ವಾಸುಕಿ ಕಾಲಂ

ಎಡ್ ವುಡ್ – ಹೀಗೂ ಒಬ್ಬ ನಿರ್ದೇಶಕ: ವಾಸುಕಿ ರಾಘವನ್

ನಿಮ್ಮ ಪ್ರಕಾರ ಅತ್ಯುತ್ತಮ ನಿರ್ದೇಶಕರು ಯಾರು ಅಂತ ಯಾರನ್ನಾದ್ರೂ ಕೇಳಿ. ಥಟ್ ಅಂತ ಉತ್ತರ ಸಿಗುತ್ತೆ ನಿಮ್ಗೆ – ಪುಟ್ಟಣ್ಣ ಕಣಗಾಲ್ ಅಂತಲೋ, ಸತ್ಯಜಿತ್ ರೇ ಅಂತಲೋ, ಸ್ಪೀಲ್ಬರ್ಗ್, ಕ್ಯೂಬ್ರಿಕ್, ಬರ್ಗ್ಮನ್, ನೋಲನ್ ಅಂತಲೋ – ಅವರವರ ಆಸಕ್ತಿ, ಅಭಿರುಚಿ, ವಯೋಮಾನ, ಚಿತ್ರವೈವಿಧ್ಯಗಳ ಪರಿಚಯಕ್ಕೆ ತಕ್ಕಂತೆ ಉತ್ತರಿಸುತ್ತಾರೆ. ಅದೇ ನಿಮ್ಮ ಪ್ರಕಾರ ಅತ್ಯಂತ ಕಳಪೆ ನಿರ್ದೇಶಕ ಯಾರು ಅಂತ ಕೇಳಿ ನೋಡಿ, ತಕ್ಷಣ ಉತ್ತರ ಕೊಡೋದು ಕಷ್ಟ ಆಗುತ್ತೆ. ಆದರೆ ಬಹಳಷ್ಟು ಚಿತ್ರಪ್ರೇಮಿಗಳು ಹಾಗು ವಿಮರ್ಶಕರ ಪ್ರಕಾರ […]

ಚಿನ್ಮಯ್ ಮಠಪತಿ ಅಂಕಣ

ನನ್ನೊಳಗಿನ ಗುಜರಾತ್..!!! ಭಾಗ – 6: ಸಿ.ಎಸ್. ಮಠಪತಿ

  ನಲ್ಮೆಯ ಒಂದು ಗೆಳೆತನ, ಒಲವಿನ ಸೆಳೆತನ, ಕಣ್ಣಂಚಿನ ಅಭಯ, ಆಪತ್ತಿನ ಸಹಾಯ ಹಸ್ತ, ವಿದಾಯದಲ್ಲಿನ ಭಾವೊದ್ವೇಗದಿ ಹಚ್ಚಿಕೊಂಡ ಎರಡು ಮನಗಳ ನಡುವಿನ ಬಿಗಿಯಾದ ಆಲಿಂಗನ,  ಎಲ್ಲೋ ಒಂಟಿತನದ ದಿನಗಳಲ್ಲಿ ಜಂಟಿಯಾಗಿ, ಏಕಾಂಗಿ ಬದುಕಿನ ನೊಗಕ್ಕೆ ಹೆಗಲಕೊಟ್ಟು ಸಿಹಿ-ಕಹಿ, ಸೋಲು-ಗೆಲುವು, ಸಕಲ ಏರಿಳಿತಗಳಲ್ಲಿ ಜೊತೆಸಾಗುವ ಜೀವ. ಅಬ್ಬಾ…!!  ಹೆಕ್ಕಿ- ಹೆಕ್ಕಿ ಹೊರ ಬರಸೆಳೆದು ನೆನೆಯಲೋ ಅಥವಾ ಬರೆಯಲೋ ಕುಳಿತರೆ ಒಂದೇ ,ಎರಡೇ? ಏಕಾಂಗಿ  ಬೆತ್ತಲೆ ಹುಟ್ಟು ಸಾವಿನ ನಡುವೆ, ವ್ಯಾಖ್ಯಾನಿಸಲಾಗದಷ್ಟು ಭಾವ ತುಮುಲಗಳು. ಭಾವ ಜೀವಿಗಳಾಗಿ ಬದುಕಿದರೆ, […]

