ಅನಿಶ್ಚಿತತೆಯ ಬಿರುಗಾಳಿಗೆ ಸಿಕ್ಕು ಬೆಳಗಲು ಸೆಣಸಾಡುತ್ತಿರುವ ದೀಪಗಳು: ಕಮಲ ಬೆಲಗೂರ್

ಬಾಲ್ಯಾವಸ್ತೆ ಮಾನವ ಬದುಕಿನ ಅತ್ಯಮೂಲ್ಯಕ್ಷಣಗಳು ಆದರೆ ಅದೇ ಕ್ಷಣವೇ ಅಂಗವಿಕಲ ಮಗುವಿಗೆ ತ್ರಾಸದಾಯಕವಾಗಿರುತ್ತದೆ. ತನ್ನ ಹೆತ್ತವರ ನೋಟದಲ್ಲಿ ಪ್ರೀತಿಯ ಬದಲು ಕನಿಕರ ನೋವು ವ್ಯಥೆ ಕಂಡಾಗ ಆ ಮುಗ್ಧ ಮನಸ್ಸು ಕುಗ್ಗುತ್ತದೆ. 'ನಾನು ಅಂಗ ವಿಕಲನಾಗಿ ಬದುಕುವುದಕ್ಕಿಂತ ಸಾವನ್ನು ಬಯಸುತ್ತೇನೆ '. ಇಂತಹ ಪ್ರತಿಕ್ರಿಯೆ ವಿಚಿತ್ರವೆನ್ನಿಸಿದರೂ ಸತ್ಯ. ಪ್ರತಿನಿತ್ಯ ಇಂಚಿಂಚು ನೋವನ್ನುಂಡು ಸೋಲೆದುರಿಸುತ್ತಾ ಪರಾವಲಂಬಿಗಳಾಗಿ ಅಸಹನೀಯ ಬದುಕನ್ನು ಬದುಕುವವರ ಬಗ್ಗೆ ಸಾಮಾನ್ಯರಿಗೆ ಸಹಾನುಭೂತಿಯಾಗುವುದು. ಆದರೆ ವಾಸ್ತವದಲ್ಲಿ ಸಾಮಾನ್ಯ ಜನರು ಜೀವನ ನಡೆಸುವ ರೀತಿಗಿಂತ ಭಿನ್ನವಾಗಿ ಹೆಚ್ಚು ದಕ್ಷತೆಯಿಂದ … Read more

ಮೃದುಲ: ಪಾರ್ಥಸಾರಥಿ ಎನ್.

 ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !. ಎಂತಹುದೋ ಮಾಯಕದ ನೆನಪಿನಲ್ಲಿ ನಕ್ಕಳು ಮೃದುಲ. ಕಾಲೇಜಿಗೆ ಹೋಗುವ ಬಸ್ಸು ಎಂಟಕ್ಕೆ  ಮುಖ್ಯರಸ್ತೆಗೆ ಬಂದುಬಿಡುತ್ತದೆ ಅಷ್ಟರೊಳಗೆ ಸಿದ್ದವಾಗಿ ಹೋಗದಿದ್ದರೆ ಬಸ್ಸು ತಪ್ಪಿಸಿಕೊಂಡಂತೆ ಮತ್ತೆ ಸಿಟಿ ಬಸ್ ಹಿಡಿದು ಹೋಗುವದೆಂದರೆ ರೇಜಿಗೆ ಎನ್ನುವ ಭಾವ ತುಂಬಿದಂತೆ ಪೂರ್ಣ ಎಚ್ಚರಗೊಂಡು ಎದ್ದು ಕುಳಿತಳು.  ಅಮ್ಮ ಗೀಸರ್ ಆನ್ ಮಾಡಿರುವಳೋ ಇಲ್ಲವೋ … Read more

