ಸುಮ್ ಸುಮನಾ ಅಂಕಣ

ಸುಮನ್ ದೇಸಾಯಿ ಅಂಕಣದಲ್ಲಿ ನೆನಪಿನ ಲಹರಿ…

ಒಂದ ವಾರ ಹಚ್ಚಿ ಹೊಡದ ಮಳಿ ಅವತ್ತ ಒಂದ ಸ್ವಲ್ಪ ಹೊರಪಾಗಿತ್ತು. ಇಡಿ ದಿನಾ ಬಿದ್ದ ಬಿಸಲಿಂದ ಹಸಿಯಾಗಿದ್ದ ನೆಲ ಎಲ್ಲ ಒಣಗಿ ಬೆಚ್ಚಗಿನ ವಾತಾವರಣ ಇತ್ತು. ಒಂದ ವಾರದಿಂದ ಮನ್ಯಾಗ ಕೂತು ಕೂತು ಬ್ಯಾಸರಾಗಿತ್ತು. ಸಂಜಿಮುಂದ ವಾಕಿಂಗ್ ಹೋಗಬೇಕನಿಸಿ ನಮ್ಮ ಕಾಲೋನಿಯೊಳಗಿದ್ದ ಪಾರ್ಕಿಗೆ ಮಕ್ಕಳನ್ನ ಕರಕೊಂಡು ಹೋದೆ. ಅದೊಂದು ಸಣ್ಣ ಪಾರ್ಕು. ಅಷ್ಟರೊಳಗನ ಮಕ್ಕಳಿಗೆ ಆಡಲಿಕ್ಕೆ ಜಾರಬಂಡಿ, ಜೋಕಾಲಿ, ಒಂದ ಸಣ್ಣ ಪರ್ಣಕುಟಿರ, ಹೆಣ್ಣಮಕ್ಕಳಿಗೆ ಒಂದ ಕಡೆ ಗುಂಪಾಗಿ ಕೂತು ಹರಟಿಹೊಡಿಲಿಕ್ಕೆ ಹೇಳಿ ಮಾಡಿಸಿದಂಗ ಸುತ್ತಲೂ […]

ಸುಮ್ ಸುಮನಾ ಅಂಕಣ

ಕಣ್ಣಂಚಿನ ಪ್ರೀತಿ:ಸುಮನ್ ದೇಸಾಯಿ ಅಂಕಣದಲ್ಲಿ ಕತೆ

 ನನ್ನ ಮಕ್ಕಳ ಕ್ರಿಸ್ ಮಸ್ ಸೂಟಿ ಶೂರು ಆಗಿದ್ವು. ಹದಿನೈದ ದಿನಾ ರಜಾ ಇದ್ವು. ನನ್ನ ಮಕ್ಕಳಿಬ್ಬರು ಎಲ್ಲೆರೆ ಪ್ರವಾಸಕ್ಕ ಹೋಗೊಣ ಅಂತ ಗಂಟಬಿದ್ದಿದ್ರು. ನನ್ನ ಮಗಳು "ಅಮ್ಮಾ ಗೋವಾಕ್ಕ ಹೋಗೊಣು ಅಲ್ಲೆ ಕ್ರಿಸ್ ಮಸ್ ಹಬ್ಬಾನ ಭಾಳ ಮಸ್ತ ಸೆಲೆಬ್ರೇಟ್ ಮಾಡತಾರಂತ, ಮತ್ತ ಗೋವಾದಾಗ ಬೀಚನ್ಯಾಗ ಮಸ್ತ ಆಟಾನು ಆಡಬಹುದು" ಅಂದ್ಲು. ಪ್ರೀತಿ ಮಗಳು ಕೇಳಿದ್ದನ್ನ ಇಲ್ಲಾ ಅನ್ಲಿಕಾಗ್ಲಿಲ್ಲಾ ನಾ ಯೆಸ್ ಅಂದೆ. ಇನ್ನ ಹೆಂಡತಿ ಡಿಸೈಡ ಮಾಡಿದ್ದನ್ನ ಬ್ಯಾಡ ಅನ್ಲಿಕ್ಕೆ ಸಾಧ್ಯನ ಇಲ್ಲಂತ ನಮ್ಮನಿಯವರನು […]

