ಬ್ಲಾಕ್ ಎಂಡ್ ಲೈಪ್ ಕಲರ್ ಫುಲ್ ಕನಸು ಕಾಣುತ್ತದೆ: ಅಜ್ಜೀಮನೆ ಗಣೇಶ

“Holi is the day to express love with colors. It is a time to show affection. All the colors that are on you are of love!” ಬಣ್ಣಗಳಲ್ಲೂ ಒಲವಿನ ಒಲುಮೆಯನ್ನೆ ಕಾಣುತ್ತಾನೆ ಕ್ರೇಜಿ ಗುರು ಓಶೋ… ಹೋಳಿ ಬಗ್ಗೆ ಏನಾದ್ರು ಬರೆಯಿರಿ, ಅಂತ ಪಂಜುವಿನ ನಟರಾಜು ಕೇಳಿದಾಗ ನನಗೆ ಮೊದಲು ನೆನಪಾಗಿದ್ದು ಸಹ ಮತ್ತದೆ ..ಓಶೋ..ಕಾರಣ ಸಿಂಪಲ್.. ಕೈಲಿರೋ ಹಿಡಿ ಬಣ್ಣವನ್ನು ಎದುರಿದ್ದವರ ಮುಖಕ್ಕೆ ಎರಚಿ, ಅವರ … Read more

ರಂಗ್ ರಂಗಿನ ಹೋಳಿಹಬ್ಬದ ಹಿನ್ನೆಲೆ : ಶುಭರಾಣಿ. ಆರ್

ನಮ್ಮ ಭಾರತ ದೇಶದಾದ್ಯಂತ  ಸಡಗರದಿಂದ   ಆಚರಿಸಲ್ಪಡುವ  ರಂಗು ರಂಗಿನ ಹಬ್ಬ  ಹೋಳಿಹಬ್ಬ. ಮಾಘ -ಫಾಲ್ಗುಣ ಮಾಸಗಳ ಶಶಿರ ಋತು  ಮುಗಿದು ಚೈತ್ರ ಮಾಸ ವಸಂತ ಋತು  ಕಾಲಿಡುವಾಗ ಹೊಸಚಿಗುರು ಮೂಡಿ,ಹೂಗಳು  ಅರಳಿನಿಂತು  ನಲಿಯುವಾಗ ನಾವುಗಳು  ಸಂತಸದಿಂದ  ರಂಗಿನಾಟವನ್ನು  ಆಡಲು ತೊಡಗುತ್ತೇವೆ. ಪಾಲ್ಗುಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ  ದಿನದಂದು ಹೋಳಿಹಬ್ಬವನ್ನು  ಆಚರಿಸಲಾಗುತ್ತದೆ.  ಈ ಹಬ್ಬವನ್ನು  ಒಂದೊಂದು ರಾಜ್ಯದಲ್ಲೂ  ಅದರದೆಯಾದ  ನಾಮಾವಳಿಗಳಿಂದ ಆಚರಿಸುವರು. ನಮ್ಮಲ್ಲಿ  "ಹೋಳಿಹಬ್ಬ, ಕಾಮನ ಹಬ್ಬ  ಅಥವಾ ಕಾಮದಹನ ,ರಂಗಿನ ಹಬ್ಬ(ಬಣ್ಣಗಳ ಹಬ್ಬ ) "ಎನ್ನುತ್ತೇವೆ, … Read more

ಶಿರಸಿಯಲ್ಲಿ ಹೋಳಿಯ ವಿಶೇಷ ಬೇಡರವೇಷದ ಆವೇಶ: ಸಚಿನ್ ಎಂ. ಆರ್.

ಎರಡು ವರ್ಷಗಳಿಗೊಮ್ಮೆ ಜರುಗುವ ಶ್ರೀ ಮಾರಿಕಾಂಬಾ ಜಾತ್ರೆ ಈ ವರ್ಷ ಇಲ್ಲ. ಆದರೆ ಈ ಸಮಯದಲ್ಲಿ ಶಿರಸಿಯ ಜನತೆಗೆ ಆ ಕೊರತೆಯನ್ನು ನೀಗಿಸಲು, ಗುಂಪಾಗಿ ಸೇರುವ ಅವಕಾಶವನ್ನು ಕಲ್ಪಿಸಲು ಇನ್ನೇನು ಈ ವಾರಾಂತ್ಯದಿಂದಲೇ ಶುರುವಾಗಲಿದೆ ಬೇಡರ ವೇಷದ ವಿಶಿಷ್ಟ ನರ್ತನ. ಮಾರ್ಚ್ 1ರಿಂದ ಮಾರ್ಚ್ 4ರವರೆಗೆ ರಾತ್ರಿಯಲ್ಲಿ ಮಾತ್ರ ನಡೆಯುವ ಬೇರಡವೇಷವು ಒಂದು ಶಿಷ್ಟ ಜಾನಪದ ಕಲೆ. ಹೋಳಿ ಹಬ್ಬದ ಸಡಗರವನ್ನು ಹೆಚ್ಚಿಸುವ ಇದು ಮುಖ್ಯವಾಗಿ ಶಿರಸಿಯಲ್ಲಿ ಮಾತ್ರ ಕಂಡುಬರುವಂಥಾದ್ದು. ಇದನ್ನು ನೋಡಲೆಂದೇ ವಿವಿಧ ಕಡೆಯಿಂದ ಜನರು … Read more

