ಶಾಲೆಯಲ್ಲಿನ ಶಿಕ್ಷೆಯೂ ದೌರ್ಜನ್ಯವೇ: ಡಾ. ಚೈತ್ರ ಕೆ.ಎಸ್.
ಎಂಟು ವರ್ಷದ ವರುಣ್‍ಗೆ ಎರಡು ದಿನದಿಂದ ಕೈ ಬೆರಳು ಊದಿ ಕೆಂಪಾಗಿದೆ. ಬರೆಯಲು, ತಿನ್ನಲು ಬೆರಳು ಮಡಚಲಾಗದ ಸ್ಥಿತಿ. ಕಾರಣ, ಹೋಂ ವರ್ಕ್ ಮಾಡಿಲ್ಲ ಎಂದು ಡಸ್ಟರ್‍ನಿಂದ ಟೀಚರ್ ಹೊಡೆದಿದ್ದು. ಆರು ವರ್ಷದ ಭಾವನಾ, ಶಾಲೆ ಎಂದರೆ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾಳೆ. ಎದ್ದೊಡನೆ ಗಲಾಟೆ-ಕಿರುಚಾಟ -ಹಠ. ಅವಳ ಎಲ್ಲಾ ತೊಂದರೆಗೆ ಮೂಲ ಶಾಲೆಯಲ್ಲಿ ಪದೇ ಪದೇ `ನೋಡೋಕೆ ಕರಿತಿಮ್ಮಿ, ಓದೋದ್ರಲ್ಲೂ ದಡ್ಡಿ' ಎಂದು ಹಂಗಿಸುವ ಟೀಚರ್. ಕೆಳಜಾತಿಗೆ ಸೇರಿದ ಹತ್ತು ವರ್ಷದ ರಂಗಿಗೆ ಶಾಲೆ ಬಿಟ್ಟ ನಂತರ … Read more