಧ್ಯಮದ ವಿಷಯದಲ್ಲಿ ಈರ್ವರ ಅಭಿಪ್ರಾಯವು ಹೆಚ್ಚು-ಕಡಿಮೆ ಹೋಲುತ್ತಿದ್ದವು. ದಿನೇಶ್ ಅಮಿನ್‌ಮಟ್ಟು ಹೇಳಿದ್ದು, ನಮ್ಮ ಕಾಲದಲ್ಲಿ ಪತ್ರಿಕೋಧ್ಯಮಕ್ಕೆ ಬೇಕಾದ ತಯಾರಿ ಇರುತ್ತಿತ್ತು ಆದರೆ ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಈಗಿನ ಪತ್ರಿಕೋಧ್ಯಮದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 58): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಬಿಎಮ್‌ಟಿಸಿ ಕೊಡುಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು? ೨.    ೧೨ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು? ೩.    ಇತ್ತೀಚೆಗೆ ಅಮೇರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು? ೪.    ಇಸ್ರೋ ಇತೀಚಿಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್ – ೩ ರಾಕೆಟ್‌ನ್ನು ಉಡಾವಣೆ ಮಾಡಲಾಯಿತು? ೫.    ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ? ೬.    ಐಶ್ವರ್ಯ ರೈ ಮೇಣದ ಪ್ರತಿಮೆ ಲಂಡನ್‌ನ ಯಾವ ಮ್ಯೂಸಿಯಂನಲ್ಲಿದೆ? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಟೀ, ಕಾಫಿ ಮಾರುವ ಹುಡುಗ: ನಟರಾಜು ಎಸ್. ಎಂ.

ನಮ್ಮ ಕಥಾನಾಯಕ ರವಿ ಕಳೆದ ದೀಪಾವಳಿಯ ವೇಳೆ ತನ್ನವ್ವನಿಗೆ ಟೂರಿಗೆ ಹೋಗಿ ಬರುತ್ತೇನೆಂದು ಹೇಳಿ ನಾಲ್ಕೈದು ದಿನ ನಾಪತ್ತೆಯಾಗಿದ್ದ. ಮಧ್ಯೆ ಮಧ್ಯೆ ಮನೆಗೆ ಫೋನ್ ಮಾಡಿ ತಾನು ಎಲ್ಲಿದ್ದೇನೆ ಯಾವಾಗ ಮನೆಗೆ ಬರುತ್ತೇನೆ ಎಂಬುದನ್ನು ಅವನು ಹೇಳುತ್ತಿದ್ದ ಕಾರಣ ಮನೆಯವರಿಗೆ ಹಬ್ಬದ ಸಮಯದಲ್ಲಿನ ಅವನ ಟೂರಿನ ಉದ್ದೇಶದ ಅರಿವಾಗಿರಲಿಲ್ಲ. ಟೂರಿನಿಂದ ಮನೆಗೆ ವಾಪಸ್ಸು ಬಂದವನು ಒಂದು ದಿನ ರಾತ್ರಿ ಅವ್ವನ ಎದುರು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ. ಆತನ ದುಃಖದ ಹಿಂದಿನ ಸತ್ಯ ಮತ್ತು ಆ ಟೂರಿನ ಉದ್ದೇಶ ರವಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