ಹ್ಹೋ.. ಏನು ..?: ಅನಿತಾ ನರೇಶ್ ಮಂಚಿ

ನಾಯಿ ಬೊಗಳುವ ಸದ್ದಿಗೆ ಒಬ್ಬೊಬ್ಬರಾಗಿ ಹೊರ ನಡೆದ ನಮ್ಮ ಮನೆಯ ಸದಸ್ಯರು ಯಾರೊಂದಿಗೋ ಏನು ? ಏನು? ಎಂದು ವಿಚಾರಿಸುತ್ತಿರುವುದು ಕೇಳಿಸಿತು. ಮಧ್ಯಾಹ್ನದ ಊಟದ ಸಿದ್ದತೆಯಲ್ಲಿದ್ದ ನಾನು ಯಾರಿರಬಹುದು ಎಂಬ ಕುತೂಹಲದಲ್ಲಿ ಹೊರಗೆ ದೃಷ್ಟಿ ಹಾಯಿಸಿದೆ. ಅರ್ರೇ .. ನಮ್ಮ ಪ್ರೀತಿಯ ಗೌರತ್ತೆ.. ಅದೂ ಕೊಡಗಿನ  ಕಾವೇರಿಯ ಉಗಮಸ್ಥಾನದಿಂದ  ಮೊದಲ ಬಾರಿಗೆ ನಮ್ಮನೆಗೆ ಬರುತ್ತಾ ಇರುವುದು. ನಾವೆಲ್ಲಾ ಅವರ ಮನೆಗೆ ಹೋಗಿ ದಿನಗಟ್ಟಲೆ ಟೆಂಟ್ ಊರುತ್ತಿದ್ದೆವು. ಸ್ವಲ್ಪವೂ ಬೇಸರಿಸಿಕೊಳ್ಳದೇ ಉಪಚಾರ ಮಾಡಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.  ಅಲ್ಲಿಂದ ಮರಳುವಾಗ … Read more

ಉಳಿತಾಯ: ಅನಿತಾ ನರೇಶ್ ಮಂಚಿ

ಅತ್ತ ಕಡೆಯಿಂದ ಚಿಕ್ಕಿಯ ಫೋನ್. ಹೇಗಿದ್ದರೂ ಅರ್ಧ ಗಂಟೆಗಿಂತ ಕಮ್ಮಿ ಮಾತನಾಡಿ ನಮಗಿಬ್ಬರಿಗೂ ಗೊತ್ತೇ ಇಲ್ಲ. ’ಲೈನಲ್ಲಿರು ಬಂದೇ’ ಎಂದು ಕೂಗಿ ಅಡುಗೆ ಮನೆಗೆ ನುಗ್ಗಿ ಸ್ಟವ್ ಆಫ್ ಮಾಡಿ, ಪಕ್ಕದ ಕೋಣೆಯ ಫ್ಯಾನ್ ನಿಲ್ಲಿಸಿ ಮತ್ತೆ ಲ್ಯಾಂಡ ಫೋನಿನ ರಿಸೀವರ್ ಕೈಯಲ್ಲಿ ಹಿಡಿದು ಲ್ಯಾಂಡಾದೆ. ನಮ್ಮ ಪಕ್ಕದ ಮನೆಯ ದನಗಳಿಗೆ ತಿನ್ನಲು ಹಾಸನದಿಂದ ತರಿಸಿದ ಒಣ ಹುಲ್ಲಿನ ಬಣ್ಣದಿಂದ ಹಿಡಿದು ಮೊನ್ನೆ ನಮ್ಮನೆ ನಾಯಿಯ ಬಾಯಿಗೆ ಸಿಕ್ಕಿ ಸತ್ತ ಹೆಗ್ಗಣದ ಬಾಲದವರೆಗಿನ ಕಥೆ ನನ್ನ ಕಡೆಯಿಂದ … Read more

