ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 27 & 28): ಎಂ. ಜವರಾಜ್

-೨೭- ಕತ್ತಲಾಗಿತ್ತು. ಹೆಂಡದ ಗುಳ್ಳಲಿ ಲಾಟೀನು ಉರಿತಾ ಉರಿಯೋ ಬೆಳಕಲಿ ಕುಡಿಯೋರು ಕುಡಿತಾ ತೂರಾಡ್ತ ಆ ಕುಡ್ದೋರು ಗಂಟ್ಲು ಗಳ್ಳಾಕ ಸದ್ದಿತ್ತು. ‘ಅಯ್ನೋರಾ ನಾ ಈಗ ಏನ್ಮಾಡ್ಲಿ ಸಂತ ಒಳಗ ಹೇಳುದ್ದಾ ನಾ ಯಾಗಾರು ನಂಬ್ಲಿ ಮದ್ವಿ ಆಗಿ ಮಕ್ಳ ಫಲ ಇಲ್ದೆ ಈ ಸವ್ವಿನೇ ದೇವ್ತಿತರ ಬಂತು ಆ ದೇವ್ತಿ ಕಿಲಕಿಲ ಅನ್ನವತ್ಲಿ ನನ್ ಪರ್ಶು ಹುಟ್ತು ಆ ದೇವ್ತಿ ಈಗ ಈತರ ಅಂದ್ರ ನನ್ ಕಳ್ಳು ಕಿತ್ಬತ್ತುದ ಅಯ್ನೋರಾ..’ ಅಂತ ನನ್ ಕಾಲಯ್ಯ ಬಿಕ್ಕುಳುಸ್ತ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 25 & 26): ಎಂ. ಜವರಾಜ್

-೨೫- ಮ್ಯಾಲ ತಿಂಗ್ಳು ಬೆಳುಗ್ತಾ ಇತ್ತು ಬೆಳ್ಕು ಹಾಲ್ ಚೆಲ್ಕಂಡಂಗೆ ಚೆಲ್ಕಂಡಿತ್ತು ನಾ ಮೂಲ ಸೇರಿ ಬಾಳ ಹೊತ್ತಾಗಿತ್ತು ಆಗ, ‘ಅಯ್ನೋರಾ ಇಳ್ಯ ಬಂದುದ ಕೆಳಗಿಂದ’ ಕುಲೊಸ್ತರ ಗುಂಪು ನೆರುದು ಹೇಳ್ತು. ‘ಊ್ಞ.. ಗೊತ್ತು’ ‘ಗೊತ್ತು ಅಂದ್ರ ಏನಾ ಅಯ್ನೋರಾ.. ಎಮ್ಮ ದನ ಕುಯ್ಯ ಬೀದಿಗ ಎಂಗೆ’ ‘ಊರಂದ್ಮೇಲ ಬ್ಯಲ ಕೊಡ್ಬೇಕು ಇಳ್ಯ ಕೊಟ್ಮೇಲ ಕುಲ ಮೀರಗಿದ್ದಾ.. ಕಾಲ್ದಿಂದು ನಡಕಾ ಬಂದಿರದು ಅಲ್ವ.. ಸತ್ಗ ಕೊಡ್ಬೇಕು. ಕೊಟ್ಟ ಸತ್ಗಗ ಹೂ ಸಿಂಗಾರ ಮಾಡಿ ಕುರುಬನ ಕಟ್ಟೆ ಕಂಡಾಯ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 23 & 24): ಎಂ. ಜವರಾಜ್

