ಪಂಜು-ವಿಶೇಷ

ರವಿ ಬೆಳಗೆರೆಯವರ ನೆನಪಿನ ವಿಶೇಷ ಸಂಚಿಕೆಗಾಗಿ ಲೇಖನಗಳ ಆಹ್ವಾನ

ಸಹೃದಯಿಗಳೇ,

ಮಾರ್ಚ್ 15 ಖ್ಯಾತ ಬರಹಗಾರರಾದ ರವಿ ಬೆಳಗೆರೆಯವರು ಹುಟ್ಟಿದ ದಿನ. ಆ ದಿನ ಅವರ ನೆನಪಿನ ವಿಶೇಷ ಸಂಚಿಕೆಯನ್ನು ಪಂಜು ತರಲು ಬಯಸುತ್ತದೆ. ಅವರ ಕುರಿತ ಅವರ ಪುಸ್ತಕಗಳ ಕುರಿತ ನಿಮ್ಮ ಲೇಖನಗಳನ್ನು ಮಾರ್ಚ್ 14, 2021 ರ ಒಳಗೆ ನಮಗೆ ಕಳುಹಿಸಿ.

ನಿಯಮಗಳು:

  1. ಲೇಖನಗಳು ನಿಮ್ಮ ಸ್ವಂತ ಬರಹವಾಗಿರಬೇಕು
  2. ಕನಿಷ್ಟ 500 ಪದಗಳ ಬರಹವಾಗಿರಬೇಕು
  3. ಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು.
  4. ಬರಹಗಳು ಯೂನಿಕೋಡ್ ನಲ್ಲಿದ್ದರೆ ಒಳ್ಳೆಯದು.
  5. ಪಿಡಿಎಫ್ ನಲ್ಲಿರುವ ಬರಹಗಳನ್ನು ಕಳುಹಿಸಬೇಡಿ.
  6. ವಿವಾದ ಸೃಷ್ಟಿ ಮಾಡುವಂತಹ ಬರಹಗಳನ್ನು ಕಳುಹಿಸಬೇಡಿ.

ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com

ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ರವಿ ಬೆಳಗೆರೆ ನೆನಪು 2021” ಎಂದು ತಿಳಿಸಲು ಮರೆಯದಿರಿ.

ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ
ಪಂಜು ಬಳಗ
https://panjumagazine.com/


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *