ಕೆಂಗುಲಾಬಿ (ಭಾಗ 7): ಹನುಮಂತ ಹಾಲಿಗೇರಿ

ಹಾವೇರಿಯ ಸಂವರ್ಧನ ಎನ್‍ಜಿಓದಲ್ಲಿ ನನಗೆ ತರಬೇತಿಯಾದ ಮೇಲೆ ಹಾವೇರಿ ಮೂಲೆಯೊಂದರಲ್ಲಿರುವ ಹಳ್ಳಿಯ ಸ್ವಸಹಾಯ ಸಂಘಗಳ ಸಮುದಾಯ ಅಧಿಕಾರಿ ಎಂದು ಕಳುಹಿಸಿಕೊಟ್ಟಿದ್ದರು. ನಾನು ಹಲಗೇರಿಗೆ ಬಂದಿಳಿದಾಗ ನನ್ನನ್ನು ಆ ಸುಡು ಬಿಸಿಲಿನಲ್ಲಿ ಎದುರುಗೊಂಡವನು ತಿಪ್ಪೇಶಿ. ಅವನು ಅಲ್ಲಿ ನನಗೆ ಆ ಹಳ್ಳಿಯ ಮಾಹಿತಿ ನೀಡುವ ಫೀಲ್ಡ್ ಗೈಡ್ ಆಗಿ ಕೆಲಸ ಮಾಡತಿದ್ದ. ನಮ್ಮ ಸಂಸ್ಥೆ ಕೆಲಸ ಮಾಡುವ ಪ್ರತಿ ಹಳ್ಳಿಯಿಂದಲೂ ತಿಪ್ಪೇಶಿಯಂತಹ ಒಬ್ಬರನ್ನು ಸಂಘಗಳ ಅಧಿಕಾರಿ ಎಂದು ನೇಮಿಸಿಕೊಂಡಿರುತ್ತಿದ್ದರು. ತಿಪ್ಪೇಶಿ ಹೊರಲಾರದಂತಹ ನನ್ನ ಎರಡು ಬ್ಯಾಗುಗಳನ್ನು ಹೆಗಲಿಗೆ ನೇತು … Read more

ಕೆಂಗುಲಾಬಿ (ಭಾಗ 6): ಹನುಮಂತ ಹಾಲಿಗೇರಿ

[ಇಲ್ಲಿಯವರೆಗೆ…] ಈ ಎಲ್ಲ ವಿವರಗಳನ್ನು ಸವಿವರವಾಗಿ ಬರೆದುಕೊಂಡು ನಾನು ರಾಜನ್ ಸರ್ ಚೇಂಬರಿಗೆ ಹೋದೆ. ನನ್ನ ವರದಿ ಮೇಲೆ ಸುಮ್ಮನೆ ಒಮ್ಮೆ ಕಣ್ಣಾಡಿಸಿದ ಅವರು ನನ್ನ ಕಡೆ ಒಂದು ಮೆಚ್ಚುಗೆಯ ನೋಟ ಬೀರಿ, ’ವೆರಿ ಗುಡ್ ಮಲ್ಲೇಶಿ. ಆದ್ರೆ, ನೀನು ಈ ದಂದೆಯ ಬಗ್ಗೆ ಇನ್ನಷ್ಟು ತಿಳಕೊಬೇಕಾದರೆ ಒಂದಿಷ್ಟು ದಂದೆಯಲ್ಲಿದ್ದ ಮಹಿಳೆಯರನ್ನು ಮಾತಾಡಿಸಬೇಕಿತ್ತು’ ಎಂದು ನನ್ನ ಕಣ್ಣುಗಳನ್ನು ಕೆಣಕಿದರು. ’ನಾನು ಮಾತಾಡಿಸಬೇಕೆಂದೇ ಆ ನಡು ವಯಸ್ಸಿನವಳ ಹಿಂದ್ಹಿಂದೆ ಹೋಗಿ ಆಟೊ ಹತ್ತಿದ್ದು ಸರ್. ಆದ್ರೆ, ನ್ನನ್ನು ಅವರು … Read more