-೨೩- ‘ಏಯ್, ಕೇಳಿಲ್ಲಿ..’ ಆ ಮೋರಿ ಅಂಚಿಂದ ಬೆಳಕಿನ ಜ್ವಾಲೆ ಎದ್ದು ಆ ಜ್ವಾಲೆಯೊಳಗಿಂದ ಗದರಿದಂಥ ಮಾತು. ಸಡನ್ ಎದ್ದೆ ನನಗೆ ಮಂಪರು ಆ ಬೆಳಕಿನ ಜ್ವಾಲೆ ಬೆಂಕಿ ತರ ಆಯ್ತು ಆ ಬೆಂಕಿ ಜ್ವಾಲೆಗೆ ನನ್ನ ಮಂಪರು ಅಳಿದು ಸೆಟೆದು ನಿಂತೆ. ಮೇಲೆ ಮಿಂಚು ಸೊಂಯ್ಯನೆ ಫಳಾರಂತ ಸಿಡಿಲು ಸಿಡಿಸಿಡಿ ಸಿಡಿತಾ ಗುಡುಗು ನಿಧಾನಕೆ ಗುಡುಗುಡುಗುಡುಕ್ತಾ ಇತ್ತು ‘ನನ್ ಮಾತ ನೀ ತಲಗಾಕತಿಲ್ಲ ಗಾಳಿ ಬೀಸ್ತ ಅದ ಆ ಮೋರಿಯಿಂದ ಈ ಮೋರಿಲಿ ಬಿದ್ದಿನಿ’ ‘ಅದೇನ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 21 & 22): ಎಂ. ಜವರಾಜ್

-೨೧- ಅಯ್ಯಯ್ಯೋ ಅಯ್ಯಯ್ಯಪ್ಪಾ ಅಂತಂತಾಗಿ ಮೈಕೈ ನೋವ ತಡಿದೆ ಪಕ್ಕಂತ ಕಣ್ಬುಟ್ಟು ನೋಡುದ್ರಾ.. ಸೂರ್ಯ ಮೂಡಿ ನಾ ಗಬ್ಬುನಾತ ಬೀರೋ ಮೋರಿ ಬದಿಲಿ ಬಿದ್ದು ನನ್ನ ಆಕಡ ಒಂದು ಈಕಡ ಒಂದು ಹಾಲ್ಕುಡಿಯೋ ಸಣ್ಣ ನಾಯಿ ಮರಿಗಳು ಎಳಿತಾ ಈಜಾಡ್ತ ಆಟ ಆಟ್ತ ಪಣ್ಣ ಪಣ್ಣಾಂತ ಆಕಡ್ಕು ಈಕಡ್ಕು ನೆಗೆದಾಡ್ತ ಗುರುಗುಡ್ತ ಇದ್ದು. ಅಸ್ಟೊತ್ಗ ಬಾಗ್ಲು ಕಿರುಗುಟ್ತು ನನ್ನ ದಿಗಿಲು ಅತ್ತಗೋಗಿ ನೋಡ್ತು.. ಸವ್ವಿ ಕಣ್ಣುಜ್ಕೊಂಡು ತಲ ಕೆರಕೊಂಡು ಲಂಗ ಮ್ಯಾಲಕ್ಕೆತ್ಕಂಡು ಬಾಯಾನಿ ಆಕುಳಿಸ್ಕಂಡು ಮೂಲಲಿರ ಸೀಗಕಡ್ಡಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 19 & 20): ಎಂ. ಜವರಾಜ್

-೧೯- ಸೂರ್ಯ ಕಣ್ಬುಟ್ಟು ನಾನು ಕಪಿಲ ಬಾವಿ ಮೆಟ್ಲತ್ರ ಇದ್ದಿ ಅಯ್ನೋರು ಬಾವಿ ನೀರೊಳ್ಗ ಈಜ್ತಾ.. ಚೆಂಗುಲಿ ಬಾವಿ ಕಟ್ಟ ಮ್ಯಾಲ ನಗ್ತಾ.. ಅರೆ, ಮ್ಯಾಲಿಂದ ತಿಗುನ್ ತಳ್ಳು ಬೀಳ್ತಲ್ಲಾ.. ಚೆಂಗುಲಿ, ‘ಅಯ್ನೋರಾ ತಳ್ಳು ಉದುರ್ತಾ ಅವ ಆದು ಗುಡ್ಯಾಕಕಿಲ್ವ. ಶಂಕ್ರಪ್ಪೋರು ಈಚೀಚ್ಗ ಬರದೇ ಇಲ್ಲ’ ‘ಅಂವ ನಿಗುರ್ತ ಅವ್ನ ನೀನೆ ಮಾಡ್ಲಾ ಸಂತಗೋಗಿ ಹರಾಜಾಕ್ಲಾ ನಿಂಗೇನ್ ಕೇಮಿ ಇದ್ದದು..’ ‘ಆಯ್ತು ಅಯ್ನೋರಾ ಆಗ ನನ್ನೇನಾರ ಶಂಕ್ರಪ್ಪೋರ್ ಕೇಳುದ್ರಾ..’ ‘ಏಯ್, ಲೌಡೆ ಬಂಚೊತ್ ಅಂವ ಹಂಗೇನಾರ ಬಂದ್ರ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 17 & 18): ಎಂ. ಜವರಾಜ್

