ಮನಸು ಸರೋವರ: ವೀಣಾ ರಮೇಶ್, ಮರವಂತೆ

ಅದ್ಯಾಕೋ. ಪ್ರಿಯಾ ಈ ನಡುವೆ ತುಂಬಾ ಮೌನವಾಗಿರುತ್ತಿದ್ದಳು. ಹತ್ತು ಸಲ ಕರೆದರೆ ಒಮ್ಮೆ ಮಾತ್ರ ಮಾತಾಡುವಳು. ಕಾರಣ ಏನಿರಬಹುದು, ? ಸದಾ ಮಂಕಾಗಿರುತ್ತಾಳೆ, ಏನಾದರೂ ಕೇಳಲು ಹೋದರೆ ಅಳುತ್ತಾ ಕುಳಿತಿರುತ್ತಾಳೆ. ಇದನ್ನು ಹಲವು ದಿನಗಳಿಂದ ಗಮನಿಸುತ್ತಿದ್ದ ಮೃದುಲಾಗೆ ಯಾಕೋ ಪ್ರಿಯಾಳ ಈ ವರ್ತನೆ ಚಿಂತೆ ಗಿಟ್ಟುಕೊಂಡಿತ್ತು. ಸದಾ ಲವಲವಿಕೆಯಿಂದ ಇರುತ್ತಿದ್ದ ಪ್ರಿಯಾ. ಈ ನಡುವೆ ಮೂಕಿಯಾಗಿರುತ್ತಿದ್ದಳು. ಫೋನ್ ಮಾಡಿದರೂ ಉತ್ತರ ನೀಡದ ಪ್ರಿಯಾ ಸದಾ ಮೌನವಾಗಿರುತ್ತಿದ್ದಳು. ಪ್ರಿಯಾ ಇಲ್ಲದ ಕಾಲೇಜಿನ ದಿನಗಳು ತುಂಬಾ ಬೋರು ಹೊಡೆಸುತಿತ್ತು ಮೃದುಲಾಗೆ. ಇದಕ್ಕೊಂದು ಪರಿಹಾರ ಹುಡುಕಬೇಕೆಂದು ಮೃದುಲಾ ಆಲೋಚಿಸಿದಳು. ತುಂಬಾ ದಿನಗಳಿಂದ ಕಾಲೇಜಿಗೆ ಬರದೇ ಇದ್ದ ಪ್ರಿಯಾ. ಅಂದು ಪ್ರಿಯಾಳನ್ನು ಕಾಲೇಜ್ ಕ್ಯಾಂಪಸ್ ನಲ್ಲಿ ನೋಡಿದಳು. ಹಾಗೆ ಪ್ರಿಯಾಳನ್ನು ಮಾತನಾಡಿಸುತ್ತಾ, ಕೇಳಿದಳು ಮೃದುಲಾ “ಪ್ರಿಯಾ. ನಾಳೆ ಎಲ್ಲರೂ ಪಿಕ್ನಿಕ್ ಗೆ ಹೋಗೋಣವಾ. ?. ಸ್ವಲ್ಪನಾದ್ರೂ ವಾತಾವರಣ ಬದಲಾಗುತ್ತೆ, ನಿನಗೂ ಚೇಂಜ್ ಸಿಗತ್ತೆ” ಯಾಕೋ ಈ ನಡುವೆ ನೀನು ಹೆಚ್ಚು ಮೌನವಾಗಿರುತ್ತೀಯಾ. ಅಂದಳು. “ ‘ನೊ. ನೋ . ನಾನು. ಬರಲ್ಲ. ಮೃದು ಪ್ಲೀಸ್ ‘ ಪ್ರಿಯಾ ಅಳುತ್ತಾ ಅಂದಳು. “ಏನಾಗಿದೆ ಪ್ರಿಯಾ. ನಿನಗೆ ? ಯಾಕೆ ಈ ಮೌನ ? ತುಂಬಾ ಅಸಹನೀಯ ಅನ್ನಿಸುತ್ತಿದೆ ಕಣೆ”. ನನಗೆ. ಗೆಳತಿಯನ್ನು ಒತ್ತಾಯಿಸುತ್ತಾ ಅಂದಳು.

ಮೃದುಲ. ಬೇಜಾರಲ್ಲಿದ್ದುದ್ದನ್ನು ಊಹಿಸಿದ ಪ್ರಿಯಾ ನಿಧಾನಕ್ಕೆ ಅಂದಳು. ” “ಗೊತ್ತಿಲ್ಲ. ಮೃದು. ಯಾಕೋ. ಒಂಥರಾ ಭಯ ನನ್ನನ್ನು ಕಾಡುತ್ತಿದೆ”. ಮನೆಗೆ ಹೋದರೂ ಭಯ. ಹೊರಗೆ ಬಂದರು. ಭಯ. ನಾನಿಲ್ಲಿ ಒಂಟಿ ಅಂತ ಅನ್ನಿಸುತ್ತಿದೆ, ನನಗೆ ಯಾರು ಇಲ್ಲ ಅಂತ ಅನ್ನಿಸುತ್ತಿದೆ. ” ಮತ್ತೆ ಮುಖ ಮುಚ್ಚಿ ಅಳಲು ಶುರು ಮಾಡಿದಳು. ” ನಾನೆಲ್ಲೋ ಡಿಪ್ರೆಷನ್ ಗೆ ಹೋಗುತ್ತಿದ್ದೇನೆನೋ ಅಂತ ಆನ್ನಿಸುತ್ತಿದೆ ಮೃದು “. ನನಗ್ಯಾಕೆ ಹೀಗೆ. . ಹೀಗಾಗುತ್ತಿದೆ. ? ಗೊತ್ತಾಗುತ್ತಿಲ್ಲ. !? ಪ್ರಿಯಾಳ ಮಾತಿಗೆ ಮೃದು ಶಾಕ್ ಆದಳು, , ಅರೆ . !? . ಪ್ರಿಯಾ ಏನು ಕಡಿಮೆಯಾಗಿದೆ. ನಿನಗೆ ಬೇಕಾದಷ್ಟು ದುಡ್ಡು, ಮನೆ, ಕಾರು, ಬಂಗಲೆ ಇದೆಲ್ಲಾ ಇರುವಾಗ, ಕೇಳಿದ್ದೆಲ್ಲವನ್ನು ಕೊಡಿಸುವ ಅಪ್ಪ ಅಮ್ಮ ಕ್ಷಣ ಮಾತ್ರ ದಲ್ಲಿ ನಿನ್ನ ಆಸೆಗಳನ್ನು ಪೂರೈಸುತ್ತಾರೆ. ಹೀಗಿರುವಾಗ ನಿನಗೇನು ಚಿಂತೆ ಆಶ್ಚರ್ಯದಿಂದ ಕೇಳಿದಳು. ನೀನು ಕೇವಲ ನನ್ನ ಹೊರಗಿನ ಸುಖ ನೋಡಿ ಮಾತನಾಡುತ್ತಿದ್ದೀಯಾ ಮೃದು. ಆದರೆ. ನನ್ನೊಳಗಿನ ಮಾನಸಿಕ ಸುಖ ಅಷ್ಟು ಶ್ರೀಮಂತ ವಾಗಿಲ್ಲ. ಆ ವಿಷಯದಲ್ಲಿ ನೀನೆ ಅದೃಷ್ಟವಂತೆ ಪದ್ಮಜಾ ಆಂಟಿ ನಿನ್ನನ್ನು ತುಂಬಾ ಕೇರ್ ಮಾಡ್ತಾರೆ ಕಣೆ. !

