ಮೂವರ ಕವಿತೆಗಳು: ಪ್ರವೀಣ, ನಳಿನಾ ಡಿ., ಶಶಿಕಿರಣ್

ಎದ್ದಾಗ ಸುತ್ತೆಲ್ಲ ಕತ್ತಲು ಸಾಯುವ ದಿನ ನಿಕ್ಕಿಯಿಲ್ಲವೆಂದು ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು ತಿಂದುಬಿಡುವ ಕಾತುರಕೆ ಹಸಿವು ಸಾಯುವುದಿಲ್ಲ.   ಇದ್ದ ಎಣ್ಣೆಯನೆಲ್ಲ ದೀಪಕೆ ಸುರುವಿ ಬೆಳಕನು ಹೊದ್ದು ಗಡದ್ದು ನಿದ್ದೆ ಎದ್ದಾಗ ಸುತ್ತೆಲ್ಲ ಕತ್ತಲು.   ನಿರ್ದಯ ದೈವದೆದುರು ಮುಗಿದ ಕೈಗಳು ನೈವೇದ್ಯದ ಸಕ್ಕರೆ ಇರುವೆ ತಿಂದು ಖಾಲಿ ಎದೆಯ ಬೇಗೆ ಶಬ್ದಗಳ ಮುಷ್ಠಿಗೆ ಸಿಗದೆ ಖಾಲಿ ಪುಟದ ತುಂಬೆಲ್ಲ ರಾಡಿ.   ಅತಿರಥ ಮಹಾರಥ ಭಗೀರಥ ಪ್ರಯತ್ನ ಆಗಸ ಮುಟ್ಟುವ ಹುತ್ತಿನ ಪರ್ವತದ … Read more

ಮೂವರ ಕವಿತೆಗಳು: ಮಂಜು ಹಿಚ್ಕಡ್, ಚೇತನ್ ಕೆ ಹೊನ್ನವಿಲೆ, ಕಾಜೂರು ಸತೀಶ್

ಹೂ-ದುಂಬಿ  ಹೂಬನದಿ ಆಗತಾನೇ ಅರಳಿದ ಹೂ ಕಾದಿಹುದು ದುಂಬಿ ತನ್ನ ಚುಂಬಿಸಲೆಂದು.   ಮುಂಜಾವಿನ ತಂಗಾಳಿಗೆ ಮೈಯೊಡ್ಡಿ ಕಾದಿಹುದು ಎಂದು ಸೂರ್ಯ, ಉದಯಿಸಿಹೆನೆಂದು.   ಪಕಳೆಗಳ ಅರಳಿಸಿ ಕಾದಿಹ ಸುಮವ ಕಂಡು ತಾ ಮೋಹಗೊಂಡು ಹಾರಿತು ದುಂಬಿ ಆಗತಾನೆ ಅರಳಿನಿಂತ ಆ ಸುಮದೆಡೆಗೆ.   ಝೇಂಕರಿಸಿ ತನ್ನೆಡೆಗೆ ಹಾರಿ ಬಂದ ದುಂಬಿಗೆ ತನ್ನ ಮೈ ಅಲುಗಿಸಿ ಸ್ವಲ್ಪ ಸತಾಯಿಸಿ ಸಹಕರಿಸಿತು ದುಂಬಿಗೆ ತನ್ನ ಮಕರಂದ ಹೀರಲು.   ಮಕರಂದ ಹೀರಿ ತನ್ನಾಸೆ ತೀರಿತೆಂದು ಹಾರಿತು ದುಂಬಿ ಇನ್ನೊಂದರ … Read more

ಮೂವರ ಕವಿತೆಗಳು: ಜಾನ್ ಸುಂಟಿಕೊಪ್ಪ, ಉಷಾಲತಾ, ಜೊ. ಸಿ. ಸಿದ್ದಕಟ್ಟೆ

ಬೇಡದ ಜೀವ ಹಸಿದ ಕತ್ತಲು ಲೊಚಗುಟ್ಟುತ್ತದೆ ಹೊಸೆದ ಬಿರುಸು ಬಂಧನಕ್ಕಾಗಿ,.. ಬಿಸಿಯುಸಿರು ಅಸ್ತವ್ಯಸ್ತವಾಗುತ್ತದೆ ಕ್ರೌರ್ಯ ಕಂಡ ಗೋಡೆಗಳಿಗಾಗಿ… ಏದುಸಿರು…ಅಸಹನೆ ಸಾಕ್ಷಿಯಾಗುತ್ತದೆ ನಿಗೂಢ ಮೌನವಾಗಿ…. ಬಗಲಲಿ ಮಲಗಿದ  ಮೊದಲ ಕೂಸಿಗೂ ಆಗಲೆ ಮೊಳಕೆಯೊಡೆದ ಮುಗ್ಧ ಪಿಂಡಕ್ಕೂ ಏನು ಅಂತರ,,!? ಉತ್ತರವಿಷ್ಟೇ- ಕೆಲವೊಮ್ಮೆ ತೊಟ್ಟಿಲು ತೂಗುತ್ತದೆ, ಕೆಲವೊಮ್ಮೆ…. ತೊಟ್ಟಿ ತುಂಬುತ್ತದೆ.,… ಮೊಳಕೆಯೊಡೆದ ಪಿಂಡ ಕೆಂಪು ಕೆಂಪಾಗಿ ತೊಟ್ಟಿಕ್ಕುತ್ತದೆ… ಕಾಣದ ಜೀವದ ಮೌನರೋಧನಕೆ ಹೊಸದೊಂದು ನ್ಯಾಪ್ಕಿನ್ ಕೆಂಪಾಗುತ್ತದೆ….  –ಜಾನ್ ಸುಂಟಿಕೊಪ್ಪ.             ಕೊನೆ ಎಂದು … Read more

