ಭಾಷಣದ ಗಮ್ಮತ್ತು: ಅನಿತಾ ನರೇಶ್ ಮಂಚಿ
ಭಾಷಣ ಎಂಬುದೊಂದು ಕಲೆ. ಕೆಲವರಿಗೆ ಭಾಷಣ ಮಾಡುವುದು ಎಂದರೆ ನೀರು ಕುಡಿದಂತೆ. ಮೈಕ್ ಕಂಡರೆ ಅದೇನೋ ಪ್ರೀತಿ. ಬಹು ಜನ್ಮದಾ ಅನುಬಂಧವೇನೋ ಎಂಬಂತೆ ಹಿಡಿದುಕೊಂಡದ್ದನ್ನು ಬಿಡಲೇ ಒಲ್ಲರು. ಸಾಧಾರಣವಾಗಿ ರಾಜಕಾರಿಣಿಗಳಿಗೆ ಈ ರೋಗ ಇರುವುದು. ಯಾಕೆಂದರೆ ಅವರು ತಮ್ಮ ಕಾರ್ಯಗಳಿಂದ ಹೆಚ್ಚಾಗಿ ಮಾತಿನ ಬಲದಲ್ಲೇ ಮಂತ್ರಿಗಳಾಗುವಂತಹವರು. ಯಾವುದೇ ಮಾನದಂಡದ ಮುಲಾಜಿಗೂ ಸಿಕ್ಕದೇ ಪದವಿಯನ್ನಾಗಲೀ, ಪದಕಗಳನ್ನಾಗಲೀ,ಪ್ರಶಸ್ತಿಗಳನ್ನಾಗಲೀ ಮಾತಿನ ಬಲದಲ್ಲೇ ಪಡೆಯುವಂತಹವರು. ಅಂತವರು ಮಾತು ನಿಲ್ಲಿಸುವುದಾದರೂ ಹೇಗೆ ಅಲ್ಲವೇ? ಇವರಷ್ಟೇ ಮೈಕ್ ಪ್ರೀತಿಸುವ ಇನ್ನೊಂದು ಪಂಗಡದ ಜನ ಯಾರೆಂದರೆ ಕಾರ್ಯಕ್ರಮವನ್ನು … Read more