ಸಮೃದ್ಧ ಕನ್ನಡ ಸಾಹಿತ್ಯ ಪ್ರಕಾರದ ಬೆಳವಣಿಗೆಯಲ್ಲಿ ಇಪ್ಪತ್ತನೆಯ ಶತಮಾನವೆಂಬುದು ಹಲವಾರು ದೃಷ್ಟಿಕೋನಗಳಿಂದ ವಿಶಿಷ್ಟ ಮತ್ತು ಅಪರೂಪದ ನವೋದಯ ಕಾಲವಾಗಿ ಬೆಳೆದಿರುವುದು ಸಾಹಿತ್ಯಾಸಕ್ತರಿಗೆ ಗೊತ್ತಿರುವ ಸಂಗತಿಯಾಗಿದೆ. ಆಂಗ್ಲರ ಆಳಿಕೆಯ ದೆಸೆಯಿಂದಾಗಿ ಭಾಷೆಯೆಂಬ ಸಂವಹನ ಸಾಧನದ ಮೂಲಕ ಪಡೆದುಕೊಂಡ ಪರಿಜ್ಞಾನದ ವಿವಿಧ ಮಗ್ಗಲುಗಳು ದೇಶದ ಪ್ರಜ್ಞಾವಂತರ ಮನಸ್ಸನ್ನು ತಾಕಿದ್ದು ಸುಳ್ಳೇನಲ್ಲ. ಇದರ ಪರಿಣಾಮವಾಗಿ ಸಾಹಿತ್ಯಕ್ಷೇತ್ರವೂ ಪ್ರಚೋಧಿತವಾದಂತಾಯಿತು. ಸಾಹಿತ್ಯವು ಹಲವಾರು ಮಗ್ಗಲುಗಳನ್ನು ಕಂಡುಕೊಂಡಂತೆ ರಂಗಭೂಮಿಯಲ್ಲಿಯೂ ವಿವಿಧ ಪ್ರಕಾರದ ವಿಭಿನ್ನ ಪ್ರದರ್ಶನ-ಪ್ರಯೋಗಗಳು ಚಾಲ್ತಿಗೆ ಬಂದು, ಸಾಹಿತಿಗಳು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೇ […]