ಒಂದು ಹಲ್ಲಿಯ ಕತೆ: ಪ್ರಸನ್ನ ಆಡುವಳ್ಳಿ

ಇತಿಹಾಸದ ಈ ದಂತಕತೆ ನಿಮಗೆ ಗೊತ್ತಿರಲಿಕ್ಕೂ ಸಾಕು: ಮರಾಠರ ಇತಿಹಾಸದಲ್ಲಿ ಶಿವಾಜಿಯಷ್ಟೇ ಹಿರಿಮೆ ಆತನ ಸೇನಾಪತಿ ತಾನಾಜಿಗೂ ಇದೆ. ಈತ ಶಿವಾಜಿಯ ಬಲಗೈ ಬಂಟ, ಅಪ್ರತಿಮ ಸಾಹಸಿ. ಪುರಂದರಗಢ, ಪ್ರತಾಪಗಢ, ಕೊಂಡಾಣಾ ಕೋಟೆಗಳನ್ನು ಶಿವಾಜಿಯ ವಶಕ್ಕೊಪ್ಪಿಸುವಲ್ಲಿ ಈತನ ಪಾತ್ರ ಮಹತ್ವದ್ದು. ಇದು ತಾನಾಜಿಯ ಕೊನೆಯ ಹೋರಾಟದ ಕತೆ. ಅದು ಕ್ರಿ.ಶ. ೧೬೭೦ರ ಚಳಿಗಾಲದ ಒಂದು ದಿನ. ಪುಣೆಯಿಂದ ಸುಮಾರು ಮೂವತ್ತು ಕಿಲೋಮೀಟರು ದೂರದಲ್ಲಿರುವ ಕೊಂಡಾಣಾ ಕೋಟೆ ಆಗ ಮೊಘಲರ ಒಡೆತನದಲ್ಲಿತ್ತು. ಸಹ್ಯಾದ್ರಿ ಬೆಟ್ಟಗಳ ತುದಿಯಲ್ಲಿದ್ದ ದುರ್ಗಮ ಕೋಟೆಗೆ … Read more