ಕೆಂಗುಲಾಬಿ (ಭಾಗ 5): ಹನುಮಂತ ಹಾಲಿಗೇರಿ

ಹುಬ್ಬಳ್ಳಿಯೊಳಗ ಮಂಡೇ ಬಜಾರಕ ದೊಡ್ಡ ಹೆಸರು. ಅವತ್ತು ಸೋಮವಾರವಾದ್ದರಿಂದ ಮಂಡೇ ಬಜಾರ್‌ನತ್ತ ಹೆಜ್ಜೆ ಬೆಳೆಸಿದೆ. ಇಲ್ಲಿ ೧೦ ರೂ.ಗಳಿಗೆ ಏನಿಲ್ಲ, ಏನುಂಟು. ಒಂದೊಳ್ಳೆಯ ಅಂಗಿ, ಹವಾಯಿ ಚಪ್ಪಲಿ, ಲುಂಗಿ, ಟವೆಲ್ಲು, ಒಳ ಉಡುಪು, ಬಾಂಡೆ ಸಾಮಾನುಗಳು ಏನೆಲ್ಲವನ್ನು ಖರೀದಿಸಬಹುದು. ಆದರೆ ಇವೆಲ್ಲ ಸೆಕೆಂಡ್ ಹ್ಯಾಂಡ್‌ಗಳು, ನಿಜವಾಗಿ ಹೇಳಬೇಕೆಂದರೆ ಜಾತ್ಯತೀತತೆ ಆಚರಣೆಗೆ ಮಂಡೆ ಬಜಾರ್ ಒಂದು ಸಂಕೇತವಿದ್ದಂತೆ. ಇಲ್ಲಿನ ಒಳ ಉಡುಪುಗಳನ್ನು ಮೊದಲ್ಯಾರೋ ಧರಿಸಿರತಾರೆ. ಈಗ ಅದು ಮತ್ಯಾರ ಮೈಗೋ ಅದು ಅಂಟಿಕೊಂಡು ಅವರ ಬೆವರು ವಾಸನೆಗೆ ಹೊಂದಿಕೊಳ್ಳುತ್ತದೆ. … Read more

ಕೆಂಗುಲಾಬಿ (ಭಾಗ 4): ಹನುಮಂತ ಹಾಲಿಗೇರಿ

(ಹಿಂದಿನ ಭಾಗ ಇಲ್ಲಿದೆ) ಅವತ್ತು ಉಜ್ಜಳಪ್ಪನ ಜಾತ್ರಿ ಈ ಮೊದಲಿನಂಗ ಅದ್ದೂರಿಯಾಗಿಯ ನಡೆದಿತ್ತು. ಸುತ್ತು ಊರು ಕೇರಿಯವರೆಲ್ಲ ಸೇರಿದ್ದರು. ದೇವರಿಗೆ ಬಿಡುವ ಹುಡುಗಿರನ್ನು ಉಜ್ಜಳಪ್ಪನ ಮುತ್ಯಾನ ಗುಡಿಯೊಳಗ ಇರೋ ಅಂತಪುರಕ್ಕೆ ಹೋಗಿ ಅಲ್ಲಿ ಹುಡುಗಿಯರ ಗುಪ್ತಾಂಗವನ್ನು ಗಾಯಗೊಳಿಸುವ ಪದ್ದತಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಲವು ಪ್ರತಿಭಟನಾಕಾರರ ಪ್ರಯತ್ನದಿಂದಾಗಿ ನಿಂತಿತ್ತಾದರೂ ಹುಡುಗಿಯರನ್ನು ದೇವರಿಗೆ ಬಿಡೋದು ಮತ್ತು ಪ್ರಾಣಿಗಳನ್ನು ಬಲಿ ಕೊಡೋದು ಇನ್ನು ಮುಂದುವರೆದಿತ್ತು. ಅಂದು ಉಜ್ಜಳಪ್ಪನ ಅಣ್ಣ ತಮ್ಮಂದಿರು ಸಂಬಂಧಿಕ ದೇವರುಗಳನ್ನು ಸುತ್ತಲಿನ ಹಳ್ಳಿಯ ಭಕ್ತರು ಪಲ್ಲಕ್ಕಿಗಳಲ್ಲಿ ಹೊತ್ತು ತಂದಿದ್ದರು. … Read more

