ಪ್ರೀತಿ ಪ್ರೇಮ

ಹುಚ್ಚು ಪ್ರೀತಿ:ದಿವ್ಯ ಆಂಜನಪ್ಪ

  ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು ಮಾತು ಮಾತಿಗೇಕೋ ನಗು ಮರು ಘಳಿಗೆಯೇ ಮೌನ ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ… (ಹೆಚ್.ಎಸ್. ವೆಂಕಟೇಶ್ ಮೂರ್ತಿ)   ಹುಚ್ಚು ಪ್ರೀತಿ ಎಂದಾಕ್ಷಣ ಬಿ.ಆರ್.ಛಾಯಾರವರು ಹಾಡಿದ ಈ ಸಾಲುಗಳು ನೆನಪಾಗುತ್ತದೆ. ಎಷ್ಟು ಅರ್ಥಪೂರ್ಣ ಹಾಗೂ ಸತ್ಯ. ಮಾತು ಮಾತಿಗೂ ನಗು, ಸದಾ ಕಾಲ ಖುಷಿ, ಅದೇಕೋ ಮೌನ, ತನ್ನಂದವ ತಾನೇ ನೋಡಿ ನಲಿವ ಮನಸ್ಸು, ಹೇಗೆ ಕಾಣುವೆನೋ ತಿಳಿಯಲು ಕನ್ನಡಿ ಮುಂದಷ್ಟು ಹೊತ್ತು ಕಳೆವ, ಮನದಲ್ಲೇ […]

ಪ್ರೀತಿ ಪ್ರೇಮ

ಭಾವಕ್ಕೆ ಜೊತೆಯಾಗೋ ಭಾವ:ಭಾಗ್ಯ ಭಟ್

ಅದೆಲ್ಲೋ ಇದ್ದು ಮುಖವನ್ನೂ ನೋಡದಿರೋರ ಮಧ್ಯ ಸುಂದರ ಸ್ನೇಹವೊಂದು ಹೆಮ್ಮರವಾಗಿ ಬೆಳೆಯೋದು ಸಾಧ್ಯವೇ ಅನ್ನೋ ಅವಳ ಪ್ರಶ್ನೆಗೆ ನೇರಾ ನೇರಾ ಉತ್ತರ ಸಿಕ್ಕಿತ್ತು ಅವತ್ತು … "ಗೆಳತಿ, ಆತ್ಮೀಯತೆ ಬೆಳೆಯೋಕೆ ಇಂತದ್ದೆ ಸ್ಥಳ ಬೇಕೆಂದಿಲ್ಲ. ನನ್ನ ನಿನ್ನ ಈ ಸ್ನೇಹ ಎದುರು ಕೂತು ಮುಖ ನೋಡಿ ಮಾತಾಡಿಲ್ಲ ! ಗಂಟೆಗಟ್ಟಲೇ ಹರಟಿಲ್ಲ. ತೋಳಲ್ಲಿ ಮುಖ ಹುದುಗಿಸಿ ಅತ್ತಿಲ್ಲ….ಸಾಹಿತ್ಯವನ್ನು ಬಿಟ್ಟು ಬೇರೆ ಯಾವ ವೈಯಕ್ತಿಕ ಮಾತನ್ನೂ ಆಡಿರದ ಸ್ನೇಹ ಇದು! ಆದರೂ ಎದುರು ಬದುರು ಕೂತು ಮಾತಾಡಿದ,ಒಟ್ಟಿಗೆ ಕೂತು ಹರಟಿದ, ಕಣ್ಣಂಚಿನ ಕಣ್ಣೀರ ಒರೆಸಿದ ನನ್ನ ತುದಿಬೆರಳ ಸ್ನೇಹಕ್ಕಿಂತ […]

