ಮೂಲಂಗಿ ಪಚಡಿ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ಭಾಳ ದಿವಸದ್ದ ಮ್ಯಾಲೆ ನಾವು ಗೆಳತ್ಯಾರೆಲ್ಲಾ ಒಂದ ಕಡೆ ಸೇರಿದ್ವಿ. ದಿನಾ ಒಂದಕ್ಕು ಮನ್ಯಾಗ ಗಂಡಾ ಮಕ್ಕಳಿಗೆ ನಾಷ್ಟಾ,ಊಟಾ ಅಂಥೇಳಿ  ದಿನಾ ಮುಂಝಾನೆದ್ದ ಕೂಡಲೆ ಚಪಾತಿ ಹಿಟ್ಟಿನ್ ಮುದ್ದಿ ನೋಡಿ ನೋಡಿ ನಮಗೂ  ಸಾಕಾಗಿತ್ತು. ಇವರಿಗೆಲ್ಲಾ ಹೊಟ್ಟಿತುಂಬ ಮಾಡಿ ಹಾಕಿ ಮತ್ತ ಮ್ಯಾಲೆ ಇವರ ಕಡೆ ದಿನಾ ಮಾಡಿದ್ದ ಮಾಡತಿ ಅಂತ ಬೈಸ್ಕೊಳ್ಳೊದ ಬ್ಯಾರೆ . ಅದಕ್ಕ ಬ್ಯಾಸರಾಗಿ ನಾವೆಲ್ಲಾ ಫ್ರೇಂಡ್ಸ್ ಮಾತಾಡಕೊಂಡ ಎಲ್ಲೆರೆ ಹೊರಗ ಸೇರಿ ” ಗೇಟ್ ಟುಗೆದರ್ ” ಮಾಡೊದಂತ ಡಿಸೈಡ್ ಮಾಡಿದ್ವಿ. … Read more

ಶಿಫಾರಸು: ಜೆ.ವಿ.ಕಾರ್ಲೊ ಅನುವಾದಿಸಿರುವ ರಶ್ಯನ್ ಕತೆ

  ಜಿಲ್ಲಾ ಪ್ರಾಥಮಿಕ ಶಾಲೆಗಳ ನಿರ್ದೇಶಕರಾದ ಮಾನ್ಯ ಫ್ಯೋಡೊರ್ ಪೆಟ್ರೊವಿಚ್ ತಾವು ನ್ಯಾಯ-ನೀತಿಯ ಮನುಷ್ಯರೆಂದು ಭಾವಿಸಿದ್ದರು. ಅದೊಂದು ದಿನ ಅವರ ಕಛೇರಿಯೊಳಗೆ ಒಂದು ಕುರ್ಚಿಯ ಅಂಚಿನಲ್ಲಿ ಮುಳ್ಳು ಕಂಟಿಗಳ ಮೇಲೆಂಬಂತೆ ರೆಮೆನಿಸ್ಕಿ ಎಂಬ ಹೆಸರಿನ ಶಿಕ್ಷಕರೊಬ್ಬರು ಆಸೀನರಾಗಿದ್ದರು. ಅವರು ತೀರ ಉದ್ವಿಘ್ನ ಮನಸ್ಥಿತಿಯಲ್ಲಿದ್ದರು. “ಕ್ಷಮಿಸು, ರೆಮೆನಿಸ್ಕಿ.” ಫ್ಯೋಡೊರ್ ಪೆಟ್ರೊವಿಚ್ ಕತ್ತೆತ್ತುತ್ತಾ ದುಃಖತಪ್ತ ಸ್ವರದಲ್ಲಿ ಹೇಳಿದರು. “ನಿನಗೆ ನಿವೃತ್ತನಾಗದೆ ಬೇರೆ ದಾರಿಯೇ ಇಲ್ಲ. ನಿನಗೆ ಸ್ವರವೇ ಇಲ್ಲ! ನೀನು ಪಾಠ ಮಾಡುವುದಾದರೂ ಹೇಗೆ? ನನಗೆ ಅರ್ಥವಾಗುತ್ತಿಲ್ಲ. ಒಮ್ಮೆಲೇ ನಿನ್ನ … Read more

