ನಮ್ಮ ಬಳಿ ಇಲ್ಲದಿರುವುದಕ್ಕೆ: ಪದ್ಮಾ ಭಟ್

ಹೈಸ್ಕೂಲು ದಿನಗಳಲ್ಲಿ ಆ ಪದ್ಯ ಓದಿದ ನೆನಪು.. ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು. ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು ಎಂಬ ಪದ್ಯದ ಹೆಸರು ಇಕ್ಕಳ ಎಂದು.. ಹೌದಲ್ವಾ.. ನಮಗೆ ಕಳೆದುಹೋಗಿದ್ದೇ ಚನ್ನಾಗಿರುತ್ತದೆ..ಚಿಕ್ಕವರಿರುವಾಗ ದೊಡ್ಡವರಾಗುವ ಕನಸುಗಳು. ದೊಡ್ಡವರಾದ ಮೇಲೆ ಬಾಲ್ಯವೇ ಚನ್ನಾಗಿತ್ತೆಂಬ ಮನಸು.. ಪ್ರತೀದಿನವೂ ಪ್ರತೀಕ್ಷಣವೂ ಸಿಗದೇ ಇರುವುದೇ ಒಳ್ಳೆಯದೆಂಬ ಮರೀಚಿಕೆ ನಮಗೆ.. ಸಿಗದಿರುವ ದ್ರಾಕ್ಷಿ ಹುಳಿಯೇ ಎಂದು ನರಿಯಂತೆ ನಾವಂದುಕೊಳ್ಳುವುದಿಲ್ಲ. . ಸಿಗದೇ ಇರುವುದೇ ಚನ್ನಾಗಿರುತ್ತದೆ ಎಂದು ಅಂದುಕೊಳ್ಳುತ್ತೇವೆ ಅಲ್ವಾ..? ಬೇರೆಯವರು ಹಾಕಿಕೊಂಡ ಬಟ್ಟೆಯೇ ಚನ್ನಾಗಿರುತ್ತದೆ.. … Read more

ಹಾಡಿನಲ್ಲಿ ಭಾವಗಳ ಸಂಗಮವಿದೆ: ಪದ್ಮಾ ಭಟ್.

ಹುದುಗಲಾರದ ದುಃಖ ಹುದುಗಿರಿಸಿ ನಗೆಯಲ್ಲಿ ನಸು ನಗುತ ಬಂದೆ ಇದಿರೋ.. ಇನಿತು ತಿಳಿಯದ ಮೂಢನೆಂದು ಬಗೆದೆಯೋ ನನ್ನ. ಹೀಗೆ ಕಿವಿ ಮೇಲೆ ಬೀಳುತ್ತಿರುವ ಹಾಡನ್ನು ಕೇಳುತ್ತಾ ..ನಮಗೆ ನಾಳೆ ಪರೀಕ್ಷೆ ಎನ್ನೋದನ್ನೇ ಮರೆತು ಬಿಟ್ಟಿದ್ದೆ..ಪುಸ್ತಕವನ್ನು ಮಡಚಿ ಬದಿಗಿಟ್ಟು ಕೇಳುತ್ತ ಕೂರುವುದೊಂದೇ ಕೆಲಸ..ಈ ಹಾಡುಗಳು ಎಂತಹ ವಿಚಿತ್ರ ಅಲ್ವಾ? ಮನಸಿನ ಒಂದಷ್ಟು ದುಃಖವನ್ನು ನೋವನ್ನು ಮರೆಯಿಸುವ ಶಕ್ತಿಯಿದೆ. ಭಾವಗೀತೆಗಳನ್ನು ಕೇಳುವಾಗ ನನ್ನ ಬಗ್ಗೆಯೇ ಬರೆದಿದ್ದಾರೆಯೋ ಎನ್ನಸುವಷ್ಟು ಹತ್ತಿರದಿಂದ ಅನುಭವಿಸಿದ್ದುಂಟು.. ಅದೇ ಆ ಒಂಟಿ ರೂಂನಲ್ಲಿ ಹಾಡಿನ ನೆನಪುಗಳ ಕಲರವಗಳಿವೆ.. … Read more

ಕಾತರಿಸುವ ನಿರೀಕ್ಷೆಗಳಲಿ ಬದುಕಿನ ಮೆಟ್ಟಿಲು: ಪದ್ಮಾ ಭಟ್.