ಸುಮ್ ಸುಮನಾ ಅಂಕಣ

ಮೂಲಂಗಿ ಪಚಡಿ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ಭಾಳ ದಿವಸದ್ದ ಮ್ಯಾಲೆ ನಾವು ಗೆಳತ್ಯಾರೆಲ್ಲಾ ಒಂದ ಕಡೆ ಸೇರಿದ್ವಿ. ದಿನಾ ಒಂದಕ್ಕು ಮನ್ಯಾಗ ಗಂಡಾ ಮಕ್ಕಳಿಗೆ ನಾಷ್ಟಾ,ಊಟಾ ಅಂಥೇಳಿ  ದಿನಾ ಮುಂಝಾನೆದ್ದ ಕೂಡಲೆ ಚಪಾತಿ ಹಿಟ್ಟಿನ್ ಮುದ್ದಿ ನೋಡಿ ನೋಡಿ ನಮಗೂ  ಸಾಕಾಗಿತ್ತು. ಇವರಿಗೆಲ್ಲಾ ಹೊಟ್ಟಿತುಂಬ ಮಾಡಿ ಹಾಕಿ ಮತ್ತ ಮ್ಯಾಲೆ ಇವರ ಕಡೆ ದಿನಾ ಮಾಡಿದ್ದ ಮಾಡತಿ ಅಂತ ಬೈಸ್ಕೊಳ್ಳೊದ ಬ್ಯಾರೆ . ಅದಕ್ಕ ಬ್ಯಾಸರಾಗಿ ನಾವೆಲ್ಲಾ ಫ್ರೇಂಡ್ಸ್ ಮಾತಾಡಕೊಂಡ ಎಲ್ಲೆರೆ ಹೊರಗ ಸೇರಿ ” ಗೇಟ್ ಟುಗೆದರ್ ” ಮಾಡೊದಂತ ಡಿಸೈಡ್ ಮಾಡಿದ್ವಿ. […]

ಸುಮ್ ಸುಮನಾ ಅಂಕಣ

ಬೀಗರನ ಕಳಸೊ ಸಂಭ್ರಮ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ನನ್ನ ಜೊಡಿ ಕೆಲಸ ಮಾಡೊ ಗೆಳತಿ ಸುಧಾ ಅವರ ಊರಿಗೆ ಜಾತ್ರಿಗೆ ಅಂತ ಅವರ ಹಳ್ಳಿಗೆ ಹೋಗಿದ್ದೆ. ಸಣ್ಣದಿದ್ರು ಸಮೄಧ್ಧಿಯಿಂದ ಕೂಡಿದ ಊರು. ನನ್ನ ಗೆಳತಿಯವರದು ಅವಿಭಕ್ತ ಕುಟುಂಬ. ದೊಡ್ಡ ಮನಿ, ಮನಿ ತುಂಬ ಮಂದಿ. ಹೇಳಿಕೇಳಿ ಹಳ್ಳಿ ಮಂದಿ. ಎಲ್ಲಾರು ಹೆಜ್ಜಿ ಹೆಜ್ಜಿಗು ಉಪಚಾರ ಮಾಡೊವರನ. ಅವತ್ತ ಎಲ್ಲಾರು ಮಾತಾಡಕೊತ ಕೂತಾಗ ಹಿಂಗಾ ಆತು. ಸಂಜಿಮುಂದ ಐದ ಗಂಟೆ ಆಗಿತ್ತು. ಚಹಾದ ಟೈಮ್ ಆಗಿತ್ತು. ಅಷ್ಟರಾಗ ಒಳಗಿಂದ ಒಂದ ಐದು ವರ್ಷದ ಸುಧಾನ ತಮ್ಮನ ಮಗಳು […]

