ದೀಪ: ದಿವ್ಯ ಆಂಜನಪ್ಪ

ಅಂಧಕಾರವನ್ನು ತೊಲಗಿಸಿ, ಬೆಳಕನ್ನು ನೀಡಿ ದಾರಿ ತೋರುವ 'ದೀಪ'ವು ಜ್ಞಾನದ ಸಂಕೇತವಾಗಿದೆ. ಸಾಂಪ್ರದಾಯಕ ದೃಷ್ಟಿಯಿಂದಲೂ ದೀಪವು ಶ್ರೇಷ್ಟ ಸ್ಥಾನವನ್ನು ಪಡೆದಿದೆ. ಪೂಜೆ ಆಚರಣೆಗಳಲ್ಲಿ, ಆರತಿ ಬೆಳಗುವಲ್ಲಿ, ಯಾವುದೇ ಒಂದು ಕಾರ್ಯಕ್ರಮದ ಉದ್ಘಾಟನೆಯಲ್ಲಿ, ದೀಪ ಬೆಳಗಿಸುವ ಕಾರ್ಯವೇ ಮೊದಲಾಗಿದೆ. ಹೀಗೆ ನಮ್ಮ ಮನಸ್ಸು, ನಮ್ಮ ಸಂಸ್ಕೃತಿ ಮತ್ತು ನಮ್ಮ ಬುದ್ಧಿಯೂ ದೀಪವನ್ನು ಶ್ರೇಷ್ಠ ಸ್ಥಾನದಲ್ಲಿಟ್ಟು ನೋಡುತ್ತದೆ. ಭಾವನಾತ್ಮಕವಾಗಿಯೂ ಮತ್ತು ಸಾಹಿತ್ಯಾತ್ಮಕವಾಗಿಯೂ ದೀಪವು ನಮ್ಮ ಮನಗಳನ್ನು ಬೆಳಗಿಸಿವೆ ಎಂದೇ ಹೇಳಬಹುದು. ದೀಪವು ಬೆಳಕಿನ, ಜ್ಞಾನದ, ಕ್ರಾಂತಿಯ ದ್ಯೋತಕವಾಗಿ ಅನೇಕ ಕವಿತೆಗಳಾಗಿವೆ. ಕವಿಗಳಿಗೆ ಸ್ಪೂರ್ತಿಯಾಗಿ … Read more

ಪಾಕೀಟಿನ್ಮುಂದೆ ಓಸಿ ಪಾಸಿಯೆಲ್ಲ ಪುಟ್ಗೋಸಿ ಇದ್ದಂಗೆ! : ಎಚ್.ಕೆ.ಶರತ್

ಹಾಳೂರಿನ ಫುಲ್‍ಟೈಟು ಪಾರ್ಟಿಗಳಾದ ನೈಂಟಿ, ಫೋರ್‍ಟ್ವೆಂಟಿ ಮತ್ತು ಪಂಟಿ ಕರುಳ ತಳಮಳ ತಾಳಲಾರದೇ ‘ಕಿಕ್ಕೇಶ್ವರ’ ಲಿಕ್ಕರ್ ಶಾಪಿನೆಡೆಗೆ ದಾಪುಗಾಲಿಟ್ಟರು. ನೈಂಟಿ: ಸಿದ್ರಾಮಣ್ಣ ನಮ್ ಕಷ್ಟ ಅರ್ಥ ಮಾಡ್ಕಂದು ಚೀಪ್ ಅಂಡ್ ಬೆಸ್ಟು ಹೆಂಡನಾ ನಮ್ಗೆಲ್ಲ ಕುಡ್ಸೋಕೆ ಹೊಂಟಿತ್ತಪ್ಪ. ಯಾರ್ಯಾರೋ ಸೇರ್ಕಂದು ಅದ್ಕೆ ಕಲ್ಲಾಕ್ಬುಟ್ರು. ಫೋರ್‍ಟ್ವೆಂಟಿ: ಈಗಿರೋ ಸಿಸ್ಟಮ್ಮೇ ಸರ್ಯಾಗೈತೆ ಸುಮ್ಕಿರಪ್ಪ. ಈಗೆಂಗೋ ದಿನಾ ದುಡ್ಕಂದು ಸಂಜೆ ಹೊತ್ ಮಾತ್ರ ಕುಡ್ಕಂದು ನ್ಯಾಯ್ವಾಗಿ ಬದುಕ್ತಿದ್ದೀವಿ. ಚೀಪಾಗಿರೋ ಹೆಂಡನಾ ಮಾರ್ಕೆಟ್ಟಿಗೆ ಬಿಟ್ರೆ ವಾರ್ದಲ್ಲಿ ಮೂರ್ದಿನ ದುಡ್ದು ಏಳ್ದಿನಾನೂ ಕುಡ್ದು ಕಳ್ಳು … Read more