       ಎಸ್.ಎಸ್.ಎಲ್.ಸಿ, ಹಾಗೂ ಪಿ.ಯೂಸಿ ಪರೀಕ್ಷೆಗಳೆಲ್ಲಾ ಮುಗಿದು, ಸಿ.ಇ.ಟಿ ಯೂ ಮುಗಿಯಿತು.. ರಜೆಯೆಲ್ಲಾ ಅರ್ಧ ಖಾಲಿಯಾಗುತ್ತಾ ಬಂತು. ಕಾತರಿಯಿಂದ ಕಾಯುತ್ತಿದ್ದ ಮನಸುಗಳಿಗೆ ಇನ್ನೇನು ರಿಸಲ್ಟಿನ ಭಯ. ಒಂದು ಕಡೆ ತಾನೇ ಇಡೀ ಶಾಲೆಗೆ, ಕಾಲೇಜಿಗೆ ಮೊದಲ ರ್‍ಯಾಂಕ್ ಬಂದೇ ಬರುತ್ತೇನೆಂಬ ಭರವಸೆಯ ಮನಸ್ಸುಗಳಿದ್ದರೆ, ಇನ್ನೊಂದು ಕಡೆ ಅಯ್ಯೋ ದೇವರೆ ಇದೊಂದು ಸಲ ಪಾಸ್ ಮಾಡಪ್ಪ ಎಂದು ಬೇಡಿಕೊಳ್ಳುವ ಮನಸುಗಳು.. ಬದುಕಿನ ಒಂದೊಂದು ಮೆಟ್ಟಿಲುಗಳನ್ನೇ ಹತ್ತುತ್ತಾ ಹತ್ತುತ್ತಾ ಗುರಿಮುಟ್ಟುವ ತವಕದಲ್ಲಿ ಯುವಜನತೆಯು ದಾರಿಯನ್ನು ಹುಡುಕುತ್ತಿದೆ.. ಆಯ್ಕೆ … Read more

ಮತ್ತೊಂದಿಷ್ಟು ವರುಷ ಸಿಗಲಾರೆಯಾ?: ಪದ್ಮಾ ಭಟ್

                  ಸರಿಯಾಗಿ ಲೆಕ್ಕ ಹಾಕಿದ್ರೆ ಇನ್ನು ಒಂದು ತಿಂಗಳು  ಮಾತ್ರ ನಾ ನಿನ್ ಜೊತೆ ಇರೋದು..ಆಮೇಲೆ  ನೆನಪುಗಳಷ್ಟೆ.. ಏನೇ ಹೇಳು ನಿನ್ನನ್ನು ತುಂಬಾ ಮಿಸ್ ಮಾಡ್ಕೋಳ್ತೀನಿ ಕಣೇ.. ಎಂದು ರೂಂ ಮೇಟ್ ಶ್ರೇಯಾ ಹೇಳುತ್ತಿದ್ದರೆ, ನಾ ನನ್ನ ಪಾಡಿಗೆ ಅಷ್ಟೊಂದು ಲಕ್ಷ್ಯವಿಲ್ಲದೇ ಯಾವುದೋ ಪುಸ್ತಕವನ್ನು ಓದುತ್ತ ಕುಳಿತಿದ್ದೆ.. ಹೂಂ.. ಕಣೇ ನಾನೂ ನಿನ್ ಮಿಸ್ ಮಾಡ್ಕೊಳ್ತೀನಿ ಅಂತಾ ಬಾಯಿಂದ ಮಾತು ಬಂದರೂ ಓದುವ ಪುಸ್ತಕದ ಕಡೆಗೇ … Read more