-೧೭- ಬಾಗಿಲು ಕಿರುಗುಟ್ಟಿತು ನನ್ನ ದಿಗಿಲು ಕಿರುಗುಟ್ಟಿದ‌ ಬಾಗಿಲ ಕಡೆಗೋಯ್ತು. ಅಯ್ನೋರು ಬಗ್ಗಿ ಹೊಸಿಲ ಮೇಲೆ ಕಾಲಿಟ್ಟು ಆಚೀಚೆ ನೋಡ್ತ ಬೀಡಿ ತಗ್ದು ತುಟಿಗಿಟ್ಟು ಕಡ್ಡಿ ಗೀರಿ ಬೀಡಿ ಮೊನೆಗೆ ಹಚ್ಚಿ ಅದೇ ಕಡ್ಡಿ ಬೆಳಕಲ್ಲಿ ನನ್ ಕಡೆ ತಿರುಗಿ ಆ ಬೆಳಕು ನನ್ ಮೇಲೂ ಬಿದ್ದು ಅಯ್ನೋರು ಹೊಸಿಲು ದಾಟಿ ನನ್ನ ಮೆಟ್ಟಿ ಬಲಗೈಲಿ ಸೂರು ಹಿಡಿದು ಎಡಗೈಲಿ ಬೀಡಿ ಹಿಡಿದು ಸೇದ್ತಾ ಹೊಗೆ ಬಿಡ್ತಾ ಇರೋವತ್ಲಿ ಒಳಗೆ ಸವ್ವಿ ಗುಕ್ಕಗುಕ್ಕನೆ ದುಮುಗುಡುತ ಅಳ್ತಾ ಇರೋದು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 15 & 16): ಎಂ. ಜವರಾಜ್

– ೧೫- ಇಲ್ಲಿ ಕತ್ಲು ಅಂದ್ರ ಕತ್ಲು ಅಲ್ಲಿ ಕಾಣ್ತ ಮಾರ್ದೂದಲ್ಲಿರ ಹೆಂಡದಂಗಡಿಲಿ ಲಾಟೀನ್ ಬೆಳಕು ಇಲ್ಲಿ, ಯಾರು ಹೋದ್ರು ಯಾರ್ ಬಂದ್ರು ಗೊತ್ತಾಗದ ಹೊತ್ತು ಈ ಅಯ್ನೋರು ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡ್ತ ಬೀಡಿ ಸೇದ್ತ ಎಳೆಯೋ ದಮ್ಮು ದಮ್ಮಿಗೂ ಬೀಡಿ ಮೊನೆಲಿ ಬೆಂಕಿನುಂಡೆ ಕಾಣ್ತಿತ್ತು ಅರೆ ಹೆಂಡದಂಗಡಿಲಿ ಜಗಳ ಅಯ್ನೋರು ದಿಟ್ಟಿಸಿ ನೋಡ್ದಾಗಾಯ್ತು ನಂಗು ದಿಗಿಲು ಯಾರ ಈ ಜಗಳ ಮಾಡ್ತ ಇರದು? ಆ ದನಿಯ ಎಲ್ಲೊ ಕೇಳಿರ ನೆಪ್ಪು ಆ ದನಿ ಜೋರಾಯ್ತು ಅರೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 13 & 14): ಎಂ. ಜವರಾಜ್

