ಸಾಂಪ್ರದಾಯಿಕವಾಗಿ ಆಚರಿಸುವ ಪ್ರಾಣಿ ಸ್ಪರ್ಧೆಗಳು, ಪ್ರಾಣಿ ಹಿಂಸೆ ಹಾಗು ಪ್ರಾಣಿ ಕಲ್ಯಾಣದ ಅಗತ್ಯತೆ: ಡಾ. ಕಾವ್ಯ ವಿ.

ಜಲ್ಲಿಕಟ್ಟು
ಗುಮ್ಮೋಗೂಳಿಯ ಸ್ಪರ್ಧೆ ಹಾಗು ಬುಲ್ ಟೇಮಿಂಗ್ ಎಂದು ಕರೆಯಲ್ಪಡುವ ಜಲ್ಲಿಕಟ್ಟು, ಇದು ತೆಮಿಳುನಾಡಿನ ಸಾಂಪ್ರದಾಯಿಕ ಪೊಂಗಲ್ ಹಬ್ಬದ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಕಂಗಾಯಾಮ್ ತಳಿಯ ಗೂಳಿಯನ್ನು ಸ್ಪರ್ಧೆಯ ಗುಂಪಿನಲ್ಲಿ ಬಿಡಲಾಗುತ್ತದೆ ಹಾಗು ಓಡುವ ಗೂಳಿಯನ್ನು ನಿಲ್ಲಿಸಲು ಸ್ಪರ್ಧಾಳುಗಳು ಗೂಳಿಯ ಗೂನನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ ಗೂಳಿಯ ಕೊಂಬಿಗೆ ಕಟ್ಟಿದ ಬಾವುಟವನ್ನು ಹಿಡಿದು ಅಂತಿಮ ಗುರಿಯನ್ನು ತಲುಪಬೇಕಿರುತ್ತದೆ.

ಕಂಬಳ
ಇದು ದಕ್ಷಿಣ ಕರ್ನಾಟಕದ ತುಳುನಾಡಿನ ಒಂದು ಸಾಂಪ್ರದಾಯಿಕ ಆಟವಾಗಿದ್ದು, ಇದರಲ್ಲ್ಲಿ ದಷ್ಟ ಪುಷ್ಟವಾಗಿ ಸಾಕಿರುವ ಕೋಣಗಳನ್ನು ಕೆಸರು ಭತ್ತದ ಗದ್ದೆಯಲ್ಲಿ ಓಡಿಸುವ ಸ್ಪರ್ಧೆ. ಹಿಂದಿನ ಕಾಲದಲ್ಲಿ ಈ ಕ್ರೀಡೆಯು ಸ್ಪರ್ಧಾತ್ಮಕವಾಗಿ ಆಡುತಿರಲಿಲ್ಲ ಹಾಗು ಗೆದ್ದ ಕೋಣಗಳಿಗೆ ತೆಂಗು ಅಥವಾ ದಾನ್ಯವನ್ನು ಬಹುಮಾನವಾಗಿ ನೀಡುತ್ತಿದರು. ಆದರೆ ಇಂದಿನ ಸ್ಪರ್ಧೆಗಳಲ್ಲಿ ಜೋಡಿ ಕೋಣಗಳನ್ನು ಸ್ಪರ್ಧೆಗೆ ಬಿಟ್ಟು ಗೆದ್ದ ಕೋಣಗಳಿಗೆ ಬಹುಮಾನವನ್ನು ದುಡ್ಡಿನ ರೀತಿಯಲ್ಲಿ ಕೊಡಲಾಗುತ್ತಿದೆ.

