ಪ್ರಶ್ನೆಗಳು:
	೧.    ಅರವಿಂದ ಕೇಜ್ರಿವಾಲ್ ರವರು ಇತ್ತೀಚೆಗೆ ದೆಹಲಿಯ ಎಷ್ಟನೇಯ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು?
	೨.    ಪಿ.ಡಬ್ಲೂ.ಡಿ (PWD) ನ ವಿಸ್ತೃತ ರೂಪವೇನು?
	೩.    ಕಾಂಡ್ಲಾ ಬಂದರು ಯಾವ ರಾಜ್ಯದಲ್ಲಿದೆ?
	೪.    ರಾಜೀವ ಇದು ಯಾರ ಕಾವ್ಯ ನಾಮವಾಗಿದೆ?
	೫.    ಪಂಚಕರ್ಮ ಚೈತನ್ಯ ವಿಧ್ಯೆಯು ಯಾವುದಕ್ಕೆ ಸಂಬಂಧಿಸಿದೆ?
	೬.    ವಿಶ್ವದಲ್ಲಿ ಪ್ರಕಟವಾದ ಮೊದಲನೆ ವಿಜ್ಞಾನ ಪುಸ್ತಕ ಯಾವುದು?
	೭.    ಸೌರವ್ಯೂಹದಲ್ಲಿ ಗುರುತ್ವಾಕರ್ಷಣ ಶಕ್ತಿ ಹೊಂದಿರುವ ಏಕೈಕ ಗ್ರಹ ಯಾವುದು?
	೮.    ಪ್ರಸಿದ್ಧ ಯಾತ್ರಾಸ್ಥಳ ಮಧುರೈ ಯಾವ ನದಿಯ ದಂಡೆಯ ಮೇಲಿದೆ?
	೯.    ಹಿಂದೆ ಬದುಕಿದ್ದು ಅಳಿದು ಹೋದ ಜೀವಿಗಳ ಅಧ್ಯಯನಕ್ಕೆ ಕನ್ನಡದಲ್ಲಿ ಏನೆನ್ನುತ್ತಾರೆ?
	೧೦.    ನೂರು ಅಪರಾಧಿಗಳು ಜೈಲಿನಿಂದ ಪರಾರಿ ಆದರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆ ಆಗ ಕೂಡದು ಎಂದವರು ಯಾರು?
	೧೧.    ಹಿಂದಿ ರಾಷ್ಟ್ರೀಯ ಭಾಷೆಯಾಗಿ ಜಾರಿಗೆ ಬಂದ ವರ್ಷ ಯಾವುದು?
	೧೨.    ಆನೆ ಕಾಲಿನ ರೋಗಕ್ಕೆ ಕಾರಣವಾಗುವ ಹುಳುವು ಯಾವುದು?
	೧೩.    ಗ್ರಾಫೈಟ್ ಎಂಬ ಪದವು ಗ್ರೀಕ್ ಭಾಷೆಯ ಯಾವ ಪದದಿಂದ ಬಂದಿದೆ?
	೧೪.    ಪಾವರ್ಟಿ ಆಂಡ್ ಆನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ ಬರೆದವರು ಯಾರು?
	೧೫.    ಪಂಜಾಬಿನ ಧರೀವಾಲ್ ನಗರವು ಯಾವ ವಸ್ತುವಿನ ತಯಾರಿಕೆಗೆ ಹೆಸರಾಗಿದೆ?
	೧೬.    ಕಪ್ಪು ಬೆಕ್ಕು ಯಾವ ದೇಶದ ಅದೃಷ್ಟ ಪ್ರಾಣಿಯಾಗಿದೆ?
	೧೭.    ಸಂಗ್ರಹ ವಿದ್ಯುತ್ ಕೋಶಗಳಲ್ಲಿ ಬಳಸುವ ಲೋಹ ಯಾವುದು?
	೧೮.    ಕೊಚುಪುಡಿ ನೃತ್ಯ ಮೂಲತಃ ಯಾವ ರಾಜ್ಯದ್ದಾಗಿದೆ?
	೧೯.    ನಾಯಿ ಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?
	೨೦.    ಸಲ್ಲೇಖನ ವೃತ ಯಾವ ಧರ್ಮದವರಿಗೆ ಸಂಬಂಧಿಸಿದೆ?