ಎಂತಾ ಸೆಖೆ ಮಾರ್ರೆ..: ಅನಿತಾ ನರೇಶ್ ಮಂಚಿ

ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ವರ್ಷಕ್ಕೆ ಮೂರು ಕಾಲಗಳಿರುತ್ತವೆ, ಮಳೆಗಾಲ ಚಳಿಗಾಲ ಬೇಸಿಗೆಗಾಲ  ಎಂದು ಟೀಚರುಗಳು ಹೇಳಿ ಕೊಟ್ಟದ್ದು ನಿಮಗೆ ನೆನಪಿರಬಹುದು.  ನಾನಂತೂ ಅದನ್ನೇ ಪರಮ ಸತ್ಯವೆಂದು ತಿಳಿದು  ಉರು ಹೊಡೆದಿದ್ದೆ ಮಾತ್ರವಲ್ಲ ಅದನ್ನೇ ಪರೀಕ್ಷೆಗಳಿಗೆ ಬರೆದು ಮಾರ್ಕೂ ಗಿಟ್ಟಿಸಿದ್ದೆ. ಆದರೆ  ದಕ್ಷಿಣ ಕನ್ನಡಕ್ಕೆ ಕಾಲಿಟ್ಟ ಮೇಲೆ ತಿಳಿದಿದ್ದು ಸತ್ಯ ಕೂಡಾ ಊರಿಂದೂರಿಗೆ ಬದಲಾಗುತ್ತದೆ ಎಂದು..!!  'ನೋಡಿ ಹಾಗೆ ಹೇಳ್ಬೇಕು ಅಂದ್ರೆ ನಮ್ಮೂರಲ್ಲಿ ಬೇಸಿಗೆ ಕಾಲ ಅಂತಲೇ ಇಲ್ಲ..' 'ಅರ್ರೇ.. ವಾವ್ ಎಷ್ಟು ಚಂದ' ಅಂತ ಟಿಕೆಟ್ … Read more

ಆ ..ಊ.. ಔಚ್.. ಗಾಯಬ್: ಅನಿತಾ ನರೇಶ್ ಮಂಚಿ

ಇದ್ದಕ್ಕಿದ್ದಂತೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ  ಯಾವುದೇ ಘನ ಗಂಭೀರ ಕಾರಣಗಳಿಲ್ಲದೆ ನನ್ನ ಬಲದ  ಕೈಯ ತೋರು ಬೆರಳಿನಲ್ಲಿ ನೋವು ಕಾಣಿಸಿಕೊಂಡಿತು. ನೋವು ಎಂದರೆ ಅದೇನು ಅಂತಹ ಸಹಿಸಲಸಾಧ್ಯವಾದ ಭಯಂಕರ ನೋವೇನೂ ಅಲ್ಲ. ಆದರೆ ದಿನವಿಡೀ ನಾನಿದ್ದೇನೆ ಎಂದು ಹಣಕಿ ಇಣುಕಿ ಹೋಗುತ್ತಿತ್ತು. ಹೀಗೆ ನೋವುಗಳು ಎಲ್ಲೇ ಪ್ರಾರಂಭವಾದರೂ ನಾನು ಅದರ ಇತಿಹಾಸವನ್ನು ಕೆದಕಲು ಹೊರಡುತ್ತೇನೆ. ಅವುಗಳ ಹುಟ್ಟು, ಬೆಳವಣಿಗೆಗಳ ಬಗ್ಗೆಯೇ ಕುತೂಹಲ ನನಗೆ. ಹಾಗಾಗಿ ನೋವು ಶುರು ಆದದ್ದು  ಹೇಗೆ, ಯಾವಾಗ, ಎಷ್ಟು ಗಳಿಗೆಗೆ, ಮುಂತಾದವುಗಳಿಗೆ ಉತ್ತರ … Read more

ಮೊದಲ ಸಲಾ: ಅನಿತಾ ನರೇಶ್ ಮಂಚಿ

 ಏನೇ ಹೇಳಿ.. ಜೀವನದಲ್ಲಿ  ಮೊದಲ ಸಲ ಎನ್ನುವುದು ಪ್ರತಿಯೊಬ್ಬನ ಮನಸ್ಸಿನಲ್ಲಿಯೂ ವಿಶೇಷವಾಗಿಯೇ ನೆನಪಿರುತ್ತದೆ. ಮೊದಲ ಸಲ ಶಾಲೆಯ ಮೆಟ್ಟಿಲು ಹತ್ತಿದ್ದು, ಮೊದಲ ಸಲ ತಪ್ಪು ಮಾಡಿ ಶಿಕ್ಷೆ ಅನುಭವಿಸಿದ್ದು, ಮೊದಲ ಸಲ ಯಾರಿಗೂ ಕಾಣದಂತೆ ಅಮ್ಮನ ಸೀರೆ ಉಟ್ಟದ್ದು, ಹುಡುಗರಾದರೆ ಸೊಂಟದಿಂದ ಜಾರುವ ಭಯವಿದ್ದರೂ ಅಪ್ಪನ ಪಂಚೆಯನ್ನುಟ್ಟು ದೊಡ್ಡವನಾದಂತೆ ಮೆರೆದದ್ದು, ಇಷ್ಟೇ ಏಕೆ ಮೊದಲ ಸಲ ಯಾರೊಡನೆಯೋ ಕಣ್ಣೋಟ ಕೂಡಿದ್ದು, ಕನಸಾಗಿ ಕಾಡಿದ್ದು.. ಯಾವುದನ್ನೇ ಹೇಳಲಿ ಮೊದಲ ಸಲ ಎನ್ನುವುದು ನಮಗೆ ನೆನಪಾದಂತೆ ಮನಸ್ಸಿಗೆ ಮುದ ನೀಡುವುದಂತೂ … Read more

