ಪಂಜು ಅಂತರ್ಜಾಲ ವಾರಪತ್ರಿಕೆ (https://www.panjumagazine.com/) ಮತ್ತು ಪಂಜು ಪ್ರಕಾಶನದ ವತಿಯಿಂದ ಪಂಜು ಪ್ರವಾಸ ಕಥನ ಸ್ಪರ್ಧೆಗೆ ನಿಮ್ಮ ಪ್ರವಾಸ ಕಥನಗಳನ್ನು ಆಹ್ವಾನಿಸಲಾಗಿದೆ.
ಲೇಖನಗಳು ಸ್ವಂತ ರಚನೆಗಳಾಗಿರಬೇಕು.
ಒಬ್ಬರು ಒಂದಕ್ಕಿಂತ ಹೆಚ್ಚು ಲೇಖನಗಳನ್ನು ಕಳುಹಿಸಬಹುದು (ಗರಿಷ್ಠ ಮಿತಿ 3 ಲೇಖನಗಳು).
ಪ್ರತಿ ಲೇಖನಗಳು ಕನಿಷ್ಠ 3000 ಪದಗಳಿಂದ ಕೂಡಿರಬೇಕು (ಗರಿಷ್ಠ ಮಿತಿ 5 ಸಾವಿರ ಪದಗಳು).
ಲೇಖನಗಳಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರವಾಸಗಳ ವೈವಿಧ್ಯತೆ ಇರಲಿ.
ಸಾಧ್ಯವಾದರೆ ಲೇಖನಗಳ ಜೊತೆಗೆ ಲೇಖನಕ್ಕೆ ಹೊಂದುವ ನೀವೇ ತೆಗೆದಿರುವ ಫೋಟೋಗಳನ್ನು ಸಹ ಕಳುಹಿಸಿಕೊಡಿ.
ಲೇಖನಗಳನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com
ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರವಾಸ ಕಥನ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ.
ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ..
ಲೇಖನಗಳು ತಲುಪಬೇಕಾದ ಕೊನೆಯ ದಿನಾಂಕ: 30.11.2013
ಮೊದಲ ಬಹುಮಾನ: 3000 ರೂಪಾಯಿ
ಎರಡನೇ ಬಹುಮಾನ: 2000 ರೂಪಾಯಿ
ಮೂರನೇ ಬಹುಮಾನ: 1000 ರೂಪಾಯಿ
ಸ್ಪರ್ಧೆಗೆ ಬಂದ ಲೇಖನಗಳಲ್ಲಿ ಆಯ್ದ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಆಶಯವನ್ನು ಪಂಜು ಪ್ರಕಾಶನ ಹೊಂದಿರುವ ಕಾರಣ ಈಗಾಗಲೇ ಪುಸ್ತಕ ರೂಪದಲ್ಲಿ, ಪತ್ರಿಕೆಗಳಲ್ಲಿ, ಬ್ಲಾಗ್ ನಲ್ಲಿ, ಎಫ್ ಬಿ ಯಲ್ಲಿ ಪ್ರಕಟವಾಗಿರುವ ಲೇಖನಗಳನ್ನು ಕಳುಹಿಸಬೇಡಿ. ಹಾಗೆಯೇ ಬಹುಮಾನ ಪಡೆದ ಲೇಖನಗಳನ್ನು ಪುಸ್ತಕ ರೂಪದಲ್ಲಿ ಅಥವಾ ಪಂಜು ಅಂತರ್ಜಾಲ ವಾರ ಪತ್ರಿಕೆಯಲ್ಲಿ ಪ್ರಕಟಿಸುವ ಹಕ್ಕು ಪಂಜು ಪ್ರಕಾಶನಕ್ಕೆ ಸೇರುತ್ತದೆ.