ಪತ್ರಗಳು

ಈಗ ಬೇಕಿರುವುದು ಶುದ್ಧವಾದ ಓದು: ಜೋಗಿ

  ನಿಮ್ಮ ಪತ್ರಿಕೆ ಪಂಜು ಎರಡೂ ಸಂಚಿಕೆಗಳನ್ನು ಓದಿದೆ. ಇಷ್ಟವಾಯಿತು. ತಾವು ಓದಿದ ಕಾದಂಬರಿಗಳ ಬಗ್ಗೆ ಮತ್ತು ನೋಡಿದ ಸಿನಿಮಾಗಳ ಬಗ್ಗೆ ಬರೆಯುವುದು, ತಮ್ಮ ಅನುಭವಗಳನ್ನು ದಾಖಲಿಸುವುದು ಮತ್ತು ಒಳನೋಟಗಳನ್ನು ಹಂಟಿಕೊಳ್ಳುವುದು ಪತ್ರಿಕೆಯನ್ನು ಚೆಂದಾಗಿ ಮಾಡಿದೆ. ಇದಕ್ಕಿಂತ ಹೆಚ್ಚಾಗಿ ಬರೆಯುತ್ತಿರುವ ಬಹಳಷ್ಟು ಮಂದಿ ಹೊಸಬರಾಗಿರುವುದರಿಂದ ಪತ್ರಿಕೆಗೊಂದು ಹೊಸ ನೋಟವೂ ಸಿಕ್ಕಿದೆ. ಅನುಭವಿ ಲೇಖಕರು ಬರೆಯತೊಡಗಿದೊಡನೆ, ನಮಗೆ ಅವರ ನಿಲುವು, ದೃಷ್ಟಿಕೋನ, ಸಿದ್ಧಾಂತದ ಬಗ್ಗೆ ಪೂರ್ವಗ್ರಹ ಕೂಡ ಇರುವುದರಿಂದ ನಮ್ಮ ಓದನ್ನು ಅದು ಪ್ರಭಾವಿಸುತ್ತದೆ. ಇಲ್ಲಿ ಹಾಗಾಗುವುದಿಲ್ಲ. ಹೊಸ […]

ಸಂಪಾದಕೀಯ

ಕ್ಯಾನ್ಸರ್ ಕಾಯಿಲೆ ಹಾಗೆಯೇ ಇದೆ ಅದರ ವೈದ್ಯನಿಗೆ ಪ್ರಶಸ್ತಿ ಸಿಕ್ಕಿದೆ…

ಜಾತೀಯತೆ ನಮ್ಮ ಸಮಾಜಕ್ಕಂಟಿದ ಕ್ಯಾನ್ಸರ್ ತರಹದ ಮಾರಕ ಕಾಯಿಲೆ ಎಂದು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತು. ಆ ಕಾಯಿಲೆಯನ್ನು ನಮ್ಮ ಸಮಾಜದಿಂದ ನಿರ್ಮೂಲನೆ ಮಾಡಬೇಕು ಎಂದು ಪಣತೊಟ್ಟವರಿಗಿಂತ ಈ ಸಮಾಜದ ತುಂಬ ಜನರ ಬುದ್ದಿ ಮತ್ತು ಮನಸ್ಸುಗಳಲ್ಲಿ ಅದನ್ನು ಎಷ್ಟು ಸಾಧ್ಯವೋ ಅಷ್ಟು ಹರಡಬೇಕು ಎನ್ನುವವರ ಸಂಖ್ಯೆ ಈ ದಿನಗಳಲ್ಲಿ ಜಾಸ್ತಿ ಎಂದರೆ ತಪ್ಪಾಗಲಾರದು. ಒಂದೆಡೆ ಹಾಗೆ ಜಾತೀಯತೆಯನ್ನು ಹರಡಿ ಇಡೀ ಸಮಾಜವನ್ನೇ ರೋಗಗ್ರಸ್ತ ಸಮಾಜವನ್ನಾಗಿ ನಿರ್ಮಾಣ ಮಾಡಬೇಕು ಎಂದು ಕನಸು ಕಾಣುವವರ ಮಧ್ಯೆ ಈ […]