ಕೆಂಗುಲಾಬಿ (ಭಾಗ 3): ಹನುಮಂತ ಹಾಲಿಗೇರಿ

(ಹಿಂದಿನ ಭಾಗ ಇಲ್ಲಿದೆ) ಶಾಲೆಯಲ್ಲಿ ಇರುವಷ್ಟು ಹೊತ್ತು ಅಕ್ಕನ ಧ್ಯಾನದಲ್ಲಿರುತಿದ್ದ ನಾನು ಶಾಲೆ ಬಿಟ್ಟೊಡನೆ ಅಕ್ಕನೊಂದಿಗೆ ಆಟದಲ್ಲಿ ಸೇರಿಕೊಂಡು ಬಿಡುತಿದ್ದೆ. ಆಗ ಅದೆಷ್ಟೊಂದು ಬಗೆಯ ಆಟಗಳು ಆಡುತ್ತಿದ್ದೆವು. ನಮ್ಮ ಕೇರಿಯಲ್ಲಿ ನನ್ನ ವಾರಿಗೆಯ ಹುಡುಗರಿಗೆಲ್ಲ ನನ್ನಕ್ಕಳೆ ಲೀಡರು. ಅಂಡ್ಯಾಳು, ಮಣಿಪತ್ತು, ಚಕ್ಕಾದೋನಿ, ಹುಲಿಮನಿಯಾಟ, ಲಗೋರಿ, ಕುಂಟಲಿಪ್ಪಿ ಹಿಂಗ ರಗಡ ಆಡ್ತಿದ್ದಿವಿ. ಒಮ್ಮೊಮ್ಮೆ ಗಂಡ ಹೆಂಡತಿ ಆಟದೊಳಗ ಅಕ್ಕ ನಾನು ಗಂಡ ಹೆಂಡತಿಯಾಗಿದ್ದು ನೆನಸ್ಕೊಂಡ್ರ ಈಗಲೂ ನಗು ಬರತೈತಿ. ಹಿಂಗ ಒಂದು ದಿನ ಅಕ್ಕನ ಕೂಡ ಆಟ ಆಡಬೇಕೂಂತ … Read more

ಕೆಂಗುಲಾಬಿ (ಭಾಗ 2): ಹನುಮಂತ ಹಾಲಿಗೇರಿ

ನನ್ನ ಈ ನೌಕರೀ ಬಗ್ಗೆ ಹೇಳೋ ಮುನ್ನ ನನ್ನನ್ನು ಬಾಳಷ್ಟು ಕಾಡಿಸಿ ಪೀಡಿಸಿ ಬದಲಾವಣೆಗೆ ಕಾರಣಾದ ನನ್ನ ಕುಟುಂಬದ ಹಿನ್ನೆಲೆಯ ಬಗ್ಗೆ ಸ್ವಲ್ಪ ಮೊದಲಾ ಹೇಳಿದರೆ ಒಳ್ಳೇದು. ಬಾಗಲಕೋಟಿಯ ಭೀಮನಕೊಪ್ಪ ಅನ್ನೋ ಕುಗ್ರಾಮದ ಮ್ಯಾಲ ಯಾರಾದರೂ ವಿಮಾನದಾಗ ಬಂದ್ರ, ಆ ಊರಿನ ಅಂಚಿನಲ್ಲಿ ನನ್ನ ದಲಿತ ಕೇರಿಯ ಗುಡಿಸಲಗೊಳು ಒತ್ತೊತ್ತಾಗಿ ಚಲ್ಲಿಕೊಂಡಿರುವುದು ಕಾಣಿಸತೈತಿ. ಆ ಗುಡಿಸಲುಗಳ ನಡುವು ಒಂದು ಮಂಗಳೂರು ಹೆಂಚಿನ ಅರಮನೆಯಂಥ ಮನಿ ಎದ್ದು ಕಾಣುತೈತಿ. ಅದು ನನ್ನವ್ವ ತಾರವ್ವ ಜೋಗತಿಯ ಮನಿ. ಅಂದ್ರ ಅದು … Read more