ಪ್ರಿಯಾ ಬೇಸರದಿಂದ ಅಂದಳು. ಓಹ್. ಸಾರೀ. ಪ್ರಿಯಾ. ನನ್ನಿಂದ ನೋವಾಗಿದ್ದರೆ ಕ್ಷಮಿಸು, , ಹಾಗೆ ಒಂದು ಕ್ಷಣ ಮೌನಕ್ಕೆ ಜಾರಿದಳು ಮೃದುಲಾ. ಪ್ರಿಯಾ ಯಾಕೆ ಹೀಗಾದಳು. !
ನಾನಂದು ಕೊಂಡಂತೆ ಪ್ರಿಯಾ ಸುಖವಾಗಿಲ್ಲ. ಅವಳಲ್ಲಿ ಏನೋ ತಾಕಲಾಟ ಶುರುವಾಗಿತ್ತು.
ಉತ್ತರವಿಲ್ಲದ ಅವಳ ಪ್ರಶ್ನೆಗಳಿಗೆ. ಅವಳ ಮೌನವೇ ಉತ್ತರವಾಯ್ತು. ಹೇಗಾದರೂ ಇದನ್ನು ಬೇಧಿಸಬೇಕು ಅಂದುಕೊಂಡಳು. ಮೃದುಲ ಪ್ರಿಯಾಳಿಗೆ ಸಮಾಧಾನ ಹೇಳಿ ಮನೆಯತ್ತ ಹೆಜ್ಜೆ ಹಾಕಿದಳು. ದಾರಿಯುದ್ದಕ್ಕೂ. ಮನಸ್ಸು ಪ್ರಿಯಾಳನ್ನು ನೆನೆಯುತಿತ್ತು. ಮನೆಗೆ ಬಂದವಳೇ ರೂಮು ಸೇರಿ ಕುಳಿತಳು. ಮಗಳು ಮಾತಾಡದೆ ಇಷ್ಟು ಹೊತ್ತು ರೂಮು ಸೇರಿಕೊಂಡಿದ್ದು ನೋಡಿ, ಪದ್ಮಜಾ ಆತಂಕ ಗೊಂಡಳು. ರೂಮಿನಲ್ಲಿ ಇಣುಕಿದಾಗ ಮಗಳು ಏನೋ ಗಹನವಾದ ಯೋಚನೆಯಲ್ಲಿ ಮುಳುಗಿದಂತೆ ಕಂಡಳು. ಇದೇನು ಮೃದು ಇಷ್ಟೊಂದು ಸೀರಿಯಸ್ ಆಗಿ . ಕುಳಿತಿದ್ದೀಯಾ ?. ” ಪದ್ಮಜಾ ಕೇಳಿದರು. ಅಮ್ಮನಿಗೆ ಹೇಳಲೋ. ಬೇಡವೋ ಅಂದುಕೊಂಡಳು. ಅಮ್ಮ ಒತ್ತಾಯಿಸಿದಾಗ, ಪ್ರಿಯಾಳ ವಿಷಯ ತಿಳಿಸಿದಳು. ಓಹ್. . ಇದಾ ವಿಷಯ. !? “ಒಮ್ಮೆ ಪ್ರಿಯಾಳನ್ನು ಮನೆಗೆ ಕರೆದುಕೊಂಡು ಬಾ. ನಾನು ಅವಳ ಹತ್ತಿರ ಮಾತನಾಡುತ್ತೇನೆ”. ಅಂದರು ಪದ್ಮಜಾ. ಆಯ್ತು ಅಮ್ಮ. ಹೇಗಾದರೂ ಮಾಡಿ ಅವಳ ಬಾಯಿ ಬಿಡಿಸಬೇಕು. ನಾನು ನಾಳೆ ಅವಳನ್ನು ಮನೆಗೆ ಕರೆದುಕೊಂಡು ಬರುತ್ತೇನೆ”. ಎಂದು ಹಾಸಿಗೆಯಲ್ಲಿ ಮಗ್ಗುಲಾದಳು.
ಮಾರನೇ ದಿನ ಬೆಳಿಗ್ಗೆ ಕಾಲೇಜು ಮುಗಿಸಿ ಪ್ರಿಯಾಳನ್ನು ತನ್ನ ಮನೆಗೆ ಕರೆದುಕೊಂಡು ಬಂದಳು ಮೃದುಲ.