ಯಾರ್ ಮನ ಮುರ್ದ್ ಬುಟ್ಟು ಬಂದ ಬಡ್ಡೈದ ಇವತ್ತು: ಡಾ. ಗವಿ ಸ್ವಾಮಿ

ವಾರದ ಹಿಂದೆ ಒಬ್ಬ ರೈತ ಬಂದಿದ್ದ. ”ನೆನ್ನ ರಾತ್ರ ಅಸು ಈಯ್ತು.. ಇನ್ನೂ ಮ್ಯಾಲ್ಕೇ ಎದ್ದಿಲ್ಲ.. ತಲ ಇಟ್ಬುಟ್ಟದ ಒಂಚೂರ್ ಬಿರ್ರನ್  ಬನ್ನಿ ಸಾ , ಮನಲಿ ಎಮ್ಕ ಬಾಯ್  ಬಡ್ಕಂಡು ಅಳತ್ ಕೂತರ” ಅವನನ್ನು ಬೈಕಿನಲ್ಲಿ ಕೂರಿಸಿಕೊಂಡು ಅವನ ಊರಿಗೆ ಹೊರಟೆ. ಪೂರ್ತಿ ತೆಂಗಿನ ಗರಿಯಲ್ಲಿ ಕಟ್ಟಿದ ಕೊಟ್ಟಿಗೆ ಅದು. ಹಸು ತಲೆಯನ್ನು ಹೊಟ್ಟೆಯ ಮೇಲೆ ನುಲಿದುಕೊಂಡು ಮಲಗಿತ್ತು. ಮೈ ತಣ್ಣಗಿತ್ತು. ಕರು ಹಾಕಿದ ನಂತರ, ಹಸುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ  ‘ಮಿಲ್ಕ್ ಫೀವರ್’ ನ ಲಕ್ಷಣಗಳು ಕಾಣುತ್ತಿದ್ದವು … Read more

ಸ್ಪಾಟಾಗಿದ್ದರೆ : ಡಾ. ಗವಿಸ್ವಾಮಿ

ಸಂಜೆ ಐದಾಗಿತ್ತು. ಬೈಕಿನಲ್ಲಿ ಊರಿಗೆ ಹೋಗುತ್ತಿದ್ದೆ. ಐವತ್ತರವತ್ತು ಮೀಟರಿನಷ್ಟು ಮುಂದೆ ಗೌರ್ಮೆಂಟ್ ಬಸ್ ಹೋಗುತ್ತಿತ್ತು. ಬಿರುಗಾಳಿ ವೇಗದಲ್ಲಿ ನನ್ನ ಸನಿಹಕ್ಕೇ ಬಂದು ಸೈಡು ಹೊಡೆದು  ಹೋಯ್ತು ಒಂದು ಬೈಕು. ಒಂದು ಕ್ಷಣ ಎದೆ ಝಲ್ಲೆಂದಿತು. ಬಸ್ಸನ್ನೂ ಸೈಡು ಹೊಡೆಯಲು  ಯತ್ನಿಸಿದ ಬೈಕ್ ಸವಾರ. ಎದುರಿಗೆ ಲಾರಿ ಬಂದು ಬಿಡ್ತು. ಸಿಕ್ಕಿಕೊಂಡು ಬಿಟ್ಟಿದ್ದರೆ ಅಲ್ಲೇ ಕತೆಯಾಗಿರುತ್ತಿದ್ದ . ಸಣ್ಣ ಗ್ಯಾಪಿನಲ್ಲಿ ನುಸುಳಿಬಿಟ್ಟ. ಆದರೆ ಅದೇ ಸ್ಪೀಡಿನಲ್ಲಿ ಹೋಗಿ  ಎದುರಿಗಿದ್ದ ಮೈಲಿಗಲ್ಲಿಗೆ ಗುದ್ದಿಸಿಬಿಟ್ಟ! ಕೇವಲ ಐದಾರು ಸೆಕೆಂಡುಗಳಲ್ಲಿ  ಇಷ್ಟೆಲ್ಲಾ  ನಡೆದುಹೋಯ್ತು. … Read more

ಹಳ್ಳಿಯಾವ ಕಳಿಸಿಕೊಟ್ಟ ಪಾಠ: ಶ್ರೀಕಾಂತ್ ಮಂಜುನಾಥ್

ನಾಗರೀಕ ಸಮಾಜ ಎಂದು ಬೀಗುವ ಪಟ್ಟಣದಲ್ಲಿ ಸಂಸ್ಕೃತಿ ಮರೆತು ಹೇಗೆ ಆಡುತ್ತೇವೆ ಅನ್ನುವ ಭಾವ ಇರುವ ಒಂದು ಕಿರು ಲೇಖನ. ಗುಡ್ಡ-ಗಾಡುಗಳನ್ನು ಸುತ್ತಿ ಬಸವಳಿದಿದ್ದ ಒಂದು ಗುಂಪು, ತುಂಬಾ ದಿನಗಳಾದ ಮೇಲೆ, ಒಂದೇ ಛಾವಣಿಯಡಿಯಲ್ಲಿ ಸೇರಿದ್ದವು. ಹೊರಗಡೆ ಬಿಸಿಲು ಚೆನ್ನಾಗಿ ಕಾದಿತ್ತು, ಒಳಗೆ ಹೊಟ್ಟೆ ಹಸಿವಿನಿಂದ ಕುದಿಯುತ್ತಿತ್ತು. ಏನು ಸಿಕ್ಕಿದರು ತಿಂದು ತೇಗಿಬಿಡುವ ಧಾವಂತದಲ್ಲಿದ್ದರು. ಸುಮಾರು ಎಂಟು ಮಂದಿಯಿದ್ದ ಗುಂಪಾದ್ದರಿಂದ ಹೋಟೆಲ್ನಲ್ಲಿ ಒಂದೇ ಟೇಬಲ್ ನಲ್ಲಿ ಜಾಗ ಸಿಗುವುದು ಕಷ್ಟವಾಗಿತ್ತು. ಅಲ್ಲಿದ್ದ ಮೇಲ್ವಿಚಾರಕರು "ಸರ್ ಸ್ವಲ್ಪ ಹೊತ್ತು … Read more