೧೩- ಬಿಸ್ಲು ಬಿಸ್ಲು ಏನಪ್ಪಾ ಬಿಸ್ಲು ಉಸ್ಸ್… ಅಲಲಲಾ ಏಯ್,  ಮಲ್ಗಿ ನಿದ್ರಾ ಮಾಡ್ತ ಇದ್ದಯ ಎದ್ರು ಮ್ಯಾಕ್ಕೆ.. ಬೆಚ್ಚಿ ಬೆರಗಾಗಿ ಒರಗಿದ ಕಂಬದಿಂದ ತಲೆ ಎತ್ತಿದೆ ಮಂಪರಿಡಿದ ಕಣ್ಣು ತೆರೆಯುತ್ತ ಎದುರು ದಿಟ್ಟಿಸಿದೆ ಫಳಾರ್ ಮಿಂಚಾಯ್ತಲ್ಲಾ.. ಅಯ್ನೋರ್ ಮಲ್ಗಿ ನಿದ್ರ ಮಾಡ್ತ ಒದ್ದಾಡ್ತ ನಾ ಬೆಂಕಿ ಬಿಸುಲ್ಲಿ ನರಳಾಡ್ತ ಇದ್ರ ನೀ ಸುಖವಾಗಿ ನಿದ್ರ ಮಾಡ್ತ ಇದ್ದಯ ನಾನೇನು ದೆವ್ವುಕ್ಕು ಭೂತುಕ್ಕು  ಹೇಳವ್ನು ಅನ್ಕಂಡಿದ್ದಯ.. ಇಲ್ಲ ಹೇಳು ಚೂರು ಮಂಪ್ರಾಯ್ತು.. ಅದೆ ಅಯ್ನೋರು ಮರದ ಕೆಳಗೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 11 & 12): ಎಂ. ಜವರಾಜ್

೧೧- ಅಲಲಲಲೇ ಇದೇನ ಇದು ಗರಿಗರಿ ಪಿಲ್ಲ ಪಂಚ ಜಾರ್ತ ನನ್ನ ಮೈನ ಸೋಕ್ತ ಮಣಮಣನೆ ಮಾತಾಡ್ತ ಬೀದಿ ಧೂಳ ತಾರುಸ್ತ ಏಳುಸ್ತಲ್ಲೊ.. ‘ನೀ ಯಾವೂರ್ ಸೀಮೆನಪ್ಪ ನೀ ಯಾಕ ಈ ಅಯ್ನೋರ್ ಕಾಲ್ಗಾದೆ ನಾ ಈ ಅಯ್ನೋರ ಸೊಂಟ ಸೇರಿ ನೋಡಬಾರದ ನೋಡ್ದಿ ಕೇಳಬಾರದ ಕೇಳ್ದಿ ಶಿವಶಿವ ಆ ನೀಲವ್ವೋರ ನೋಡ್ದೆಯಲ್ಲೊ ನಾ ನೋಡ್ದೆ ಇರ ಜಿನ್ವೆ ಇಲ್ಲ ನಾ ಕೇಳ್ದೆ ಇರ ಜಿನ್ವೆ ಇಲ್ಲ’ ಅಂತಂತ ಮಾತಾಡ್ತಲ್ಲೊ… ನಾ ಕೇಳ್ತ ನೀಲವ್ವೋರು ಕಣ್ಮುಂದ ಬರ್ತಾ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 10): ಎಂ. ಜವರಾಜ್

೧೦- ಅವ್ವಾ..ಅವ್ವಾ..ನೀ ಏಳವ್ವಾ.. ಶಂಕ್ರಪ್ಪೋರು ಅಳಳ್ತ ಅಳಳ್ತ ನೀಲವ್ವೋರು ವಾಲಾಡ್ತ ಗೋಳಾಡ್ತ ಅಯ್ನೋರ ಕಣ್ಣು ಕೆಂಪಗಾಗ್ತ  ಉರಿ ಉರಿ ಉರಿತಾ ಮೊರಿತಾ ಓಡೋಡಿ ಕಾಲೆತ್ತಿ ಜಾಡಿಸಿ ಒದ್ದನಲ್ಲೊ ಆ ಶಂಕ್ರಪ್ಪೋರು ಮಾರ್ದೂರ ಬಿದ್ದು ಅಯ್ಯಪ್ಪೋ ಅಂತ ಸೊಂಟ ಹಿಡ್ದು  ಆ ನೀಲವ್ವ ಬಿದ್ದ ಮೋರಿಗೇ ಬಿದ್ದು  ಕೊಸರಾಡ್ತ ಇದ್ದನಲ್ಲೊ…. ನನ್ನೆಡ್ತಿ ಮುಟ್ಟಕೆ  ನೀಯಾವನಲೇ ಬಂಚೊತ್ ಲೌಡೆ ಬಂಚೊತ್… ಆ ನೀಲವ್ವ ತವಿತಾ ಕೈ ಚಾಚ್ತ ಶಂಕ್ರಾ.. ಶಂಕ್ರಾ ಅಂತ ಕೂಗ್ತ ಹತ್ರತ್ರ ಬಂದ್ಲಲ್ಲೊ.. ಅಯ್ನೋರು ನನ್ ಮೆಟ್ಟೇ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 9): ಎಂ. ಜವರಾಜ್