ಬಾ . ಪ್ರಿಯಾ. ಹೇಗಿದ್ದಿಯಮ್ಮ . , ಕಾಲೇಜು ಆಯ್ತಾ ಪ್ರಿಯಾಳನ್ನು ಕೇಳಿದರು. ಪ್ರಿಯಾಳನ್ನು ಗಮನಿಸಿದ ಮೃದುಲಾಳ ತಾಯಿ ಪದ್ಮಜಾ. ” ಹೌದು. ಪ್ರಿಯಾ. ಮೊದಲಿನoತಿಲ್ಲ. ! ನಿಸ್ತೇಜವಾದ ಕಣ್ಣುಗಳು, ಇಳಿಬಿದ್ದ ಕೆನ್ನೆ, ಯಾವುದರಲ್ಲೂ ಉತ್ಸಾಹ ವಿದ್ದಂತೆ ಕಾಣಿಸಲಿಲ್ಲ. ಯಾಕೆ ಈ ಹುಡುಗಿ ಹೀಗಾಗಿದ್ದಾಳೆ ಪದ್ಮಜಾ ಚಿಂತಿಸಿದರು. ನಿಧಾನವಾಗಿ ಪ್ರಿಯಾಳನ್ನು ಮಾತಿಗೆ ಎಳೆದರು ಪದ್ಮಜಾ. ಅವಳನ್ನು ಓಲೈಸುತ್ತಾ ಮಾತಾಡಿಸಿದ ಪದ್ಮಜಾ. ಕೆಲವೊಂದು ವಿಷಯಗಳು ಹೊರಬಂದವು ಹೌದು ಆಂಟಿ. ” ಅಪ್ಪ, ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರು. ಮನೆಯಲ್ಲಿ ನನ್ನನ್ನು ಕೇಳುವವರೇ ಇಲ್ಲ. ಊಟ ಮಾಡಿದ್ಯಾ . ? ತಿಂಡಿ ತಿಂದ್ಯಾ ಅಂತ. ಅಮ್ಮ ಅಪ್ಪ ಸದಾ ಜಗಳದಲ್ಲೇ ದಿನ ಕಳೆಯುತ್ತಾರೆ. ಸಣ್ಣ ಪುಟ್ಟ ವಿಷಯಗಳಿಗೆಲ್ಲ ಕಿತ್ತಾಡುವ ಇವರಿಬ್ಬರೂ ದಿನಾ ಮನೆಯನ್ನು ರಣರಂಗ ಮಾಡುತ್ತಾರೆ”. ಇವರಿಬ್ಬರ ಜಗಳದ ಮಧ್ಯೆ ನಾನು ಅಪ್ಪ, ಅಮ್ಮನ ಮಧ್ಯೆ ಕೂಸು ಬಡವಾಯ್ತು ಅನ್ನೋ ತರಹ ನಾನು ನನ್ನ ಪಾಡಿಗೆ ಇರ್ತಿದ್ದೆ, ಆದರೆ ಈ ನಡುವೆ ನನಗೆ ತುಂಬಾ ಕಷ್ಟ ಅನ್ನಿಸುತಿತ್ತು. ಇಷ್ಟು ವರ್ಷಗಳಿಂದಲೂ ಹೀಗೆ ಇವರಿಬ್ಬರೂ ಕಿತ್ತಾಡುತ್ತಲೇ. ದಿನ ಕಳೆದರು. ಅಮ್ಮ ಏನೋ ಒಂದು ಬೇಯಿಸಿ ಇಟ್ಟು ಹೋಗೋಳು. ಬಾಕ್ಸ್ ನಲ್ಲಿ ತಿಂಡಿ ಇಟ್ಟಿದ್ದೆ ತಿನ್ನು. ದುಡ್ಡು ಬೇಕಿದ್ದರೆ ಬೀರುನಲ್ಲಿ ಇದೆ ತಗೋ ! ಇಷ್ಟೇ ಮಾತುಗಳು. ನಮ್ಮಗಳ ಮಧ್ಯೆ ಇರುತಿತ್ತು. ಅಪ್ಪ ಆಫೀಸ್ ನಿಂದ ಮನೆಗೆ ಎಷ್ಟು ಹೊತ್ತಿಗೆ ಬರುತ್ತಾರೋ ಗೊತ್ತಿಲ್ಲ. ಇಷ್ಟೇ ಮತ್ತೆ ರಾತ್ರಿಯಾಯಿತು, ಬೆಳಗಾಯಿತು ಇದು ನನ್ನ ಪ್ರಪಂಚ. ಒಂದು ಓಡಾಟ ಇಲ್ಲ, ಒಡನಾಟ ಇಲ್ಲ. ಜೀವನ ಪೂರ್ತಿ ಕಿತ್ತಾಟವೇ ಆಯ್ತು ಅಮ್ಮ ಅಪ್ಪನದು. “ ಮತ್ತೆ ರಜ ಬಂದರೆ ಜಗಳ. ನನಗೂ ಆ ಮನೆಯಲ್ಲಿ ಒಂಟಿತನ ಕಾಡುತ್ತಿದೆ. ” ಪ್ರಿಯಾ ಒಂದೇ ಸಮನೆ ಅಳಲು ಶುರು ಮಾಡಿದಳು. ಪದ್ಮಜಾ ಅವಳನ್ನು ಸಂತೈಸುತ್ತಾ “ ನೋಡು ಪ್ರಿಯಾ. ಈಗ ನೀನು ಓದುವ ಹುಡುಗಿ ಪ್ರಪಂಚ ಜ್ಞಾನ ತಿಳಿದವಳು. ನಮ್ಮ ಕಾಲದ ಹಾಗೆ ನೀನು ದಡ್ಡಿಯಲ್ಲ, ಅಥವಾ ಆಗ ನಮಗೆ ಸಿಕ್ಕ ಪರಿಸರ ನಮ್ಮನ್ನು ಹಾಗೆ ಮಾಡಿತ್ತು ಅಷ್ಟೇ, ಈಗ ಹಾಗಲ್ಲಮ್ಮ. ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಜಾಣ್ಮೆ, ವಿವೇಕ ನಿನ್ನಲ್ಲಿದೆ, ನಮ್ಮ ಕಾಲದಲ್ಲಿಯೂ ಕೂಡ ಈ ಜಗಳ, ದೊಂಬಿ, ಗಲಾಟೆ ಕೂಡ ಇದ್ದಿತ್ತು ಆದರೆ ನನ್ನ ಅಮ್ಮ, ಅಪ್ಪನ ಕಂಟ್ರೋಲ್ ನಲ್ಲಿ ಇರುತ್ತಿದ್ದಳು, ಅಂದರೆ ಅಪ್ಪ ಅಮ್ಮನನ್ನು ಹೆದರಿಸಿ, ಬೆದರಿಸಿ ಮಾಡುತ್ತಾರೆ ಅಂತ ಅಲ್ಲ, ಅಂದರೆ ಅಪ್ಪ ಯಾವತ್ತೂ ಅಮ್ಮನನ್ನು ಹಾಗೆ ನೋಡಿದ್ದೆ ಇಲ್ಲ. ಆಗ ಅಪ್ಪನಿಗೂ ತುಂಬಾ ಜವಾಬ್ದಾರಿ ಇದ್ದಿತ್ತು, ಅಮ್ಮನ ಮಾತುಗಳನ್ನು ಕೇಳುತ್ತಿದ್ದರು, ಪ್ರತಿಯೊಂದಕ್ಕೂ ಕೂಡ ಅಮ್ಮನ ಸಲಹೆ ಕೇಳುತ್ತಿದ್ದರು ಅಂದರೆ ಅಮ್ಮನಿಗೆ ಏನೋ ಒಂದು ಗೌರವ ಅಪ್ಪನ ಮೇಲೆ” ನಾನು ಏನಾದರೂ ಅಂದರೆ ಅಪ್ಪನಿಗೆ ನೋವಾಗುತ್ತದೆ ಅಂತ ಅಮ್ಮ ಎಂದಿಗೂ ಎದುರು ಮಾತಾಡಿದವಳೇ ಅಲ್ಲ ಅಮ್ಮ . ಯಾಕಂದರೆ ಅವಳಲ್ಲಿ ಭಯ ಇತ್ತು, ಹಿರಿಯರಲ್ಲಿ ಗೌರವ, ಮಕ್ಕಳ ಮುಂದೆ ನಮ್ಮ ಕಚ್ಚಾಟ ನಾವು ಇದನ್ನೆಲ್ಲಾ ತೋರಿಸಬಾರದು ಏನಿದ್ದರೂ ಅದು ನಾಲ್ಕು ಗೋಡೆಗಳ ಮಧ್ಯೆ ಸರಿದು ಹೋಗಬೇಕು. ಅನ್ನುವುದು ಅಮ್ಮನ
ಅಭಿಪ್ರಾಯ. ಆಗ. ಅಪ್ಪ ಮಾತ್ರ ದುಡಿಯುವವನು ಅಮ್ಮನಿಗೆ ಆರ್ಥಿಕ ಸ್ವಾತಂತ್ರ‍್ಯವಿರಲಿಲ್ಲ, ಅಮ್ಮ ಮನೆಯ ಕರ್ತವ್ಯ ಹಾಗೂ ಆಗು ಹೋಗುಗಳನ್ನು ನಿಭಾಯಿಸುತ್ತಿದ್ದಳು. ಅಲ್ಲಿಗೆ ಯಾರೋ ಒಬ್ಬರು ತಗ್ಗಿ ಬಗ್ಗಿ ನಡೆದುಕೊಂಡು ಒಬ್ಬರನ್ನೊಬ್ಬರು ಗೌರವಿಸುತ್ತಾ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದರು. ಆಗ ಸಮಸ್ಯೆಗಳು ದೊಡ್ಡದಾಗಿರುತ್ತಿರಲಿಲ್ಲ. ನಮ್ಮ ಕಾಲದಲ್ಲಿ ಎಲ್ಲವನ್ನೂ ಅಮ್ಮ ತೂಗಿಸಿಕೊಂಡು ಹೋಗುತ್ತಿದ್ದಳು ಮಕ್ಕಳಿಗೆ ಯಾವ ಜವಾಬ್ದಾರಿ ಕೊಡದೆ ಅವರ ಬೇಕು ಬೇಡಗಳನ್ನು ಅವಳೇ ಗಮನಿಸುತ್ತಿದ್ದಳು ಇದರಿಂದ ನಮಗೆ ಯಾವ ಸಮಸ್ಯೆ ದೊಡ್ಡದು ಅಂತ ಅನ್ನಿಸುತ್ತಿರಲಿಲ್ಲ. ಈಗ ನಾನು ಕೂಡ ಅದೇ ರೀತಿ ತೂಗಿಸಿಕೊಂಡು ಹೋಗುತ್ತೇನೆ.

ಇಲ್ಲಿ ಮಕ್ಕಳು ನಮ್ಮ ಉಪದೇಶ ಕೇಳಲ್ಲ ಅವರು ನಮ್ಮನ್ನು ಅನುಸರಿಸುತ್ತಾರೆ. ಈಗ ಹಾಗಲ್ಲ ಪ್ರಿಯಾ ಗಂಡ, ಹೆಂಡತಿ ಇಬ್ಬರೂ ದುಡಿಯುವವರು, ಇಬ್ಬರೂ ಆರ್ಥಿಕವಾಗಿ ಸ್ವತಂತ್ರರು, , ಕಛೇರಿ ಒತ್ತಡ, ಮನೆ ಕೆಲಸದ ಒತ್ತಡ ಎರಡನ್ನೂ ನಿಭಾಯಿಸ ಬೇಕಾದ ಪ್ರಸಂಗ, ಈಗ ಗಂಡ ಮತ್ತು ಹೆಂಡತಿ ದುಡಿಯಲೇ ಬೇಕಾದ ಅನಿವಾರ್ಯತೆ ಇದೆ, ಇದರಿಂದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಜಗಳ,
ಮನಸ್ತಾಪಗಳು ಶುರುವಾಗುತ್ತವೆ. ಇಬ್ಬರು ಹೊಂದಿಕೊಂಡು ನಿಭಾಯಿಸಿದಲ್ಲಿ ಯಾವ ಸಮಸ್ಯೆ ಕೂಡ ಇರುವುದಿಲ್ಲ, ಆದರೆ ಇಲ್ಲಿ ಏನೋ ಸಮಸ್ಯೆ ಯಾಗಿದೆ ಅದನ್ನು ಸರಿಪಡಿಸಬೇಕು ಅಷ್ಟೇ ಪ್ರಿಯಾ ಇದರಿಂದ ಈ ವಾತಾವರಣ ನಿನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿದೆ. ಆದರೆ ನೀನು ಮುಂದೆ ಭವಿಷ್ಯ ಕಟ್ಟಿಕೊಳ್ಳುವವಳು ನೀನು ಹೀಗೆ ಕೊರಗಿದರೆ ಸಮಸ್ಯೆ ಪರಿಹಾರ ಆಗಲ್ಲ. ಬದಲಾಗಿ ನಿನ್ನ ಕೈಯಾರೆ ನಿನ್ನ ಭವಿಷ್ಯ ಹಾಳು ಮಾಡಿಕೊಳ್ಳುತ್ತೀಯಾ ಅಷ್ಟೇ. ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ಸಮಸ್ಯೆ ಇದೆ ಪ್ರಿಯಾ, . ! ಇಂತಹ ಸಮಸ್ಯೆಗಳು ಎದುರಾದಾಗ ಎಷ್ಟೋ ಮನೆಗಳಲ್ಲಿ ಮಕ್ಕಳು ಅಡ್ಡದಾರಿ ಹಿಡಿಯುತ್ತವೆ. ಇದು ಅಪ್ಪ, ಅಮ್ಮಂದಿರ ಬೇಜವಬ್ದಾರಿ ವರ್ತನೆ, ಆದ್ದರಿಂದ ನೀನು ಮೊದಲು ಈ ಸಮಸ್ಯೆಯಿಂದ ಹೊರಗೆ ಬಾ, ಎಲ್ಲದಕ್ಕೂ ಪರಿಹಾರ ಇದೆ, ಮೊದಲು ನಿನ್ನ ಓದು ಮುಗಿಸು ಅದು ಅರ್ಧಕ್ಕೆ ನಿಂತರೆ ನಿನ್ನ ಭವಿಷ್ಯ ಹಾಳಾಗುತ್ತೆ, ಅಪ್ಪ ಅಮ್ಮನಿಗೆ ಈಗ ನೀನು ಬುದ್ಧಿ ಹೇಳಬೇಕಿದೆ ಯಾವುದನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಡ ನಾವು ಗಟ್ಟಿಯಾಗಲು, ಪ್ರಪಂಚ ಎದುರಿಸಲು ಎಲ್ಲವೂ ಬೇಕು ಮೊದಲು ನೀನು ಕ್ರಿಯೇಟಿವ್ ಅಗಿರು, ನಮ್ಮನ್ನು ಆಳಲು ನಮ್ಮ ಮನಸ್ಸಿನ ಕೈಗೆ ಬುದ್ಧಿ ಕೊಡೋದು ಬೇಡ, ಅದನ್ನು ನಾವೇ ಆಳೋಣ, ” ಪದ್ಮಜಾಳ ಮಾತು ಸಾಗುತ್ತಲೇ ಇತ್ತು, ಇತ್ತ ಮೃದುಲ ಅಮ್ಮನ ಮಾತಿಗೆ ಬೆರಗಾದಳು, ಎಷ್ಟೊಂದು ತಿಳಿದುಕೊಂಡಿದ್ದಾಳೆ ಅಮ್ಮ. ಯಾವ ಕೌನ್ಸೆಲ್ಲರಿಗೂ ಕಡಿಮೆಯಿಲ್ಲ ಅಂದು ಕೊಂಡಳು. ಅವಳಿಗೆ ಪ್ರಿಯಾ ಮೊದಲಿನಂತೆ ಆದರೆ ಸಾಕಿತ್ತು. ಭೇಷ್ ಅಮ್ಮ. ನೀನು ಎಷ್ಟು ಪ್ರಬುದ್ಧಳು. ಅಮ್ಮನ ಬಗ್ಗೆ ಹೆಮ್ಮೆ ಅನ್ನಿಸಿತು ಮೃದುಲಾಗೆ. ಪ್ರಿಯಾ ಮೊದಲಿನಂತೆ ಆಗಲು ಕಷ್ಟಪಡುತ್ತಿದ್ದಳು. ಯಾಕೆಂದರೆ ಮೃದುಲಾ ಕೂಡ ಆ ಮನೆಯ ಒಂದು ಭಾಗವಾಗಿ ಹೋಗಿದ್ದಳು. ಪದ್ಮಜಾ ಆಂಟಿ ಹೇಳಿದ ಎಲ್ಲಾ ಮಾತುಗಳು ಪ್ರಿಯಾಳ ಕಿವಿಯಲ್ಲಿ ಗುoಯ್ ಗುಡುತ್ತಿದ್ದವು.
ಮೃದುಲಾ ಮನೆಯಿಂದ ಪ್ರಿಯಾ ಬಿಳ್ಕೊoಡು ಪ್ರಿಯಾ ಮನೆಗೆ ಬಂದಾಗ ಯಾರು ಏನನ್ನೂ ಕೇಳಲಿಲ್ಲ ಅವರವರ ಪಾಡಿಗೆ ಕೆಲಸ ಮಾಡಿಕೊಂಡು ಇದ್ದಿದ್ದರು. ಬಂದವಳೇ ಹಾಸಿಗೆಗಯ ಮೇಲೆ ಮೈಚಾಚಿದಳು. ಇದಾದ ಸ್ವಲ್ಪ ದಿನಕ್ಕೆ ಪ್ರಿಯಾ ಏನೋ ನಿರ್ಧಾರ ಮಾಡಿದವಳಂತೆ ಅಮ್ಮನ ಹತ್ತಿರ ಬಂದು ತಾನು ಹಾಸ್ಟೆಲ್ ನಲ್ಲಿ ಓದುತ್ತೆನೆಂದು ಹೇಳಿದಳು. ಸ್ವಲ್ಪ ದಿನ ನಾನು ಅಲ್ಲಿಯೇ ಇರುತ್ತೇನೆ ನನಗೆ ಈ ಉಸಿರು ಕಟ್ಟುವ ವಾತಾವರಣ ಸಾಕಾಗಿ ಹೋಗಿದೆ. ಈ ಮನೆಯಲ್ಲಿ ನನ್ನನ್ನು ಕೇಳುವವರೇ ಇಲ್ಲದಾಗಿದೆ. ನಿಮಗಿಬ್ಬರಿಗೂ ನಿಮ್ಮದೇ ಪ್ರತಿಷ್ಟೆ ಹೆಚ್ಚಾಯಿತು. ದಿನ ಬೆಳಗಾದರೆ ನಿಮ್ಮ ಜಗಳ, ನಿಮ್ಮ ಕಿರುಚಾಟ ನನಗೆ ಸಾಕಾಗಿದೆ. ನಿಮ್ಮ ಮಧ್ಯೆ ನಾನು ಕಳೆದು ಹೋಗುತ್ತಾ ಇದ್ದೀನಿ, ಇಷ್ಟು ಹೇಳಿ ತನ್ನ ಬ್ಯಾಗ್ ಪ್ಯಾಕ್ ಮಾಡಲು ಶುರು ಮಾಡಿದಳು. ಪ್ರಿಯಾ, . ಅಮ್ಮ, ಅಪ್ಪ ಬಂದು ಬೇಡ ಎಂದು ಒತ್ತಾಯಿಸಿದರು, ಕೇಳದೆ ಮುಂದಿನ ತಯಾರಿ ಮಂಗಳೂರಿನತ್ತ ತನ್ನ ಪ್ರಯಾಣ ಬೆಳೆಸಿದಳು. ಮಗಳು ಹಾಸ್ಟೆಲ್ ನಲ್ಲಿ ಓದುವುದು ನೇತ್ರಾಳಿಗೆ ಯಾಕೋ ಸಂಕಟವಾಗುತಿತ್ತು. ನಾವೇ ಅವಳನ್ನು ಸರಿಯಾಗಿ ವಿಚಾರಿಸಿ ಕೊಂಡಿಲ್ಲ. ಇಷ್ಟು ದಿನವಾದರೂ ನಮಗೆ ಹೊಳೆದೇ ಇಲ್ಲ. ನಾವು ನಮ್ಮ ಕೆಲಸ, ನಮ್ಮ ಜಗಳದಲ್ಲೇ ದಿನ ಕಳೆದೆವು ಒಂಥರಾ ಬದುಕು ಯಾoತ್ರಿಕವಾಯಿತು, ನಮ್ಮ ಹತ್ತಿರ ದುಡ್ಡು ಕಾರು ಬಂಗಲೆ ಕಾರು ಎಲ್ಲವೂ ಇದೆ ಆದರೆ ನೆಮ್ಮದಿನೇ ಇಲ್ಲ, ನಾವು ತಪ್ಪು ಮಾಡಿದ್ದು ನಿಜ, ಖರ್ಚಿಗೆ ದುಡ್ಡಿತ್ತು. ಓಡಾಡಲು ಎಲ್ಲವೂ ಇತ್ತು, ಆದರೆ ಅವಳಿಗೆ ಬೇಕಾದ ಪ್ರೀತಿ ನಮ್ಮಿಂದ ಸಿಗಲೇ ಇಲ್ಲ. ಅದರೆ ಅವಳು ಇಷ್ಟು ಹಠ ಹಿಡಿತಿದ್ದಾಳೆ, ಹೋಗಲಿ ಒಂದು ಸ್ವಲ್ಪ ದಿನ ಬದಲಾವಣೆ ಕಂಡಿತು ಅವಳ ಮನಸ್ಸು, ನಾವು ಕೂಡ ಅವಳ ವಿಷಯದಲ್ಲಿ ಇನ್ಮೇಲೆ ಕೇರ್ ತಗೋಬೇಕು. ನೇತ್ರ ಒಂದು ನಿರ್ಧಾರಕ್ಕೆ ಬಂದಳು. ಮಧ್ಯದಲ್ಲಿ ಮನೆಗೆ ಬಂದು ಹೋಗುತ್ತಿದ್ದ ಪ್ರಿಯಾ. ಕೊನೆ ಕೊನೆಗೆ ಪ್ರಿಯಾ ಮನೆಗೆ ಬರುವುದನ್ನೇ ನಿಲ್ಲಿಸಿ ಬಿಟ್ಟಳು. ಇಲ್ಲಿದ್ದರೆ ಮಾನಸಿಕವಾಗಿ ತೊಂದರೆ ಅನುಭವಿಸಬಹುದೆಂದು ತಿಳಿದು ಸ್ವಲ್ಪ ದಿನ ಇವರಿಂದ ದೂರಾಗುವುದೇ ಒಳ್ಳೆಯದೆಂದು ಮಂಗಳೂರಿ ನಲ್ಲಿಯೇ ತನ್ನ ವಾಸ್ತವ್ಯ ಹೂಡಿದಳು. ಅಮ್ಮ ಮತ್ತು ಅಪ್ಪ ಎಷ್ಟೇ ಒತ್ತಾಯಿಸಿದರು ತಾನು ಬರುವುದಿಲ್ಲವೆಂದು ಖಂಡಾ ತುಂಡವಾಗಿ ಹೇಳಿದಳು. ಆದರೆ ಅಪ್ಪ, ಅಮ್ಮ ತಾವೇ ಮಂಗಳೂರಿಗೆ ಬರುತ್ತೇವೆoದು ಹೇಳಿದಾಗ ತಾನು ಹೆಚ್ಚು ದಿನ ಮಂಗಳೂರಿನಲ್ಲಿ ಇರುವುದಿಲ್ಲವೆಂದು ಹೇಳಿದಳು. ನೀವು ಮತ್ತೆ ಇಲ್ಲಿಗೆ ಬಂದರೆ ನಾನು ಜೀವಂತ ವಾಗಿರಲ್ಲ ಅನ್ನುವ ಬೆದರಿಕೆ ಹಾಕಿದಳು. ಪ್ರಿಯಾಳ ಹಠ ಅಪ್ಪ ಅಮ್ಮಾರನ್ನು ಕಂಗೆಡಿಸಿತ್ತು. ಅವಳ ಮನಸ್ಸು ತಹಬಂದಿಗೆ ಬರುವವರೆಗೂ ತಾವು ಮೌನ ವಾಗಿರುವುದೇ ಲೇಸು ಎಂದು ಸುಮ್ಮನಾದರು. ಕೊನೆಗೆ ಪ್ರಿಯಾ ಅವರಿಬ್ಬರ ಸಂಪರ್ಕಕ್ಕೆ ಬರುವುದನ್ನೇ ನಿಲ್ಲಿಸಿದಳು.

ಪ್ರಿಯಾಳ ನೆನೆಪಿನಲ್ಲಿ ನೇತ್ರ ಕೊರಗಿ ನಿತ್ರಾಣವಾದರು. ಮನೆಯಲ್ಲಿ ಜಗಳ, ಕದನಗಳಿಗೆ ಬ್ರೇಕ್ ಬಿತ್ತು. ನೇತ್ರಾ, ನರೇಶರಿಗೆ ಮಗಳು ಮನೆಯಲಿಲ್ಲದ ನೋವು ಕಾಡುತಿತ್ತು. ಸದಾ ಅವಳ ನೆನಪಲ್ಲಿ ಕೊರಗುವುದೇ ಆಗೋಯ್ತು. ಅಮ್ಮನ ಆರೋಗ್ಯದ ಬಗ್ಗೆ ತಿಳಿಸಿದರೂ ಪ್ರಿಯಾ ಕ್ಯಾರೆ ಅನ್ನಲಿಲ್ಲ.
ಓದು ಮುಗಿದ ಮೇಲೆ ಮತ್ತೆ ಪ್ರಿಯಾ ಎಲ್ಲಿ ಹೋದಳೋ ಗೊತ್ತಾಗಲೇ ಇಲ್ಲ, ಎಲ್ಲ ಕಡೆ ಅವಳನ್ನು ಹುಡುಕಿ ಪ್ರಯತ್ನಿಸಿ ಸೋತರು. ಇತ್ತ ನೇತ್ರಾಳಿಗೆ ಮಾನಸಿಕ ಖಿನ್ನತೆ ಹೆಚ್ಚಾಗ ತೊಡಗಿತು, ಸಿಕ್ಕಿದ ವೈದ್ಯರನ್ನೆಲ್ಲ ಬೇಟಿಯಾಗಿ ಯಾವುದರಲ್ಲೂ ಉಪಶಮನ ಕಾಣದೆ ನರೇಶ್ ಪಾತಾಳಕ್ಕೆ ಇಳಿದು ಹೋದನು. ನಾವು ಮಾಡಿದ ತಪ್ಪಿಗೆ ಎಂಥ ಶಿಕ್ಷೆ ಕೊಟ್ಟು ಬಿಟ್ಟಳು ನಮ್ಮ ಮಗಳು, ಸ್ವಲ್ಪವೂ ಕನಿಕರ ಇಲ್ಲವೇ ನನ್ನ ಮಗಳಿಗೆ, ಅಷ್ಟೊಂದು ಮನಸ್ಸು ಕಠಿಣ ಮಾಡಿಕೊಂಡು ಕಲ್ಲಾಗಿ ಹೋದಳೇ ? ನಮ್ಮನ್ನು ಮರೆಯುವಷ್ಟು. ! ? ನರೇಶ್ ಗೆ ದಿಕ್ಕೆ ತೋಚದಂತಾಯಿತು. ಒಮ್ಮೆ ಪದ್ಮಜಾ ಮತ್ತು ಮೃದುಲ ಪ್ರಿಯಾ ಮನೆಗೆ ಬೇಟಿ ನೀಡಿ ನೇತ್ರಾಳ ಆರೋಗ್ಯ ವಿಚಾರಿಸಲು ಬಂದಾಗ ನರೇಶ್ ಗೆ ಒಂದು ಮಾಹಿತಿ ನೀಡಿದರು. ಶಿವಮೊಗ್ಗಾದ ಡಾ. ಶಶಿದರ್ ಮನಶಾಸ್ತ್ರಜ್ಞರು, ತುಂಬಾ ಚೆನ್ನಾಗಿ ಚಿಕಿತ್ಸೆ ನೀಡುವರೆಂದು ಹೇಳಿದಾಗ ನರೇಶ್ ಇದು ಒಂದು ಕೊನೆಯ ಪ್ರಯತ್ನ ವೆಂಬoತೆ ನೇತ್ರಾಳನ್ನು ಶಿವಮೊಗ್ಗಕ್ಕೆ ಕರೆದೊಯ್ದನು. ಅಲ್ಲಿ ಡಾ. ಶಶಿದರ್ ಅವರನ್ನು ಭೇಟಿ ಮಾಡಲು