ಅತ್ಯಾಚಾರ ತಡೆಯುವ ಬಗೆ: ಅಖಿಲೇಶ್ ಚಿಪ್ಪಳಿ ಅಂಕಣ

ಅದೊಂದು ೬ನೇ ಕ್ಲಾಸಿನಲ್ಲಿ ಓದುತ್ತಿರುವ ಚುರುಕಾದ ಹೆಣ್ಣುಮಗು. ಆ ದಿನ ಶನಿವಾರ ಗೆಳತಿಯರಿಗೆ ಬೈ ಸೋಮವಾರ ಸಿಗ್ತೀನಿ ಎಂದು ಹೇಳಿ ಮನೆಕಡೆ ನಡಕೊಂಡು ಹೊರಟಿತು. ಹೈವೇಯಿಂದ ಸುಮಾರು ಅರ್ಧ ಕಿ.ಮಿ. ಆಸುಪಾಸಿನಲ್ಲಿ ಮನೆ. ಆ ವಯಸ್ಸಿನ ಮಕ್ಕಳಲ್ಲಿ ವಯೋಸಹಜ ಆಟವಾಡುವ ವಾಂಛೆಯಿರುತ್ತದೆ. ಇಲ್ಲಿ ನೋಡಿದರೆ ಕಣ್ಣುಹಾಯಿಸುವಷ್ಟು ದೂರ ೪೦ ಅಡಿ ಅಗಲದಲ್ಲಿ ಕಪ್ಪನೆಯ ಹೆದ್ದಾರಿ ಮಲಗಿದೆ. ಅದರ ಮೇಲೆ ವೇಗವಾಗಿ ಸಾಗುವ ಕಾರುಗಳು, ದೈತ್ಯ ಲಾರಿಗಳು. ಮಣ್ಣಾಡಲು ರಸ್ತೆಯಲ್ಲಿ ಮಣ್ಣೇ ಇಲ್ಲ. ಇಲ್ಲೊಂದು ಒಳದಾರಿಯಿದೆ, ಮನೆಗೆ ಹತ್ತಿರ … Read more

ಎರಡು ಕವಿತೆಗಳು: ಆನಂದ ಈ. ಕುಂಚನೂರ, ವಿ.ಎಸ್ ಶ್ಯಾನಭಾಗ್

ನಿನ್ನ ಕರುಣೆಯ ಬಿಂಬ ನಿಶೆಯ ಕರುಣೆಯಿಂದೊಡಮೂಡಿದ ಬೆಳಗಿನುದಯರವಿಯ ಕಂಡ ಇಬ್ಬರೂ ಬಂಗಾರದ ಹಣೆಯ ಮುದದಿ ಮುತ್ತಿಕ್ಕಿ ಕಣ್ತುಂಬಿಕೊಂಡ ಅವನು ಹಗಲ ವ್ಯಾಪಾರಕೆ ಸಜ್ಜಾದ ಸಿಪಾಯಿ- ಯಾದರೆ ಇತ್ತ ಇವಳು ಇರವೆಡೆ ಸಿಂಗಾರ ಸೂಸುವ ಸಿರಿದಾಯಿ   ಬದುಕ ಬೆನ್ನಿಗಂಟಿಸಿ ಹೊರಟರವನು ಪುರುಷ ಭೂಷಣವೆನ್ನಕ್ಕ ಕಾರ್ಯಕಾರಣ ಅದಕಾರಣ ಕಾರ್ಯದೊಳಗಾನು ತೊಡಗಿ ಬಿರುಬಿಸಿಲೆನ್ನದೆ ದುಡಿವ ಬಡಗಿ ತೊಳಲಿ ಬಳಲಿಕೊಂಬದೆ ಬಳಲಿ ಅಳಲುಕೊಂಬದೆ ಮರಳಿ ಸಂಜೆ ಸ್ವಗೃಹ ಹೊಕ್ಕು ಸತಿಯ ಮಂದಹಾಸಕೆ ಮನಸೋತು ಎಲ್ಲ ಬವಣೆಯ ಹಿಂದಿಕ್ಕಿ ಮೀಸೆಯಂಚಲಿ ನಕ್ಕು ಪ್ರಸನ್ನನಾಗುವನು … Read more

ಮ್ಯಾಗ್ನೋಲಿಯಾ: ವಾಸುಕಿ ರಾಘವನ್ ಅಂಕಣ

“ಮ್ಯಾಗ್ನೋಲಿಯಾ” ನನ್ನ ಅಚ್ಚುಮೆಚ್ಚಿನ ಚಿತ್ರ. ಇದು ಕೇವಲ ಒಂದು ಚಿತ್ರವಲ್ಲ, ಇದೊಂದು ವಿಶೇಷ ಕಲಾಕೃತಿ. ತುಂಬಾ ದಿನದಿಂದ ಇದರ ಬಗ್ಗೆ ಬರೆಯಬೇಕು ಅನ್ನೋ ಆಸೆಯೇನೋ ಇತ್ತು, ಆದರೆ ಈ ಅದ್ಭುತ ಚಿತ್ರದ ಅನುಭವವನ್ನು ಪದಗಳಲ್ಲಿ ಹಿಡಿದಿಡಲು ಧೈರ್ಯ ಬಂದಿರಲಿಲ್ಲ. ಆದರೆ ಯಾಕೋ ಕೆಲವು ದಿನಗಳಿಂದ ಈ ಚಿತ್ರ ಬಹಳ ಕೈ ಹಿಡಿದು ಜಗ್ಗುತ್ತಿದೆ, ಕಾಡುವಿಕೆಯ ಮುಂದೆ ಹಿಂಜರಿಕೆ ಸೋಲ್ತಾ ಇದೆ. ಹೀಗಾಗಿ ಅದರ ಬಗ್ಗೆ ಬರೆಯುವ ಹುಚ್ಚುಸಾಹಸಕ್ಕೆ ಕೈ ಹಾಕಿದೀನಿ. ಇದನ್ನು ಓದುವುದರಿಂದ ನೀವು ಆ ಚಿತ್ರವನ್ನು … Read more

