”ಕತ್ತಲ ಜಾಲ”
(ಸೈಬರ್ ರಕ್ಷಣೆ ಕುರಿತಾದ ನಾಟಕ)
ರಚನೆ: ನಾಗಸಿಂಹ ಜಿ ರಾವ್
ಪಾತ್ರಗಳು: ಫೇಸ್ ಬುಕ್
ಇನ್ಸಾಟಾಗ್ರಾಂ
ವಾಟ್ಸ್ಆಪ್
ಬಾಲಕಿ / ಬಾಲಕ
(ಈ ನಾಟಕವನ್ನು ಬೀದಿನಾಟಕ, ರಂಗನಾಟಕ ಹಾಗೂ ಆತ್ಮೀಯ ರಂಗಭೂಮಿಯಲ್ಲೂ ಪ್ರದರ್ಶಿಸಬಹುದು)
(ದೃಶ್ಯ ೧)
ಹಾಡು:
ಕತ್ತಲ ಜಾಲ ಇದುಕತ್ತಲ ಜಾಲ
ಅಪಾಯತರುವಆಂತರ್ಜಾಲ
ವಿಷದ ಹಾವಿನ ಮೋಹಕ ಬಾಲ
ಗೋಮುಖ ವ್ಯಾಘ್ರನ ಬಣ್ಣದಜಾಲ
ಕಾಮುಕ ಹರಡಿದ ಸುಂದರ ಬಲೆ
ಲೈಕು ಕಾಮೆಂಟಿಗೆಆದರೆ ಮರುಳು
ಮುಗಿದೇ ಹೋಯಿತು ಬಾಲ್ಯದ ಕೊಲೆ
ದೂರವಿರುಅದು ವಿಷದ ಹುಳು
ಉತ್ತಮರೀತಿಯಲಿ ಬಳಸೋ ಜಾಣ
ನೆನಪಿಡುಅದು ಸಾಮಾಜಿಕಜಾಲತಾಣ
ಮರುಳಾಗದಿರು ಬಣ್ಣದ ಮಾತಿಗೆ
ಅತಿ ಬಳಕೆ ಒಳ್ಳೆಯದಲ್ಲ ಬದುಕಿಗೆ
ಕತ್ತಲ ಜಾಲ ಇದುಕತ್ತಲ ಜಾಲ
ಅಪಾಯತರುವಆಂತರ್ಜಾಲ
ವಿಷದ ಹಾವಿನ ಮೋಹಕ ಬಾಲ
ಗೋಮುಖ ವ್ಯಾಘ್ರನ ಬಣ್ಣದಜಾಲ
(ಹಾಡು ಮುಗಿಯುತ್ತಿದ್ದಂತೆ ರಂಗದ ಮದ್ಯೆ ಸುಮಾರು ಹದಿನಾಲ್ಕು ಹದಿನೈದು ವರುಷದ ಬಾಲಕಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ, ಚಿತ್ರ ವಿಚಿತ್ರ ವಸ್ತ್ರಗಳನ್ನು ಧರಿಸಿರುವ ಮೂವರು ವ್ಯಕ್ತಿಗಳು ಮೂರೂ ದಿಕ್ಕಿನಿಂದರಂಗವನ್ನು ಪ್ರವೇಶ ಮಾಡುತ್ತಾರೆ)
ಮೊದಲನೆಯವ:ಇವತ್ತುಯಾಕೆ ಇವಳು ಬರಲೇಇಲ್ಲ?
ಎರಡನೆಯವ: ನಿಜ ನನ್ನಕಡೆಗೂ ಬರಲಿಲ್ಲ..
ಮೂರನೆಯವ: ದಿನಕ್ಕೆ ಹತ್ತು ಸಾರಿ ಬಂದುರಿಲ್ಸ್ ಹಾಕೋಳು ಇವತ್ತುಒಂದೇಒಂದು ಸಾರಿನೂ ಬರಲಿಲ್ಲ ..ಏನಾಗಿರಬಹುದು?
(ಮೂರೂಜನರೂ ಹುಡುಗಿಯ ಸುತ್ತಾತಿರುಗುತ್ತಾರೆ .. ಹುಡುಗಿ ನಿದಾನವಾಗಿತಲೆಎತ್ತಿ ..
ಹುಡುಗಿ:ಅಯ್ಯೋ ನೀವು ಯಾರು? ಇಲ್ಯಾಕೆ ಬಂದಿದಿರಾ?
ಮೊದಲನೆಯವ:ಅರೆನಾವು ಯಾರುಅಂತಗೊತ್ತಾಗಲಿಲ್ವ?
