ಪೂಜ ಗುಜರನ್‌ ಅಂಕಣ

ಕಾಲದ ಜೊತೆ ನಾವು ಬದಲಾಗುತ್ತಿದ್ದೇವಾ..?: ಪೂಜಾ ಗುಜರನ್ ಮಂಗಳೂರು

“ಬದುಕನ್ನು ಒಮ್ಮೆ ತಿರುಗಿ ನೋಡು”.‌ ಅಂದರೂ ಸಾಕು ಎಲ್ಲವೂ ನೆನಪಾಗಿ ಬಿಡುತ್ತದೆ.ನಾವು ನಡೆದು ಬಂದ ದಾರಿ. ಕಷ್ಟ ಪಟ್ಟ ದಿನಗಳು, ಬದುಕಿನ ಉದ್ದಕ್ಕೂ ಸಹಿಸಿದ ಈ ಸಹನೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳು, ಒಪ್ಪುಗಳು. ನೋವು ನಲಿವುಗಳು. ಅತಿಯಾದ ತುಂಟಾಟ, ತಿಂದ ಏಟುಗಳು, ಗೆಳೆಯರ ಜೊತೆ ಮಾಡಿದ ಜಗಳಗಳು. ತಿನ್ನಲು ಏನು ಇಲ್ಲದಾಗ ಸಹಿಸಿಕೊಂಡ ಹಸಿವು. ಮುಗ್ಧತೆಗೆ ಜೋತುಬಿದ್ದ ಮುಗ್ಧ ಮನಸ್ಸುಗಳು. ಯಾರದ್ದೋ ಕುಹಕ ನೋಟ. ಇನ್ಯಾರದ್ದೋ ಮತ್ಸರದ ಮಾತು. ಬಡತನದ ಬವಣೆ. ಎಲ್ಲವೂ ಬಂದು ಮುತ್ತಿಕೊಂಡು […]

ಪೂಜ ಗುಜರನ್‌ ಅಂಕಣ

“ಸಂಗಾತಿ” ದೇಹಕ್ಕೋ ಮನಸ್ಸಿಗೊ…: ಪೂಜಾ ಗುಜರನ್. ಮಂಗಳೂರು

“ಸಂಗಾತಿ” ಬೇಕಾಗಿರುವುದು ಮನಸ್ಸಿಗೊ ದೇಹಕ್ಕೊ.. ಇದನ್ನು ಅರ್ಥ ಮಾಡಿಕೊಂಡರೆ ಈ ಸಂಗಾತಿ ಅನ್ನುವ ಪದಕ್ಕೊಂದು ಅರ್ಥ ಸಿಗುತ್ತದೆ. ಯಾವಾಗ ನಾವು ಈ ಸಂಗಾತಿಯ ಅನ್ವೇಷಣೆಯನ್ನು ಮಾಡುತ್ತೇವೆ.? ನಮ್ಮ ಮನಸ್ಸು ಒಂಟಿತನದ ಬೇಗೆಯಲ್ಲಿ ಬೇಯುವಾಗ ಮನಸ್ಸಿಗೊಂದು ಆಸರೆಬೇಕು ಅನಿಸುತ್ತದೆ. ನಿಜವಾಗಿಯೂ ಮಾಗಿದ ವಯಸ್ಸು ಬಯಸುವ ಸಂಗಾತಿ ಅದು ದೇಹಕ್ಕಲ್ಲ. ತನ್ನ ಮನಸ್ಸಿಗೆ. ಯಾರು ಇಲ್ಲದಾಗ ತನಗಾಗಿ ಮಿಡಿಯುವ ಆತ್ಮೀಯ ಜೀವವೊಂದು ಬೇಕು ಅನಿಸುತ್ತದೆ. ಕೆಲವರು ಇದನ್ನು ಹೇಳಲಾಗದೆ ಮಾನಸಿಕವಾಗಿ ಕುಗ್ಗುತ್ತಾರೆ. ಬೆಳೆದ ಮಕ್ಕಳು ಅವರವರ ವೈಯಕ್ತಿಕ ಜೀವನದಲ್ಲಿ ಬ್ಯುಸಿ […]

