ಪ್ರೀತಿಯಿದ್ದರೆ ಪಾರಿವಾಳ ಹಾರಿಹೋಗುವುದಿಲ್ಲ: ವಿನಾಯಕ ಅರಳಸುರಳಿ

ಪ್ರೀತಿಯ ಗೆಳೆಯಾ, ನೀನು ಹಾಕುವ ಸ್ಟೇಟಸ್ ಗಳನ್ನು ನಾನು ನೋಡುತ್ತಲೇ ಇದ್ದೇನೆ. ಅದೇನೋ ಖಿನ್ನತೆ, ಮುಗಿಯದ ಬೇಸರ ನಿನಗೆ ಅಲ್ವಾ? ಮೊನ್ನೆ ನೀನು ‘ಪ್ರೀತಿಯ ಪಾರಿವಾಳ ಹಾರಿ ಹೋಯ್ತೋ ಗೆಳೆಯಾ’ ಎಂದು ವ್ಯಕ್ತಿಯೊಬ್ಬ ಅಳುತ್ತಾ ಹಾಡುತ್ತಿರುವ ಹಾಡನ್ನು ಹಾಕಿಕೊಂಡಿದ್ದೆಯಲ್ಲಾ? ಅದನ್ನು ನೋಡಿ ನಿನಗೂ ನನಗೂ ಗೆಳೆಯನಾಗಿದ್ದವನೊಬ್ಬ ‘ಅವನದೆಂಥಾ ಕರ್ಮ ಮಾರಾಯಾ? ಲವ್ ಫೇಯ್ಲೂರಿರಬೇಕು’ ಎಂದು ನಿನ್ನ ಆಡಿಕೊಂಡ. ಯಾಕೋ ಪಿಚ್ಚೆನಿಸಿ ಈ ಪತ್ರ ಬರೆಯುತ್ತಿದ್ದೇನೆ. ಪ್ರೀತಿಯ ಮೊಟ್ಟಮೊದಲ ಕನಸು ಬಿದ್ದ ದಿನದಿಂದ ಈ ಕ್ಷಣ ತನಕ ಅದೆಷ್ಟೋ … Read more

ಚಿನುಅ ಅಚಿಬೆಯ Things Fall Apart- ವಸಾಹತು ಸಂಸ್ಕೃತಿಯ ದಬ್ಬಾಳಿಕೆಯ ಅನಾವರಣ: ನಾಗರೇಖಾ ಗಾಂವಕರ

1959ರಲ್ಲಿ ಪ್ರಕಟವಾದ ಚಿನುಅ ಅಚಿಬೆಯ Things Fall Apart ಕಾದಂಬರಿ ವಸಾಹತು ಪೂರ್ವದ ನ್ಶೆಜೀರಿಯಾದ ಜನಜೀವನ ಮತ್ತು ಬ್ರೀಟಿಷ್ ಆಗಮನದ ನಂತರದ ಅಲ್ಲಿಯ ಸಾಂಸ್ಕೃತಿಕ ಕಗ್ಗೊಲೆ, ಕ್ರೈಸ್ತ ಮಿಷನರಿಗಳಿಂದ ಮೂಲ ಇಗ್ಬೋ ಜನಾಂಗ ಮತಾಂತರದ ಮುಷ್ಠಿಯಲ್ಲಿ ನರಳಿದ್ದು, ಎಲ್ಲವನ್ನೂ ಹೊರಜಗತ್ತಿಗೆ ತೆರೆದಿಟ್ಟಿತು. ಇಂಗ್ಲೀಷನಲ್ಲಿ ಮೂಡಿ ಬಂದ ಆಧುನಿಕ ಆಫ್ರಿಕನ್ ಕಾದಂಬರಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ತೀವೃ ಚರ್ಚೆಗೆ ಒಳಗಾದ ಕಾದಂಬರಿ. ಕಾದಂಬರಿಯ ತಲೆಬರಹವು W. B. Yeats ಕವಿಯ The Second Coming ಎಂಬ ಕವಿತೆಯಲ್ಲಿಯ ಸಾಲಾಗಿದ್ದು, … Read more

ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ – ಅಮರ ಕವಿ ಜಾನ್ ಕೀಟ್ಸ್: ನಾಗರೇಖಾ ಗಾಂವಕರ

