ಹಬ್ಬ ಯಾವುದಾದರೇನು ಮುಬಾರಕ್ ಒಂದೇ: ಅಮರ್ ದೀಪ್ ಪಿ.ಎಸ್.
ಫೆಬ್ರವರಿ 16, 27, ಏಪ್ರಿಲ್ 24, ಡಿಸೆಂಬರ್ 25, ಆಗಸ್ಟ್ 15, ಜನವರಿ 26, ಹೀಗೆ ಸುಮಾರು ದಿನಗಳು ಒಬ್ಬೊಬ್ಬರಿಗೆ ಒಂದೊಂದು ಮರೆಯಲಾರದ ದಿನವಾಗಿರುತ್ತೆ. ಮದುವೆಯದೋ. ಹುಟ್ಟುಹಬ್ಬದ್ದೋ… ರಾಷ್ಟ್ರೀಯ ಹಬ್ಬ ಅದು ಬಿಡಿ ಎಲ್ಲರಿಗೂ ಹಬ್ಬವೇ. ಒಮ್ಮೊಮ್ಮೆ ಆ ದಿನಗಳಿಗೆ ಅಂಟಿಕೊಂಡು ಒಂದೊಂದು ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಘಟನೆಗಳು ಸೇರಿರುತ್ತವೆ. ಹೆಚ್ಚು ಓದಿರದ ನಮ್ಮವ್ವನ ವಯಸ್ಸಿನವರಿಗೆ "ನನ್ನ ಹುಟ್ಟಿದ ದಿನಾಂಕ ಯಾವ್ದವ್ವ?" ಅಂತೇನಾದ್ರೂ ಕೇಳಿದ್ರೆ, ಗೊತ್ತಿಲ್ಲೆಪ್ಪಾ, ಆದ್ರ ನೀ ಹುಟ್ಟಿದ್ ಎಲ್ಡು ದಿನಕ್ಕೆ ಕಾರ ಹುಣ್ಣಿವಿ ಇತ್ನೋಡೆಪ್ಪ. … Read more