ರಾಮಂದ್ರ: ಹರಿ ಪ್ರಸಾದ್
ರಾಮಮಂದಿರ ಅಂದರೆ ಏನೇನೋ ಚಿತ್ರಗಳು ಮೂಡುವ ಈ ಕಾಲದಲ್ಲಿ, ನನಗಂತೂ ನಮ್ಮ ಸೋದರತ್ತ್ತೆ ಊರಿನ ಮಧ್ಯದಲ್ಲಿದ್ದ ರಾಮಮಂದಿರವೇ ಕಣ್ಮುಂದೆ ಬರುತ್ತದೆ. ಸುಮಾರು ನೂರೈವತ್ತು ಮನೆಗಳ ಪುಟ್ಟ ಊರದು. ನನ್ನ ಬಾಲ್ಯ ಬಹುಪಾಲು ಕಳೆದಿದ್ದು ಆ ಊರಿನಲ್ಲೆ. ನನ್ನ ಬಾಲ್ಯದ ಅನೇಕ ಚಟುವಟಿಕೆಗಳು ಅದರ ಸುತ್ತಮುತ್ತ ಹರಡಿಹೋಗಿವೆ. ಆದ್ದರಿಂದ ಆ ಚಿತ್ರ ಮನಸಿನಿಂದ ಹೋಗಲೊಲ್ಲದು. ಕೆಮ್ಮಣ್ಣು ಗೋಡೆಯ ಅದರ ಒಳಭಾಗದಲ್ಲಿ ಇಪ್ಪತ್ತು ಜನ ಕೂರುವಷ್ಟು ಜಾಗ. ಈಚೆ ಪಡಸಾಲೆಯಲ್ಲಿ ಒಳಕ್ಕಿಂತ ತುಸು ಚಿಕ್ಕದಾದ ಜಾಗ. ಬೀದಿಭಾಗಕ್ಕೆ ಮರ ಮತ್ತು … Read more