ಹಬ್ಬದ ದಿನದ ತಳಮಳ: ಪದ್ಮಾ ಭಟ್

                    ಹಬ್ಬಕ್ಕೆ ಬತ್ತಿಲ್ಯ? ಬಾರೇ.. ಎರಡು ದಿನಾ ಆದ್ರೂ ಬಂದು ಹೋಗು ಎಂದು ಅಮ್ಮ ಫೋನ್ ಮಾಡಿ ಹೇಳಿದಾಗ, ಇಲ್ಲವೆನ್ನಲು ಮನಸ್ಸು ಒಪ್ಪದಿದ್ದರೂ, ಅನಿವಾರ್‍ಯವಾಗಿ ಮನಸ್ಸನ್ನು ಒಪ್ಪಿಸಲೇಬೇಕಾಗಿತ್ತು.. ಇಲ್ಯೆ.. ಈಗ ಬತ್ನಿಲ್ಲೆ, ಮುಂದಿನ ತಿಂಗಳು ಬತ್ತೆ .. ಎಂದು ಹೇಳಿ ಫೋನ್ ಇಟ್ಟಿದ್ದೆ.. ಹಬ್ಬಕ್ಕೂ ಊರಿಗೂ ಅದ್ಯಾವ ನಂಟೋ ಕಾಣೆ.. ಹಬ್ಬದ ದಿನ ಊರನ್ನು ಬಿಟ್ಟು ಬೇರೆಲ್ಲಿಯೇ ಇದ್ದರೂ, ಪರಿಪೂರ್ಣವೆಂದೆನಿಸುವುದೇ ಇಲ್ಲ..ಏನಾದರೂ ಪುಸ್ತಕ ಓದೋಣವೆಂದು ಕುಳಿತೆನಾದರೂ, … Read more

ಸೀರೆಯ ಪರಿ: ಪದ್ಮಾ ಭಟ್॒

                                 ಅರೆ! ನಾನು ಸೀರೆಯನ್ನು ಉಟ್ಟುಕೊಳ್ಳುವಷ್ಟು ದೊಡ್ಡವಳಾಗಿಬಿಟ್ಟೆನಾ?  ಹೀಗಂತ ಮೊನ್ನೆ ಕಾಲೇಜಿನಲ್ಲಿ ನಡೆದ ನ್ಯಾಶನಲ್ ಸೆಮಿನರ್ ಗೆ ಎಲ್ಲರೂ ಕಂಪಲ್ಸರಿ ಸೀರೆಯನ್ನು ಉಡಲೇಬೇಕೆಂಬ ವಿಚಾರಕ್ಕೆ ಅನಿಸಿತ್ತು.. ಛೇ ನಾ ಸೀರೆ ಉಡಲ್ಲ ನಂಗೆ ಚನ್ನಾಗಿ ಕಾಣೋಲ್ಲ ಅಂತ ಎಷ್ಟೋ ಬಾರಿ sಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದೇನಾದ್ದರೂ ಫಲ ಕಂಡಿರಲಿಲ್ಲ. ಆದರೂ ಮನಸ್ಸಿನಲ್ಲಿ ಒಂದು ರೀತಿಯ ಸಂಭ್ರಮ ನನಗಂತ … Read more

