ಮಾನವ ಸಂಬಂಧಗಳು ತೀರಾ ಸಂಕೀರ್ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮಿಲಿ ಬ್ರೊಂಟೆಯ wuthering heights ನಲ್ಲಿವೆ. ಕಾದಂಬರಿಯ ನಾಯಕಿಕ್ಯಾಥರಿನ್ ಹಾಗೂ ನಾಯಕ ಹೇತ್ಕ್ಲಿಫ್. ಪ್ರೀತಿ ಮೂಲಬೂತವಾದ ಬಯಕೆ. ವಿಶ್ವಸನೀಯವಾದ ಪ್ರೀತಿ ಶ್ರೇಷ್ಟವಾದರೆ, ಪ್ರೀತಿಯಲ್ಲಿ ದ್ರೋಹ ಪಾಪವಾಗುತ್ತದೆ. ಅಲ್ಲಿ ಹುಟ್ಟಿದ ದ್ವೇಷಕ್ಕೆ ಪಾಪದ ಬಣ್ಣ ಕೊಡದೆ ಮಾನವಮೂರ್ತ ಪ್ರೀತಿಯೆಂದು ಚಿತ್ರಿಸಿ ಅದರ ಸೂಕ್ಷ್ಮ ತುಡಿತಗಳನ್ನು ಎಳೆಎಳೆಯಾಗಿ ಬಿತ್ತರಿಸಿದ್ದಾಳೆ ಎಮಿಲಿ. ಪರಿಪೂರ್ಣತೆ […]
ಸಮಾನತೆಯ ಸಂಧಿಕಾಲದಲ್ಲಿ
ಸ್ತ್ರೀತ್ವದ ನೆಲೆ ಬೆಲೆ: ನಾಗರೇಖಾ ಗಾಂವಕರ
ಗಂಡು ವಿಸ್ತಾರವನ್ನು ಆಪೇಕ್ಷಿಸಿದರೆ ಹೆಣ್ಣು ಆಳವನ್ನು ಬಯಸುತ್ತಾಳೆ ಎಂಬ ಮಾತಿದೆ. ಹೌದಲ್ಲ. ಗಂಡು ಎಷ್ಟು ಸಲೀಸಾಗಿ ತನ್ನ ಸ್ವಗತವನ್ನು ತೋಡಿಕೊಂಡು ಬಿಡುತ್ತಾನೆ. ವಿಸ್ತಾರದ ಆಕಾಂಕ್ಷೆಯಲ್ಲಿ ಅತೃಪ್ತನಾಗುತ್ತ ಹೋಗುವುದು ಆತನ ಜಾಯಮಾನವೇ?ಅದು ಆತನ ದೈಹಿಕ ಬಯಕೆ ಮಾತ್ರವೇ ಅಥವಾ ಮಾನಸಿಕ ಬೌದ್ಧಿಕ ಚಿಂತನೆಗಳಿಗೂ ಅನ್ವಯಿಸುತ್ತದೆಯೇ ಎಂದೆಲ್ಲಾ ಚಿಂತಿಸಿದರೆ ಮೂಡುವ ಉತ್ತರ ಸ್ಪಷ್ಟ. ಹೆಣ್ಣಿನ ಸಂವೇದನೆಗಳು ತಳಮೂಲದಲ್ಲಿ ಪಲ್ಲವಿಸುತ್ತವೆ. ಆಕೆ ವಿಸ್ತಾರಕ್ಕಿಂತ ವಿಶಾಲಕ್ಕಿಂತ ತನ್ನ ನೆಲೆಯಲ್ಲಿ ನೆಲದಲ್ಲಿ ಆಳಕ್ಕಿಳಿದು ಬೇರೂರಲು ಬಯಸುತ್ತಾಳೆ. ಗಂಡಿನ ವಿಶಾಲ ಪ್ರಪಂಚದೆದುರು ಆಕೆ ಸಂಕುಚಿತವೆನಿಸಿದರೂ ಸ್ತ್ರೀ […]
ತಾಯ್ತನ ಮತ್ತು ಹೆಣ್ಣು: ನಾಗರೇಖಾ ಗಾಂವಕರ
ಅದುರವಿವಾರ. ಹಾಗಾಗಿ ಸಂತೆ ದಿನ. ಸಂತೆಯಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೊರಟಾಗ ತರಕಾರಿ ಮಂಡಿಯ ಹೊರ ಪ್ರವೇಶ ದ್ವಾರದಲ್ಲೇ ಆ ಇಬ್ಬರು ದಂಪತಿಗಳು ಹುಣಸೇ ಹಣ್ಣುಇಟ್ಟು ಮಾರುತ್ತಿದ್ದರು.ತಾಯಿಯ ತೊಡೆಯೇರಿದ ಕಂದನನ್ನು ಸಂಭಾಳಿಸುತ್ತಾ ಆ ಮಹಾತಾಯಿ ಹುಣಸೇ ಹಣ್ಣು ತೂಗಿಕೊಡುತ್ತಿದ್ದರೆ ತಂದೆ ಗಿರಾಕಿಗಳ ಕಡೆಗಮನವಿಟ್ಟು ಹಣಪಡೆದು ಜೇಬಿಗಿಳಿಸುತ್ತಿದ್ದ. ಮಗುವಿನ ಕಡೆ ತೂಕದ ಕಡೆ ಸಮ ಪ್ರಮಾಣದ ಗಮನದೊಂದಿಗೆ ಎರಡನ್ನು ನಿಭಾಯಿಸುತ್ತಿದ್ದ ಆಕೆ ನನಗಾಗ ಆತನಿಗಿಂತ ಸಮರ್ಥಳಾಗಿ ಕಂಡಿದ್ದಳು. ಹೌದು. ಏಕಕಾಲಕ್ಕೆ ಅಪಕರ್ಷಣೆಗೆ ಒಳಗಾಗದೇ ದ್ವಿಮುಖ ಕಾರ್ಯಗಳನ್ನು ಪುರುಷನಿಗಿಂತ ಸ್ತ್ರೀ […]
