ಪ್ರಸಾದ್ ಕೆ ಅಂಕಣ

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಕೊನೆಯ ಭಾಗ): ಪ್ರಸಾದ್ ಕೆ.

ಇಲ್ಲಿಯವರೆಗೆ…. 1991 ರಲ್ಲಿ ನ್ಯೂಯಾರ್ಕ್ ಗೆ ತೆರಳಿದ ವಾರಿಸ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಾರೆ. ರೆವಲಾನ್, ಲೆವಿಸ್, ಲಾರಿಯಲ್, ಬೆನೆಟನ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳ ರಾಯಭಾರಿಯಾಗಿ ವಾರಿಸ್ ಮಿಂಚುತ್ತಾರೆ. ಮೂರು ತಿಂಗಳಲ್ಲೇ ವಾರಿಸ್ ರ ಚಿತ್ರವನ್ನು ಹೊತ್ತ ದೈತ್ಯ ಜಾಹೀರಾತು ಫಲಕಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಎಲ್ಲೆಲ್ಲೂ ರಾರಾಜಿಸತೊಡಗುತ್ತವೆ. ಸುಗಂಧ ದ್ರವ್ಯಗಳು, ಆಭರಣಗಳು, ಮದ್ಯತಯಾರಿಕೆ, ಬಟ್ಟೆಗಳು ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿಸಿಕೊಳ್ಳಲು ವಾರಿಸ್ ರ ಬೆನ್ನು ಬೀಳುತ್ತವೆ. […]

ಪ್ರಸಾದ್ ಕೆ ಅಂಕಣ

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಭಾಗ 3): ಪ್ರಸಾದ್ ಕೆ.

ಇಲ್ಲಿಯವರೆಗೆ ಶ್ರಮಜೀವಿ ವಾರಿಸ್ ಮೆಕ್ ಡೊನಾಲ್ಡ್ ರೆಸ್ಟೊರೆಂಟಿನಲ್ಲಿ ನಿಷ್ಠೆಯಿಂದ ದುಡಿಯುತ್ತಾ ದಿನ ತಳ್ಳುತ್ತಿರುತ್ತಾಳೆ. ಆಗೊಮ್ಮೆ ಈಗೊಮ್ಮೆ ಹಾಲ್ವು ಳೊಂದಿಗೆ ವಾರಾಂತ್ಯಗಳಲ್ಲಿ ಕ್ಲಬ್ ಗಳಿಗೆ ತೆರಳಿ ಮಂದಬೆಳಕಿನಲ್ಲಿ ವೈಭವಿಸುವ ಹಾಡು, ನೃತ್ಯ, ಮದ್ಯಗಳನ್ನು ನಿರ್ಲಿಪ್ತತೆಯಿಂದ ಮೂಲೆಯಲ್ಲಿ ನಿಂತು ಸುಮ್ಮನೆ ನೋಡುತ್ತಿರುತ್ತಾಳೆ. ನಗರದ ಜನರ ಮುಕ್ತ ಲೈಂಗಿಕತೆ ಅವಳಿಗೆ ಅಸಹ್ಯ ಉಂಟುಮಾಡಿದರೆ, ಮೂತ್ರವಿಸರ್ಜನೆಗೂ ಬಾತ್ ರೂಮಿನಲ್ಲಿ ಬಹುಹೊತ್ತು ಹೊಟ್ಟೆಹಿಡಿದುಕೊಂಡು ನರಳಬೇಕಾಗಿ ಒದ್ದಾಡುವ ಅನಿವಾರ್ಯತೆ, ನೋವನ್ನು ಯಾರಲ್ಲೂ ಹೇಳಿಕೊಳ್ಳಲಾಗದ ಎಫ್.ಜಿ.ಎಮ್ ಬಗೆಗಿನ ಕೀಳರಿಮೆ ಅವಳನ್ನು ಮಾನಸಿಕವಾಗಿ ಬಳಲಿಸುತ್ತದೆ. ಆ ದಿನಗಳಲ್ಲಿ ತಕ್ಷಣದ […]

ಪ್ರಸಾದ್ ಕೆ ಅಂಕಣ

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಭಾಗ 2): ಪ್ರಸಾದ್ ಕೆ.