ಸುಮ್ ಸುಮನಾ ಅಂಕಣ

ಚಂಪಕಮಾಲಾ…!: ಸುಮನ್ ದೇಸಾಯಿ ಬರೆವ ನಗೆ ಅಂಕಣ

ಆವತ್ತ ಆಫೀಸಿಗೆ ಸೂಟಿ ಇತ್ತು. ಎಲ್ಲಾ ಕೆಲಸಾ ಮುಗಿಸಿ ಆರಾಮಾಗಿ ಟಿವ್ಹಿಯೊಳಗ ‘ಅಡಿಗೆ ಅರಮನಿ’ ನೊಡ್ಕೋತ ಕೂತಿದ್ದೆ. ಗಂಗಾವತಿ ಪ್ರಾಣೇಶ ಅವರು ತಮ್ಮ ಹಾಸ್ಯ ಪ್ರಹಸನದೊಳಗ ಹೇಳೋಹಂಗ ಇವರು ಮಾಡಿ ತೋರೆಸೋ ಅಡಗಿಗಿಂತಾ ಅವರ ರೇಷ್ಮಿ ಸೀರಿ, ಹಾಕ್ಕೊಂಡಿದ ದಾಗಿನಾ, ಮಾಡ್ಕೊಂಡ ಮೇಕಪ್, ಹೇರ್ ಸ್ಟೈಲ್ ನ ಮಸಾಲಿಕಿಂತಾ ಖಡಕ ಇದ್ವು. ಯಾವದೋ ಒಂದು ಸೊಪ್ಪಿನ ಸೂಪ್ ಮಾಡೋದ ಹೆಂಗಂತ ಹೇಳಿಕೊಡ್ಲಿಕತ್ತಿದ್ಲು. ಆಕಿ ಖುಲ್ಲಾ ಬಿಟಗೊಂಡ ಕೂದಲಾ ಎಲ್ಲೆ ಆಕಿ ಮಾಡೊ ಸೂಪಿನ ರುಚಿ ನೋಡತಾವೊ ಅನಿಸ್ತಿತ್ತು. […]

ಸುಮ್ ಸುಮನಾ ಅಂಕಣ

ನಾನ್-ವೆಜ್ ಬರ್ಥಡೇ ಪಾರ್ಟಿ:ಸುಮನ್ ದೇಸಾಯಿ ಅಂಕಣ

ನನ್ನ ನಾದಿನಿ ರುಕ್ಕುನ ಮಗನ್ನ ಹುಟ್ಟಿದ ಹಬ್ಬದ ಪಾರ್ಟಿಗೆ ಹೋಗಿದ್ದೆ. ಮನಿ ಟೆರೇಸ್ ಮ್ಯಾಲೆನ ಎಲ್ಲಾ ಅರೇಂಜ್ಮೆಂಟ್ ಮಾಡಿದ್ಲು. ಎಲ್ಲಾ ಕಡೆ ಲೈಟಿನ ಸರಾ ಹಾಕಿದ್ರು. ಅದ್ರ ಟೆರೇಸ್ ತುಂಬ ಅಲ್ಲಲ್ಲೇ ಅಲಂಕಾರಕ್ಕಂತ ಪ್ರಾಣಿಗೋಳ ಗೊಂಬಿ ನಿಲ್ಲಿಸಿದ್ರು. ನೋಡಿದ್ರ ಯಾವದೋ ಝೂ ಒಳಗ ಬಂಧಂಗ ಅನಿಸ್ತಿತ್ತು. ಯಾಕೊ ವಿಚಿತ್ರ ಅನಿಸಿದ್ರು, ಸಣ್ಣ ಹುಡುಗರಿಗೆ ಪ್ರಾಣಿ ಅಂದ್ರ ಭಾಳ ಸೇರತಾವ ಅದಕ್ಕ ಇರಬಹುದು ಅಂತ ಅನ್ಕೊಂಡೆ. ಯಾಕಂದ್ರ ನನ್ನ ಮಗಾನೂ ಪ್ರಾಣಿ ಪ್ರಿಯನ ಇದ್ದಾನ. ಸಣ್ಣಾಂವ ಇದ್ದಾಗ ನಮ್ಮತ್ತಿಯವರು […]