ಎರಡನೆಯವ: ದಿನಕ್ಕೆ ಹತ್ತು ಹದಿನೈದು ಸಾರಿ ನಮ್ಮನ್ನ ವಿಸಿಟ್ ಮಾಡ್ತಿಯಾ..
ಮೂರನೆಯವ: ನಾವು ಮೂರೂಜನರೂ ನಿನಗೆ ಬೆಸ್ಟ್ ಫ್ರೆಂಡ್ಸ್..
ಹುಡುಗಿ:ಇಲ್ಲಾ ನನಗೆ ಗೊತ್ತಾಗಲಿಲ್ಲ.. ನಿಮ್ಮನ್ನ ನಾನು ನೋಡಿಲ್ಲ..ದಯವಿಟ್ಟು ಹೊರಟು ಹೋಗಿ ನಾನು ಕಷ್ಟದಲ್ಲಿಇದ್ದೇನೆ, ತುಂಬಾ ಬೇಜಾರಾಗಿದೆ.
ಮೊದಲನೆಯವ: ಹ ಹ ಹ ಹ ಹ ಹ ಹ ನಾವು ಬಿಡ್ತಿವಿ ಅಂದ್ರು ನೀನು ನಮ್ಮನ್ನ ಬಿಡಲ್ಲ. ಬೆಳಗ್ಗೆಯಾದರೆ ನಾವು ನಿನಗೆ ಬೇಕು..
ಎರಡನೆಯವ: ಸಂಜೆಆದ್ರೆ ನಾವು ಬೇಕು…
ಮೂರನೆಯವ: ನೀನು ಹೊಸ ಬಟ್ಟೆ ಹಾಕೊಂಡಾಗ, ಹೊಸ ಹೋಟೆಲ್ಗೆ ಹೋದಾಗ .. ಬೇರೆಊರಿಗೆ ಹೋದಾಗ ನಾವು ನಿನಗೆ ಬೇಕೇ ಬೇಕು..
ಹುಡುಗಿ:ಅಂದ್ರೆ ನೀವು .. ನೀವು ಯಾರು?
ಮೊದಲನೆಯವ:ನಾನು ನಿನ್ನ ಪ್ರೀತಿಯ ಫೇಸ್ಬುಕ್
ಎರಡನೆಯವ: ನಾನು ನಿನ್ನ ಮೆಚ್ಚಿನ ಗೆಳತೀ ಇನ್ಸ್ ಸ್ಟಾಗ್ರಾಮ್
ಮೂರನೆಯವ: ನಾನು ಗೊತ್ತಲ್ಲ .. ವಾಟ್ಸ್ಅಪ್ಪ್
ಹುಡುಗಿ: ವಾವ್ … ಸೊ ನೈಸ್ .. ನೀವೆಲ್ಲಾ ಬಂದಿರೋದು ಸೂಪರ್..ಆದರೆ ನನಗೆದುಃಖಆಗಿದೆಅಪಾಯದಲ್ಲಿ ಇದೀನಿ ..
ಫೇಸ್ಬುಕ್:ಏನಾಯಿತು?
ಇನ್ಸ್ಟಾಗ್ರಾಮ್:ಯಾರಾದರೂ ನಿನ್ನಅಕೌಂಟ್ ಹ್ಯಾಕ್ ಮಾಡಿದರಾ?
ವಾಟ್ಸಪ್ಪ್: ಸುಳ್ಳು ಅಕೌಂಟ್‌ಗೆ ಹಣ ಹಾಕಿಬಿಟ್ಟಿದಿಯ?
ಹುಡುಗಿ:ಅದೇನೋಗೊತ್ತಿಲ್ಲ .. ಸೂಪರ್ ಮ್ಯಾನ್ ೦೦೭ ಅನ್ನೋಅಕೌಂಟ್‌ನಿಂದ ಫೇಸ್ ಬುಕ್‌ನಲ್ಲಿ ಫ್ರೆಂಡ್‌ರಿಕ್ವೆಸ್ಟ್ ಬಂದಿತ್ತು ..ಅದನ್ನ ಫ್ರೆಂಡ್ ಮಾಡಿಕೊಂಡೆ. ಚಾಟ್ ಶುರುಆಯಿತು .. ಒಳ್ಳೆ ಫ್ರೆಂಡ್‌ಅಂದುಕೊಂಡುಇನ್ಸ್ಟಾಗ್ರಾಮ್ ನಲ್ಲೂ ಫ್ರೆಂಡ್ ಮಾಡಿಕೊಂಡೆ .. ನನ್ನಎಲ್ಲಾ ಪೋಸ್ಟಿಗೆ ಲೈಕ್ ಮಾಡಿ ಒಳ್ಳೊಳ್ಳೆ ಕಾಮೆಂಟ್ ಬರೀತಿದ್ರು. ನನ್ನ ಫೋಟೋಗೆ,ರೀಲ್ಸ್ಗೆ ಕವನ ಬರೆಯೋರು .. ತುಂಬಾ ಒಳ್ಳೆಯೋರು ಅಂದುಕೊಂಡು ವಾಟ್ಸ್ಅಪ್ ನಂಬರ್‌ಕೊಟ್ಟೆ …
ಮೂರುಜನ:ಅಯ್ಯೋ .. ಕೆಲಸ ಕೆಟ್ಟಿತು ..