ಪತ್ರ ಬರೆಯಲಾ: ಅನಿತಾ ನರೇಶ್ ಮಂಚಿ

ಅದೊಂದು ಕಾಲವಿತ್ತು.. ಅದನ್ನು ಕಾಯುವಿಕೆಯಲ್ಲಿನ ಪರಮ ಸುಖದ ಕಾಲ ಅಂತ ಕರೆದರೂ ಸರಿಯೇ. ಕಾಯುವಿಕೆ  ಅನಿವಾರ್ಯವಾದ ಕಾರಣ ’ತಾಳುವಿಕೆಗಿಂತನ್ಯ ತಪವು ಇಲ್ಲ’ ಎಂದುಕೊಂಡೇ ಎಲ್ಲರೂ ಆ ಸುಖವನ್ನು ಅನುಭವಿಸುತ್ತಿದ್ದರು. ಹೇಳಲಾರದ  ಚಡಪಡಿಕೆ, ಕಣ್ಣೋಟ ದೂರ ದಾರಿಯ ಕಡೆಗೇ.. ಕಾಲುಗಳು ನಿಂತಲ್ಲಿ ನಿಲಲರಿಯದೇ ಅತ್ತಿಂದಿತ್ತ ಇತ್ತಿಂದತ್ತ.. ಕಿವಿಗಳು ಅವನ ಹೆಜ್ಜೆಯ ಸಪ್ಪಳದ ಸದ್ದಿಗಾಗಿ ಹಾತೊರೆಯುತ್ತಾ.. ನಿಜಕ್ಕೂ ಅದು ರಾಮನ ಬರುವಿಕೆಗಾಗಿ ಕಾದಿರುವ  ಶಬರಿಯ ಧ್ಯಾನದಿಂದ ಕಡಿಮೆಯದ್ದೇನು ಅಗಿರಲಿಲ್ಲ.  ಏನಿರಬಹುದು ಇದು ಎಂಬ ಕುತೂಹಲವೇ..  ’ವಸಂತ ಬರೆದನು ಒಲವಿನ ಓಲೆ … Read more

ಅತಿಥಿ ಸಂಪಾದಕೀಯ: ಅನಿತಾ ನರೇಶ್ ಮಂಚಿ

ಮನುಷ್ಯ ಸಂಘ ಜೀವಿ. ಇದರಲ್ಲಿ ಹೆಣ್ಣಾದರೂ ಸರಿ ಗಂಡಾದರೂ ಸರಿ ಬದುಕು ಸಾಗಿಸಬೇಕಾದರೆ ಜೊತೆಯನ್ನು ಬಯಸುವುದು ಸಹಜ. ಬಂಡಿಯ ಎರಡು ಗಾಲಿಗಳಲ್ಲಿ ಯಾವುದು ಮುಖ್ಯವೆಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೇ ಸ್ತ್ರೀ ಪುರುಷರಿಬ್ಬರಲ್ಲೂ ಯಾರು ಮೇಲು ಯಾರು ಕೀಳು ಎಂದು ಹೇಳುವುದು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಪೂರಕವಾಗಿ ನಡೆದರೆ ಬದುಕು ಸೊಗಸು.   ಬದಲಾದ ಕಾಲ ಘಟ್ಟದಲ್ಲಿ  ಸ್ತ್ರೀ ಇನ್ನಷ್ಟು ಹೊಣೆಗಾರಿಕೆಗಳನ್ನು ಹೆಗಲ ಮೇಲೇರಿಸಿಕೊಳ್ಳುತ್ತಾ ನಡೆದಿದ್ದಾಳೆ.ಆ ಹೆಜ್ಜೆಗಳು ನಡೆದಾಡಿದ ದಾರಿ ಹೊಸ ದಿಕ್ಕಿನತ್ತ ಸಾಗಬೇಕಾದರೆ ಸಮಾಜದ ಸಹಕಾರವೂ ಮುಖ್ಯ. … Read more