ಪೂಜ ಗುಜರನ್‌ ಅಂಕಣ

ನೋವು ಸಾವಾಗದಿರಲಿ..: ಪೂಜಾ ಗುಜರನ್. ಮಂಗಳೂರು

ಬದುಕು ಒಂದೊಂದು ಸಲ ಹೀಗಾಗಿ ಬಿಡುತ್ತದೆ.. ಯಾರು ಬೇಡ ಏನೂ ಬೇಡ ಹಾಗೇ ಎದ್ದು ಹೋಗಿಬಿಡಬೇಕು. ಯಾರ ಜಂಜಾಟವೂ ಬೇಡ ಅನಿಸುವಷ್ಟು ಬದುಕು ರೋಸಿ ಹೋಗಿರುತ್ತದೆ..ಈ ಯೋಚನೆ ಪ್ರತಿಯೊಬ್ಬನ ಬದುಕಿನಲ್ಲಿಯೂ ಒಂದಲ್ಲ ಒಂದು ದಿನ ಬಂದಿರುತ್ತದೆ. ಕೆಲವರು ಎದ್ದು ಹೋದರೆ ಇನ್ನು ಕೆಲವರು ಯೋಚನೆಯ ಆಯಾಮವನ್ನು ಬದಲಿಸಿ ಸುಮ್ಮನಿರುತ್ತಾರೆ. ಆದರೆ ಎಲ್ಲರ ನಿರ್ಧಾರಗಳು ಬದಲಾಗಿರುವುದಿಲ್ಲ. ಬದಲಿಗೆ ಅವರಿಗೆ ಈ ಬದುಕಲ್ಲಿ ಇನ್ನೇನೂ ಇಲ್ಲ ಅನ್ನುವುದೊಂದೆ ಯೋಚನೆಯಾಗಿರುತ್ತದೆ. ಈ ಯೋಚನೆಯ ಯೋಜನೆಗಳೆಲ್ಲ ಮುಕ್ತಾಯವಾಗುವುದು ಸಾವಿನಲ್ಲಿ. ಅತಿಯಾದ ಖಿನ್ನತೆ ಸಾವಿನ […]

ಪೂಜ ಗುಜರನ್‌ ಅಂಕಣ

ಭಾಷೆ ಭಾರವಾಗದಿರಲಿ: ಪೂಜಾ ಗುಜರನ್ ಮಂಗಳೂರು..

ನಾವಾಡುವ ಭಾಷೆ, ನಮ್ಮ ಹೃದಯದ ಸಂವಹನವನ್ನು ಬೆಸೆಯುವ ಒಂದು ಮಾಧ್ಯಮ. ನಮ್ಮೊಳಗಿನ ನೋವು, ವಿಷಾದ, ಖುಷಿ, ಕೋಪ, ಎಲ್ಲವನ್ನೂ ನಾವು ವ್ಯಕ್ತಪಡಿಸಬೇಕಾದರೆ ಹೃದಯಕ್ಕೆ ಹತ್ತಿರವಾಗುವ ಭಾಷೆ ಬೇಕು. ನಮ್ಮ ಮಾತೃಭಾಷೆ ಯಾವುದೇ ಇರಲಿ. ಅದನ್ನು ಮಾತಾನಾಡುವವರು ಜೊತೆಗೆ ದೊರೆತರಂತೂ ಮನಸ್ಸಿನ ಭಾವನೆಗಳು ಸರಾಗವಾಗಿ ಹರಿಯುತ್ತದೆ. ಆದರೆ ಈಗ ಎಲ್ಲರಿಗೂ ಇಂಗ್ಲಿಷ್ ಮೋಹ. ತಮ್ಮೊಳಗೆ ಹರಿಯುವುದು ಇಂಗ್ಲೀಷ್ ರಕ್ತ ಅನಿಸುವಷ್ಟರ ಮಟ್ಟಿಗೆ ಟಸ್ಸು ಪುಸ್ಸು ಇಂಗ್ಲೀಷ್ ಬಳಕೆಯಾಗುತ್ತದೆ. ಇನ್ನು ಹೆಚ್ಚಿನವರ ಮಾತಿನಲ್ಲಿ ಈ ಇಂಗ್ಲೀಷ್ ಭಾಷೆ ಇನ್ನಷ್ಟು ಬೆರೆತು […]