ಹುಡುಗಿ: ಹೌದು .. ವಾಟ್ಸಪ್ಪ್ಚಾಟ್ ಮಾಡೋವಾಗಒಂದು ಫೇಕ್ ಫೋಟ್ ಬಂತು ನನ್ನ ಬೆತ್ತಲೆ ಫೋಟೋ ..ಮುಖ ನಂದುದೇಹ ಬೇರೆಯೋರದ್ದು ..
ಫೇಸ್ಬುಕ್: ನೀನೇನು ಮಾಡಿದೆ?
ಹುಡುಗಿ: ಎಲ್ಲಾಅಕೌಂಟ್‌ನಲ್ಲಿಅವರನ್ನ ಬ್ಲಾಕ್ ಮಾಡಿದೆ..ಆದ್ರೆ ಬೇರೆ ಬೇರೆ ನಂಬರ್‌ನಿಂದ ಮೆಸೇಜ್ ಬರ್ತಾಇದೆ.. ನನ್ನ ಫೋಟೋಎಲ್ಲಾತಗೊಂಡಿದಾರೆ ಈಗ ನಾನು ಬೆತ್ತಲೆ ಫೋಟೋ ಕಳಿಸದಿದ್ರೆ ಅವರ ಹತ್ತಿರಇರೋ ಫೇಕ್ ಫೋಟೋನಎಲ್ಲಕಡೆ ಹಾಕ್ತಾರಂತೆ .. ಏನು ಮಾಡೋದುಗೊತ್ತಾಗ್ತಿಲ್ಲ ..ಅಪ್ಪಅಮ್ಮ ಬೈತಾರೆ.. ನನ್ನಕಾಪಾಡಿ ..ಪ್ಲೀಸ್ ನನ್ನಕಾಪಾಡಿ …
ಹಾಡು:
ಕತ್ತಲ ಜಾಲ ಇದುಕತ್ತಲ ಜಾಲ
ಅಪಾಯತರುವಆಂತರ್ಜಾಲ
ವಿಷದ ಹಾವಿನ ಮೋಹಕ ಬಾಲ
ಗೋಮುಖ ವ್ಯಾಘ್ರನ ಬಣ್ಣದಜಾಲ
ಕಾಮುಕ ಹರಡಿದ ಸುಂದರ ಬಲೆ
ಲೈಕು ಕಾಮೆಂಟಿಗೆಆದರೆ ಮರುಳು
ಮುಗಿದೇ ಹೋಯಿತು ಬಾಲ್ಯದ ಕೊಲೆ
ದೂರವಿರುಅದು ವಿಷದ ಹುಳು
ಉತ್ತಮರೀತಿಯಲಿ ಬಳಸೋ ಜಾಣ
ನೆನಪಿಡುಅದು ಸಾಮಾಜಿಕಜಾಲತಾಣ
ಮರುಳಾಗದಿರು ಬಣ್ಣದ ಮಾತಿಗೆ
ಅತಿ ಬಳಕೆ ಒಳ್ಳೆಯದಲ್ಲ ಬದುಕಿಗೆ
ಕತ್ತಲ ಜಾಲ ಇದುಕತ್ತಲ ಜಾಲ
ಅಪಾಯತರುವಆಂತರ್ಜಾಲ
ವಿಷದ ಹಾವಿನ ಮೋಹಕ ಬಾಲ
ಗೋಮುಖ ವ್ಯಾಘ್ರನ ಬಣ್ಣದಜಾಲ
(ದೃಶ್ಯ ೨)
(ಇನ್ಸಾಟಾಗ್ರಾಂ, ಫೇಸ್ ಬುಕ್ ಬಹಳ ಚಿಂತೆಯಿಂದ ಮಾತಾಡುತ್ತಾ ನಿಂತಿದ್ದಾರೆ, ವಾಟ್ಸ್ಆಪ್ ಬಾಲಕನೊಬ್ಬನೊಡನೆ ಪ್ರವೇಶ)
ಇನ್ಸಾಟಾಗ್ರಾಂ: ಮಕ್ಕಳು ನಮ್ಮಿಂದಅಪಾಯಕ್ಕೆ ಸಿಕ್ಕಿ ಬಿಳ್ತಿದಾರ? ನಾವು ಅಪಾಯಕ್ಕೆಕಾರಣವಾ?
