ಪ್ರಶ್ನೆಗಳು:
	೧.    ಕೇಂದ್ರ ಸಾಹಿತ್ಯ ಅಕಾದೆಮಿ ನೀಡುವ ಯುವ ಪುರಸ್ಕಾರ ಕನ್ನಡದಲ್ಲಿ ಮೊದಲಿಗೆ ಯಾರಿಗೆ ದೊರಕಿದೆ?
	೨.    ಕೋಲಂಬಸ್ ಪ್ರಪಂಚ ಯಾತ್ರೆಗೆ ಬಳಸಿದ ಹಡುಗಿನ ಹೆಸರೇನು?
	೩.    ಮನುಷ್ಯನು ಹೀರುವ ಆಮ್ಲಜನಕದಲ್ಲಿ ಮೆದುಳು ಬಳಸಿಕೊಳ್ಳುವ ಶೇಖಡವಾರು ಪ್ರಮಾಣವೆಷ್ಟು?
	೪.    ಹೊಗೆಸೊಪ್ಪನ್ನು ಭಾರತಕ್ಕೆ ಪರಿಚಯಿಸಿದ ದೇಶ ಯಾವುದು?
	೫.    ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಸೆಂಟರ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
	೬.    ಸಿಮಿಲಿಪಾಲ್ ಹುಲಿ ಅಭಯಾರಭಣ್ಯ ಯಾವ ರಾಜ್ಯದಲ್ಲಿದೆ?
	೭.    ರಂಗವಿಠಲ ಇದು ಯಾರ ಅಂಕಿತನಾಮವಾಗಿದೆ?
	೮.    ಕೈ ಗಡಿಯಾರದ ಸಂಶೋಧಕರು ಯಾರು?
	೯.    ಅಂತರಿಕ್ಷದಿಂದ ಬರುವ ರೆಡಿಯೋ ತರಗಂಗಳನ್ನು ಮೊದಲು ಕಂಡು ಹಿಡಿದವರು ಯಾರು?
	೧೦.    ಜಗತ್ತಿನ ಪ್ರಥಮ ರೈಲು ಆಸ್ಪತ್ರೆ ಲೈಫ್ ಲೈನ್ ಎಕ್ಸ್ಪ್ರೆಸ್ನ್ನು ಪ್ರಾರಂಭಿಸಿದ ರಾಷ್ಟ್ರ ಯಾವುದು?
	೧೧.    ಟಾಸ್ ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ?
	೧೨.    ವಿಜಯಘಾಟ್ ಇದು ಯಾರ ಸಮಾಧಿಯ ಸ್ಥಳವಾಗಿದೆ?
	೧೩.    ಮುದ್ದಣ್ಣ ಇದು ಯಾರ ಕಾವ್ಯನಾಮವಾಗಿದೆ?
	೧೪.    ಕರ್ನಾಟಕ ಗಾಂಧೀಯೆಂದೆ ಪ್ರಖ್ಯಾತರಾಗಿದ್ದ ಹರ್ಡೆಕರ್ ಮಂಜಪ್ಪನವರು ದಾವಣಗೆರೆಯಲ್ಲಿ ಪ್ರಕಟಿಸುತ್ತಿದ್ದ ಪತ್ರಿಕೆ ಯಾವುದು?
	೧೫.    ಗೋರೆ ಸಮಿತಿ ವರದಿಯು ಯಾವುದಕ್ಕೆ ಸಂಬಂಧಿಸಿದ್ದು?
	೧೬.    ಭಾರತವು ತನ್ನ ಪ್ರಥಮ ಭೂಗರ್ಭ ಅಣುಸ್ಟೋಟವನ್ನು ಎಲ್ಲಿ ನಡೆಸಿತು?
	೧೭.    ಬೋಧಗಯಾ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
	೧೮.    ರಕ್ತದ ನಾಲ್ಕು ಗುಂಪುಗಳನ್ನು ಕಂಡು ಹಿಡಿದವರು ಯಾರು?
	೧೯.    ಪೋಟಮಾಲಜಿ ಎನ್ನುವುದು ಯಾವುದರ ಬಗ್ಗೆ ಅಧ್ಯಯನವಾಗಿದೆ?
	೨೦.    ಹಾಟ್ ಮೇಲ್ ತಂತ್ರಜ್ಞಾನವನ್ನು ಸಂಶೋಧಿಸಿದವರು ಯಾರು?
	೨೧.    ಗ್ರಾಹಕರ ರಕ್ಷಣಾ ಕಾನೂನನ್ನು ಯಾವ ವರ್ಷ ರಚಿಸಲಾಯಿತು?
	೨೨.    ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ?
	೨೩.    ಶ್ರೀಮತಿ ಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ ಕರ್ನಾಟಕದಲ್ಲಿ ಎಲ್ಲಿದೆ?
	೨೪.    ಕ್ಷಯರೋಗ ಶ್ವಾಸಕೋಶಕ್ಕೆ ಸಂಬಂಧಿಸಿದ್ದು,  ಅದೇ ರೀತಿ ಅಸ್ತಮಾ ರೋಗ ಯಾವುದಕ್ಕೆ ಸಂಬಂಧಿಸಿದ್ದು?
	೨೫.    ಸಿಸಿಬಿ ಯ ವಿಸ್ರೃತ ರೂಪವೇನು?