೯- ಅಯ್ಯಯ್ಯೋ ಬನ್ರಪ್ಪ ಅಯ್ಯಯ್ಯೋ ಬನ್ರವ್ವ ಅಯ್ಯಯ್ಯೋ ಬನ್ರಣ್ಣ ಅಯ್ಯಯ್ಯೋ ಬನ್ರಕ್ಕ ಅಯ್ಯಯ್ಯೋ ಯಾರ್ಯಾರ ಬನ್ನಿ ಈ ಅಯ್ನೋರು  ಆ ನೀಲವ್ವನ ನನ್ನ ಮೆಟ್ದ ಮೆಟ್ಲಿ ತುಳ್ದು ತುಳ್ದು ಜೀವ ತಗಿತಾವ್ನ ಬನ್ನಿ ಬನ್ಬಿ.. ಅಂತಂತ ನಾನ್ ಕೂಗದು ಕೇಳ್ನಿಲ್ವಲ್ಲೊ.. ಆಗ ಜನ ಜಗನ್ ಜಾತ್ರಾಗಿ ಆ ನೀಲವ್ವ  ಅಯ್ಯೋ ಉಸ್ಸೋ ಅನ್ಕಂಡನ್ಕಂಡು ಸುದಾರುಸ್ಕಂಡು ಮೇಲೆದ್ದು  ನಿಂತ ಜನ ನೋಡ್ತ ನೋಡ್ತ ಮೋರಿ ದಾಟಿ ಜಗುಲಿ ಅಂಚಿಗೆ ಕುಂತು ಗೋಳಾಡ್ತ ಗೋಳಾಡ್ತ  ಜಗುಲಿ ಕಂಬ ಒರಗಿದಳಲ್ಲೋ… ‘ಅಯ್ನೋರಾ.. … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 8): ಎಂ. ಜವರಾಜ್

-೮- ಸೂರ್ಯ ಮೂಡೊ ಹೊತ್ತು ‘ಕಾ..ಕಾ.. ಕಾ..’ ಕಾಗೆ ಸದ್ದು ಮೈಮುರಿತಾ ಕಣ್ಬುಟ್ಟು ನೋಡ್ದಿ ಅವಳು ಕಸಬಳ್ಳು ತಗಂಡು ಮೂಲ್ ಮೂಲೆನು ಗುಡಿಸೋಳು ಆ ಕಸಬಳ್ಳು ನನಗಂಟು ಬಂದು ಗೂಡುಸ್ತು ಆ ಕಸಬಳ್ಳು ಗೂಡ್ಸ ದೆಸೆಗೆ ನಾನು ಮಾರ್ದೂರ ಬಿದ್ದು ಬೀದೀಲಿ ಒದ್ದಾಡ್ತಿದ್ದಂಗೆ ಸೂರ್ಯ ಕೆಂಪೇರ್ಕಂಡು ಮೇಲೆದ್ದು ನಂಗ ತಾಕಿ ನನ್ ಮೈ ಮುಖ ನೊಚ್ಚಗಾದಂಗಾಯ್ತು. ಆ ಕಸಬಳ್ಳು ಅಲ್ಲಿಗೂ ಬಂದು ನನ್ನ ಇನ್ನಷ್ಟು ದೂರ ತಳ್ತ ತಳ್ತ ಮೋರಿ ಅಂಚಿಗೆ ಬಂದು ನೋಡ್ತಿದ್ದಂಗೆ ‘ಏ.. ನೀಲ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 7): ಎಂ. ಜವರಾಜ್