ಪಂಜುವಿಗೆ ಅಭಿನಂದನೆಗಳು: ಮಂಜು ಹಿಚ್ಕಡ

ಅದು ೨೦೧೩ನೇ ಇಸವಿ, ಆಗಷ್ಟ್- ಸೆಪ್ಟೆಂಬರ್ ತಿಂಗಳು. ಗೂಗಲನಲ್ಲಿ ಏನನ್ನೋ ಹುಡುಕುತಿದ್ದಾಗ ಪಂಜು ಎನ್ನುವ ಆನ್ ಲೈನ್ ಪತ್ರಿಕೆ ಕಣ್ಣಿಗೆ ಬಿತ್ತು. ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕು ಎನ್ನುವಂತಹ ಲೇಖನಗಳು, ಕತೆಗಳು, ಕವಿತೆಗಳು ಆ ಪತ್ರಿಕೆಯ ತುಂಬೆಲ್ಲಾ ತುಂಬಿದ್ದವು. ನನಗೆ ಪತ್ರಿಕೆಯನ್ನು ಓದುತ್ತಾ ಹೋದ ಹಾಗೆ ಆ ಪತ್ರಿಕೆಯಲ್ಲಿ ಆಸಕ್ತಿ ಬೆಳೆಯತೊಡಗಿತು. ನಾನು ಹೆಸರಿಗೆ ಕವಿ-ಲೇಖಕ-ಕತೆಗಾರ ಎಂದು ನನ್ನಷ್ಟಕ್ಕೆ ಹೇಳಿಕೊಂಡರೂ ಅದುವರೆಗೆ ನನ್ನ ಯಾವುದೇ ಲೇಖನಗಳಾಗಲಿ ಕತೆಗಳಾಗಲಿ, ಕವನಗಳಾಗಲಿ ನನ್ನ ಬ್ಲಾಗನ್ನು ಬಿಟ್ಟರೆ ಬೇರೆಲ್ಲು ಪ್ರಕಟವಾಗಿರಲಿಲ್ಲ. ಹಾಗಂತ … Read more

ಅಡೆತಡೆಗಳನ್ನು ದಾಟಿ ಸವಾಲುಗಳನ್ನು ಮೆಟ್ಟಿ ನಿಂತಲ್ಲಿ: ಪ್ರಭಾಕರ ತಾಮ್ರಗೌರಿ

  ಇಂದು ದೇಶದಲ್ಲಿ ಎಷ್ಟೊಂದು ವಿಕಲಾಂಗ ಚೇತನರಿದ್ದಾರೆ. ಕಣ್ಣಿಲ್ಲ, ಮೂಗಿಲ್ಲ, ಮಾತನಾಡಬೇಕೆಂದರೆ ಬಾಯಿಇಲ್ಲ.ಎದ್ದು ನಡೆದಾಡಬೇಕೆಂದರೆ ಕಾಲು ಇಲ್ಲ. ಏನಾದರೂ ಕೆಲಸ ಮಾಡಬೇಕೆಂದರೆ ಕೈ ಇಲ್ಲ. ಇಂಥವರನ್ನ ನೋಡಿದರೆ ಪಾಪ ಅಯ್ಯೋ ಅನ್ನಿಸುತ್ತೆ. ಇವರನ್ನ ನೋಡಿದರೆ ಅಂತಃಕರಣ ಜುಂ ಎನ್ನುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಂಗ ವೈಫಲ್ಯದಿಂದ ಬಳಲುತ್ತಿರುವ ಈ ಮಕ್ಕಳು ಆದಾರೋಪಕ್ಕೆ ಬಲಿಯಾದವೋ ಗೊತ್ತಿಲ್ಲ…? ಎಲ್ಲ ಮಕ್ಕಳಂತೆ  ಇವರು ಬಾಲ್ಯದ ಸುಮಧುರ ಜೀವನ ಕಳೆಯಬೇಕಾಗಿದ್ದ ಈ ಮಕ್ಕಳು ಎಲ್ಲವುಗಳಿಂದ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದು … Read more

ಬಂಟ ಮಲೆಯೆಂಬ ಬದುಕ ತಾಣ. . .: ಸ್ಮಿತಾ ಅಮೃತರಾಜ್

ಜನ ನಿಬಿಡ ಪ್ರದೇಶದಲ್ಲಿ, ಉಸಿರುಕಟ್ಟಿಸುವ ಪ್ಲಾಟ್ ಗಳಲ್ಲಿ ವೇಗದ ಬದುಕಿಗಂಟಿದ ಜನ ಅಷ್ಟೇ ಏದುಸಿರು ಬಿಟ್ಟುಕೊಂಡು ಓಡುತ್ತಿದ್ದಾರೆ. ಎಲ್ಲರೂ ಅವರವರ ಬದುಕಿಗಷ್ಟೇ ಸೀಮಿತವಾಗುತ್ತಿರುವ ಈ ಸಂಕುಚಿತ ಕಾಲಗಟ್ಟದಲ್ಲಿ ಎಲ್ಲರೂ ತಳಕು ಬಳುಕಿನ ಮೋಹಕ್ಕೊಳಗಾಗಿ ನಗರವಾಸಿಗಳಾಗುತ್ತಿದ್ದಾರೆ. ನಗರದ ಸೆಳೆತವೇ ಅಂತದ್ದು. ನಮ್ಮ ನರನಾಡಿಗಳಲ್ಲಿ ಅದಮ್ಯ ತೀರದ ಹುಚ್ಚು ಹತ್ತಿಸಿ, ಗಕ್ಕನೆ ಮಾಯಾವಿಯಂತೆ ನಮ್ಮನ್ನು ಅದರ ಕದಂಬ ಬಾಹುಗಳಲ್ಲಿ ಬಂಧಿಸಿಕೊಂಡು, ಬದುಕಿರುವವರೆಗೂ ವಿಲವಿಲನೇ ಒದ್ದಾಡಿಸಿ ಬಿಡುತ್ತದೆ. ಇಂತಹ ಹೊತ್ತಲ್ಲಿ ಹಳ್ಳಿಗಳೂ ನಗರಗಳಾಗುವ ಕನಸು ಹೊತ್ತು ಸಾಗುತ್ತಿವೆ. ಹಳ್ಳಿಯೆಂಬ ಕಲ್ಪಿತ ಚಿತ್ರಣವೇ … Read more