	೨೬.    ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ?
	೨೭.    ಬಾಬರ್ ಚಕ್ರವರ್ತಿಯು ತನ್ನ ಆತ್ಮ ಕಥೆಯನ್ನು ಬರೆಯಲು ಉಪಯೋಗಿಸಿದ ಮೂಲ ಭಾಷೆ ಯಾವುದು?
	೨೮.    ಸಾನಿಯಾ ಮಿರ್ಜಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
	೨೯.    ಹಿಂದುಗಳ ಪ್ರಸಿದ್ಧ ಯಾತ್ರ ಸ್ಥಳ ಬದರಿನಾಥ ಯಾವ ರಾಜ್ಯದಲ್ಲಿದೆ?
	೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
	
	ಈ ವಾರದ ಪ್ರಸಿದ್ಧ ದಿನಾಚರಣೆ 
	ಅಕ್ಟೋಬರ್ – ೨೪ ವಿಶ್ವ ಸಂಸ್ಥೆ ದಿನ
	ಉತ್ತರಗಳು:
	೧.    ವೀರಣ್ಣ ಮಡಿವಾಳರ
	೨.    ಸಾಂಟಾ ಮರಿಯಾ
	೩.    ೨೦%
	೪.    ಅರ್ಜೈಂಟಿನಾ
	೫.    ಕೋಲ್ಕತ್ತಾ
	೬.    ಒರಿಸ್ಸಾ
	೭.    ಶ್ರೀ ಪಾದರಾಜರು
	೮.    ಬೌರ್ಥ್ ಲೋಮಿಯಮನ್ಫೆಡ್ರಿ (ಇಟಲಿ)
	೯.    ಕಾರ್ಲ್ ಜಿ ಜಾನ್ಸ್ಕಿ
	೧೦.    ಭಾರತ
	೧೧.    ರಷ್ಯಾ
	೧೨.    ಲಾಲ್ ಬಹುದ್ದೂರ್ ಶಾಸ್ತ್ರಿ
	೧೩.    ನಂದಳಿಕೆ ಲಕ್ಷ್ಮೀನಾರಾಯಣಪ್ಪ
	೧೪.    ಧನುರ್ದ್ಧಾರಿ
	೧೫.    ಪೋಲಿಸ್ ತರಬೇತಿ
	೧೬.    ಪೋಕ್ರಾನ್ (ರಾಜಸ್ಥಾನ)
	೧೭.    ಬಿಹಾರ
	೧೮.    ಕಾರ್ಲ್ಸ್ಟೀನರ್
	೧೯.    ನದಿಗಳ ಬಗೆಗಿನ ಅಧ್ಯಯನ 
	೨೦.    ಸಮ್ಮೀರ್ ಬಾಟಿಯಾ
	೨೧.    ೧೯೮೬
	೨೨.    ಬಾದಾಮಿ (ಬಾಗಲಕೋಟೆ ಜಿಲ್ಲೆ)
	೨೩.    ಮಂಗಳೂರು
	೨೪.    ಶ್ವಾಸನಾಳ
	೨೫.    ಸಿಟಿ ಕ್ರೈಂ ಬ್ರ್ಯಾಂಚ್
	೨೬.    ೧೯೭೪
	೨೭.    ಪರ್ಷಿಯನ್
	೨೮.    ಓಪನ್ ಟೆನ್ನಿಸ್ 
	೨೯.    ಉತ್ತರಾಖಂಡ
	೩೦.    ರೇಣುಕಮ್ಮ ಮುರಗೋಡ್ (ವೃತ್ತಿ ರಂಗಭೂಮಿ ಕಲಾವಿದರು)
*****
					

ನಮಸ್ತೆ,
ನಿಮ್ಮ ಸಾಮಾನ್ಯ ಜ್ಞಾನದ ಸಂಚಿಕೆಗಳು ನನಗೆ ತುಂಬಾ ಇಷ್ಟ ವಾದವು, ಇತ್ತೀಚೆಗಷ್ಟೆ ನನ್ನ ಗೆಳೆಯನ ಸಹಾಯದಿಂದ ಈ ವೆಬ್ ಸೈಟ್ ಬಗ್ಗೆ ತಿಳಿದುಕೊಂಡೆ, ತುಂಬಾ ಸಂತೋಷವಾಯಿತು,
ನಿಮ್ಮ ಸಾಮಾನ್ಯ ಜ್ಞಾನದ
50ನೇ ಸಂಚಿಕೆಯಲ್ಲಿ ಪ್ರಶ್ನೆ ಸಂಖ್ಯೆ೨೬. ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ?
ಉತ್ತರ : ೧೯೭೪ ಎಂಬಂತಿದೆ. ದಯವಿಟ್ಟು ತಪ್ಪು ಮಾಹಿತಿ ಪ್ರಕಟಿಸಬೇಡಿ.
ವಂದನೆಗಳು..
ಪ್ರಶ್ನೆ ನಂ: 26 ಸರಿ ಉತ್ತರ: ಬಾದಾಮಿ (ಬಾಗಲಕೋಟೆ ಜಿಲ್ಲೆ)
ತಪ್ಪು ತಿಳಿಸಿದಕ್ಕೆ ಧನ್ಯವಾದಗಳು