ಅಲೆಮಾರಿ ಏಕಲವ್ಯ ಮುನಿತಿಮ್ಮಯ್ಯ – ಡಾ. ರಾಜರಿಂದ ಪ್ರೇರಣೆ: ಪ್ರಮೋದ್ ಶೇಟ್ ಗುಂಡಬಾಳ

ಯೋಗಾ ಇದು ಭಾರತ ದೇಶದ ಪಾರಂಪರಿಕ ವಿದ್ಯೆ. ಇದರಿಂದ ಆಕರ್ಷಿತರಾದವರಿಗೇನು ಕಡಿಮೆ ಇಲ್ಲ. ಇದರ ಬಗ್ಗೆ ಒಬ್ಬೊಬ್ಬರು ಒಂದೊದು ರೀತಿಯಲ್ಲಿ ಆಕರ್ಷಿತರಾಗುತ್ತಾರೆ, ಅಂತವರಲ್ಲಿ ಶ್ರೀ ಮುನಿತಿಮ್ಮಯ್ಯ ಕೂಡ ಒಬ್ಬರು. ಇವರು ಒಬ್ಬ ಏಕಲವ್ಯನಿದ್ದಂತೆ. ಇವರಿಗೆ ಪ್ರೇರಣೆ ಕನ್ನಡದ ಮೇರು ನಟ ಡಾ. ರಾಜಕುಮಾರವರು. ೮೦ರ ದಶಕದಲ್ಲಿದ್ದಂತಹ ಪ್ರಜಾಮತ ಪತ್ರಿಕೆಯಲ್ಲಿ ಡಾ. ರಾಜ್ ರವರ ಯೋಗಾಸನದ ಕುರಿತು ವಿವಿದ ಭಂಗಿಯ ಚಿತ್ರಗಳ ಸಹಿತ ಲೇಖನ ಪ್ರಕಟವಾಗುತಿತ್ತು. ಅದನ್ನು ನೋಡಿ ಪ್ರೇರಿತರಾದವರು ಶ್ರೀ ಮುನಿತಿಮ್ಮಯ್ಯನವರು. ಬೆಂಗಳೂರಿನ ಹೆಬ್ಬಾಳದ ನಿವಾಸಿಯಾದ ಇವರು … Read more

ಅಕ್ಷಯ ತೃತೀಯದಲ್ಲಿ ಚಿನ್ನ ಕೊಳ್ಳುವುದು ಅಂದರೆ…:ವಿ.ಆರ್.ಕಾರ್ಪೆಂಟರ್

ನನ್ನ ಸ್ನೇಹಿತನೊಬ್ಬ ಸೇನೆಯಲ್ಲಿದ್ದಾನೆ. ಕಳೆದ ವಾರವಷ್ಟೇ ರಜೆಯ ಮೇಲೆ ಊರಿಗೆ ಬಂದಿದ್ದಾನೆ. ಅವನಿಗೆ ಅವನ ತಂಗಿಯ ಕಡೆಯವರು ಅವನ ಮದುವೆಯ ವಾರ್ಷಿಕೋತ್ಸವ ಸಮಾರಂಭಕ್ಕೆಂದು ಸ್ವಲ್ಪ ದುಬಾರಿ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದನ್ನು ಹೆಚ್ಚಿಗೆ ಅನ್ನಿಸುವಷ್ಟು ಉಬ್ಬಿಕೊಂಡು ನನ್ನ ಬಳಿ ಹೇಳಿಕೊಂಡ. ಇಂದು ತನಗೆ ಸಿಕ್ಕ ಈ ಅನಿರೀಕ್ಷಿತ ಉಡುಗೊರೆಯ ಹಿನ್ನೆಲೆಯನ್ನು ಹೇಳಿಕೊಂಡ. ಅದು ಮುಂದಿನಂತಿದೆ. ಕಳೆದ ಎರಡು ವಾರದ ಯಾವುದೋ ದಿನ ಅಕ್ಷಯ ತೃತೀಯವಂತೆ. ಅಂದು ಅವನ ಹೆಂಡತಿ ’ರೀ ಇವತ್ತು ಅಕ್ಷಯ ತೃತೀಯ ಜಾಸ್ತೀ ಅಲ್ಲದಿದ್ದರೂ ಚೂರು … Read more

