ಝೆನ್-ಸೂಫಿ ಕತೆಗಳು

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜಗತ್ತನ್ನು ಬದಲಾಯಿಸಿ ಸೂಫಿ ಮುಮುಕ್ಷು ಬಯಾಝಿದ್‌ ತನ್ನ ಜೀವನಚರಿತ್ರೆಯಲ್ಲಿ ಇಂತು ಬರೆದಿದ್ದಾನೆ: ನಾನು ಚಿಕ್ಕವಯಸ್ಸಿನವನಾಗಿದ್ದಾಗ ನನ್ನ ಆಲೋಚನೆಗಳ, ದೇವರಿಗೆ ಮಾಡುತ್ತಿದ್ದ ಕೋರಿಕೆಗಳ, ಹಾಗೂ ಎಲ್ಲ ಪ್ರಾರ್ಥನೆಗಳ ತಿರುಳು “ಜಗತ್ತನ್ನು ಬದಲಿಸಲು ಅಗತ್ಯವಾದ ಶಕ್ತಿಯನ್ನು ನನಗೆ ಕೊಡು” ಎಂಬುದಾಗಿತ್ತು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಏನೋ ಒಂದು ಲೋಪ ನನಗೆ ಗೋಚರಿಸುತ್ತಿತ್ತು. ನಾನೊಬ್ಬ ಕ್ರಾಂತಿಕಾರಿಯಾಗಿದ್ದೆ. ಇಡೀ ಪ್ರಪಂಚವನ್ನೇ ಬದಲಿಸುವ ಹಂಬಲ ನನ್ನದಾಗಿತ್ತು. ತುಸು ಪಕ್ವವಾದ ನಂತರ ನನಗನ್ನಿಸುತ್ತಿತ್ತು – ಈ ಬಯಕೆ ತುಸು ಅತಿಯಾಯಿತು. ನನ್ನ ಜೀವನ ನನ್ನ ಕೈ […]

ಝೆನ್-ಸೂಫಿ ಕತೆಗಳು

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಹಂಡೆ ಸತ್ತಿದೆ ಕೋಜಿಯಾ ಒಂದು ದಿನ ಕಂಚುಗಾರನಿಂದ ಹಂಡೆಯೊಂದನ್ನು ಎರವಲು ಪಡೆದು ಮನೆಗೆ ಒಯ್ದನು. ಮರುದಿನ ಅದರೊಳಗೆ ದುಂಡನೆಯ ಪುಟ್ಟ ಬೋಗುಣಿಯೊಂದನ್ನು ಹಾಕಿ ಹಿಂದಿರುಗಿಸಿದ. ಮಾಲಿಕ ಹಂಡೆಯೊಳಗಿದ್ದ ಪುಟ್ಟ ಬೋಗುಣಿಯನ್ನು ತೋರಿಸಿ ಕೇಳಿದ, “ಇದೇನು?” ಅದನ್ನು ನೋಡಿದ ಕೋಜಿಯಾ ಉದ್ಗರಿಸಿದ, “ಇದೇನು? ಹಂಡೆ ಒಂದು ಮರಿ ಹಾಕಿದೆ!”. ಮಾಲಿಕ ಬೋಗುಣಿಯನ್ನೂ ಹಂಡೆಯನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡ. ಇನ್ನೊಂದು ದಿನ ಕೋಜಿಯಾ ಪುನಃ ಹಂಡೆಯನ್ನು ಎರವಲು ಪಡೆದು ಮನೆಗೆ ಒಯ್ದ. ಐದು ದಿನಗಳಾದರೂ ಅದನ್ನು ಕೋಜಿಯಾ ಹಿಂದಿರುಗಿಸದೇ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿನ್ನ ಬಟ್ಟಲನ್ನು ತೊಳೆ ಹೊಸದಾಗಿ ಸಂನ್ಯಾಸತ್ವ ಸ್ವೀಕರಿಸಿದವನೊಬ್ಬ ಗುರು ಜೋಶುವಿನ ಬಳಿಗೆ ಬಂದು ಕೇಳಿದ, “ನಾನು ಈಗ ತಾನೇ ಈ ಆಶ್ರಮಕ್ಕೆ ಸೇರಿದ್ದೇನೆ. ಝೆನ್‌ನ ಮೊದಲನೇ ತತ್ವವನ್ನು ಕಲಿಯಲು ನಾನು ಕಾತುರನಾಗಿದ್ದೇನೆ.” ಜೋಶು ಕೇಳಿದ, “ನಿನ್ನ ಊಟವಾಯಿತೇ?”  ನವಶಿಷ್ಯ ಉತ್ತರಿಸಿದ, “ನನ್ನ ಊಟವಾಯಿತು.” ಜೋಶು ಹೇಳಿದ, “ಸರಿ ಹಾಗದರೆ, ಈಗ ನಿನ್ನ ಬಟ್ಟಲನ್ನು ತೊಳೆ.” ***** ೨. ದಣಿದಾಗ ವಿದ್ಯಾರ್ಥಿಯೊಬ್ಬ ಗುರುವನ್ನು ಕೇಳಿದ, “ಗುರುಗಳೇ, ನಿಜವಾದ ಅರಿವು ಅಂದರೇನು?” ಗುರುಗಳು ಉತ್ತರಿಸಿದರು, “ಹಸಿವಾದಾಗ ಊಟ ಮಾಡು, […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಚಹಾ ಕಪ್‌ಗಳು ಸುಝುಕಿ ರೋಶಿಯನ್ನು ವಿದ್ಯಾರ್ಥಿಯೊಬ್ಬ ಕೇಳಿದ, “ಜಪಾನೀಯರು ಸುಲಭವಾಗಿ ಒಡೆದು ಹೋಗುವಷ್ಟು ತೆಳುವಾಗಿಯೂ ನಾಜೂಕಾಗಿಯೂ ಇರುವಂತೆ ತಮ್ಮ ಚಹಾ ಕಪ್‌ಗಳನ್ನೇಕೆ ತಯಾರಿಸುತ್ತಾರೆ?”  ರೋಶಿ ಉತ್ತಿರಿಸಿದರು, “ಅವು ಅತೀ ನಾಜೂಕಾಗಿವೆ ಅನ್ನುವುದು ವಿಷಯವಲ್ಲ. ಅವನ್ನು ಸರಿಯಾಗಿ ಬಳಕೆ ಮಾಡುವುದು ಹೇಗೆಂಬುದು ನಿನಗೆ ತಿಳಿದಿಲ್ಲ ಅನ್ನುವುದು ವಿಷಯ. ನೀನು ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕೇ ವಿನಾ ಪರಿಸರ ನಿನ್ನೊಂದಿಗೆ ಅಲ್ಲ.” ***** ೨. ಹಂಗಾಮಿ ಅತಿಥಿ ಖ್ಯಾತ ಆಧ್ಯಾತ್ಮಿಕ ಗುರುವೊಬ್ಬ ರಾಜನ ಅರಮನೆಯ ಮುಂದಿನ ಮಹಾದ್ವಾರದ ಬಳಿಗೆ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಆತ್ಮಸಂಯಮ (Self-control) ಇಡೀ ಝೆನ್‌ ದೇವಾಲಯ ಅಲುಗಾಡುವಷ್ಟು ತೀವ್ರತೆಯ ಭೂಕಂಪ ಒಂದು ದಿನ ಆಯಿತು. ಅದರ ಕೆಲವು ಭಾಗಗಳು ಕುಸಿದೂ ಬಿದ್ದವು. ಅನೇಕ ಸನ್ಯಾಸಿಗಳು ಭಯಗ್ರಸ್ತರಾಗಿದ್ದರು. ಭೂಕಂಪನ ನಿಂತಾಗ ಗುರುಗಳು ಹೇಳಿದರು, “ಅಪಾಯ ಕಾಲದಲ್ಲಿ ಝೆನ್ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದನ್ನು ನೋಡುವ ಅವಕಾಶ ನಿಮಗೆ ಈಗ ದೊರಕಿತು. ಆತುರದ ವ್ಯವಹಾರಕ್ಕೆ ಎಡೆ ಕೊಡುವ ತೀವ್ರ ಭಯ ನನ್ನನ್ನು ಬಾಧಿಸಲಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ದೇವಾಲಯದ ಅತ್ಯಂತ ಗಟ್ಟಿಮುಟ್ಟಾದ ಭಾಗವಾಗಿರುವ ಅಡುಗೆಮನೆಗೆ ನಿಮ್ಮೆಲ್ಲರನ್ನು ನಾನು ಕರೆದೊಯ್ದೆ. […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಇನ್ನೇನೂ ಪ್ರಶ್ನೆಗಳಿಲ್ಲ. ಸಾಮಾಜಿಕ ಸಮಾರಂಭವೊಂದರಲ್ಲಿ ಝೆನ್‌ ಗುರುವನ್ನು ಸಂಧಿಸಿದ ಮನೋವೈದ್ಯನೊಬ್ಬ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯೊಂದನ್ನು ಕೇಳಲು ತೀರ್ಮಾನಿಸಿದ. “ನಿಜವಾಗಿ ನೀವು ಜನರಿಗೆ ಹೇಗೆ ಸಹಾಯ ಮಾಡುತ್ತೀರಿ?” ವಿಚಾರಿಸಿದ ಮನೋವೈದ್ಯ. “ಇನ್ನೇನೂ ಪ್ರಶ್ನೆಗಳನ್ನು ಕೇಳಲಾಗದ ಸ್ಥಿತಿಗೆ ಅವರನ್ನು ಕೊಂಡೊಯ್ಯುತ್ತೇನೆ,” ಉತ್ತರಿಸಿದರು ಝೆನ್‌ ಗುರುಗಳು. ***** ೨. ಸ್ವರ್ಗ. ಮರುಭೂಮಿಯಲ್ಲಿ ಇಬ್ಬರು ದಾರಿ ತಪ್ಪಿ ಅಸಹಾಯಕರಗಿದ್ದಾರೆ. ಹಸಿವು ಮತ್ತು ಬಾಯಾರಿಕೆಯಿಂದ ಶಯುವಂತಾಗಿದ್ದಾರೆ. ಕೊನೆಗೆ ಅವರು ಅತೀ ಎತ್ತರವಾಗಿದ್ದ ಗೋಡೆಯೊಂದರ ಸಮೀಪಕ್ಕೆ ಬರುತ್ತಾರೆ. ಗೋಡೆಯ ಆಚೆ ಬದಿಯಲ್ಲಿ ಜಲಪಾತದ ಸದ್ದು […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೀನಿನ ಕುರಿತು ತಿಳಿಯುವುದು. ಚುಆಂಗ್‌ ಝು ಒಂದು ದಿನ ತನ್ನ ಮಿತ್ರನೊಂದಿಗೆ ನದೀ ತಟದಲ್ಲಿ ನಡೆದುಕೊಂಡು ಹೋಗುತ್ತಿದ್ದರು.  ಚುಆಂಗ್‌ ಝು ತನ್ನ ಮಿತ್ರನಿಗೆ ಹೇಳಿದ, “ಮೀನುಗಳು ಈಜಾಡುತ್ತಿರುವುದನ್ನು ನೋಡು. ಅವು ಅದರಿಂದ ನಿಜವಾಗಿಯೂ ಸುಖಿಸುತ್ತಿವೆ.” “ನೀನು ಮೀನಲ್ಲವಲ್ಲ, ಆದ್ದರಿಂದ ಅವು ಸುಖಿಸುತ್ತಿವೆಯೋ ಇಲ್ಲವೋ ಎಂಬುದನ್ನು ನೀನು ನಿಜವಾಗಿಯೂ ತಿಳಿಯಲು ಸಾಧ್ಯವಿಲ್ಲ,” ಪ್ರತಿಕ್ರಿಯಿಸಿದ ಆ ಮಿತ್ರ. ಚುಆಂಗ್‌ ಝು ಹೇಳಿದ, “ನೀನು ನಾನಲ್ಲ. ಅಂದ ಮೇಲೆ ಮೀನುಗಳು ಸುಖಿಸುತ್ತಿವೆ ಎಂಬುದು ನನಗೆ ತಿಳಿದಿಲ್ಲ  ಎಂಬುದು ನಿನಗೆ ಹೇಗೆ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಹಾತ್ಮ ಪರ್ವತದ ತುದಿಯಲ್ಲಿ ಇರುವ ಪುಟ್ಟ ಮನೆಯಲ್ಲಿ ವಿವೇಕಿಯಾದ ಮಹಾತ್ಮನೊಬ್ಬ ವಾಸಿಸುತ್ತಿದ್ದಾನೆ ಎಂಬ ಸುದ್ದಿ ಗ್ರಾಮಾಂತರ ಪ್ರದೇಶದಲ್ಲಿ ಹರಡಿತು.  