ಮೂವರ ಕವಿತೆಗಳು: ಶೋಭಾಶಂಕರ್, ವಿನಾಯಕ ಭಟ್, ಶ್ರೀಕಾಂತ ಧಾರವಾಡ.

ಜಿ ಎಸ್ ಎಸ್ ಎದೆ ತುಂಬಿ ಹಾಡಿದ ಕವಿ ನವೋದಯದ ಸಮನ್ವಯ ಋಷಿ ಕನ್ನಡಿಗರ ಮನಸ ಗೆದ್ದ ಭಾವಜೀವಿ     ಇರುವಷ್ಟು ಕಾಲದಿ ಎದೆ ತುಂಬಿ ಮನತುಂಬಿ ತನು ತುಂಬಿ ಹಾಡಿದಾ ಕವಿ ಇಲ್ಲದ ದೇವರ ಹುಡುಕದೆ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಹೊಸೆದು  ದೇವರ ದರ್ಶನ ತೋರಿದ ದಾರ್ಶನಿಕ ಕವಿ ಹಾಡು ಹಳೆಯದಾದರೇನು ಭಾವ ನವನವೀನ ಎನಿಸಿ ಎಂದೆಂದಿಗೂ ಮರೆಯದ ಕಾವ್ಯ ಸೃಷ್ಟಿಸಿ ತುಂಬಿದರು ಬತ್ತದ ಅನಂತ ಜೀವನೋತ್ಸಾಹ!! ಹೂವು ಅರಳೀತು ಹೇಗೆ ಪ್ರೀತಿ … Read more

ಕವಿತೆಯ ಕನವರಿಕೆಗಳು: ಸಂಗೀತ ರವಿರಾಜ್

                ಸಾಹಿತ್ಯದ ಎಲ್ಲಾ ಪ್ರಕಾರಗಳಿಂದಲೂ ಕವಿತೆಯೆ ಹೆಚ್ಚು ಅನುಭೂತಿಯನ್ನು ನೀಡುವಂತದ್ದು. ಇದು ಸಾಹಿತ್ಯದ ಬಗೆಗೆ ಆಸಕ್ತಿಯಿರುವವರ ಅಂಬೋಣ. ಆದರೆ ಕವಿತೆ ಅಂದರೆ ಮಾರುದೂರ ಹೋಗುವ, ಮೂಗು ಮುರಿಯುವ ಜಾಯಮಾನದವರೆ ಹೆಚ್ಚಿರುವ ಈ ಕಾಲದಲ್ಲಿ ಕವಿತೆ ಬಗ್ಗೆ ಚೂರು ಪಾರು ಅಭಿಮಾನ ಹೊಂದಿರು ನಮ್ಮಂತವರ ಗತಿ ದೇವರಿಗೆ ಪ್ರೀತಿ! ಸಿನಿಮಾಗಳಲ್ಲಿ, ಹಾಸ್ಯ ಧಾರಾವಾಹಿಗಳಲ್ಲಿ ಬರಹಗಾರರನ್ನು ವಿದೂಷಕರನ್ನಾಗಿ ತೋರಿಸುವ ಪರಿಪಾಟಲು ಹಿಂದಿನಿಂದಲೇ ನಡೆದು ಬಂದಿದೆ. ವಾಸ್ತವವಾಗಿ ಏನಾಗುತ್ತದೆಯೆಂದರೆ ಓದುಗರ ಸಂಖ್ಯೆ … Read more

