ಮೂವರ ಕವನಗಳು: ರವಿಶಂಕರ್.ಎನ್. ಕೆ., ಬಿದಲೋಟಿ ರಂಗನಾಥ್, ಸಿಪಿಲೆ ನಂದಿನಿ

ಬದುಕುವೆನು ನಾನು  ಬರೆಯುವ ಮೊದಲೇ ಮರೆತು ಹೋಗಿದೆ  ನನ್ನಿಷ್ಟದ ಸಾಲು , ಹೇಗೆ ಹೇಳಲಿ …? ಏನು ಮಾಡಲಿ…? ಜಿಗಿದಾಡುವ ಮನದ ಮೂಲೆಯಲ್ಲಿ ಜೋಕಾಲಿಯಂತೆ ಜೀಕುವಾಗ ನೀನು  ಸುಡುವ ಪ್ರೇಮದ ಒಡಲೊಳಗೆ ಕಾಡುವ ನಿನ್ನದೇ ನೆನಪಿನ ಜಗದೊಳಗೆ ತುಸು ಯಾಮಾರಿದಾಗ ಹೇಗೆ ಹೇಳಲಿ …? ಏನು ಮಾಡಲಿ …? ಜಗದ ಕೊನೆಯ ತುದಿಯ ಬಳಿ ನಿಂತು  ಕೂಗುವಾಗ ಸಾವಿರ ಸಲ ಹೇಳ ಹೆಸರಿಲ್ಲದಂತೆ ಮರೆತು ಹೋಗಿ ಬಿಡು  ಮತ್ತೆ ಬಾರದಂತೆ ನೀನು, ಬದುಕಬಹುದು ನಾನು. ನೀನಿಲ್ಲದೆ…! ಏನೂ … Read more

ಮೂವರ ಕವನಗಳು: ಕು.ಸ.ಮಧುಸೂದನ್, ಶ್ರೀಮಂತ್.ಎಮ್.ವೈ, ವೆಂಕಟೇಶ ನಾಯಕ್, ಮಂಗಳೂರು

ಇವತ್ತಿನ ಕವಿತೆಗಳು. 1. ಇವತ್ತಿನ ರಾತ್ರಿ ಮುಗಿದು ಹೋಗೋದ್ರೊಳಗೆ ಚುಕ್ಕಿಗಳೆಲ್ಲ ಲೆಕ್ಕ ಚುಕ್ತಾ ಮಾಡಿ ಪುಸ್ತಕ ಮುಚ್ಚೋದ್ರೊಳಗೆ ಚಂದ್ರ ಪಾಳಿ ಮುಗಿಸಿ  ಖೋಲಿ ಸೇರೋದ್ರೊಳಗೆ ಬಿಲ ಬಿಟ್ಟ ಹಾವು ಇಲಿ ಬಲಿ ನುಂಗಿ ನೊಣೆದು ತೇಗೋದ್ರೊಳಗೆ ಗಿಡುಗನಂತವನು ಗಿಣಿಯಂತೋಳ ಜೊತೆ ಸುರತ ನಡೆಸಿ ಸ್ಖಲಿಸಿ ಬಿಡೋದ್ರೊಳಗೆ ಸೂರ್ಯ ಅನ್ನೋ ಮೂಧೇವಿ ಬೆಳೆಗ್ಗೆ ಬಂದು  ಬ್ಯಾಟರಿ ಹಾಕಿ ಬೆಳಕ ಹರಿಸೋದ್ರೊಳಗೆ ತಿಕ ಸುಟ್ಟ ಬೆಕ್ಕು ಮುಂಜಾನೆ ಮಿಯಾಂವ್ ಅಂತ ಹಿಮ್ಮಡಿ ನೆಕ್ಕೋದ್ರೊಳಗೆ ಹೀಗೇ ಸುಮ್ಮ ಸುಮ್ಮನೇ ಸತ್ತು ಹೋಗಿಬಿಡಬೇಕು … Read more

