ಹಿಂಗೇ ಮೊನ್ನೆ ಮಾಡಕ್ ಕ್ಯಾಮೆ ಇಲ್ದೆ ಭಟ್ರಂಗಡಿ ಕಟ್ಟೆ ಮೇಲ್ ಕುಂತ್ಕಂಡ್ ಓತ್ಲಾ ವಡೀತಿದ್ದೆ, ನನ್ನಂಗೆ ಮಾಡಕ್ ಕ್ಯಾಮೆ ಇಲ್ದಿರೋ ಐಕ್ಳೆಲ್ಲಾ, ಅಣ್ ತಮ್ಮಂದ್ರೆಲ್ಲಾ ನನ್ ಜೊತೆ ಸೇರ್ಕಂಡಿದ್ರು, ಅದೂ, ಇದೂ, ಆಳೂ, ಮೂಳೂ, ಮಣ್ಣೂ, ಮಸಿ, ಹಿಂಗೇ ಮಾತಾಡ್ಕಂಡ್ ಕುಂತಿದ್ವಿ, ಅಸ್ಟೊತ್ತಿಗೆ ಮೂಲೆ ಮನೆ ಆಂಟಿ ಕೊತ್ಮೆರಿ ಸಪ್ ತಗಳಕ್ಕೆ ಭಟ್ರಂಗ್ಡಿಗೆ ಬಂದ್ರು, ಅವ್ರ್ ಬಂದ್ ತಗಂಡ್ ವೋಗಿದ್ರಲ್ ಏನೂ ಇಸೇಸ ಇರ್ಲಿಲ್ಲಾ ಆದ್ರೆ ಅವ್ರು ನೈಟೀ ಹಾಕಂಡ್ ಬಂದಿದ್ರು ಅನ್ನದೇ ಇಸ್ಯಾ.
ನಾನೂ ನಮ್ ಐಕ್ಲೆಲ್ಲಾ ಬೇರೆ ವಿಸ್ಯ ಬಿಟ್ ನೈಟಿ ವಿಸ್ಯಾ ಮಾತಾಡಕ್ ಶುರು ಹಂಚ್ಕಂಡ್ವಿ, ಈ ನನ್ಮಗಂದ್ ನೈಟಿ ಎಲ್ಲಿಂದ ಬಂತೋ ಗೊತ್ತಿಲ್ಲಾ ಕಣ್ಲಾ ಎಲ್ಲಾ ಹೆಣ್ ಮಕ್ಲೂ ಹಾಕಂಡ್ ರಸ್ತೇಲಿ ಓಡಾಡಕ್ ಶುರು ಮಾಡ್ಬಿಟ್ಟವೆ ಅಂತ ಮಾತಿಗೆ ಶುರು ಹಚ್ದೆ, ಹೌದ್ ಕಣ್ಲಾ ಮಗಾ ರಾತ್ರೆ ಒತ್ನಲ್ಲಿ ಮನೇಲಿ ಮಲಿಕಳವಾಗ್ ಹಾಕಳೋ ನೈಟಿನ ಬೆಳಗ್ಗವೊತ್ತು ರಸ್ತೇನಾಗ್ ಹಾಕಂಡ್ ಓಡಾಡದ್ ನೋಡಕ್ಕಾಗಕಿಲ್ಲ ಅಂತ ಮಾತಿಗ್ ಮಾತ್ ಜೋಡ್ಸುದ್ರು ನಮ್ ಐಕ್ಲು.