ಮೊದಲು ಓದುಗನಾಗು

ವೀರ್ ಸಂತೋಷ್ ರವರ ರೆಡಿ ಟು ಫಾಲ್ ಇನ್ ಲವ್: ಶರತ್ ಚಕ್ರವರ್ತಿ

ಪುಸ್ತಕ ವಿಮರ್ಶೆ ಬರೆಯುವ ನನ್ನ ಮೊದಲ ಪ್ರಯತ್ನ,   ಪುಸ್ತಕ: ರೆಡಿ ಟು ಪಾಲ್ ಇನ್ ಲವ್ (ಇಂಗ್ಲೀಷ್) ಬರಹಗಾರ: ವೀರ್ ಸಂತೋಷ್.   ಪ್ರಿಯ ಸಂತೋಷ್ (Veer Santhosh)   ಸಿಡ್ನಿ ಶೆಲ್ಡಾನ್ ನಂತಹ ಮಹಾನ್ ಕಾದಂಬರಿಕಾರನ ಪುಸ್ತಕಗಳು ನನಗೆ ಉಡುಗೊರೆಗಳಾಗಿ ಬಂದಾಗ ಅವುಗಳನ್ನು ಸೀದಾ ನನ್ನ ಕಪಾಟಿನಲ್ಲಿ ತುರುಕಿ, ಮತ್ತೆಂದು ತೆರೆದು ನೋಡುವ ಉತ್ಸಾಹವನ್ನೇ ತೋರದ ನಾನು ನಿನ್ನ ಪುಸ್ತಕ 'Ready to fall in love' ಅನ್ನು ಕೊಂಡು ತಂದಿದ್ದೇನೆ. ಸಾಮಾನ್ಯವಾಗಿ ಇಂಗ್ಲೀಷ್ […]

ಕಾವ್ಯಧಾರೆ

ಇಬ್ಬರ ಕವಿತೆಗಳು : ಎಂ.ಎಂಸ್. ಕೃಷ್ಣಮೂರ್ತಿ, ಮೋಹನ್. ಡಿ.

ಇರಲಿರಲಿ ಈ ಗರ್ಭ ಪ್ರಸವಕ್ಕಿನ್ನೂ ಒಂಬತ್ತು ದಿನ ಒಂಬತ್ತು ನಿಮಿಷ ಒಂಬತ್ತು ಘಳಿಗೆಗಳಿವೆಯಂತೆ ಏದುಸಿರು ನಿಟ್ಟಿಸುರಿನೊಂದಿಗೆ ಮಿಳಿತವಾಗಿದೆ ಗರ್ಭ ಕಟ್ಟುವುದು ಒಂದು ಅಮೃತ ಘಳಿಗೆಯಂತೆ ಸತ್ತ ವೀರ್ಯದ ಜೋತೆಗೆ ಒಂದೇ ಒಂದು ಗೆದ್ದ ವೀರ್ಯ ಕಾದು ಕುಳಿತ ಅಂಡಾಣು ಕೂಡುವಿಕೆಗೆ ಮಹೂರ್ತವಿಟ್ಟುಕೊಂಡಿರಬೇಕಂತೆ ಮನಸ್ಸು ಮನಸ್ಸು ಒಂದಾಗಿ ಆದರೆ ನನ್ನದು ಕೊಳಕು ಮನಸ್ಸಿನ, ಅವನ ದೇಹ ಮುಗಿಬಿದ್ದು ತೆವಲು ತಿರಿಸಿಕೊಳ್ಳಲು ತೊಟ್ಟಿಯೊಳಗೆ ಸುರಿವ ಕೊಳಕಿನಂತೆ ಸ್ರವಿಸಿ ಬಿಟ್ಟ ವೀರ್ಯಧಾರೆ ಮನಸ್ಸು, ದೇಹವನ್ನು ಕಿತ್ತು ತಿಂದು ಅತ್ಯಾಚಾರ ಮಾಡಿಟ್ಟುಬಿಟ್ಟ ಆ […]

ಕಥಾಲೋಕ

ಅಸ್ತಿತ್ವ : ಪ್ರಸಾದ್.ಡಿ.ವಿ.

ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಘಡಗಳು ಸಂಭವಿಸಿ ಭೂತ […]

ಪಂಜು-ವಿಶೇಷ

ದೇವನೂರು ಪೋಸ್ಟ್ : ಹರಿ ಪ್ರಸಾದ್

ಶ್ರೀ ದೇವನೂರ ಮಹಾದೇವ ಅವರಿಗೆ,   ಆ ದಿನ ನಿಮ್ಮ ಸಂಪಾದಕತ್ವದಲ್ಲಿ ಪ್ರಜಾವಾಣಿ ವಿಶೇಷ ಸಂಚಿಕೆ ತಂದಿದೆ ಅಂತ ಮೈಸೂರಿಂದ ಫೋನ್ ಮಾಡಿದ ಪ್ರಸಾದ್‌ಕುಂದೂರಿಯು  ಹೇಳಿದನು. ಆಗ ನಾನು  ಊರಿನಲ್ಲಿದ್ದೆ. ಕಳೆದ ೧೫ ವರ್ಷಗಳಿಂದ ಊರಿಗೆ ಪರಕೀಯನಾಗಿದ್ದು, ಈಗ ೬ ತಿಂಗಳಿನಿಂದ ಊರಿನವನಾಗಲು ಕಷ್ಟಪಡುತ್ತಿರುವ ಕಾಲದಲ್ಲಿ ನೀವೊಂದು ಸಂಚಿಕೆ ಮಾಡಿದ್ದೀರ ಅನ್ನೋದೆ ಉತ್ಸಾಹವಾಯಿತು. ಇಲ್ಲಿ ಊರಲ್ಲಿದ್ದಾಗ ಕಾಲ, ದಿನಾಂಕಗಳು ಪರಿವೆಗೇ ಬರುವುದಿಲ್ಲ. ಆವತ್ತು ಅಂಬೇಡ್ಕರ್ ಜಯಂತಿ ಅಂತ ಕೂಡ ಮರ್‍ತುಹೋಗಿತ್ತು. ಅಂಬೇಡ್ಕರ್ ಜಯಂತಿ ಅಂದಾಗೆಲ್ಲ ’ಯಾವ ಕುಲವಯ್ಯ […]

ಚುಟುಕ

ಇಬ್ಬರ ಚುಟುಕಗಳು: ಪೂರ್ಣಿಮಾ.ಬಿ., ಮಂಜುನಾಥ್.ಪಿ.

ಅವಳಿಗೆ ಹೇಳಬೇಕೆಂದು ಪೋಣಿಸಿಟ್ಟಿದ್ದ ಒಂದಷ್ಟು ಮಾತುಗಳು ಹೇಳದೆ ಉಳಿದವು. ಅವಳು ಮತ್ತೊಬ್ಬನ ಹೃದಯದ ಮಾತುಗಳನ್ನ ಆಲಿಸಿದಳೆಂದು ತಿಳಿದಾಗ. ತನ್ನದೇ ಚೌಕಟ್ಟು ಎಂದು ನಿರ್ಮಿಸಿಕೊಂಡ ಗೋಡೆಯನ್ನು ತಾನೆ ಕೆಡವಿದಳು ಆಚೆಯಿಂದ ಕೂಗಿದ ಅವನ ಪ್ರೀತಿಯ ದನಿಗೆ. ತಾನು ಪ್ರೀತಿಸಿದವಳು ಗೋರಿ ಸೇರಿದಳೆಂದು ತಿಳಿದಾಕ್ಷಣ ಅವನ ಮನದಲ್ಲಿನ ಅವಳ ಪ್ರೀತಿ ಮತ್ತು ನೆನಪುಗಳು ಉಸಿರಾಡಿದವು. ರಕ್ತದಲ್ಲಿ ಬರೆದುಕೊಟ್ಟ ಪ್ರೇಮ ಪತ್ರಕ್ಕೆ ಬೈದವಳು. ಅವನೇ ರಕ್ತವಾಗಿ ಹರಿದಾಗ ಮೌನ ತಾಳಿದಳು. ನಿನ್ನ ನೆನಪು ನನ್ನಲ್ಲಿ ಸತ್ತುಹೋಗಿದೆ ಎಂದು ಹೇಳ ಹೊರಟವನಿಗೆ ಅವಳ […]