ಅತಿ ಚಿಕ್ಕ ವಯಸ್ಸಿನಲ್ಲಿ, ಅತೀ ಕಡಿಮೆ ಅವಧಿಯಲ್ಲಿ ಅಪಾರ ಅದ್ವಿತೀಯ ಪ್ರಗಾಥ ಸಾಹಿತ್ಯವನ್ನು ರಚಿಸಿ ಜಾಗತಿಕ ಸಾರಸ್ವತ ಲೋಕದ ಧ್ರುವತಾರೆಯಂತೆ ಬೆಳಗಿದವನೆಂದರೆ ಜಾನ್ ಕೀಟ್ಸ್. ಅಕ್ಷರ ಜಗತ್ತಿನಲ್ಲಿ ಚಿಮ್ಮಿದ ಬೆಳಕಿನ ಸೂಡಿ ಕೀಟ್ಸ್. ಆತನ ಜೀವನದುದ್ದಕ್ಕೂ ಸಾವು ಸುಳಿಯುತ್ತಲೇ ಇತ್ತು. ಹೆತ್ತವರ, ಒಡಹುಟ್ಟಿದವರ, ಸಾವು ಆತನ ವಿಚಲಿತಗೊಳಿಸುತ್ತಲೇ ಇದ್ದರೂ ಸಾವಿನಲ್ಲೂ ಸೌಂದರ್ಯ ಕಂಡ ಕವಿ. ತನ್ನ ಗೋರಿ ವಾಕ್ಯವನ್ನು ತಾನೇ ಬರೆದಿಟ್ಟ ಧೀರ. ವಿಲಿಯಂ ವಡ್ರ್ಸವರ್ಥ, ಎಸ್ ಟಿ. ಕೋಲ್ರಿಡ್ಜ್ ಇಂಗ್ಲೆಂಡಿನಲ್ಲಿ ರೋಮ್ಯಾಂಟಿಕ್ ಯುಗದ ಪ್ರವರ್ತಕರಾಗಿ “ಲಿರಿಕಲ್ … Read more

ಜಾನ್ ಡನ್ – ಎರಡು ಅನುಭಾವಿಕ ಕವಿತೆಗಳು: ನಾಗರೇಖಾ ಗಾಂವಕರ

ಹದಿನಾರನೇ ಶತಮಾನ ಜ್ಞಾನ ಪುನರುಜ್ಜೀವನದ ಮೇರು ಕಾಲ. ಅದರ ಉತ್ತರಾರ್ಧದಲ್ಲಿ ಜನಿಸಿದ ಡನ್ ಜಗತ್ತಿನ ಶ್ರೇಷ್ಟ ಸಾಹಿತಿಗಳಾದ ಶೇಕ್ಸಪಿಯರ್, ಸ್ಪೆನ್ಸರ್,ಮಿಲ್ಟನ್ , ಡ್ರೈಡನ್ ಮುಂತಾದ ಪ್ರಮುಖ ಕವಿಗಳ ಸಾಲಿನಲ್ಲಿ ಕಾಣಿಸಿಕೊಂಡರೂ ಆ ರಿನೇಸ್ಸಾನ್ಸ್‍ನ ಪ್ರಭಾವಕ್ಕೆ ಸಿಲುಕಿಯೂ ಸಿಲುಕದಂತೆ ಹೊಸ ಕಾವ್ಯ ಜಗತ್ತನ್ನು ಸೃಷ್ಟಿಸಿದ. ವಿದ್ವತ್ತಿನ ಪ್ರಭಾವಕ್ಕಿಂತಲೂ ಅನುಭವದ ನೈಜ ಸಂವೇದನೆಗಳು ಆತನ ಕಾವ್ಯವನ್ನು ಪ್ರಚಲಿತಗೊಳಿಸಿದವು. ಹೊಸತನಕ್ಕೆ ತೆರೆದುಕೊಂಡಿದ್ದ ಕಾವ್ಯ ಲಹರಿ, ಪದವಿನ್ಯಾಸಗಳು, ಲಯ ಎಲ್ಲವೂ ಡನ್‍ನ ಕಾವ್ಯವನ್ನು ಅಮರಗೊಳಿಸಿದವು. ಡನ್ ಮೆಟಾಫಿಸಿಕಲ್ ಕಾವ್ಯ ಪರಂಪರೆಯ ಪ್ರಮುಖ ಕವಿ. … Read more

ಮೆಟಾಫಿಸಿಕಲ್ ಸ್ಕೂಲ್‍ನ – ಜಾನ್ ಡನ್: ನಾಗರೇಖಾ ಗಾಂವಕರ

ಮೆಟಾಫಿಸಿಕಲ್ ಸ್ಕೂಲ್‍ನ ಪ್ರಮುಖ ಇಂಗ್ಲೀಷ ಕವಿ ಜಾನ್ ಡನ್. 1572ರ ಜನವರಿ 24ರಿಂದ ಜೂನ 19 ರ ಮಧ್ಯಭಾಗದಲ್ಲಿ ಲಂಡನ್ನಿನಲ್ಲಿ ಜನಿಸಿದ ಜಾನ್ ಡನ್. ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ್ದ. ಡನ್‍ನ ತಂದೆ ಇಜಾಕ್ ವಾಲ್ಟನ್ ಎಂಬಾತ ಶ್ರೀಮಂತ ವ್ಯಾಪಾರಿಯಾಗಿದ್ದ. ಆದರೆ ಡನ್ ತನ್ನ ತಂದೆಯನ್ನು ತನ್ನ ನಾಲ್ಕನೇ ವಯಸ್ಸಿಗೆ ಕಳೆದುಕೊಂಡ. ತಾಯಿ ಸರ್ ಥಾಮಸ್ ಮೋರ್‍ನ ಸಹೋದರಿ, ನಾಟಕಕಾರ ಜಾನ್ ಹೇವುಡ್‍ನ ಪುತ್ರಿಯಾಗಿದ್ದು ಪತಿ ಇಜಾಕ್‍ನ ಮರಣದ ನಂತರ ಡಾ. ಜಾನ್ ಸೈಮಂಜೆಸ್‍ನನ್ನು ಮರುವಿವಾಹವಾದಳು. ಹೀಗಾಗಿ … Read more

