ದೊಡ್ಡದೊಂದು ಭೂಪ್ರದೇಶದಲ್ಲಿ ಪೌರಾಣಿಕೆ ಎಂಬ ನದಿ ಹರಿಯುತ್ತಿತ್ತು. ಇದು ಅತ್ಯಂತ ಆಳವಾದ ಮತ್ತು ಉದ್ದವಾದ ನದಿಯಾಗಿತ್ತು. ಒಂದು ಕಾಲದಲ್ಲಿ ಈ ನದಿಯನ್ನು ಜಲದೇವಿ ಎಂದು ಕುಗ್ಗೇರಿ ಎಂಬ ಗ್ರಾಮದಲ್ಲಿ ತುಂಬಾ ಭಯ ಭಕ್ತಿಯಿಂದ ಪೂಜಿಸುತ್ತಿದ್ದರು. ನೀರು ಕುಡಿಯಲು ಬಳಸುತ್ತಿದ್ದರು. ಈ ನದಿಗೆ ಪೃಥ್ವಿ,ಪವನ ಮತ್ತು ಕಾಂತಾರ ಎಂಬ ಸ್ನೇಹಿತರಿದ್ದರು ಇವರೆಲ್ಲರೂ ಯಾವಾಗಲೋ ಒಂದು ದಿನ ಒಟ್ಟಾರೆ ಸೇರಿ ತುಂಬಾ ಖುಷಿಯಿಂದ ತಮ್ಮ ಜೀವನವನ್ನು ನಡೆಸುತ್ತಿದ್ದರು. ಹೀಗೆ ಇರುವಾಗ ಒಂದು ದಿನ ಹರಿಯುತ್ತಾ ಕಾಂತಾರದ ನೆನಪಾಗಿ ಕಾಂತಾರದ ಬಳಿ ಹರಿಯ ತೊಡಗಿತು. ಕಾಂತಾರವು ಸಹ ಪೌರಾಣಿಕೆಯ ಆಗಮನಕ್ಕಾಗಿ ಕಾಯುವಂತಿತ್ತು. ಪೌರಾಣಿಕೆ ಹರಿಯುತ್ತಾ ಕಾಂತಾರದ ಬಳಿ ಬಂದಿತ್ತು. ಕಾಂತಾರಕ್ಕೆ ಎಲ್ಲಿ ಇಲ್ಲದ ಸಂತೋಷ, ಆನಂದ ಪೌರಾಣಿಕೆಗೂ ಅದೇ ರೀತಿಯ ಭಾವನೆ ಇಬ್ಬರು ಖುಷಿಯಿಂದ ತಮ್ಮ ಕ್ಷೇಮಗಳನ್ನು ವಿಚಾರಿಸಿಕೊಂಡು ಹೀಗೆ ಮಾತನಾಡುತ್ತಾ ಕುಳಿತರು. ಕಾಂತಾರ ಸುಮ್ಮನೆ ಮಾತನಾಡುತ್ತಿದ್ದಂತೆ ಮೌನವಾಯಿತು. ಪೌರಾಣಿಕೆ ಯಾಕೆ ಮೌನವಾದೆ ಎಂದರೂ ಕಾಂತಾರ ಹೇಳಲಿಲ್ಲ. ಅದರಲ್ಲಿ ಹೇಳಲಾಗದ ನೋವುಗಳು ಬಂಡೆ ಅತಿ ಉರುಳಿತ್ತು. ಪೌರಾಣಿಕೆ ಏನು ಸಮಸ್ಯೆ ಆಗಿರುವುದು ಎಂದು ತಿಳಿದು ಏನಾಗಿದೆ ಎಂದು ಹೇಳದೇ ಹೋದರೆ ನನ್ನ ಮೇಲೆ ಆಣೆ ಎಂದು ಹೇಳಿತು. ಆಗ ಕಾಂತಾರ ಅತಿ ಬೇಸರದಿಂದ ನನ್ನ ಸುತ್ತಮುತ್ತಲಿರುವ ನನ್ನ ಸಹಪಾಠಿಗಳ ಮತ್ತು ಸಹೋದರ ಸಹೋದರಿಯನ್ನರ ಈ ಕೆಟ್ಟ ಮಾನವ ಜಾತಿಯ ಹುಳ ತನ್ನ ಉಪಯೋಗಕ್ಕಾಗಿ ಕೊಲ್ಲುತ್ತಿದ್ದಾನೆ.