	೨೧.    ಚೋಳಿಯಾ ಇದು ಯಾವ ರಾಜ್ಯದ ಸಮರ ನೃತ್ಯ ಕಲೆಯಾಗಿದೆ?
	೨೨.    ವರಾಹಿ ನದಿಯ ಉಗಮ ಸ್ಥಳ ಯಾವುದು?
	೨೩.    ಮಹಾಲಿಂಗ ಗಜೇಶ್ವರ ಇದು ಯಾರ ಅಂಕಿತನಾಮವಾಗಿದೆ?
	೨೪.    ವಿಶ್ವ ವ್ಯಾಪಾರ ಸಂಘಟನೆ ಸ್ಥಾಪನೆಯಾದ ವರ್ಷ ಯಾವುದು?
	೨೫.    ಬ್ಯಾರೋಮೀಟರ್ ಕಂಡು ಹಿಡಿದವರು ಯಾರು?
	೨೬.    ಅತಿ ಹೆಚ್ಚು ಬಾವಿ ನೀರಾವರಿ ಹೊಂದಿರುವ ಜಿಲ್ಲೆ ಯಾವುದು?
	೨೭.    ದಂತರಕ್ಷಣೆಗೆ ನೀರಿನಲ್ಲಿರಬೇಕಾದ ಅಂಶ ಯಾವುದು?
	೨೮.    ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಯಾವ ಭಾಷೆಗೆ ನೀಡಲಾಯಿತು?
	೨೯.    ಇತ್ತೀಚೆಗೆ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದ ಭಾರತೀಯ ಆಟಗಾರ ಯಾರು?
	೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
	ಈ ವಾರದ ಪ್ರಸಿದ್ಧ ದಿನಾಚರಣೆಗಳು
	ಫೆಬ್ರವರಿ – ೨೪ ಕೇಂದ್ರೀಯ ಸುಂಕ ದಿನ
	ಫೆಬ್ರವರಿ – ೨೮ ರಾಷ್ಟ್ರೀಯ ವಿಜ್ಞಾನ ದಿನ
	
	ಉತ್ತರಗಳು: 
	೧.    ೮ನೇಯ
	೨.    ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ 
	೩.    ಗುಜರಾತ್
	೪.    ವ್ಯಾಸರಾಯ ಬಲ್ಲಾಳ
	೫.    ಆರ್ಯುವೇದ 
	೬.    ಸೀನಿಯ ನ್ಯಾಚುರಲ್ ಹಿಸ್ಟರಿ
	೭.    ಭೂಮಿ
	೮.    ವೈಗೈ
	೯.    ಪಳಿಯುಳಿಕೆ ಶಾಸ್ತ್ರ
	೧೦.    ನೆಲ್ಸನ್ ಮಂಡೇಲಾ
	೧೧.    ೧೯೬೭
	೧೨.    ಸೈಲೇರಿಯ ಹುಳು
	೧೩.    ಗ್ರಾಫೀನ್
	೧೪.    ದಾದಾಬಾಯಿ ನವರೋಜಿ
	೧೫.    ಉಣ್ಣೆ ವಸ್ತುಗಳು
	೧೬.    ಇಂಗ್ಲೆಂಡ್
	೧೭.    ಸೀಸ
	೧೮.    ಆಂಧ್ರಪ್ರದೇಶ
	೧೯.    ಬೋರ್ಡೆಲ್ಲ
	೨೦.    ಜೈನ್
	೨೧.    ಉತ್ತರಾಂಚಲ
	೨೨.    ಆಗುಂಬೆ ಸಮೀಪದ ಹೆಬ್ಬಾಗಿಲು ಎಂಬಲ್ಲಿ
	೨೩.    ಗಜೇಶ ಮಸಣಯ್ಯ
	೨೪.    ೧೯೯೫
	೨೫.    ಟಾರಿಸೆಲ್ಲಿ
	೨೬.    ಬೆಳಗಾವಿ
	೨೭.    ಪ್ಲೋರೈಡ್
	೨೮.    ಮಲೆಯಾಳಂ
	೨೯.    ವಿರಾಟ್ ಕೊಯ್ಲಿ
	೩೦.    ಐ.ಕೆ.ಗುಜರಾಲ್ 
****
					