ಜ್ಯೋತಿಷ್ಯದ ದುರುಪಯೋಗ: ಶ್ರೀನಿವಾಸ್ ಪ್ರಭು

ಜ್ಯೋತಿಷ್ಯ  ಎಂಬ ಪದ ಹುಟ್ಟಿದ್ದು ಸೂರ್ಯನನ್ನು ಕೇಂದ್ರೀಕರಿಸಿ. ಸೂರ್ಯನನ್ನು ಪ್ರಧಾನವಾಗಿರಿಸಿ ಇತರ ಗ್ರಹಗಳು ಸುತ್ತುವ ವಾಗ ಚಂದ್ರನ  ಮೇಲೆ ಬೀಳುವ ಸೂರ್ಯನ ಬೆಳಕಿನ ಛಾಯಾ ಬಿಂಬ ಆರೋಹ ಮತ್ತು ಅವರೋಹ ಪರಿಕ್ರಮದಲ್ಲಿ ಪುನರಾವರ್ತನೆ ಯಾಗುವ ದಿನದ ಗಣಿತ. ಮನುಕುಲ ಭೂಮಿಯ ಮೇಲೆ ಹುಟ್ಟಿದಂದಿನಿಂದ ಆಕಾಶಕಾಯದಲ್ಲಿ ಕಾಣುವ ಸೂರ್ಯ, ಚಂದ್ರ, ನಕ್ಷತ್ರ ಹಾಗೂ ಇತರ ಆಕಾಶ ಕಾಯಗಳ ಬಗ್ಗೆ ಕೂತೂಹಲಗೊಂಡು, ಕೆಲವು ಬುದ್ಧಿವಂತ ಸನ್ಯಾಸಿಗಳು ಸಂಶೋಧನೆ ಮಾಡುತ್ತಾ, ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವ ಪರಿಯನ್ನು ಲೆಕ್ಕ ಹಾಕತೊಡಗಿ … Read more

ಪ್ರೀತಿಸಿ ಬಿದ್ದ ಯುವಜನರೇ ಭೇಷ್!: ಅಕ್ಷಯ ಕಾಂತಬೈಲು

                  ಪ್ರೀತ್ಸೇ… ಪ್ರೀತ್ಸೇ… ಕಣ್ಣುಮುಚ್ಚಿ ನನ್ನೆ ಪ್ರೀತ್ಸೆ ಎಂಬ ಹಾಡಿನಂದದಿ ಪ್ರೀತಿಸಿ ಬಿದ್ದ ಯುವಜನರೇ ನಿಜಕ್ಕೂ ನೀವೇ ಭೇಷ್! ಯಾಕೆ ಗೊತ್ತುಂಟಾ; ಕೆಲವರಿಗೆ ಆ ಸುಖ ಮತ್ತು ಯಾತನೆ ಲಭಿಸಿಲ್ಲ. ಪ್ರೇಮ ಜೀವನವ ಸಾಂಗವಾಗಿ ನಡೆಸುತ್ತಿರುವಾಗ ಹಠಾತ್ತನೆ ಯಾವುದೋ ಒಂದು ಕಾರಣಕ್ಕೆ ನೀವು -ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗ ಅಥವಾ ಹುಡುಗಿ ಕೈಕೊಟ್ಟರೆಂದು ದೇವದಾಸನ ಥರ ಆಗಿ, ಆಕಾಶವೇ ಹರಿದುಬಿತ್ತು ಅಂದುಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಅರ್ಧಕ್ಕೆ … Read more

ಮಂಗಳ ಗ್ರಹದ ಕಕ್ಷೆ ಪ್ರವೇಶಿಸಿದ ’ಮಂಗಳಯಾನ’ : ಜೈಕುಮಾರ್.ಹೆಚ್.ಎಸ್,

ಮಂಗಳ ಗ್ರಹದಲ್ಲಿ ಕೋಟ್ಯಾಂತರ ವರ್ಷಗಳ ಹಿಂದೆ ಜೀವಿಗಳು ಇದ್ದುವೇ? ಜೀವಿಗಳ ಇರುವಿಕೆಗೆ ಕಾರಣವಾಗಿರುವ ಮಿಥೇನ್ ಯಾವ ಪ್ರಮಾಣದಲ್ಲಿ ಅಲ್ಲಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸೇರಿದಂತೆ ಭೂಮಿಯಿಂದ ಇತರೆ ಗ್ರಹಗಳಿಗೆ ಉಪಗ್ರಹ ರವಾನಿಸಲು ಅವಶ್ಯವಿರುವ ತಂತ್ರಜ್ಞಾನವನ್ನು ಸ್ವತ: ಅಭಿವೃದ್ಧಿಪಡಿಸುವುದನ್ನು ಭಾರತ ಖಾತರಿಪಡಿಸಿಕೊಳ್ಳುವುದು ಮಂಗಳಯಾನ ಉಡಾವಣೆಯ ಉದ್ದೇಶ.  ಭಾರತಕ್ಕೆ ಮೊದಲ ಯತ್ನದಲ್ಲೇ ಯಶಸ್ಸು: ಇದೀಗ ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ತ್ರೋ) ತಯಾರಿಸಿದ್ದ ’ಮಂಗಳಯಾನ’ ಉಪಗ್ರಹವು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿ ಎಲ್ಲೆಡೆ ಹರ್ಷ ಮೂಡಿಸಿದೆ. ಭೂಮಿಯಿಂದ … Read more

ಗಡಿನಾಡ ಕನ್ನಡ: ನಾಗೇಶ್ ಟಿ.ಕೆ.

