ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 10): ಎಂ. ಜವರಾಜ್
೧೦- ಅವ್ವಾ..ಅವ್ವಾ..ನೀ ಏಳವ್ವಾ.. ಶಂಕ್ರಪ್ಪೋರು ಅಳಳ್ತ ಅಳಳ್ತ ನೀಲವ್ವೋರು ವಾಲಾಡ್ತ ಗೋಳಾಡ್ತ ಅಯ್ನೋರ ಕಣ್ಣು ಕೆಂಪಗಾಗ್ತ ಉರಿ ಉರಿ ಉರಿತಾ ಮೊರಿತಾ ಓಡೋಡಿ ಕಾಲೆತ್ತಿ ಜಾಡಿಸಿ ಒದ್ದನಲ್ಲೊ ಆ ಶಂಕ್ರಪ್ಪೋರು ಮಾರ್ದೂರ ಬಿದ್ದು ಅಯ್ಯಪ್ಪೋ ಅಂತ ಸೊಂಟ ಹಿಡ್ದು ಆ ನೀಲವ್ವ ಬಿದ್ದ ಮೋರಿಗೇ ಬಿದ್ದು ಕೊಸರಾಡ್ತ ಇದ್ದನಲ್ಲೊ…. ನನ್ನೆಡ್ತಿ ಮುಟ್ಟಕೆ ನೀಯಾವನಲೇ ಬಂಚೊತ್ ಲೌಡೆ ಬಂಚೊತ್… ಆ ನೀಲವ್ವ ತವಿತಾ ಕೈ ಚಾಚ್ತ ಶಂಕ್ರಾ.. ಶಂಕ್ರಾ ಅಂತ ಕೂಗ್ತ ಹತ್ರತ್ರ ಬಂದ್ಲಲ್ಲೊ.. ಅಯ್ನೋರು ನನ್ ಮೆಟ್ಟೇ … Read more