ಹೋಳಿ ಹಬ್ಬದಲ್ಲಿ ‘ಹಾಲಕ್ಕಿ ಗೌಡರ ಸುಗ್ಗಿ ರಂಗು’: ಎಸ್. ಎಸ್. ಶರ್ಮಾ

ಉತ್ತರ ಕನ್ನಡ ಜಿಲ್ಲೆಯ ಜಾನಪದ ಮತ್ತು ಪಾರಂಪರಿಕ ವಿಶೇಷತೆ ಕರ್ನಾಟಕ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣನೀಯ ಜನಸಂಖ್ಯೆಯಲ್ಲಿರುವ ಹಾಲಕ್ಕಿ ಜನಾಂಗದವರು ಆಚರಿಸುವ ಹೋಳಿಯಲ್ಲಿ ಕಲೆ, ಜಾನಪದ, ಸಂಸ್ಕೃತಿಯ ಜೊತೆಗೆ ಪರಂಪರೆಯ ಸೊಗಡು ವಿಜ್ರಂಭಿಸುವುದನ್ನು ಇಂದಿಗೂ ನೋಡಬಹುದು. ಹೋಳಿಯನ್ನು ಸುಗ್ಗಿ ಸಂಭ್ರಮವಾಗಿ ಊರಿಂದೂರಿಗೆ ಕುಣಿದು ಕುಪ್ಪಳಿಸಿ ರಂಗಾಗುವ 'ರಂಗುರಂಗಿನ' ಹಾಲಕ್ಕಿ ಗೌಡರುಗಳು ಇಲ್ಲಿನ ಬದುಕಿನಲ್ಲಿ ಅಚ್ಚೊತ್ತಿದ ಹೆಜ್ಜೆಗಳ ಕಿರು ಪರಿಚಯ ಇಲ್ಲಿದೆ.  ಕರಾವಳಿ, ಬಯಲುಸೀಮೆ ಹಾಗೂ ಮಲೆನಾಡು ಈ ಮೂರೂ ನಿಸರ್ಗ ಸಹಜ ಲಕ್ಷಣಗಳನ್ನು ಒಳಗೊಂಡಿರುವ ಉತ್ತರ … Read more

ಮಾನವ ಮತ್ತು ಪ್ರಕೃತಿಯ ಅವಿನಾಭಾವ ಆಚರಣೆ ಹೋಳಿ ಹುಣ್ಣಿಮೆ: ಬೆಳ್ಳಾಲ ಗೋಪಿನಾಥ ರಾವ್

ಭಾರತ ಹಳ್ಳಿಗಳ ದೇಶ. ನಮ್ಮ ಹಳ್ಳಿಗಳಲ್ಲಿ ಹಬ್ಬ ಹರಿದಿನಗಳು ಮಾನವತೆ ಸ್ನೇಹ ಸೌಹಾರ್ದತೆಯ ಪ್ರತೀಕ. ಅಂತಹ ಸೌಹಾರ್ದತೆಯ ಹಬ್ಬ ಈ ಹೋಳಿ ಹುಣ್ಣಿಮೆ. ಶಿಶಿರದ ಚಳಿಗಾಲ ಮುಗಿದು ಚಿಗುರ ಚೈತ್ರದ ವಸಂತ ಋತು ಆರಂಭವಾಗುವ ಕಾಲ. ಸಕಲ ಜೀವ ರಾಶಿಗಳಲ್ಲಿ ಚೈತನ್ಯ ಚಿಲುಮೆ ಉಕ್ಕಿಸೋ ಮಾಸವಿದು. ಮಾಮರ ಚಿಗುರೊಡೆದು ಕೋಗಿಲೆಯ ದನಿ ಮೂಡುವ ಪವಿತ್ರ ಕಾಲದಲ್ಲೇ ಈ ಹೋಳಿ ಅಥವ ಹೋಲಿ ಹಬ್ಬ ಆಚರಿಸಲ್ಪಡುತ್ತದೆ. ದಕ್ಷಿಣಕ್ಕಿಂತ ಉತ್ತರ ಭಾರತದಲ್ಲಿ ವಿಭಿನ್ನ ಚಿತ್ರ ವಿಚಿತ್ರವಾಗಿ ಆಚರಿಸೋ ಹಬ್ಬವಿದು. ನಮ್ಮಲ್ಲಿನ … Read more