ಒಂದು ಹಳ್ಳಿಯ ಕತೆ: ಪ್ರಶಸ್ತಿ ಅಂಕಣ

ಈತನದು ಮುಂಬಯಿಯ ನವಿ ಮುಂಬಯಿಯಲ್ಲೊಂದು ದುಖಾನು. ದುಖಾನೆಂದರೆ ಸಣ್ಣ ಕಿರಾಣಿ ಅಂಗಡಿಯೇನಲ್ಲ.ಈತ ತನ್ನೂರಿನವರಿಗೆ ಹೇಳಿದ್ದ ಹೆಸರಷ್ಟೆ. ಅದು ದೊಡ್ಡದೇ. ದುಡ್ಡಿರೋರಿಗೆ ಸಣ್ಣ ಸಣ್ಣ ಮನೆಗಳನ್ನೂ ದೊಡ್ಡ ಬೆಲೆಗೆ ಮಾರೋ ಅದೇನೋ ಅಂತಾರಲ್ಲಾ, ಹಾ ರಿಯಲ್ ಎಸ್ಟೇಟು.. ಆ ತರದ್ದು. ನವಿ ಮುಂಬಯಿಯಲ್ಲಿ ಒಂದು ಶಯನ ಗೃಹ, ಒಂದು ಅಡುಗೆ ಮನೆಯಿರೋ ಮನೆಗೇ ೩೦ ಸಾವಿರ ದಾಟಿಸಿದ್ದರಲ್ಲಿ ಈತನ ತರದ ಅದೆಷ್ಟೋ ದುಖಾನುಗಳ ಸಾಥ್ ಇತ್ತು. ಮುಂಬಯಿ ಬೋರ್ ಬಂತಾ ಅಥವಾ ನಿನ್ನ ನೋಡ್ದೇ ವರ್ಷಗಟ್ಲೇ ಆಗೋಯ್ತು, ಯಾವಾಗ … Read more

ಮದುವೆ ಮನೆಯಲ್ಲಿ ಕಾವ್ಯದ ಹೂರಣ: ಡಾ.ಪ್ರಕಾಶ ಗ.ಖಾಡೆ.

ಈಗ ಏನಿದ್ದರೂ ಸಾಂದರ್ಭಿಕ ಕವಿಗೋಷ್ಠಿಗಳ ಕಾಲ. ಹಿಂದೆಲ್ಲ ಚೈತ್ರ ಕವಿಗೋಷ್ಠಿ, ಯುಗಾದಿ ಕವಿಗೋಷ್ಠಿ, ಸಮ್ಮೇಳನದ ಕವಿಗೋಷ್ಠಿಗಳು ನಡೆಯುತ್ತಿದ್ದುದು ವಾಡಿಕೆ. ಈಗ ಗೃಹ ಪ್ರವೇಶ, ಮಗುವಿನ ಹುಟ್ಟು ಹುಬ್ಬಗಳಲ್ಲದೆ ಮದುವೆ ಮನೆಗೂ ನಮ್ಮ ಕವಿಗೋಷ್ಠಿ ಪ್ರವೇಶ ಪಡೆದಿದೆ. ಇದು ಕಾವ್ಯ ಖಾಸಗಿಯಾಗುತ್ತಿರುವ ಜೊತೆಗೆ ಸಾರ್ವತ್ರೀಕತೆಯನ್ನು ಪಡೆಯುತ್ತಿರುವ ಸೂಚನೆಯಾಗಿದೆ. ಇಂದಿನ ಅವಸರದ ಜಗತ್ತಿನಲ್ಲಿ ಮೊದಲಿದ್ದ ಮದುವೆ ಸಂಭ್ರಮದ ಓಡಾಟ, ಹಾಡು, ಆಟಗಳೆಲ್ಲ ಹೇಳ ಹೆಸರಿಲ್ಲದೆ ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ಒಂದಿಷ್ಟು ಚಿಂತನೆಗೆ ತೊಡಗಿಸುವ ಕಾವ್ಯಗೋಷ್ಠಿಗಳು ಮದುವೆ ಮಂಟಪದಲ್ಲಿ ಕಾಣಸಿಗುತ್ತಿರುವದೂ ಒಳ್ಳೆಯ ಬೆಳವಣಿಗೆಯಾಗಿದೆ. … Read more