ಕಥಾಲೋಕ

ನಂಜು ನುಂಗಿ ನಕ್ಕಾತ : ರಮೇಶ್ ಕುಲಕರ್ಣಿ

ಬೆಳಗಿನ ಜಾವ ಮೂರು ಗಂಟೆಗೆ ಇರಬಹುದು, ನನ್ನ ಸೆಲ್ ಫೋನ್ ವೈಬ್ರೇಶನ್ ಮೋಡಲ್ಲಿ ಪತರಗುಟ್ಟುತ್ತಿತ್ತು. ಕರೆಯನ್ನು ಕಟ್ ಮಾಡಿದರೂ ಆ ಕಡೆಯ ಕರೆ ಬರುತ್ತಲೇ ಇತ್ತು. ಏನೋ ಸಮಸ್ಯೆ ಇರಬಹುದು ಎಂದುಕೊಂಡ ನಾನು ಫೋನನ್ನು ರಿಸೀವ್ ಮಾಡಿ “ಹರಿ ಓಂ..” ಅಂದೆ. ಆ ಕಡೆಯಿಂದ ನನ್ನ ಮಿತ್ರ ಶಶಿಕುಮಾರ್ ಕಂಪಿಸುವ ಧ್ವನಿಯಲ್ಲಿ “ಸರ್ ಸ್ವಲ್ಪ ನಮ್ಮ ಮನೆಹತ್ರ ಬರ್ತೀರಾ? ನಿಮ್ಮ ಹತ್ರ ಮಾತಾಡಬೇಕು, ಬೇಗ ಬನ್ನಿ ಸಾರ್ ಎನ್ನುತ್ತಲೇ ಫೋನ್ ಕರೆಯನ್ನು ಕಟ್ ಮಾಡಿದರು. ನನ್ನ ಆತ್ಮೀಯ […]

ರುಕ್ಮಿಣಿ ಎನ್ ಅಂಕಣ

ತಪ್ಪಿತಸ್ಥರಿಗೆ ಮರಣದಂಡನೆಯೊಂದೇ ಶಿಕ್ಷೆಯೇ? :ರುಕ್ಮಿಣಿ ಎನ್.

ಕಳೆದ ಡಿಸೆಂಬರ್ ನಲ್ಲಿ ನಡೆದ ದೆಹಲಿ ಅತ್ಯಾಚಾರ ಕೇಸು ಎಲ್ಲರ ಮನದಲ್ಲೂ ಹಸಿಗೋಡೆಯ ಮೇಲೆ ಹರಳು ನೆಟ್ಟಂತಿದೆ. ಸುದ್ದಿ ಹರಡುತ್ತಿದ್ದಂತೆ, ಅತ್ಯಾಚಾರಿಗಳ ವಿರುದ್ಧ ಕೇಳಿ ಬಂದ ಮಾತುಗಳು: “ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು”, “ಲಿಂಗ ನಿಷ್ಕ್ರಿಯಗೊಳಿಸಬೇಕು”. ಹೀಗೆ ಮಾಡಿದರೆ ತಪ್ಪಿತಸ್ಥರಿಗೆ ತಮ್ಮ ತಪ್ಪಿನ  ಅರಿವಾಗಬಲ್ಲುದೆ? ತಪ್ಪನ್ನು ತಿದ್ದಿಕೊಳ್ಳಲು ಅವಕಾಶಗಳೇ ಇಲ್ಲವೇ? ಅವರುಗಳು ಮಾಡಿದ್ದು ದೊಡ್ಡ ತಪ್ಪು ನಾನು ಒಪ್ಪುವೆ. ಆದರೆ, ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡದೆ ಮರಣದಂಡನೆ ವಿಧಿಸುವುದು ಅದೆಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ. ನಮ್ಮ […]