ಭರವಸೆಯ ಬಣ್ಣದ ಬದುಕು: ಸೀಮಾ ಶಾಸ್ತ್ರಿ

ಧೂಳಿನಿಂದ ಹಳೆಯದಾಗಿದ್ದ ಬೀದಿ ದೀಪವು ಅದರ ಕೆಳಗೆ ಕುಳಿತಿದ್ದ ಆ ಯುವ ಗುಂಪಿನ ಮನದಂತೆ ಮಬ್ಬಾಗಿತ್ತು… ಕತ್ತಲೆಯಲ್ಲಿ ಎಲ್ಲವೂ ಅಸ್ಪಷ್ಟ… ಅಲ್ಲಿದ್ದ ಗೆಳೆಯ ಗೆಳತಿಯರ ಗುಂಪು ಮನದಲ್ಲಿದ್ದ ದುಗುಡವನ್ನು ಹಂಚಿಕೊಳ್ಳುತ್ತಿದ್ದರು. ಊರಿನಲ್ಲಿದ್ದ ಸಾಮಾಜಿಕ ಅನಿಷ್ಟವಾದ ಕೋಮು ಜಗಳದ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೇಳುತ್ತಿದ್ದರು. "ಶಿವನೂ ದೇವರೇ, ಅಲ್ಲನೂ ದೆವರೇ ಅಲ್ಲವೇ?  ಅವರೇನು ವೈರಿಗಳಲ್ಲವಲ್ಲ… ಆದರೆ ಅವರನ್ನು ಅನುಸರಿಸೋ ಈ ಹುಲುಮಾನವರಲ್ಲಿ ಯಾಕೆ ಈ ರೀತಿ ?" ಸಲ್ಮಾನ್ ಹೇಳಿದ.  " ನನ್ನ ಪ್ರಕಾರ ಹೇಳೊದಾದ್ರೆ… ಯಾರಿಗೆ … Read more

ಶಿಕ್ಷಣ ಮತ್ತು ಧರ್ಮ: ಅರ್ಪಿತ ಮೇಗರವಳ್ಳಿ

                               ನಾನು ಶಾಲೆಯಲ್ಲಿ ಓದುತ್ತಿದ್ದ ಕಾಲಕ್ಕೆ ಬೆಳಿಗ್ಗೆ ಶಾಲೆಯ ಪ್ರಾರ್ಥನಾ ಸಮಯದಲ್ಲಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದ ನ೦ತರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರುತ್ತಿದ್ದ ಮುಖ್ಯ ಸುದ್ದಿಗಳನ್ನು ಮತ್ತು ಸುಭಾಷಿತವನ್ನು ವಿದ್ಯಾರ್ಥಿಗಳಿ೦ದಲೇ ಓದಿಸುವ ಪದ್ಧತಿಯಿತ್ತು. ಮಧ್ಹ್ಯಾನದ ಊಟದ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ದೊಡ್ಡದಾದ ಹಾಲ್‍ನಲ್ಲಿ ಕುಳಿತು ’ಅಸತೋಮ ಸದ್ಗಮಯ…. ’ ಶ್ಲೋಕ ಮತ್ತು ಅದರ ಅರ್ಥವನ್ನು ಹೇಳಿದ ನ೦ತರ … Read more

ಸ್ವತಂತ್ರ ಭಾರತದ ಹೋರಾಟಗಾರ: ಪ್ರಭು ಎಸ್. ಪಾಟೀಲ

     ರಾಜೀವ ದೀಕ್ಷಿತ ಎಂಬ ಅಕ್ಷರಗಳ ಹೆಸರನ್ನು ಕೇಳಿದೊಡನೆಯೇ ಮೈತುಂಬ ರಾಷ್ಟ್ರೀಯತೆ ಓಡಾಡಲಾರಂಭಿಸುತ್ತದೆ.  ಈ ಹೆಸರೇ ಒಂದು ಮಂತ್ರದಂತೆ. ಪಾಶ್ಚಾತ್ಯ ಹಾಗೂ ಜಾಗತಿಕರಣವೆಂಬ ಮಾಯಾಜಾಲದಲ್ಲಿ ಕುರುಡರಂತೆ ಅನುಕರಿಸುತ್ತಾ ಭಾರತೀಯರಾದ ನಾವು ನಮ್ಮತನವನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬಹುತೇಕ ಮರೆತೆ ಹೋಗಿದ್ದ ಸ್ವದೇಶಿ ಮೌಲ್ಯಗಳನ್ನು ಈ ದೇಶದ ಘನತೆ, ಹಿರಿಮೆ ಹಾಗೂ ವಾಸ್ತವತೆಯನ್ನು ಹಾಗೂ ಸಮಸ್ಯೆಗಳಿಗೆ ಸಿಲುಕಿ ಅದರ ಮೂಲ ತಿಳಿಯದೆ ಪರಿಹಾರ ಕಾಣದೆ ನಿಷ್ಕ್ರೀಯರಾಗಿದ್ದ ಭಾರತೀಯರನ್ನು ತಮ್ಮ ಉಪನ್ಯಾಸಗಳಿಂದ ಸೂಕ್ತ ಅಂಕಿ ಅಂಶಗಳಿಂದ ಬಡಿದೆಬ್ಬಿಸಿದ ಧೀರ ಸಾಧಕನೆ … Read more