ಪ್ರೀತಿ ಪ್ರೇಮ

ನೀನಿಲ್ಲದೆ ನನಗೇನಿದೆ … : ಟಿ . ಜಿ. ನಂದೀಶ್

  ಜೀವದ ಗೆಳತಿ , ಆ ದಿನಗಳು, ಆ ಕ್ಷಣಗಳು ನನ್ನ ಪಾಲಿಗೆ ಸದಾ ಹಸಿರು. ಯಾಕಂದ್ರೆ ನನ್ನ ಉಸಿರು ನಿನ್ನ ತಾಕುವಷ್ಟು ಹತ್ತಿರದಲ್ಲಿದ್ದೆ ನೀನು, ನನ್ನುಸಿರು ನಿನ್ನ ಹೆಸರನ್ನೇ ಉಸಿರಾಗಿಸಿಕೊಂಡು ಉಸಿರಾಡುತ್ತಿದ್ದ ದಿನಗಳವು. ನಿನ್ನ ಮುದ್ದು ಮುಖ ನೋಡದೆ ಹತ್ತಿರತ್ತಿರ ಎರಡು ವರುಷಗಳೇ ಸರಿದು ಹೋದವು . ಕಾಲಗಳು ಬದಲಾದವು , ವ್ಯಕ್ತಿಗಳು ಬದಲಾದರೂ , ಕೊಂಚ ಮಟ್ಟಿಗೆ ಬದುಕು ಬದಲಾಯಿತಾದರೂ , ನಿನ್ನ ಮೇಲಿನ ನನ್ನ ಪ್ರೀತಿ ಒಂದಿನಿತು ಬದಲಾಗಲಿಲ್ಲ, ಬಡವಾಗಲಿಲ್ಲ , ಅದರ […]

ಪ್ರೀತಿ ಪ್ರೇಮ

ನಿನ್ನ ಪ್ರೀತಿಗೆ ಹೃದಯ ಮಾರಿದವನು: ರಾಜು ಬಾಡಗಿ

  ಬಸ್  ಸ್ಟಾಫಿ ನಲ್ಲಿ ನಿನ್ನ ನೋಡಿದಾಗ ಹುಟ್ಟಿದ ಪ್ರೀತಿ ಇಂದೂ ಮುಂದುವರೆದಿದೆ. ಅದಕ್ಕೆ ಯವುದೂ ಇಂಟೆರ್ವಲ್ ಇಲ್ಲ. ಅದರೆ ಈ ಪ್ರೀತಿಗೆ ಇನ್ನೂ ಯಾವ ಭಾಷೆಯೂ ಗೊತ್ತಿಲ್ಲ. ಕಲಿಯುವ ಯಾವ ಬಯಕೆಯೂ ಬರ್ತಾ ಇಲ್ಲ. ಈ ಮೌನದಲ್ಲೂ  ಎಂಥಹ ಪ್ರೀತಿ ಇದೆ …ಅಲ್ವಾ….???  ಈ ಪ್ರೀತಿಗೆ ನಾನು ಏನಾದರೂ ಹೆಸರು ಇಡಬೇಕು ಅಂತ ಅಂದರೆ ನಾನು ’ಮೌನದ ಮಾತು" ಅಂತ ಇಡುತ್ತೇನೆ. ಕಾಡುವ ನಿನ್ನ ಕನಸುಗಳು, ಕನ್ನಡಿ ಮುಂದೆ ನಿಂತಾಗ ಕಾಣುವ ನಿನ್ನ ರೂಪ, ಹಸಿ […]