ಸುಮ್ ಸುಮನಾ ಅಂಕಣ

ಸರಕ್ಕ ಸರಿತಲ್ಲ – ಪರಕ್ಕಂತ್ ಹರಿತಲ್ಲ……: ಸುಮನ್ ದೇಸಾಯಿ ಅಂಕಣ

                        ಮೊನ್ನೆ ಸಂಜಿಮುಂದ ನನ್ನ ಗೆಳತಿ ಕವ್ವಿ(ಕವಿತಾ) ಬಂದಿದ್ಲು. ಹಿಂಗ ಅದು ಇದು ಮಾತಾಡಕೋತ ತಮ್ಮ ತಮ್ಮಂದು ಮದವಿ ಘಟ್ಟಿ ಆದ ಸುದ್ದಿ ಹೇಳಿದ್ಲು.ಆಕಿ ತಮ್ಮಂದು ಕನ್ಯಾ ಆರಿಸೊದ್ರಾಗ ಭಾಳ ತಕರಾರ ಅವ ಅಂತ ಕೇಳಿದ್ದೆ. ಅಂತು ಇಂತು ನಿಶ್ಚೆ ಆತಲ್ಲಾ ಅಂತ " ಅಯ್ಯ ಛೋಲೊ ಆತಲ್ಲಾ ಪಾರ್ಟಿ ಯಾವಾಗಲೇ" ಅಂದೆ. ಅದಕ್ಕ ಆಕಿ "ಹೋಗ ನಮ್ಮವ್ವ ಎಲ್ಲಿ ಪಾರ್ಟಿ […]

ಸುಮ್ ಸುಮನಾ ಅಂಕಣ

ಚೆಲುವೆಯ ನೋಟ ಚೆನ್ನಾ, ಒಲವಿನ ಮಾತು ಚೆನ್ನಾ..: ಸುಮನ್ ದೇಸಾಯಿ ಅಂಕಣ

ಮೊನ್ನೆ ರವಿವಾರ ಮುಂಝಾನೆ ನಮ್ಮ ತಮ್ಮ  ಹಾಡ ಹಾಡಕೊತ ಗಿಡಕ್ಕ ನೀರ ಹಾಕಲಿಕತ್ತಿದ್ದಾ. ಆ ಹಾಡು ಏನಂದ್ರ " ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋತಿಯ ಕಾಟಾ, ಹೆಂಡತಿಯೊಬ್ಬಳು ಜೊತೆಯಲಿ ಇದ್ದರೆ ಹಳಸಿದ ಅನ್ನದ ಊಟಾ…" ಅಂತ ಹಾಡಕೊತ ತನ್ನಷ್ಟಕ್ಕ ತಾನ ನಗಲಿಕತ್ತಾಗ ಹಿಂದ ಯಾರೊ ನಿಂಥಂಗ ಅನಿಸಿ ಹೊಳ್ಳಿ ನೋಡಿದ್ರ ಟೊಂಕದ ಮ್ಯಾಲೆ ಕೈ ಇಟಗೊಂಡ ಉರಿ ಉರಿ ಮಾರಿಮಾಡಕೊಂಡ ತನ್ನ ನೋಡಲಿಕತ್ತ ಹೆಂಡತಿನ್ನ ನೋಡಿ ಒಂದ ಘಳಿಗಿ ಎದಿ ಝಲ್ಲಂದು ಹಂಗ ಸುಮ್ನ ನಿಂತಾ. ಆಕಿ […]

