ಪ್ರಶ್ನೆಗಳು:
	೧.    ಇತ್ತೀಚಿಗೆ ಬಿಡುಗಡೆಯಾದ ಸಚಿನ್ ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ ಹೆಸರೇನು?
	೨.    ಇತ್ತೀಚಿಗೆ ಎಲ್.ಜಿ.ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ ಏಕೈಕ ಕ್ರಿಕೆಟ್ ಆಟಗಾರ ಯಾರು?
	೩.    ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ ೨೦೧೩ರ ಏಕಲವ್ಯ ಪ್ರಶಸ್ತಿಯನ್ನು ನೀಡಲಾಯಿತು?
	೪.    ಐಬಿಡಬ್ಲ್ಯೂಎಲ್ (IBWL) ನ ವಿಸ್ತೃತ ರೂಪವೇನು?
	೫.    ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು?
	೬.    ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?
	೭.    ಮೋಳಿಗೆ ಮಾರಯ್ಯ ಇದು ಯಾರ ಅಂಕಿತನಾಮವಾಗಿದೆ?
	೮.    ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು?
	೯.    ಹಿಂದೂ ಧರ್ಮದಲ್ಲಿ ನದೀತಮೇ ಎಂದು ಕರೆಯಲ್ಪಟುವ ನದಿ ಯಾವುದು?
	೧೦.    ಮಿಸ್ ಅಮೇರಿಕಾ ಕಿರೀಟ ಧರಿಸಿದ ಭಾರತೀಯ ಮೂಲದ ಮೊದಲ ಯುವತಿ ಯಾರು?
	೧೧.    ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
	೧೨.    ಗ್ರೀನ್ ವಿಚ್ ಮೀನ್ ಟೈಮ್ ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶ ಎಲ್ಲಿದೆ?
	೧೩.    ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್ ಯಾವುದು?
	೧೪.    ರಾಘವ ಇದು ಯಾರ ಕಾವ್ಯ ನಾಮವಾಗಿದೆ?
	೧೫.    ದೇಶಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
	೧೬.    ಜರ್ಮನಿಯ ಉಕ್ಕಿನ ಮನುಷ್ಯ ಎಂದು ಪ್ರಸಿದ್ದಿ ಪಡೆದಿದ್ದವರು ಯಾರು?
	೧೭.    ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ ಸಂಗ್ರಹಣೆಯಾಗುತ್ತದೆ?
	೧೮.    ಭಾರತೀಯ  ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ ಎಲ್ಲಿದೆ?
	೧೯.    ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು?
	೨೦.    ಮೈಲಾರ ಮಹದೇವಪ್ಪ ಗಾಂಧೀಜಿಯವರೊಂದಿಗೆ ಭಾಗವಹಿಸಿದ್ದ ಸತ್ಯಾಗ್ರಹ ಯಾವುದು?
	೨೧.    ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು?
	೨೨.    ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ ಯಾವುದು?
	೨೩.    ಬಾಬಾ ಅಮ್ಟೆ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದವರು?
	೨೪.    ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ?
	೨೫.    ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
	೨೬.    ಅರ್ಕಾಲಾಜಿಕಲ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
	೨೭.    ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ?
	೨೮.    ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಹಣಕಾಸಿನ ನೆರವು ನೀಡುವ ಮೂಲ ಯಾವುದು?
	೨೯.    ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದ ಮೊದಲ ಹೆಸರು ಯಾವುದು?
	೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
	ಈ ವಾರದ ಪ್ರಸಿದ್ಧ ದಿನಾಚರಣೆ 
	ನವೆಂಬರ್ – ೧೪ ಮಕ್ಕಳ ದಿನಾಚರಣೆ
	ಉತ್ತರಗಳು:
	೧.    ಪ್ಲೆಯಿಂಗ್ ಇಟ್ ಮೈ ವೇ
	೨.    ವಿರಾಟ್ ಕೊಯ್ಲಿ 
	೩.    ಹಾಕಿ
	೪.    ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್
	೫.    ಸರ್ದಾರ್ ವಲ್ಲಭಬಾಯಿ ಪಟೇಲ್
	೬.    ಹುಲಿ
	೭.    ನಿಃಕಳಂಕ ಮಲ್ಲಿಕಾರ್ಜುನ್
	೮.    ಡಿಸೆಂಬರ್ ೨೦೦೦
	೯.    ಸರಸ್ವತಿ ನದಿ 
	೧೦.    ನೀನಾ ದವುಲುರಿ
	೧೧.    ೧೯ನೇ ವಿಧಿ
	೧೨.    ಲಂಡನ್ ಬಳಿ 
	೧೩.    ವಿಟಮಿನ್ ಡಿ
	೧೪.    ಎಂ.ವಿ.ಸೀತಾರಾಮಯ್ಯ
	೧೫.    ಸಿ.ಆರ್.ದಾಸ್
	೧೬.    ಬಿಸ್ಮಾರ್ಕ್
	೧೭.    ಬಲಹೃತ್ಕರ್ಣ
	೧೮.    ಕಲ್ಲಿಕೋಟೆ (ಕೇರಳ)
	೧೯.    ಕಾಂಗರೂ
	೨೦.    ಉಪ್ಪಿನ ಸತ್ಯಾಗ್ರಹ
	೨೧.    ಇಟಲಿ
	೨೨.    ಎಚ್.ನರಸಿಂಹಯ್ಯ ವರದಿ
	೨೩.    ಸಮಾಜಸೇವೆ
	೨೪.    ಅಸ್ಸಾಂ
	೨೫.    ಕಾಶ್ಮೀರ
	೨೬.    ಆಂಧ್ರಪ್ರದೇಶ (ಹೈದರಾಬಾದ್)
	೨೭.    ಹೊಸಪೇಟೆ
	೨೮.    ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ
	೨೯.    ಬನಾರಸ್
	೩೦.    ಶಾಮ್ ಬೇನ್ಗಲ್
*****
					