ನಾಟಕಕಾರರಾಗಿ ಕುವೆಂಪು (ಭಾಗ-17) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ಓದುಗಪ್ರಭುಗಳೇ, ಕಳೆದ ಸಂಚಿಕೆಯಲ್ಲಿ ಮಹಾಕವಿಗಳ ಸಾರ್ವಕಾಲಿಕ ಸರ್ವಶ್ರೇಷ್ಟ ರಂಗಕೃತಿಗಳಲ್ಲಿಯೇ ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಮತ್ತು ಆಧುನಿಕ/ಇಂದಿನ ಕಾಲದಲ್ಲಿ ಜಾಣ್ಮೆ, ವಿದ್ಯೆ ಮುಂತಾದ ಸಂಗತಿಗಳು ಕೇವಲ ಉನ್ನತ ಕುಲದವರ ಸ್ವತ್ತಲ್ಲ, ಅದು ಸ್ಥಾಪಿತ ಸ್ವ-ಹಿತಾಸಕ್ತಿಯ ಬಂಧನಕ್ಕೊಳಗಾಗುವುದಿಲ್ಲ ಮುಂತಾದ ಅಂಶಗಳ ಕುರಿತು ಆತ್ಮಾವಲೋಕನಕ್ಕೆ ಗುರಿಪಡಿಸುವ ‘ಜಲಗಾರ’ ಕೃತಿಯ ಕುರಿತು ತಿಳಿದುಕೊಂಡಿದ್ದೇವೆ. ಹಾಗೆ ನೋಡಿದರೆ ‘ಜಲಗಾರ’ ರಂಗಕೃತಿಯ ವಸ್ತು ವರ್ಣ-ವರ್ಗಗಳ ಸಂಘರ್ಷದ ನೆಲೆಯಾಗಿದೆ. ‘ಜಲಗಾರ’ ಇಲ್ಲಿ ಪರಂಪರೆಯ ಶೋಷಣೆಯ ಎಲ್ಲಾ ಮಗ್ಗಲುಗಳನ್ನು ಅರಿತವನು. ಅದರಿಂದ ಬಿಡುಗಡೆ ಪಡೆದು ತನ್ನ ಜೀವನದಲ್ಲಿ … Read more

ಎರಡು ಪತ್ರಗಳು: ಎಚ್.ಕೆ.ಶರತ್, ವಿನಯ.ಎ.ಎಸ್.

ಮಿತಿಯ ಪರಿಧಿಯೊಳಗೆ ಪ್ರೀತಿ ಯಾವುದು ಪ್ರೀತಿ? ಹೊಸತನ್ನು ಅಪ್ಪುವುದೋ… ಹಳೆ ನಂಟು ಕಳಚುವುದೋ… ಕನಸುಗಳ ಗೂಡು ಕಟ್ಟುತ್ತ ವಾಸ್ತವದ ಎದೆಗೆ ಒದೆಯುವುದೋ… ಯಾವುದು ಪ್ರೀತಿಯಲ್ಲ? ಮೋಹದ ಗಂಟು ಸುತ್ತಿಕೊಂಡ ಭಾವವೋ… ಟೈಂ ಪಾಸ್ ಎಂಬ ಕ್ಷುಲ್ಲಕ ಗ್ರಹಿಕೆಗೆ ಅಡಿಯಾಳಾದ ತೋರಿಕೆಯ ಸಂಬಂಧವೋ… ನಿಜದ ನೆಲೆ ಹುಡುಕುತ್ತ ಹೊರಟರೆ ಎಲ್ಲವೂ ಗೋಜಲು ಗೋಜಲು. ವ್ಯವಸ್ಥೆ ನಿರ್ಮಿಸಿರುವ ಚೌಕಟ್ಟು ಮೀರಲು ಮುಂದಾಗುವ ಪ್ರೀತಿ ಹೊಸದೊಂದು ಬಿಕ್ಕಟ್ಟಿಗೆ ಮುನ್ನುಡಿ ಬರೆಯುತ್ತದೆ. ಚೌಕಟ್ಟುಗಳ ಮಿತಿಯಲ್ಲಿ ಪ್ರೀತಿ ಹುಟ್ಟುವುದಾದರೂ ಹೇಗೆ? ಜಾತಿ, ಅಂತಸ್ತು, ವಯಸ್ಸು, … Read more

ದ್ವಂದ್ವ:ಸಂಯುಕ್ತಾ ಪುಲಿಗಲ್ ಬರೆದ ಸಣ್ಣಕತೆ

“ವಾಟ್ ಅಬೌಟ್ ಯುವರ್ ಪ್ರೋಪೋಸಲ್ಸ್ ಯಾ?”, ಡಬ್ಬಿಯಲ್ಲಿನ ಚಿತ್ರಾನ್ನದ ಸಾಸಿವೆ ಕಾಳನ್ನು ಸ್ಪೂನಿಂದ ಕೆದಕುತ್ತಾ ಕುಳಿತಿದ್ದ ಪೂರ್ಣಿಗೆ ತನ್ನ ಸಹೋದ್ಯೋಗಿ ನಿರ್ಮಲ ಕೇಳಿದ ಪ್ರಶ್ನೆ. ನಿರ್ಮಲ ತನ್ನ ಬಾಳಿನ ಸಾಕಷ್ಟು ಸಿಕ್ಕುಗಳನ್ನು ಈಗಾಗಲೇ ಬಿಡಿಸಿಕೊಂಡು ತಕ್ಕಮಟ್ಟಿಗೆ ನೆಮ್ಮದಿಯ ಬದುಕು ಸಾಗಿಸುತ್ತಿರುವವಳು. ತಮಿಳುನಾಡಿನಿಂದ ಬಂದ ಈಕೆಯದು ಒಟ್ಟು ಕುಟುಂಬ, ಶಾಲೆ ಕಲಿಯುವ ಮಗ, ಈಗೊಮ್ಮೆ ಆಗೊಮ್ಮೆ ಕರೆಮಾಡುವ ಯಜಮಾನ. ಇದು ನಿರ್ಮಲಳ ಪ್ರಪಂಚ. ಸ್ವಲ್ಪ ಮುಂಗೊಪಿಯಾಗಿದ್ದರೂ ಪೂರ್ಣಿಗಿವಳು ಒಳ್ಳೆಯ ಸಹೋದ್ಯೋಗಿ. ನಿರ್ಮಲಳ ಪ್ರಶ್ನೆಗೆ ಪೂರ್ಣಿ ಉತ್ತರಿಸುವಷ್ಟರಲ್ಲೇ ತನ್ನ ಹೊಳಪಿನ … Read more

ಚಿಟ್ಟು ಕುಟುರದ ಮರಿಗಳ ಕತೆ: ಅಖಿಲೇಶ್ ಚಿಪ್ಪಳಿ ಅಂಕಣ

ಮಲೆನಾಡು ಈಗ ಅಕ್ಷರಶಃ: ಮಳೆನಾಡು. ಹಾಗೆಯೇ ಪ್ರಕೃತಿಯ ಅಚ್ಚರಿಗಳ ಗೂಡು. ಲಕ್ಷಗಟ್ಟಲೆ-ಕೋಟಿಗಟ್ಟಲೆ ಖರ್ಚು ಮಾಡಿ, ಪರಿಸರದಿಂದ ಬಗೆದು ತಂದ ಕಲ್ಲು-ಮರಳು-ಕಬ್ಬಿಣದ ಮಾನವ ನಿರ್ಮಿತ ತಾರಸಿ ಮನೆಗಳು ಧಾರಾಳವಾಗಿ ಸೋರುತ್ತಿವೆ. ಮನೆಯೆಲ್ಲಾ ಥಂಡಿ-ಥಂಡಿ. ಇಂತಹ ಮಳೆಗಾಲದಲ್ಲೂ ಹಕ್ಕಿಗಳು ಒಣ ಎಲೆಯನ್ನು, ಹುಲ್ಲನ್ನು ಎಲ್ಲಿಂದ ಸಂಪಾದಿಸಿ ತರುತ್ತವೆ ಎಂಬುದು ಚಿದಂಬರ ರಹಸ್ಯವೇ ಸೈ. ಸಾಗರ ತಾಲ್ಲೂಕಿನ ಹೊಸೂರಿನಲ್ಲಿ ಒಬ್ಬರ ಮನೆಯ ಹಿತ್ತಲಲ್ಲಿ 3 ಇಂಚು ಅಗಲದ ಪಿ.ವಿ.ಸಿ ಪೈಪೊಂದನ್ನು ಹಿತ್ತಿಲಿನ ಧರೆಗೆ ಆನಿಸಿ ನಿಲ್ಲಿಸಿದ್ದರು. ಅದನ್ನು ಉಪಯೋಗಿಸದೇ ವರ್ಷಗಳೇ ಆಗಿತ್ತು. ಚಿಕ್ಕ … Read more