ಪ್ರೀತಿ ಪ್ರೇಮ

ಏಕಾಂಗಿ ಮನಸು ಮತ್ತು ಅವಳ ಕನಸು: ರವಿಕಿರಣ್

  "ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?"  ಕುತೂಹಲಕ್ಕೆ ಕೇಳಿದ್ಲಾ? ಚೇಷ್ಟೆಗೆ ಕೇಳಿದ್ಲಾ? ಅರ್ಥವಾಗಲಿಲ್ಲ. ಹೌದು ಗಾಳಿ ಯಾಕೆ ಸದ್ದು ಮಾಡತ್ತೆ? ನಾನೂ ಚಿಂತೆ ಎನ್ನುವ ಚಿತೆಗೆ ಜಾರಿದಂತಾಯ್ತು. ಎಲ್ಲೋ ಪೇಟೆಯ ಮಧ್ಯವೋ, ಬಸ್ಸಿನಲ್ಲಿ, ಬೈಕಿನಲ್ಲಿ ಹೋಗುವಾಗಲೋ, ಇಲ್ಲ ಯಾವುದೋ  ಪಾರ್ಕು,ಹೋಟೆಲ್,ಮನೆ,ದೇವಸ್ಥಾನ,ಚರ್ಚ್ ಎಲ್ಲೇ ಈ ಪ್ರಶ್ನೆ ಕೇಳಿದ್ದರೂ, ಉತ್ತರ ಕೊಡುವ ಪ್ರಯತ್ನ ಮಾಡಬಹುದಿತ್ತು. ನ್ಯೂಟ್ರಾನ್,ಪ್ರೋಟಾನ್,ಎಲೆಕ್ಟ್ರಾನುಗಳ ಜೊತೆ ಗಾಡ್ ಪಾರ್ಟಿಕಲನ್ನೂ ಬಳಸಿ, ನ್ಯೂಟನ್ ನಿಯಮಗಳನ್ನು ದ್ವೈತಾದ್ವೈತಗಳ ಜೊತೆ ಮಿಶ್ರಮಾಡಿ ಹೇಳಲು ಪ್ರಯತ್ನಿಸಿ ಹಾದಿ ತಪ್ಪಿಸುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. […]

ಪ್ರೀತಿ ಪ್ರೇಮ

ಪ್ರೇಮೋತ್ಸವದ ನೆಪದಲ್ಲಿ (ಪ್ರೀತಿಯಿಂದ ಪ್ರೀತಿಯ ವಿಮರ್ಶೆ…..)

ಪ್ರೀತಿ ಎಂದರೇನು….? ಪ್ರೀತಿ ಎಲ್ಲಿದೆ….? ಪ್ರೀತಿ ಹೇಗಿದೆ….? ಪ್ರೀತಿ ಏಕೆ ಬೇಕು….? ಇಂದಿನ ಕಾಲದಲ್ಲಿ ಪ್ರೀತಿಯ ಸ್ಥಿತಿಗತಿ ಏನು…..? ಹೀಗೆ ಪ್ರೀತಿ ಎಂದರೆ ನಮ್ಮ ಮನಸ್ಸಿನಲ್ಲಿ ಅದೆಷ್ಟು ಪ್ರಶ್ನೆಗಳು, ದ್ವಂದ್ವಗಳು ಕಾಡುತ್ತದೆಯಲ್ಲವೆ…..! ಪ್ರೀತಿ ಎಂದರೆ  ವಿಶ್ಲೇಷಣೆ ಅವರವರ ಬಾವಕ್ಕೆ, ಭಕುತಿಗೆ, ಖುಷಿಗೆ ಬಿಟ್ಟದ್ದು.. ಕೆಲವರ ಪ್ರಕಾರ ಪ್ರೀತಿ ಎಂದರೆ…… ಕವಿಗಳಿಗೆ ಕಾವ್ಯಕ್ಕೆ ಸ್ಪೂತಿ, ಪತ್ರಿಕೆಗಳಿಗೆ ಸುದ್ದಿ, ಸಿನಿಮಾದವರಿಗೆ ಬರಿದಾಗದ ಕಥಾ ಸಂಪತ್ತು, ಇಂದಿನ  ಹುಡುಗ, ಹುಡುಗಿಯರಿಗೆ ಜಾಲಿ, ಟೈಂ ಪಾಸ್, ಕೆಲವರಿಗೆ ಸೆಕ್ಸ್ , ಇನ್ನೂ ಕೆಲವರಿಗೆ […]

ಪ್ರೀತಿ ಪ್ರೇಮ

ಪ್ರೀತಿಯ ಹಾದಿ….