ಚಿನ್ಮಯ್ ಮಠಪತಿ ಅಂಕಣ

ನನ್ನೊಳಗಿನ ಗುಜರಾತ…!!! ಭಾಗ-5 : ಚಿನ್ಮಯ್ ಮಠಪತಿ

ನಾವು ಹುಟ್ಟಿಬಿಟ್ಟಿದ್ದೇವೆ ಮನುಷ್ಯರಾಗಿ. ವೇದ ಪುರಾಣಗಳಲ್ಲಿ ಹಾಡಿ ಹೊಗಳಿದ್ದಾರಲ್ಲವೆ? ಮನುಷ್ಯ ಜನ್ಮ ದೊಡ್ಡದು ಎಂದು?  ಯಾಕೆ, ಪ್ರಪಂಚದೆಲ್ಲ ಪ್ರಾಣಿಗಳಂತೆಯೇ ಒಂದೇ ಪ್ರಾಕೃತಿಕ ರೀತಿ ನೀತಿಗಳಂತೆ ಜನಿತ, ಈ ನಮ್ಮ ಮನುಜ ಕುಲಕ್ಕೆಷ್ಟೇ ಬೇರೆ ಯಾವ ಅನ್ಯ ಜೀವಿಗೂ ಸಿಗದಂತಹ ಮಾನ್ಯತೆ , ಗೌರವ ! ಸೃಷ್ಟಿ ಕರ್ತನಿಂದ ವಿಶೇಷ ಸ್ಪರ್ಶದ ಜೊತೆಗೆ, ಸುಂದರ ಆಕಾರ ಅವತಾರ!.  ಪಾಪ, ದೇವರ ದಡ್ಡತನದಿಂದಲೇ ನಾವು “ಹೋಮೊಶೆಪಿಯ್” ನಿಂದ ಹಲವಾರು ರೂಪ ರೇಶಗಳನ್ನು ದಾಟಿ, ಇವತ್ತು ಯಂತ್ರಮಾನವ (ರೋಬೊಟ್) ಹಂತಕ್ಕೆ ತಲುಪಿದ್ದೇವೆ […]

ಪಂಜು-ವಿಶೇಷ

ಗಾಂಧೀಜಿಯವರ ಅಹಿಂಸಾ ತತ್ವ: ರವಿ ತಿರುಮಲೈ

ಆಧುನಿಕ ಪ್ರಪಂಚದ ಚರಿತ್ರೆಯಲ್ಲಿ ಗಾಂಧೀಜಿಯವರ ' ಅಹಿಂಸೆ '  'ಅಸಹಕಾರ' ಮತ್ತು 'ಸತ್ಯಾಗ್ರಹ' ದ ಭಾವನೆ, ಸಿಧ್ಧಾಂತ ಅಥವಾ ತತ್ವಗಳು ಪ್ರಧಾನವಾಗಿ  ಎದ್ದು ಕಾಣುತ್ತವೆ. ಈ ಸಿಧ್ಧಾ೦ತಗಳು , ಭಾರತೀಯರಿಗೆ, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಹೂಡಿದ ಆಂದೋಲನದಲ್ಲಿ, ಸ್ಪೂರ್ತಿ, ಆತ್ಮ ವಿಶ್ವಾಸ ಮತ್ತು ಉತ್ಸಾಹವನ್ನು ತುಂಬಿದ್ದವು.    ಭಾರತದಲ್ಲಿ ಗಾಂಧೀಜಿಯವರು ಅಹಿಂಸಾತ್ಮಕ ಚಳುವಳಿ ಅಥವಾ ಅಂದೋಲನವನ್ನು ಹುಟ್ಟು ಹಾಕುವವರೆಗೆ, ಪ್ರಪಂಚದಲ್ಲಿ ನಡೆದ ಎಲ್ಲಾ ಹೋರಾಟಗಳೂ, ಆಂದೋಲನಗಳೂ, ಮತ್ತು ದಂಗೆಗಳೂ ಹಿಂಸೆಯಿಂದ ಕೂಡಿದ್ದಾಗಿದ್ದವು. ಭಾರತೀಯ ಸ್ವಾತಂತ್ರ ಚಳುವಳಿಯು ಅಹಿಂಸೆಯನ್ನೇ […]

