ಲೇಡೀಸ್ ಬೋಗಿ: ಪ್ರೇಮಾ ಟಿ ಎಮ್ ಆರ್
ರೈಲು ಸಿಳ್ಳೆ ಹೊಡೆಯುತ್ತ ಹೊರಟಿದೆ. ಲೇಡೀಸ್ ಬೋಗಿ ತುಂಬಿ ತುಳುಕುತ್ತಿದೆ. ಮುಚ್ಚಿದ ಕಿಟಕಿ ಗಾಜಿನಮೇಲೆ ಮಳೆನೀರು ಧಾರೆಯಾಗಿ ಹರಿಯುತ್ತಿದೆ. ಒಳಗೆ ಬದುಕಿನ ಕಥೆಗಳು ಮಾತುಗಳಾಗಿ ಬಿಚ್ಚಿಕೊಳ್ಳುತ್ತಿವೆ. ಇನ್ನಷ್ಟು ಕಥೆಗಳು ಸರದಿಯಲ್ಲಿವೆ. ಅವಳು ಕಸ್ತೂರಿ. ಕಾವೇರಿಯಂತೆ ತಂಪಿನ ಹುಡುಗಿ. ಅವಳ ನಗು ರೇಶಿಮೆಯಷ್ಟು ನವಿರು. ಜುಳುಗುಡುವ ನೀರ ಮೈಮೇಲೆ ಮೂಡುವ ಸುಳಿಯಂಥ ಕೆನ್ನೆಗುಳಿ. ಕಸ್ತೂರಿ ಏಳನೇ ತರಗತಿ ಮುಟ್ಟುವದರೊಳಗೆ ಅಮ್ಮ ಮತ್ತೆ ನಾಲ್ಕು ಹೆತ್ತಿದ್ದಳು. ನಿತ್ಯದ ಗಂಜಿಗೆ ಅಮ್ಮ ಅಪ್ಪನಿಗೆ ನೆರಳಾಗಿ ನಡೆಯಬೇಕು ಹೊರಗಿನ ದುಡಿತಕ್ಕೆ. ತಮ್ಮ ತಂಗಿಯರು … Read more