ಮಕ್ಕಳ ಲೋಕ

ಕಿರು ಲೇಖನಗಳು: ಕುಮಾರಿ ವರ್ಷಾ

ಪರಿವರ್ತನೆ ಒಂದು ಊರಲ್ಲಿ ಪುಟ್ಟ ಎಂಬ ಹುಡುಗ ಇದ್ದ.ಇವನು ಆ ಊರಿನ ಕಿಲಾಡಿ ಕಿಟ್ಟ ಮುಂಜಾನೆಯಿಂದ ಸಂಜೆಯವರೆಗೆ ಆಟ ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಇವನ ತಂದೆ ತಾಯಿಯೂ ರೈತಾಪಿ ಜನರು.ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವ ಮೊದಲೇ ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮತ್ತೇ ರಾತ್ರಿನೇ ಮನೆಗೆ ಬರುತ್ತಿದ್ದರು. ಹೀಗಾಗಿ ಅವರಿಗೆ ಮಗ ಏನು ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗುತ್ತಿದ್ದಿಲ್ಲ. ಪಾಲಕರು ಯಾವಾಗಲೂ ತಮ್ಮ ಮಕ್ಕಳು ಆದರ್ಶ ವ್ಯಕ್ತಿಗಳಾಗಬೇಕೆಂದು ನಿರೀಕ್ಷಿಸುತ್ತಾರೆ. ಹಾಗೆಯೇ ಪುಟ್ಟನ ತಂದೆ ತಾಯಿಯೂ ಸಹ, ತಮ್ಮ […]

ಮಕ್ಕಳ ಲೋಕ

ಮಗುವಿನ ಆರೈಕೆ: ಮಹಿಮಾ ಸಂಜೀವ್

ನಾನು ನಾಲ್ಕು ವರ್ಷದ ಮಗುವಿನ ತಾಯಿ..ಅಂದರೆ ನನಗು ನಾಲ್ಕೇ ವರ್ಷ!! ಹೌದು ಒಂದು ಮಗುವಿನೊಂದಿಗೆ ತಾಯಿಯೂ ಹುಟ್ಟುತ್ತಾಳೆ .. ನನ್ನ ತಾಯ್ತನದ ಜನನವು ಹಾಗೆ ಆದದ್ದು .. ಮಗು ಬೆಳೆಸುವದೇನು  ಸಹಜದ ಕಲೆಯಲ್ಲ…ಆದರೆ ಅದರ ತಯಾರಿಯನ್ನ ಬಹಳ ಮುಂಚಿನಿಂದ  ಮಾಡಬೇಕಾಗುತ್ತೆ ..ಒಂದು ಮಾನಸಿಕ ತಯಾರಿಯದ್ದು ಮತ್ತೊಂದು ದೈಹಿಕ ತಯಾರಿಯದ್ದು  ಮಾನಸಿಕವಾಗಿ ಹೆಣ್ಣು ತಾಯ್ತನಕ್ಕೆ ಬಹಳ ಬೇಗ ಸಜ್ಜುಗೊಳ್ಳುತ್ತಾಳೆ  ಅನ್ನೋ ನಂಬಿಕೆ ಇದೆ..ನಾನು ಹೇಳುತ್ತೇನೆ ಅದು ಸುಳ್ಳು, ಆಕೆಗೂ ಸಮಯ ಬೇಕು..ಅಲ್ಪ ಸಲ್ಪದ ತರಬೇತಿಯು ಬೇಕು..ಮನೆಯಲ್ಲಿ ಹಿರಿಯರಿದ್ದಾರೆ ಸರಿ, […]

ಮಕ್ಕಳ ಲೋಕ

ಚಳಿಗಾಲ…ಆರೋಗ್ಯ ಜೋಪಾನ: ಗಣೇಶ್.ಹೆಚ್.ಪಿ.