ಫೇಸ್ ಬುಕ್:ಇಲ್ಲ ನಾವಲ್ಲ.. ಮಕ್ಕಳು ನಮ್ಮನ್ನಉಪಯೋಗಿಸಲುಗೊತ್ತಿಲ್ಲದಿರಾಅಪಾಯಕ್ಕೆ ಒಳಗಾಗ್ತಾ ಇದಾರೆ..ಅರೆಇದೇನು? ವಾಟ್ಸ್ಅಪ್‌ಯಾರಿದು?
(ವಾಟ್ಸ್ಅಪ್ ಬಾಲಕನನ್ನುರಂಗದ ಮದ್ಯದಲ್ಲಿ ಕೂರಿಸಿ)
ವಾಟ್ಸ್ಅಪ್: ಈ ಹುಡುಗ ಬದುಕೋದಿಲ್ಲ . ನಾನು ಸಾಯಬೇಕುಅಂತಕೆರೆಗೆ ಹಾರೋಕೆ ಹೋಗ್ತಿದ್ದ.. ಬೇಡ ಬಾ ಅಂತರಕ್ಷಣೆ ಮಾಡಿಕರೆದುಕೊಂಡು ಬಂದೆ ..
ಇನ್ಸಾಟಾಗ್ರಾಂ:ಯಾಕೆ? ಸಾಯೋದುಯಾಕೆ? ಪಾಪ ಇನ್ನೂ ಸಣ್ಣ ಹುಡುಗ ..
ಫೇಸ್ ಬುಕ್: (ಬಾಲಕನಿಗೆ) ಯಾಕಣ್ಣ ಸಾಯೋಯೋಚನೆ? ಓದಿ ಬರದುದೊಡ್ಡ ವ್ಯಕ್ತಿಆಗು .. ಸಾಯೋ ಬಗ್ಗೆಯಾಕೆಯೋಚನೆ?
ಬಾಲಕ: (ನಿದಾನವಾಗಿತಲೆಎತ್ತಿಎಲ್ಲರನ್ನು ನೋಡಿ) ಸಾಯದೆ ಬೇರೆ ಏನು ಮಾಡ್ಲಿ? ನನ್ನಅಪ್ಪನ ೨ ಲಕ್ಷರೂಪಾಯಿ ಕಳೆದಿದೀನಿ..ಎಲ್ಲಾಎಷ್ಟು ಬುದ್ದಿ ಹೇಳಿದ್ರು ನಾನು ಅವರ ಮಾತನ್ನು ಕೇಳದೆ ಆನ್ ಲೈನ್ ಆಟ ಆಡುತ್ತಲೇ ಹೋದೆ ..ಅದುಜೂಜು ಮೊದ ಮೊದಲು ಹಣ ಬಂತು .. ಆಮೇಲೆ ಹೋಯ್ತು .. ಹೋಯ್ತು .. ಹೋಯ್ತು ..ಅಪ್ಪಅಮ್ಮಎಲ್ಲರ ಹಣಕದ್ದೆ .. ಮೋಸ ಬರಿ ಮೋಸ .. ನಾನು ಬದುಕ ಬಾರದು .. ಬದುಕೋದಿಲ್ಲಾ .. (ಅಳುತ್ತಾ ತಲೆ ಮೇಲೆ ಕೈ ಹೊತ್ತು ಕುಳಿತು ಕೊಳ್ಳುತ್ತಾನೆ)
ವಾಟ್ಸ್ಅಪ್: ನಮ್ಮನ್ನಉಪಯೋಗಿಸೋ ಮಕ್ಕಳು ಲೈಂಗಿಕ ಕಿರುಕುಳ ಅನುಭವಿಸ್ತಾ ಇದಾರೆ ..
ಫೇಸ್ ಬುಕ್:ಆನ್ ಲೈನ್ ಆಟಗಳಿಗೆ ಬಲಿಯಾಗ್ತಿದಾರೆ ..