ನನ್ನ ಹೆಸರು ನಾಗೇಶ್ ಟಿ.ಕೆ. ಮೂಲತ: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬನ್ನಿಮರದಕೊಪ್ಪಲು ನಿವಾಸಿ. ಪ್ರಸ್ತುತ ಗೌರಿಬಿದನೂರು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ೨೦೦೭ರಲ್ಲಿ ಶಿಕ್ಷಕನಾಗಿ ತೆಲುಗು ಪ್ರಭಾವವಿರುವ ಗಡಿನಾಡಿನ ಶಾಲೆಯಲ್ಲಿ ನಿಯೋಜನೆಗೊಂಡು ಕೆಲಸ ಪ್ರಾರಂಭಿಸಿದಾಗ ನನಗಾದ ಭಾಷಾ ಸಮಸ್ಯೆ ಹಾಗೂ ಇಲ್ಲಿನ ಜನರಿಗೆ ಕನ್ನಡ ಭಾಷೆಯ ಬಗ್ಗೆ ಆಳವಾದ ಜ್ಞಾನ ಅಥವಾ ಮಾತೃಭಾಷಾ ಅಭಿಮಾನ ಇಲ್ಲದಿರುವುದನ್ನು ನೋಡಿ ಈ ೮ ವರ್ಷದಲ್ಲಿ ನನಗಾದ ಎಲ್ಲಾ ಅನುಭವಗಳನ್ನು ಕ್ರೋಢೀಕರಿಸಿ ಈ ಲೇಖನವನ್ನು … Read more

ಬದುಕ ಕಟ್ಟಿಕೊಳ್ಳಲು ಬಂದವರು ಭಾಷೆಯನ್ನು ಕಟ್ಟಿದ್ದರು: ನಿಶಾಂತ್. ಜಿ.ಕೆ

ಯಾವ ಟಿ.ವಿ, ಚಾನೆಲ್ ಹಾಕಿದ್ರೂ ಈಗ ಸ್ವಲ್ಪ ದಿನದಿಂದ ಬರೀ ಅಮ್ಮನದೇ ಸುದ್ದಿ, ಓ ಕನ್‌ಫ್ಯೂಸ್ ಆದ್ರ ಸಾರಿ ನಾನ್ ಹೇಳಿದ್ದು ನಮ್ಮ ನೆರೆಯ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಿ ಜೆ. ಜಯಲಲಿತಾ ಅವರ ಬಗ್ಗೆ ಅವರ ಅವ್ಯವಹಾರ, ಅದು ಇದು ಸದ್ಯಕ್ಕೆ ಬೇಡ ಆದ್ರೆ ನಾನು ಈಗ ಹೇಳ್ಬೇಕು ಅಂತ ಹೊರಟಿರೋ ವಿಷಯ ತಮಿಳರ ಅಭಿಮಾನದ ಬಗ್ಗೆ, ಅದು ಕೇವಲ ಜಯಲಲಿತಾ ಅವರ ವಿಷಯವಾಗಿ ಅಲ್ಲ ಮುಖ್ಯವಾಗಿ ಅವರ ಭಾಷಾಬಿಮಾನ, ನಾಡಿನ ಬಗೆಗಿರುವ ಅತಿಯಾದ ಕಾಳಜಿಯ … Read more

ದೇಹವೆಂಬೋ ಮೋಟುಗೋಡೆಯ ಮೀರಿ..: ಮೌಲ್ಯ ಎಂ.

                                                       ಕವಿತೆ ಆತ್ಮದ ನಾದ. ಅದ್ಯಾಕೆ ದೇಹದ ಮೇಲೆಯೇ ಉರುಳಿಸುತ್ತಾರೋ.? ಅಂಗಾಂಗಕ್ಕೂ, ಅಂತರಂಗಕ್ಕೂ ಪರದೆ ತೀರ ಕಲಸಿ ಹೋಗುವಷ್ಟು ತೆಳುವಾ..? ಯಾಕೆ ಈವತ್ತಿನ ಪದ್ಯಗಳು ಕೇವಲ Anotomical description ಗಳಾಗುತ್ತಿವೆ? ಲಜ್ಜೆ ಈವತ್ತಿನ ದಿನಮಾನಕೆ ಒಂದು ಅನಗತ್ಯ ಸಂಗತಿಯೇ? ಅಥವಾ … Read more

ಶಂಕರ್ ನಾಗ್ ಇನ್ನು ಬದುಕ್ಕಿದ್ದಾರೆ: ಮುಕುಂದ್ ಎಸ್..