ವಾಸುಕಿ ಕಾಲಂ

ಗರಂ ಹವಾ : ವಾಸುಕಿ ರಾಘವನ್

ನಮ್ಮ ದೇಶಕ್ಕೆ ತುಂಬಾ ದೊಡ್ಡ ಇತಿಹಾಸ ಇದೆ. ಆದರೆ ಅದಕ್ಕೆ ನ್ಯಾಯ ಒದಗಿಸುವಷ್ಟು ಸಂಖ್ಯೆಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ಚಿತ್ರಗಳು ಬಂದಿಲ್ಲ. ನಮ್ಮವೇ ಚಾರಿತ್ರಿಕ ಘಟನೆಗಳು, ರಾಜಕೀಯ ಸನ್ನಿವೇಶಗಳು, ಪ್ರಸಿದ್ಧ ವ್ಯಕ್ತಿಗಳು ನಮ್ಮ ನಿರ್ದೇಶಕರನ್ನು ಪ್ರೇರೇಪಿಸಿದ್ದು ಕಡಿಮೆ. ನಮ್ಮ ಗಾಂಧಿಯ ಬಗ್ಗೆ ಚಿತ್ರ ಮಾಡಲು ರಿಚರ್ಡ್ ಅಟ್ಟೆನ್ಬರೋ ಬರಬೇಕಾಯ್ತು. ಮಂಗಲ್ ಪಾಂಡೆ, ಭಗತ್ ಸಿಂಗ್, ವಲ್ಲಭಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್ ಎಲ್ಲರ ಬಗ್ಗೆ ಒಂದೋ ಎರಡೋ ಚಿತ್ರಗಳು. ನಮ್ಮಲ್ಲಾಗಿರೋ ಯುದ್ಧಗಳ ಬಗ್ಗೆ ಡಾಕ್ಯುಮೆಂಟರಿ ಥರದಲ್ಲಿ ಒಂದೊಂದು ಚಿತ್ರ ಅಷ್ಟೇ. […]

ಸಂಪಾದಕೀಯ

ಹಂಚದ ಹೊರತು ಹರಡುವುದು ಕಷ್ಟ….

ಇತ್ತೀಚೆಗೆ ತುಂಬು ಲೇಖನವೊಂದನ್ನು ಬರೆದು ಎಷ್ಟೋ ದಿನಗಳಾಗಿಬಿಟ್ಟಿದೆ. ಒಂದೆರಡು ಗಂಟೆ ಒಂದೆಡೆ ಕುಳಿತು ಶ್ರದ್ಧೆಯಿಂದ ಬರೆದರೆ ಚಂದವಾದ ಬರಹಗಳನ್ನು ಕಟ್ಟಿಕೊಡುವುದು ಕಷ್ಟದ ಕೆಲಸವೇನಲ್ಲ. ಆದರೆ ಆ ರೀತಿ ಕುಳಿತು ಬರೆಯುವ ಶ್ರದ್ದೆಯನ್ನು ನಮ್ಮದಾಗಿಸಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ನಮ್ಮೊಳಗಿನ ಶ್ರದ್ಧೆ, ಸೃಜನಶೀಲತೆ ಒಂದು ದಿನ ಹಠಾತ್ತನೆ ಮಾಯವಾಗಿ “ಏನು ಬರೆಯೋದು ಏನು ಮಾಡೋದು” ಎಂಬ ಭಾವನೆ ತುಂಬಿದ ಶೂನ್ಯತೆಯ ದಿನಗಳು ನಮ್ಮಲ್ಲಿ ಹುಟ್ಟಿಸಿಬಿಡುತ್ತವೆ. ಕೆಲವು ದಿನಗಳ ಹಿಂದೆ ಆ ರೀತಿ ಶೂನ್ಯತೆ ನನ್ನೊಳಗೆ ಮೂಡಿದ ಒಂದು ದಿನ […]