ಮೂರು ಗ್ರಾಮದ ಪರಿಸರ ಸಮಸ್ಯೆ: ಅಕ್ಷಯ ಕಾಂತಬೈಲು

ಪರಿಸರವು ಸಕಲ ಜೀವಗಳ ಚಟುವಟಿಕೆಯ ಮಡಿಲು. ಹಗಲು- ಇರುಳು ಮರಳಿ ಮರಳಿ ಮುರಳಿಯ ನಾದದ ತೆರದಿ ಬರುತ್ತಾ ಹೊಗುತ್ತಾ ಇದ್ದರೂ ಪರಿಸರ ಮಾತ್ರ  ಧ್ಯಾನಸ್ಥ ಸ್ಥಿತಿಯಿಂದ ತನ್ನೊಡಲ  ಸಕಲ ಜೀವಗಳ ಬೇಕು ಬೇಡಗಳನ್ನು  ಅದಾವುದೋ ಮಾಯೆಯ ರೀತಿಯಲ್ಲಿ ನೋಡಿಕೊಳ್ಳುತ್ತಿದೆ. ಉಲ್ಕೆಯೊಂದು ನಭವ ಛಿದ್ರಿಸಿ ಧರೆಗಪ್ಪಳಿಸಿದಂತೆ ಪರಿಸರಕ್ಕೆ ಸಮಸ್ಯೆಯೊಂದು ಬಂದೊದಗಿದರೆ ಸಾಕು ಅಪಾಯದ ಸಂಕೋಲೆ ಬೆಳೆಯತೊಡಗುತ್ತದೆ. ಸಂಕೊಲೆ ಬೆಳೆದು ಬೆಳೆದು ಜೀವಸಂಕುಲಕ್ಕೆ ಬಿಗಿಯಾಗಿ ಬಂಧಿಸಲ್ಪಡುತ್ತದೆ.   ಹಸಿರು ಸೀರೆಯುಟ್ಟ ದೇವತೆಯ ಹಾಗೆ ಕೊಡಗಿನ ಚೆಂಬು, ಸಂಪಾಜೆ ಜೊತೆಗೆ ಪೆರಾಜೆ … Read more

ಬರದ ಬೇಗೆಯಿಂದ ತತ್ತರಿಸುತ್ತಿದ್ದ ಕೂಲಿಕಾರ್ಮಿಕರಿಗೆ ಆಶಾಕಿರಣವಾದ ಆಲೆಮನೆ: ಹನಿಯೂರು ಚಂದ್ರೇಗೌಡ

ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಹನೂರಿನಲ್ಲಿ ಹಲವಾರು ವರ್ಷಗಳಿಂದ ಮಳೆ-ಬೆಳೆ ಇಲ್ಲದೆ ಬರದ ಬವಣೆಯಲ್ಲಿ ತತ್ತರಿಸಿ ಗುಳೇ ಹೊರಡುವ ಸ್ಥಿತಿಯಲ್ಲಿದ್ದ ಕೂಲಿ ಕಾರ್ಮಿಕರಲ್ಲಿ ಕೆಲವರಿಗಾದರೂ ಕೃಷ್ಣನಾಯ್ಡುರವರ ಆಲೆಮನೆ ಆಶಾಕಿರಣವಾಗುವ ಮೂಲಕ ಆಸರೆ ನೀಡಿದೆ. ಗೊಂಬೆ ಬೆಲ್ಲವನ್ನು ತಯಾರಿಸಿ ಮಾರಾಟಕ್ಕೆ ಸಿದ್ದಪಡಿಸಿರುವುದು. ಮಳೆ ಇಲ್ಲದೆ ಕೆರೆ ಬಾವಿಗಳಲ್ಲಿ ನೀರು ಬತ್ತಿ ಅಂತರ್ಜಲ ಕುಸಿದಿರುವ ಕಾರಣ, ನೀರಾವರಿ ಪಂಪ್‌ಸೆಟ್ ಜಮೀನಿದ್ದರೂ ಮಾಮೂಲಿ ಬೆಳೆಗಳನ್ನೇ ಬಳೆಯಲು ಆಗದಿರುವಂತಹ ಪರಿಸ್ಥಿತಿಯಲ್ಲಿ, ಯಥೇಚ್ಛ ನೀರನ್ನು ಅಲವಲಂಬಿಸಿ ಬೆಳೆಯುವಂತಹ ಕಬ್ಬನ್ನು ಬೆಳೆಯಲು ಸಾಧ್ಯವೇ? ಕಬ್ಬನ್ನೇ ಬೆಳೆಯಲಿಲ್ಲವೆಂದ ಮೇಲೆ … Read more

ವಿಕಲಾಂಗರಿಗೆ ಆಸರೆಯಾಗುತ್ತಿರುವ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಬಿ.ಡಿ.ತಟ್ಟಿ ಸಂಸ್ಥೆ: ದಿಗಂಬರ ಎಂ.ಪೂಜಾರ