ಇನ್ಸಾಟಾಗ್ರಾಂ: ಶಿಶುಪೀಡಕರು ಮಕ್ಕಳನ್ನ ಬ್ಲಾಕ್ ಮೇಲ್ ಮಾಡ್ತಿದಾರೆ.. ಮಕ್ಕಳ ಪಾಲಿಗೆ ಅಂತರ್ಜಾಲ ಅಪಾಯದಜಾಲ ಆಗಿದೆ ..ಕತ್ತಲ ಜಾಲ ಆಗ್ತಿದೆ ..
ಫೇಸ್ ಬುಕ್, ವಾಟ್ಸ್ಅಪ್:ಕತ್ತಲ ಜಾಲ, ಕತ್ತಲ ಜಾಲ …
ಹಾಡು:
ಕತ್ತಲ ಜಾಲ ಇದುಕತ್ತಲ ಜಾಲ
ಅಪಾಯತರುವಆಂತರ್ಜಾಲ
ವಿಷದ ಹಾವಿನ ಮೋಹಕ ಬಾಲ
ಗೋಮುಖ ವ್ಯಾಘ್ರನ ಬಣ್ಣದಜಾಲ
ಕಾಮುಕ ಹರಡಿದ ಸುಂದರ ಬಲೆ
ಲೈಕು ಕಾಮೆಂಟಿಗೆಆದರೆ ಮರುಳು
ಮುಗಿದೇ ಹೋಯಿತು ಬಾಲ್ಯದ ಕೊಲೆ
ದೂರವಿರುಅದು ವಿಷದ ಹುಳು…..
(ದೃಶ್ಯ ೩)
(ರಂಗದಲ್ಲಿ ಫೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆಪ್, ಬಾಲಕಿ ಮತ್ತು ಬಾಲಕ ಫಲಕಗಳನ್ನು ಹಿಡಿದು ನಿಂತಿದ್ದಾರೆ. ಇದೇಸಮಯದಲ್ಲಿ, ಹೊಸ ಪಾತ್ರವಾದ “ಸೈಬರ್‌ರಕ್ಷಕ ೧೯೩೦” ಎಂಬ ವ್ಯಕ್ತಿರಂಗಕ್ಕೆ ಪ್ರವೇಶಿಸುತ್ತಾನೆ. ಅವನು ಕಪ್ಪುಉಡುಗೆ ಧರಿಸಿದ್ದು, ಕೈಯಲ್ಲಿಒಂದು ಲ್ಯಾಪ್‌ಟಾಪ್ ಮತ್ತು ಫೋನ್ ಹಿಡಿದಿದ್ದಾನೆ. ಅವನ ಮುಖದಲ್ಲಿಗಂಭೀರತೆ ಮತ್ತುಧೈರ್ಯಇದೆ.)
ಸೈಬರ್‌ರಕ್ಷಕ: (ದೊಡ್ಡಧ್ವನಿಯಲ್ಲಿ) ಯಾರಿಗಾದರೂ ಸಹಾಯ ಬೇಕೇ? ನಾನು ಇಂಟರ್ನೆಟ್‌ನಕತ್ತಲೆಯಿಂದ ಮಕ್ಕಳನ್ನು ರಕ್ಷಿಸಲು ಬಂದಿದ್ದೇನೆ!
ಬಾಲಕಿ: (ಆಶ್ಚರ್ಯದಿಂದ) ನೀವು ಯಾರು? ನನ್ನನ್ನು ಈ ಕಷ್ಟದಿಂದಕಾಪಾಡಬಹುದೇ?
ಸೈಬರ್‌ರಕ್ಷಕ: ನಾನು “ಸೈಬರ್‌ರಕ್ಷಕ ೧೯೩೦”, ಆನ್‌ಲೈನ್‌ಜಗತ್ತಿನಲ್ಲಿಅಪಾಯದಿಂದ ಹೊರತರುವವನು. ನೀನು ಏನು ಕಷ್ಟದಲ್ಲಿದ್ದೀಯಎಂದು ಹೇಳು, ನಾನು ದಾರಿತೋರಿಸುತ್ತೇನೆ.
ಬಾಲಕಿ: (ಅಳುತ್ತಾ) ನನ್ನ ಫೋಟೋಗಳನ್ನು ಫೇಕ್ ಮಾಡಿ, ಒಬ್ಬ ವ್ಯಕ್ತಿ ನನ್ನನ್ನು ಬೆದರಿಸುತ್ತಿದ್ದಾನೆ. ಅವನು ಎಲ್ಲೆಡೆ ಹರಡುತ್ತೇನೆಎಂದಿದ್ದಾನೆ. ನಾನು ಏನು ಮಾಡಲಿ?