ನಾನು,ಗುರಿ ಮತ್ತು ಅಶ್ವಿನಿ ಸ್ಟುಡಿಯೋ: ಹೃದಯಶಿವ ಅಂಕಣ

ಆಗಿನ್ನೂ  ನಾನು  ಅವಕಾಶಗಳ  ಹುಡುಕಾಟದಲ್ಲಿದ್ದೆ. ಗುರುಕಿರಣ್  ಬೆನ್ನು ಬಿದ್ದಿದ್ದೆ. ಅಶ್ವಿನಿಸ್ಟುಡಿಯೋ  ಮುಂದೆ  ಕೆ.ಎ.19ರಿಂದ  ಶುರುವಾಗುವ  ನಂಬರ್  ಪ್ಲೇಟುಳ್ಳ, ಹಿಂಬದಿಯ  ಗ್ಲಾಸಿನ  ಮೇಲೆ  ಕಂಟ್ರಿಕ್ಲಬ್ಬಿನ  ಸ್ಟಿಕ್ಕರುಳ್ಳ  ಒಂದು  ಸ್ಯಾಂಟ್ರೋ ಕಾರು  ಅಲ್ಲಿ  ನಿಂತಿತ್ತು  ಅಂದ್ರೆ  ಗುರುಕಿರಣ್ ಸ್ಟುಡಿಯೋ  ಒಳಗಡೆ  ಇದ್ದಾರೆ  ಅಂತ ಅರ್ಥ. ಅವರು  ಹೊರಗೆ  ಬರುವವರೆಗೂ  ನಾನು  ಕಾಯಬೇಕು. ಎಷ್ಟು  ಹೊತ್ತಿಗೆ  ಬರುತ್ತಾರೋ  ಯಾರಿಗೆ ಗೊತ್ತು?  ಒಂದು  ವೇಳೆ  ಕೆಲಸದ  ಗುಂಗಿನಲ್ಲಿ  ಬರದೇ  ಅಲ್ಲೇ ಉಳಿದುಬಿಟ್ಟರೆ  ಏನು ಗತಿ?  ನನ್ನ  ಬಾಡಿಗೆಮನೆ  ಇರೋದು  ಬನ್ನೇರುಘಟ್ಟ ರೋಡಿನ  ತುದಿಯಲ್ಲಿ. … Read more

ಸಾಮಾಜಿಕ ಮಾಧ್ಯಮಗಳು ಮತ್ತು ಸಮಾಜ:ಪ್ರಶಸ್ತಿ ಅಂಕಣ

ಈ ಫೇಸ್ಬುಕ್ಕು, ಟ್ವಿಟ್ಟರ್ರು, ಆರ್ಕುಟ್ಗಳಂತಹ ಸಾಮಾಜಿಕ ಮಾಧ್ಯಮಗಳು ಅಂದರೆ ಬರೀ ಟೈಂಪಾಸಿಗೆ ಅನ್ನೋ ಮನೋಭಾವ ಹಲವರಲ್ಲಿದೆ. ಏನಪ್ಪಾ ಇಪ್ಪತ್ನಾಲ್ಕು ಘಂಟೆ ಫೇಸ್ಬುಕ್ಕಲ್ಲಿ ಇರ್ತೀಯ ಅನ್ನೋದು ಮುಂಚೆ  "ಇಡೀ ದಿನ ಊರೂರು ಅಲಿತಿರ್ತಾನೆ, ಅಬ್ಬೇಪಾರಿ .. "ಅಂತ ಬಯ್ತಿದ್ದ ಶೈಲಿಯ ಬಯ್ಗುಳವಾಗಿಬಿಟ್ಟಿದೆ. ಒಟ್ನಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸ್ತಾ ಇರೋರು ಅಂದ್ರೆ ಬರೀ ಕಾಲಹರಣ ಮಾಡೋರು, ಬೇರೆ ಯಾವ್ದೂ ಕೆಲಸ ಇಲ್ದೇ ಇದ್ದೋರು ಅನ್ನೋ ಭಾವ. ಅವು ತಕ್ಕಮಟ್ಟಿಗೆ ನಿಜವಾದ್ರೂ ಅದೇ ನಿಜವಲ್ಲ. ಈ ಸಾಮಾಜಿಕ ಮಾಧ್ಯಮಗಳಿಂದ ಸಖತ್ ಲಾಭಗಳಾಗೋದೂ … Read more