  ಲಕ್ಷ್ಮೇಶ್ವರ-ದಲ್ಲಿ ಕಿವುಡು ಮಕ್ಕಳ ಬಗ್ಗೆ. ನಮಗೆ ತಿಳಿದ ಹಾಗೆ ಸಮಾಜದಲ್ಲಿ ವಿಕಲಚೇತನರಿಗೆ ಸಮಾನತೆ ಹಾಗು ಸೌಲಭ್ಯಗಳ ಕಾನೂನಿನ ಮೂಲಕ ಸಿಕ್ಕಿರಬಹುದು. ಆದರೆ ನಿಜವಾಗಿಯೂ ಅವು ನಿಜವಾದ ಫಲಾನುಭವಿಗಳಿಗೆ ಸಿಗದೇ ಬೇರೆಯವರ ಪಾಲಾಗುತ್ತಿವೆ. ಇಂತಹ ದಿನಮಾನಗಳಲ್ಲಿಯೂ ತಮ್ಮ ಬೆನ್ನು ಮೂಳೆ ಮುರಿಯುವಂತೆ ಕೆಲಸ ಮಾಡುತ್ತಿರುವುದು ಕೆಲವು ಸಂಸ್ಥೆಗಳು ಮಾತ್ರ. ಅಂತಹ ಸಂಸ್ಥೆಗಳ ಸಾಲಿಗೆ ಸೇರುವ ಸಂಸ್ಥೆಗಳಲ್ಲಿ ಗದಗ ಜಿಲ್ಲೆಯ ಐತಿಹಾಸಿಕ ನಗರವಾಗಿರುವ  ಲಕ್ಷ್ಮೇಶ್ವರದಲ್ಲಿರುವ ಬಿ.ಡಿ. ತಟ್ಟಿ(ಅಣ್ಣಾವರು) ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ ಕೂಡಾ ಒಂದು.  ಸುಮಾರು ೧೮ ವರ್ಷಗಳಿಂದ … Read more

ಕಂಕಣ ಅಭಿಯಾನ: ಶೋಭಾ ಕೆ.ಎಸ್. ರಾವ್

ನಾಡು ನುಡಿಗಾಗಿ ಕಂಕಣತೊಟ್ಟ ಯುವ ಮನಸುಗಳ ಬಳಗವೇ ಕಂಕಣ.ಇದರ ರೂವಾರಿ ಚಿತ್ರ ಸಾಹಿತಿ ಕವಿರಾಜ್. ಜಯನಗರದ ಖಾದಿಮ್ಸ್ ನಲ್ಲಿ ಪಾದರಕ್ಷೆಗಳನ್ನು ಕೊಳ್ಳಲು ಹೋದಾಗ ಅಲ್ಲಿಯ ಸಿಬ್ಬಂದಿಗಳ ಅನ್ಯ ಭಾಷೆಯ ವ್ಯವಹಾರ ಮತ್ತು ಕನ್ನಡದ ಬಗೆಗಿನ ನಿರ್ಲಕ್ಷ್ಯ ಅವರನ್ನು ಕೇವಲ ರೊಚ್ಚಿಗೇಳಿಸಲಿಲ್ಲ, ಚಿಂತನೆಗೂ ಹಚ್ಚಿತು. ತನ್ನ ನೆಲದಲ್ಲಿಯೇ ಕನ್ನಡ ನಿಧಾನವಾಗಿ ಕಡಿಮೆಯಾಗುತ್ತಿರುವುದಕ್ಕೆ ಕಾರಣಗಳು ಹಲವಾರಾದರು ಮುಖ್ಯ ಕಾರಣ ಕನ್ನಡಿಗರ ಹಿಂಜರಿಕೆ ಹಾಗೂ ಆತ್ಮವಿಶ್ವಾಸದ ಕೊರತೆ ಎಂಬುದನ್ನು ಮನಗಂಡ ಅವರು ಸಮಾನ ಮನಸ್ಕರಿಗೆ ಕರೆ ನೀಡಿ ಚರ್ಚಿಸಿ ರೂಪುಗೊಂಡಿದ್ದೆ "ಕಂಕಣ". … Read more

ಕೆ.ಎಸ್.ಎನ್.ನುಡಿ ನಮನ..: ಶೋಭಾ ಶಂಕರ್

ಡಿಸೆಂಬರ್ ೨೮ ನಾಡಿನ ಜನತೆ ಎಂದಿಗೂ ಮರೆಯಲಾರದಂಥ ದಿನ.ಈಗಾಗಲೇ ಡಿ.೨೮ ಎಂದಾಕ್ಷಣ ನಮ್ಮ ಮನಸ್ಸಿನ ಮುಂದೆ ಕೆ.ಎಸ್.ಎನ್. ಅವರ ಭಾವಚಿತ್ರ ಕಣ್ಣ ಮುಂದೆ ಮೂಡಿರಬೇಕಲ್ಲ? ನಿಜ!! ಕೆ.ಎಸ್.ಎನ್. ಅಂದು ಅನಂತವಾಗಿ ಚಿರನಿದ್ರೆಗೆ ಜಾರಿದ ದಿನ. ನರಸಿಂಹಸ್ವಾಮಿಯವರು ತಮ್ಮ ಪ್ರೇಮಕವಿತೆಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಛಳಿಯದ ಸ್ಥಾನ ಪಡೆದುಕೊಂಡಿದ್ದಾರೆ .ದಾಂಪತ್ಯ-ಪ್ರೇಮವನ್ನು ಅಮರಗೊಳಿಸಿ, ’ಮೈಸೂರು ಮಲ್ಲಿಗೆ’ಯ ಕವಿ ಎಂದೇ ಚಿರಪರಿಚಿತರಾಗಿದ್ದವರು ನಮ್ಮೆಲ್ಲರ ಒಲವಿನ ಕವಿ ಕೆ.ಎಸ್.ಎನ್. ಅವರ ವಾರಿಗೆಯವರು ಕಾವ್ಯವಲ್ಲದೇ, ಬೇರೆ ಪ್ರಕಾರಗಳ ಸಾಹಿತ್ಯಕೃಷಿಯಲ್ಲಿ ತೊಡಗಿಕೊಂಡರೂ, ನರಸಿಂಹಸ್ವಾಮಿಯವರು ಮಾತ್ರ ಕಾವ್ಯಕನ್ನಿಕೆಯನ್ನೇ … Read more