ಪಂಜು ಕಾವ್ಯಧಾರೆ

ನಿರುತ್ತರ ನನ್ನೊಳಗೆ ಕಾಡುವ ತುಮುಲಗಳಿಗೆ ಅಂಕುಶವಿಟ್ಟು, ಹೊರ ನಡೆಯುವ ವೇಳೆ, ಯಾರದೋ ನಿರ್ದಯೆಯಿಂದ ಮುಳ್ಳಿನ ಹಾಸಿಗೆಯ ಮೇಲೆ  ಪವಡಿಸಿದ ಅನುಭವ;  ನಡುಗುಡ್ಡೆಯಲ್ಲಿ ಜೀವ ಸೆರೆಯಿಟ್ಟು, ನನ್ನ ಹೊಸಕಿ, ಬಿಸುಡಿದ್ದಾರೆ. ಅಶೀಲ ಕಲ್ಮಶ ಒಳ ಹೊಕ್ಕಿದೆ. ರಸ್ತೆಯುದ್ದಕ್ಕೂ ಪ್ರತಿಭಟನಾಕಾರರು. ಗೂಟದ ಕಾರುಗಳು ನುಸುಳುತ್ತಿವೆ ನಾನಿರುವೆಡೆ. ಆರಕ್ಷಕರು, ಈರಕ್ಷಕರು ಒಂದಾಗಿದ್ದಾರೆ. ಪ್ರಭಾವಳಿಯಂತೆ ನಿಂತಂತಿದೆ ಬೆನ್ನ ಹಿಂದೆ. ನತದೃಷ್ಟೆಯೆಂದರೆ ನಾನೇ ಇರಬೇಕು. ಅನಾಮಧೇಯಳಾಗಿ ಜನರ ಬಾಯಲ್ಲಿ ಹರಿದಾಡುತ್ತಿದೆ ವಿಕೃತ ಕೃತ್ಯ. ಬದುಕುವಾಸೆಗೆ ಬೆಲೆಕೊಟ್ಟು, ಕಾಡುವ ಆ ರಾತ್ರಿಯ ಕರಿ ಛಾಯೆಯಿಂದ ಬೇರ್ಪಟ್ಟು, … Read more

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಶ್ಮಿ ಹೆಜ್ಜಾಜಿ, ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ.

ವಿಳಾಸವಿಲ್ಲದ ಮನುಷ್ಯ ದಿಕ್ಕಿಲ್ಲದ ಬದುಕ ಸವೆಸಲು ಎಣಗಾಡುತ ದೇಕಾಡಿ ಹರಕು ಬಟ್ಟೆ ಮುರಕು ಜೀವ ಹೊತ್ತು ನೀರು ನೆರಳಿಲ್ಲದ ಜಾಗದಲಿ ಚಳಿಯಲ್ಲಿ ಗೂಡರಿಸಿ ನ್ಯೂವ್ಸ್ ಪೇಪರ ಹೊದ್ದು  ಮಲಗಿ, ಜೋಕರಿಸುವ ನೊಂದ ಬೇಸತ್ತ ಜೀವಕು ತನ್ನ ಜೀವದ ಮೇಲೆ ಎಲ್ಲಿಲ್ಲದ ಆಸೆ ಅನ್ನ ಹಾಕುವ ಸಿಲವಾರ ತಟ್ಟೆಯಲಿ ನೊಣ ಮುಕರಿ ಗುಂಯ್ ಗುಟ್ಟುತ್ತಿವೆ ಅಳಸಲು ಅನ್ನಕೆ ಆ ದೇಕುವ ಜೀವ ಮನೆ ಮನೆಯ ಗೇಟ ಅಳ್ಳಾಡಿಸುವ ಪರಿ ನೋಡಿ ಜೀವ ಹಿಂಡುತಿದೆ ಯಾರೆತ್ತ ಮಗನೋ ಪಾಪ ಸೊರಗಿ … Read more

ನಾಲ್ವರ ಕವನಗಳು: ವಿನಾಯಕ ಭಟ್, ಇಂದುತನಯ, ಯದುನಂದನ್ ಗೌಡ ಎ.ಟಿ., ಶ್ರೀದೇವಿ ಕೆರೆಮನೆ

ಅದೇ ರಾಗ, ಬೇರೆ ಹಾಡು.. (ಧಾಟಿ: ಚೆಂದುಟಿಯ ಪಕ್ಕದಲಿ; ಚಿತ್ರ: ಡ್ರಾಮ) ಕಂಗಳಲಿ ಕೋರೈಸೊ ಬೆಳದಿಂಗಳಾ ಹೊಳಪ ಚಂದಿರನ ಮೊಗದಲ್ಲೂ ನಾ ಕಾಣೆ; ಅಂಗಳದಿ ನೀ ಬರೆದ ರಂಗೋಲಿಯ ಹಾಗೇ ಬಾಳನ್ನು ಸಿಂಗರಿಸು ಓ ಜಾಣೆ; ಬರೆದಿರುವೆ ಈ ಗೀತೆ ನಿನಗಾಗಿ.. ಮೂಡಿರುವೆ ನೀ ಇದರ ಶೃತಿಯಾಗಿ.. ಹಾಡೋಣವೇ ಒಮ್ಮೆ ಜೊತೆಯಾಗಿ? ಎತ್ತರದಿ ಅರಳಿರುವ ಚಾಚೊ ಕೈಯ್ಯಿಗೆ ಸಿಗದ ಪಾರಿಜಾತದ ಹೂವು ಬಲು ಚಂದವಂತೆ; ನೀ ದೂರ ಸರಿದಂತೆ ನೆನಪುಗಳು ಸನಿಹಾಗಿ ಗಾಢವಾಗುವ ಮೋಹಕೆ ಕೊನೆಯೆಂಬುದುಂಟೆ? ಎಡರುಗಳು … Read more