ಜಾನ್ ಡ್ರೈಡನ್‍ನ “All for love”- ಪ್ರೇಮ ವಿಜಯ: ನಾಗರೇಖಾ ಗಾಂವಕರ

ಈಜಿಪ್ತನ ರಾಣಿ ಕ್ಲೀಯೋಪಾತ್ರ. ತನ್ನ ಅಪೂರ್ವ ಸೌಂದರ್ಯದ ಕಾರಣದಿಂದಲೇ ಐತಿಹಾಸಿಕ ಪುಟಗಳಲ್ಲಿ ತನ್ನದೇ ಛಾಪು ಒತ್ತಿದ ಆ ಕಾಲದ ಜಗತ್ತಿನ ವೀರರೆಲ್ಲರ ನಿದ್ದೆಗೆಡಿಸಿದ ಲಾವಣ್ಯವತಿ. ರೋಮನ ಪೂರ್ವಭಾಗದ ದೊರೆ ಮಾರ್ಕ ಆಂಟನಿ. ಆದರೆ ಆಕೆಯ ಪ್ರೇಮದಲ್ಲಿ ಬಿದ್ದ ರೋಮನ ದೊರೆ ಆಂಟನಿ ಸಂಪೂರ್ಣ ಅದರಲ್ಲಿ ಕೊಚ್ಚಿಹೋಗಿದ್ದಾನೆ. ಅವರಿಬ್ಬರ ಪ್ರೇಮ ಯಾರಿಂದಲೂ ಮುರಿಯಲಾಗದ್ದು. ಇದೇ ಸಂದರ್ಭ ಚಕ್ರವರ್ತಿ ಆಂಟನಿ ಒಕ್ಟೇವಿಯಸ್ ಸೀಸರನೊಂದಿಗಿನ ಯುದ್ದದಲ್ಲಿ ಸೋಲಿನಿಂದ ಹತಾಶನಾಗಿ ಬದುಕಿನ ಆಕಾಂಕ್ಷೆಗಳನ್ನು ಕಳೆದುಕೊಂಡು ಇಜಿಪ್ತನ ಅಲೆಕ್ಸಾಂಡ್ರಿಯಾದ ಐಸಿಸ್ ದೇವಾಲಯದಲ್ಲಿ ಏಕಾಂಗಿಯಾಗಿ ತಂಗಿದ್ದಾನೆ. … Read more

ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more

ಕಾಮೆಡಿಗಳಲ್ಲಿ ಅದ್ವಿತೀಯತೆ ಮರೆದ- Ben Jonson: ನಾಗರೇಖಾ ಗಾಂವಕರ

ಇಂಗ್ಲೀಷ ಸಾಹಿತ್ಯದಲ್ಲಿ ಅದ್ವಿತೀಯನೆಂದೇ ಹೆಸರು ಗಳಿಸಿದ ಶೇಕ್ಸಪಿಯರ್ ತನ್ನ ಟ್ರಾಜಡಿಗಳಿಂದ ಖ್ಯಾತನಾಗಿದ್ದರೆ ಆತನ ಸಮಕಾಲೀನನಾದ ಬೆನ್‍ಜಾನ್ಸನ್ [ಆದರೂ ಹತ್ತು ವರ್ಷಗಳಿಗೆ ಕಿರಿಯ] ಕಾಮೆಡಿಗಳಲ್ಲಿ ಅದ್ವಿತೀಯತೆ ಮೆರೆದಿದ್ದ. ಹಾಗೆಂದು ಇಬ್ಬರೂ ಬರಿಯ ಒಂದೇ ಪ್ರಕಾರಕ್ಕೆ ಸೀಮಿತಗೊಂಡಿರಲಿಲ್ಲ. ಟ್ರಾಜಡಿ ಕಾಮೆಡಿಗಳೆರಡೂ ಮನುಷ್ಯನ ಬದುಕಿನ ಎರಡು ದಾರಿಗಳೇ ಆಗಿದ್ದು, ಶೇಕ್ಸಪಿಯರ ಕಾಮೆಡಿಗಳಿಂದಲೂ ಪ್ರಸಿದ್ಧ. ಅದು 1598ರ ಸುಮಾರು. ಬೆನ್ ಜಾನಸನ್ ತನ್ನ ಮೊದಲ ಕಾಮೆಡಿಯ ‘Every Man in His Humour’ಮೂಲಕ ಹಾಗೂ ಶೇಕ್ಸಪಿಯರನ ತನ್ನ ಮೊದಲ ಕಾಮೆಡಿ ‘Love’s Labour”s … Read more