ಹಳ್ಳಿಯ ನಿವಾಸಿಯೊಬ್ಬ ಸುದೀರ್ಘವೂ ಕಠಿಣವೂ ಆದ ಪ್ರಯಾಣ ಮಾಡಿ ಅವನನ್ನು ಭೇಟಿಯಾಗಲು ನಿರ್ಧರಿಸಿದ. ಆ ಮನೆಯನ್ನು ಅವನು ತಲುಪಿದಾಗ ಒಳಗಿದ್ದ ವೃದ್ಧ ಸೇವಕನೊಬ್ಬ ಬಾಗಿಲಿನಲ್ಲಿ ತನ್ನನ್ನು ಸ್ವಾಗತಿಸಿದ್ದನ್ನು ಗಮನಿಸಿದ. ಅವನು ಸೇವಕನಿಗೆ ಹೇಳಿದ, “ವಿವೇಕಿಯಾದ ಮಹಾತ್ಮನನ್ನು ನಾನು ನೋಡಬಯಸುತ್ತೇನೆ.” ಸೇವಕ ನಸುನಕ್ಕು ಅವನನ್ನು ಮನೆಯೊಳಕ್ಕೆ ಕರೆದೊಯ್ದ. ಮನೆಯಲ್ಲಿ ಕೋಣೆಯಿಂದ ಕೋಣೆಗೆ ಹೋಗುತ್ತಿರುವಾಗ ಮಹಾತ್ಮನನ್ನು ಸಂಧಿಸುವ ನಿರೀಕ್ಷೆಯಿಂದ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜ್ಞಾನೋದಯವಾದವ ಯುವ ಸನ್ಯಾಸಿಯೊಬ್ಬ ಜ್ಞಾನೋದಯದ ಅತ್ಯುನ್ನತ ಮಟ್ಟವನ್ನು ತಲುಪಿದ್ದಾನೆಂದು ಗುರುಗಳು ಒಂದು ದಿನ ಘೋಷಿಸಿದರು. ಈ ವಾರ್ತೆ ಸಂಭ್ರಮಕ್ಕೆ ಕಾರಣವಾಯಿತು. ಯುವ ಸನ್ಯಾಸಿಯನ್ನು ನೋಡಲು ಕೆಲವು ಸನ್ಯಾಸಿಗಳು ಹೋದರು. “ನಿನಗೆ ಜ್ಞಾನೋದಯವಾಗಿದೆ ಎಂಬ ಸುದ್ದಿ ಕೇಳಿದೆವು. ಅದು ನಿಜವೇ?” ಕೇಳಿದರು ಸನ್ಯಾಸಿಗಳು. “ಅದು ನಿಜ,” ಉತ್ತರಿಸಿದ ಯುವ ಸಂನ್ಯಾಸಿ. “ಈಗ ನೀನು ಹೇಗಿರುವೆ?” ವಿಚಾರಿಸಿದರು ಸಂನ್ಯಾಸಿಗಳು. “ಎಂದಿನಂತೆ ದುಃಖಾರ್ತ,” ಪ್ರತಿಕ್ರಿಯಿಸಿದ ಯುವ ಸಂನ್ಯಾಸಿ ***** ೨. ಸಭ್ಯಾಚಾರ ಒಂದು ದಿನ ಆ ಪ್ರಾಂತ್ಯದ ಆಡಳಿತದ ಜವಾಬ್ದಾರಿ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಎರಡು ಮೊಲಗಳ ಬೆನ್ನಟ್ಟಿ ಹೋಗುವುದು.  