ಮೂವರ ಕವನಗಳು: ವಾಸುದೇವ ನಾಡಿಗ್, ಜ್ಯೋತಿ ಹೆಗಡೆ, ಗಿರಿಯ

ಶಕುಂತಲೆಯ ಪ್ರಾಯ ಕನ್ನಡಿಯಲಿಕಣ್ಣಿರುಕಿಸುವುದ ಬಿಟ್ಟಿದ್ದಾಳೆ ಮೇನಕೆ ಶಕುಂತಲೆಯ ತನುವಿಡಿ ಅವಳದೇ ಪರಿವಿಡಿ ಬಿಂಕಮರೆತ ಹೂಕಂಪುಗಳೆಲ್ಲ ಕಕ್ಕಾಬಿಕ್ಕಿ ಕೂತು  ಒನಪಿನ ತೊರೆಗಳೆಲ್ಲಾ ಮೋರೆಕೆಳಗೆ ಮಾಡಿವೆ ತಾರೆಗಳ ಮಿನುಗು ಬರಿಸೋಗು ಕುಣಿಯದ ಮಂಕು ನವಿಲು ನಡೆ ಮರೆತ ಆಲಸಿ ಹಂಸ  ಒಣಗಿದ ಗಿಣಿಯ ತುಟಿ ಕುಂದಿದ  ಬೆಳದಿಂಗಳು ಜಡ ಹಿಡಿದ ಅಂದುಗೆ ತೊನೆದಾಡದತೆನೆ ತುಳುಕದಕೊಳ ಪ್ರಾಯ ಬಂದವಳ ಎದುರು ಉಳಿದವು ಮುಪ್ಪು ಅಳಿದವು ಉಪಮೆಗಳು ಕೊರಗಿದವು ರೂಪಕಗಳು ಧ್ವನಿಗಿನ್ನು ಬರಿ ದಣಿವು ಅನಾಥ ಅಲಂಕಾರ ಕಣ್ವರ ಕಣ್ಣೆದುರು  ವಸಂತ ಕಟು … Read more

ಮೂವರ ಕವನಗಳು: ಜ್ಯೋತಿ ಹೆಗಡೆ, ಬಿದಲೋಟಿ ರಂಗನಾಥ್, ಜಯಶ್ರೀ ದೇಶಪಾಂಡೆ

 ಗೆಳತಿ.. ನೀ ಜೊತೆಯಿದ್ದಾಗ ನಾನಾಗಿದ್ದೆ ಕೇವಲ ಪ್ರೇಮಿ. ನೀ ದೂರಾಗಿ ನೆನಪುಗಳನೆಲ್ಲ ಬಿಟ್ಟು ಹೋದ ಮೇಲೆ ನಾನಾಗಿರುವೆ ಪ್ರೀತಿಯ ಆರಾಧಕ! ಅದೆಷ್ಟೋ ರಾತ್ರಿ ಗರ್ಭವ ಸೀಳಿ ಬರುವ ಮಳೆಯಲಿ ನೆನೆ ನೆನೆದು.. ಮಿಂಚು ಹುಳುಗಳ ಬೆಳಕನೇ ಸಾಲಾಗಿ ಪೋಣಿಸಿ ಬರೆದಿರುವೆ!! ರಾತ್ರಿ ಚಿಮಣಿಯ ಮಂದ ಬೆಳಕಲಿ ರಾಡಿಯೆಬ್ಬಿಸಿದ ಮಳೆ ನೀರಲಿ ನಿನ್ನ ಪ್ರತಿಬಿಂಬವ ಹುಡುಕಿರುವೆ.. ಎಲ್ಲ ವ್ಯರ್ಥ,, ನೀನಿಲ್ಲದ ಪ್ರತಿಬಿಂಬ ನಿನ್ನದೇ ನೆನಪಾಗಿ ಕಾಡಿದೆ.. ​ಎದೆಯಲೆಲ್ಲ ನೆನಪ ನೀರೊಂದೇ ಉಳಿದಿದೆ ಸಾಲು ಕವನವಾಗಿ ನಿನಗಾಗಿ ಕನವರಿಸಿ ಮಲಗಿರುವ … Read more