"ನಲಿವ ಗುಲಾಬಿ ಹೂವೇ…" ಎಂದು ಪಕ್ಕದಲ್ಲಿದ್ದ ಗೆಳೆಯ ಒಂದೇ ಸಾಲನ್ನು ಮಂತ್ರದಂತೆ ಪಠಿಸುತ್ತಿದ್ದ. ನಾನು ಅವನನ್ನು ಎಚ್ಚರಿಸಿ, "ಕೇಳಿಸಿಕೊಳ್ಳೋ, ಶಂಕರಣ್ಣನ ಹೆಂಡ್ತಿ ಮಾತಾಡ್ತಿದ್ದಾರೆ" ಎಂದೆ. ಅವನಿಗೆ ನನ್ನ ಮಾತು, ಅರುಂಧತಿನಾಗ್ ರವರ ಮಾತು ಎರಡೂ ಬೇಡವಾಗಿತ್ತು. ಅವನಿಗೆ ಶಂಕರ್ ನಾಗ್ ನೆನಪು ಆ ಸಂಜೆಗೆ ಸಾಕಾಗಿತ್ತು. ಅಂತಹ ಸುಂದರ ಸಂಜೆಯಲ್ಲಿ ಡಿವಿಸ್ ಕಾಲೇಜಿನಲ್ಲಿ ಹುಡುಗ-ಹುಡುಗಿಯರನ್ನು ಉದ್ದೇಶಿಸಿ, "ಆ ಹುಡುಗನ ಹೆಸರಲ್ಲಿ ಒಂದು ರಂಗಮಂದಿರವನ್ನು ಕಟ್ಟಬೇಕು. ನನ್ನ ಹತ್ತಿರ ಯೋಜನೆ ತಯಾರಾದ ಮೇಲೆ ಮತ್ತೆ ನಿಮ್ಮ ಮುಂದೆ ಬಂದು, … Read more

ನೊಬೆಲ್ ಪ್ರಶಸ್ತಿ – ೨೦೧೪: ಜೈಕುಮಾರ್. ಹೆಚ್. ಎಸ್.

ಭೌತವಿಜ್ಞಾನ: ನೀಲಿ ವರ್ಣದ ಬೆಳಕು ಆವಿಷ್ಕಾರ ಮಾಡಿದ ವಿಜ್ಞಾನಿಗಳಿಗೆ ಕಡಿಮೆ ವಿದ್ಯುತ್‌ನಿಂದ ಹೆಚ್ಚಿನ ಬೆಳಕು ನೀಡುವ ದೀಪಗಳಿಗಾಗಿ ಶೋಧನೆ ನಿರಂತರವಾಗಿ ನಡೆಯುತ್ತಲೇ ಇದೆ. ೨೦ ನೇ ಶತಮಾನದಲ್ಲಿ ಇನ್‌ಕ್ಯಾಂಡಿಸೆಂಟ್ ಎಂದು ಕರೆಯಲಾಗುವ ಬಲ್ಬ್ ಗಳದೇ ಪಾರುಪತ್ಯ. ಇಂದಿಗೂ ನಮ್ಮ ಬಹುತೇಕ ಮನೆಗಳಿಂದ ಇವು ಕಣ್ಮರೆಯಾಗಿಲ್ಲ. ಇದರಲ್ಲಿ ಟಂಗಸ್ಟನ್ ಫಿಲಮೆಂಟ್ ಇದ್ದು, ಫಿಲಮೆಂಟ್ ಕಾದ ನಂತರ ಬೆಳಕನ್ನು ನೀಡಲಾರಂಭಿಸುತ್ತವೆ. ಆಮೇಲೆ ಟ್ಯೂಬ್‌ಲೈಟ್ (ಪ್ಲೋರೋಸೆಂಟ್) ದೀಪಗಳು ಬಂದವು. ಇದರಲ್ಲಿ ಪಾದರಸದ ಅನಿಲದ ಬಾಷ್ಪಗಳು ವಿದ್ಯುತ್ ಸರಬರಾಜಿನಿಂದ ಕಾದು ರಂಜಕದ ಕೋಟಿಂಗ್‌ನ್ನು … Read more