'ನೈಂಟಿ' ಅಂದ್ರೆ ಗಂಡ್ ಮಕ್ಲಿಗೆ ಯಂಗ್ ಶಾನೆ ಇಷ್ಟಾನೋ ಹಂಗೆ ಹೆಣ್ ಮಕ್ಲಿಗೆ 'ನೈಟಿ' ಅಂತಂದ್ರೆ ಬಲೇ ಇಷ್ಟ ಯಾಕಂದ್ರೆ ಅದನ್ನ ಹೊಲಿಯೋಕೆ ಬಲೇ ಈಜಿ ಅಳತೆ ಇಲ್ಲಾ ಅಂದ್ರೂ ಪರ್ವಾಗಿಲ್ಲಾ, ಸೀರೆ ಉಡದ್ ಕಲ್ಯೋ ತರ ಕಷ್ಟ ಪಡೋಹಂಗೇ ಇಲ್ಲಾ ಭಾಳಾ ಸಲೀಸಾಗಿ ಹಾಕೋಬೋದು (ನೈಟೀನಾ ದೇಹಕ್ಕೆ ಏರಿಸೋದೋ ಅಥ್ವಾ ಇಳಿಸೋದೋ ಇಲ್ಲೀವರ್ಗೆ ಯಾವ್ ಬುದ್ವಂತ್ರುಗೂ ಗೊತ್ತಾಗಿಲ್ಲಾ), ಚೂಡೀದಾರ, ಮಿಡ್ಡಿ, ಲಂಗ ದಾವಣಿ, ಇವನ್ನೆಲ್ಲಾ ಹಿಂದೆ ಹಾಕಿ ಅಷ್ಟೋದ್ ಫೇಮಸ್ ಆಗಿರೋದೇ ಇದಕ್ಕೆ ಉದಾಹರಣೆ, ಹಾಯಾಗಿ ಫ್ರೀಯಾಗಿ ಇರತ್ತೆ ಹೆಣ್ ಮಕ್ಲು ಉಪ್ಯೋಗ್ಸೋ ಎಲ್ಲಾ ಬಟ್ಟೆಗೆ ಕಂಪೇರ್ ಮಾಡುದ್ರೆ ನೈಟಿ ಬೆಲೆ ತುಂಬಾ ಕಡ್ಮೆ ಐತೆ, ಯಾವ್ ವೈಸ್ ಇದ್ರೂ ಪರ್ವಾಗಿಲ್ಲಾ, ಸಣ್ ಹುಡ್ಗೀರಿಂದ ಹಿಡಿದು ವಯಸ್ಸಾಗಿರೋ ಆಂಟಿಗಳ ವರ್ಗೂ ಯಾರ್ ಬೇಕಾದ್ರೂ ಹಾಕೋಬೋದು, ಯಾರೂ ಅದ್ರು ಬಗ್ಗೆ ತಲೆ ಕೆಡುಸ್ಕಳಕಿಲ್ಲಾ ಬ್ರಿಟೀಸೋರು ನಮ್ ದೇಶಕ್ ಬಂದಾಗ ಅವ್ರ್ ಜೊತೆ ಬಂದಿದ್ ಹೆಣ್ ಮಕ್ಲು ಈ ನೈಟಿನ ಹಾಕೊತಿದ್ರಂತೆ ಕಾಲ ಬದ್ಲಾದಂಗೆ ನಂ ಜನಾನೂ ಬದ್ಲಾದಂಗೆ ಈ ನೈಟಿನ ನಮ್ ಎಲ್ಲಾ ಹೆಣ್ ಮಕ್ಲೂ ಮೆಚ್ಚಿಕೊಂಡು ಹಚ್ಚಿಕೊಂಡು ಈಗ ಬಿಟ್ ಇರೋಕಾಗಲ್ಲ ಅನ್ನೋವಷ್ಟ್ ಅಡಿಟ್ ಆಗ್ಬುಟವ್ರೆ, ಕೆಲ್ವು ಹೆಣ್ಮಕ್ಳು ನೈಟೀಲೂ ಚೆಂದಾ ಕಾಣ್ತಾರೆ, ಕೆಲುವ್ರು ಗೋಣೀಚೀಲ ತಗಲಾಕಿರೋ ಬೆದರು ಗೊಂಬೆ ತರ ಕಾಣ್ತಾರೆ, ರಾತ್ರೆ ಕತ್ಲಲ್ಲಿ ಹೆಂಡ್ತೀನ ನೈಟಿಲಿ ನೋಡಿ ಹೆದ್ರುಕಂಡಿರೋ ಗಂಡ್ ಮಕ್ಳಿಗೂ ಕೊರತೆ ಇಲ್ಲಾ