ಮೂವರ ಕವನಗಳು: ನೂರುಲ್ಲಾ ತ್ಯಾಮಗೊಂಡ್ಲು, ಅಜ್ಜೀಮನೆ ಗಣೇಶ್, ಬಿದಲೋಟಿ ರಂಗನಾಥ್

ಗೊಹರ್     ಮನದ ಹರಕೆಯು ಕನಸಾಗಿ ಕಾಡಿದೆ ಕಣ್ಣಿನಾಳದಲಿ ಮಗನೆ ನೀ ಬೆಳೆದು ಬಳಕುವ ಬಳ್ಳಿಯೊಡಲಲಿ ಹೂಗಳು ನಗುತಲಿರಲಿ ಘಮ್ಮನೆ. ಬೆಳೆದು ದೊಡ್ಡವನಾಗಿ ಹಾರದಿರು ನಕ್ಷತ್ರದ ಸುಳಿಗೆ  ಇಲ್ಲೆ ಕೂಡಿಬಾಳೊ ಇರುವ ಗುಡಿಯೆ ಸ್ವರ್ಗ  ನಮಗೆ. ಸಾವಿರಾರು ವ್ಯೆಭೋಗದಾಭರಣಗಳು ಸಮುದ್ರ  ದೊಡಲಿನ ಸಿಂಗಾರಕೆ? ಹೃದಯ ಸಮುದ್ರದಲ್ಲಿನ ಮುತ್ತನ್ನು (ಗೊಹರ್) ಹೊತ್ತ ಎನಗೆ ಯಾವುದೇತರಹಂಗೆ? ನಡೆ,ನಿನ್ನ ಅಂಬೆಗಾಲುಗಳಲಿ ಹೊನ್ನಕಿರಣಗಳು ಸೂಸಲಿ ನಾಳಿನಾಸೆಯ ಎಮ್ಮಮನಗಡಲಲಿ ಹರ್ಷದಲೆಗಳು ಏಳಲಿ. -ನೂರುಲ್ಲಾ ತ್ಯಾಮಗೊಂಡ್ಲು         ಜಗತ್ತು …. … Read more

ಮೂವರ ಕವನಗಳು: ಅಜ್ಜೀಮನೆ ಗಣೇಶ್, ನಗೆಮಲ್ಲಿಗೆ, ಕಮಿ (ಪುಟ್ಟಕ್ಕ)

ದಿಬ್ಬಣದ ಸೂತಕ ಸೇರನೊದೆಯುವ ಹೊತ್ತಲ್ಲಿ ಹೊಸ್ತಿಲಲ್ಲೇ ಸತ್ತು ಬಿದ್ದಿತ್ತು.. ಸುಡುವ ಮನೆ ಹುಡುಗನಿಗೆ ಹೂಳುವ ವಂಶದ ಹೆಣ್ಣನು ಬೆಸದಿದ್ದ ಪ್ರೇಮ.. ಸಂಭ್ರಮ ಸರಿದಲ್ಲೀಗ ಸೂತಕ ಹೊಕ್ಕಿದೆ, ಮೌನ ಮಿಕ್ಕಿದೆ, ಅನುಕಂಪವೂ ಸಾಕಷ್ಟಿದೆ ದುಃಖವೊಂದೇ ಕಾಣುತ್ತಿಲ್ಲ.. ಅಂಗಳದಿ ಸೌದೆ ಸುಟ್ಟು ಚಪ್ಪರದ ಗಳಕಿತ್ತು ಚಟ್ಟಕ್ಕಿಟ್ಟು ತೋರಣವ ತಳದಿ ತುಂಬಿಟ್ಟು ಅಳುವವರ ಕರೆಸಿ ಡಂಕನಕ ಹಾಡಿತು ಬ್ಯಾಂಡ್ಸೆಟ್ಟು.. ಹೂವಿನ ಖರ್ಚಿಲ್ಲ, ಮೈಲಿಗೆಯ ಹಂಗಿಲ್ಲ ಬರುವವರಿಲ್ಲ,ಬಂಧುಗಳ್ಯಾರಿಲ್ಲ ಏನು ಬಂತು ಫಲ ಸಂಜಿಯೊಳಗೆಲ್ಲಾ, ಮುಗಿವ ಲಕ್ಷಣವಿಲ್ಲ ಹೊತ್ತು ಮೀರಿದೆ ಹೊರಡಬೇಕಿದೆ ಮೆರವಣಿಗೆ ಅರಸುತಿಹರಿನ್ನೂ … Read more

ಮೂವರ ಕವನಗಳು: ಅಜ್ಜೀಮನೆ ಗಣೇಶ್, ಯದುನಂದನ್ ಗೌಡ ಎ.ಟಿ., ಮಂಜುನಾಥ ಹನಮಂತಪ್ಪ ವರಗಾ

ಸಮಾದಿಯ ಹೂವು ಚಂದಿರನ ಕೀಟಲೆಗೆ ಮೈಜುಮ್ಮೆಂದು ಕತ್ತಲ ಹಟ್ಟಿಯಲ್ಲಿ ಮೈನೆರೆದಿದ್ದೆ.. ಮುಂಜಾವಿನ ರವಿ ಮೂಡಿ ಇಬ್ಬನಿಯ ನೀರೇರದು ಹಗಲ ಕಡಲಲಿ ತೇಲಿಬಿಡುವವರೆಗೂ ಮೈಮರೆತೇ ಇದ್ದೆ… ಯೌವ್ವನ ಹರಿವ ಹೊಳೆ ಎದೆಯಲಿ ಒಲವ ಮಳೆ ಕುಡಿಯರಳಿ ನಿಂತವಳಿಗೆ ದಿನದ ಬೆಳಕು ಹಿತವಾದ ಹಗೆ.. ಹಾಡ್ತೀರಿ, ಆಡ್ಕೋತೀರಿ ಸ್ವಂತಕ್ಕೆಂದು ಕಿತ್ತಿಡ್ಕೊತೀರಿ ನಾಚಿಕೆಯಿಲ್ಲ.. ಥೂ.! ನನ್ನ ಹಾದಿಗೆ ನಿಮ್ಮದೇನು ಅಣತಿ.? ಯಾಕೀ..ಮೈಮುಟ್ಟೋ ಸಲುಗೆ,.? ದುಂಬಿ, ಜೇನು, ಚಿಟ್ಟೆ ಮತ್ತು ನೀವು, ಮೈಪರಚೋ ಕಂಬಳಿ ಹುಳಗಳೆ ಎಲ್ಲಾ… ಬಲವಂತದ ಹಾದರಕೆ ನಿಸರ್ಗ ಸೃಷ್ಟಿ … Read more

ಮೂವರ ಕವನಗಳು: ಡಿ.ವಿ.ಪಿ., ಉರ್ಬಾನ್ ಡಿಸೋಜ, ಅನುರಾಧಾ ಪಿ. ಎಸ್.