ಯೌವ್ವನ ನೂರಾರು ಕನಸುಗಳ ಸುಂದರ ಲೋಕ. ಇಂಥ ಲೋಕದಲ್ಲಿ ಹತ್ತಾರು ಬಗೆಯ ಕನಸುಗಳನ್ನು  ನನಸಾಗಿಸಿಕೋಳ್ಳಲು ಇರುವ ಬಯಕೆ ಅಧಮ್ಯ. ಹಾಗೇ ಬಯಕೆಗಲು ಹೆಚ್ಚಾಗಿ ಬಯಲಾಗುವುದು ತಾರುಣ್ಯದಲ್ಲೇ ಅಲ್ಲವೇ, ಯೌವ್ವನ ತುಂಬೊ ತುಳುಕುತ್ತಿರುವ ಈ ಹಂತದಲ್ಲಿ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕು ಎನ್ನುವ ಮನೋಸ್ಥಿತಿ.ಜೀವನವನ್ನು ಸಮಾಜವನ್ನು ಗಡಿಗಳ ಮೀರಿ ಗ್ರಹಿಸುವುದಕ್ಕೆ ಆಗ ತಾನೇ ಸಿದ್ದವಾಗಿರುವ ಮನಸ್ಸು. ಊಹೆ, ಆಲೋಚನೆಗಳೆಲ್ಲವೂ ರಂಗುರಂಗಾಗಿ ಕಾಣಿಸಿಕೊಂಡು ಎಲ್ಲದರಲ್ಲೂ ಆವೇಶದ ಭರಾಟೆ ಸಾಗುತ್ತಿರುತ್ತದೆ. ಪ್ರಪಂಚವನ್ನೇ ಎದುರಿಸುವ ದೋರಣೆ, ಯಾವುದೋ ಸಾಹಸ ಮಾಡಬೇಕೆಂಬ ಆತುರ, […]

ಪ್ರೀತಿ ಪ್ರೇಮ

ಪ್ರೀತಿ ಎಂದರೇನು …! ಕಾಮವೋ…? ಸ್ವಾರ್ಥವೋ…? ಪ್ರೇಮವೋ…..?

ನಾನು ಪದವಿ ಕಾಲೇಜಿಗೆ ಸೇರಿ ಬೆಂಗಳೂರಿಗೆ ಹೊಸದು. ಮೊದಲ ಬಾರಿ ಮಹಾನಗರದ ದರ್ಶನವಾದ್ದರಿಂದ ಸ್ವಲ್ಪ ಖುಷಿಯ ಜೊತೆಗೆ ಭಯವೂ ಆಗುತ್ತಿತ್ತು. ನಮ್ಮ ಕಾಲೇಜು ಕಬ್ಬನ್ ಪಾರ್ಕ್ ಸಮೀಪದಲ್ಲೇ ಇದ್ದುದರಿಂದ ಆಗಾಗ ವಿರಾಮದ ವೇಳೆಯಲ್ಲಿ ಸುತ್ತಾಡಲು ಕಬ್ಬನ್ ಪಾರ್ಕಿಗೆ ಸ್ನೇಹಿತರೆಲ್ಲ ಹೊರಡುತ್ತಿದ್ದೆವು. ಹೋದಾಗಲೆಲ್ಲ ನಮಗೆ ಯುವಕ ಯುವತಿ ಜೋಡಿಗಳೇ ಹೆಚ್ಚಾಗಿ ಕಾಣಸಿಗುತ್ತಿದ್ದರು. ತೀರಾ ಹಳ್ಳಿಯವರೇ  ಆಗಿದ್ದ ನಮ್ಮ ಗುಂಪಿನವರು ಇವರು ಪ್ರೇಮಿಗಳೊ….? ಕಾಮಿಗಳೊ…? ಇವರ ತೆವಲಿಗೆ ಈ ಸಾರ್ವಜನಿಕ ತಾಣವೆ ಬೇಕೆ ಎಂದು ಅಣುಕಿಸುತ್ತೆದ್ದೆವು. ಹಾಗಾದರೆ ಪ್ರೀತಿ ಎಂದರೇನು? […]