ಮೂವರ ಕವಿತೆಗಳು: ಮಂಜುನಾಥ್ ಪಿ., ವಿಶ್ವನಾಥ್ ಎಂ., ಅನುಪಮಾ ಎಸ್. ಗೌಡ.

          ಹರಿಯುವ ನದಿ ಅದೆಲ್ಲೋ ಉಗಮ ಮೈದುಂಬಿಕೊಳ್ಳುತ್ತ  ಕೈ-ಕಾಲು ಮೂಡಿಸಿಕೊಳ್ಳುತ್ತ  ಸಾಗುವ ದಾರಿಯನ್ನು ಮಾಡಿಕೊಳ್ಳುತ್ತ ಸುಗಮ  ಹಠಕ್ಕೆ ಬಿದ್ದು ಅನುಸಂಧಾನವೊಂದನ್ನು ಉಳಿಸಿಕೊಳ್ಳುವಂತೆ….   ಸವೆಸುವ ದಾರಿ ಶಿಶುವಿನ ಹಾಡೆ? ಸಹಿಸಬೇಕು ಮಧ್ಯೆ ಮತ್ತೆ ಹಾಕಿದರೆ ಕಟ್ಟೆಯ ತಡೆಗೋಡೆ? ಆದರೂ ಹರಿಯಬೇಕೆನ್ನುವ ಧಾವಂತ ನಿರಂತರ ಒಳಗೊಳಗೆ ಅದುವೆ ಆದ್ಯಂತ….   ಕಟ್ಟೆಯಲ್ಲಾದರೂ ಎಷ್ಟೆಂದು ಇರಬಹುದು ಒಂದಿಲ್ಲ ಒಂದು ದಿನ ತುಂಬಿ ಧುಮ್ಮಿಕ್ಕಲೇಬೇಕು ನಿಧಾನಕ್ಕಾದರೂ ಗೋಡೆ ಒಡೆದಾದರೂ…   ಸತ್ಯ ಯಾವತ್ತೂ ಹೀಗೆಯಲ್ಲವೆ?!  ’ಸ್ಥಾವರ’ಕ್ಕೆ … Read more

ಎರಡು ಕವಿತೆಗಳು: ಸಂತೆಬೆನ್ನೂರು ಫೈಜ್ನಟ್ರಾಜ್, ಶ್ರೀಧರ ನಾಯಕ

          ನಾಳೆಯ ಕತೆ        ಸುಮ್ಮನಿರುವುದಕ್ಕಿಂತ  ಏನಾದರೂ ಹೇಳಿ ಬಿಡು ’ನಾಳೆ’ ಬಂದಿತೋ ಇಲ್ಲವೋ…. ಎದಯ ತಲ್ಲಣ ಕಣ್ಣ ನೀರು ಹೃದಯದ ಮಾತು ಗಳ ಮುಚ್ಚಿಡಬೇಡ ’ಇಂದೇ’ ಹೊರಹಾಕು ನಾಳೆ ಕಂಡವರ್‍ಯಾರು?   ಕಳೆದುದ ಹುಡುಕಿಯೇನು ಸುಖ ಗೆಳತಿ; ಎಲ್ಲರೂ ಏನಾದರೊಂದು ಕಳೆದು ಕೊಂಡೇ ಇರ್ತಾರೆ ನನ್ನಂತೆ, ನಿನ್ನಂತೆ! ಇರುವುದ ಕಂಡು ಸುಖಿಸು ’ನಾಳೆ’ ಗಳಿಗೆ ನಿಟ್ಟುಸಿರೇಕೆ? ಏನಾದರೂ ಮಾಡುತಿರು ಎಂಬ ಮಾತಂತೆ ಹಾಡು ಮನದ ಹಾಡು, ಕವಿತೆ … Read more