ಹೀಗೊಂದು ಹಾದಿ.!! ಬಿಮ್ಮನೆ ಧ್ಯಾನಸ್ಥ ಭಂಗಿಯಲ್ಲಿ ಹರವಿಕೊಂಡ ಹಾದಿ., ಅದೆಷ್ಟೋ ಚೈತ್ರಗಳ  ಹೂ ಅರಳುವಿಕೆಯನ್ನು ಕಂಡಿದೆಯಂತೆ. ಮುಳ್ಳುಗಳ ಸೋಕಿ ಸುರಿದ ನೆತ್ತರ ಪಸೆಯನ್ನು ಇಂಗಿಸಿಕೊಂಡಿದೆಯಂತೆ. ಹಾದಿ ಮೀರಿ ಬಂದವರೆಷ್ಟೋ ತಾವಾಗೇ ಉಳಿಯದೇ ಮಾರ್ಪಾಡಾಗಿದ್ದಾರೆ ಎನ್ನುವ ವರ್ತಮಾನ.!! ಮೌನವನ್ನೇ ಮೈಮೇಲೇರಿಕೊಂಡಂತೆ ನಿರ್ಲಿಪ್ತವಾಗಿ ಮಲಗಿದೆ ಹಾದಿ ಬದಲಾವಣೆಗಳಿಗೆ ಸಾಕ್ಷಿಯಾಗಿ.!!  ಉಬುಕಿ ಬಂದ ಹಸಿವ ನುಂಗಿ ಬಸವಳಿದವರೆಷ್ಟೋ ಹಾದಿಯ ಕ್ರಮಿಸಿ ಬಂದು ನೋಡಿದರೆ, ಹಸಿವೇ ರಾಗವಾಗಿದೆಯಂತೆ.!! ಅಳಲುಗಳೊಳಗೆ ತಾ ಮುಳುಗಿ ನಿಶ್ಚಲ ಗೋಡೆಗೊರಗಿ ಬಿಟ್ಟ ನಿಟ್ಟುಸಿರು, ಹಾದಿಯ ಕ್ರಮಿಸಿದೊಡನೆ ಕೊಳಲಾಗಿದೆಯಂತೆ.!! ಯುದ್ಧ … Read more

ಚುಟುಕಗಳು: ಮಂಜುನಾಥ ಹನಮಂತಪ್ಪ ವರಗಾ

೧) ನಿನ್ನಷ್ಟು ಸ್ವಾರ್ಥಿಯಲ್ಲ ನೀ ಮುಡಿದ ಮಲ್ಲಿಗೆ! ಸುವಾಸನೆ ಚಲ್ಲುತಿದೆ ನನ್ನೆಡೆಗೆ ಮೆಲ್ಲಗೆ!! ೨) ಮೇಷ್ಟು ಮಾತು! ಮರೆತುಬಿಡು ಎಂದು ಹೇಳಿ  ಹೋದವಳಿಗೇನು ಗೊತ್ತು? ನನಗೆ ನೆನಪಿನ ಶಕ್ತಿ ಜಾಸ್ತಿ ಇದೆ ಎಂದ ನಮ್ಮ ಮೇಷ್ಟ್ರ ಮಾತು!! ೩) ಸಾಂತ್ವನ! ಜೈಲಿಂದ ಬಿಡುಗಡೆಯಾದ ಕಳ್ಳ ರಾಜಕಾರಣಿಗೆ ಊರಿನ ಜನರಿಂದ ಅದ್ಧೂರಿ ಸ್ವಾಗತ ಸನ್ಮಾನ! ದೇಶಕ್ಕಾಗಿ ದುಡಿದು ಮಡಿದ ವೀರಯೋಧನ ಮನೆಯವರಿಗೆ ಸಿಗಲಿಲ್ಲ ಅದೇ ರಾಜಕಾರಣಿಯಿಂದ ಚೂರು ಸಾಂತ್ವನ:-P ೪) ಸೈನಿಕ- ಕೋಟಿ ಜನಗಳ ರಕ್ಷಣೆಯ ದಿಟ್ಟ ನಾಯಕ:-O … Read more

ಮೂವರ ಕವನಗಳು: ಸಂತೋಷಕುಮಾರ ಸೋನಾರ, ನಗರ ಸುಧಾಕರ ಶೆಟ್ಟಿ, ಕಿರಣ್ ಕುಮಾರ್ ಕೆ. ಆರ್.