ದ್ವಿಮುಖ ಪರಿಚಯ: ಅನಿತಾ ನರೇಶ್ ಮಂಚಿ

ಇಡ್ಲಿ ಬೇಯಲಿಟ್ಟು ಚಟ್ನಿಗಾಗಿ ಕಾಯಿ ತುರಿಯುತ್ತಲಿದ್ದೆ. ಪಕ್ಕದ ಮನೆಯ ಪಂಕಜಾಕ್ಷಿ ಅಕ್ಕಾ ಅಂತ ಕರೆದಳು. ಅದರ ಮೊದಲೇ ಅವಳ ಕುಮಾರ ಕಂಠೀರವ ಅಡುಗೆ ಮನೆಗೆ ನುಗ್ಗಿ ಎರಡು ಜ್ಯೂಸಿನ ಲೋಟ ನೆಲಕ್ಕೆಸೆದಾಗಿತ್ತು. ಪುಣ್ಯಕ್ಕೆ ಅದು ಅನ್ ಬ್ರೇಕೇಬಲ್ ಗಳಾದ್ದರಿಂದ ಬಿದ್ದ ಲೋಟ ಎತ್ತಿಟ್ಟು ಅವನ ಕೆಲಸಕ್ಕೆ ಬ್ರೇಕ್ ಹಾಕಿದೆ. ಅಕ್ಕಾ ಸ್ವಲ್ಪ ಹೊತ್ತು ಅವನನ್ನಿಲ್ಲಿ ಬಿಟ್ಟು ಹೋಗ್ತೀನಿ.. ಅಂದಳು ಅವಳು.. ನಾನು ಹೂಂ ಅನ್ನುವ ಮೊದಲೇ ಅವಳ ಕುಮಾರ ಕಂಠೀರವ ನನ್ನ ಮುಖ ನೋಡಿ ಕಿಟಾರನೆ ಕಿರುಚಿ … Read more

ಹನಿಮೂನ್: ಅನಿತಾ ನರೇಶ್ ಮಂಚಿ

ಸಂಜೆಯ ಹೊತ್ತು.. ಹೂಗಿಡಗಳ ಮೇಲಿನಿಂದ ಬೀಸಿ ಬರುವ ಗಾಳಿ ಪಾರಿಜಾತದ ಕಂಪನ್ನು ಒಳ ಹೊತ್ತು ಬರುತ್ತಿತ್ತು.ಅಂಗಳದ ಮೂಲೆಯಲ್ಲಿ ಅರಳಿದ ಸಂಜೆ ಮಲ್ಲಿಗೆಯನ್ನು ನೇವರಿಸುತ್ತಾ ’ಜೀವ ತುಂಬಿ ಭಾವ ತುಂಬಿ ಮನದ ದೀಪ ಬೆಳಗಿ ಬಾ..’ ಎಂದು ಹಾಡುತ್ತಿರುವಾಗಲೇ  ದೀಪ ಹೊತ್ತಿಸುವ ಹೊತ್ತಾಯಿತೆಂದು ನೆನಪಾಗಿದ್ದು. ಒಳಗಡಿಯಿಟ್ಟೆ. ಮಬ್ಬುಗತ್ತಲಲ್ಲಿ ತಲೆ ತಗ್ಗಿಸಿ ಕೂತಿದ್ದ ಆಕಾರವೊಂದನ್ನು ಕಂಡು ಅಲ್ಲಿಯವರೆಗಿದ್ದ ರೋಮ್ಯಾಂಟಿಕ್ ಮೂಡ್   ಒಮ್ಮೆಲೇ ಮಾಯವಾಗಿ  ಹೃದಯ ಹಾರಿ ಬಾಯಿಗೆ ಬರುವಂತಾಯಿತು. ನನ್ನನ್ನು ಕಂಡು ಪಕ್ಕನೇ ಎದ್ದ ಆಕಾರ ಪರಿಚಯದ್ದು ಅನ್ನಿಸಿ … Read more