ಸ್ನೇಹ ಮತ್ತು ಪ್ರೇಮವನ್ನು ಅಮರಗೊಳಿಸುವ- Shakespearean Sonnets: ನಾಗರೇಖಾ ಗಾಂವಕರ

ಸ್ನೇಹ ಎನ್ನುವುದು ಮಾನವ ಜಗತ್ತಿನ ಪ್ರಬಲ ಆಕಾಂಕ್ಷೆ ಮತ್ತು ಅದೊಂದು ಬಲ. ಸ್ನೇಹದ ಜೇನಹನಿ ಸ್ವಾದ ಸವಿದ ಮನಸ್ಸುಗಳಿಗೆ ಅದರ ಕಂಪು ಕೂಡಾ ಚಿರಪರಿಚಿತ. ಸ್ನೇಹ ಸ್ವರ್ಗದ ವಿಶಿಷ್ಟ ಕಾಣಿಕೆ. ವೈಯಕ್ತಿಕ ಜೀವನದ ಅದೆಷ್ಟೋ ಭಿನ್ನತೆಗಳು, ನ್ಯೂನ್ಯತೆಗಳು ಸ್ನೇಹದ ಪಯಣಕ್ಕೆ ಅಡ್ಡಿಯಾಗುವುದಿಲ್ಲ. ಅದಕ್ಕೊಂದು ಅಪೂರ್ವ ಉದಾಹರಣೆಯಾಗಿ ಶೇಕ್ಸಪಿಯರ್ ತನ್ನ ಜೀವಿತಾವಧಿಯಲ್ಲಿ ರಚಿಸಿದ 154 ಸಾನೆಟ್‍ಗಳಲ್ಲಿ ಮೊದಲ ಭಾಗದ ಸುಮಾರು 126 ಸುನೀತಗಳನ್ನು ತನ್ನ ಆಪ್ತ ಹಾಗೂ ಸುರಸುಂದರಾಂಗ ಶ್ರೀಮಂತ ಗೆಳೆಯನೊಬ್ಬನ ಕುರಿತು ಬರೆದಿದ್ದಾನೆ. ಆತನೊಂದಿಗಿನ ತನ್ನ ಅನುಪಮ … Read more

ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more

ಸುಂದರ ಬದುಕಿನ ಸುಖಾಂತ ನಾಟಕ-As You Like It: ನಾಗರೇಖಾ ಗಾಂವಕರ

ಶೇಕ್ಸಪಿಯರ ರಿನೈಜಾನ್ಸ್ ಕಾಲದ ಶ್ರೇಷ್ಟ ನಾಟಕಕಾರ. ಇಂಗ್ಲೆಂಡಿನಲ್ಲಿ ಕ್ವೀನ ಎಲಿಜಬೆತ್ ಆಳ್ವಿಕೆಯ ಕಾಲ ಅದು. ಆತ ಬರೆದ As You Like It ರೋಮ್ಯಾಂಟಿಕ ಕಾಮೆಡಿ. ಗೊಲ್ಲ ಅಥವಾ ದನಗಾಯಿ ಸಂಪ್ರದಾಯದ ಕಾಲ್ಪನಿಕ ರಮಣೀಯ ಗ್ರಾಮೀಣ ಸೊಬಗನ್ನು ಕಟ್ಟಿಕೊಡುತ್ತ ಗೊಲ್ಲ ಜನಾಂಗದ ವೈಭವೀಕೃತ ಬದುಕನ್ನು ವಿಫುಲವಾಗಿ ತನ್ನ ಕಾವ್ಯದಲ್ಲಿ ವಿಜೃಂಬಿಸುತ್ತಾನೆ ಶೇಕ್ಸಪಿಯರ್. ರೋಮ್ಯಾಂಟಿಕ ಕಾಮೆಡಿಗಳಲ್ಲಿ ಪ್ರೇಮ ಪ್ರಮುಖವಾದ ಆಶಯ. ಇಟಲಿಯ ಡ್ಯೂಕ್ ಸಿನಿಯರ್ ತನ್ನ ಸ್ವಂತ ಸಹೋದರನ ಕರಾಮತ್ತಿಗೆ ಬಲಿಯಾಗಿ ರಾಜ್ಯಭ್ರಷ್ಟನಾಗಿ ಆರ್ಡನ್ ಕಾಡಿನಲ್ಲಿ ತನ್ನ ಸಂಗಡಿಗರೊಂದಿಗೆ … Read more

ವೈಷಮ್ಯ ಮತ್ತು ಒಪ್ಪಂದದ ಮೇಲಿನ ಕಥಾನಕ –The Merchant Of Venice : ನಾಗರೇಖ ಗಾಂವಕರ

ಆಂಟೋನಿಯೋ ಇಟಲಿಯ ವೆನಿಸ್‍ನ ನಿವಾಸಿ. ಪ್ರಸಿದ್ಧ ವ್ಯಾಪಾರಿ. ಆತ ವ್ಯಾಪಾರಿಯಾಗಿದ್ದರೂ ಸದಾಚಾರ ಸಂಪನ್ನ, ಸ್ನೇಹಜೀವಿ, ದಯಾಳುವಾದ ಆತನ ಸ್ನೇಹ ಬಳಗ ದೊಡ್ಡದಾಗಿತ್ತು. ಬಸ್ಸಾನಿಯೋ, ಗ್ರೇಸಿಯಾನೋ, ಲೊರೆಂಜೋ, ಸಲೆರಿಯೋ, ಸಲಾನಿಯೋ ಇವರೆಲ್ಲರ ಅಚ್ಚುಮೆಚ್ಚಿನ ಗೆಳೆಯನಾತ. ಅವರಿಗಾಗಿ ತನ್ನೆಲ್ಲ ಆಸ್ತಿ ಸಂಪತ್ತು, ಜೀವವನ್ನು ಕೊಡಲು ಸಿದ್ದನಿದ್ದ. ಆತನ ವ್ಯಕ್ತಿತ್ವ, ವೈಚಾರಿಕತೆ,ಕರುಣಾಪೂರಿತ ವ್ಯಕ್ತಿತ್ವ ಇತರರಿಗೆ ಮಾದರಿ. ಆತ ಮಮತೆ ಕರುಣೆಗಳ ಕ್ರೈಸ್ತ ತತ್ವಕ್ಕೆ ಮತ್ತೊಂದು ರೂಪಕವೆಂಬಂತೆ ಕಂಡುಬರುತ್ತಾನೆ. ಆದರೆ ಆತ ಅದೇನೋ ಉದ್ವಿಗ್ನತೆಯಲ್ಲಿ ಮಾನಸಿಕ ಕ್ಲೇಶದಿಂದ ನೋಯುತ್ತಿದ್ದಾನೆ. ಆಂಟೋನಿಯೋ ಅದಕ್ಕೆ ನಿರ್ದಿಷ್ಟ … Read more

ಶೇಕ್ಸಪಿಯರನ ‘ Measure for measure ’ – ಡಂಭ ಚಹರೆ ಮತ್ತು ಕಟು ವಾಸ್ತವಗಳು: ನಾಗರೇಖ ಗಾಂವಕರ

ಡಾರ್ಕ ಕಾಮೆಡಿ ಎಂದೇ ಪ್ರಸಿದ್ಧವಾದ ಶೇಕ್ಸಪಿಯರನ Measure for measure ನಾಟಕ ತಾತ್ವಿಕ ಮತ್ತು ನೈತಿಕ ಸಂಘರ್ಷಗಳನ್ನು ಆಳವಾಗಿ ವಿಶ್ಲೇಷಿಸುವ ಮೂಲಕ ಗಮನ ಸೆಳೆಯುತ್ತದೆ. ನಾಟಕದ ಮುಖ್ಯ ಪಾತ್ರ ಎಂಜೆಲ್ಲೋ ಹಾಗೂ ಮತ್ತೊಬ್ಬಳು ಇಸಾಬೆಲ್ಲಾ ಈ ಸಂಘರ್ಷದ ಅಡಕತ್ತರಿಯಲ್ಲಿ ಸಿಕ್ಕಿ ಬೀಳುತ್ತಾರೆ. ನಾಟಕದ ಕೇಂದ್ರ ವಸ್ತುವೇ ಅದಾಗಿದ್ದು ತನ್ನ ಶೀಲವನ್ನು ರಕ್ಷಿಸಿಕೊಂಡು ತನ್ನತನವನ್ನು ಉಳಿಸಿಕೊಳ್ಳುವ ಇಲ್ಲವೇ ಅಣ್ಣನ ಪ್ರಾಣ ಉಳಿಸಲು ನೈತಿಕತೆಯನ್ನು ಮಾರಿಕೊಳ್ಳುವ ಸಂದಿಗ್ಧತೆಯಲ್ಲಿ ಇಸಾಬೆಲ್ಲಾ ತೊಳಲಾಡುತ್ತಾಳೆ. ಮುಖವಾಡದ ಧರ್ಮನಿಷ್ಠೆಯನ್ನು, ಸೈದ್ಧಾಂತಿಕ ಪ್ರತಿಪಾದನೆಯನ್ನು ಮಾಡುವ ಎಂಜೆಲ್ಲೋ ವ್ಯಕ್ತಿಗತ … Read more