ವಿದ್ಯಾರ್ಥಿಗಳ ಭವಿಷ್ಯವನ್ನು ಮಾರಕಗೊಳಿಸುತ್ತಿರುವ ಮಾದಕ ವಸ್ತುಗಳು: ಸುವರ್ಣ ಶಿ. ಕಂಬಿ

  "ಇಂದಿನ ಮಕ್ಕಳೇ ನಾಳಿನ ಪ್ರಜೆಗಳು", "ಇಂದಿನ ಯುವಕರೇ ನಾಳಿನ ನಾಗರಿಕರು" ಎನ್ನುವ ಮಾತು ಸತ್ಯ. ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತು. ನಮ್ಮ ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ವಿದ್ಯಾರ್ಥಿಗಳ ಕೈಯಲ್ಲಿದೆ. ಯುವಶಕ್ತಿ ದೇಶದ ಶಕ್ತಿಯಾಗಿದೆ. ನಾಡಿನ ಆಸ್ತಿಯಾದ ಈ ವಿದ್ಯಾರ್ಥಿಗಳನ್ನು ಸನ್ಮಾರ್ಗದೆಡೆಗೆ ಒಯ್ಯುವ ಗುರುತರ ಜವಾಬ್ದಾರಿ ತಂದೆ-ತಾಯಿ, ಶಿಕ್ಷಕರ, ಸಮಾಜದ, ಸರಕಾರದ ಮೇಲಿದೆ. ಇದು ಆಧುನಿಕ ಯುಗ. ಮನುಷ್ಯ ವೈಜ್ಞಾನಿಕ, ವೈಚಾರಿಕ, ತಂತ್ರಜ್ಞಾನ, ವೈದ್ಯಕೀಯ ಮುಂತಾದವುಗಳಿಗೆ ಸಂಬಂಧಿಸಿದಂತೆ ತುಂಬಾ ಮುಂದುವರೆದಿದ್ದಾನೆ. ಅನೇಕ ಸಂಶೋಧನೆಗಳನ್ನು … Read more

ಸಾಮಾನ್ಯ ಜ್ಞಾನ (ವಾರ 51): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಹೋಮಿಯೋಪತಿ ವೈದ್ಯ ಪದ್ಧತಿಯ ಜನಕ ಯಾರು? ೨.    ಅಲ್ಯೂಮಿನಿಯಂ ಲೋಹದ ಅದಿರು ಯಾವುದು? ೩.    ರಾಷ್ಟ್ರೀಯ ಲಾಂಛನವನ್ನು ಭಾರತ ಸರ್ಕಾರವು ಅಳವಡಿಸಿಕೊಂಡ ವರ್ಷ ಯಾವುದು? ೪.    ರಘುಪತಿ ಇದು ಯಾರ ಅಂಕಿತನಾಮವಾಗಿದೆ? ೫.    ಮೇಣದ ಬತ್ತಿಯನ್ನು ತಯಾರಿಸಲು ಬಳಸುವ ಮೇಣ ಯಾವುದು? ೬.    ಮೈಸೂರು – ಕರ್ನಾಟಕ ಎಂದು ನಾಮಕರಣಗೊಂಡ ವರ್ಷ ಯಾವುದು? ೭.    ಜೀವಿಗಳ ಮೂಲಘಟಕವನ್ನು ಜೀವಕೋಶ ಎಂದು ಹೆಸರಿಸಿದ ವಿಜ್ಞಾನಿ ಯಾರು? ೮.    ಅಸ್ಸಾಮಿ ಲೇಖಕ ಬಿ.ಕೆ.ಭಟ್ಟಾಚಾರ್ಯರವರ ಯಾವ ಕೃತಿಗೆ ಜ್ಞಾನಪೀಠ … Read more

ಮಾಲಿನ್ಯದ ವಿರುದ್ಧ ಧ್ವನಿ ಏರಿಸಿ…ಪರಿಸರ ಉಳಿಸಿ!!: ನಾರಾಯಣ ಬಾಬಾನಗರ, ವಿಜಾಪುರ

1972ನೇ ವರ್ಷ. ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ಸಂರಕ್ಷಣೆ, ನೈರ್ಮಲ್ಯ, ಪರಿಸರ ಮಹತ್ವವನ್ನು ಸಾರುವ ದಿನವನ್ನು ಆಚರಿಸುವ ಅಗತ್ಯವಿದೆ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಹೀಗಾಗಿ ಪ್ರತಿ ವರ್ಷ ಜೂನ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸುವ ನಿರ್ಧಾರಕ್ಕೆ ಬರಲಾಯಿತು. ಪ್ರಪ್ರಥಮ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ್ದು 1973 ರಲ್ಲಿ.  ಪ್ರಸ್ತುತ ದಿನಗಳಲ್ಲಿಯೂ ಅದರ ಪ್ರಸಕ್ತತೆಯಿದೆ.  ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಯನ್ನು ಒಂದು ಕೇಂದ್ರ ವಿಷಯ ಹಾಗೂ ಒಂದು ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತದೆ. 2014 ರ ಕೇಂದ್ರ … Read more