-೭- ಈ ಅಯ್ನೋರು ಆ ಅವಳೂ ಕುಂತ ಜಾಗ್ದಲ್ಲೆ ಮುಸುಡಿ ಎಟ್ಗಂಡು ಈ ಅಯ್ನೋರ್ ಮೈ ಇನ್ನಷ್ಟು ಕಾಯ್ತಾ ನನ್ ಮೈಯೂ ಕಾದು ಕರಕಲಾಗುತ್ತಾ ಹೊತ್ತು ಮೀರ್ತಾ ಮೀರ್ತಾ ಆ ಅವಳು ಎದ್ದೋಗಿ ಈ ಅಯ್ನೋರೂ ಮೇಲೆದ್ದು ನನ್ನ ಭದ್ರವಾಗಿ ಮೆಟ್ಟಿ ನೆಲಕ್ಕೆ ಎರಡೆರಡು ಸಲ ಕುಟ್ಟಿ  ಅವಳೆಡೆ ಇನ್ನೊಂದು ನೋಟ ಬೀರಿ ಮೆಲ್ಲನೆ ತಿರುಗಿ ಮೋರಿ ದಾಟಿ  ಕಿರು ಓಣಿ ತರದ ಬೀದೀಲಿ  ಗಿರಿಕ್ಕು ಗಿರಿಕ್ಕು ಅಂತನ್ನಿಸಿಕೊಂಡು  ಬಿರಬಿರನೆ ನಡೆದರಲ್ಲೋ… ಆ ಅವಳ ನೋಟಕ್ಕೆ ಈ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 6): ಎಂ. ಜವರಾಜ್

-೬- “ಏಯ್, ಎದ್ರು ಮ್ಯಾಕ್ಕೆ..” ನಾನು ದಿಗ್ಗನೆದ್ದು ಅತ್ತಿತ್ತ ನೋಡ್ದಾಗ ಮಿಂಚು ಫಳಾರ್ ಅಂತ ಹೊಳಿತಲ್ಲಾ.. ಗಾಳಿ ಜೋರಾಗಿ ಬೀಸಿತಲ್ಲಾ.. ಕೂಗಿದ್ಯಾರಾ.. ಅಂತ ಅತ್ತಿತ್ತ ನೋಡ್ತ ಕಣ್ಕಣ್ಣು ಬಿಡೊ ಹೊತ್ತಲಿ “ಏಯ್ ಏನ ಕಣ್ಕಣ್ ಬುಡದು ಮಿಂಚು ಹೊಳಿತಿಲ್ವ ಗಾಳಿ ಬೀಸ್ತಿಲ್ವ ಗಡುಗುಡುಗುಡನೆ ಗುಡುಗು ಸದ್ದಾಗದು ಕೇಳ್ತಿಲ್ವ.. ಬಿರ್ಗಾಳಿನೇ ಬರ್ಬೊದು ನೋಡಾ..” ನಾ ಆ ಕಡೆ ದಿಗಿಲಿಂದ ನೋಡ್ತ “ಇಲ್ಲ ಇಲ್ಲ ಹಂಗೇನಿಲ್ಲ.. ಅಂತಂತ ಹಂಗೇ ಕುಂತರು ಬಿಡದ ಆ ಮೆಟ್ಟು ಬೆಂಕಿ ಕೆಂಡದಡೆತರ ಬೆಳಗಿ ಹಾಗೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೫): ಎಂ. ಜವರಾಜ್