ಎರೆಡು ಕವಿತೆಗಳು:ಅನಿತಾ, ಶಾಂತಿ ಅಪ್ಪಣ್ಣ

ಸಣ್ಣ ತಪ್ಪಿಗಾಗಿ ಎದುರು ನಿಂತು ನೀ ನಿಂದಿಸುವಾಗ ಹೆದರಿದ ನನ್ನ ಮೊಗವ ಕಂಡು ಮೌನ ತಳೆವ ಆ ನಿನ್ನ ಒಲವಿನ ಪರಿ ಚಂದ…   ಮುಸ್ಸಂಜೆಯಲಿ ಮುತ್ತಿಟ್ಟು, ಮರು ಮುತ್ತಿಗಾಗಿ ಕಾಯುವಾಗ ಕೊಡದೆ ನಾ ಕಾಡುವಾಗ, ಹುಸಿಕೋಪಗೊಂಡ ಆ ನಿನ್ನ ಮುದ್ದು ಮೊಗ ಚೆಂದ….   ನಾ ಮಾಡಿದ ಚೇಷ್ಟೆಯನ್ನೆಲ್ಲಾ ಮರೆತು, ನೀ ನನ್ನ ಮಗುವಂತೆ ಎಂದು ಎದೆಗಪ್ಪಿ ಸಂತೈಸುವ ಆ ನಿನ್ನ ಸಹನೆಯ ಗುಣ ಚೆಂದ…   ನಿನ್ನ ಪ್ರೀತಿಯ ನನ್ನೆದುರು ನಿರೂಪಿಸಿ, ಕಾಯುವಾಗ ನನ್ನ ಸಮ್ಮತಿಗಾಗಿ, … Read more

ಮೂವರ ಕವಿತೆಗಳು: ವಿಲ್ಸನ್ ಕಟೀಲ್, ರಾಶೇಕ್ರ, ಶಶಿಕಿರಣ್

ವಿಷ ೧ ಮನುಜರನ್ನು ನಾನು ಬೆರಳುಗಳಿಗೆ ಹೋಲಿಸಿದೆ ಆದರೆ, ಕೆಲ ವರ್ಗಭೇದಿಗಳು "ಎಲ್ಲಾ ಬೆರಳುಗಳು ಸಮಾನವಾಗಿಲ್ಲ" ಎಂದು ಮುಷ್ಟಿ ಬಿಗಿದರು   ಮನುಜರನ್ನು ನಾನು ರೋಮಗಳಿಗೆ ಹೋಲಿಸಿದೆ ಆದರೆ, ಕೆಲವರು "ಇರುವ ಜಾಗಕ್ಕನುಗುಣವಾಗಿ ಅವುಗಳಲ್ಲಿಯೂ ಮೇಲು-ಕೀಳುಗಳಿವೆ" ಎಂದು ಮೀಸೆ ತಿರುವಿದರು   ಮನುಜರನ್ನು ನಾನು ರಕ್ತಕಣಗಳಿಗೆ ಹೋಲಿಸಿದೆ ಆದರೆ, ಕೆಲ ವರ್ಣಗೇಡಿಗಳು "ಅಲ್ಲಿಯೂ ಬಿಳಿಯರಿದ್ದಾರೆ" ಎಂದು ನಂಜು ಕಾರಿದರು   ಕೊನೆಗೆ ಮನುಜರನ್ನು ನಾನು ಕವಿತೆಯ ಪದಗಳಿಗೆ ಹೋಲಿಸಿದೆ ಆದರೆ, ಕೆಲ ಕಾವಿಯನ್ನು(ಕಾವ್ಯವನ್ನಲ್ಲ) ಉಟ್ಟವರು ಅಲ್ಲಿಯೂ ಪಂಕ್ತಿಭೇದವನ್ನು … Read more

ಮೂವರ ಕವಿತೆಗಳು: ಶಿವು.ಕೆ, ನಾಗೇಶ ಮೈಸೂರು, ಸತೀಶ್ ರೆಡ್ಡಿ

  ಒಪ್ಪಿಕೊಳ್ಳಬೇಕಷ್ಟೆ… ತಪ್ಪು ಹಣವನ್ನು ಕೊಟ್ಟ ಎಟಿಎಂ ಯಂತ್ರವನ್ನು ಏಕೆಂದು ಪ್ರಶ್ನಿಸಲಾಗುವುದಿಲ್ಲ ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ ಒಪ್ಪಿಕೊಳ್ಳಬೇಕಷ್ಟೆ….   ಬೇಡದ ಕೆಂಪು ಹಳದಿ ಮಳೆ ಸುರಿಸಿದ ಮೋಡಗಳಿಗೆ ಅದನ್ನು ವಾಪಸ್ ಕಳಿಸಲಾಗುವುದಿಲ್ಲ ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ ಒಪ್ಪಿಕೊಳ್ಳಬೇಕಷ್ಟೆ….   ಮುಂಜಾನೆ ನಾಟ್ ರೀಚಬಲ್ ಆದ ಪೇಪರ್ ಬೀಟ್ ಹುಡುಗರನ್ನು ಹುಡುಕಿದರೆ ಸಿಗುವುದಿಲ್ಲ ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ ಒಪ್ಪಿಕೊಳ್ಳಬೇಕಷ್ಟೆ…   ತಪ್ಪು ತಪ್ಪು ಅಕ್ಷರಗಳ ಇಂಕನ್ನು ಬಾಲ್ ಪೆನ್ನಿಗೆ  ಕಾಗದದಿಂದ … Read more