ಕದನ ಕಲೆಗಳ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಾಪಕನನ್ನು ಸಮೀಪಿಸಿ ಕೇಳಿದ: “ಕದನ ಕಲೆಗಳ ಕುರಿತಾದ ನನ್ನ ಜ್ಞಾನವನ್ನು ಇನ್ನೂ ಉತ್ತಮಗೊಳಿಸಿಕೊಳ್ಳು ಬಯಕೆ ನನ್ನದು. ನಿಮ್ಮಿಂದ ಕಲಿಯುವುದರ ಜೊತೆಯಲ್ಲಿ ಇನ್ನೊಂದು ಶೈಲಿಯನ್ನು ಇನ್ನೊಬ್ಬ ಅಧ್ಯಾಪಕರಿಂದ ಕಲಿಯಬೇಕೆಂದಿದ್ದೇನೆ. ಈ ನನ್ನ ಆಲೋಚನೆಯ ಕುರಿತು ನಿಮ್ಮ ಅನಿಸಿಕೆ ಏನು?” ಗುರುಗಳು ಉತ್ತರಿಸಿದರು: “ ಎರಡು ಮೊಲಗಳ ಬೆನ್ನಟ್ಟಿ ಹೋಗುವ ಬೇಟೆಗಾರ ಯಾವುದೊಂದನ್ನೂ ಹಿಡಿಯುವುದಿಲ್ಲ.” ***** ೨. ಏಕಾಗ್ರತೆ ಬಿಲ್ಲುಗಾರಿಕೆಯ ಅನೇಕ ಸ್ಪರ್ಧೆಗಳಲ್ಲಿ ಗೆದ್ದು ಸರ್ವವಿಜೇತನಾಗಿದ್ದ ಯುವ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಅತೀ ಪ್ರೀತಿ ಸುದೀರ್ಘಕಾಲ ಕ್ರಿಯಾಶೀಲ ಜೀವನ ನಡೆಸಿದ್ದ ವಯಸ್ಸಾದ ಸನ್ಯಾಸಿಯೊಬ್ಬನನ್ನು ಬಾಲಕಿಯರ ಶಿಕ್ಷಣ ಕೇಂದ್ರದಲ್ಲಿ ಪ್ರಾರ್ಥನಾ ಮಂದಿರದ ಪಾದ್ರಿಯಾಗಿ ನೇಮಿಸಲಾಯಿತು. ಚರ್ಚಾಗೋಷ್ಟಿಗಳಲ್ಲಿ ಆಗಾಗ್ಗೆ ಪ್ರೀತಿ, ಪ್ರೇಮ ಪ್ರಮುಖ ವಿಷಯವಾಗಿರುತ್ತಿದ್ದದ್ದನ್ನು ಆತ ಗಮನಿಸಿದ. ಯುವತಿಯರಿಗೆ ಈ ಕುರಿತಾದ ಅವನ ಎಚ್ಚರಿಕೆ ಇಂತಿತ್ತು: “ನಿಮ್ಮ ಜೀವನದಲ್ಲಿ ಯಾವುದೇ ಆಗಿರಲಿ ಅತಿಯಾಗುವುದರ ಅಪಾಯವನ್ನು ತಿಳಿಯಿರಿ. ಅತಿಯಾದ ಕೋಪ ಕಾಳಗದಲ್ಲಿ ಭಂಡಧೈರ್ಯಕ್ಕೆ ಕಾರಣವಾಗಿ ಸಾವಿನಲ್ಲಿ ಅಂತ್ಯಗೊಳ್ಳಬಹುದು. ಮತೀಯ ನಂಬಿಕೆಗಳಲ್ಲಿ ಅತಿಯಾದ ವಿಶ್ವಾಸ ಮುಚ್ಚಿದ ಮನಸ್ಸು ಮತ್ತು ಕಿರುಕುಳ ಕೊಡುವಿಕೆಗೆ ಕಾರಣವಾಗಬಹುದು. ಅತಿಯಾದ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಅಂಟಿಕೊಳ್ಳದಿರುವಿಕೆ (Non-attachment) ಐಹೈ ದೇವಾಲಯದ ಅಧಿಪತಿ ಕಿಟಾನೋ ಗೆಂಪೊ ೧೯೩೩ ರಲ್ಲಿ ವಿಧಿವಶನಾದಾಗ ೯೨ ವರ್ಷ ವಯಸ್ಸು ಆಗಿತ್ತು. ಯಾವುದಕ್ಕೂ ಅಂಟಿಕೊಳ್ಳದಿರಲು ತನ್ನ ಜೀವನದುದ್ದಕ್ಕೂ ಆತ ಪ್ರಯತ್ನಿಸಿದ್ದ. ೨೦ ವರ್ಷ ವಯಸ್ಸಿನ ಅಲೆಮಾರಿ ಬೈರಾಗಿಯಾಗಿದ್ದಾಗ ತಂಬಾಕಿನ ಧೂಮಪಾನ ಮಾಡುತ್ತಿದ್ದ ಯಾತ್ರಿಕನೊಬ್ಬನನ್ನು ಸಂಧಿಸಿದ್ದ. ಒಂದು ಪರ್ವತಮಾರ್ಗದಲ್ಲಿ ಅವರೀರ್ವರೂ ಜೊತೆಯಾಗಿ ಕೆಳಕ್ಕೆ ಇಳಿಯುತ್ತಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲೋಸುಗ ಒಂದು ಮರದ ಕೆಳಗೆ ಕುಳಿತರು. ಯಾತ್ರಿಕ ಧೂಮಪಾನ ಮಢಲೋಸುಗ ತಂಬಾಕನ್ನು ಕಿಟಾನೋಗೆ ನೀಡಿದ. ಆ ಸಮಯದಲ್ಲಿ ತುಂಬಾ ಹಸಿದಿದ್ದ ಕಿಟಾನೋ ಅದನ್ನು […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಸುಧಾರಣೆ ರ್ಯೋಕಾನ್‌ ಝೆನ್‌ ಅಧ್ಯಯನಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಟ್ಟಿದ್ದವನು. ಬಂಧುಗಳು ಎಷ್ಟೇ ಎಚ್ಚರಿಕೆ ನೀಡಿದರೂ ತನ್ನ ಸಹೋದರನ ಮಗ ತನ್ನ ಹಣವನ್ನು ವೇಶ್ಯೆಯೊಬ್ಬಳಿಗಾಗಿ ವ್ಯಯಿಸುತ್ತಿದ್ದಾನೆ ಎಂಬ ವಿಷಯ ಅವನಿಗೆ ತಿಳಿಯಿತು. ಕುಟುಂಬದ ಆಸ್ತಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ರ್ಯೋಕಾನ್‌ನ ಅನುಪಸ್ಥಿತಿಯಲ್ಲಿ ಅವನು ಹೊತ್ತುಕೊಂಡಿದ್ದನಾದ್ದರಿಂದ ಸೊತ್ತು ಸಂಪೂರ್ಣವಾಗಿ ಕರಗುವ ಅಪಾಯ ಎದುರಾಗಿತ್ತು. ಈ ಕುರಿತು ಏನಾದರೂ ಮಾಡುವಂತೆ ರ್ಯೋಕಾನ್‌ಅನ್ನು ಬಂಧುಗಳು ಕೋರಿದರು. ಅನೇಕ ವರ್ಷಗಳಿಂದ ನೋಡದೇ ಇದ್ದ ಸಹೋದರನ ಮಗನನ್ನು ಭೇಟಿ ಮಾಡಲು ರ್ಯೋಕಾನ್‌ ಬಹು ದೂರ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಮಾರ್ಗ ನಿನಕಾವಾ ಸಾಯುವುದಕ್ಕೆ ತುಸು ಮುನ್ನ ಝೆನ್‌ ಗುರು ಇಕ್ಕ್ಯು ಅವನನ್ನು ಭೇಟಿ ಮಾಡಿದ. “ನಾನು ನಿನಗೆ ದಾರಿ ತೋರಿಸಲೇನು?” ಕೇಳಿದ ಇಕ್ಕ್ಯು. ನಿನಕಾವಾ ಉತ್ತರಿಸಿದ: “ನಾನು ಇಲ್ಲಿಗೆ ಒಬ್ಬನೇ ಬಂದೆ ಮತ್ತು ಒಬ್ಬನೇ ಹೋಗುತ್ತೇನೆ. ನೀನು ನನಗೆ ಏನು ಸಹಾಯ ಮಾಡಬಲ್ಲೆ?” ಇಕ್ಕ್ಯು ಉತ್ತರಿಸಿದ: “ ನಿಜವಾಗಿಯೂ ನೀನು ಬಂದಿದ್ದೇನೆ ಮತ್ತು ಹೋಗುತ್ತೇನೆ ಎಂಬುದಾಗಿ ಆಲೋಚಿಸುತ್ತಿರುವೆಯಾದರೆ ಅದು ನಿನ್ನ ಭ್ರಮೆ. ಬರುವಿಕೆ ಮತ್ತು ಹೋಗುವಿಕೆ ಇಲ್ಲದೇ ಇರುವ ದಾರಿಯನ್ನು ತೋರಿಸಲು ನನಗೆ ಅವಕಾಶ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಹಾಪ್ರಭುವಿನ ಮಕ್ಕಳು ಚಕ್ರವರ್ತಿಯ ಖಾಸಾ ಶಿಕ್ಷಕನಾಗಿದ್ದವನು ಯಾಮಾಓಕ. ಅವನು ಕತ್ತಿವರಿಸೆ ನಿಪುಣನೂ ಝೆನ್‌ನ ಗಂಭೀರವಾದ ವಿದ್ಯಾರ್ಥಿಯೂ ಆಗಿದ್ದ. ಅವನ ಮನೆಯೋ ಶುದ್ಧ ನಿಷ್ಪ್ರಯೋಜಕರಾಗಿ ಅಂಡಲೆಯುವವರ ಬೀಡಾಗಿತ್ತು. ಅವನ ಹತ್ತಿರ ಕೇವಲ ಒಂದು ಜೊತೆ ಉಡುಪುಗಳಿದ್ದವು, ಏಕೆಂದರೆ ಅಂಡಲೆಯುವವರು ಅವನನ್ನು ಯಾವಾಗಲೂ ಬಡತನದಲ್ಲಿಯೇ ಇರಿಸುತ್ತಿದ್ದರು. ಯಾಮಾಓಕನ ಉಡುಪು ಬಲು ಜೀರ್ಣವಾಗಿರುವುದನ್ನು ಗಮನಿಸಿದ ಚಕ್ರವರ್ತಿಯು ಹೊಸ ಉಡುಪುಗಳನ್ನು ಖರೀದಿಸಲು ಸ್ವಲ್ಪ ಹಣ ಕೊಟ್ಟನು. ಮುಂದಿನ ಸಲ ಚಕ್ರವರ್ತಿಯ ಬಳಿ ಬಂದಾಗಲೂ ಯಾಕಾಓಮ ಹಿಂದಿನ ಜೀರ್ಣವಾದ ಉಡುಪುಗಳಲ್ಲಿಯೇ ಇದ್ದನು. “ಹೊಸ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಭೂತವೊಂದರ ನಿಗ್ರಹ ಚಿಕ್ಕ ವಯಸ್ಸಿನ ಪತ್ನಿಯೊಬ್ಬಳು ರೋಗಪೀಡಿತಳಾಗಿ ಸಾಯುವ ಹಂತ ತಲುಪಿದ್ದಳು. ಅವಳು ತನ್ನ ಪತಿಗೆ ಇಂತೆಂದಳು: “ನಾನು ನಿನ್ನನ್ನು ಬಹುವಾಗಿ ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಹೋಗಲು ನಾನು ಬಯಸುವುದಿಲ್ಲ. ನನ್ನ ನಂತರ ಬೇರೆ ಯಾವ ಹೆಂಗಸಿನ ಹತ್ತಿರವೂ ಹೋಗಬೇಡ. ಹಾಗೇನಾದರೂ ಹೋದರೆ ನಾನು ಭೂತವಾಗಿ ಹಿಂದಿರುಗಿ ನಿನ್ನ ಅಂತ್ಯವಿಲ್ಲದ ತೊಂದರೆಗಳಿಗೆ ಕಾರಣಳಾಗುತ್ತೇನೆ.” ಇದಾದ ನಂತರ ಅನತಿಕಾಲದಲ್ಲಿಯೇ ಆಕೆ ಸತ್ತಳು. ತದನಂತರದ ಮೊದಲ ಮೂರು ತಿಂಗಳ ಕಾಲ ಅವಳ ಇಚ್ಛೆಯನ್ನು ಪತಿ ಗೌರವಿಸಿದನಾದರೂ ಆನಂತರ ಸಂಧಿಸಿದ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಶಿಷ್ಯನಾದ ಕಳ್ಳ ಒಂದು ಸಂಜೆ ಶಿಚಿರಿ ಕೋಜುನ್‌ ಶ್ಲೋಕಗಳನ್ನು ಪಠಿಸುತ್ತಿದ್ದಾಗ ಹರಿತವಾದ ಖಡ್ಗಧಾರೀ ಕಳ್ಳನೊಬ್ಬ ಒಳಕ್ಕೆ ಪ್ರವೇಶಿಸಿ ಹಣ ಅಥವ ಪ್ರಾಣ ಎರಡರಲ್ಲೊಂದು ನೀಡಬೇಕೆಂಬ ಒತ್ತಾಯಪೂರ್ವಕ ಬೇಡಿಕೆ ಮುಂದಿಟ್ಟ. ಶಿಚಿರಿ ಅವನಿಗೆ ಇಂತು ಹೇಳಿದ: “ನನ್ನ ನೆಮ್ಮದಿ ಕೆಡಿಸಬೇಡ. ಆ ಪೆಠಾರಿಯ ಒಳಗೆ ಹಣವಿದೆ, ನೋಡು.” ಆನಂತರ ಅವನು ಪಠನವನ್ನು ಮುಂದಿವರಿಸಿದ. ತುಸು ಸಮಯದ ನಂತರ ಪಠನ ನಿಲ್ಲಿಸಿ ಕರೆದು ಇಂತು ಹೇಳಿದ: “ಅಲ್ಲಿರುವುದೆಲ್ಲವನ್ನೂ ತೆಗೆದುಕೊಳ್ಳ ಬೇಡ. ನಾಳೆ ತೆರಿಗೆ ಕಟ್ಟಲೋಸುಗ ನನಗೆ ಸ್ವಲ್ಪ ಹಣ […]

ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಪ್ರತಿಯೊಂದು ಕ್ಷಣವೂ ಝೆನ್‌ ಝೆನ್‌ ವಿದ್ಯಾರ್ಥಿಗಳು ತಾವು ಇತರರಿಗೆ ಬೋಧಿಸುವ ಮುನ್ನ ತಮ್ಮ ಗುರುಗಳೊಂದಿಗೆ ಕನಿಷ್ಠ ಎರಡು ವರ್ಷ ಕಾಲ ತರಬೇತಿ ಪಡೆಯಬೇಕಿತ್ತು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಬೋಧಕನಾಗಿದ್ದ ಟೆನ್ನೋ ಗುರು ನ್ಯಾನ್‌-ಇನ್ ಅನ್ನು ಭೇಟಿ ಮಾಡಿದ. ಆ ದಿನ ಮಳೆ ಬರುತ್ತಿತ್ತು, ಟೆನ್ನೋ ಮರದ ಚಡಾವುಗಳನ್ನು ಹಾಕಿದ್ದ ಮತ್ತು ಛತ್ರಿಯನ್ನೂ ಒಯ್ದಿದ್ದ. ಕುಶಲ ಪ್ರಶ್ನೆ ಮಾಡಿದ ನಂತರ ನ್ಯಾನ್‌-ಇನ್ ಹೇಳಿದ: “ನೀನು ನಿನ್ನ ಮರದ ಚಡಾವುಗಳನ್ನು ಮುಖಮಂಟಪದಲ್ಲಿ ಬಿಟ್ಟಿರುವೆ ಎಂಬುದಾಗಿ ಭಾವಿಸುತ್ತೇನೆ. ನಿನ್ನ ಛತ್ರಿಯು […]

ಝೆನ್-ಸೂಫಿ ಕತೆಗಳು

ಝೆನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ಪುಷ್ಪ ವೃಷ್ಟಿ ಸುಭೂತಿ ಬುದ್ಧನ ಶಿಷ್ಯನಾಗಿದ್ದ. ಶೂನ್ಯತೆಯ ಶಕ್ತಿಯನ್ನು ತಿಳಿಯುವುದರಲ್ಲಿ ಆತ ಯಶಸ್ವಿಯಾಗಿದ್ದ. ವ್ಯಕ್ತಿನಿಷ್ಠತೆ ಮತ್ತು ವಿಷಯನಿಷ್ಠತೆಗಳೊಂದಿಗೆ ಶೂನ್ಯತೆಗೆ ಇರುವ ಸಂಬಂಧದ ಹೊರತಾಗಿ ಏನೂ ಅಸ್ಥಿತ್ವದಲ್ಲಿ ಇಲ್ಲ ಅನ್ನುವ ದೃಷ್ಟಿಕೋನ ಇದು. ಒಂದು ದಿನ ಮಹೋನ್ನತ ಶೂನ್ಯತೆಯ ಚಿತ್ತಸ್ಥಿತಿಯಲ್ಲಿ ಸುಭೂತಿ ಒಂದು ಮರದ ಕೆಳಗೆ ಕುಳಿತಿದ್ದ. ಅವನ ಸುತ್ತಲೂ ಹೂವುಗಳು ಬೀಳಲಾರಂಭಿಸಿದವು. “ಶೂನ್ಯತೆಯ ಕುರಿತಾದ ನಿನ್ನ ಪ್ರವಚನಕ್ಕಾಗಿ ನಾವು ನಿನ್ನನ್ನು ಶ್ಲಾಘಿಸುತ್ತಿದ್ದೇವೆ” ಎಂಬುದಾಗಿ ಪಿಸುಗುಟ್ಟಿದರು ದೇವತೆಗಳು. “ಶೂನ್ಯತೆಯ ಕುರಿತಾಗಿ ನಾನು ಮಾತನಾಡಿಯೇ ಇಲ್ಲ” ಪ್ರತಿಕ್ರಿಯಿಸಿದ ಸುಭೂತಿ. “ನೀನು […]