ಶೇಕ್ಸಪಿಯರ್‍ನ ಮ್ಯಾಕ್ ಬೆತ್ -ಮಹತ್ವಾಕಾಂಕ್ಷೆಯ ದುರಂತ: ನಾಗರೇಖ ಗಾಂವಕರ

ಸ್ಕಾಟ್‍ಲ್ಯಾಂಡಿನ ರಾಜ ಡಂಕನ್. ಆತನಿಗೆ ಇಬ್ಬರು ಪುತ್ರರು. (Malcolm and Donalbain)ಮಾಲ್‍ಕಮ್ ಮತ್ತು ಡೊನಾಲಬೇನ್. ವಯಸ್ಸಾದ ಡಂಕನ್ ರಾಜ್ಯಭಾರವನ್ನು ನಿಭಾಯಿಸಲಾಗದ ಸ್ಥಿತಿಯಲ್ಲಿ, ತನ್ನ ಉತ್ತರಾಧಿಕಾರಿಗಳನ್ನು ಪಟ್ಟಕ್ಕೆ ತರುವ ಸಮಯದಲ್ಲೇ ಆತನ ಥೇನ್ಸ್ ಆಫ್ ಕೌಡರ್ ಎಂಬ ಪ್ರಾಂತಾಧಿಕಾರಿ ನಾರ್ವೆಯ ರಾಜನ ಜೊತೆಗೂಡಿ ಸ್ಕಾಟ್‍ಲ್ಯಾಂಡಿನ ಮೇಲೆ ಆಕ್ರಮಣ ಮಾಡುತ್ತಾನೆ. [ಥೇನ್ಸ್ ಎಂದರೆ ಗವರ್ನರ ಎಂದರ್ಥ] ಆ ಸಮಯದಲ್ಲಿ ಡಂಕನ್ ತನ್ನ ಸಹೋದರ ಸಂಬಂಧಿಗಳಾದ ಮ್ಯಾಕಬೆತ್ ಮತ್ತು (Banquo) ಬ್ಯಾಂಕೊ ಸಹಾಯದಿಂದ ಆ ಸೈನ್ಯವನ್ನು ಸದೆಬಡಿದು ಕೌಡರನ್ನು ವಶಪಡಿಸಿಕೊಳ್ಳುತ್ತಾರೆ. ವಿಜಯಿಶಾಲಿಗಳಾದ … Read more

ಕ್ಷಮೆ ಮತ್ತು ರಾಜಿ ಸೂತ್ರ ಪ್ರತಿಪಾದಿಸುವ The tempest: ನಾಗರೇಖ ಗಾಂವಕರ

ಆಫ್ರಿಕಾದ ಟ್ಯುನಿಸ್‍ನಲ್ಲಿ ವಿವಾಹಕಾರ್ಯದಲ್ಲಿ ಭಾಗವಹಿಸಿ ಮರಳುತ್ತಿದ್ದ Neapolitansಗಳಾದ [ನೇಪಲ್ಸ್‍ನ ನಿವಾಸಿಗಳು] ಇಟಲಿಯ ನೇಪಲ್ಸ್‍ನ ರಾಜ ಅಲೆನ್ಸೋ ಆತನ ಪುತ್ರ ಫರ್ಡಿನಾಂಡ್, ಸಹೋದರ ಸೆಬಾಸ್ಟಿಯನ್ ಹಾಗೂ ಮಿಲನ್‍ನ ಡ್ಯೂಕ್ ಅಂಟೋನಿಯೋ ಮತ್ತು ಇತರ ಸಂಗಡಿಗರಿದ್ದ ಹಡಗು ಸಮುದ್ರ ಮಧ್ಯೆ ಬಿರುಗಾಳಿಯ ಹೊಡೆತಕ್ಕೆ ನಲುಗಿ ಹೋಗಿದೆ. ಇದಕ್ಕೆ ಕಾರಣ ಪ್ರೊಸ್ಪೆರೋ. ಆತನ ಉದ್ದೇಶವೆಂದರೆ ಅವರೆಲ್ಲಾ ತಾನು ವಾಸವಾಗಿದ್ದ ಆ ನಡುಗಡ್ಡೆಗೆ ಬರುವಂತಾಗಬೇಕು. ಅದಕ್ಕಾಗಿ ಅತ ತನ್ನ ಮಾಂತ್ರಿಕ ವಿದ್ಯೆಯನ್ನು ಬಳಸಿ ಚಂಡಮಾರುತವನ್ನೆಬ್ಬಿಸಿದ್ದಾನೆ. ಇದಕ್ಕೆ ಕಾರಣವಿದೆ. ಆತನಿಗೆ ಅವರಿಂದ ಅನ್ಯಾಯವಾಗಿದೆ. ಮಿಲನ್‍ನ … Read more

