ಕಲೆ-ಸಂಸ್ಕೃತಿ

ಒಂದಾನೊಂದು ಕಾಲದಲ್ಲಿ ಹೊಳಲ್ಕೆರೆ ಎಂಬ ಚಿಕ್ಕ ಹಳ್ಳಿ ಇತ್ತು : ಹೊಳಲ್ಕೆರೆ ವೆಂಕಟೇಶ್

ನಮ್ಮ ಹೊಳಲ್ಕೆರೆ ಮನೆ. ನಾವು ಚಿಕ್ಕವರಾಗಿದ್ದಾಗ, ಅಮ್ಮ, ಮತ್ತು ನಮ್ಮಣ್ಣ ತಲೆಯ ಬಳಿ  ಕುಳಿತು ತಲೆಗೂದಲನ್ನು  ನೇವರಿಸುತ್ತಾ ಪ್ರೀತಿಯಿಂದ ನಮಗೆ ನಿದ್ದೆ ಬರುವವರೆಗೂ ಕಥೆಗಳನ್ನು ಹೇಳುತ್ತಿದ್ದರು. ಅಮ್ಮನ ಕಥೆಗಳು ಹೆಚ್ಚಾಗಿ ರಾಜಕುಮಾರ,  ರಾಜಕುಮಾರಿ ಕುದುರೆ ಸವಾರಿ, ಅರಮನೆ, ಮದುವೆ ಮೊದಲಾದವುಗಳನ್ನು ಒಳಗೊಂಡಿರುತ್ತಿತ್ತು. ನಮ್ಮಣ್ಣ ಹೇಳುತ್ತಿದ್ದ ಕಥೆಗಳು   ಕಾಡು, ಹುಲಿ ಬೇಟೆ, ರಾಜ, ನದಿ ಇತ್ಯಾದಿಗಳನ್ನು ತಿಳಿಸುವ ಪ್ರಯತ್ನದ್ದಾಗಿತ್ತು.  ನಾನು ಬೊಂಬಾಯಿಗೆ ಬಂದಮೇಲೆ ಮದುವೆಯಾಗಿ ಮಕ್ಕಳಾದಾಗ ನನ್ನ ಮಕ್ಕಳಿಗೆಕಥೆ ಹೇಳುವ ಪ್ರಮೇಯ ಬಂತು. ಆದರೆ ನನ್ನ ತಲೆ ಖಾಲಿ. […]

ಕಲೆ-ಸಂಸ್ಕೃತಿ

ನಮ್ಮ ಅಣ್ಣಾವ್ರು ಅಂದರೆ ಕಡಿಮೇನಾ?: ಶ್ರೀಧರ್ ಬನವಾಸಿ

ಭಾರತೀಯ ಸಿನಿಮಾದಲ್ಲಿ ಅನೇಕ ಸೂಪರ್‌ಸ್ಟಾರ್‌ಗಳು, ಕಲಾವಿದರು ಬಂದು ಹೋಗಿದ್ದಾರೆ. ಈಗಲೂ ಬರುತ್ತಲೇ ಇದ್ದಾರೆ. ಆದರೆ ನೂರು ವರ್ಷದ ಭಾರತೀಯ ಸಿನಿಮಾ ಇತಿಹಾಸದಲ್ಲಿ ಡಾ. ರಾಜ್‌ಕುಮಾರ್ ಹೇಗೆ ವಿಭಿನ್ನ ಅನ್ನುವುದಕ್ಕೆ ಒಂದು ಮಾತನ್ನು ನೆನಪಿಸಿಕೊಳ್ಳಲೇಬೇಕು. ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ. ತೆಲುಗಿನ ಮೇರುನಟ ನಾಗೇಶ್ವರರಾಯರು (ತೆಲುಗು ಸೂಪರ್‌ಸ್ಟಾರ್  ನಾಗಾರ್ಜುನ ಅವರ ತಂದೆ)  ರಾಜ್‌ಕುಮಾರ್ ಮೇಲೆ ಅಪಾರ ಗೌರವವನ್ನು ಹೊಂದಿದ್ದ ನಾಗೇಶ್ವರರಾಯರು, ವೈಯಕ್ತಿಕವಾಗಿ ಅವರದ್ದು ಸುಮಾರು ೫೦ ವರ್ಷಗಳ ಸ್ನೇಹವಾಗಿತ್ತು. ರಾಜ್‌ಕುಮಾರ್ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಭಿನಯಿಸುವಾಗ […]