ಸೈಬರ್‌ರಕ್ಷಕ: (ತೀವ್ರವಾಗಿ) ಆತನ ಹೆಸರು ಏನು? ಯಾವಅಕೌಂಟ್‌ನಿಂದ ಸಂಪರ್ಕ ಮಾಡಿದ್ದಾನೆ?
ಬಾಲಕಿ: “ಸೂಪರ್ ಮ್ಯಾನ್ ೦೦೭” ಎಂಬ ಅಕೌಂಟ್‌ನಿಂದ ಫೇಸ್‌ಬುಕ್‌ನಲ್ಲಿ ಶುರುವಾಯಿತು. ಆಮೇಲೆ ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ಆಪ್‌ಗೂ ಬಂದಿದ್ದಾನೆ.
ಸೈಬರ್‌ರಕ್ಷಕ: (ಲ್ಯಾಪ್‌ಟಾಪ್‌ತೆರೆದುಟೈಪ್ ಮಾಡುತ್ತಾ) ಚಿಂತೆ ಮಾಡಬೇಡಿ. ಈ ರೀತಿಯ ಅಪರಾಧಿಗಳು ತಮ್ಮಗುರುತನ್ನು ಮರೆಮಾಚುತ್ತಾರೆ, ಆದರೆ ನಾನು ಅವರIP ವಿಳಾಸವನ್ನು ಗುರುತಿಸಬಹುದು. (ಫೇಸ್‌ಬುಕ್‌ಗೆತಿರುಗಿ) ನೀನು ಈ ಅಕೌಂಟ್‌ನಡೀಟೇಲ್ಸ್ತೆಗೆದುಕೊಡು!
ಫೇಸ್‌ಬುಕ್: (ತಡವರಿಸುತ್ತಾ) ಆದರೆ… ಇದು ಪ್ರೈವೆಸಿ ವಿಷಯ…
ಸೈಬರ್‌ರಕ್ಷಕ: (ಕೋಪದಿಂದ) ಪ್ರೈವೆಸಿ? ಒಬ್ಬ ಹುಡುಗಿಯ ಬದುಕು ನಾಶವಾಗುತ್ತಿದೆ! ನೀವೆಲ್ಲಾಇವರಿಗೆಜಾಗಕೊಟ್ಟಿದ್ದೀರಿ, ಈಗ ಜವಾಬ್ದಾರಿ ತೆಗೆದುಕೊಳ್ಳಿ!
ಇನ್ಸ್ಟಾಗ್ರಾಮ್: (ವಾಟ್ಸ್ಆಪ್‌ಗೆ) ಈ ಸೂಪರ್ ಮ್ಯಾನ್ನ ಫೋನ್ ನಂಬರ್‌ಟ್ರ್ಯಾಸಕ್ ಮಾಡುವೆಎಂದು ನೋಡೋಣ.
ವಾಟ್ಸ್ಆಪ್: (ತಲೆ ತಗ್ಗಿಸಿ) ನಾನು ಎಂಡ್-ಟು-ಎಂಡ್‌ಎನ್‌ಕ್ರಿಪ್ಷನ್‌ಇರುವೆಎಂದು ಹೇಳುತ್ತೇನೆ, ಆದರೆ ಸೈಬರ್ ಪೊಲೀಸ್ಗೆ ಸಹಾಯ ಮಾಡಬಹುದು.
ಸೈಬರ್‌ರಕ್ಷಕ: (ಬಾಲಕನಿಗೆ) ನೀನು ಆನ್‌ಲೈನ್‌ಜೂಜಿನಲ್ಲಿ ಹಣ ಕಳೆದುಕೊಂಡೆ ಎಂದೆ? ಯಾವಆಪ್‌ಅಥವಾ ವೆಬ್‌ಸೈಟ್?
ಬಾಲಕ: “ಗೇಮ್‌ಆಫ್ ಲಕ್” ಎಂಬ ಆಪ್‌ನಲ್ಲಿ ಶುರುವಾಯಿತು. ಮೊದಲುಗೆದ್ದೆ, ಆಮೇಲೆ ಎಲ್ಲಾ ಕಳೆದುಕೊಂಡೆ.