ಟೆಲಿವಿಷನ್: ಬಂಡವಾಳಶಾಹಿಯ ಹೊಸ ಆಯುಧ: ಕು.ಸ.ಮಧುಸೂದನ್ ನಾಯರ್

ಇವತ್ತು ಟೆಲಿವಿಷನ್ ಕೇವಲ ಒಂದು ಸಂವಹನಾ ಮಾಧ್ಯಮವಾಗಿ ಉಳಿದಿಲ್ಲ. ಬದಲಿಗೆ ಅದೊಂದು ಉದ್ಯಮವಾಗಿ ಬೆಳೆಯುತ್ತ,ಬಂಡವಾಳಶಾಹಿ ಶಕ್ತಿಗಳ ಕೈಯಲ್ಲಿನ ಒಂದು ಪ್ರಬಲ ಅಸ್ತ್ರವಾಗಿ ಪರಿವರ್ತನೆಯಾಗಿ ವಿಶ್ವದ ಅರ್ಥವ್ಯವಸ್ಥೆಯನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ.  ವಸಾಹತುಶಾಹಿಯ ಮೂಲಭೂತಗುಣವೇ ಅಂತಾದ್ದು. ಆಯಾ ಕಾಲಘಟ್ಟದಲ್ಲಿ ಅನ್ವೇಷಿಸಲ್ಪಡುವ ವೈಜ್ಞಾನಿಕ ಉಪಕರಣಗಳನ್ನು ತನ್ನ ಹಿತಾಸಕ್ತಿಗಳಿಗನುಗುಣವಾಗಿ ಬಳಸಿಕೊಳ್ಳುವಲ್ಲಿ ಅದನ್ನು ಮೀರಿಸುವವರಿಲ್ಲ. ಇತಿಹಾಸವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಈ ಸತ್ಯ ಅರ್ಥವಾಗುತ್ತದೆ. ಹದಿನಾಲ್ಕು ಹದಿನೈದನೇ ಶತಮಾನದಲ್ಲಿ  ಅನ್ವೇಷಿಸಲ್ಪಟ್ಟ ನಾವಿಕರ ದಿಕ್ಸೂಚಿ, ಇದಕ್ಕೊಂದು ಅತ್ಯುತ್ತಮ ಉದಾಹರಣೆ. ದಿಕ್ಸೂಚಿಯ ಅನ್ವೇಷಣೆಯ ನಂತರ … Read more

ಮೂವರ ಕವಿತೆಗಳು: ರಘುನಂದನ ಹೆಗಡೆ, ಬಿ. ಸಿ. ಪ್ರಮೋದ, ಗಿರಿ

ನೀನಿಲ್ಲದ ಗೋಕುಲದ ಬೇಸರ ನಿನ್ನ ತುಟಿಯಂಚಿನ ಕೊಳಲಾಗುವೆ ಬಿಸಿಯುಸಿರ ಪುಳಕದಿ ರಾಗವಾಗುವೆ ಅನುರಾಗದ ರವಳಿಯ ತೇಲಿ ಬಿಡು ಶ್ಯಾಮ ಯಮುನಾ ತೀರದಿ ಹಾಡಾಗಿ ಹರಿಯಲಿ ಪ್ರೇಮ ನನ್ನೆದೆಯ ರಾಗ ಕೇಳು ಸಾಕು ಮಾಡೊ ವಿರಹಿ ಬಾಳು ನಿಂತೆ ಇದೆ ಜೀವ ಗೋಕುಲದಲ್ಲಿ ಜೀವಾಮೃತವಿದೆ ಎದೆಯಲ್ಲಿ ದ್ವಾರಕೆ, ಮಧುರೆಗಳು ಸಾಕು ಬಾ ನನ್ನೊಲವ ಬೃಂದಾವನಕೆ ಗೋಧೂಳಿ ದೀಪ ಮನದಲ್ಲಿ ಒಮ್ಮೆ ಹರಿವ ಯಮುನೆ ಕಣ್ಣಲ್ಲಿ ಇನ್ನೊಮ್ಮೆ ಗಿರಿಯ ಭಾರ ಎದೆಯಲ್ಲಿ  ಕಾಯುತ್ತ ನಿಂತೆ ಇದೆ ಜೋಕಾಲಿ ಯಾರಿಗೆ ಹೇಳಲೋ … Read more