ಬದುಕಿನ ಆಶಾಕಿರಣ: ಪದ್ಮಾ ಭಟ್

                              ”ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ” ಈ ಸಾಲನ್ನು ಪದೇ ಪದೇ ಕೇಳಬೇಕೆನಿಸಿತ್ತು.. ಮುಂದುವರೆದು ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿವುದೆ ಜೀವನ ಸಾಲೂ ಮತ್ತೊಮ್ಮೆ ಮಗದೊಮ್ಮೆ ಹಾಕಿ ಕೇಳಿಸಿದೆ. ಯಾವ ಮೋಹನ ಮುರಳಿ ಕರೆಯಿತೋ ಹೊಸದಾಗಿ ಕೇಳುವವಳೇನಲ್ಲ. ಆದರೆ ಎಂದಿಗಿಂತಲೂ ಆಪ್ತವೆನಿಸಿತ್ತು ಸಾಲುಗಳು..ಯಾಕೋ ಒಬ್ಬಂಟಿಯಾಗಿ ಕುಳಿತಿದ್ದವಳಿಗೆ ಹಾಡಿನಲ್ಲಿ ಕಳೆದು ಹೋಗುತ್ತಿದ್ದೇನೆ ಎಂಬುವುದು ಅರಿವಾಗದೇ ಇರುವಷ್ಟು ಮುಳುಗಿ ಹೋಗಿದ್ದೆ … Read more

ಚಿಕ್ಕಪುಟ್ಟ ಕಾಳಜಿಯಲ್ಲಿ: ಪದ್ಮಾ ಭಟ್

                ಎಷ್ಟೋ ಬಾರಿ ಚಿಕ್ಕಪುಟ್ಟ ವಿಷಯಗಳು ಅರ್ಥವಾಗುವುದೇ ಇಲ್ಲ. ಎಲ್ಲದರ ನಡುವೆ ಇದ್ದುಕೊಂಡೇ ಏನೂ ಗೊತ್ತಿಲ್ಲದ, ಅಭಿವ್ಯಕ್ತಿ ಪಡಿಸಲಾಗದ ರೀತಿಯಾಗಿಬಿಡುತ್ತದೆ.. ನಮ್ಮನ್ನು ಅವರು ಅರ್ಥ ಮಾಡ್ಕೋಬೇಕು, ಇವರು ಅರ್ಥಮಾಡಿಕೋಬೇಕು ಎಂದು ಹಂಬಲಿಸುವ ನಾವೇ ಯಾಕೆ ಬೇರೆಯವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಮೂಕರಾಗುತ್ತೇವೆಯೋ ಪ್ರಶ್ನಿಸಿಕೊಳ್ಳಬೇಕಿದೆ. ಪ್ರೀತಿಯ ನಡುವೆ, ಪ್ರೀತಿಸುವ ಜನರ ನಡುವೆ ನಾವೂ ಪ್ರೀತಿಯ ಜೀವಿಯಾಗಿದ್ದರೇ ಚಂದ. ಎಲ್ಲವನ್ನೂ ಹಗುರವಾಗಿ, ಸಡಿಲವಾಗಿ ತೆಗೆದುಕೊಳ್ಳುವಾಗ ಒಂದೆರಡು ನಿಮಿಷವಾದರೂ ಆ ವ್ಯಕ್ತಿಯ ಬಗ್ಗೆಯೋ, … Read more

ಕನಸಿನ ಹೊತ್ತು: ಪದ್ಮಾ ಭಟ್

                       ಒಂದೇ ಸಮನೆ ಹರಿಯುವ ನದಿಯಲ್ಲಿ ಬಿಟ್ಟ ಕಾಗದದ ದೋಣಿ.. ಎತ್ತ ಪಯಣಿಸಬೇಕೆಂಬುದೇ ಗೊತ್ತಿಲ್ಲದ ಗೊಂದಲದ ನಡುವೆ ಒಂದೇ ಸಮನೆ ನಕ್ಕು ನಗಿಸುವ ನಾನು ಮತ್ತು ನೀನು. ಬಿಚ್ಚಿಕೊಂಡ ಭರವಸೆಗಳನೆಲ್ಲ ಒಂದೆಡೆ ಒಟ್ಟುಗೂಡಿಸಿ ಕಾಪಾಡುವ ತವಕ..ನಿನ್ನ ಕಣ್ಣಿನಲಿ ಹರಿಯುವ ಸಂತಸದ ಹೊನಲಿನಲಿ ನಾನೂ ಸೇರಿಹೋಗುವ ನಲುಮೆ.. ಓಹ್ ಇದೆಲ್ಲ ಕನಸು ಎಂದು ಎದ್ದ ಕೂಡಲೇ ಗೊತ್ತಾಗಿತ್ತು..ನೀನು ಎಂಬುವವನೇ ಇಲ್ಲದವನ ಬಗೆಗೆ ಇಲ್ಲ ಸಲ್ಲದ … Read more