ಸೈಬರ್‌ರಕ್ಷಕ: (ಪ್ರೇಕ್ಷಕರಿಗೆತಿರುಗಿ) ಇಂತಹ ಆಪ್‌ಗಳು ಮಕ್ಕಳನ್ನು ಬಲೆಗೆ ಬೀಳಿಸುತ್ತವೆ. ಇವು ಕಾನೂನು ಬಾಹಿರ, ಮತ್ತುಇವರ ವಿರುದ್ಧಕ್ರಮ ತೆಗೆದುಕೊಳ್ಳಬಹುದು. (ಬಾಲಕನಿಗೆ) ನೀನು ೧೯೩೦ಗೆ ಕರೆ ಮಾಡು, ಅವರು ನಿನಗೆ ಸಹಾಯ ಮಾಡುತ್ತಾರೆ.
(ರಂಗದಲ್ಲಿಒಂದುದೊಡ್ಡ ಸ್ಕ್ರೀನ್ ತೋರಿಸಲಾಗುತ್ತದೆ. ಅದರಲ್ಲಿ “ಸೂಪರ್ ಮ್ಯಾನ್ ೦೦೭”ನ ಫೇಕ್ ಪ್ರೊಫೈಲ್ ಮತ್ತು “ಗೇಮ್‌ಆಫ್ ಲಕ್” ಆಪ್ನ ಚಿತ್ರಗಳು ಕಾಣಿಸುತ್ತವೆ. ಸೈಬರ್‌ರಕ್ಷಕತನ್ನ ಲ್ಯಾಪ್‌ಟಾಪ್‌ನಲ್ಲಿಟ್ರ್ಯಾುಕಿಂಗ್ ಮಾಡುವಂತೆತೋರಿಸುತ್ತಾನೆ.)
ಸೈಬರ್‌ರಕ್ಷಕ: (ಗಂಭೀರವಾಗಿ) ಈ ಖಳನಾಯಕನನ್ನು ಪತ್ತೆ ಮಾಡಿದೆ. ಇವನು ನಿಮ್ಮ ನಗರದಲ್ಲೇಇದ್ದಾನೆ! ಸೈಬರ್ ಪೊಲೀಸ್‌ಗೆ ಮಾಹಿತಿಕೊಡುತ್ತೇನೆ. (ಬಾಲಕಿಗೆ) ನೀನು ಧೈರ್ಯವಾಗಿರು, ಇವನ ವಿರುದ್ಧಕೇಸ್‌ದಾಖಲಿಸುವೆವು.
ಹಾಡು:
ಕತ್ತಲ ಜಾಲಕ್ಕೆ ಬೀಗ ಹಾಕೋಣ,
ಸೈಬರ್‌ರಕ್ಷಣೆಯ ಬೆಳಕು ತಾರೋಣ,
ಧೈರ್ಯದಿಂದ ಮುನ್ನಡೆಯೋಣ,
ಅಪಾಯದ ಬಲೆಯನ್ನುಕತ್ತರಿಸೋಣ!
(ದೃಶ್ಯ ೪)
(ಫೇಸ್ ಬುಕ್, ವಾಟ್ಸ್ಅಪ್, ಇನ್ಸಾಟಾಗ್ರಾಂ, ಬಾಲಕಿ ಹಾಗೂ ಬಾಲಕ ಅಂತರರ್ಜಾಲ ಅಪಾಯಗಳಿಂದ ಮಕ್ಕಳನ್ನು ರಕ್ಷಿಸಿ, ಮಕ್ಕಳ ದುರುಪಯೋಗತಡೆಯಿರಿ, ೧೯೩೦, ೧೦೯೮ ಸಹಾಯವಾಣಿ ಬಳಸಿ…. ಇನ್ನು ಮುಂತಾದ ಫಲಕಗಳನ್ನು ಹಿಡಿದುಕೊಂಡಿದ್ದಾರೆ)
ಫೇಸ್ ಬುಕ್: ಸೈಬರ್ ಅಪಾಯಗಳಿಂದ ಮಕ್ಕಳನ್ನು ರಕ್ಷಿಸಲುಎಲ್ಲರೂಒಂದಾಗ ಬೇಕು .. ಪೋಷಕರೇ .. ನಿಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿ ಮತ್ತು ಮಕ್ಕಳಿಗೆ ಅಪಾಯಗಳನ್ನು ತಿಳಿಸಿ .. ಮಕ್ಕಳೊಂದಿಗೆ ಮಾತನಾಡಿ ..