-೫- ಅಯ್ಯೋ ದೇವ್ರೇ ಯಾಕಪ್ಪ ಈ ಕ್ವಾಟ್ಲ ಕೊಟ್ಟ ನಂಗ ಈ ಅಯ್ನೋರು ಒಳಗ ಹೋದೋರು ಇನ್ನುವ ಅದೇನ್ಮಾಡ್ತಿದ್ದರೋ.. ಈ ಅಯ್ನೋರ್ ದೆಸೆಯಿಂದ ಈ ಕತ್ಲೊಳ್ಗ ನಾ ಒಬ್ನೆ ಆದ್ನಲ್ಲೊ.. ಒಳಗೆ ಅದೇನೋ ಸದ್ದು ನಾ ನೋಡವ ಅಂದ್ರ ಬಾಗಿಲು ಮುಚ್ಚಿತ್ತು “ನೋಡು ಅವತ್ತು ಬಂದಾಗ ಏನಂದೆ ನೀನು ಬಂದು ಬಂದು ಹೋದ್ರ ನಾ ಬುಟ್ಟಿನಾ ತಂದು ಕೊಡಗಂಟ ನನ್ನ ಮುಟ್ಟಂಗಿಲ್ಲ” ಮಾತು ಬಾಗಿಲು ಸೀಳಿ ಬಂದದ್ದು ಗೊತ್ತು. ಈ ನಾಯಿ ಬಡ್ಡೆತದು ಈ ಕತ್ತಲ ಸಾಮ್ರಾಜ್ಯದಲಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೪): ಎಂ. ಜವರಾಜ್

೪- ನನ್ನ ಮೆಟ್ಟಿ ಗಿರಿಕ್ಕು ಗಿರಿಕ್ಕನೆ ಆ ಸಂತ ಸಾಮ್ರಾಜ್ಯವ ಬುಟ್ಟು ಅಯ್ನೋರ್ ಪಾದ ಹೋಗ್ತಾ ಹೋಗ್ತಾ ಕತ್ತಲು ಆವರಿಸಿಕೊಳ್ತ ರಸ್ತೆ ಮಾರ್ಗ ಬುಟ್ಟು ಕಿರು ದಾರಿ ಕಾಣ್ತಲ್ಲೊ… ಆ ಕಿರು ದಾರೀಲಿ ಅಯ್ನೋರ್ ಮನೇನಾ? ಅಂತಂದರೆ ಅದು ಸುಳ್ಳಾಗಿ ಹೋಯ್ತಲ್ಲೋ.. ಆ ಕತ್ತಲ ಸಾಮ್ರಾಜ್ಯದಲಿ ಅಯ್ನೋರ್ ಉಟ್ಟ ಪಂಚೆ ಅಂಚು ನನ್ನ ಸುತ್ತ ಸುತ್ಕಂಡು ನಾಜೂಕಲ್ಲಿ ನಗ್ತಾ ನಗ್ತಾ ‘ನನ್ ಒಡಿಯನ ವೈಭೋಗ ನಿಂಗೊತ್ತಾ ಮೆಟ್ಟೇ..? ನಿಂಗೇನ್ ಗೊತ್ತು.. ನೀ ಹೊಸಿಲಾಚೆ ಬುಟ್ಟು ಒಂದಿಂಚು ಬರಗಿದ್ದುದಾ..? … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೩): ಎಂ. ಜವರಾಜ್

ಇಲ್ಲಿಯವರೆಗೆ -೩- “ಏಯ್, ನಾನ್ ಹೇಳ ಕತ ಕೇಳ್ತ ಇದ್ದಯ ಕೇಳ್ತ ಇಲ್ವ.. ನಿದ್ಗಿದ್ದ ಮಾಡ್ತ ಕಾಟಾಚಾರ್ಕ ಕುಂತ್ಕಂಡು ಆಟ ಆಡ್ತ ಇದ್ದಯ ಬಂಚೊತ್” ಏರಿಸಿದ ದನಿಯಲ್ಲಿ ಮೆಟ್ಟು ಬೆದರಿಸಿತಲ್ಲಾ.. ನಾನು ಬೆಚ್ಚಿ ಬೆರಗಾಗಿ ದಡಕ್ಕನೆ ಮೇಲೆದ್ನಲ್ಲಾ.. “ಹೇಳ್ತ ಹೇಳ್ತ ನಿಂಗ್ಯಾಕ್ ಅನುಮಾನ ಬಂತೋ.. ನಾ ಕೇಳ್ತ ಕೇಳ್ತ ವಸಿ ತೂಕುಡ್ಕ ಬಂತಲ್ಲಾ.. ನೀ ಹೇಳ ಕತಾ ಇಂಟ್ರೆಸ್ಟಾಗಿದೆಯಲ್ಲಾ.. ನನ್ ವಂಶದ ಕರಾಮತ್ತು ಅಂದೆಲ್ಲಾ.. ಅದಕ್ಕಾದ್ರು ನೀ ಹೇಳ ಕತಾ ನಾ ಕೇಳ್ಬೇಕಲ್ಲಾ…” “ಏಯ್ ತಿರಿಕ ಮಾತಾಡ್ಬೇಡ..” … Read more

