ದದ್ದ ಬೂಗು ಕಟ್ಟಿದಾಗ !: ಪ್ರಜ್ವಲ್ ಕುಮಾರ್
ಹೊರಗಿನಿಂದ ಬರುತ್ತಿದ್ದ ಗಾಳಿಗೋ, ರೂಮಿನಲ್ಲಿ ತಿರುಗುತ್ತಿದ್ದ ಫ್ಯಾನ್ ಗಾಳಿಗೋ ಗೊತ್ತಿಲ್ಲ; ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಆಚೀಚೆ ಅಲ್ಲಾಡುತ್ತಾ ಶಬ್ದ ಮಾಡುತ್ತಿತ್ತು. ಸಾಮಾನ್ಯವಾಗಿ ನನಗೆ ಮಲಗಿದ ಹತ್ತು-ಹದಿನೈದು ನಿಮಿಷಕ್ಕೆಲ್ಲಾ ನಿದ್ದೆ ಬರ್ತಿತ್ತು. ಇವತ್ತು ಹನ್ನೆರಡು ಘಂಟೆ ಆದ್ರೂ ನಿದ್ದೆ ಬರದೆ ಆಚೀಚೆ ಹೊರಳಾಡ್ತಾ ಇದ್ದ ನನ್ನನ್ನ ನೋಡಿ ಪಕ್ಕದಲ್ಲಿದ್ದ ರೂಮ್ ಮೇಟ್ ಕೇಳ್ದ. “ಯಾಕೋ? ಇನ್ನೂ ನಿದ್ದೆ ಬಂದಿಲ್ವಾ?” “ಇಲ್ಲಾ ಕಡೋ, ಬೂಗು ಕಟ್ಟಿದೆ” ಅಂದೆ. “ಏನು?! ಏನು ಕಟ್ಟಿದೆ?” ಜೋರಾಗಿ ನಗುತ್ತಾ ಮತ್ತೆ ಕೇಳಿದ. “ಬೂಗು! ಕಡೋ … Read more