ಪ್ರೀತಿ ಪ್ರೇಮ

ಪ್ರೀತಿ

ಮನಕ್ಕೆ ಸಿಗದದ್ದು, ಸಿಕ್ಕಾಗ ದಕ್ಕದದ್ದು, ಮರೆತಾಗ ನೆನೆದದ್ದು, ಬಯಸಿದಾಗ ಪಲಾಯನವಾದದ್ದು, ನಾ ಮುಂದೆ ನೆಡೆದಾಗ ಹಿಂದೆ ಅತ್ತದ್ದು……… ಬಹಳಷ್ಟು ಜನರ ಪ್ರೀತಿಯ ಅನುಭವ ಇವಿಷ್ಟೇ ಆಗಿರುತ್ತದೆ. ಹೌದಾದರೆ ಲೈಕ್ ಒತ್ತಿ, ಇಲ್ಲವಾದರೆ ಕಾಮೆಂಟ್ ಮಾಡಿ ಎಂದರೆ, ಕಾಮೆಂಟಿಗಿಂತ ಲೈಕ್ಸ್ ಹೆಚ್ಚಾಗಿರುತ್ತದೆ ಎಂಬುದು ನನ್ನ ನಂಬಿಕೆ. ಅದೇನೇ ಇರಲಿ, ಪ್ರೀತಿ' ಎಂಬ ಭಾವವೇ ಮಧುರ, ವಿಸ್ಮಯ. ಪ್ರೀತಿಗೆ ವಯಸ್ಸಿನ ಪ್ರಶ್ನೆ ಇಲ್ಲ. ಪ್ರೀತಿಯಲ್ಲಿ ಎಲ್ಲರೂ ಟೀನೇಜರೇ,,,,:-)) ಈ ಪ್ರೀತಿಯ ಕಲ್ಪನೆ, ಕನಸುಗಳು ಹುಟ್ಟುವುದೇ ಹದಿಹರೆಯಗಳಲ್ಲಿ. ಅಂದರೆ ಹೈಸ್ಕೂಲ್-ಕಾಲೇಜಿನ ದಿನಗಳಲ್ಲಿ, […]

ಪ್ರೀತಿ ಪ್ರೇಮ

ಅಮಾವಾಸ್ಯೆಯ ಕತ್ತಲಲ್ಲಿ ಬೆಳದಿಂಗಳು ಸುರಿದಂತೆ

ಮೊನ್ನೆ ಸಂಕ್ರಾತಿ ಹಬ್ಬದ ದಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಅಂಗಳದಲ್ಲಿ ನಿಂತು ಗಾಳಿಗೆ ಹಾರಿ ಹಾರಿ ನಿನ್ನ ಕೆನ್ನೆಗೆ ಮುತ್ತಿಕ್ಕುತ್ತಿದ್ದ ಕೂದಲನ್ನು ಪದೇ ಪದೇ  ಹಿಂದಕ್ಕೆ ಸರಿಸುತ್ತಿದ್ದಾಗಲೇ ನಿನ್ನನ್ನು ನಾನು ನೋಡಿದ್ದು. ಮರುಕ್ಷಣವೇ ನನ್ನ ಮನಸಿನ ಮನೆಯ ತುಂಬೆಲ್ಲ ಒಲವ ಶ್ರಾವಣದ ಸಂಭ್ರಮ ಶುರುವಾಗಿ ಹೋಗಿತ್ತು.  ಹನುಮಂತನ ಬಾಲದಂತಿದ್ದ ಕ್ಯೂ ಬಿಸಿಲಲ್ಲಿ ಬೆವರಿಳಿಸುತ್ತಿದ್ದರೆ ದೇವರ ದರ್ಶನ ಬೇಡ ಎನಿಸುತ್ತಿತ್ತು. ಇನ್ನೊಂದಿಷ್ಟು ಹೊತ್ತು ನೋಡಿ ಮನೆಗೆ ಹೊರಟು ಬಿಡೋಣ..  ಅಂದುಕೊಳ್ಳುತ್ತಿದ್ದವನ ಮುಂದೆ ಜಗತ್ತಿನ ಸೌಂದರ್ಯವೆಲ್ಲ ಹೆಣ್ಣಾಗಿ ರೂಪ ಪಡೆದಿದೆಯೇನೋ […]