ಮೆಟ್ಟು ಹೇಳಿದ ಕಥಾ ಪ್ರಸಂಗ (ಭಾಗ ೨): ಎಂ. ಜವರಾಜ್

ಇಲ್ಲಿಯವರೆಗೆ ಒಂದು ನೀಳ್ಗಥನ ಕಾವ್ಯ -೨- “ಏ ಕಾಲ ಬಲ ಇಲ್ಲಿ..” ಸೋಮಾರ ಸಂತಲಿ ಅಯ್ನೋರ್ ಕೂಗಿಗೆ ಒಡಿಯ ನನ್ ಕಾಲಯ್ಯ ಎದ್ದೊ ಬಿದ್ದೊ ಓಡ್ತಾ.. ಅರರೆ ಇದೇನ ಈ ಸಂತ ಸಾಮ್ರಾಜ್ಯಲಿ ನನ್ ಒಡೀನೆ ಕಂಡ್ನಾ ಅಯ್ನೋರ್ಗೆ? ನಾನು ನನ್ಜೊತೆಗಾರರು ಮಿಣ ಮಿಣ ಕಣ್ಬುಟ್ಟು ನೋಡ್ತಾ ನೋಡ್ತಾ ಅಯ್ನೋರ್ ಸುದ್ದಿನ ತುಂಬ್ಕೊಂಡು ಕುಂತ್ಕಂಡು. “ಏನ್ ಕಾಲೊ ನಿನ್ ನಸೀಪು..” ಟೀ ಕ್ಯಾಂಟೀನ್ ಸುಬ್ಬಕ್ಕನ ಗೇಲಿಗೆ ನನ್ ಒಡಿಯ ತಲೆ ಕೆರಿತಾ ಬೀಡಿ ಕಚ್ತಾ ಮುಖದ ತುಂಬ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ (ಒಂದು ನೀಳ್ಗಾವ್ಯ): ಎಂ.ಜವರಾಜ್

  -೧- ‘ನನ್ನ ಏನಂತ ಅನ್ಕಂಡೆ..’ ಆ ಕಗ್ಗತ್ತಲ ಸರಿ ರಾತ್ರಿಯಲಿ ನನ್ನ ಮೈ ರೋಮ ರೋಮಗಳು ನಿಗುರಿ ನಿಂತವು. ಬೆಕ್ಕಸ ಬೆರಗಿನಲಿ ನಿಂತಲ್ಲೆ ನಿಂತು ಕಣ್ಗಗಲಿಸಿ ಅತ್ತಿತ್ತ ಕಾಲ ಹೆಜ್ಜೆಯ ಸರಿಸಿ ತಿರುಗಿ ಉರುಗಿ ನೋಡಿದೆ ಆ ಕತ್ತಲ ಸಾಮ್ರಾಜ್ಯದಲಿ ಜೀವ ಅಳುಕಿತು. ‘ನಿಂಗ ಏನೂ ಕಾಣೊಲ್ದು..’ ಮತ್ತೆ ಎತ್ತರಿಸಿದ ದನಿ. ದನಿ ಬಂದ ಕಡೆ ನೋಡಿದೆ. ಜೀವ ಇನ್ನಷ್ಟು ಅದುರಿತು. ಸರಕ್ಕನೆ ನಿಂತಲ್ಲೆ ಕುಂತೆ. ‘ಎದ್ರು ಮ್ಯಾಕ್ಕೆ..’ ಸಡನ್ ಎದ್ದವನು ಮತ್ತೆ ಮತ್ತೆ ತಿರುಗಿ … Read more