ಕನಸುಗಳಿಗೆ ಒಂದಿಷ್ಟು ಪುಷಪ್ ಕೊಡಿ: ಕೃಷ್ಣ ಶ್ರೀಕಾಂತ ದೇವಾಂಗಮಠ

ಮನುಷ್ಯರೆಲ್ಲರಿಗೂ ಕನಸು ಬೀಳುತ್ತವೆ. ಅದರಲ್ಲಿ ಕೆಲವು ಬರಿ ಕಾಣುವ ಕನಸುಗಳು ಮಾತ್ರ, ಆದರೆ ಕನಸುಗಳನ್ನು ಕಟ್ಟುವವರು ಬಹಳ ಕಡಿಮೆ ಹಾಗೆಯೇ ಕಟ್ಟಿದ ಕನಸುಗಳಿಗೆ ರೆಕ್ಕೆ ಕೊಡುವವರು ಇನ್ನೂ ಬಹಳ ಕಡಿಮೆ. ಹಾಗಾದರೆ ಮೊದಲು ನೀವು ಕನಸು ಕಾಣುವುದು ಮತ್ತು ಕಟ್ಟುವುದರ ಮಧ್ಯೆಯ ಸೂಕ್ಷ್ಮ ವ್ಯತ್ಯಾಸವನ್ನು  ತಿಳಿದುಕೊಳ್ಳಬೇಕು. ಇದನ್ನು ನಿಮಗೆ ಅಬ್ದುಲ್ ಕಲಾಂ ಅವರ ಮಾತುಗಳಿಂದ ಬೇಗ  ತಿಳಸಬಹುದು ಅನ್ನಿಸುತ್ತದೆ. ಅಬ್ದುಲ್ ಕಲಾಂ ಹೇಳುತ್ತಾರೆ " ಮಲಗಿದಾಗ ಬೀಳುವುದು ಕನಸಲ್ಲ , ನಿಮ್ಮನ್ನು ಯಾವುದು ಮಲಗಲು ಬಿಡುವುದಿಲ್ಲವೋ ಅದು … Read more

ನೆನಪಿನ ಪಯಣ – ಭಾಗ 6: ಪಾರ್ಥಸಾರಥಿ ಎನ್ 

ಇಲ್ಲಿಯವರೆಗೆ ಈಗ ನನಗೆ ಅನ್ನಿಸುತ್ತಿದೆ. ನಮ್ಮಿಂದ ದೊಡ್ಡದೊಂದು ತಪ್ಪು ಆದ ಹಾಗಿದೆ. ಇದನ್ನು ಸರಿಪಡಿಸಲು ಹೊರಗಿನವರ ಸಹಾಯ ಇಲ್ಲದೆ ಆಗಲ್ಲ. ನೆನಪಿಸಿಕೊಂಡೆ. ಪುಣೆಯಲ್ಲಿ ನನ್ನ ತಮ್ಮನ ಮಗ ಒಬ್ಬನಿದ್ದಾನೆ ಅಚ್ಯುತ. ಅವನು ಡಾಕ್ಟರ್ , ಮನೋವೈದ್ಯಕೀಯದಲ್ಲಿ ಪರಿಣಿತ. ರೂಮಿನಿಂದ ಹೊರಗೆ ಬಂದು, ಹಾಲಿನಲ್ಲಿ ಕುಳಿತು. ನನ್ನ ಮೊಬೈಲ್ ತೆಗೆದು ಅವನ ನಂಬರ್ ಹುಡುಕಿ ಕಾಲ್ ಮಾಡಿದೆ ಹಲೋ ,ನಾನಪ್ಪ ನಿಮ್ಮ ದೊಡ್ಡಪ್ಪ ಹೇಳಿ ದೊಡ್ಡಪ್ಪ, ಅಪರೂಪಕ್ಕೆ ಕರೆ ಮಾಡಿದ್ದೀರಿ. ದೊಡ್ಡಮ್ಮ ಹೇಗಿದ್ದಾರೆ ? ಎಂದೆಲ್ಲ ವಿಚಾರಿಸಿದ. ಎಲ್ಲ … Read more

ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ: ಉದಯ ಪುರಾಣಿಕ

ಪ್ರಾಚೀನ ಕರ್ನಾಟಕದ ಪ್ರಮುಖ ಅಗ್ರಹಾರಗಳಲ್ಲಿ ಕುಕನೂರು ಕೂಡಾ ಒಂದಾಗಿತ್ತು. ಶಾಸನಗಳ ಪ್ರಕಾರ “ಶ್ರೀಮನ್ಮಹಾಗ್ರಾರ ಕುಕ್ಕನೂರು” ಎಂದು ಕರೆಯುವ ಈ ಅಗ್ರಹಾರದ ಉತ್ತರದಲ್ಲಿ ಸುಮಾರು ಒಂದು ಮೈಲಿ ದೂರದಲ್ಲಿ ದ್ಯಾಂಪುರ (ದೇವಿಪುರ)ವನ್ನುವ ಪುಟ್ಟ ಗ್ರಾಮವಿದೆ. ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲೂಕಿನಲ್ಲಿರುವುದು ಈ ದ್ಯಾಂಪುರ. ಕನ್ನಡ ಭಾಷೆಯಲ್ಲಿ 12 ಪುರಾಣಗಳನ್ನು ರಚಿಸಿರುವ, ವೇದಾಂತಿ, ದಾರ್ಶನಿಕ ಮತ್ತು ಪ್ರಸಿದ್ಧ ಪ್ರವಚನಕಾರರಾದ ಚೆನ್ನಕವಿಗಳು ಮತ್ತು ಅವರ ಅಣ್ನನ ಮಗನಾದ ಕವಿರತ್ನ ಕಲ್ಲಿನಾಥ ಶಾಸ್ತ್ರಿ ಪುರಾಣಿಕರವರು ಕನ್ನಡ ನಾಡು-ನುಡಿಗಾಗಿ ಅವಿರತ ಮತ್ತು ಅನುಪಮ ಸೇವೆಯನ್ನು … Read more