ಮೊನ್ನೆ ಆಕಸ್ಮಿಕವಾಗಿ ಗೆಳೆಯನೊಬ್ಬನನ್ನು ಭೇಟಿಯಾದೆ. ಹೇಗಿದೆ ಶಾಲೆ ? ಕ್ಲಾಸಸ್ ಎಲ್ಲಾ ಚೆನ್ನಾಗಿ ನಡೀತಿದೆಯೋ ಎಂದು ವಿಚಾರಿಸಿದೆ. ಅವನು ಸಪ್ಪೆ ಮುಖದಿಂದ ಇಲ್ಲಾ ಕಣೋ ಎರಡು ದಿನದಿಂದ ಜ್ವರ, ಶೀತ ಆಗಿ ಶಾಲೆಗೆ ಹೋಗಿಲ್ಲ ಎಂದು ಹೇಳಿದ. ನಾನು ಅವನಿಗೆ ಆರೋಗ್ಯದ ಮೇಲೆ ನಿಗಾ ಇಡು, ಹಾಗೇ ಶಾಲೆಯನ್ನು ತಪ್ಪಿಸಬೇಡ ಎಂದು ಬುದ್ಧಿ ಹೇಳಿದೆ. ಮೈ ಕೊರೆಯುವ ಚಳಿ :  ಈ ಕಾಲದಲ್ಲಂತೂ ಕಳೆಗುಂದಿದ ವಾತಾವರಣ, ಹೊರಗೆ ಕಾಲಿಟ್ಟರೆ ಸಾಕು ಮೈ ಕೊರೆಯುವ ಚಳಿ, ಬೆಳಿಗ್ಗೆ ಹಾಸಿಗೆ […]

ಪಂಜು ಆಡಿಯೋ ಕತೆ/ಕವಿತೆ ಮಕ್ಕಳ ಲೋಕ

ಡುಮ್ಮಾ-ಡುಮ್ಮಿ (ಆಡಿಯೋ ಕತೆ): ಸುಮನ್ ದೇಸಾಯಿ

ಈ ಪುಟ್ಟ ಕತೆಯನ್ನು ಸುಮನ್ ದೇಸಾಯಿಯವರು ಮಕ್ಕಳಿಗಾಗಿ ಬರೆದು ಮತ್ತು ಆ ಕತೆಯನ್ನು ರೆಕಾರ್ಡ್ ಮಾಡಿ ಕಳಿಸಿದ್ದಾರೆ.  ಈ ಕತೆಯನ್ನು ಅವರ ಧ್ವನಿಯಲ್ಲಿ ಕೇಳಲು ಈ ಕೆಳಗಿನ ಕೊಂಡಿ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… Suman Desai- Dumma Dummi ಹಿಂಗೊಂದ ಊರಾಗ ಡುಮ್ಮಾ-ಡುಮ್ಮಿ ಇದ್ರಂತ. ಡುಮ್ಮಗ ಒಂದಿನಾ ದ್ವಾಸಿ ತಿನಬೆಕನಿಸ್ತಂತ. ಆವಾಗ ಆಂವಾ […]

ಮಕ್ಕಳ ಲೋಕ

ಬೆಳೆಯುವ ಸಿರಿ ಮೊಳಕೆಯಲ್ಲಿ: ಡಾ. ವಾಣಿ ಸುಂದೀಪ್

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಮಕ್ಕಳ ಒಲವು ಯಾವ ಕಡೆ ಎಂಬುದು ಪೋಷಕರಿಗೆ ಮಕ್ಕಳು ಚಿಕ್ಕವರಿರುವಾಗಲೇ ಅರ್ಥವಾಗಬೇಕು.  ಮಕ್ಕಳನ್ನು ಬೆಳೆಸುವುದು, ಪಾಲಿಸುವುದು ಸುಲಭದ ಕೆಲಸವಲ್ಲ. ಮಕ್ಕಳ ಆಟ, ಹಟ, ನಗು, ಬಾಲ್ಯತನ ಎಲ್ಲವೂ ಹಿತ ನೀಡುತ್ತವೆ. ಆದರೆ ಮಕ್ಕಳ ಜವಾಬ್ದಾರಿಯ ವಿಚಾರ ಬಂದಾಗ ಎಲ್ಲ ತಂದೆ-ತಾಯಿಯರೂ ಜಾಗೃತರಾಗಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ, ಅದರ ಜೊತೆಗೆ ಹೊರ ಜಗತ್ತಿನ ಅನುಭವವನ್ನು ಮಾಡಿಸಬೇಕು. ಮಕ್ಕಳ ಆಸೆಗಳನ್ನೂ ಪೂರೈಸಬೇಕು.   ಮಗು ಹಠ ಮಾಡುತ್ತಿದೆ ಎಂದು ಕೈಲಾಗದ ವಸ್ತುಗಳನ್ನು ತರಲು ಸಾಧ್ಯವಿಲ್ಲ. ಮೊದಲನೆಯದಾಗಿ […]

ಮಕ್ಕಳ ಲೋಕ

ಅಮ್ಮಾ –ಕಂದ: ನಳಿನ ಡಿ.

ಅಮ್ಮಾ ನಿನೊಡನಿರುವೆ ಮನೆಯಲ್ಲಿ, ಕುಣಿಯುವೆ ನಿನ್ನಯ ತೋಳಲ್ಲಿ, ಪಾಠವು ನನಗೆ ಬೇಡಮ್ಮ, ಕೈತುತ್ತನು ಮೆಲ್ಲಗೆ ತಾರಮ್ಮ, ಮಲಗಲು ಮಡಿಲು ನೀಡಮ್ಮ, ಆಡವಾಡಿಸು ಬಾ ಗುಮ್ಮಾ ಬಂತು ಗುಮ್ಮಾ ಪುಟ್ಟ ಕಂದನೇ ಏನಾಯ್ತು? ಪಾಠವೇತಕೆ ಬೇಡಾಯ್ತು?   ಮೇಷ್ಟು ಮಂಕುತಿಮ್ಮ ಅಂದರು, ಮಗ್ಗಿ ತಪ್ಪಿಸಿದ್ದಕ್ಕೆ ಬೈದರು, ಕೋಲನು ಕಂಡು ಕಾಗುಣಿತ ಬಾರದು, ಎಬಿಸಿಡಿ ಕಲಿಯಲು ನನ್ನಿಂದಾಗದು,   ಕಂದಾ, ವಿದ್ಯೆಯು ಬೇಕು ಬಾಳಿಗೆ, ನನ್ನನ್ನು ಸಾಕಲು ನಾಳೆಗೆ, ಅದೇ ದಾರಿ ತೋರುವ ದೀವಿಗೆ, ವಿದ್ಯೆ ಇಲ್ಲದೆ ಅಸಾಧ್ಯವೋ ಏಳಿಗೆ. […]

ಮಕ್ಕಳ ಲೋಕ

ಶಿಶು ಗೀತೆ ಮತ್ತು ಚಿತ್ರ

  ನಿಖಿಲ್ ೩ ನೇ ತರಗತಿ ಜಿ ಪಿ ಎಚ್ ಎಸ್ ನಂಜೈಗರಹಳ್ಳಿ     ಕಿಟ್ಟು ಪುಟ್ಟು   ಕಿಟ್ಟು ಪುಟ್ಟು ಇಬ್ಬರು ತುಂಬಾ ಒಳ್ಳೆ ಗೆಳೆಯರು ಅಕ್ಕ-ಪಕ್ಕದ ಮನೆಯ ಹುಡುಗರು   ಒಂದೇ ಊರು ಒಂದೇ ಶಾಲೆ ಅಣ್ಣ-ತಮ್ಮನಂತೆ ಇವರು ತುಂಬಾ ಒಳ್ಳೇ ಹುಡುಗರು   ಕಿಟ್ಟು ಅಮ್ಮ ತಿಂಡಿ ಕೊಡಲು ಪುಟ್ಟು ಜೊತೆಗೆ ಹಂಚಿ ತಿನುವ ಪುಟ್ಟು ಕೂಡ ಅಪ್ಪ ತರುವ ಪೇಟೆ ತಿಂಡಿ ಹಂಚಿ ತಿನುವ ಕಿಟ್ಟು ಜೊತೆಯಲೇ..   ಜೊತೆಗೆ […]

