ಮಕ್ಕಳೆದುರಿಗೆ ಮತ್ತು ಮಕ್ಕಳಾಗುವ ಮುನ್ನ: ಅಮರ್ ದೀಪ್ ಪಿ.ಎಸ್.
ಹಳ್ಳಿಗಳಲ್ಲಿ ಹಿಂದೆ ವೈದ್ಯರಿಗಿಂತ ಅನುಭವಸ್ಥರಾಗಿ ಸೂಲಗಿತ್ತಿಯರು ಗರ್ಭಿಣಿ ಹೆಂಗಸರಿಗೆ ಮನೆಯಲ್ಲೇ ನಾರ್ಮಲ್ ಹೆರಿಗೆ ಮಾಡಿಸಿ ಕೂಸು ಬಾಣಂತಿಯನ್ನು ಎರೆದು ನೀರು ಹಾಕಲು ಬರುತ್ತಿದ್ದರು. ಹೊರಗೆ ಗಂಡ, ಉಳಿದವರು ಕಾತರದಿಂದ ಕಾಯುತ್ತಿದ್ದರೆ, ಒಳಗೆ ಗರ್ಭಿಣಿ ಹೆಂಗಸು ನೋವು ತಿನ್ನುತ್ತಿರುತ್ತಾಳೆ. ಒಂದು ಕ್ಷಣ ನೋವು ತಿನ್ನುವ ಸದ್ದು ನಿಂತಿತೋ? ಮತ್ತೊಂದು ಕೂಗು ಕೇಳುತ್ತದೆ. ಈಗ ಹುಟ್ಟಿದ್ದು ಹೆಣ್ಣೋ? ಗಂಡೋ? ಎನ್ನುವ ಕಾತರ. ಹೊರಗಡೆ ಬಂದ ಮೊದಲ ಹೆಂಗಸು ಮಗು ಯಾವುದೆಂದು ತಿಳಿಸಿ ಮತ್ತೆ ಒಳ ನಡೆಯುತ್ತಾಳೆ. … Read more