ಸಸ್ಯ ಪ್ರೇಮಿ: ಅನಿತಾ ನರೇಶ್ ಮಂಚಿ

ಮನೆ ಮಂದಿಯೆಲ್ಲಾ ಔತಣಕ್ಕೆಂದು ಹೊರ ಹೋಗಿದ್ದರು. ಅದ್ಯಾಕೋ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಹಾಡುವ ಉಮೇದು,  ನಾಟಕದ ಡೈಲಾಗುಗಳನ್ನು ದೊಡ್ಡದಾಗಿ  ಹೇಳುವ ಉತ್ಸಾಹ ನನ್ನೊಳಗಿನಿಂದ  ಉಕ್ಕಿ ಬರುತ್ತದೆ. ಯಾಕೆಂದರೆ ನನ್ನ ಹಾಡು ಕೂಡಾ ’ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಅನ್ನುವ ಮಾದರಿಯದ್ದು. ಇವತ್ತಂತೂ ಯಾವ ಹಾಡು ಕೂಡಾ ಎರಡು ಗೆರೆಯಷ್ಟುದ್ದಕ್ಕೆ ನೆನಪಿಗೇ ಬರಲಿಲ್ಲ. ಕೊನೆಗೆ  ’ಯಾವ ಹಾಡ ಹಾಡಲೀ.. ಎಂದು ಯೋಚಿಸುವಾಗಲೇ ಮುಂದಿನ ಲೈನ್ ನೆನಪಿಗೆ ಬಂದು ’ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲೀ..’  ಅಂತ ಧ್ವನಿ … Read more

ಡೊಂಕು ಬಾಲದ ನಾಯಕರು: ಅನಿತಾ ನರೇಶ್ ಮಂಚಿ

’ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ’ ಎಂದು ಅಡುಗೆ ಮನೆಯಲ್ಲಿ ಪಲ್ಯ ತಳ ಹತ್ತದಂತೆ ಸೌಟಿನಲ್ಲಿ ತಾಳ ಹಾಕುತ್ತಾ ನನ್ನ ಧ್ವನಿಗೆ ನಾನೇ ಮೆಚ್ಚಿಕೊಳ್ಳುತ್ತಾ ಹಾಡುತ್ತಿದ್ದೆ.ಅಷ್ಟರಲ್ಲಿ ’ಅಮ್ಮಾ’ ಎಂದಿತು ಕಂದನ ಕರುಳಿನ ಕರೆಯೋಲೆ. ನಾನೇ ಹಾಡುತ್ತಿದ್ದ ಲಾಲಿ ಹಾಡು ಕೇಳಲಾಗದೇ ಬೇಗನೇ ನಿದ್ರಿಸಿ ದೊಡ್ಡವನಾದ ನನ್ನ ಕರುಳ ಕುಡಿಯಲ್ಲವೇ ಎಂದು ಹಾಡನ್ನು ಮುಂದುವರಿಸಿದೆ.  ಅಮ್ಮಾ.. ಡೊಂಕು ಬಾಲದ ನಾಯಕರು ಅಂದರೆ ಯಾರು ಎಂದ. ಅವನ ಪ್ರಶ್ನೆಗೆ ಸರಳವಾಗಿ ’ನಾಯಿ’ ಎಂದು ಉತ್ತರ ಕೊಟ್ಟೆ. ತಕ್ಷಣ ನಾಲಿಗೆ ಕಚ್ಚಿಕೊಂಡೆ. … Read more

ಮನೆಯ ಮೂಲೆ: ಅನಿತಾ ನರೇಶ್ ಮಂಚಿ

  ಕೋಣೆ ಅನ್ನುವುದು ಹೆಚ್ಚಿನೆಲ್ಲಾ ಮನೆಗಳಲ್ಲಿ ಚೌಕವೋ ಆಯತವೋ ಇರುವುದರಿಂದ ಒಂದು ಕೋಣೆಗೆ ನಾಲ್ಕು ಮೂಲೆಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಒಂದೆರಡು ಹೊರ ಜಗತ್ತಿಗೆ ತೆರೆದಿದ್ದರೆ ಮತ್ತುಳಿದವು ತಮ್ಮನ್ನು ಮಂಚವೋ, ಮೇಜೋ, ಕುರ್ಚಿಯೋ ಹೀಗೇ ಯಾವುದಾದರೂ ವಸ್ತುಗಳಿಂದ ಆವರಿಸಿಕೊಂಡಿರುತ್ತವೆ. ಇವುಗಳೇ ಮನೆಯ ಅತ್ಯದ್ಭುತ ಸ್ಥಳ ಎಂದು ನನ್ನ ಅಭಿಪ್ರಾಯ. ಇವುಗಳು ಮುಚ್ಚಿಟ್ಟುಕೊಂಡಿರುವ ರಹಸ್ಯಗಳೇ ಹಾಗಿರುತ್ತವೆ.   ಪಕ್ಕನೆ ಮನೆ ಒಳಗೆ ನುಗ್ಗಿದವರಿಗೆ ಕಾಣಬಾರದ, ಕಸ,  ಕಸಬರಿಕೆ, ಬಿಸುಡಲು ಮನಸ್ಸಿಲ್ಲದ ಹಳೆಯ ಬಟ್ಟೆಯ ಗಂಟು, ಮುರಿದ ಪಾತ್ರೆ ಪಡಗಗಳು, … Read more