ಆತ್ಮಹತ್ಯೆ ಮಾಡಿಕೊಂಡವನ ಕೊನೆಯ ದಿನಗಳು: ಶ್ರೀಧರ ಬನವಾಸಿ

ಖ್ಯಾತ ಆಂಗ್ಲ ಕವಿ ಚಾರ್ಲ್ಸ್ ಬುಕ್ಕೋವ್ಸಿಕಿ ಅವರ ಅನುವಾದಿತ ಕವಿತೆ

ನಾನೀಗ ನನ್ನನ್ನೇ ಕಾಣುತ್ತಿದ್ದೇನೆ
ಆತ್ಮಹತ್ಯೆಯ ಎಲ್ಲ ದಿನಗಳೂ ರಾತ್ರಿಗಳೂ ಕಳೆದು, ಬರಡಾದ ವಿಶ್ರಾಂತಿ ಕೋಣೆಗಳೊಂದರಿಂದ ನನ್ನನ್ನು ಹೊರಗೆ ತಳ್ಳುತ್ತಾ (ನಾನು ಜನಪ್ರಿಯ, ಅದೃಷ್ಟವಂತನಾದರೆ, ಖಂಡಿತವಾಗಿ ಇದು ಸಾಧ್ಯವಾಗುವುದು)
ಒಬ್ಬ ಹೀನ ಹಾಗೂ ಬೇಸರ ಮುಖದ ನರ್ಸ್ನಿಂದ ಕರೆದೊಯ್ಯುತ್ತಿರುವಂತೆ ಅಲ್ಲಿದ್ದ ಗಾಲಿ ಖುರ್ಚಿಯಲ್ಲಿ ನಾನು ನೆಟ್ಟಗೆ ಕೂತಿದ್ದೇನೆ. ಬಹುತೇಕ ಕತ್ತಲು, ಕಣ್ಣುಗಳು ತಲೆಬುರುಡೆಯ ಒಳಗಿನ
ಕತ್ತಲ ಭಾಗದತ್ತ ಹಿಮ್ಮುಖವಾಗಿ ಚಲಿಸುತ್ತಾ
ಸಾವಿನ ದಯೆಗಾಗಿ
ಎದುರು ನೋಡುತ್ತಾ. “ಎಂಥಾ ಸುಂದರ ದಿನ ಅಲ್ಲವೇ, ಮಿಸ್ಟರ್ ಬುಕ್ಕೋವ್ಸಿಕಿ?” “ಓ… ಹೌದು, ಹೌದು” ಮಕ್ಕಳು ನನ್ನ ಪಕ್ಕದಲ್ಲೇ ನಡೆದು ಮರೆಯಾಗುತ್ತಾರೆ ನಾನು ಅಸ್ತಿತ್ವವೇ ಇಲ್ಲದಂತೆ. ಸುಂದರ ತೊಡೆಗಳು, ಕಣ್ಸೆಳೆಯುವ ನಿತಂಬಗಳನ್ನು ಹೊತ್ತ ಮಹಿಳೆಯರು ಹಾದು ಹೋಗುತ್ತಾರೆ. ತಮ್ಮನ್ನು ಪ್ರೀತಿಸಬೇಕೆಂಬ ಪ್ರಾರ್ಥನೆಯೊಂದಿಗೆ ಆದರೆ ನಾನು…
ಅಸ್ತಿತ್ವದಲ್ಲೇ ಇಲ್ಲ. “ಕಳೆದ ಮೂರು ದಿನಗಳಲ್ಲಿ ಕಂಡ ಮೊದಲ ಸೂರ್ಯ ಬೆಳಕು
ಮಿಸ್ಟರ್ ಬುಕ್ಕೋವ್ಸಿಕಿ” “ಓ… ಹೌದು, ಹೌದು…” ಅಲ್ಲಿದ್ದ ಗಾಲಿ ಖುರ್ಚಿಯಲ್ಲಿ ನಾನು ನೆಟ್ಟಗೆ ಕೂತಿದ್ದೇನೆ
ಈ ಕಾಗದಕ್ಕಿಂತಲೂ ಬಿಳಿಯಾಗಿ,
ರಕ್ತವಿಲ್ಲದೆ,
ಜೀವವಿಲ್ಲದೆ. ಪ್ರಜ್ಞೆ ಇಲ್ಲದಾಗಿದೆ. ಜೂಜಾಡುವುದು ಮರೆತು ಹೋಗಿದೆ.
ನಾನು ಬುಕ್ಕೋವ್ಸಿಕಿಯೇ –
ಕಣ್ಮರೆಯಾಗಿದ್ದಾನೆ.
“ಎಂಥಾ ಸುಂದರ ದಿನ ಅಲ್ಲವೇ, ಮಿಸ್ಟರ್ ಬುಕ್ಕೋವ್ಸಿಕಿ?” “ಓ… ಹೌದು, ಹೌದು…” ಪೈಜಾಮಾದಲ್ಲೇ ಮೂತ್ರ ಮಾಡುತ್ತಾ,
ಬಾಯಿಂದ ಜೊಲ್ಲು ಸುರಿಸುತ್ತಾ ಇಬ್ಬರು ಶಾಲಾ ಮಕ್ಕಳು ಓಡುತ್ತಿದ್ದಾರೆ. “ಹೇ, ಆ ಮುದುಕನನ್ನು ನೋಡಿದ್ದೀಯಾ?” “ಅಯ್ಯೋ ದೇವರೆ, ಹೌದು!
ನನಗೆ ಜ್ವರ ಬಂದಂತಾಯಿತು. ಎಷ್ಟೋ ಸಲ ಬೆದರಿಸಿದ್ದರೂ,
ನಾನು ಮಾಡಿಕೊಳ್ಳಬೇಕಿದ್ದ ಆತ್ಮಹತ್ಯೆಯನ್ನು ಇನ್ಯಾರೋ ಮಾಡಿಕೊಂಡಿದ್ದಾರೆ
ಕೊನೆಗೂ. ಗಾಲಿ ಖುರ್ಚಿಯಲ್ಲಿದ್ದ ನನ್ನನ್ನು ನರ್ಸ್ ನಿಲ್ಲಿಸಿ
ಹತ್ತಿರದ ಹೂದೋಟದಲ್ಲಿದ್ದ
ಒಂದು ಗುಲಾಬಿ ಹೂವನ್ನು ಕಿತ್ತು
ನನ್ನ ಕೈಯಲ್ಲಿ ಇಡುತ್ತಾಳೆ. ನನಗೀಗಲೂ ಅರ್ಥವಾಗುತ್ತಿಲ್ಲ ಅದೇನೆಂಬುದೆಂದು ಅದು ನನ್ನದೇ ಅಂಗವೇ ಇಲ್ಲವೇ ಬೇರೆ ಏನಾಗಿದ್ದರೂ
ಯಾವ ಉಪಯೋಗವೂ
ಇಲ್ಲ.

ಮೂಲ: ಚಾರ್ಲ್ಸ್ ಬುಕ್ಕೋವ್ಸಿಕಿ
ಅನುವಾದ: ಶ್ರೀಧರ ಬನವಾಸಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x