ಎರಡು ಕವಿತೆಗಳು: ಆನಂದ ಈ. ಕುಂಚನೂರ, ವಿ.ಎಸ್ ಶ್ಯಾನಭಾಗ್

ನಿನ್ನ ಕರುಣೆಯ ಬಿಂಬ ನಿಶೆಯ ಕರುಣೆಯಿಂದೊಡಮೂಡಿದ ಬೆಳಗಿನುದಯರವಿಯ ಕಂಡ ಇಬ್ಬರೂ ಬಂಗಾರದ ಹಣೆಯ ಮುದದಿ ಮುತ್ತಿಕ್ಕಿ ಕಣ್ತುಂಬಿಕೊಂಡ ಅವನು ಹಗಲ ವ್ಯಾಪಾರಕೆ ಸಜ್ಜಾದ ಸಿಪಾಯಿ- ಯಾದರೆ ಇತ್ತ ಇವಳು ಇರವೆಡೆ ಸಿಂಗಾರ ಸೂಸುವ ಸಿರಿದಾಯಿ   ಬದುಕ ಬೆನ್ನಿಗಂಟಿಸಿ ಹೊರಟರವನು ಪುರುಷ ಭೂಷಣವೆನ್ನಕ್ಕ ಕಾರ್ಯಕಾರಣ ಅದಕಾರಣ ಕಾರ್ಯದೊಳಗಾನು ತೊಡಗಿ ಬಿರುಬಿಸಿಲೆನ್ನದೆ ದುಡಿವ ಬಡಗಿ ತೊಳಲಿ ಬಳಲಿಕೊಂಬದೆ ಬಳಲಿ ಅಳಲುಕೊಂಬದೆ ಮರಳಿ ಸಂಜೆ ಸ್ವಗೃಹ ಹೊಕ್ಕು ಸತಿಯ ಮಂದಹಾಸಕೆ ಮನಸೋತು ಎಲ್ಲ ಬವಣೆಯ ಹಿಂದಿಕ್ಕಿ ಮೀಸೆಯಂಚಲಿ ನಕ್ಕು ಪ್ರಸನ್ನನಾಗುವನು … Read more

ಇಬ್ಬರ ಕವನಗಳು: ಪರಶಿವ ಧನಗೂರು, ಪ್ರಭಾಕರ ತಾಮ್ರಗೌರಿ

"ಕಾಡು” ಎಷ್ಟೊಂದು ಸ್ವಾತಂತ್ರ್ಯ..!!  ಎಲ್ಲಿ ನೋಡಿದರಲ್ಲಿ ಕಣ್ಣು ಬಿಟ್ಟಲ್ಲಿ ಜೀವಂತ ಸೊಗಡು ಕಾಡು…!   ಇಲ್ಲಿ ಎಲ್ಲವೂ ಪರಿಶುದ್ಧ ನಿಷ್ಕಲ್ಮಶ ನಿಸ್ವಾರ್ಥ! ಅಷ್ಟೇ ಸ್ವಾಭಾವಿಕ..!;   ಹಸಿವು ಆಹಾರದ ಸರಪಳಿ ನಡುವೆ ಎಷ್ಟೊಂದು ಸ್ವಾತಂತ್ರ..! ಮೋಡ ಕರಗಲಿಲ್ಲವೆಂದು ಮರ ಮುನಿಸಿಕೊಳ್ಳುವುದಿಲ್ಲ! ಬಿಸಿಲು ನೋಯಿಸುತ್ತಿದೆಯೆಂದು ಹೂಗಳು ಬಯ್ಯುವುದಿಲ್ಲ!   ಉಕ್ಕಿ ಹರಿವ ಹಳ್ಳವು ನನ್ನನು ನುಂಗಿಬಿಟ್ಟಿದೆಯೆಂಬ ಭ್ರಮೆ ಇಲ್ಯಾವ ಬಂಡೆಗೂ ಇಲ್ಲ! ಹಣ್ಣಾಗಿ ನೆಲಸೇರಿ ಗೊಬ್ಬರವಾಗುವುದ ಇಲ್ಯಾವ ಎಲೆಯೂ ಮರೆತಿಲ್ಲ!   ಹೊಟ್ಟೆ ತುಂಬಿದ ಹುಲಿಯ ಮುಂದೆ ಜಿಂಕೆ … Read more