ಕೆಂಗುಲಾಬಿ (ಭಾಗ 7): ಹನುಮಂತ ಹಾಲಿಗೇರಿ

ಹಾವೇರಿಯ ಸಂವರ್ಧನ ಎನ್‍ಜಿಓದಲ್ಲಿ ನನಗೆ ತರಬೇತಿಯಾದ ಮೇಲೆ ಹಾವೇರಿ ಮೂಲೆಯೊಂದರಲ್ಲಿರುವ ಹಳ್ಳಿಯ ಸ್ವಸಹಾಯ ಸಂಘಗಳ ಸಮುದಾಯ ಅಧಿಕಾರಿ ಎಂದು ಕಳುಹಿಸಿಕೊಟ್ಟಿದ್ದರು. ನಾನು ಹಲಗೇರಿಗೆ ಬಂದಿಳಿದಾಗ ನನ್ನನ್ನು ಆ ಸುಡು ಬಿಸಿಲಿನಲ್ಲಿ ಎದುರುಗೊಂಡವನು ತಿಪ್ಪೇಶಿ. ಅವನು ಅಲ್ಲಿ ನನಗೆ ಆ ಹಳ್ಳಿಯ ಮಾಹಿತಿ ನೀಡುವ ಫೀಲ್ಡ್ ಗೈಡ್ ಆಗಿ ಕೆಲಸ ಮಾಡತಿದ್ದ. ನಮ್ಮ ಸಂಸ್ಥೆ ಕೆಲಸ ಮಾಡುವ ಪ್ರತಿ ಹಳ್ಳಿಯಿಂದಲೂ ತಿಪ್ಪೇಶಿಯಂತಹ ಒಬ್ಬರನ್ನು ಸಂಘಗಳ ಅಧಿಕಾರಿ ಎಂದು ನೇಮಿಸಿಕೊಂಡಿರುತ್ತಿದ್ದರು. ತಿಪ್ಪೇಶಿ ಹೊರಲಾರದಂತಹ ನನ್ನ ಎರಡು ಬ್ಯಾಗುಗಳನ್ನು ಹೆಗಲಿಗೆ ನೇತು … Read more

ಕೊಠಡಿ ಪುರಾಣ: ಶ್ರೀವಲ್ಲಭ

ಮ್ಯಾಲಿನ ಈ ಶೀರ್ಷಿಕೆಯನ್ನು ನೋಡಿದಾಗ ನಿಮಗ ಗೊತ್ತಾಗಿರಬೇಕು ನಾ ಏನು ಹೇಳಲಿಕ್ಕೆ ಹೊ೦ಟೇನಿ ಅ೦ತ. ನೀವು ಅನ್ಕೊ೦ಡ ಹ೦ಗ ನಾನು ನನ್ನ ಮಾಸ್ತರಕಿ ವೇಳ್ಯಾದಾಗ ಕ್ಲಾಸ (ಕೊಠಡಿ) ಒಳಗ ಏನೇನು ಮಜಾ ಮಜಾ ಸುದ್ದಿ ಇರತಾವು ಅನ್ನೋದನ್ನ ಹೇಳತೆನಿ ಕೇಳ್ರಿ… ಈ ಹುಡುಗರು (ಹುಡುಗಿಯರು ಕೂಡ) ಒ೦ದು ಭಾಳ ವಿಚಿತ್ರ ಜನಾ೦ಗ ರೀ. ಮು೦ಜಾನೆ ಎದ್ದು ಠಾಕು ಠೀಕು ಅ೦ತ ತಯ್ಯಾರ ಆಗಿ ಅಗದಿ ಸೀರಿಯಸ್ ಮೂಡ್ ನ್ಯಾಗ ಕಾಲೇಜಿಗೆ ಬರತಾರ, ಇವತ್ತ ನಾ ಕ್ಲಾಸಿಗೆ ಚಕ್ಕರ ಹಾಕ೦ಗಿಲ್ಲಾ … Read more

ಬೀಗರನ ಕಳಸೊ ಸಂಭ್ರಮ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ನನ್ನ ಜೊಡಿ ಕೆಲಸ ಮಾಡೊ ಗೆಳತಿ ಸುಧಾ ಅವರ ಊರಿಗೆ ಜಾತ್ರಿಗೆ ಅಂತ ಅವರ ಹಳ್ಳಿಗೆ ಹೋಗಿದ್ದೆ. ಸಣ್ಣದಿದ್ರು ಸಮೄಧ್ಧಿಯಿಂದ ಕೂಡಿದ ಊರು. ನನ್ನ ಗೆಳತಿಯವರದು ಅವಿಭಕ್ತ ಕುಟುಂಬ. ದೊಡ್ಡ ಮನಿ, ಮನಿ ತುಂಬ ಮಂದಿ. ಹೇಳಿಕೇಳಿ ಹಳ್ಳಿ ಮಂದಿ. ಎಲ್ಲಾರು ಹೆಜ್ಜಿ ಹೆಜ್ಜಿಗು ಉಪಚಾರ ಮಾಡೊವರನ. ಅವತ್ತ ಎಲ್ಲಾರು ಮಾತಾಡಕೊತ ಕೂತಾಗ ಹಿಂಗಾ ಆತು. ಸಂಜಿಮುಂದ ಐದ ಗಂಟೆ ಆಗಿತ್ತು. ಚಹಾದ ಟೈಮ್ ಆಗಿತ್ತು. ಅಷ್ಟರಾಗ ಒಳಗಿಂದ ಒಂದ ಐದು ವರ್ಷದ ಸುಧಾನ ತಮ್ಮನ ಮಗಳು … Read more