ಗೂಡು ಕಟ್ಟುವ ಸಂಭ್ರಮದಲ್ಲಿ: ಶ್ರೀದೇವಿ ಕೆರೆಮನೆ

ಮನೆಯ ಮುಂದಿನ ಬಟ್ಟೆ ಒಣ ಹಾಕುವ ತಂತಿಗೆ ಪ್ರತಿ ವರ್ಷದ ಹಾಗೆ ಈ ವರ್ಷವೂ ಹಳದಿ ಕಪ್ಪು ಬಣ್ಣ ಮಿಶ್ರಿತ ಪುಟ್ಟ ಹಕ್ಕಿಯೊಂದು ಗೂಡು ಕಟ್ಟಲು ಬರುತ್ತಿತ್ತು. ಅದರ ಪುಟ್ಟ ಚುಂಚಿನಲ್ಲಿ ಇಷ್ಟಿಷ್ಟೆ ಕಸ ಕಡ್ಡಿ, ಮರದ ತೊಗಟೆ, ಒಣಗಿದ ಎಲೆ ಎಲ್ಲವನ್ನೂ ಕಚ್ಚಿಕೊಂಡು ಬಂದು ಆ ಗೂಡಿಗೆ ಅಂಟಿಸುತ್ತಿತ್ತು. ಅದರ ಪುಟ್ಟ ಬಾಯಿಗೆ ನಿಲುಕುತ್ತಿದ್ದುದೆಷ್ಟೋ… ಕಚ್ಚಿಕೊಂಡು ಹಾರಿ ಬರುವಾಗ ಅದರ ಬಾಯಲ್ಲಿ ಇರುತ್ತಿದ್ದುದು ಎಷ್ಟೋ… ಗೂಡಿಗೆ ಅಂಟಿಸುವಾಗ ಕೆಳಗೆ ಬೀಳದೇ ಅಂಟಿಕೊಳ್ಳುತ್ತಿದ್ದುದು  ಎಷ್ಟೋ… ಒಟ್ಟನಲ್ಲಿ ನಿಮಿಷಕ್ಕೆ … Read more

ಮೇರಿ ಕೋಮ್‌ಳ ಹಾದಿಯಲ್ಲಿ: ಗಿರಿಜಾಶಾಸ್ತ್ರಿ, ಮುಂಬಯಿ

ಹೆಣ್ಣುಮಕ್ಕಳು ತಮ್ಮ ಪರ್ಸುಗಳಲ್ಲಿ ಪೆಪ್ಪರ್- ಸ್ಪ್ರೇ ಗಳನ್ನೋ ಖಾರದ ಪುಡಿಗಳನ್ನೋ ಸದಾ ಇಟ್ಟುಕೊಂಡು ಓಡಾಡಬೇಕು ಎಂದು ಮಹಾರಾಷ್ಟ್ರದ ಮಂತ್ರಿಯೊಬ್ಬರು ಸಲಹೆಯಿತ್ತಿದ್ದರು. ಗಾಂಧೀಜಿಯವರೂ ಕೂಡ ರಾಷ್ಟ್ರೀಯ ಆಂದೋಳನದ ಸಮಯದಲ್ಲಿ ಹೆಣ್ಣುಮಕ್ಕಳನ್ನು ಉದ್ದೇಶಿಸಿ, ನಿಮಗೆ ದೇವರು ಹಲ್ಲು ಮತ್ತು ಉಗುರುಗಳನ್ನು ಕೊಟ್ಟಿಲ್ಲವೇ? ನಿಮ್ಮ ಮರ್ಯಾದೆಗೆ ಸಂಚಕಾರ ಒದಗಿ ಬರುವ ಸಂದರ್ಭದಲ್ಲಿ ನೀವು ಅಹಿಂಸಾ ತತ್ವವನ್ನು ಪಾಲಿಸಬೇಕಾದ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಅಭಿಪ್ರಾಯಪಟ್ಟಿದ್ದರು. ಇತ್ತೀಚೆಗೆ ಮರಾಠಿಗರಲ್ಲಿ ಬಹಳ ಜನಪ್ರಿಯರಾದ, ಕನ್ನಡದ ಬಹುದೊಡ್ಡ ಕಾದಂಬರಿಕಾರರೊಬ್ಬರು, ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ ವಿಚಾರ ಸಂಕಿರಣವೊಂದರಲ್ಲಿ ’ಗಂಡಸು … Read more