ಅರುಣ್ ಅಂತರಾಳದ ಮಾತು: ಅರುಣ್ ನಂದಗಿರಿ

ನಿನ್ನ ಭವಿಷ್ಯಕ್ಕೆ ನೀನೇ ಶಿಲ್ಪಿ ಇದು ಸ್ವಾಮಿ ವಿವೇಕಾನಂದರ ಮಾತು, ಈ ಸುಭಾಷಿತವನ್ನು ದಿನಪತ್ರಿಕೆಯೊಂದರಲ್ಲಿ ನೋಡಿದ್ದೆ. ಆಗ ನಾನಿನ್ನು ೮ ವರ್ಷದ ಬಾಲಕನಾಗಿದ್ದೆ. ಆದರೂ ಈ ಮಾತನ್ನು ಅರ್ಥಮಾಡಿಕೊಂಡಿದೆ! ಭವಿಷ್ಯದಲ್ಲಿ ನಾನೇನಾಗಬೇಕೋ ಅದನ್ನು ನಾನೇ ನಿರ್ಧರಿಸಬೇಕು. ಗುರಿ ಈಡೇರುವವರೆಗೂ ಛಲ ಬಿಡಬಾರದೆಂದು. ಆಗ ನಾವೆಲ್ಲ ಬೆಂಗಳೂರಿನಲ್ಲಿದ್ದೆವು. ಸುಮಾರು ೨೨ ವರ್ಷದಷ್ಟು ಹಳೆಯ ಬೆಂಗಳೂರದು. ಡಾ| ಲಕ್ಷ್ಮಿ ಡೇ ನಮ್ಮ ಮನೆಯ ಹತ್ತಿರವೇ ತಮ್ಮ ಕ್ಲಿನಿಕ್ ಇಟ್ಟಿದ್ದರು. ’ಆರೋಗ್ಯ ಧಾಮ’ ಅಂತ ಅದರ ಹೆಸರು ಅದರ ಒಂದು ಭಾಗದಲ್ಲಿ … Read more

ಸಮಾಜದ ಚೇತರಿಕೆಗೆ ಊರುಗೋಲಾಗ ಬಯಸಿದ “ಚೇತನ”: ಬೀರಪ್ಪ ಅಂಡಗಿ ಚಿಲವಾಡಗಿ

ಅಂಗವಿಕಲತೆ ಎಂಬುದನ್ನು ಯಾವ ವ್ಯಕ್ತಿಯು ಪಡೆದುಕೊಂಡು ಬಂದುದಲ್ಲ. ಅದು ಆಕಸ್ಮಿತವಾಗಿ ಬರುವಂತದ್ದಾಗಿದೆ. ಅಂಗವಿಕಲತೆಯನ್ನು ಹೊಂದಿರುವ ವ್ಯಕ್ತಿಯು ತನ್ನ ವಿಕಲತೆಯ ಕಡೆಗೆ ಗಮನವನ್ನು ಹರಿಸದೇ ಸಾಧನೆಯನ್ನು ಮಾಡಿ ತೋರಿಸುವುದರ ಕಡೆಗೆ ಗಮನವನ್ನು ಹರಿಸುವರು. ಅಂಗವಿಕಲತೆಗೆ  ಒಳಗಾದ ವ್ಯಕ್ತಿಯು ಸಾಧಾರಣ ವ್ಯಕ್ತಿಗಳಿಗಿಂತ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತಾರೆ. ಅದಕ್ಕೆ ಉದಾಹರಣೆಯೆಂದರೆ ನಾನೇ. ನಾನು ಐದನೇ ವಯಸ್ಸಿನಲ್ಲಿ ಇರುವಾಗ ಪೋಲಿಯೋ ಲಸಿಕೆಯನ್ನು ಹಾಕಿಸಿಯೂ ಅಥವಾ ಹಾಕಿಸದೆಯೋ ನನ್ನ ಎಡಗಾಲು ಶಕ್ತಿಯನ್ನು ಕಳೆದುಕೊಂಡೆ. ಪ್ರಾಥಮಿಕ ಶಿಕ್ಷಣವನ್ನು ನನ್ನ ಸ್ವ ಗ್ರಾಮವಾದ ಕೊಪ್ಪಳ ತಾಲೂಕಿನ ಚಿಲವಾಡಗಿಯಲ್ಲಿ … Read more