ವಾಟ್ಸ್ಅಪ್:ಶಿಕ್ಷಕರೇ ..ಆನ್‌ಲೈನ್ ಅಪಾಯಗಳು ಮತ್ತು ಪರಿಣಾಮಗಳ ಬಗ್ಗೆ ಮಕ್ಕಳಿಗೆ ಕಲಿಸಿ. ಸೈಬರ್ ಬುಲ್ಲಿಯಿಂಗ್, ಫಿಶಿಂಗ್ ಮತ್ತುಗ್ರೂಮಿಂಗ್ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿ..ಯೋಚಿಸಲು ತಿಳಿಸಿ.
ಇನ್ಸಾಟಾಗ್ರಾಂ: ಮಕ್ಕಳೇ ಬಲವಾದ ಪಾಸ್‌ವರ್ಡ್ಗಳನ್ನು ಬಳಸಿ ಮತ್ತು ಅವುಗಳನ್ನು ಗೌಪ್ಯವಾಗಿಡಿಯಾರಿಗೂ ಹೇಳಬೇಡಿ, ಅಪರಿಚಿತರ ಸ್ನೇಹ ಬೆಳೆಸಬೇಡಿ .ಅನುಮಾನ ಬಂದಾಕ್ಷಣ ವ್ಯಕ್ತಿಗಳನ್ನು ಬ್ಲಾಕ್ ಮಾಡಿ..ನಿಮ್ಮ ಫೋಟೋ ಹಾಕುವಾಗ ಯೋಚಿಸಿ.. ನಿಮ್ಮ ಮಾಹಿತಿಯಾರಿಗೂಕೊಡಬೇಡಿ …
ಬಾಲಕ: ಗೆಳೆಯರೇ ೧೯೩೦,೧೦೯೮ ಸಹಾಯವಾಣಿಗಳನ್ನು ತಿಳಿದುಕೊಳ್ಳಿ ನಿಮ್ಮ ಗೆಳೆಯರಿಗೂ ತಿಳಿಸಿ ..
ಬಾಲಕಿ: ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತವಾಗಿ ಉಪಯೋಗಿಸಿ .. ಬನ್ನಿ ಎಲ್ಲರೂ ಸೇರಿ ಸೈಬರ್ರಕ್ಷಣೆಕುರಿತಾದರೀಲ್ಸ್ ಮಾಡಿಅಪ್ಲೋಡ್ ಮಾಡೋಣ ..ರಕ್ಷಣೆಯ ವಿಚಾರಗಳನ್ನು ತಿಳಿಸೋಣ.
(ಪ್ರೇಕ್ಷಕರನ್ನು ಸೇರಿಸಿ ಅವರಿಂದ ಪ್ರತಿಜ್ಞೆ ಮಾಡಿಸಿ.. ”ನಾವು ಜಾಲತಾಣಗಳನ್ನು ಸುರಕ್ಷಿತವಾಗಿ ಬಳಸುತ್ತೇವೆ, ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ, ೧೯೩೦,೧೦೯೮ ಸಹಾಯವಾಣಿ ಬಳಸುತ್ತೇವೆ, ಮಕ್ಕಳ ರಕ್ಷಣೆ ನಮ್ಮ ಹೊಣೆ”.
ಪ್ರತಿಜ್ಞೆಯನ್ನುರೀಲ್ಸ್ ಮಾಡಿಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಿ)
ನಾಟಕದ ನಂತರ ಪ್ರೇಕ್ಷರೊಂದಿಗೆಚರ್ಚಿಸಲು ಪ್ರಶ್ನೆಗಳು ..
೧. ನಿಮ್ಮಲ್ಲಿಯಾರಾದರೂಆನ್ ಲೈನ್ ಅಪಾಯಗಳಿಗೆ ಒಳಗಾಗಿದ್ದೀರಾ?
೨. ಜಾಲತಾಣಗಳ ಉಪಯೋಗವೇನು? ಅಪಾಯವೇನು?
೩. ಫೇಸ್ ಬುಕ್, ವಾಟ್ಸ್ಅಪ್, ಇನ್ಸಾಟಾಗ್ರಾಂಇಲ್ಲದಿದ್ದರೆಏನಾಗುತ್ತದೆ?
೪. ಸೈಬರ್‌ಅಪರಾಧಕ್ಕೆ ಶಿಕ್ಷೆ ಇದೆಗೊತ್ತೇ?
೫. ಸೈಬರ್‌ರಕ್ಷಣೆಕುರಿತಾದ ನಮ್ಮಆಂದೋಲನಕ್ಕೆ ಸೇರಿಕೊಳ್ಳುವಿರಾ?
-ನಾಗಸಿಂಹ ಜಿ ರಾವ್