ಬೇಸರಗಳೇಕೆ ಹೀಗೆ ?: ಪದ್ಮಾ ಭಟ್

                       ಬೆಳಗಾಗಿ ಏಳುವುದರೊಳಗೆ, ಹೆಸರೇ ಇಲ್ಲದ ಬೇಸರಗಳು..ಇಷ್ಟದ ಗೆಳತಿಯೇ ಫೋನ್ ಮಾಡಲಿ, ಹತ್ತಿರದವರೇ ವಿಶ್ ಮಾಡಲಿ ಪ್ರತಿಕ್ರಿಯೆ ಸರಿಯಾಗಿ ಕೊಡಲು ಮನಸ್ಸಿಲ್ಲದ ಮನಸು.. ದಿನವೇ ಬೇಸರವಾ? ಅಥವಾ ನಾನೇ ನನಗೆ ಬೇಸರವಾಗಿಬಿಟ್ಟಿದ್ದೇನಾ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಎಲ್ಲಿ ಎಂದು ಯೋಚಿಸಬೇಕಷ್ಟೆ..ಯಾವುದೋ ಖುಷಿಯ ವಿಷಯಕ್ಕೂ ಮನಸ್ಸು ಹಗುರವಾಗದ ಸ್ಥಿತಿಯೋ, ಇಷ್ಟದ ಹಾಡಿಗೆ ಮನಸೋಲದೇ ಇರುವ ಬೇಸರವೋ ಅರಿಯದ ಸ್ಥಿತಿಗೆ ಒಂದಷ್ಟು ಬೇಡದೇ ಇರುವ … Read more

ಓ ಬಾಲ್ಯವೇ ಮರಳಿ ಬರಲಾರೆಯಾ?:ಪದ್ಮಾ ಭಟ್

ಹಾಸ್ಟೇಲಿನ ಬಳಿ ಬಂದಿದ್ದ ಪುಟ್ಟ ಹುಡುಗಿಯ ಹತ್ತಿರ ನಿನಗೆ ಲಗೋರಿ ಆಟ ಆಡೋಕೆ ಬರುತ್ತಾ ಎಂದು ಕೇಳಿದಾಗ  ಅವಳಿಂದ ಬಂದ ಉತ್ತರ ನಂಗೆ ಕಾರ್ ರೇಸ್ ಬರುತ್ತೆ, ಹಂಗ್ರಿ ಬರ್ಡ್ ಬರುತ್ತೆ, ಛೋಟಾ ಭೀಮ್ ಬರುತ್ತೆ ಎಂದು ಒಂದೇ ಸಮನೆ ಕಂಪ್ಯೂಟರಿನ, ಮೊಬೈಲ್ ನ ಆಟಗಳನ್ನು ಹೇಳಹೊರಟಿದ್ದಳು.. ಮಣ್ಣಿನಲ್ಲಿ ನಾನು ಆಟ ಆಡೋಲ್ಲ. ನನ್ನ ಡ್ರೆಸ್ ಗಲೀಜ್ ಆಗುತ್ತೆ ಎಂದು ಅಮ್ಮ ಬೈತಾಳೆ ಎಂದಳು..ಇದನ್ನೆಲ್ಲಾ ಕೇಳುತ್ತಿದ್ದಂತೆ ಮನಸ್ಸು ಹೇಳದೇ ಕೇಳದೆ ನೆನಪಿನ ಕದವನ್ನು ತಟ್ಟಿಯೇ ಬಿಟ್ಟಿತು..ಬಾಲ್ಯದ ನೆನಪುಗಳು … Read more