ಕೋಳಿ ಕಾಳಗ
ಕೋಳಿ ಕಾಳಗ ಎಂದರೆ ಕಾಕ್ ಫೈಟ್. ಇದೊಂದು ಜಾನಪದ ಕ್ರೀಡೆಯಾಗಿದ್ದು ಕರ್ನಾಟಕದ ದಕ್ಷಿಣ ಕನ್ನಡ , ತಮಿಳುನಾಡು ಹಾಗು ಹಲವಾರು ಪ್ರದೇಶಗಳಲ್ಲಿ ಮನರಂಜನೆಯ ಕಾರ್ಯಕ್ರಮವಾಗಿದೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಮಾಲಿಕರು ತಮ್ಮ ಆಟದ ಹುಂಜಗಳನ್ನು ಗೇಮ್‌ಪಿಟ್ ನಲ್ಲಿ ನಿಲ್ಲಿಸಿ ಫೈಟಿಂಗ್‌ನ್ನು ಪ್ರಾರಂಬಿಸುತ್ತಾರೆ. ಆಟದಲ್ಲಿ ಅತೀ ತೀವ್ರವಾಗಿ ಗಾಯಗೊಂಡ ಹುಂಜವು ಸೋತರೆ, ಗೆದ್ದ ಹುಂಜ ಮತ್ತು ಮಾಲಿಕನಿಗೆ ಬಹುಮಾನವನ್ನು ನೀಡಲಾಗುತ್ತದೆ.

ಎತ್ತಿನ ಗಾಡಿ ರೇಸ್
ಭಾರತದ ವಿವಿಧ ರಾಜ್ಯಗಳಲ್ಲಿ, ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳ ಗ್ರಾಮೀಣ ಸಂಸ್ಕೃತಿಯಲ್ಲಿ ಬೇರೂರಿರುವ ಸಾಂಪ್ರಾದಾಯಿಕ ಕ್ರೀಡೆಯಾಗಿದೆ. ಈ ಸ್ಪರ್ಧೆಯಲ್ಲಿ ಜೋಡಿ ಎತ್ತುಗಳು ಮತ್ತು ಎತ್ತಿನ ಬಂಡಿಗಳನ್ನು ನಿಗದಿತ ದೂರದಲ್ಲಿಟ್ಟು ಓಟವನ್ನು ಆರಂಭಿಸುತ್ತಾರೆ. ಬಲಶಾಲಿ ಪ್ರಾಣಿಗಳು ಅಂತಿಮ ಗೆರೆಯತ್ತ ಸಾಗುತ್ತಿದ್ದಂತೆ ಸವಾರರು ಬಂಡಿಗಳನ್ನು ನಿಯಂತ್ರಿಸುವಲ್ಲಿ ಅವರ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಸವಾರರಿಗೆ ಈ ಓಟದಲ್ಲಿ ಗೆಲ್ಲುವುದು ಅಪಾರ ಹೆಮ್ಮಯ ಸಂಗತಿ. ಅದರ ಜೊತೆಗೆ ತಮ್ಮ ಎತ್ತುಗಳ ಮೌಲ್ಯ ಬೇಡಿಕೆಯು ಹೆಚ್ಚಿಸುತ್ತದೆವೆಂಬುವುದು ಇನ್ನೊಂದೆಡೆ.

ಇದು ಮನೋರಂಜನೆಗೆ ಆಡುವ ಆಟವಾದರೂ ಕೆಲವೂಮ್ಮೆ ಪ್ರಾಣಿಗಳ ಶೋಷಣೆಗೆ ವೇದಿಕೆಯಾಗಬಹುದು. ಪ್ರಾಣಿ ಹಿಂಸೆ ಜೊತೆಗೆ ಎತ್ತುಗಳು ಕಾಳಗದಲ್ಲಿ ಒಂದನೊಂದು ಚುಚ್ಚುವುದುರಿಂದ ಗಂಭೀರವಾಗಿ ಗಾಯಗೊಂಡು ಮರಣ ಹೊಂದಬಹುದು ಅಥವಾ ಸವಾರರಿಗು ಅಪಾಯವನ್ನು ಉಂಟುಮಾಡಬಹುದು. ಕ್ರೀಡೆಗಾಗಿ ತರಬೇತಿ ನೀಡುವ ಸಮಯದಲ್ಲಿಯೂ ಪ್ರಾಣಿಗಳಿಗೆ ಹೊಡೆಯುವುದು, ಚುಚ್ಚುವುದು, ಸರಿಯಾದ ಪಾಲನೆ ಪೋಷಣೆ ನೀಡದಿರುವುದು ಇವೆಲ್ಲವೂ ಪ್ರಾಣಿಗಳನ್ನು ಹಿಂಸೆಗೆ ಒಳಪಡಿಸುತ್ತವೆ.