‘ಎಲ್ಲಾ ನ್ಯೂನತೆಗಳಾಚೆ ಮನಸ್ಸು ಜೀವಿಸಲಿ’: ದಿವ್ಯ ಆಂಜನಪ್ಪ

ಆ ತಾಯಿ ದಿನವೂ ತನ್ನ ಮಗುವನ್ನು ಶಾಲೆಗೆ ಕರೆದೊಯ್ಯುತ್ತಿದ್ದಳು. ಮಗುವಿಗೆ ಇನ್ನೂ ಮೂರುವರೆ ವರುಷಗಳು. ಒಂದೇ ಬಸ್ಸಿನ ಪ್ರಯಾಣಿಕಳಾಗಿ ನಾನು ಸಹ ಆಗಾಗ ಇವರನ್ನು ಗಮನಿಸುತ್ತಿದ್ದೆನು. ಮಗುವಿಗೆ ಇನ್ನೂ ಸರಿಯಾಗಿ ನಾಲಿಗೆ ಹೊರಳದು, ಕಿವಿಯೂ ತುಸು ಮಂದವೇ. ಹಾಗಾಗಿ ಆಕೆ ಒಂದು ವಿಶೇಷ ಅಗತ್ಯಯುಳ್ಳ ಶಾಲೆಗೆ ಸೇರಿಸಿದ್ದರು. ಮಗು ಮುದ್ದು ಮುದ್ದುಗಿದ್ದು ಬಸ್ಸಿನ ಎಲ್ಲರ ಗಮನವನ್ನು ಸೆಳೆದಿತ್ತು. ಹಾಗೆಯೇ ಅಕ್ಕಪಕ್ಕದವರನ್ನು ಮುಟ್ಟಿ ಮುಟ್ಟಿ ಮಾತನಾಡಿಸಿ ನಕ್ಕು ಮನ ಗೆದ್ದಿತ್ತು. ಮಗುವಿನ ಮುಗ್ಧತೆಯು ಅದರ ನ್ಯೂನತೆಯನ್ನು ನಮ್ಮೆಲ್ಲರ ಮನಗಳಿಂದ … Read more

ವಿಕಲಚೇತನರಿಗಾಗಿ ಸಮನ್ವಯ ಶಿಕ್ಷಣ: ವೈ.ಬಿ.ಕಡಕೋಳ

  ಶೈಕ್ಷಣಿಕ ಮುಖ್ಯವಾಹಿನಿಯಲ್ಲಿ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಅಗತ್ಯವಿರುವ ಮಕ್ಕಳನ್ನು ಸೇರಿಸಿ ನೀಡುವ ಶಿಕ್ಷಣವನ್ನು ಸಮನ್ವಯ ಶಿಕ್ಷಣ ಎನ್ನುವರು.೧೯೮೬ ರ "ರಾಷ್ಟ್ರೀಯ ಶಿಕ್ಷಣ ನೀತಿ",೧೯೯೦ ರಲ್ಲಿ ವಿಶ್ವಸಂಸ್ಥೆ ಮಂಡಿಸಿದ "ಸರ್ವರಿಗೂ ಶಿಕ್ಷಣ" ೧೯೯೫ ರ "ಅಂಗವಿಕಲ ವ್ಯಕ್ತಿಗಳ ಸಮಾನ ಹಕ್ಕುಗಳ ಸಂರಕ್ಷಣೆ ಹಾಗೂ ವಿಕಾಸ ಕಾಯೆ"ಯು ಅಂಗವಿಕಲ ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ಹೊಂದಿ ಅಂತಹ ಮಕ್ಕಳು ಕೂಡ ದೈರ್ಯ ಮತ್ತು ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಬೇಕು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎಂಬುದನ್ನು ತಿಳಿಸಿವೆ. … Read more

ಪ್ರತಿಕ್ ರವರ ಸಂದರ್ಶನ: ಚೈತ್ರ ಭವಾನಿ

ಕಸ್ತೂರಿ ವಾಹಿನಿಯ ಕ್ರೈಂ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದವರಿಗೆ ಪ್ರತಿಕ್ ಅವರ ಧ್ವನಿ ಚಿರಪರಿಚಿತ. ಮಾಧ್ಯಮ ಕ್ಷೇತ್ರದಲ್ಲಿ ಇವರ ಹೆಸರನ್ನು ಕೇಳಿದವರು ಒಮ್ಮೆ ಹುಬ್ಬೆರಿಸೋದು ಸಾಮಾನ್ಯ. ಮಾಧ್ಯಮ ಕ್ಷೇತ್ರದಲ್ಲಿ ಪ್ರತಿಕ್ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತಾರೆ. ಕೆಲಸ ಮಾಡಲು ದೈಹಿಕವಾಗಿ ಸಮರ್ಥರಿದ್ದರೂ ಕೆಲಸದ ಒತ್ತಡ, ಅತೃಪ್ತಿ, ಸಂಬಳದ ಕೊರತೆ ಹೀಗೆ ನಾನಾ  ಕಾರಣಗಳಿಂದ ಮಾಧ್ಯಮ ಕ್ಷೇತ್ರಕ್ಕೆ ಗುಡ್ ಬೈ ಹೇಳುತ್ತಿರುವವರ ನಡುವೆ ಹುಟ್ಟಿದಾಗಿನಿಂದಲೂ ತಮ್ಮ ಎಡಗೈ ಸ್ವಾಧೀನ ಕಳೆದುಕೊಂಡ ಪ್ರತಿಕ್  ಅದೊಂದು ಸಮಸ್ಯೆಯೇ ಅಲ್ಲವೆಂದು  ಇಂದಿಗೂ, ಮುಂದೆಯೂ ಇದೆ ಕ್ಷೇತ್ರದಲ್ಲಿ ಹೊಸ … Read more