ಸುಮ್ ಸುಮನಾ ಅಂಕಣ

ಪಿನ್ನಿ-ಪಲ್ಲು ಪ್ರಳಯ ಪ್ರಸಂಗ: ಸುಮನ್ ದೇಸಾಯಿ

      ತಿಂಗಳದ ಎರಡನೆ ಶನಿವಾರ್ ಆಫೀಸಿಗೆ ಸೂಟಿ ಇರತದ. ದಿನಾ ಒಂದಕ್ಕು ಗಂಡಾ ಮಕ್ಕಳಿಗೆ ಮಾಡಿ ಹಾಕಿ,ಆಫೀಸು ಮನಿ ಅಂತ ಬ್ಯಾಸತ್ತ ಶುಕ್ರವಾರ ದಿನಾ ಮುಂಝಾನೆ " ನಾಳೆ, ನಾಡದ ಸೂಟಿ ಅದ, ನಾ ಇವತ್ತ ನಮ್ಮ ಅಮ್ಮನ ಮನಿಗೆ ಹೋಗಿಬರತೇನಿ. ಒಮ್ಮೆಲೆ ಸೋಮವಾರ ಸಂಜೀಕೆ ಆಫೀಸ್ ಮುಗಿಸಿಕೊಂಡ ಬರತೇನಿ" ಅಂತ ಒದರಿದೆ. ಅದಕ್ಕ ಗಂಡಾ ಮಕ್ಕಳು ಕೂಡೆ ಒಂದ ಧ್ವನಿಲೆ "ನಾವು ಬರತೇವಿ  ಅಂತ ಅಂದ್ರು. ಅದಕ್ಕ ನಾ ಒಂದ ನಮ್ಮಮ್ಮನ ಮನಿಗೆ ಕಾಲರ ಇಡ್ರಿ […]

ಸುಮ್ ಸುಮನಾ ಅಂಕಣ

ಮದಲ ನಾ ಸೆವೆನ್ ಮಂಥ ಬಾರ್ನ ಇದ್ದೇನಿ: ಸುಮನ್ ದೇಸಾಯಿ

ಮಧ್ಯಾಹ್ನ ಮೂರುವರಿ ಆಗಿತ್ತು.  ನಾನು ಮತ್ತ ನಮ್ಮ ತಮ್ಮಾ ಟಿಪಾಯಿ ಮ್ಯಾಲೆ ರಾಶಿಗಟ್ಟಲೆ ಕನ್ಯಾಗೊಳ ಫೋಟೊ ಮುಂದ ಹರವಿಕೊಂಡ ಕುತಿದ್ವಿ. ಮದಲ ಬ್ರಾಹ್ಮಣರಾಗ ಕನ್ಯಾದ ಅಭಾವ ಅದ ಹಂತಾದ್ರೊಳಗ ಇಂವಾ ನಮ್ಮ ತಮ್ಮಂದು ಆರ್ಸೊಣಿಕಿ ಬ್ಯಾರೆ ನೋಡಿ " ಲೇ ಲಗೂನ ಯಾವದ ಒಂದ ಸೆಲೆಕ್ಟ ಮಾಡಿ ಲಗ್ನಾ ಮಾಡಕೊಂಡ ಕಡಿಕ್ಯಾಗ, ಇಲ್ಲಾಂದ್ರ ಎಲ್ಲಿದರ ಒಂದ ಹಿಡಕೊಂಡ ಬಂದ ಮುದ್ರಾ ಹಾಕಿಸಿ ಮನ್ಯಾಗ ಹೋಗಿಸ್ಕೊಬೇಕಾಗ್ತದ ನೋಡ " ಅಂದೆ. ಖರೆನು ಈಗ ಕನ್ಯಾ ಅವ ಅವ ಅನ್ನೊದ್ರಾಗ […]