ವಾಸ್ತವ ಬುದ್ಧ ಜನಿಸಿದಾ ನಾಡಿನಲ್ಲಿ  ಬೃಂದಾವನವ ಕಟ್ಟದೆ  ಬಾಂಬನ್ನು ಸುಟ್ಟರಲ್ಲ! ಬಸವ ಜನಿಸಿದಾ ಭುವಿಯಲ್ಲಿ  ಭಕುತಿಯಿಂದ ಬಾಳದೇ   ಬರ್ಭರ ಹಿಂಸೆಯಾಗುತ್ತಿದೆಯಲ್ಲ! ಗಾಂಧಿ ಜನಿಸಿದ ದೇಶದಲ್ಲಿ  ಗಂಧದ ಪರಿಮಳವ ಸೂಸದೇ  ಗನ್ನನ್ನು ಹಿಡಿದೆವಲ್ಲ! ಬುದ್ಧ, ಬಸವ, ಗಾಂಧಿ ಈಗ ಇದ್ದಿದ್ದರೆ??? ಬುದ್ಧ ಕಲ್ಲಾಗುತ್ತಿದ್ದ! ಗಾಂಧಿ ಮೌನವಾಗುತ್ತಿದ್ದ! ಬಸವ ಮತ್ತೊಮ್ಮೆ ಐಕ್ಯವಾಗುತ್ತಿದ್ದ! **** ಈ ಜಗತ್ತಿನೊಳಗೆ  ಪ್ರತಿಯೊಬ್ಬರಿಗೂ  ಒಂದೂಂದು ದಾರ!  ನನ್ನದೊಂದು ದಾರ  ನಿನ್ನದೊಂದು ದಾರ!  ಅವರದೊಂದು ದಾರ   ಆಗಬೇಕಿದೆ ನಾವು  ಇದರಿಂದ ಉದ್ಧಾರ!  ಬೇಡವೇ ಬೇಡವಂತೆ  … Read more

ಮೂವರ ಕವನಗಳು: ಮಲ್ಲಿಕಾರ್ಜುನ ಗೌಡ್ರು, ರಾಘವೇಂದ್ರ ಇ. ಆಶಾದೀಪ

೧) ಸಾಕ್ಷಿ: ನಾನು ಕೊಟ್ಟ ಕಾಣಿಕೆಗಳಿಗೆ ನಿನ್ನ ನೆನಪುಗಳೇ.. ನನಗೆ ಸಾಕ್ಷಿ.! ನೀನು ಕೊಟ್ಟ ನೆನಪುಗಳಿಗೆ ನನ್ನ ಕಣ್ಣೀರ ಹನಿಗಳೇ.. ನಿನಗೆ ಸಾಕ್ಷಿ..!! ೨) ಶ್ರೀಮಂತ: ನಾನು ನೋವುಗಳ  ಆಗರ್ಭ ಶ್ರೀಮಂತ ನಾ ಬಚ್ಚಿಟ್ಟ ಆಸ್ತಿ.. ಯಾರೂ ಕೇಳದ, ಯಾರೂ ಬೇಡದ, ಯಾರೂ ಕದಿಯದ, 'ಕರಗದ ಕಣ್ಣೀರ ಹನಿಗಳು' ನಾನು ನೋವುಗಳ ಆಗರ್ಭ ಶ್ರೀಮಂತ -ಮಲ್ಲಿಕಾರ್ಜುನ ಗೌಡ್ರು           ಕಾಯುವಿಕೆ ಜಗದ ನಿಯಮ ಕಾಡಿಸದಿರು ಓ ಸಖೀ ನೀ ನನ್ನಿಂದ ದೂರಾಗಿ … Read more

ಮೂರು ಕವಿತೆಗಳು: ಸಂತೋಷಕುಮಾರ ಸೋನಾರ, ಲಕ್ಷ್ಮೀಕಾಂತ ಇಟ್ನಾಳ, ನಳಿನಾಕ್ಷಿ ಹೀನಗಾರ್

ಅಪ್ಪ ಬೆಂಕಿ ಉಗುಳುವ ಕಣ್ಣು| ಘರ್ಜಿಸುವ ದನಿ| ಹೃದಯ ಸೂಕ್ಷ್ಮ | ಒಮ್ಮೊಮ್ಮೆ ಉಗ್ರ ಪ್ರತಾಪಿ | ಮಗದೊಮ್ಮೆ ಮಗುವಿನ ಮನಸ್ಸು|  ಅರ್ಥಕ್ಕೆ ನಿಲುಕದಾ ನನ್ನ ಅಪ್ಪ ನೆನಪಾಗುತ್ತಾರೆ !   ಏನೀ ಪ್ರಶ್ನೆಗಳು? ಈ ಹಳೆಯ ಕಾಲದ ಮಂದಿ| ಏನೇನೋ ಕೇಳುವರು ದೊಡ್ಡ ವೈದ್ಯರಿಗೇ ಪ್ರಶ್ನೆ | ಈ ನರ್ಸುಗಳು |  ಬಿಳಿ ಬಟ್ಟೆ ವೈದ್ಯರು ಕಂಡಾಪಟ್ಟೆ ಓದಿದವರು|  ಆತನ ಪ್ರಶ್ನೆಗಳಿಗೆ ಉತ್ತರಿಸಲಾರರು ಅದಕ್ಕೆ ಅಪ್ಪ ನೆನಪಾಗುತ್ತಾರೆ ! ಇನ್ನೂ ಈ ಮಕ್ಕಳು ಮರಿಗಳು? ಚಿಕ್ಕವರಿದ್ದಾಗ … Read more