ಪ್ರೇಮ ಪತ್ರಗಳು

ಹೂಗಂಧವಿನ್ನೂ ಉಳಿದೇ ಇದೆ ಕೈ ಬೆರಳುಗಳಲ್ಲಿ

ನನ್ನ ಮುದ್ದಿನ ಚಿಟ್ಟೆ… ಏನೂ, ದುಪ್ಪಟ್ಟ ಕೊಡವಿ ನೋಡಿಕೊಳ್ಳುತ್ತಿರುವೆಯಾ? ಸಾಕ್ ಸಾಕು ಸುಮ್ನೆ ಅಟ್ಟ ಹತ್ತಿಸಿದೆ. ಆದರೂ ಪತಂಗಕ್ಕೂ ನಿಂಗೂ ತುಂಬಾನೇ ಸ್ವಾಮ್ಯ ಕಣೆ. ನಿನ್ನ ಚೆಲ್ಲುಚೆಲ್ಲಾಟ, ತರಳೆಗಳು ಪತಂಗದ ಬಣ್ಣಗಳಿಗಿಂತಲೂ ಹೆಚ್ಚು ಕಣ್ಣು ಚುಚ್ಚುತ್ತೆ. ಬಿಡು ನೀನೋ ಚಿಟ್ಟೆನ ಮೀರಿಸೋವಷ್ಟ್ ಸುಂದರಿ, ಉಬ್ಬಿಹೋಗಬೇಡ, ಅದು ನನ್ನ ಕಣ್ಣಿಗೆ ಮಾತ್ರ. ಯಾಕಂದ್ರೆ ನನ್ನ ಸ್ನೇಹಿತ ಹೇಳ್ತಿದ್ದ “ಅವಳೇನು ಚನ್ನಾಗಿದಾಳೆ ಅಂತ ಲವ್ ಮಾಡ್ತಿದಿಯೋ” ಅಂತ (ಹ್ಹಿ ಹ್ಹಿ ಹ್ಹಿ…). ಹುಂ.., ಇರಲಿ. ಹ್ಯಾಪಿ ವೆಲೆಂಟೈನ್ಸ್ ಡೇ ಬೀ […]

ಕಾವ್ಯಧಾರೆ

ಪ್ರೀತಿಯೆಂದರೆ…

ಪ್ರೀತಿ ಪ್ರೀತಿಯೆಂಬುದು ಬರಿಯ ಭಾವಗಳೆಂಬ ಅಪ್ಪಳಿಸುವ ಅಲೆಗಳ ಭೋರ್ಗರೆವ ಸಮುದ್ರವಲ್ಲ, ಎಂದೋ ಪೌರ್ಣಿಮೆ-ಅಮಾವಸ್ಯೆಗಳಲಿ ಮಾತ್ರವೇ ಚಂದಿರನಿಗಾಗಿ ಹಾತೊರೆವ ಮೋಹವಲ್ಲ, ಒಡಲಲಿ ಸಾವಿರ ಗುಟ್ಟುಗಳನಿಟ್ಟ, ಒಮ್ಮೆ ಈಜಲೇ ಬೇಕೆಂಬ ಕುತೂಹಲವಲ್ಲ, ಶಾಂತತೆಯ ತೋರಿಕೆಯಲಿ ಒತ್ತಡವ ತನ್ನೂಳಗೆ ಬಚ್ಚಿಟ್ಟು, ಕಡೆಗೆ ಸುನಾಮಿಯೆಬ್ಬಿಸುವ ಭಯಂಕರತೆಯಲ್ಲ, ಸಿಹಿನದಿಗಳ, ಕರಗುವ ಹಿಮವನೆಲ್ಲವ ಕಬಳಿಸಿ ವಿಸ್ತಾರವಾಗುತಲಿ, ತೀರವ ಕೊರೆವ ಸ್ವಾರ್ಥವಲ್ಲ, ಎಂದಿಗೂ ಉಪ್ಪೇ ಆಗಿರುವ, ಕುಡಿಯಲೇ ಆಗದ ಜಲವಲ್ಲ, ದಿನವೂ ರವಿಯೊಡನೆ ಸರಸವಾಡುತಲಿ, ರೂಪ-ನೋಟಗಳಲಿ ಕಣ್ಸೆಳೆಯುವ ಆಕರ್ಷಣೆಯಲ್ಲ, ದಡದ ಮರಳಿನ ಮೇಲೆ ಗಿಚಿ ಮರೆಯಾದ ಹೆಸರಲ್ಲ, […]