ಮಕ್ಕಳ ಲೋಕ

ಪುಟ್ಟ ಮತ್ತು ನಾಯಿ ಮರಿ: ವೆಂಕಟೇಶ್ ಮಡಿವಾಳ ಬೆಂಗಳೂರು.

ನಾಯಿ -ಮರಿಯನೊಂದ ಹಾಕಿತು ಮರಿಯ ದೇಹ ನೆಕ್ಕಿ ನೆಕ್ಕಿ ಶುಭ್ರಗೊಳಿಸಿತು ಹಸಿವಿನಿಂದ ಮರಿಯು ಕುಯ್ ಕುಯ್ ಎಂದಿತು ಶ್ವಾನದ್ವಯಕೆ ಹೊಟ್ಟೆ ಈಗ ಚುರ್ ಎಂದಿತು   ದೂರದಲ್ಲಿ ಯಾರೋ ಎಸೆದ ರೊಟ್ಟಿ ಬಂದು ಬಿದ್ದಿತು ರೊಟ್ಟಿ ತಿನ್ನಲೆಂದು ನಾಯಿ ಜಿಗಿಯಿತು ಆಗ ಅಡ್ಡ ಬಂದ ಬಸ್ಸು ಅದರ ಮೇಲೆ ನುಗ್ಗಿತು ಆಗ ತಾನೇ ಜನ್ಮವಿತ್ತ ನಾಯಿ ಮರಣ ಹೊಂದಿತು ಅದೇ ತಾನೇ ಭುವಿಗಿಳಿದ ಮರಿ ಅನಾಥವಾಯಿತು   ನಮ್ಮ ಪುಟ್ಟ ಆ ದೃಶ್ಯ ನೋಡಿದ ಮರಿಯ ತಂದು […]

ಮಕ್ಕಳ ಲೋಕ

ಚುಕ್ಕಿ-ಚಂದ್ರಮ: ನವೀನ್ ಮಧುಗಿರಿ

ಕನಸಿನಲ್ಲಿ ನಾನು ತುಂಬಾ  ಉದ್ದ ಬೆಳೆದೆನು! ಚುಕ್ಕಿ ಚಂದ್ರರೆಲ್ಲ ನನ್ನ  ಕೈಯ್ಯ ಹತ್ತಿರ!   ಚಂದಮಾಮ ಕೆನ್ನೆ ಸವರಿ  ಮುತ್ತು ಕೊಟ್ಟನು  ಚುಕ್ಕಿ ತಾರೆ ನನ್ನ ಜೊತೆ  ಒಳ್ಳೆ ಗೆಳೆಯರಾದರು    ಅರ್ಧ ಚಂದ್ರನ ಮೇಲೆ ನಾನು  ಜಾರುಬಂಡಿ ಆಡಿದೆ  ಚುಕ್ಕಿ ತಾರೆಗಳ ಜೊತೆ  ತುಂಬಾ ಮಾತನಾಡಿದೆ    ಅಲ್ಲೂ ಒಂದು ಊರು ಇತ್ತು  ಅಲ್ಲಿ ಜಾತ್ರೆ ನಡೀತಿತ್ತು  ಚಂದಮಾಮ ಕೈಯ್ಯ ಹಿಡಿದ  ನಾನು ಊರು ಸುತ್ತಿದೆ    ಕಡಲೆ ಮಿಟಾಯಿ ಕೊಬ್ಬರಿ ಮಿಟಾಯಿ  ಬೆಂಡು ಬತ್ತಾಸು […]