ಪೂಜ ಗುಜರನ್‌ ಅಂಕಣ

ಹೆಣ್ಣೆಂದರೆ ಶಕ್ತಿ..: ಪೂಜಾ ಗುಜರನ್ ಮಂಗಳೂರು

ಪ್ರತಿ ವರ್ಷವೂ ಹೆಣ್ಣಿನ ಬಗ್ಗೆ ಅವಳ ನೋವು ಸಾಧನೆಯ ಬಗ್ಗೆ ಬರೆಯುವಾಗಲೆಲ್ಲ ಏನೋ ಕಸಿವಿಸಿ. ಯಾರು ಎಷ್ಟೆ ಬರೆದರೂ ಏನೇ ಹೇಳಿದರೂ ಅವಳ ಅಂತರಂಗವನ್ನು ಮುಟ್ಟಲು ಯಾರಿಂದಲೂ ಆಗುವುದಿಲ್ಲ. ಅವಳ ಒಳಗಿರುವ ನೋವು ಅಸಹಾಯಕತೆ ಯಾರ ಕಣ್ಣಿಗೂ ಗೋಚರವಾಗುವುದಿಲ್ಲ. ಯಾಕೆಂದರೆ ಅವಳು ಹೆಣ್ಣು. ಕಲ್ಪನೆಗೂ ಮೀರಿದ ವ್ಯಕ್ತಿತ್ವದವಳು. ಬರೆದರೂ ಮುಗಿಯದಷ್ಟಿದೆ ಹೇಳಿದರೂ ಹೇಳದಷ್ಟು ಬಾಕಿ ಉಳಿಯುತ್ತದೆ. ಹೊಗಳಿಕೆ ತೆಗಳಿಕೆಗಳು ಅವಳಿಗೆ ಸರ್ವೇಸಾಮಾನ್ಯ. ಆದರೂ ಅವಳನ್ನು ವರುಷಕ್ಕೊಮ್ಮೆ ಗುಣಗಾನ ಮಾಡಿ ತೋಚಿದನ್ನು ಗೀಚಿದಾಗ ಒಂದು ದಿನದ ಮಟ್ಟಿಗೆ ಅವಳು […]

ಪೂಜ ಗುಜರನ್‌ ಅಂಕಣ

“ಸಾವು” ಯಾರು ನಿರಾಕರಿಸಲಾಗದ ಸತ್ಯ: ಪೂಜಾ ಗುಜರನ್. ಮಂಗಳೂರು

ಸಾವಿನ ನಂತರ ಏನು? ಸ್ವರ್ಗ, ನರಕ, ಇದೆಲ್ಲ ಇದೆಯಾ? ಇದೆ ಅನ್ನುತ್ತದೆ ಪುರಾಣ. ಪುರಾಣ ಹೇಳುತ್ತದೆ ಸತ್ತ ವ್ಯಕ್ತಿ ಒಳ್ಳೆಯವನು ಆಗಿದ್ದರೆ ಸ್ವರ್ಗಕ್ಕೆ ಹೋಗುತ್ತಾನೆ. ಕೆಟ್ಟವನು ನರಕಕ್ಕೆ ಹೋಗುತ್ತಾನೆ? ಈ ಸ್ವರ್ಗ, ನರಕ,ಪಾಪ, ಪುಣ್ಯ, ಸಾವಿನ ನಂತರ ಏನು? ಇದೆಲ್ಲವನ್ನೂ ನೋಡಿದವರು ಯಾರು? ಸಾವು ಎಂದರೇನು? ಹುಟ್ಟಿದವನು ಸಾಯಲೇಬೇಕೆ? ಇದೆಲ್ಲವನ್ನೂ ಮನುಷ್ಯ ಆಳವಾಗಿ ಚಿಂತಿಸಿ ವಿಮರ್ಶೆ ಮಾಡುತ್ತಾನೆ. ವೇದ ಮಹರ್ಷಿಗಳಿಂದ ಹಿಡಿದು ಜಗತ್ತಿನ ಮೇಧಾವಿಗಳೆಲ್ಲ ಸಾವಿನ ಬಗ್ಗೆ ಅದರ ಅನುಭವದ ಬಗ್ಗೆ ಬರೆದಿದ್ದಾರೆ. ಈ ಭೂಮಿ ಮೇಲಿನ […]