ಇಲ್ಲಿಯವರೆಗೆ ಈ ಮೊದಲೇ ಹೇಳಿದಂತೆ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳಿಗೆ ವಿವಾಹಕ್ಕೆ ಸೊಮಾಲಿಯಾದಲ್ಲಿ ಭಾರೀ ಬೇಡಿಕೆ. ಓರ್ವ ವ್ಯಕ್ತಿ ಎಷ್ಟು ಒಂಟೆಯನ್ನು ಹೊಂದಿರುತ್ತಾನೆ ಎಂಬುದರ ಮೇಲೆ ಇಲ್ಲಿ ಶ್ರೀಮಂತಿಕೆಯನ್ನು ಅಳೆಯುತ್ತಾರಂತೆ. ವಧುದಕ್ಷಿಣೆಯೆಂಬ ಪದ್ಧತಿ ಜಾರಿಯಲ್ಲಿರುವುದರಿಂದ ಒಂಟೆಯನ್ನೇ ವಧುದಕ್ಷಿಣೆಯನ್ನಾಗಿ ಕೊಡುವುದು ಇಲ್ಲಿಯ ವಾಡಿಕೆ. ಹೀಗಾಗಿ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳು ಇಲ್ಲಿನ ತಂದೆ-ತಾಯಂದಿರಿಗೆ ಶುದ್ಧ ಮಾರಾಟದ ಸರಕುಗಳು.      ************************ ವಾಪಾಸು ನಮ್ಮ ಕಥಾನಾಯಕಿ ವಾರಿಸ್ ಕಥನಕ್ಕೆ ಬರೋಣ. ತನ್ನ ಐದನೇ ವಯಸ್ಸಿಗೆ ಎಫ್. […]

ಪ್ರಸಾದ್ ಕೆ ಅಂಕಣ

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ”: ಪ್ರಸಾದ್ ಕೆ.

ಆಗ ಹೆಚ್ಚೆಂದರೆ ನನಗೆ ಐದು ವರ್ಷ.  ಅಕ್ಕ ಅಮನ್ ಗೆ ‘ಅದನ್ನು’ ಮಾಡಿಸುವುದರ ಬಗ್ಗೆ ಮನೆಯೆಲ್ಲಾ ಗುಲ್ಲು. ‘ಅದನ್ನು’ ಮಾಡಿಸಿಕೊಂಡರೆ ನಮ್ಮಲ್ಲಿಯ ಹೆಣ್ಣುಮಕ್ಕಳಿಗೆ ಭಾರೀ ಬೇಡಿಕೆ. ಒಂದು ಪ್ರತಿಷ್ಠೆಯ ಸಂಕೇತ. ಅಧಿಕೃತವಾಗಿ ಹೆಂಗಸಿನ ಪಟ್ಟಕ್ಕೆ ಭಡ್ತಿ. ನನಗಂತೂ ಈ ಬಗ್ಗೆ ಭಾರೀ ಕುತೂಹಲ. ‘ಅದು’ ಎಂಬುದು ಏನೆಂದು ತಲೆಬುಡ ಗೊತ್ತಿಲ್ಲದಿದ್ದರೂ ಅಮ್ಮನ ಕೊರಳಿಗೆ ಜೋತುಬಿದ್ದು ‘ಅಕ್ಕನಿಗೆ ಮಾಡಿಸುತ್ತೀರಲ್ಲಾ. ನನಗೂ ಮಾಡಿಸಿ’ ಎಂದು ಗೋಳು ಹುಯ್ದುಕೊಳ್ಳುವಷ್ಟರ ಮಟ್ಟಿಗೆ. ‘ಥೂ ಹೋಗೇ’ ಎಂದು ತಳ್ಳಿಹಾಕುವ ಅಮ್ಮ. ಕಣ್ಣಲ್ಲೇ ತುಂಟನಗೆಯೊಂದಿಗೆ ಕೆಣಕುವ […]

ಪ್ರಸಾದ್ ಕೆ ಅಂಕಣ

ಗಣಪನೆಂಬ ಅದ್ಭುತ: ಪ್ರಸಾದ್ ಕೆ.

ಕತೆ, ಕವಿತೆ, ಕ್ರೈಮು, ಕಾರ್ಟೂನು, ಸಿನಿಮಾ, ಟೀಕೆ-ಟಿಪ್ಪಣಿ, ಸತ್ವವಿಲ್ಲದ ಸರ್ಕಾರಿ ಪತ್ರಗಳು, ಆಫೀಸಿನ ನೀರಸ ಮಣಭಾರದ ರಿಪೋರ್ಟುಗಳು ಹೀಗೆ ಹಿರಿ, ಕಿರಿ, ಕಿರಿಕಿರಿಯೆನ್ನಿಸುವ ಏನೇನೋ ವಿಷಯಗಳ ಬಗ್ಗೆ ಬರೀತಾ ಬರೀತಾ ಚೌತಿಯ ಗಣೇಶನ ಬಗ್ಗೆ ವಾರದ ವಿಶೇಷ ಪುರವಣಿಗೆ ಬರೆಯುವುದೇ ಒಂದು ಖುಷಿ. ಗಣಪತಿ ಎಂದರೆ ನನಗೆ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ನನಗೆ ಗಣಪ ಎಂದರೆ ಏನೆಲ್ಲಾ, ಎಷ್ಟೆಲ್ಲಾ… ಅತಿಮಧುರ ಸಂಸ್ಕøತ ಶ್ಲೋಕಗಳನ್ನು ಬದಿಗಿಟ್ಟುಕೊಂಡರೂ ಗಣಪತಿಯೆಂದರೆ ನನ್ನದೇ ಹಲವು ವರ್ಷನ್ನುಗಳು ನನಗೆ. 'ಗಣೇಶ' ಎಂದರೆ ಗಣೇಶನ ಮದುವೆಯ […]