ಮುಂದೊಂದು ದಿನ ನನಗೂ ಅದೇ ಪರಿಸ್ಥಿತಿ ಬರುವುದು ಅದಕ್ಕಾಗಿ ಏನಾದರು ಮಾಡಬೇಕೆಂಬ ಆಲೋಚನೆಗಳು ಬರುತ್ತವೆ. ಈ ಘಟನೆಯಿಂದ ನನ್ನಲ್ಲಿ ಇರುವ ಆಸೆ ಆಕಾಂಕ್ಷೆಗಳು ಎಲ್ಲವೂ ಬತ್ತಿ ಹೋಗುತ್ತಿವೆ ಎಂದು ಅಳತೊಡಗಿತು. ಪೌರಾಣಿಕೆ ಅದನ್ನು ಸಮಾಧಾನಪಡಿಸಿ ಹೌದು ಈ ಮಾನವ ದೆಸೆಯಿಂದ ಎಲ್ಲರಿಗೂ ತೊಂದರೆಗಳೇ ಆಗುತ್ತವೆ. ನನ್ನನ್ನು ಈ ಜನರು ಮೊದಲು ದೇವತೆ ಎಂದು ಪೂಜಿಸುತ್ತಿದ್ದರು ಆದರೆ ಆಧುನಿಕ ಜಗತ್ತಿನಲ್ಲಿ ನನ್ನಲ್ಲಿ ಎಲ್ಲ ತರಹದ ತ್ಯಾಜ್ಯ ವಸ್ತುಗಳನ್ನು ಬೀಸುತ್ತಿದ್ದಾರೆ. ಪೂಜೆ ಅದು ಇದು ಅಂತ ಎಲ್ಲ ತರಹದ ವಸ್ತುಗಳನ್ನು ನನ್ನಲ್ಲಿ ಬಿಸಾಡುತ್ತಿದ್ದಾರೆ. ನನಗಂತೂ ಬದುಕುವುದು ತುಂಬಾ ಕಷ್ಟವಾಗುತ್ತದೆ. ಅದು ಯಾವುದೋ ಕಾರ್ಖಾನೆಗಳಂತೆ ಅಲ್ಲಿಂದ ಬರುವ ತ್ಯಾಜ್ಯ ನೀರಿನಿಂದ ಅಂತೂ ಅದರಲ್ಲಿ ಬೀರುವ ಕೆಟ್ಟ ವಾಸನೆ ರಾಸಾಯನಿಕ ವಸ್ತುಗಳನ್ನು ನುಂಗಿ ನುಂಗಿ ಉಸಿರೇ ನಿಂತು ಹೋದಂತೆ ಆಗುತ್ತದೆ ಎಂದು ತನ್ನ ವೇದನೆಯನ್ನು ಸಹ ಹೇಳತೊಡಗಿತು.
ಹೀಗೆ ಇವು ಮಾತನಾಡುತ್ತಿದ್ದಾಗ ಪವನ ಮತ್ತು ಪೃಥ್ವಿಯ ಆಗಮನವಾಗುತ್ತದೆ. ಆಗ ಏನು ನಿಮ್ಮ ಪಯಣ ಈ ಕಡೆಗೆ ಸಾಗಿದೆ ಬಹಳ ದೂರ ಪ್ರಯಾಣಿಸಿದ್ದೀರಿ ಎಂದು ಅವನ ಕ್ಷೇಮಗಳನ್ನು ವಿಚಾರಿಸಿದವು. ಅವುಗಳಿಗೂ ಸಹ ತುಂಬಾ ಸಂಕಟ ನೋವುಗಳು ಒದಗಿದ್ದರಿಂದಲೇ ಕಾಂತಾರವನ್ನು ಹುಡುಕಿ ಬಂದದ್ದು ಆಗಿತ್ತು. ಪವನ ಏನು ಹೇಳೋದು ಬಿಡು ಈ ಮಾನವ ದೆಸೆಯಿಂದಾಗಿ ನನ್ನ ಜೀವನವೇ ಸಾಕಾಗಿದೆ. ವಾಹನಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ನನಗೆ ಇಂಗಾಲವನ್ನು ಕುಡಿದು ಕುಡಿದು ನನ್ನ ಶ್ವಾಸಕೋಶಗಳೆ ಹೊರಬರುವ ಹಾಗಾಗಿದೆ. ಕೇವಲ ಊರಲ್ಲಿ ಇರುವ ಅಂಗಡಿಗೂ ಹೋಗಿ ಬರಬೇಕಾದರೆ ವಾಹನ ತೆಗೆದುಕೊಂಡು ಹೋಗುವರು. ಹೀಗೆ ಮುಂದುವರೆದರೆ ನಾನು ಸತ್ತೇ ಹೋಗುತ್ತೇನೆ ಎಂದಿತು. ಅದೇ ರೀತಿ ಪೃಥ್ವಿಯು ಸಹ ಹೌದು ಮಾರಾಯ ನನಗಂತೂ ಜೀವನವೇ ಸಾಕಾಗಿದೆ. ನನ್ನಲ್ಲಿ ಮಾಡದಿರುವ ಕೆಲಸ ಯಾವುದು ಇಲ್ಲ ನನ್ನಲ್ಲಿ ಆ ಹಾಳು ಪ್ಲಾಸ್ಟಿಕ್ ಅಂತೆ ಅದನ್ನು ಎಸೆದು ಮಲಿನ ಮಾಡುತ್ತಿದ್ದಾರೆ. ಫಲ ಕೊಡಬೇಕೆಂದು ಎಷ್ಟು ಉತ್ಸಾಹದಿಂದ ಇರುತ್ತೇನೆ,
ಅದು ಇದು ರಾಸಾಯನಿಕ ತೈಲಗಳನ್ನು ಬಳಸಿ ನನ್ನ ಫಲವತ್ತತೆಯನ್ನು ಹಾಳು ಮಾಡುತ್ತಿದ್ದಾರೆ. ಆ ರಾಸಾಯನಿಕ ತೈಲ ಕುಡಿದು ಕುಡಿದು ಸಾಕಾಗಿ ಹೋಗಿದೆ. ಯಾವಾಗ ಸಾಯುವೆನು ಗೊತ್ತಿಲ್ಲ ಎಂದು ಹೇಳಿತು. ಹೀಗೆ ಎಲ್ಲವೂ ಒಂದಕ್ಕೊಂದು ಮಾತನಾಡಿಕೊಳ್ಳುತ್ತಾ ಹೀಗೆ ಮುಂದುವರೆದರೆ ಪವನ ನಾನು ಸತ್ತು ಹೋಗುತ್ತೇನೆ ಎಂದಿತು. ಆಗ ಕಾಂತಾರ ಮತ್ತು ಪೌರಾಣಿಕೆ ಹೇ ಮಾರಾಯ ಹಂಗೆಲ್ಲಾ ಮಾಡಬಿಟ್ಟಿಯೋ ನೀನು ನಾವು ಅಳುವುದನ್ನು ಬಿಟ್ಟು ಬೇಸರವಾಗುವುದನ್ನು ಬಿಟ್ಟು ನೋವುಗಳು ಎಷ್ಟೇ ಆಗಲಿ ಕಷ್ಟಗಳು ಎಷ್ಟೇ ಬರಲಿ ಆ ಮಾನವನಿಗೆ ತಕ್ಕ ಪಾಠ ಕಲಿಸಬೇಕು. ಈ ಮಾನವ ಜಾತಿ ನಮ್ಮನ್ನು ನೋಡಿದರೆ ಭಯ ಬೀಳಬೇಕು. ನಮ್ಮಿಂದಲೇ ಅವರು ಬದುಕಿದ್ದಾರೆ ಎಂಬುದನ್ನು ಮರೆತು ನಮ್ಮನ್ನು ಹಾಳು ಮಾಡುತ್ತಿದ್ದಾರೆ, ತೊಂದರೆ ನೀಡುತ್ತಿದ್ದಾರೆ ಅಲ್ಲದೆ ದಿನೇ ದಿನೇಗಳು ಕಳೆದಂತೆ ಪ್ರಾಣವನ್ನು ತೆಗೆಯುವ ಮಟ್ಟಕ್ಕೆ ಬಂದಿದ್ದಾರೆ. ಆದ್ದರಿಂದ ನಾವು ಇವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಮಾತನಾಡುವಾಗ ಒಬ್ಬ ಮನುಷ್ಯ ಆ ಮಾತುಗಳನ್ನು ಕೇಳಿ ಇನ್ನೊಬ್ಬನ ಬಳಿ ಹೋಗಿ ಹೇಳಿದನು. ಆತ ಮಾನವ ಜಾತಿಯಲ್ಲಿ ಒಳ್ಳೆಯ ಮನುಷ್ಯನಾದ್ದರಿಂದ ಇನ್ನಾದ್ರೂ ತಿಳ್ಕೋರಿ ಇಲ್ಲ ಅಂದ್ರೆ ಅವರು ಎಲ್ಲ ಪ್ರತಿಭಟನೆ ಎದ್ರೆ ದೊಡ್ಡ ಪ್ರಚಂಡ ವಾತಾವರಣ ಸೃಷ್ಟಿಯಾಗುತ್ತವೆ ಎನ್ನುತ್ತಾನೆ.
–ಸುಷ್ಮಾ ಹೆಳವಗೋಳ