ತೆರಳಿದಾಗ ಅವರು ಸಿಗಲಿಲ್ಲ. ಅವರು ಕಾನ್ಫರೆನ್ಸ್ ಗೆ ದೆಹಲಿಗೆ ತೆರಳಿದ್ದರಿಂದ ಅವರ ಭೇಟಿ ಸಾಧ್ಯವಾಗಲಿಲ್ಲ. ಬಂದ ದಾರಿಗೆ ಸುಂಕ ವಿಲ್ಲವೆಂದು ತಿಳಿದು ಮತ್ತೆ ಬೆಂಗಳೂರಿಗೆ ವಾಪಸಾಗಲು ನಿರ್ಧರಿಸಿದನು. ಅಷ್ಟರಲ್ಲಿ ಸೈಕೋ ತೆರಪಿಸ್ಟ್ ವಿಸಿಟಿಂಗ್ ಡಾಕ್ಟರ್ ಬಂದಿರುವುದು ತಿಳಿಯಿತು ಅವರ ಬೇಟಿಗಾಗಿ ಅಲ್ಲೇ ಕಾದು ಕುಳಿತರು. ನರೇಶ್ ಮನಸ್ಸು ಮಗಳನ್ನು ನೆನೆಯುತಿತ್ತು ಎಲ್ಲಿದ್ದಾಳೋ. ನೇತ್ರಾ ಸರಿಹೋಗದಿದ್ದರೆ ನಾನೇ ಹುಚ್ಚನಾಗಿ ಬಿಡ್ತೀನೆನೋ ನರೇಶ್ ಮನಸ್ಸು ಏನೆಲ್ಲಾ ಯೋಚಿಸುತಿತ್ತು. “ ಸಾರ್. ಡಾಕ್ಟರ್ ಕರೀತಿದ್ದಾರೆ “ ನರ್ಸ್ ಬಂದು ಕರೆದಾಗ ಎಚ್ಚೆತ್ತ. ನೇತ್ರಾಳ ಸರದಿ ಬಂದಾಗ ಒಳಗೆ ನಡೆದಳು ಲೇಡಿ ಡಾಕ್ಟರ್ ಕಣ್ಣೆತ್ತಿ ನೋಡಿದಾಗ ಎದುರಿಗೆ ಅಮ್ಮ. ಅಪ್ಪನನ್ನು ನೋಡಿ ಆಶ್ಚರ್ಯ ಗೊಂಡಳು. ನರೇಶ್ ನಿಗೆ ಮಗಳನ್ನು ಇಲ್ಲಿ ನೋಡಿ ಆಶ್ಚರ್ಯ ವಾಯ್ತು. ಪ್ರಿಯಾಳಿಗೆ. ಅಮ್ಮನ ಸ್ಥಿತಿ ನೋಡಿ ಪಾಪ ಅನ್ನಿಸಿತು. ಒಂದು ಸಲ ಮನಸ್ಸಿನ ಮೂಲೆಯಲ್ಲಿ ಬೇಡದ ನಗುವೊಂದು ಅವಳ ಮುಖದ ಮೇಲೆ ಹಾದು ಹೋಯಿತು. ಅಮ್ಮನನ್ನು ಪರೀಕ್ಷಿಸಿ ಒಂದು ವಾರ ತನ್ನ ಆಸ್ಪತ್ರೆಯಲ್ಲಿ ಇರುವಂತೆ ಸಲಹೆ ನೀಡಿದಳು. ಹಿಂದಕ್ಕೆ ತಿರುಗಿ . ಅಪ್ಪನನ್ನು ಕುರಿತು ಅಂದಳು. ನಾನು ಇಪ್ಪತ್ತೈದು ವರ್ಷ ಅನುಭವಿಸಿದ್ದು ನೀವು ಐದಾರು ವರ್ಷದಲ್ಲೇ ಅನುಭವಿಸಿದಿರಿ ಅಲ್ವಾ . ಅಪ್ಪಾ ? ಒಂದು ದಿನವಾದರೂ ನನ್ನ ಕಷ್ಟ ಸುಖದ ಬಗ್ಗೆ ವಿಚಾರಿಸಿದಿರಾ ನೀವು? ನನ್ನ ಅಂತರoಗದೊಳಗೊoದು ಮನಸ್ಸು ಇದೆ ಅಂತ ನೀವಾದರೂ ಯೋಚಿಸಿದ್ದೀರಾ ? ನಾನು ನೋಡಿದ್ದು ನಿಮ್ಮ ಜಗಳ, ಕದನ, ಅಷ್ಟೇ ಪ್ರೀತಿ, ಕಾಳಜಿ ತೋರುವ ಅಪ್ಪ ಅಮ್ಮನಲ್ಲ. ಅಪ್ಪಾ ? ಆಗ ನಿನ್ನೆದುರು ಮಾತಾಡುವಷ್ಟು ಧೈರ್ಯ ನಂಗಿರಲಿಲ್ಲ, ನೀನು ಹೇಳಿದ್ಡೇ ಸತ್ಯ ಅಂತ ನಂಬಿದ್ದೆ ನನ್ನ ಇಷ್ಟದ ಓದು, ನಿನಗೆ ಇಷ್ಟವಿರಲಿಲ್ಲ ಮಗಳು ಡಾಕ್ಟರ್, ಇಂಜಿನೀರ್ ಓದಬೇಕು ಅನ್ನುವ ಹಂಬಲ, ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಗಳೇ ಹೆಚ್ಚಾದವು. ನನ್ನ ಒಳಗೂ ಒಂದು ಮನಸ್ಸಿದೆ, ನನ್ನ ಬೇಕು ಬೇಡಗಳನ್ನು ನೀವೆಲ್ಲಿ ಕೇಳಿದಿರಿ ? ನಮ್ಮೊಳಗೂ ಒಂದು ಮನಸ್ಸಿದೆ, ಅದಕ್ಕೂ ಮಾತಾಡಲು ಅವಕಾಶ ಕೊಡಿ, ಬೇರೆಯವರ ಮನಸ್ಸಿನಂತೆ ಬದುಕಬೇಡಿ, ನಮ್ಮ ಪ್ರತಿಷ್ಠೆ ಗೆ ನಮ್ಮ ಭಾವನೆಗಳನ್ನು ಬಲಿ ಕೊಡುವುದು ಬೇಡ, ಇಂದು ನನ್ನೊಳಗಿನ ಮನಸ್ಸು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ನನ್ನ ಆತ್ಮ ವಿಶ್ವಾಸ. ಪರಿಶ್ರಮ ನನಗೆ ಜೊತೆಯಾದವು. ಜೀವನದಲ್ಲಿ ಕಷ್ಟ ಸುಖಗಳನ್ನು ಹೇಳಿಕೊಳ್ಳಲು ಒಬ್ಬ ಉತ್ತಮ ಸ್ನೇಹಿತ ಬೇಕಂತೆ ಆ ಜಾಗ ಮೃದು ತುಂಬಿದ್ದಳು. ನನ್ನ ನೋವಿನ ಹಿಂದೆ ಅವಳ ಸಾಂತ್ವನದ ಪ್ರೀತಿ, ಕಾಳಜಿ ಅಪಾರವಾಗಿದೆ.