ಪ್ರಸಾದ್ ಕೆ ಅಂಕಣ

ದ ಪ್ಲೇನ್-ಫೀಲ್ಡ್ ಕಿಲ್ಲರ್”: ಪ್ರಸಾದ್ ಕೆ.

೧೯೫೭ ರ ನವೆಂಬರ್ ೧೭ ರ ಒಂದು ಕರಾಳ ದಿನ. ಅಮೇರಿಕಾದ ವಿಲ್ಕಿನ್ಸನ್ ಸ್ಟೇಟ್ ನ ಪ್ಲೇನ್ ಫೀಲ್ಡ್ ಎಂಬ ಪುಟ್ಟ ಹಳ್ಳಿಯತ್ತ ಇಡೀ ಜಗತ್ತೇ ತಿರುಗಿ ನೋಡಿತು. ಮನೆಯೊಂದರ ಮೇಲೆ ನಡೆದ ಪೋಲೀಸರ ದಾಳಿಯಿಂದ ಪ್ಲೇನ್ ಫೀಲ್ಡ್ ಎಂಬ ಹೆಸರೇ ಗೊತ್ತಿರದ ಪುಟ್ಟ ಸ್ಥಳವೊಂದು ಏಕಾಏಕಿ ಕುಖ್ಯಾತಿಯನ್ನು ಪಡೆದು ಸುದ್ದಿ ಮಾಡಿತು. ಮನುಷ್ಯನ ಮೂಳೆಗಳು, ಮಾನವ ಚರ್ಮದಿಂದ ಮಾಡಲಾದ ಕಸದ ಬುಟ್ಟಿ, ಲ್ಯಾಂಪ್ ಶೇಡ್‌ಗಳು, ತಲೆಬುರುಡೆಯನ್ನು ಉಪಯೋಗಿಸಿ ಮಾಡಲಾದ ಬೌಲ್ ಗಳು, ಉಗುರುಗಳು, ನಾಲ್ಕು ಮೂಗುಗಳು, […]

ಪ್ರಸಾದ್ ಕೆ ಅಂಕಣ

ಫ್ರೀಡಾ ಕಾಹ್ಲೋ: ಬದುಕು, ಬವಣೆ ಮತ್ತು ಬಣ್ಣಗಳು: ಪ್ರಸಾದ್ ಕೆ.

"ಇಲ್ಲಿಂದ ಹೊರಬಿದ್ದವಳೇ ಮೂರು ಕೆಲಸಗಳನ್ನು ಮಾಡಬೇಕಿದೆ ನನಗೆ. ಪೈಂಟಿಂಗ್, ಪೈಂಟಿಂಗ್ ಮತ್ತು ಪೈಂಟಿಂಗ್"  ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು, ನೋವನ್ನೆಲ್ಲಾ ದೇಹದ ಮೂಲೆಮೂಲೆಯಲ್ಲೂ ಆವರಿಸಿಕೊಂಡು ಮೆಕ್ಸಿಕೋದ ಆಸ್ಪತ್ರೆಯ ವಾರ್ಡೊಂದರಲ್ಲಿ ಮಲಗಿದ್ದ ಹೆಣ್ಣೊಬ್ಬಳು ಹೇಳಿದ ಮಾತಿದು. ಈ ಚಿತ್ರಕಲಾವಿದೆಯ ಹೆಸರು ಫ್ರೀಡಾ ಕಾಹ್ಲೋ. ಪಿಕಾಸೋ ಮತ್ತಿತರ ದಿಗ್ಗಜರ ಸಮಕಾಲೀನಳಾದಳೂ ಕೂಡ ತನ್ನ ಜನ್ಮಭೂಮಿ ಮೆಕ್ಸಿಕೋದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನದೇ ಆದ ಛಾಪನ್ನು ಕಲಾಲೋಕದಲ್ಲಿ ಮೂಡಿಸಿದವರು ಫ್ರೀಡಾ. ತನ್ನ ದೇಹವನ್ನು ಮತ್ತು ಮನಸ್ಸಿನಲ್ಲಾ ಮಡುಗಟ್ಟಿ ಆವರಿಸಿದ್ದ ನೋವುಗಳೊಂದಿಗೆ ಜೀವನದುದ್ದಕ್ಕೂ ಹಟಬಿಡದೆ […]

ಪ್ರಸಾದ್ ಕೆ ಅಂಕಣ

ಪೌಲ್ ಬುರ್ರೆಲ್ ಎಂಬ ಡಯಾನಾರ ತೆರೆಮರೆಯ ತಾರೆ: ಪ್ರಸಾದ್ ಕೆ.