ಆದ್ರೆ ಈ ನೈಟಿನ ಮನೇಲ್ ಮಾತ್ರ ಹಾಕಬೇಕು ರಸ್ತೆಲಿ ಹಾಕಂಬಾರ್ದು ಅಂತ ಎಷ್ಟೋದ್ ಜನ ಹಿರೀಕ್ರು ಹೇಳ್ತಾರೆ ಆದ್ರೆ ಈಗಿನ್ ಕಾಲದ್ ಹೆಣ್ಮಕ್ಳು ಕೇಳ್ಬೇಕಲ್ಲಾ ಅಂತಿದ್ದಂಗೆ ನಮ್ ಹಳ್ಳಿ ಬಿಟ್ಟು ಪ್ಯಾಟೆಗ್ ಹೋಗಿದ್ ನಮ್ ಫ್ಲಾಪಿ ಬಾಯ್ ಅಲ್ಲಿಗ್ ಬಂದ ಸರಿ ಅವ್ನ ಈ ಬಗ್ಗೆ ಕೇಳಿದ್ದಕ್ಕೆ ಅವ್ನ್ ಹೇಳ್ದ, ಲೇ ಸುಮ್ಕಿರಲೇ ನಮ್ ಹಳಿನಾಗ್ ಪರ್ವಾಗಿಲ್ಲಾ ಸಿಟೀಲಂತೂ ಹೆಣ್ಮಕ್ಳು ಬೇರೆ ಬಟ್ಟೆಗೂ ನೈಟೀಗೂ ವ್ಯತ್ಯಾಸಾನೇ ಇಲ್ದಂಗೆ ತಿಳ್ಕಂಬಿಟ್ಟವ್ರೆ ನೈಟೀನ ಮನೆ ಒಳಗೆ ಹಾಕಳ್ರಮ್ಮಿ ಅಂದ್ರೆ ಅದನ್ನೇ ಹಾಕಂಡ್ ಪಾಕರ್್ಗೆ ವಾಕಿಂಗ್ ಓಯ್ತಾರೆ, ಅಂಗ್ಡಿಗೋಯ್ತಾರೆ, ಸಾಲದ್ದು ಅಂತ ದೇವಸ್ಥಾನಕ್ಕೂ ಬರ್ತಾರೆ, ಅದನ್ನ ನೋಡಕ್ಕಾಗದೆ ಇತ್ತಿಚೆಗೆ ಬೆಂಗ್ಲೂರಿನ್ ಕೆಲ್ವು ದೇವ್ಸ್ಥಾನ್ದಾಗೆ ಹೆಂಗಸರಿಗೆ ನೈಟಿಯೊಂದಿಗೆ ಒಳಗೆ ಪ್ರವೇಶವಿಲ್ಲ ಅಂತ ಬೋರ್ಡ್ ಹಾಕ್ಬಿಟವ್ರೆ ಅಂತ ಅಂದ. ಇಷ್ಟ್ ಸಾಲ್ದು ಅಂತಾ ಇನ್ನೂ ಕೆಲವ್ರು ರಸ್ತೆಲಿ ನೈಟಿ ಹಾಕಂಬಾರ್ದು ಅಂತಾ ಗೊತ್ತಿರೋರು ನೈಟಿ ಮೇಲೊಂಡು ಟವಲ್ನೋ ಇಲ್ಲಾ ಚೂಡೀದಾರದ ವೇಲ್ನೋ ಹಾಕಂಡ್ ರಸ್ತೆಗ್ ಬರ್ತಾರೆ, ಅವ್ರ್ನ ಏನ್ ಬುದಿವಂತ್ರು ಅನ್ಬೇಕೋ ಅಥ್ವಾ ದಡ್ರು ಅನ್ಬೇಕಾ ಅಂತಾ ಗೊತ್ತಾಗ್ತಿಲ್ಲಾ ಅಂತ ಕಿಸುಕ್ ಅಂದಾ.
