ಜವರಾಜ್‌ ಎಂ ನೀಳ್ಗಾವ್ಯ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೪): ಎಂ. ಜವರಾಜ್

೪- ನನ್ನ ಮೆಟ್ಟಿ ಗಿರಿಕ್ಕು ಗಿರಿಕ್ಕನೆ ಆ ಸಂತ ಸಾಮ್ರಾಜ್ಯವ ಬುಟ್ಟು ಅಯ್ನೋರ್ ಪಾದ ಹೋಗ್ತಾ ಹೋಗ್ತಾ ಕತ್ತಲು ಆವರಿಸಿಕೊಳ್ತ ರಸ್ತೆ ಮಾರ್ಗ ಬುಟ್ಟು ಕಿರು ದಾರಿ ಕಾಣ್ತಲ್ಲೊ… ಆ ಕಿರು ದಾರೀಲಿ ಅಯ್ನೋರ್ ಮನೇನಾ? ಅಂತಂದರೆ ಅದು ಸುಳ್ಳಾಗಿ ಹೋಯ್ತಲ್ಲೋ.. ಆ ಕತ್ತಲ ಸಾಮ್ರಾಜ್ಯದಲಿ ಅಯ್ನೋರ್ ಉಟ್ಟ ಪಂಚೆ ಅಂಚು ನನ್ನ ಸುತ್ತ ಸುತ್ಕಂಡು ನಾಜೂಕಲ್ಲಿ ನಗ್ತಾ ನಗ್ತಾ ‘ನನ್ ಒಡಿಯನ ವೈಭೋಗ ನಿಂಗೊತ್ತಾ ಮೆಟ್ಟೇ..? ನಿಂಗೇನ್ ಗೊತ್ತು.. ನೀ ಹೊಸಿಲಾಚೆ ಬುಟ್ಟು ಒಂದಿಂಚು ಬರಗಿದ್ದುದಾ..? […]

ಜವರಾಜ್‌ ಎಂ ನೀಳ್ಗಾವ್ಯ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೩): ಎಂ. ಜವರಾಜ್

ಇಲ್ಲಿಯವರೆಗೆ -೩- “ಏಯ್, ನಾನ್ ಹೇಳ ಕತ ಕೇಳ್ತ ಇದ್ದಯ ಕೇಳ್ತ ಇಲ್ವ.. ನಿದ್ಗಿದ್ದ ಮಾಡ್ತ ಕಾಟಾಚಾರ್ಕ ಕುಂತ್ಕಂಡು ಆಟ ಆಡ್ತ ಇದ್ದಯ ಬಂಚೊತ್” ಏರಿಸಿದ ದನಿಯಲ್ಲಿ ಮೆಟ್ಟು ಬೆದರಿಸಿತಲ್ಲಾ.. ನಾನು ಬೆಚ್ಚಿ ಬೆರಗಾಗಿ ದಡಕ್ಕನೆ ಮೇಲೆದ್ನಲ್ಲಾ.. “ಹೇಳ್ತ ಹೇಳ್ತ ನಿಂಗ್ಯಾಕ್ ಅನುಮಾನ ಬಂತೋ.. ನಾ ಕೇಳ್ತ ಕೇಳ್ತ ವಸಿ ತೂಕುಡ್ಕ ಬಂತಲ್ಲಾ.. ನೀ ಹೇಳ ಕತಾ ಇಂಟ್ರೆಸ್ಟಾಗಿದೆಯಲ್ಲಾ.. ನನ್ ವಂಶದ ಕರಾಮತ್ತು ಅಂದೆಲ್ಲಾ.. ಅದಕ್ಕಾದ್ರು ನೀ ಹೇಳ ಕತಾ ನಾ ಕೇಳ್ಬೇಕಲ್ಲಾ…” “ಏಯ್ ತಿರಿಕ ಮಾತಾಡ್ಬೇಡ..” […]