ಒಂದು ಕದ್ದಾಲಿಕೆ: ಹರಿಪ್ರಸಾದ್

ನನಗೆ ನಾಲಿಗೆ ಬಗ್ಗೆ ಒಲವು ಇಲ್ಲದಿದ್ದರೂ ಕಿವಿಯ ಬಗ್ಗೆ ಅಪಾರ ಪ್ರೀತಿ. ಈ ಕಿವಿಗಳಾದರೋ ಎಲ್ಲೇ ಹೋದರೂ ಸುಮ್ಮನಿರುವುದಿಲ್ಲ. ಏನಾದರೂ ಕೇಳಿಸಿಕೊಳ್ಳುತ್ತಲೇ ಇರುತ್ತವೆ. ಕೇಳಿಸಿಕೊಂಡು ಅವು ಸುಮ್ಮನಿರುವುದಿಲ್ಲ. ನನ್ನನ್ನು ವಿನಾಕಾರಣ ಪೀಡಿಸುತ್ತಿರುತ್ತವೆ. ಒಂದಿನ ಟೀ ಅಂಗಡೀಲಿ ಯಾರೋ ಮಾತಾಡಿದ್ದು ಕೇಳಿಸಿಕೊಂಡು ಬಂದಿದ್ದವು. ರಾತ್ರಿ ನಿದ್ದೆ ಮಾಡಲು ಬಿಡದೆ ಪೀಡಿಸಿದವು. ಆ ಪೀಡನೆಯೇ ಸಾರಾಂಶವೇ ಈ ಬರಹ. ಅವನು ಏನೋ ಮದುವೆ ಆಕ್ಕುಲ್ವ? ಇವನು ಆಯ್ತಿನಿ ಅವನು ಅಂಗಾರೆ ಉಡ್ಗಿ ನೋಡ್ಕಂಡಿದೀಯ, ಯಾವ ಕ್ಯಾಷ್ಟು ಇವನು ನಿಂಗೆ ನನ್ … Read more

ಬಸ್ ಸ್ಟ್ಯಾಂಡ್ ಬದುಕು:ಗವಿಸ್ವಾಮಿ

ಸಂಜೆ ಏಳಾಗಿತ್ತು. ಮಳೆ ಬೀಳುವ ಎಲ್ಲಾ ಮುನ್ಸೂಚನೆಗಳೂ ಕಾಣುತ್ತಿದ್ದವು. ಆದರೂ, ಒಂದು chance ತೆಗೆದುಕೊಂಡು ಊರಿನತ್ತ ಬೈಕ್ ಸ್ಟಾರ್ಟ್ ಮಾಡಿದೆ. ಎರಡು ಮೂರು ಕಿಮೀ ಮುಂದೆ ಹೋಗುವಷ್ಟರಲ್ಲಿ ಟಪ್ ಟಪ್ ಟಪ್ ಟಪ್ ಅಂತ ಚುಚ್ಚತೊಡಗಿದವು ದಪ್ಪ ದಪ್ಪ ಹನಿಗಳು. ಮುಂದೆ ಹೋದಂತೆ ಮಳೆಯ ರಭಸ ಇನ್ನೂ ಹೆಚ್ಚಾಯಿತು. ಹೇಗೋ ಸಹಿಸಿಕೊಂಡು ಒಂದು ಮೈಲಿಯಷ್ಟು ಮುಂದೆ ಹೋಗಿ ಹಳ್ಳಿಯೊಂದರ  ಬಸ್ ಸ್ಟ್ಯಾಂಡ್ ತಲುಪಿಕೊಂಡೆ. ಅಲ್ಲಾಗಲೇ ಐದಾರು ಬೈಕುಗಳು ನೆನೆಯುತ್ತ ನಿಂತಿದ್ದವು.  ಬಸ್ ಸ್ಟ್ಯಾಂಡ್ ಅಕ್ಷರಷಃ ಹೌಸ್ಫುಲ್ಲಾಗಿತ್ತು. ಆಗ ತಾನೆ … Read more

ಡಿಪೋ ಅಕ್ಕಿ: ಹನಿಯೂರು ಚಂದ್ರೇಗೌಡ

  "ನ್ಯಾಯಬೆಲೆ ಅಂಗಡಿ" ಎಂಬೀ ಮೂರಕ್ಷರದ ಬೋರ್ಡಿನತ್ತ ಗಮನವಹಿಸಿದರೆ, ನನ್ನ ಮನವು ಪುಲಕಿತಗೊಳ್ಳುತ್ತದೆ. ಚನ್ನಪಟ್ಟಣ ತಾಲೂಕು ಬಹುತೇಕವಾಗಿ ಮಳೆಯನ್ನಾಶ್ರಯಿಸಿದ, ಅಲ್ಲಲ್ಲಿ ಕೊಂಚ ಪಂಪ್ ಸೆಟ್ಟನ್ನಾಶ್ರಯಿಸಿದ ಬೇಸಾಯ ಪದ್ದತಿಯನ್ನು ಹೊಂದಿದೆ. ಇಂಥ ತಾಲೂಕಿನ ನಮ್ಮನ್ನೂ ಸೇರಿಸಿ ಎಷ್ಟೋ ಜನರಿಗೆ ಅನ್ನದ ಆಸರೆಯಾಗಿದ್ದು ಮಾತ್ರ ಈ ಸೊಸೈಟಿಯ ಅಕ್ಕಿಯೇ. ನಾನು ಚಿಕ್ಕವನಾಗಿದ್ದಾಗ ನನ್ನ ಅಪ್ಪ-ಅವ್ವನ ಜತೆಯಲ್ಲಿ ತಿಂಗಳಿಗೊಂದಾವರ್ತಿ ಬರುತ್ತಿದ್ದ ಈ ಅಕ್ಕಿಯನ್ನು ತರಲು ಡಿಪೋ ಅಥವಾ ಸೊಸೈಟಿಗೆ ಹೋಗುತ್ತಿದ್ದದ್ದು, ಅದನ್ನು ನಾನೇ ಬಹಳ ಉತ್ಸಾಹದಿಂದ ಹೊತ್ತು ತರುತ್ತಿದ್ದದ್ದು ಈಗಲೂ ಪುಳಕಗೊಳಿಸುವ … Read more