ಇಂತಹ ಆಚರಣೆಗಳ ಜೊತೆಗೆ ಕೆಲವೂಮ್ಮೆ ಆನೆ, ಒಂಟೆ, ಕುದುರೆ, ಎತ್ತುಗಳನ್ನು ಸಾಂಪ್ರದಾಯಿಕ ಮೆರವಣಿಗೆಗಳಲ್ಲಿ ನೋಡುತ್ತೇವೆ. ಕೆಲವೊಮ್ಮೆ ಸವಾರಿಗೆ ತರಬೇತಿ ನೀಡುವ ಪ್ರಾಣಿಗಳಿಗೆ ಸುಡುವ ಬಿಸಿಲಿನಲ್ಲಿ ಸರಿಯಾದ ಆಹಾರವನ್ನು ಒದಗಿಸದೆ ತರಬೇತಿಯನ್ನು ನೀಡುವುದನ್ನು ನಾವು ನೋಡಬಹುದು. ಸವಾರಿ ಆನೆ, ಕುದುರೆ, ಒಂಟೆ ಗಳಲ್ಲಿ ಪಾದದ ಗಾಯಗಳನ್ನು ಲೆಕ್ಕಿಸದೆ ಅವುಗಳನ್ನು ಉಪಯೋಗಿಸುವುದು ತಪ್ಪಲ್ಲವೇ?

ಪ್ರಾಣಿಗಳನ್ನು ಕ್ರೀಡೆಗಳಲ್ಲಿ ಒಳಪಡಿಸುವಾಗ ಮಾನವನ ಹಿತಾಸಕ್ತಿ ಹಾಗು ಪ್ರಾಣಿ ಕಲ್ಯಾಣದ ಅಂಶಗಳಿಗೆ ಒತ್ತು ನೀಡಬೇಕಾಗುತ್ತದೆ. ಸಾಂಸ್ಕೃತಿಕ ಸಂಪ್ರದಾಯವಾಗಿ ಅಥವಾ ಮನರಂಜನಾ ಕಾರ್ಯಕ್ರಮವಾಗಿ ಆಚರಿಸಿದರೂ ಪ್ರಾಣಿಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ. ಏಕೆಂದರೆ ಕ್ರೀಡೆಗೆ ಒಳಪಡಿಸುವ ಪ್ರಾಣಿಗಳಲ್ಲಿ ಉಂಟಾಗುವ ಒತ್ತಡ ಮತ್ತು ಮಾನಸಿಕ ಹಿಂಸೆಯ ಬಗ್ಗೆಯೂ ವಾದಗಳಿವೆ. ಆಗಾಗಿ ಕೆಲವು ನಿಯಮಗಳನ್ನು ಜಾರಿಗೆ ತರುವ ಮೂಲಕ, ನೈತಿಕ ಪರಿಗಣನೆಯನ್ನು ಉತ್ತೇಜಿಸುವುದರಿಂದ ಹಾಗು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರಿಂದ ಪ್ರಾಣಿಗಳನ್ನು ಅನಗತ್ಯ ಹಿಂಸೆಗೆ ಒಳಪಡಿಸುವುದನ್ನು ನಿಯಂತ್ರಿಸಬಹುದು.

-ಡಾ. ಕಾವ್ಯ ವಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x