ಮೂವರ ಕವಿತೆಗಳು: ಅಪಿ೯ತ ಮೇಗರವಳ್ಳಿ, ಪ್ರಭಾಕರ ತಾಮ್ರಗೌರಿ, ಗುರುನಾಥ ಬೋರಗಿ

  ಶಿಕ್ಷೆ-ಬದುಕು ಹಾಸಿಗೆಯ ಸುಕ್ಕಿನಲಿ ಸಿಕ್ಕಿ  ಉಕ್ಕಿ ಹರಿಯದೆ ಹರಯ ಕಳಚಿ  ಬಿಳಿ ಕೂದಲು ಇಣುಕಿ  ಮುಖದಲ್ಲಿ ಸುಕ್ಕು ಮೂಡುವ ಮುನ್ನ  ಕಿಂಚಿತ್ತಾದರೂ ವಂಚಿಸಬೇಕೆನಿಸಿತು          ವಂಚನೆಯ ಪ್ರಕರಣಕ್ಕೆ ಶಿಕ್ಷೆಯುಂಟು ಪೋಲಿಸರಿದ್ದಾರೆ ಜೈಲುವಾಸ ಗ್ಯಾರಂಟಿ ಅವಮಾನ, ತಲೆತಗ್ಗಿಸಬೇಕು ಯೋಚಿಸಲೇಬೇಡ ಸುಮ್ಮನಿದ್ದುಬಿಡು.   ಜೋರಾಗಿ ಗಹಗಹಿಸಿದೆ ಶಿಕ್ಷೆ-ಪೋಲಿಸು-ಜೈಲು ಮಾನ-ಅವಮಾನ ಮತ್ತು ತಲೆತಗ್ಗಿಸಬೇಕು. ಯೋಚಿಸಲೇಬೇಡ, ಸುಮ್ಮನೆ ಇದ್ದುಬಿಡು.   ಗೆರೆಯೆಳೆಯುವುದೇ ಇರಬೇಕು ಜಗತ್ತಿನ ಪುರಾತನ ಮದ್ಯ ಬರಿ ಘಾಟಿಗೇ ಅಮಲು ನಶೆಯಲ್ಲಿ ಗೀರಿದ್ದೆಲ್ಲಾ ಲಕ್ಷ್ಮಣರೇಖೆಗಳೇ  ದಾಟಿದರೆ … Read more

ಮೂವರ ಕವಿತೆಗಳು: ಬಸವರಾಜ ಹೂಗಾರ್, ರಾಘವ್ ಲಾಲಗುಳಿ, ಉಷಾಲತಾ

ಜೋಗಿ ಜಂಗಮನ ಹಾದಿ  ಅಲ್ಲಿ ಕಂಡಾರೆಂದು ಇಲ್ಲಿ ಕಂಡಾರೆಂದು  ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸುತ್ತೇ ಸುತ್ತತಾನ ಮನುಷ್ಯರ ಹುಡುಕುವ ಮನುಷ್ಯ ಸುಡು ಬಿಸಿಲು ಉರಿಪಾದ ಕವ್ ನೆರಳು ಕರೆಬಳಗ ಕರುಳ ಬಳ್ಳಿಯ ಕಥೆಗೆ  ನೂರು ನಂಟು ಹೊಂಟನವ ಕಂಬಳಿಯ ಕೊಡವಿ ಹುಚ್ಚು ಹುಚ್ಚಿನ ಹಾಂಗ ಗಿಡ ತೊಗಟಿ ಬಳ್ಳಿ ಕಟ್ಟ್ಟಿ ಮನಸ ಮುಂದಿನೂರಿನ ಹಾದಿ  ಊರು ಮುಟ್ಟುವ ದಾರಿ. ಬಗಲ ಜೋಳಿಗೆ ಬಡಗಿ ಅಂದದ್ದು ಎಲ್ಲ ಖರೆ, ಕಟ್ಟಿ ಕೆಡಹುವ ಮನೆ ಮನಸು ಕಟ್ಟಿರೊ ಮೊದಲು ಮನಸು ಕಟ್ಟಿರೊ. … Read more

ಮೂವರ ಕವಿತೆಗಳು: ರಾಶೇಕ್ರ, ಮಂಜುಳಾ ಬಬಲಾದಿ, ಲತೀಶ್.

            ಬರೆಯಲೇ ಬೇಕೆಂದು ಕುಳಿತೆ 'ನಾ'? ಬರೆಯಲೇ ಬೇಕೆಂದು ಕುಳಿತೆ 'ನಾ' ಇರಲಾಗಲಿಲ್ಲ ನನ್ನಿಂದ ಬರೆಯದೆ ಇನ್ನೆಷ್ಟು ಕಾಲ, ಕಾಲ ಕೆಳಗೆ ಹೊಸಕಿಸಿಕೊಳ್ಳುವುದು, ಇಲ್ಲವೇ ಇದಕೆ ಇನ್ನೊಂದು ಪರ್ಯಾಯ ಪದ ಹುಡುಕಿ ಬರೆಯುವುದು,  ತುಳಿತಕ್ಕೊಳಗಾದೆ, ತುಳಿದವರ ಮೀಸೆಗೆ ಅಂಟದಾದೆ, ಹಿಡಿದು ಜಗ್ಗಾಡಿ ಆರೋಹಣಕಪವಾದವಾದೆ, ತುಳಿಸಿಕೊಂಡ ಮೇಲೂ ಎದ್ದು ನಿಲ್ಲದಾದೆ, ಹಿಂದೆ ಬಿದ್ದ ಇನ್ನೊಂದು ಕೆರ ಹುಡುಕಿ ನಿಮ್ಮೆದುರು ಗೌಣವಾದೆ, ಹೀಗೇ ಹಿಂದೆ ಬಿದ್ದೆ ಎದ್ದು ಎಡವಿ ಬಿದ್ದೆ, ಹೆಣ್ಮನದ ಪ್ರೀತಿ … Read more