ನಮ್ಮಪ್ಪನೇ ಈಗ ಸೊಸೈಟಿಯ ಅಧ್ಯಕ್ಷ: ಡಾ. ಗವಿ ಸ್ವಾಮಿ

  ನಮ್ಮ ಸಂಪಾದಕರ  ಟೈಮ್ ಲೈನನ್ನು ಜಾಲಾಡುತ್ತಿದ್ದೆ. ಅರೆ, ಡಿಪೋ ಅಕ್ಕಿಯ ಬಗ್ಗೆ ಲೇಖನ ಕಳಿಸಬೇಕಂತೆ ಪಂಜು ವಿಶೇಷ ಸಂಚಿಕೆಗಾಗಿ! ಛೇ ನಾನು ಇದನ್ನು ಮೊದಲೇ ಗಮನಿಸಬಾರದಿತ್ತಾ. ಇನ್ನೊಂದೇ ದಿನ ಬಾಕಿ ಇದೆ. 18ಕ್ಕೆ ಡೆಡ್ ಲೈನ್. ಬರೆಯಲೇಬೇಕು.  ಏನಾದರೂ ಬರೆಯಲೇಬೇಕು. ಆ ಹಕ್ಕು ನನಗಿದೆ. ಬಹುಶಃ ಡಿಪೋ ಅಕ್ಕಿಯ ಬಗ್ಗೆ  ಅಧಿಕಾರಯುತವಾಗಿ ಮಾತನಾಡುವ ಹಾಗು ಬರೆಯುವ ಹಕ್ಕು ಇರುವುದು ಅದರ ರುಚಿ ನೋಡಿದವರಿಗೆ ಮಾತ್ರ! ಅವರಲ್ಲಿ ನಾನೂ ಒಬ್ಬ . ಅದಕ್ಕೇ ಹೇಳಿದ್ದು ನನಗೆ ಹಕ್ಕಿದೆ … Read more

ಜಾತಿ! :ಡಾ. ಗವಿ ಸ್ವಾಮಿ

  ನಾಗರಹೊಳೆ ಮತ್ತು ಬಂಡಿಪುರ ರಾಷ್ಟ್ರೀಯ ಉದ್ಯಾನವನಗಳ ನಡುವೆ ಓಂಕಾರ್ ರೇಂಜ್ ಎಂಬ ಅರಣ್ಯ ಇದೆ. ಅದರ ಸೆರಗಿನಲ್ಲಿ ಶಿವಕುಮಾರಪುರ ಎಂಬ ಗ್ರಾಮ ಇದೆ. ಆ ಗ್ರಾಮದ ಜನರಿಗೆ ನಿತ್ಯವೂ ಕಾಡುಪ್ರಾಣಿಗಳೊಂದಿಗೆ ಸಂಘರ್ಷ ನಡೆಸಬೇಕಾದ ಪರಿಸ್ಥಿತಿ . ಇಂಡೋ-ಪಾಕ್ ಗಡಿಗಿಂತ ಒಂದು ಕೈ ಹೆಚ್ಚು ಉದ್ವಿಗ್ನತೆಯನ್ನು ಇಲ್ಲಿ ಕಾಣಬಹುದು. ಕಾಡು ಪ್ರಾಣಿಗಳೇ ಇಲ್ಲಿ ರೈತರ ಪಾಲಿನ terrorist ಗಳು! ರೈತರಿಗೂ ಫಾರೆಸ್ಟಿನವರಿಗೂ ಇಲ್ಲಿ ನಿರಂತರ ತಿಕ್ಕಾಟ. ನಮ್ಮ ದನಗಳನ್ನು ಫಾರೆಸ್ಟಿನ  ಬೌಂಡರಿ ದಾಟಲು ಬಿಡುವುದಿಲ್ಲ; ಹಿಂದೆಲ್ಲಾ ಸಣ್ಣ ಪುಟ್ಟ ಕಟ್ಟಿಗೆ … Read more