ಜೀವನದಲ್ಲಿ ನೆಮ್ಮದಿ, ಪ್ರೀತಿ ಇಲ್ಲಾಂದ್ರೆ ಕಷ್ಟ ಅಪ್ಪಾ ? ನನ್ನಂತೆ ಎಷ್ಟೋ ಮಕ್ಕಳಿಗೂ ಈ ತರಹದ ಅನುಭವ ಆಗಿರಬೇಕು, , ಮಕ್ಕಳ ಮನಸ್ಸಿನಲ್ಲಿ ಇದು ಅಡ್ಡ ಪರಿಣಾಮ ಬೀರುತ್ತದೆ. ಈಗ ವಿಭಕ್ತ ಕುಟುಂಬ ಇರುವುದು, ಅವಿಭಕ್ತ ಕುಟುಂಬ ಮಾಯವಾಗಿದೆ, ಬರು ಬರುತ್ತಾ ಮಕ್ಕಳ ಮನಸ್ಸು ಸೂಕ್ಷ್ಮವಾಗುತ್ತದೆ. ಕುಟುಂಬದಲ್ಲಿ ಒಂದೇ ಮಗು ಸಾಕೆನ್ನುವ ಈಗಿನ ನಮ್ಮ ಜನಾಂಗ ಮಕ್ಕಳು ಒಂಟಿಯಾಗಿ ಬಿಡುತ್ತಾರೆ. ಅಪ್ಪ ಅಮ್ಮ ಕೆಲಸಕ್ಕೆ ಹೋದರoತೂ ಮಕ್ಕಳನ್ನು ಕೇಳುವವರೇ ಇಲ್ಲ. ಒಂದಷ್ಟು ಉಪದೇಶ ನೀಡಿ, , . ಅಮ್ಮನತ್ತ ತಿರುಗಿ . ನೊಂದುಕೊಂಡಳು. ಇವತ್ತಿನ ಅಮ್ಮನ ಈ ಸ್ಥಿತಿ ನೀವೇ ಕೈಯಾರೆ ತಂದು ಕೊಂಡಿದ್ದು. ಅಮನನ್ನು ತಬ್ಬಿ ಕೊಂಡಳು. ಕಣ್ಣಲ್ಲಿ ನೀರು ಸುರಿಸುತ್ತಾ. ನೇತ್ರ. ಮಗಳನ್ನು ತಬ್ಬಿ ಹಿಡಿದರು. ಅಮ್ಮನ ಕಣ್ಣೇರು ಒರೆಸಿದಳು. ತಪ್ಪಾಯ್ತು ಅಮ್ಮಾ. ನಿಮಗೆ ಬುದ್ದಿ ಬರಲಿ ಅಂತ ಹಾಗೆ ಮಾಡಿದೆ. ಅಷ್ಟೇ . , ಅದಾಗಲೇ ನೇತ್ರಾ ಳ ಅರ್ಧ ಕಾಯಿಲೆ ವಾಸಿಯಾಗಿತ್ತು. ನರೇಶ್ ಗೆ ತನ್ನ ತಪ್ಪಿನ ಅರಿವಾಗಿತ್ತು. ಮಗಳ ಕೈ ಹಿಡಿದು ಅತ್ತು ಕ್ಷಮೆ ಕೇಳಿದನು.
ಮನಸ್ಸು ಈಗ ಕೊಳದಂತೆ ತಿಳಿಯಾಗಿತ್ತು ಮನಸ್ಸು ಆನಂದದ ಸರೋವರವಾಗಿತ್ತು, ಹಿಂದಿನಿಂದ ಪದ್ಮಜಾ ಮತ್ತು ಮೃದು ಕೈ ಕಟ್ಟಿ ನಗುತ್ತಾ. ನಿಂತಿದ್ದರು. ಅವರ ಸಹಾಕಾರ ಪ್ರೀತಿ ಒಂದು ಕುಟುಂಬವನ್ನು
ಸರಿಪಡಿಸುವಲ್ಲಿ ಶ್ರಮಿಸಿತ್ತು. ಎಲ್ಲರ ಮನಸ್ಸು ಈಗ ಸರೋವರದಂತೆ ತಿಳಿಯಾಗಿ ಮೌನವಾಗಿತ್ತು. ಕಣ್ಣಂಚು ಒದ್ದೆಯಾಗಿತ್ತು. ಪ್ರೀತಿ, ನೆಮ್ಮದಿಯಲ್ಲಿ ಸಿಗುವ ಸುಖ ಇನ್ನೆಲ್ಲೂ ಸಿಗದು. ಎನ್ನುವ ಮಾತನ್ನು ಪ್ರಿಯಾ ಸಾಬೀತು ಪಡಿಸಿದಳು, ಪದ್ಮಜಾ ಮತ್ತು ಮೃದುಲಾಳ ಬಗ್ಗೆ ಧನ್ಯತಾ ಭಾವ ಅವಳಲ್ಲಿತ್ತು.
ಒಂದು ಕುಟುಂಬವನ್ನು ಒಂದು ಮಾಡಿದ ಹೆಮ್ಮೆ ಅವರಲ್ಲಿತ್ತು.

ವೀಣಾ ರಮೇಶ್, ಮರವಂತೆ


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x