ಚುಟುಕಗಳು: ವೀಣಾ ಭಟ್

ವ್ಯರ್ಥ ಸುಂದರಿಯ ನಡೆಯಲ್ಲಿ  ಸುಗುಣವಿಲ್ಲದಿರೆ  ಆ ಸೌಂದರ್ಯ  ಸುಡುಗಾಡು ಹೊಗೆಯಲ್ಲಿ  ಸುರುಗಿ ಹೂ ಕಂಪು   ಚೆಲ್ದಂತೆ ವ್ಯರ್ಥ.  ಗ್ರಹಚಾರ ಈ ರಾಜಕೀಯ ಮಂತ್ರಿಗಳ ಸರ್ಕಾರ  ರಾಕ್ಷಸರ ಅವತಾರ  ಅವರದೇ ದರ್ಬಾರ  ಹೇಳುವರು ಮಾಡುವೆವು ನಮ್ಮ ಉದ್ದಾರ  ಕೇಳಿ ಪ್ರಶ್ನಿಸಿದರೆ ಇಲ್ಲದ  ಟೆಕ್ಸಾಕಿ ಬಿಡಿಸುವರು ನಮ್ಮ ಗ್ರಹಚಾರ ಹಿಂಗಿದೆ ನೋಡಿ ಸ್ವಾಮೀ ಸಮಾಚಾರ   ಪಜೀತಿ  ನನ್ನುಡುಗಿ ಪಾರ್ವತಿ  ನಾ ಮಾಡ್ತಿದ್ದೆ ತುಂಬಾ ಪಿರೂತಿ  ಅವಳ ಚೆಂದದ ಗೆಳತಿ ಮಾಲತಿ   ಕಂಡಾಗಿನಿಂದ ನಾನಾದೆ ಮಾರುತಿ  ನನ್ನುಡುಗಿ … Read more

ಮೂವರ ಕವಿತೆಗಳು: ನವೀನ್ ಮಧುಗಿರಿ, ನಗೆಮಲ್ಲಿಗೆ, ಕು.ಸ.ಮಧುಸೂದನ್

ಕೊಳದ ದಡ ಬೇಟೆ ಸಲುವಾಗಿ ಧ್ಯಾನಸ್ಥ ಕೊಕ್ಕರೆ ಬುದ್ಧನಲ್ಲ ~•~ ತಂಗಾಳಿಯ ಹಾದಿ ಚಲಿಸಿದೆ ಪರಿಮಳ ಹಾರಿತು ಚಿಟ್ಟೆ ಉದುರಿದವು ಹಣ್ಣೆಲೆಯ ~•~ ಪಶ್ಚಿಮ ಶಿಖರದ ಮೇಲೆ ನೇಸರನ ಜಾರುಬಂಡಿ ಮುಂಜಾಗ್ರತೆಗೆ ಮಡಿಲು ತೆರೆದಳು ಇಳೆ ~•~ ಆಷಾಡದ ಗಾಳಿ ತರಗೆಲೆಗೆ ಕಲಿಸಿದೆ ಓಟ ~•~ ಜೇಡದ ಮನೆ ಮುರಿಯಲು ಹೋಗಿ ನೊಣ ಬಲೆಯೊಳಗೆ ಬಲಿ ~•~ ಮಲಗಿರುವ ಸೂರ್ಯನಿಗೆ ಮುಂಜಾನೆ ಸುಪ್ರಭಾತ ಕೊಕ್ ಕೊಕ್ ಕೋ ~•~ ಬೆತ್ತಲೆ ಚಂದಿರ ಬೆತ್ತಲೆ ಮರ ಕತ್ತಲ ಉಡುಗೆ … Read more