ಮುಳುಗುತ್ತಿರುವ ಕುತುಬ್‍ದಿಯಾ!: ಅಖಿಲೇಶ್ ಚಿಪ್ಪಳಿ

ಜರ್ಮನಿಯ ಹಿಟ್ಲರ್ ಹೆಸರು ಯಾರಿಗೆ ಗೊತ್ತಿಲ್ಲ? ಖೈದಿಗಳನ್ನು ಕೊಲ್ಲಲು ವಿಷದ ಅನಿಲದ ಕೊಠಡಿಯನ್ನೇ ನಿರ್ಮಿಸಿದ್ದ ಕುಖ್ಯಾತಿ ಒಳಗಾಗಿದ್ದವ. ಹಿಂಸೆಯ ಪ್ರತಿರೂಪ! ಲಕ್ಷಾಂತರ ಯಹೂದಿಗಳು ಈ ಸರ್ವಾಧಿಕಾರಿಯ ಹಿಂಸೆಗೆ, ಕ್ರೂರತ್ವಕ್ಕೆ ಬಲಿಯಾದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇತಿಹಾಸವೆಂದರೆ ಒಳಿತು-ಕೆಡುಕುಗಳ ಸಮಗ್ರ ಮಾಹಿತಿ. ಇದರಲ್ಲಿ ಒಳಿತನ್ನೂ ನೋಡಬಹುದು, ಕೆಡುಕನ್ನು ಕಾಣಬಹುದು. ಪ್ರಸ್ತುತ ವಿದ್ಯಮಾನಗಳು ಮುಂದೊಂದು ದಿನ ಇತಿಹಾಸದ ಪುಟದಲ್ಲಿ ಸೇರುತ್ತವೆ. ಆಧುನಿಕ ಅಭಿವೃದ್ಧಿ, ಐಷಾರಾಮಿತನಗಳು ಇಡೀ ವಿಶ್ವವನ್ನೇ ಹಿಟ್ಲರ್‍ನ ವಿಷಕಾರಕ ಕೊಠಡಿಯನ್ನಾಗಿ ಮಾಡುತ್ತಿವೆ. ಇದರಲ್ಲಿ ಮೊದಲಿಗೆ ಬಲಿಯಾಗುವವರು ಮಾತ್ರ ಬಡದೇಶದ … Read more

ಪ್ರೇಮಖೈದಿ-೩: ಅಭಿಸಾರಿಕೆ

ಇಲ್ಲಿಯವರೆಗೆ ಹೀಗೆ ಯೋಚಿಸುತ್ತಿದ್ದ ವಿಶ್ವನಿಗೆ ಸಮಯವಾಗಿದ್ದೆ ತಿಳಿಯಲಿಲ್ಲ, ಈ ಮಧ್ಯೆ ನರ್ಸ್ ಬಂದು ಎರಡು ಬಾರಿ ಡ್ರಿಪ್ಸ್ ಬದಲಾಯಿಸಿ ಹೋಗಿದ್ದಳು. ವಿಶ್ವ ಬೆಳಗ್ಗೆ ಸ್ಪಂದನ ಕೊಟ್ಟ ಮೊಬೈಲ್ ತೆಗೆಯಲು ಪ್ರಯತ್ನಿಸಿದ, ತುಂಬಾ ಕಷ್ಟವಾಯಿತು ಕೈಗಳಿಗೆ ಆದರೂ ತೆಗೆದು ಸಮಯ ನೋಡಿದ, ಸಂಜೆ ಐದಾಗಿತ್ತು ಸ್ಪಂದನ ಬರಬಹುದೆಂದು ಕಾದು ಕುಳಿತ, ಅವಳ ಸುಳಿವಿರಲಿಲ್ಲ, ಆರಕ್ಕೆ ವಿಶ್ವನಿಗೆ ಕರೆ ಮಾಡಿದ ಸ್ಪಂದನ ತನಗೆ ತುಂಬಾ ಕೆಲಸವಿರುವುದಾಗಿಯೂ ತಾನಿಂದು ಬರುವುದಿಲ್ಲವೆಂದು ಹೇಳಿದಳು, "ನಿನ್ನ ಸ್ನೇಹಿತ ಪ್ರಕಾಶ್ ಫೋನ್ ಮಾಡಿದ್ದರು ಬೆಳಿಗ್ಗೆ ನಿನ್ನ … Read more