ಇಬ್ಬರ ಕವನಗಳು: ಸಚಿನ್ ನಾಯ್ಕ್, ಪರಶಿವ ಧನಗೂರು

ಹೀಗೊಂದು ಸಂಜೆ…! ಇಳಿಸಂಜೆಯ ಹೊತ್ತಲ್ಲಿ ತಂಗಾಳಿಯ ಹಂಬಲಕೆ ಮೆಲ್ಲನೆ ತೆರೆದುಕೊಳ್ಳುತ್ತೇನೆ ಕಡುಕಪ್ಪು ಹಾಸಿನ ರಸ್ತೆಯಲ್ಲಿ ಲಯಬದ್ದ ಹೆಜ್ಜೆಗಳೊಂದಿಗೆ… ತಲೆಯ ಮೇಲೆ ಸಾಗುತಿಹ ಅರ್ಧ ಚಂದ್ರನ ಮೊಗದಲ್ಲೂ ನನ್ನದೇ ಒಂಟಿಬಿಂಬ ಕಂಡಾಗ ನಗಬೇಕೆನಿಸಿದರೂ ನಗುಬಾರದವನಂತೆ ಮುಂದೆ ಸಾಗುತ್ತೇನೆ… ಬೆಳದಿಂಗಳಿಗೂ ಪೈಪೋಟಿ ಎಂಬಂತೆ ಬೆಳಗುತಿಹ ಹಳದಿ ಬೀದಿ ದೀಪಗಳು; ತರಗೆಲೆಯು ಸದ್ದು ಮಾಡುವ ಗಾಡ ಮೌನದ ಜೊತೆಗೆ ಹೊಸ ಸಂಭಂದ ಬೆಳೆಸಿ ಹುನ್ನಾರ ನಡೆಸಿದಂತಿದೆ…! ಯಾಕೊ ಕಳೆದು ಹೋದದ್ದೆಲ್ಲಾ ನೆನಪಾಗಿ ಕಣ್ಣಂಚಲಿ ಸಂತಾಪದ ಹನಿಗಳು ಜಾರಿದಾಗ ಎದೆಭಾರ ಕಳಚಿದಂತೆ ಹಗುರ … Read more

ದೇವರಿದ್ದಾನೆ: ರಾಶೇಕ್ರ

  ಹಳೇ ಪಿಕ್ಚರಿನ ಕ್ಲೈಮ್ಯಾಕ್ಸು ಸೀನಿನಲಿ ಹೀರೋಯಿನ್ನು ಕಟ್ಟಿದ ಬೇವಿಗೆ ಬೆದರಿ ಅಲ್ಲಾಡುವ ಅದೆಷ್ಟೋ ಗಂಟೆಗಳು ಒಮ್ಮೆಲೇ ಢಣ್ಣೆನ್ನುವಾಗ ದೇವರಿದ್ದಾನೆ.. ಪೂಜಾರಿಯ ಆರತಿ ತಟ್ಟೆಗೆ ಬಿದ್ದ ಒಂದೆರಡು ರೂಪಾಯಿ ಕಾಸು ಠಣ್ಣೆನ್ನುವಾಗ ಕಂಪಿಸಿದ ಕಂಪನದಲಿ ಪೂಜಾರಿಯ ತಮುಲದಲಿ ದೇವರಿದ್ದಾನೆ.. ಬಿಳಿ ಟೊಪ್ಪಿಗೆ ಏರಿಸಿ ಬರಿಗೋಡೆಯ ಎದುರು ಭಕ್ತಿಭಾವದಿಂದ ಇಡೀ ಕಾಯವ ಉಲ್ಟಾ ಮಾಡುವ ಸತತ ಪ್ರಯತ್ನಗಳಲಿ ದೇವರಿದ್ದಾನೆ.. ಧನಾತ್ಮಕ ಚಿಹ್ನೆಯನು ಬರೆಯಲು ಬಾರದವರು ಶಿಲುಬೆಯೆಂದುಕೊಂಡು ದೇವಧೂತನ ಅದಕೆ ಆನಿಸಿ ಮೊಳೆಯೊಡೆವ ಮೂರ್ಖತನದಲಿ ದೇವರಿದ್ದಾನೆ.. ಊರ ನಡುವಿನ ಅರಳೀಕಟ್ಟೆಯ … Read more