ಲೋ ಫ್ಲಾಪಿ ನಮ್ ಊರಿನ್ ಹೆಣ್ಮಕ್ಳೇನು ಕಡ್ಮೆ ಇಲ್ಲಾ ಕಣ್ಳಾ ಅವ್ರೂ ನೈಟೀ ಹಾಕಂಡ್ ನೀರಿಗೋಯ್ತಾರೆ, ಅಂಗ್ಡಿಗೋಯ್ತಾರೆ ಅಷ್ಟೇ ಯಾಕೆ ಗಂಡಾ ಮನೇಗ್ ಬರದ್ ಲೇಟ್ ಆದ್ರೆ ಅದೇ ನೈಟೀಲೇ ಸಾರಾಯ್ ಅಂಗ್ಡಿ ಅತ್ರಕ್ ಹೋಗಿ ಗಂಡನ್ ಜುಟ್ ಹಿಡ್ದು ಎಳ್ಕಂಡ್ ಓಯ್ತಾರೆ ನಮ್ಮೂರೂ ಕೂಡಾ ಮುಂದುವರೆದೈತೆ ಕಣ್ಳಾ ಅಂತಾ ಅಂದೇ, ಅಷ್ಟೇ ಯಾಕ್ಲಾ ಇನ್ನೂ ಇಸ್ಯಾ ಐತೇ ಹೇಳ್ತೀನಿ ತಡಿ ಅಂತ ಫ್ಲಾಪಿ ಬೀಡಿ ಹಚ್ಕಂಡ್ ಬರಕ್ ಹೋದ, ಇನ್ನು ಇವ್ನ್ ಹತ್ರ ತಗ್ಕಾಕಂಡ್ರೆ ಮಾತ್ ಕೊಡಕ್ಕಾಗಕ್ಕಿಲ್ಲ ಮಾತಾಡ್ತಾ ಕುಂತ್ಕಂಡ್ ಲೇಟ್ ಆದ್ರೆ ಮನೇಲ್ ನನ್ ಎಂಡ್ರು ಅದೇ ಅದೇ ನೈಟಿ ಹಾಕಂಡ್ ತಲೇಮೇಲ್ ಕುಟ್ಟಕ್ ಲಟ್ಟಣಿಗೆ ಹಿಡ್ಕಂಡ್ ಕಾಯ್ತಿರ್ತಾಳೆ ಇವ್ನ್ ಹತ್ರ ಮೊಳೆ ಹೊಡುಸ್ಕಳಕ್ಕಿಂತ ಮನೇಲ್ ಹೆಂಡ್ರ್ ಹತ್ರ ಬೈಸ್ಕಳದೇ ಪರ್ವಾಗಿಲ್ಲಾ ಅಂತ ಮನ್ಸಲ್ ಅನ್ಕಂಡ್ ಅಲ್ಲಿಂದ ಕಾಲ್ಕಿತ್ತಿದೆ,
ಲೋ ಇರ್ಲಾ ಕ್ರಾಕು ಎಲ್ಲಿಗ್ಲಾ ಓಯ್ತಿದಿಯಾ ಬಾರ್ಲಾ ಇಲ್ಲಿ ಅಂದ, ಇರೋ ಮನೇಲಿ ಹೆಂಡ್ರುಗೆ ಇವತ್ ಹೊಸ ನೈಟಿ ಕೊಡುಸ್ತೀನಿ ಅಂತ ಯೋಳಿದಿನಿ ಕೊಡುಸ್ಬುಟ್ ಫ್ರೀ ಮಾಡ್ಕಂಡ್ ಬರ್ತೀನಿ ಮಾತಾಡವ ಅಂತ ಹೇಳಿ ಅಲ್ಲಿಂದ ಎಸ್ಕೇಪ್ ಆದೆ.
*****
🙂
ನೈಟಿ ಹೋಗಿ ಡೇಟಿ, ೨೪-ಟಿ, ಆಲ್-ಟಿ ಆಗ್ಬುಟೈತೆ ತಮಾ
ದನ್ಯವಾದಗಳು
naiti puraana cennaagide kanannaa.naavu hengusru helidre "hengusrige hengusre shatru " antaare.nivu helidre parvagilla kananno.
ನೈಟಿ ಪುರಾಣ ತುಂಬಾ ಚೆನ್ನಾಗಿದೆ.ವಿಡಂಬನೆಯೊಂದಿಗಿನ್ ಹಾಸ್ಯ ಓದುವುದಕ್ಕೂ ಚೆಂದ.ಮನಸ್ಸಿಗೆ ಇಳಿಸಿಕೊಂಡ್ರೆ ಬುದ್ದಿವಾದವೂ ಆಗ್ಬಹುದು.