ಜವರಾಜ್‌ ಎಂ ನೀಳ್ಗಾವ್ಯ

ಮೆಟ್ಟು ಹೇಳಿದ ಕಥಾ ಪ್ರಸಂಗ (ಭಾಗ ೨): ಎಂ. ಜವರಾಜ್

ಇಲ್ಲಿಯವರೆಗೆ ಒಂದು ನೀಳ್ಗಥನ ಕಾವ್ಯ -೨- “ಏ ಕಾಲ ಬಲ ಇಲ್ಲಿ..” ಸೋಮಾರ ಸಂತಲಿ ಅಯ್ನೋರ್ ಕೂಗಿಗೆ ಒಡಿಯ ನನ್ ಕಾಲಯ್ಯ ಎದ್ದೊ ಬಿದ್ದೊ ಓಡ್ತಾ.. ಅರರೆ ಇದೇನ ಈ ಸಂತ ಸಾಮ್ರಾಜ್ಯಲಿ ನನ್ ಒಡೀನೆ ಕಂಡ್ನಾ ಅಯ್ನೋರ್ಗೆ? ನಾನು ನನ್ಜೊತೆಗಾರರು ಮಿಣ ಮಿಣ ಕಣ್ಬುಟ್ಟು ನೋಡ್ತಾ ನೋಡ್ತಾ ಅಯ್ನೋರ್ ಸುದ್ದಿನ ತುಂಬ್ಕೊಂಡು ಕುಂತ್ಕಂಡು. “ಏನ್ ಕಾಲೊ ನಿನ್ ನಸೀಪು..” ಟೀ ಕ್ಯಾಂಟೀನ್ ಸುಬ್ಬಕ್ಕನ ಗೇಲಿಗೆ ನನ್ ಒಡಿಯ ತಲೆ ಕೆರಿತಾ ಬೀಡಿ ಕಚ್ತಾ ಮುಖದ ತುಂಬ […]

ಜವರಾಜ್‌ ಎಂ ನೀಳ್ಗಾವ್ಯ

ಮೆಟ್ಟು ಹೇಳಿದ ಕಥಾ ಪ್ರಸಂಗ (ಒಂದು ನೀಳ್ಗಾವ್ಯ): ಎಂ.ಜವರಾಜ್

  -೧- ‘ನನ್ನ ಏನಂತ ಅನ್ಕಂಡೆ..’ ಆ ಕಗ್ಗತ್ತಲ ಸರಿ ರಾತ್ರಿಯಲಿ ನನ್ನ ಮೈ ರೋಮ ರೋಮಗಳು ನಿಗುರಿ ನಿಂತವು. ಬೆಕ್ಕಸ ಬೆರಗಿನಲಿ ನಿಂತಲ್ಲೆ ನಿಂತು ಕಣ್ಗಗಲಿಸಿ ಅತ್ತಿತ್ತ ಕಾಲ ಹೆಜ್ಜೆಯ ಸರಿಸಿ ತಿರುಗಿ ಉರುಗಿ ನೋಡಿದೆ ಆ ಕತ್ತಲ ಸಾಮ್ರಾಜ್ಯದಲಿ ಜೀವ ಅಳುಕಿತು. ‘ನಿಂಗ ಏನೂ ಕಾಣೊಲ್ದು..’ ಮತ್ತೆ ಎತ್ತರಿಸಿದ ದನಿ. ದನಿ ಬಂದ ಕಡೆ ನೋಡಿದೆ. ಜೀವ ಇನ್ನಷ್ಟು ಅದುರಿತು. ಸರಕ್ಕನೆ ನಿಂತಲ್ಲೆ ಕುಂತೆ. ‘ಎದ್ರು ಮ್ಯಾಕ್ಕೆ..’ ಸಡನ್ ಎದ್ದವನು ಮತ್ತೆ ಮತ್ತೆ ತಿರುಗಿ […]