ಕೆಂಗುಲಾಬಿ (ಭಾಗ 1): ಹನುಮಂತ ಹಾಲಿಗೇರಿ

ಒಬ್ಬೊಬ್ಬರ ಬದುಕು ಒಂದೊಂಥರಾ. ಒಂದರೊಳಗ ಸಿಕ್ಕ ಹಾಕ್ಕೊಂಡವರು ಅದರಿಂದ ಬಿಡಿಸಿಕೊಳ್ಳಾಕ ಅವರ ಹಿಂದಿನ ಬದುಕಿನ ಅಧ್ಯಾಯಗಳು ಅಷ್ಟು ಸರಳ ಬಿಡುದಿಲ್ಲ. ಸುತ್ತಲಿನ ಪ್ರಪಂಚವನ್ನು ಕಣ್ಣರಳಿಸಿ ನೋಡುವ ಮುನ್ನವೇ, ಯಾರದೋ ಹುನ್ನಾರಕ್ಕೆ ಬಲಿಯಾಗಿ, ತಾವು ಮಾಡದ ತಪ್ಪಿಗಾಗಿ, ಎಷ್ಟೋ ಹೆಣ್ಮಕ್ಕಳು ಇಂದು ತಮ್ಮ ಮೈಯನ್ನೇ ಸಂತೆಯೊಳಗ ಬಿಕರಿಗಿಟ್ಟು ತುತ್ತಿನ ಚೀಲ ತುಂಬಿಸಿಕೊಳ್ಳಾಕ ಹತ್ಯಾರ. ಅಂಥ ಮೈ ಮಾರೊಳ ಹೊಟ್ಟಿಯೊಳಗಿಂದ ಭೂಮಿಗೆ ಇಳಿದು ಬಂದವ ನಾ. ಹಿಂದೆ, ಇಂದು, ಮುಂದೆಂದೂ ಈ ಬ್ಯಾನಿ ನನ್ನನ್ನು ಬಿಟ್ಟು ಬಿಡದ ಕಾಡಕೋತನ ಇರತೈತಿ. … Read more

ಹನುಮಂತ ಹಾಲಿಗೇರಿಯವರ ‘ಕೆಂಗುಲಾಬಿ’ ಕಾದಂಬರಿ ಪ್ರಾರಂಭ

ಪಂಜುವಿನ ನಲ್ಮೆಯ ಓದುಗರಿಗಾಗಿ ಲೇಖಕ, ಪತ್ರಕರ್ತ ಹನುಮಂತ ಹಾಲಿಗೇರಿಯವರ ಪ್ರಶಸ್ತಿ ವಿಜೇತ ಕಾದಂಬರಿ "ಕೆಂಗುಲಾಬಿ" ಈ ಸಂಚಿಕೆಯಿಂದ  ಪ್ರಾರಂಭ… ಈ ಗರ್ಭ ಹೊತ್ತಾಗಿನ ತಳಮಳ ಹೇಳತೀರದು: ಕೆಂಗುಲಾಬಿಯ ಆತ್ಮ  ನನ್ನ ಮಸ್ತಕದ ಗರ್ಭದಲ್ಲಿ ಮೊಳಕೆ ಮೂಡಿ ಬೆಳೆಯುತ್ತಿರುವಾಗಲೆಲ್ಲಾ ನಾನು ತಳಮಳಕ್ಕೆ ಈಡಾಗುತ್ತ ಖಿನ್ನನಾಗುತ್ತಿದ್ದೆ. ಇದನ್ನು ಬರೆಯಬೇಕಾ ಬೇಡವಾ  ಎಂದು ತಾಕಲಾಟದಲ್ಲಿಯೆ ಬಹಳಷ್ಟು ದಿನಗಳನ್ನು ದೂಡಿದೆ. ನಾನು ಬರೆಸಿಕೊಂಡೆ ತೀರುತ್ತೇನೆ ಎಂದು ಇದು ಹಟ ಹಿಡಿದಂತೆಲ್ಲಾ ನಾನು ಸೋಲುತ್ತ ಹಿಂದೆ ಸರಿಯುತ್ತಲೆ ಇದ್ದೆ. ನನ್ನೊಡನೆ, ಶಾಲಿಗೆ ಬರುತ್ತಿದ್ದ, ರಜೆಯಲ್ಲಿ ಬಾಗಲಕೋಟೆಯ … Read more