ಬುದ್ಧನ ಬೋಧಿವೃಕ್ಷ ಬಾಡಿದ್ದು: ಅನುರಾಧ ಪಿ. ಸಾಮಗ

ಬುದ್ಧನ ಬೋಧಿವೃಕ್ಷ ಬಾಡುತಿದೆಯಂತೆ..   ಮರ ಮರುಗದು ಇರದುದಕೆ ಪ್ರತಿ ಕೇಳದು ತಾನಿತ್ತುದಕೆ. ನರಗರ್ಥವಾಗದು ನಿಸ್ವಾರ್ಥತೆ, ನಿರ್ಲಿಪ್ತತೆ, ನಿರಾಕಾರತೆ ಮತ್ತು ನಿರ್ಮಮತೆ… ಅವ ಬಯಸುತಾನೆ, ಕೀಳಿ, ಕಿತ್ತು, ಕೆತ್ತಿ, ಕೊನೆಗೆ ಕಡಿದೇ ಬಿಡುತಾನೆ ಖಾಲಿಯಾಗಿಸಿ. ಇಲ್ಲ ಅತಿ ನಂಬುತಾನೆ, ಮೆಚ್ಚಿ, ಮೆಚ್ಚಿಸಿ, ಅಪ್ಪಿಒರಗಿ, ಒಳಗಿಳಿದು, ಆವರಿಸಲ್ಪಟ್ಟು ಕೊನೆಗೆ ತಾನಿಲ್ಲವಾಗುತಾನೆ ಖಾಲಿಯಾಗಿ.   ತನ್ನಂತೆ ಪರರ ಬಗೆದ ನರಮನಸು ಮರಕೂ ಈವೆನೆಂದು ಹೊರಟಿದೆ. ಸಿದ್ಧಾರ್ಥ ಬುದ್ಧನಾದೆಡೆಯ ಮಣ್ಣಿಗೆ ತಾನೆರೆಯತೊಡಗಿದೆ, ನೆಲೆಯ ಬೆಳಗತೊಡಗಿದೆ, ಉದ್ಧಾರಕತೃವ ಉಪಕೃತವಾಗಿಸಿ ತಾನೆತ್ತರಕೇರಬಯಸಿದೆ.   ಅಲ್ಲ…… … Read more

ಕಮಲಾದಾಸ್ ರ ಎರಡು ಕವನಗಳ ಕನ್ನಡರೂಪ: ಚಿನ್ಮಯ್ ಎಂ.

( ಕಮಲಾದಾಸ್ ರ ‘My Grandmother’s House’ ಕವನದ ಕನ್ನಡರೂಪ ) ನನ್ನ ಪ್ರೀತಿಯ ಮನೆ ದೂರದಲ್ಲಿದೆ. ಆ ಮುದುಕಿ ಸತ್ತಮೇಲೆ ಅವಳ ಬಿಳಿ ಸೀರೆಯಂತೆ ಮೌನವನ್ನುಟ್ಟ ಮನೆಯ ಪುಟಗಳ ನಡುವೆ, ಗೋಡೆಯ ಬಿರುಕುಗಳಲ್ಲಿ ಹಾವುಗಳು ಹರಿದಾಡಿದವು. ನನ್ನ ಪುಟ್ಟ ಜೀವ ಹೆಪ್ಪುಗಟ್ಟಿತು. ಅದೆಷ್ಟು ಬಾರಿ ಅಲ್ಲಿಗೆ ಹೋಗುವ ಯೋಚನೆ  ಮಾಡಿಲ್ಲ ನಾನು? ಕಿಟಕಿಗಳ ಖಾಲಿ ಕಣ್ಣುಗಳಾಚೆ ಇಣುಕಿ ಹೆಂಚಿನ ಕಾವಿಗೆ ಮೈಯ್ಯೊಡ್ಡಿ ನೀರವದ ಸದ್ದಿಗೆ ಕಿವಿಗೊಟ್ಟು ಅಥವಾ ಕಡೇ ಪಕ್ಷ ಹುಚ್ಚು ನಿರಾಸೆಯಿಂದ ಬೊಗಸೆ ತುಂಬಾ … Read more

ಮೂವರ ಕವಿತೆಗಳು: ರಾಘವ ಭಟ್ ಲಾಲಗುಳಿ, ದಿಲೀಪ್ ರಾಥೋಡ್, ರುಕ್ಮಿಣಿ.ಎನ್.