ನಾಟಕಕಾರರಾಗಿ ಕುವೆಂಪು (ಭಾಗ-16) : ಹಿಪ್ಪರಗಿ ಸಿದ್ದರಾಮ್

ಆತ್ಮೀಯ ಓದುಗಪ್ರಭುಗಳೇ, ಷೇಕ್ಸ್ ಪಿಯರ್‍‍ನ ‘ಹ್ಯಾಮ್ಲೆಟ್’ ನಾಟಕದ ಆತ್ಮವನ್ನು ಇಟ್ಟುಕೊಂಡು ಶರೀರವಾಗಿಯೆಂಬಂತೆ ಕನ್ನಡದ ಪರಿಸರಕ್ಕೆ ಸ್ವತಂತ್ರ ಕಥಾನಕವೆನಿಸುವಂತೆ ರೂಪಾಂತರಿಸಿದ ‘ರಕ್ತಾಕ್ಷಿ’ ರಂಗಕೃತಿಯ ಸಂದರ್ಭದಲ್ಲಿ ಮೂಲಕೃತಿಯ ತಾತ್ವಿಕತೆಗೆ ಭಿನ್ನವಾದ ದೃಷ್ಟಿಕೋನವನ್ನು ಮಹಾಕವಿಗಳು ಪ್ರತಿಪಾದಿಸುವ ಮೂಲಕ ಸಾಂಸ್ಕೃತಿಕವಾಗಿ ಒಂದು ಮಹತ್ವದ ಬದಲಾವಣೆಯೆಂಬಂತೆ, ಅದರಲ್ಲೂ ಮುಖ್ಯವಾಗಿ ಶಪಿಸಲಾರದ, ಕೇವಲ ಆಶೀರ್ವದಿಸಬಲ್ಲ ಮನಸ್ಸು ‘ರಕ್ತಾಕ್ಷಿ’ಯಲ್ಲಿ ಪ್ರಧಾನವಾಗಿ ಕಂಡು ಬರುತ್ತದೆ. ಇಂತಹ ಮಹಾನ್ ರಂಗಕೃತಿಯನ್ನು ಕನ್ನಡ ನಾಡಿನ ಇತಿಹಾಸದ ನೈಜ ಘಟನೆಯೊಂದಕ್ಕೆ ತಳುಕು ಹಾಕಿ, ಮೈಸೂರು ಪ್ರಾಂತದ ಬಿದನೂರಿನ ರಾಜಮನೆತಕ್ಕೆ ಸಂಬಂಧ ಕಲ್ಪಿಸಿಕೊಂಡು ರೂಪಾಂತರಿಸಿರುವುದನ್ನು … Read more

ವ್ಯಕ್ತಿತ್ವಗಳ ಸಂಘರ್ಷದ “ಕ್ರಿಮ್ಸನ್ ಟೈಡ್”:ವಾಸುಕಿ ರಾಘವನ್ ಅಂಕಣ

ಆಕ್ಷನ್ ಚಿತ್ರ ಅಂದ ಮಾತ್ರಕ್ಕೆ ‘ಪಾತ್ರ’ಗಳ ಕಡೆ ನಿರ್ಲಕ್ಷ್ಯ ಹರಿಸುವಂತಿಲ್ಲ. ಹೊಡೆದಾಟದ ಥ್ರಿಲ್ ಕೊಡುತ್ತಲೇ ಕಥೆಯಲ್ಲಿನ ಹಲವು ಪದರಗಳನ್ನು ತೋರಿಸುತ್ತಾ, ಪಾತ್ರಗಳಿಗೆ ತಮ್ಮದೇ ಆದ ಮೆರಗುಗಳನ್ನು ಕೊಡುತ್ತಾ ಹೋದರೆ ಚಿತ್ರಕ್ಕೆ ಹಲವು ಆಯಾಮಗಳು ಸಿಗುತ್ತವೆ. ಆಗ ಮಾತ್ರ ಒಂದು ಆಕ್ಷನ್ ಚಿತ್ರ ‘ಡಿಶೂಂ ಡಿಶೂಂ’ ಚಿತ್ರವನ್ನು ಮೀರಿ ಬೆಳೆಯುತ್ತದೆ. 1995ರ ಟೋನಿ ಸ್ಕಾಟ್ ನಿರ್ದೇಶನದ “ಕ್ರಿಮ್ಸನ್ ಟೈಡ್” ನಮ್ಮನ್ನು ಚಿಂತನೆಗೆ ಹಚ್ಚುವ ಅಂತಹ ಒಂದು ಆಕ್ಷನ್ ಚಿತ್ರ. ಇಡೀ ಚಿತ್ರ ನಡೆಯುವುದು ಒಂದು ಸಬ್ ಮರೀನ್ ಒಳಗೆ. … Read more