ಸಹನೆಯೇ ಸ್ತ್ರಿ ಅರಿವು: ನಾಗರೇಖಾ ಗಾಂವಕರ
“ಅಲ್ಲೊಂದು ಕಾಗೆಗಳ ಆಕ್ರಮಣಕ್ಕೆ ಗುರಿಯಾದ ಸಾಯುತ್ತ ಬಿದ್ದಿರುವ ಹದ್ದು. ಸೀತಾ ಅದನ್ನು ಉಳಿಸುವ ಪ್ರಯತ್ನ ಮಾಡುತ್ತಾಳೆ ಆದರೆ ಉಪಯೋಗವಾಗುವುದಿಲ್ಲ. ಗಾಯಗೊಂಡು ಜೀವಕ್ಕಾಗಿ ಅಸಹಾಯಕತೆಯಲ್ಲೆ ಗುದ್ದಾಡುತ್ತಿರುವ ಆ ಹದ್ದು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ ಆದರೆ ಸಾಧ್ಯವಾಗದೇ ಕಾಗೆಗಳಿಗೆ ಆಹಾರ ವಾಗುತ್ತದೆ. ”ಈ ಸ್ಥಿತಿಯೇ ಸೀತಾಳ ಮನಸ್ಥಿತಿ ಕೂಡ. ಅನಿತಾ ದೇಸಾಯಿಯ shall we go this summer? ಕಾದಂಬರಿಯ ಕೇಂದ್ರ ಪಾತ್ರ ಸೀತಾ. ಒತ್ತಡದ ದಬ್ಬಾಳಿಕೆಯ ಬದುಕಿನಿಂದ ಆಕೆ ಪಲಾಯನ ಮಾಡ ಬಯಸುತ್ತಾಳೆ ಹದ್ದಿನಂತೆ. ಆದರೆ ಸಂಸಾರದ ಬಂಧನದಲ್ಲಿ […]
ಗಂಡಿನ ಪರಧಿಯೊಳು ಹೆಣ್ಣು – ಬಿಡುಗಡೆಯ ಹಂಬಲ: ನಾಗರೇಖಾ ಗಾಂವಕರ
“ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನ್ನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರಷ್ಟೇ ಸಾಕೆ?’ ರಾಷ್ಟಕವಿ ಡಾ. ಜಿ. ಎಸ್ ಶಿವರುದ್ರಪ್ಪನವರ ಕವನವೊಂದರ ಸಾಲುಗಳಿವು. ಸ್ರ್ತೀಯ ಅಗಾಧ ವ್ಯಕ್ತಿತ್ವ, ಆಳ ಅಗಲಗಳ ಕಲಾತ್ಮಕವಾಗಿ ಬಿಂಬಿಸಿದ ಅಪೂರ್ವ ಸಾಲುಗಳು. ಕೇಳಿದೊಡನೆ ತಾಯಿಯ ರೂಪವೇ ಎದುರು ನಿಂತಂತೆ. ಕವಿ ಸ್ತ್ರೀಯನ್ನು ಗೌರವಿಸಿದ ಅನುಪಮ ಭಾವಲಹರಿ, ಸಹೃದಯನ ಸಂವೇದನೆ ಏಕಕಾಲಕ್ಕೆ ತಾಧ್ಯಾತ್ಮತೆಯಲ್ಲಿ ಮುಳುಗಿ ಹೋಗುವುದು. ಆದರೆ ನಿಜಕ್ಕೂ ಭಾರತೀಯ ಸಮಾಜದಲ್ಲಿ ಈ ಗೌರವ ಸ್ಥಾನಮಾನ ಆಕೆ ಅನುಭವಿಸುತ್ತಿದ್ದಾಳೆಯೇ ಎಂಬ […]
ಪರಿವರ್ತನೆಗೆ ದಾರಿ ಯಾವುದಾದರೇನು?: ನಾಗರೇಖಾ ಪಿ. ಗಾಂವಕರ
ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೆ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ ವಿದ್ಯಾರ್ಥಿಗಳು ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರೀಯ ಇಪ್ಪತೆಂಟು ವಿದ್ಯಾರ್ಥಿಗಳು ಮಾತ್ರ. […]