ಮಾತು-ಮೌನ ಮೌನ ಬದುಕಿಗೆ ಅರ್ಥ ಮೌನ ಮಾತಿಗೆ ವ್ಯರ್ಥ ಭಾವ ಭಾವದ ತುಣುಕು ಮೃದು ಮೌನದಲಿ ಹುಡುಕು ||   ಮೌನ ಸಾಗರವಹುದು  ಮಾತೊಂದು ಕೆರೆ ಹುಚ್ಛ ಮೌನ ಸಂವೇದನೆಗೆ ಮೌನದರ್ಥವೇ ಸ್ವಚ್ಛ ||   ಕಳೆದದ್ದು ಮಾತು ಹುಡುಕಿದ್ದು ಮೌನ ಮೌನ ಪ್ರಖರತೆ ಮುಂದೆ ಮಾತೊಂದು ಗೌಣ ||   ಮಾತು ತಾರಿಕೆಯಾಯ್ತು ಮೌನ ತಾ ಚಂದ್ರಮನು ಮೌನ ಹಗಲೂ ಇರುಳು ಮಾತು ಬೆಳಕಿಗೆ ಮರುಳು||   ಮಾತು ಮಾಣಿಕ ನಿಜ ಮಾತೆಲ್ಲ ಮಾಣಿಕವಲ್ಲ ಮೌನದಲಿ … Read more

ಮೂವರ ಕವಿತೆಗಳು: ಪ್ರಭಾಕರ ತಾಮ್ರಗೌರಿ, ನಾಗರಾಜ್ ಹರಪನಹಳ್ಳಿ, ಸುಷ್ಮಾ ಮೂಡುಬಿದರೆ

ಕನ್ನಡಿ ಜಲ  ವಿಶಾಲವಾದ ತಿಳಿಗೊಳ ಅದರೊಳಗೆ ಇಣುಕಿ ನೋಡಿದರೆ ಕಾಣುವುದು ಮಿರಿಮಿರಿ ಮಿಂಚುವ ತಳ ಪ್ರತಿಬಿಂಬ ಕಾಣಲು ಸಾಕು ಈ ಕನ್ನಡಿ ಜಲ ..! ಅಪಾಯವೇನೂ ಇಲ್ಲವಾದರೂ ಇದರಲ್ಲಿ ಯಾರೂ ಸ್ನಾನ ಮಾಡಬೇಡಿ ; ಈಸಬೇಡಿ…. ಅತ್ತಿತ್ತ ಚಲಿಸುತ್ತಾ ಮನಕ್ಕೆ ಮುದ ನೀಡುವ ಬಣ್ಣ ಬಣ್ಣದ ಮೀನುಗಳ ಹಿಡಿದು ಕೊಲ್ಲಬೇಡಿ ಕಸಕಡ್ಡಿ , ಕಲ್ಲೆಸೆಯಬೇಡಿ ಕಾಲು , ಕೋಲು ಹಾಕಿ ಕಲಕಿ ತಿಳಿ ನೀರ ಕೆಡಿಸುವುದು ತಪ್ಪು ಕೊಳಕ ತೊಳೆಯಲು ಇದು ಜಾಗವೇ ಅಲ್ಲ ಶುದ್ದ ಜಲ…! … Read more

ಕವಿತೆಗಳು:ನವೀನ್ ಮಧುಗಿರಿ ಹಾಗೂ ಎನ್.ಕೃಷ್ಣಮೂರ್ತಿ

ನಾನು ಕವಿಯಲ್ಲ ಪ್ರೇಮಿ..!   ನಿನ್ನಷ್ಟಕ್ಕೆ ನೀನು ಹೊಸೆ  ನನ್ನಿಷ್ಟಕ್ಕೆ ನಾನು ಬರೆವೆ!  ನಿನ್ನದು ಚಿಂತನ ಕಾವ್ಯ  ನನ್ನದು ಒಲವಿನ ಪದ್ಯ    ಮುಂದಿನ ಚರಣಗಳಿಗೆ ನಿನ್ನದು  ಪದಗಳ ಹುಡುಕಾಟದ ಪರದಾಟ  ನನ್ನದೇನಿಲ್ಲ ಪೂರಾ ಪದ್ಯವೂ  ಎದೆಯಾಳದಿಂದ ಬಂದ ಖುಷಿ-ಕಣ್ಣೀರುಗಳ ಸಮ್ಮಿಲನ    ನೀನು ಬರೆಯುವುದೆಲ್ಲ ನಿನಗೋ? ಕೃತಿಗಳ ಸಂಖ್ಯೆಗೋ? ಜನರಿಗೋ? ಜನಪ್ರಿಯತೆಗೋ? ಗೊತ್ತಿಲ್ಲ! ನಾನು ಬರೆಯುವುದು ಮಾತ್ರ ಬರೀ ನನಗೆ  ನನ್ನ ಕಣ್ಣೀರು-ಖುಷಿಗೆ.. ಅವಳ ಮರೆಯಬಾರದೆಂಬ ಕಾಳಜಿಗೆ!   ನಿನ್ನ ಕವಿತೆಗಳನ್ನೋದಿ ಮೆಚ್ಚಿಕೊಂಡದ್ದು  ಬೆನ್ನುತಟ್ಟಿದ್ದು ಬರೀ ಸಾಹಿತ್ಯ … Read more