ಬಿಳಿಯ ಮರ್ಸಿಡೀಸ್ ಬೆಂಝ್: ಉಪೇಂದ್ರ ಪ್ರಭು

  ’ಏನ್ ಬಾಬಾ ನೀನು, ಯಾವಾಗ ನೋಡಿದ್ರೂ ಬರೇ ಕನ್ನಡ ಕಥೆಗಳನ್ನೇ ಬರೀತೀಯಾ. ಇಂಗ್ಲಿಷ್‌ನಲ್ಲಿ ಬರೆದ್ರೆ ನಾವೂ ಓದ್‌ಬಹುದಲ್ವಾ’ ಕಂಪ್ಯೂಟರ್ ಎದುರು ಕೂತು ಟೈಪ್ ಮಾಡುವಲ್ಲಿ ಮಗ್ನನಾಗಿದ್ದ ನನ್ನನ್ನು ರೇಗಿಸುತ್ತಾಳೆ ಹದಿಹರೆಯಕ್ಕೆ ಕಾಲಿಡುತ್ತಿರುವ ದ್ವಿತೀಯ ಸುಪುತ್ರಿ ಸ್ವಾತಿ. ’ಏ ಹುಡ್ಗಿ, ಕಥೆಗಳಲ್ಲಿ ಕನ್ನಡ ಕಥೆ ಇಂಗ್ಲಿಷ್ ಕಥೆ ಎಂದೇನೂ ಇಲ್ಲ. ಕನ್ನಡ ಕಥೆಗಳನ್ನೇ ಬರೀತೀಯಾ ಅನ್ನುವ ಬದಲು ಕನ್ನಡದಲ್ಲೇ ಕಥೆಗಳನ್ನು ಬರೀತೀಯಾ ಅನ್ನೋದು ವ್ಯಾಕರಣಬದ್ಧವಾಗುತ್ತದೆ’- ನನ್ನ ಕನ್ನಡ ಪಾಂಡಿತ್ಯವನ್ನು ಕನ್ನಡ ಓದಲು ಬರೆಯಲು ಬಾರದ ನನ್ನ ಹೆಂಡತಿ … Read more

ಕತೆ – ಚಿತ್ರಕತೆ – ನಿರ್ದೇಶಕ..:ಮಹದೇವ ಹಡಪದ್

  ಒಂದು ಕೃತಿಯ ಜೀವಾಳವೆಂದರೆ ಸಾರ್ವತ್ರಿಕ ಕಾಲವನ್ನು ಹಿಡಿದಿಡುವ ಶಕ್ತಿಯನ್ನು ಹೊಂದಿರುವಂಥದ್ದು. ಆಳವಾದ ಅನುಭವ, ಜ್ಞಾನದ ಅನುಭಾವ, ಸಂತೃಪ್ತ ಭಾವಗಳು ಎಲ್ಲಿ ಮೇಳೈಸಿಕೊಂಡಿರುತ್ತವೋ ಅಲ್ಲಿ ಪ್ರದರ್ಶನಕ್ಕಿಂತ ಪರಾಮರ್ಶನಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ಕಲಾಕಾರರು ತಮ್ಮ ಅನುಭವ ಮತ್ತು ಜೀವನದ ವಿರೋಧಾವಿರೋಧಗಳನ್ನೆಲ್ಲ ಕೃತಿಯಾಗಿಸುವ ನಿಟ್ಟಿನಲ್ಲಿಯೇ ಉತ್ಸುಕರಾಗಿರುತ್ತಾರೆ. ಅಭಿವ್ಯಕ್ತಿ ಅನ್ನುವುದು ಕೂಡ ಕಲಾದೃಷ್ಟಿಯ ಅಂತಃಪಠ್ಯವಾಗಿ ಸತ್ಯಶೋಧನೆ  ಹುಡುಕಾಟದಲ್ಲಿ ತೊಡಗಿರುತ್ತದೆ. ವಾಸ್ತವವನ್ನು ಗ್ರಹಿಸುವುದೇ ಸಿನೆಮಾ ಮಾರ್ಗದಲ್ಲಿ ಮೂಲ ಪಠ್ಯವಾಗಿರುತ್ತದೆ. ಲೂಮಿಯೇರ್ ಸಹೋದರರು ತಮ್ಮ ಮೊದಲ ಚಿತ್ರಗಳನ್ನು ಇಂಥ ವಾಸ್ತವಿಕ ಅಂಶಗಳನ್ನು ಸೆರೆಹಿಡಿಯುವ … Read more

ಮದುವೆಯೆಂಬುದೊಂದು ಖಾಸಗಿ ಸಂಗತಿ (ಮೂಲ: ಚಿನುವ ಅಚಿಬೆ, ಅನುವಾದ: ಮೋಹನ್ ವಿ ಕೊಳ್ಳೇಗಾಲ)

  ಅಪರಾಹ್ನದ ಹೊತ್ತಿನಲ್ಲಿ ಲಾಗೋಸ್ ಪಟ್ಟಣದ ಕಸಂಗ ಬೀದಿಯ ತನ್ನ ಕೊಠಡಿಯಲ್ಲಿ ಪಕ್ಕ ಕುಳಿತಿದ್ದ ನಾಮೇಕಾನಿಗೆ ನೇನೆ ಕೇಳಿದಳು – ‘ನಿಮ್ಮ ತಂದೆಗೆ ಇನ್ನೂ ಪತ್ರ ಬರೆದಿಲ್ಲವೇ?’ ‘ಇಲ್ಲ, ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ರಜೆಗೆಂದು ಊರಿಗೆ ಹೋದಾಗ ಹೇಳುವುದು ಸರಿ ಎನಿಸುತ್ತಿದೆ’ ‘ಯಾಕೆ? ನಿನ್ನ ರಜೆಗೆ ಇನ್ನೂ ಆರು ವಾರಗಳು ಬೇಕು. ಈ ಖುಷಿಯ ವಿಚಾರ ನಿಮ್ಮ ತಂದೆಗೆ ಬೇಗ ಗೊತ್ತಾಗಲಿ’ ಕೆಲ ಕ್ಷಣ ಮೌನವಾದ ನಾಮೇಕಾ ಪದಗಳಿಗೆ ತಡಕಾಡುವವನಂತೆ ಮಾಡಿ ಮಾತನಾಡಿದ – ‘ಈ … Read more