ಕಲೆ-ಸಂಸ್ಕೃತಿ

ಅಂತರಾಷ್ಟ್ರೀಯ ಸಿನಿಮೋತ್ಸವ ಹಾಗೂ ನಾ ಮೆಚ್ಚಿದ ಸಿನೆಮಾಗಳು: ಮಂಸೋರೆ

ಸಿನೆಮಾ ಜಗತ್ತೊಂದು ಅಕ್ಷಯ ಪಾತ್ರೆಯಿದ್ದಂತೆ. ಇಲ್ಲಿ ಎಷ್ಟೇ ಬಗೆದರೂ ಮತ್ತಷ್ಟು ತುಂಬಿಕೊಳ್ಳುತ್ತದೆ. ಜಗತ್ತನ್ನು ಸಿನೆಮಾ ಮಾಧ್ಯಮ ಆವರಿಸಿರುವ ಪರಿ ಹಾಗಿದೆ. ಬೇರೆಲ್ಲಾ ಅಭಿವ್ಯಕ್ತಿ ಮಾಧ್ಯಮಗಳಿಗಿಂತ ವೇಗವಾಗಿ ತನ್ನನ್ನು ತಾನು ಪುನರ್‌ವಿಮರ್ಶಿಸಿಕೊಂಡಿರುವ ಮಾಧ್ಯಮವೆಂದರೆ ಅದು ಸಿನೆಮಾ ಮಾತ್ರ. ಹಾಗಾಗಿಯೇ ಜಗತ್ತಿನ ಅಷ್ಟೂ ಇತಿಹಾಸವನ್ನು ತನ್ನೊಳಗಿನಿಂದ ಅಭಿವ್ಯಕ್ತಿಗೊಳಿಸುತ್ತಾ ಸಾಗುತ್ತಿದೆ. ಹಾಗಾಗಿ ಇದು ಜಗತ್ತಿನೊಳಗಿನ ಬಹುಮುಖಿ ಸಂಸ್ಕೃತಿಯಂತೆ ತನ್ನ ಅಭಿವ್ಯಕ್ತಿಯ ವ್ಯಾಪ್ತಿ, ಆಶಯ, ಆಸ್ಥೆಗಳಲ್ಲೂ ವಿಭಿನ್ನ ಹಾದಿಯಲ್ಲಿ ಸಾಗುತ್ತಿದೆ. ಜಗತ್ತಿನ ಕೆಲವು ಭಾಗಗಳಿಗೆ ಸಿನೆಮಾ ಒಂದು ಸಮಯ ಕಳೆಯಲು ಮನರಂಜನಾ ಮಾಧ್ಯಮವಾಗಿ […]

ಕಲೆ-ಸಂಸ್ಕೃತಿ

ಅವತಾರ್ ವರ್ಸಸ್ ಬಬ್ರುವಾಹನ

ಆಗ ತಾನೆ "ಅವತಾರ್" ಸಿನಿಮಾ ನೋಡಿ ಬರುತ್ತಿದ್ದೆ. ದಾರಿಯುದ್ದಕ್ಕೂ ಅದೇ ಗುಂಗು, ಅದರ ನಿರ್ದೇಶಕ ಮತ್ತು ನಿರ್ಮಾಪಕ ಜೇಮ್ಸ್ ಕ್ಯಾಮೆರಾನ್, ಅದರಲ್ಲಿ ಕೆಲಸ ಮಾಡಿದ ಅಲ್ಲಲ್ಲ…..ಈ ಸಿನಿಮಾವನ್ನೇ ತಮ್ಮ ಊಟ ತಿಂಡಿ ನಿದ್ರೆಯಾಗಿಸಿಕೊಂಡ, ಕಲಾ ನಿರ್ದೇಶಕ, ಕ್ಯಾಮೆರಾಮೆನ್, ಚಿತ್ರದ ದೃಶ್ಯಕಾವ್ಯವನ್ನು ಸೃಷ್ಟಿಸಲು ಹಗಲು ರಾತ್ರಿಯೆನ್ನದೇ ಕೆಲಸಮಾಡಿದ ಗ್ರಾಫಿಕ್ಸ ತಂತ್ರಜ್ಞರು, ಕಲಾವಿದರೂ ಪ್ರತಿಯೊಂದು ಪಾತ್ರಗಳನ್ನು ಕಂಪ್ಯೂಟರುಗಳಲ್ಲಿ, ನಿಜವಾದ ಮಾಡೆಲ್ಲುಗಳಲ್ಲಿ ಸೃಷ್ಟಿಸಿ ನಿರ್ದೇಶಕ ಕ್ಯಾಮೆರಾನ್‍ಗೆ ತೋರಿಸಿದಾಗ,  ಅರೆರೆ….ಇದು ಈ ರೀತಿ ಬೇಡ, ಅ ರೀತಿ ಮಾಡಿ, ಇದು ಓಕೆ ಅದ್ರೂ […]