ಮೂವರ ಕವನಗಳು: ನವೀನ್ ಮಧುಗಿರಿ, ಶ್ರೀಮಂತ್ ಎಮ್. ಯನಗುಂಟಿ, ಯದುನಂದನ್ ಗೌಡ ಎ.ಟಿ

ನಾವು ಪ್ರೀತಿಯೆಂದರೆ ನಂಬಿಕೆ ನೀನು ನನ್ನೆಷ್ಟು ನಂಬುವೆ? ನಿನ್ನಷ್ಟೇ ನಾನೇಕೆ ನಿನಗಿಷ್ಟವಾದೆ? ಗೊತ್ತಿಲ್ಲ. ಪ್ಲೀಸ್ ನಿಜ ಹೇಳು ಕಾರಣ ಹುಡುಕುವುದು ಕಷ್ಟ ನಾನು ನಿನ್ನೆಷ್ಟು ಪ್ರೀತಿಸಲಿ? ಅದು ನಿನ್ನಿಷ್ಟ ನಿಲ್ಲು ಏನು? ಪದೇ ಪದೇ ನೀನು ನಾನು ಅನ್ನುವುದು ನಿಲ್ಲಿಸು ಮತ್ತೇನನ್ನಲಿ? ನಾವು ಅಂತನ್ನುವುದು ಒಳ್ಳೆಯದು ಯಾಕೆ? ನೀನೆಂದರೆ ನಾನು ನಾನೆಂದರೆ ನೀನು ~•~ ಬೆವರು ನಮ್ಮಪ್ಪ ಕವಿತೆಗಳ ಬರೆಯಲಿಲ್ಲ ಭತ್ತ, ರಾಗಿ, ಜೋಳ ಬೆಳೆದ ಅಕ್ಷರಗಳ ಸ್ಖಲಿಸಿಕೊಂಡ ಕವಿಗೆ ಹಸಿವಾಯ್ತು ಅಪ್ಪನ ಬೆವರು ತಿಂದ ~•~ … Read more

ಮೂರು ಕವನಗಳು: ತಿರುಪತಿ ಭಂಗಿ, ಪ್ರಕಾಶ್ ಬಿ. ಜಾಲಹಳ್ಳಿ, ಸಂದೇಶ್ ಎನ್.

ಹೇಗೆ ಹೇಳಲಿ ಗೆಳತಿ  ನಾನೀರವುದೇ ಹೀಗೆ  ಕತ್ತಲಲ್ಲಿ ಮಿರಮಿರನೇ ಮಿನುಗುವ ಮಿಂಚುಳ್ಳಿ ಹಾಗೆ  ಬೆಳಕಿನಲ್ಲಿ ನನಗಿಲ್ಲ ಒಂದಿಷ್ಟು ಬೆಲೆ. ಹೇಗೆ ಹೇಳಲಿ ಗೆಳತಿ  ನಾನೀರವುದೇ ಹೀಗೆ  ಗಂಗೆಯಲಿ ತೇಲಾಡುವ ಮೀನಿನ ಹಾಗೆ  ಮೋಸದಿಂದ ಎಸೆದ ಗಾಳ  ನನಗೆ ಸಾವು ತಂದರೂ ನಾನಂತು  ಅವರಿಗೆ 'ಅನ್ನದೇವಿ' ಯಾಗುತ್ತೇನೆ. ಹೇಗೆ ಹೇಳಲಿ ಗೆಳತಿ  ನಾನೀರವುದೇ ಹೀಗೆ ಬಾನೆತ್ತರಕೆ ಬೆಳೆದು ನಿಂತ  ತೆಂಗಿನ ಮರದ ಹಾಗೆ  ನೂರೆಂಟು ರೋಗಿಗಳಿಗೆ ಎಳೆನೀರ ಔಷಧಿ ಕೊಟ್ಟರೂ ನನ್ನ ಬುಡಕ್ಕೆ ನೀರು ಬಿಡುವವರಿಲ್ಲ  ಗೊಬ್ಬರದ ವಾಸನೆ … Read more

ಪಂಜು ಕಾವ್ಯ

ನೀ ಬಂದು ನಿಂತಾಗ ಎಂದಾದರೊಮ್ಮೆ  ಬಳಿ ನೀನು ಬಂದರೆ  ಕೊಡಲೇನ ನಿನಗಾಗಿ ಹೇಳು ಚಂದದ ಚೆಲುವಿನ   ಮನದಾಗಿನ ಭಾವನೆಗಳ ಸಾರುವ ಅಂದದ ಕಾಣಿಕೆಯು  ನಿನಗಾಗಿ ಕಾದಿಹುದು ಕೇಳು ಪ್ರತಿದಿನವು ಮೂಡಿಹುದು  ಒಲವಿನ ರಂಗವಲ್ಲಿ ನಿನ್ನ ಆಗಮನಕ್ಕಾಗಿ ಕಾದು ಪ್ರತಿಸಾಲು ಸಾರಿಹುದು ಅಭಿಮಾನವ ರಂಗುಚೆಲ್ಲಿ ನನ್ನೆಲ್ಲಾ ಗಮನವ ನಿನ್ನೆಡೆಗೆ ಸೆಳೆದು ತಂಪಾದ ತಂಗಾಳಿ ಚಾಮರವ ಬೀಸಲು ಅಣಿಯಾಗಿದೆ ಬಳಿ ನೀನು ಬರಲು ದಣಿದು ಮುಗಿಲಿನ ಮೋಡವು ಪನ್ನೀರ  ಎರಚಲು ಸುತ್ತೆಲ್ಲಾ ಕವಿದಿದೆ ಖುಷಿಯಿಂದ ಕುಣಿದು ಮತ್ತಷ್ಟು ಉಡುಗೊರೆಗಳು … Read more