ಕಣ್ಣುಗಳನ್ನು ನೋಡಿದೆ ಕಣ್ಣಾಲಿಗಳಲ್ಲಿ ನೀರಾಡುತ್ತಿತ್ತು: ಡಾ. ಗವಿ ಸ್ವಾಮಿ

  ಮೊನ್ನೆ ಒಬ್ಬ ರೈತ ಎತ್ತುಗಳನ್ನು ಹೊಡೆದುಕೊಂಡು ಬಂದಿದ್ದ. ಎತ್ತುಗಳು ಕುಂಟುತ್ತಿದ್ದವು. ಕಾಲುಗಳಲ್ಲಿ ಗಾಯಗಳಾಗಿದ್ದವು. ಏನಪ್ಪಾ ಆಯ್ತು.. ಇಷ್ಟೊಂದು ಗಾಯಗಳಾಗಿವೆಯಲ್ಲ ಅಂದೆ. ''ಯಾನೇಳ್ಳಿ ಸೊಮಿ ಎಲ್ಲಾ ನಮ್ ಹಣಬರ'' ಅಂದು ಹಣೆ ಕುಟ್ಟಿಕೊಂಡ. ಅದೇನ್ ಸ್ಪಷ್ಟವಾಗಿ ಹೇಳಪ್ಪ ಅಂದೆ. '' ಓದುಡ ಓದುಡ ಅಂತ್ ಬಡ್ಕಂಡಿ… ಬಡ್ಡಿಕೂಸು ಕಿಂವಿಗೇ ಹಾಕನಿಲ್ಲ… ಎಸ್ಸೆಲ್ಸಿ ಪೈಲ್ ಮಾಡ್ಕತು. ನಿನ್ ಹಣಾಲ್ ಬರದಾಗಾಬುಡು ನಡ ಆರಂಬನ್ಯಾರು ಕಲ್ತಗ ಅಂತ ಆರಂಬ ಕಲಸ್ದಿ'' '' ಬಡ್ಡಿಕೂಸು ಇವತ್ಯಾನ್ ಮಾಡ್ತು ಅಂದ್ರ.. ಕಟ್ಟಿರ ಏರ್ನೂ … Read more

ಇವ ಸುಮ್ನೇ ಗೀಚ್ತಾನೆ, ಸೀರಿಯಸ್ ಆಗ್ಬೇಡಿ…: ಎಂ. ಆರ್. ಸಚಿನ್

ಗುರುಭ್ಯೋ ನಮಃ ಅದೊಂದು ಕಾಲವಿತ್ತು. ಗುರುಗಳು ಎಂದರೆ ಸಾಕ್ಷಾತ್ ದೇವರೇ ಎಂಬ ಭಾವನೆ ಜನರಲ್ಲಿತ್ತು. ’ಹರ ಮುನಿದರೂ ಗುರು ಕಾಯ್ವನು’ ಎಂಬಾ ನಂಬುಗೆಯಿತ್ತು. ಮೇಲಾಗಿ ಗೌರವವಿತ್ತು, ಆದರವಿತ್ತು. ಆದರೆ,,, ಕಾಲ ಬದಲಾಯ್ತೋ, ಜನರೇ ಚೇಂಜ್ ಆದ್ರೋ ಗೊತ್ತಾಗ್ಲಿಲ್ಲಾ, ಗುರು ಅನ್ನೋ ಪದವೇ ಇಂದು ಏನೇನೋ ಆಗೊಗಿದೆ. "ಬಾ ಗುರು’, "ತೊಗೋ ಗುರು", "ಮಗಾ ಹೊಡಿ ಗುರು" ಮುಂತಾದ ಪದಗಳನ್ನ ನಿಮ್ಮಾ ಆಸುಪಾಸಲ್ಲಿ ಕೇಳದ ಕಿವಿಗಳಿದ್ರೆ,  ಅದಕ್ಕೆರಡು ಲೀಟರ್ ಚಿಮಣಿ ಎಣ್ಣೆ ಹಾಕಿಸಿ ಕಿಲಿನು ಮಾಡಿಸಿ, ಪುಣ್ಯ ಕಟ್ಕಳಿ. … Read more

ಮೊದಲ ಸೂರ್ಯೋದಯ: ಪ್ರಜ್ವಲ್ ಕುಮಾರ್

  ವಾರದ ಕೊನೆ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಸೇರಿ ಟ್ರಿಪ್ ಹೋಗೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ಗುಂಪೊಂದು ರಾತ್ರಿ ಟ್ರೆಕ್ಕಿಂಗಿಗೆ ಹೊರಟು ನಿಂತ್ವಿ. ಈ ಸಲ ಹೋಗೋಣಾ ಅನ್ಕೊಂಡಿದ್ದು ಚಂದಗಿರಿ ಅನ್ನುವ ಜಾಗಕ್ಕೆ. ಹಾಸನಕ್ಕೆ ಹೋಗುವ ದಾರಿಯಲ್ಲಿರುವ ಈ ಜಾಗವನ್ನು ನಮ್ಮ ಗುಂಪಲ್ಲಿ ಒಬ್ಬನನ್ನು ಬಿಟ್ಟರೆ ಬೇರೆ ಯಾರೂ ನೋಡಿರ್ಲಿಲ್ಲ. ಚಂದಗಿರಿಯ ತುದಿಯಲ್ಲಿ ಸೂರ್ಯೋದಯ ತುಂಬಾ ಚೆನ್ನಾಗಿ ಕಾಣುತ್ತೆ ಅನ್ನೋದನ್ನ ಕೇಳಿದ್ದ ನಾವು ಈ ಸಲ ಆ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದ್ದೆವು. ಸೂರ್ಯ … Read more

ಕಟ್ಟೆಯಲ್ಲೊ೦ದಿಷ್ಟು ಹರಟೆ: ವೆಂಕಟೇಶ್ ಪ್ರಸಾದ್

  ಬೆ೦ಗಳೂರಿನಲ್ಲಿ ಆರು ತಿ೦ಗಳ ಬಿಡುವಿಲ್ಲದ ಕೆಲಸದ ಬಳಿಕ ತುಸು ವಿಶ್ರಾ೦ತಿ ಬಯಸಿ ಊರಿಗೆ ಬ೦ದಿದ್ದೆ. ಈ ಆರು ತಿ೦ಗಳಿನಲ್ಲಿ ಓದುವುದು, ಬರೆಯುವುದು ಎರಡೂ ಉದಾಸೀನವೆ೦ಬ ಹೊದಿಕೆ ಹೊದ್ದುಕೊ೦ಡು ಮಕಾಡೆ ಮಲಗಿತ್ತು! ಈ ಬಾರಿ ಏನಾದರು ಬರೆಯೋಣವೆ೦ದು ಲ್ಯಾಪ್ ಟಾಪ್ ನೆದುರು ಫ್ಯಾನಿನ ಕೆಳಗೆ ಕುಳಿತಿದ್ದೆ, ಏನಾಯಿತೊ ಏನೋ ಧುತ್ತನೆ ಕರೆ೦ಟ್ ಹೋಯಿತು. ಬಿಸಿಲ ಬೇಗೆಗೆ ಬೆವರ ಪ್ರವಾಹ ಪ್ರಾರ೦ಭವಾಯಿತು, ತುಸು ಬಾಯಾರಿದ೦ತಾಗಿ ನೀರು ಕುಡಿಯಲು ಅಡುಗೆ ಮನೆಗೆ ಹೋದರೆ ಫಿಲ್ಟರ್ ನಲ್ಲಿ ನೀರು ಖಾಲಿಯಾಗಿತ್ತು. ಸರಿ, … Read more

ಐಪಿಎಲ್‌ನ ಕೊಬ್ಬಿದ ಕಾಡುದನಗಳು ಮತ್ತು ಹೆನ್ರಿ ಒಲಾಂಗೋ:ವಿ.ಆರ್.ಕಾರ್ಪೆಂಟರ್

ಸುಮಾರು ಹತ್ತು ವರ್ಷಗಳ ಮಾತು. ಶಾರ್ಜಾದಲ್ಲಿ ನಡೆದ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಭಾರತದ ದೇವಮಾನವ ಬ್ಯಾಟ್ಸ್‌ಮನ್ ಸಚಿನ್‌ನ ಯಾವ ತಂತ್ರಕ್ಕೂ ದಾರಿ ಮಾಡಿಕೊಡದೆ ಬೇಲ್ಸ್ ಎಗರಿಸಿದ, ದ್ರಾವಿಡ್‌ನ ಗೋಡೆಗೆ ತೂತು ಹೊಡೆದ, ಬಾಲಂಗೋಚಿಗಳ ತಲೆ ಸವರಿಹಾಕಿದ ಒಲಾಂಗೋನನ್ನು ಹುಡುಕಲು ಅಲ್ಲಿನ ಸರ್ವಾಧಿಕಾರಿ ಸರ್ಕಾರ ಏಳುವರ್ಷಗಳ ಹಿಂದೆಯೇ ಗುಪ್ತಚರ ಸಂಸ್ಥೆಯೊಂದಕ್ಕೆ ಸುಪಾರಿ ನೀಡಿತ್ತು! ಈ ಒಲಾಂಗೋ ಕಗ್ಗತ್ತಲ ಖಂಡ ಆಫ್ರಿಕಾದ ಕಾಡಿನ ಜಿಂಬಾಬ್ವೆಯ ಕುಗ್ರಾಮದವನು. ಬಡತನದ ದಿನಗಳಲ್ಲೇ ಹಾಡುಗಾರನಾಗಿ ರೂಪುಗೊಂಡು ರೋಡ್‌ಶೋಗಳನ್ನು ಕೊಡುತ್ತಲೇ, ನೀಗ್ರೋ ಜಾನಪದೀಯ … Read more