ಮೂವರ ಕವಿತೆಗಳು: ರಾಘವೇಂದ್ರ ಹೆಗಡೆಕರ್, ಸಂಗೀತ ರವಿರಾಜ್, ಷಡಕ್ಷರಿ ತರಬೇನಹಳ್ಳಿ
— ಗೋಡೆ — ನನಗಾಗಿ ಅಗೆದ ಯಾರದೋ ಭೂಮಿಯಲ್ಲಿ ಇನ್ನಾರೋ ಮಲಗಿದ್ದರಂತೆ ಪಾಪ. ನೆಲದ ಮೇಲೆ ಎಲ್ಲ ಹಂಚಿಕೊಂಡವರು ನಾವು- ಮಾಡಿ ಭಾಗ . ಗೊತ್ತೇ ಇರಲಿಲ್ಲ ಇದ್ದರೂ ಇರಬಹುದು ಇಂಥದೊಂದು ಜಾಗ. ಸಮಾಧಿ ಸ್ತಿತಿಯಲ್ಲಿ ಅವಿತು ಕುಳಿತವನ ಗಾಢ ಮೌನದ ಸದ್ದುಗಳು . ಅರೆ ಪಕ್ಕದಲ್ಲೇ ಚಿರ ನಿದ್ರೆಯಲ್ಲಿದ್ದಾಳೆ ಚಿನ್ನದಂತ ಹುಡುಗಿ ಇವಳೇ ಬೆಳಿಗ್ಗೆ ಬೆರಳ ತೋರಿದವಳು ಸ್ನೇಹದ ಹಸ್ತ ಚಾಚಿ . ಇಲ್ಲಿ ಮಣ್ಣಿನ ಒಳಗೆ ಗೋಡೆಗಳೇ ಇಲ್ಲ . -ರಾಘವೇಂದ್ರ ಹೆಗಡೆಕರ್ … Read more