ಕೆಲವೊಂದು ಮುಖಗಳೇ ಹಾಗಿರುತ್ತವೆ. ವರ್ಷಗಳು ಸಂದು ಹೋದರೂ, ಪೀಳಿಗೆಗಳು ಕಳೆದರೂ "ಐಕಾನ್" ಎನಿಸಿಕೊಳ್ಳುತ್ತವೆ. ವಿನ್ಸ್‍ಟನ್ ಚರ್ಚಿಲ್ ಸಿಗಾರ್ ಸೇದುತ್ತಾ ರಾಜಭಂಗಿಯಲ್ಲಿ ಕುಳಿತ ಕಪ್ಪು ಬಿಳುಪು ಛಾಯಾಚಿತ್ರ ಈಗಲೂ ಆ ದಂತಕಥೆಗೆ ಮೆರುಗನ್ನು ನೀಡುತ್ತದೆ. ಮರ್ಲಿನ್ ಮನ್ರೋರ ಮಾದಕ ನಗುಮುಖಕ್ಕೆ ಮರ್ಲಿನ್ ಮನ್ರೋರೇ ಸಾಟಿ. ಇಂತಹ ವಿಶಿಷ್ಟ ಮುಖಗಳ ಬಗ್ಗೆ ಮಾತನಾಡುವಾಗ ಮೊದಲಿಗೆ ಮನಸ್ಸಿನಲ್ಲಿ ಹಾದುಹೋಗುವ ಚಿತ್ರ ಬ್ರಿಟನ್ನಿನ ರಾಜಕುಮಾರಿ ಡಯಾನಾರದ್ದು. ಪ್ರಪಂಚದಲ್ಲೇ ಅತೀ ಹೆಚ್ಚು ಬಾರಿ ಛಾಯಾಚಿತ್ರೀಕರಿಸಲ್ಪಟ್ಟ ಮಹಿಳೆಯೆಂದರೆ ರಾಜಕುಮಾರಿ ಡಯಾನಾ. ತನ್ನ ಜೀವಿತಾವಧಿಯಲ್ಲಿ ವಿಶಿಷ್ಟ ಕಾರ್ಯವೈಖರಿ, […]

ಪ್ರಸಾದ್ ಕೆ ಅಂಕಣ

ಯಶಸ್ಸಿನ ಬೆನ್ನು ಹತ್ತಿ:ಪ್ರಸಾದ್ ಕೆ.

  ರಿಚರ್ಡ್ ಬ್ರಾನ್‌ಸನ್! ಈ ಶತಮಾನದ ಓರ್ವ ಯಶಸ್ವಿ ಉದ್ಯಮಿ, ಲೇಖಕ, ಸಾಹಸಿ ಮತ್ತು ವರ್ಜಿನ್ ಸಮೂಹ ಸಂಸ್ಥೆಗಳ ಅಧ್ಯಕ್ಷ. ವಿಶ್ವದಾದ್ಯಂತ ನಾಲ್ಕುನೂರಕ್ಕೂ ಹೆಚ್ಚು ಕಂಪೆನಿಗಳ ಮಾಲೀಕ. ಸಂಗೀತ, ಏರ್ ಲೈನ್ಸ್, ಮೊಬೈಲ್ಸ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಬಂಧಬಾಹುಗಳನ್ನು ವರ್ಜಿನ್ ಸಮೂಹ ಸಂಸ್ಥೆಗಳು ಹಬ್ಬಿಕೊಂಡಿವೆ. ಇವರ ಆತ್ಮಕಥೆ ’ಲೂಸಿಂಗ್ ಮೈ ವರ್ಜಿನಿಟಿ’ ಜಗತ್ತಿನಾದ್ಯಂತ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಬಿಕರಿಯಾದ ಬಹುಚರ್ಚಿತ ಕೃತಿ. ರಿಚರ್ಡ್ ತನ್ನ ಜೀವನದಲ್ಲಿ ಅನುಭವಗಳಿಂದ ಕಲಿತ ಪಾಠಗಳನ್ನು ’ಸ್ಕ್ರ್ಯೂ […]